Tag: Kyiv

  • ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ನಿವಾಸದ ಮೇಲೆ ದಾಳಿ – ಉಕ್ರೇನ್ ಅಧ್ಯಕ್ಷ ಎಲ್ಲಿ ಅವಿತಿದ್ದಾರೆ?

    ಕೀವ್: ಉಕ್ರೇನ್ ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ತನ್ನ ದೇಶದಿಂದ ಓಡಿ ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ರಷ್ಯಾದ ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ಝೆಲೆನ್ಸ್ಕಿಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ಹೇಳಿಕೆ ನೀಡಿದ್ದರು.

    ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿವಾಸ ಮರಿನ್ಸ್ಕಿ ಪ್ಯಾಲೆಸ್ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇದೀಗ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಝೆಲೆನ್ಸ್ಕಿ ಎಲ್ಲಿದ್ದಾರೆ ಎಂಬುದು.

    ಝೆಲೆನ್ಸ್ಕಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವಿಷಯವನ್ನು ರಷ್ಯಾ ಹೇಳುತ್ತಿದ್ದಂತೆ ಇದನ್ನು ಝೆಲೆನ್ಸ್ಕಿ ಸುಳ್ಳು ಎಂದು ಸಾಬೀತು ಮಾಡಿದ್ದರು. ತಮ್ಮ ನಿವಾಸದ ಮುಂಭಾಗದಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾ ಹಾಗೂ ತಾವು ದೇಶವನ್ನು ತೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಯುದ್ಧ ಪ್ರಾರಂಭವಾಗುತ್ತಿದ್ದಂತೆ ಅಮೆರಿಕ ಉಕ್ರೇನ್ ಅಧ್ಯಕ್ಷನನ್ನು ಸ್ಥಳಾಂತರಿಸಲು ಮುಂದಾಗಿತ್ತು. ಆದರೆ ಅದನ್ನು ಝೆಲೆನ್ಸ್ಕಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ಅಧ್ಯಕ್ಷ ಕೀವ್ ತೊರೆದು ಪೋಲೆಂಡ್‌ನಲ್ಲಿ ಅಡಗಿದ್ದಾರೆ ಎಂಬ ವದಂತಿಯನ್ನು ಉಕ್ರೇನ್ ಸುಳ್ಳು ಎಂದಿದೆ.

    ಝೆಲೆನ್ಸ್ಕಿ ದೇಶವನ್ನು ತೊರೆಯುವ ವರದಿಗಳ ಮಧ್ಯೆ ಉಕ್ರೇನ್‌ನ ಮಾಜಿ ಪ್ರಧಾನಿ ಅಜರೋವ್, ಅಧ್ಯಕ್ಷ ಝೆಲೆನ್ಸ್ಕಿ ಕೀವ್‌ನ ಹೃದಯಭಾಗದಲ್ಲಿರುವ ಬಂಕರ್‌ನಲ್ಲಿರಬಹುದು ಎಂದಿದ್ದಾರೆ. ಏಕೆಂದರೆ ಈ ಬಂಕರ್ ಅಣ್ವಸ್ತ್ರ ದಾಳಿಗೂ ಹಾಳಾಗುವುದಿಲ್ಲ. ಕೀವ್‌ನಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಂಕರ್‌ನಲ್ಲೇ ಅಡಗಿ ಕೂತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಝೆಲೆನ್ಸ್ಕಿ ಶುಕ್ರವಾರ ರಾತ್ರಿ ತನ್ನ ಮೇಲೆ ರಷ್ಯಾ ಮಾರಣಾಂತಿಕ ದಾಳಿ ನಡೆಸಲು ಪ್ರಯತ್ನ ಪಟ್ಟಿದೆ ಎಂದಿದ್ದಾರೆ. ತಮ್ಮ ನಿವಾಸ ಮರಿನ್ಸ್ಕಿ ಅರಮನೆ ಮೇಲೆ ದಾಳಿ ಮಾಡಿರುವ ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದರು. ರಷ್ಯಾ ತನ್ನ ಮೇಲೆ ಮಾಡಿರುವ ದಾಳಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದ್ದರು.

    ಝೆಲೆನ್ಸ್ಕಿ ಶನಿವಾರ ಯುಎಸ್ ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಸೆನೆಟ್‌ಗಳೊಂದಿಗೆ ವರ್ಚುವಲ್ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

  • ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ಕೀವ್: ನಾನು ಕೀವ್‍ನಲ್ಲಿದ್ದೇನೆ. ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಹೊರತಾಗಿ ತಪ್ಪಿಸಿಕೊಂಡು ಹೋಗಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹೇಳಿದ್ದಾರೆ.

    ರಷ್ಯಾ ಉಕ್ರೇನ್ ಯುದ್ಧದ ನಡುವಯೇ ಉಕ್ರೇನ್ ಅಧ್ಯಕ್ಷ ಪೋಲೆಂಡ್‍ಗೆ ಪಲಾಯನ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಝೆಲೆನ್ಸ್ಕಿ ತಿರಸ್ಕರಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಝೆಲೆನ್ಸ್ಕಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಝೆಲೆನ್ಸ್ಕಿ ತಮ್ಮ ಕಚೇರಿಯಲ್ಲಿಯೇ ಇರುವುದು ಹಾಗೂ ಅವರ ಜೊತೆಗೆ ಮತ್ತೊಬ್ಬ ಅಧಿಕಾರಿ ಕೂಡ ಇರುವುದು ಕಂಡು ಬಂದಿದೆ. ನಾನು ಕೀವ್‍ನಲ್ಲಿದ್ದೇನೆ. ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಹೊರತಾಗಿ ತಪ್ಪಿಸಿಕೊಂಡು ಹೋಗಿಲ್ಲ ಎಂದು ವೀಡಿಯೋಗೆ ಶಿರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    ಯುದ್ಧ ಆರಂಭವಾಗುತ್ತಿದ್ದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಝೆಲೆನ್ಸ್ಕಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಜೊತೆಗೆ ತಮ್ಮ ರಾಷ್ಟ್ರಕ್ಕೆ ಆಹ್ವಾನವನ್ನು ನೀಡಿದ್ದವು. ಆದರೆ ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದರು. ಇದೇ ವೇಳೆ ತಾವು ಈ ಹಿಂದೆ ದೇಶ ತೊರೆದಿದ್ದಾರೆ ಎನ್ನುವ ಊಹಾಪೋಹವನ್ನು ತಳ್ಳಿಹಾಕಿದ್ಧಾರೆ.

    ರಷ್ಯಾ ಯುದ್ಧ ಆರಂಭಿಸಿದ ನಂತರ ಉಕ್ರೇನಿನ ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಪ್ರಯತ್ನ ನಡೆಸಲಾಗಿತ್ತು. ಆದರೆ ಉಕ್ರೇನಿನ ಅಧಿಕಾರಿಗಳಿಗೆ ಈ ಬಗ್ಗೆ ಮೊದಲೇ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ಸಂಚು ವಿಫಲಗೊಳ್ಳುವಂತೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.

  • ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಕೀವ್: ಉಕ್ರೇನ್‍ನ 2 ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದ್ದು, ಈ ಅವಧಿಯಲ್ಲಿ ಉಕ್ರೇನ್ ಬಿಟ್ಟು ತೆರಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.

    ಈಗಾಗಲೇ ರಷ್ಯಾ ದಾಳಿಗೆ ಉಕ್ರೇನ್‌ ನಲುಗಿ ಹೋಗಿದೆ.  ಆದರೆ ರಷ್ಯಾ ಮುಂದಿನ 6 ಗಂಟೆಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಮರಿಯುಪೋಲ್, ವೋಲ್‍ನೋವಾಕ ನಗರಗಳಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಕದನ ವಿರಾಮದ ನಂತರ ಮತ್ತಷ್ಟು ದಾಳಿ ನಡೆಯಲಿದೆ. ಭಾರತೀಯ ಕಾಲಮಾನಕ್ಕೆ ಅನ್ವಯವಾಗುವಂತೆ ಇಂದು ಸಂಜೆ 7:30ಕ್ಕೆ ಕದನ ವಿರಾಮ ಅಂತ್ಯವಾಗಲಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

    ಇಂದು ರಾತ್ರಿ ಕ್ಷಿಪಣಿ ದಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಖಾರ್ಕಿವ್‌, ಕೀವ್‌ ಸುಮಿ ಮೇಲೆ ಬಾಂಬ್‌ ದಾಳಿ ನಡೆಯುವ ಸಾಧ್ಯತೆಯಿದೆ. ಮರಿಯುಪೋಲ್‌ಗೆ ಮುತ್ತಿಗೆ ಹಾಕುತ್ತಿರುವಾಗ, ರಷ್ಯಾದ ಪಡೆಗಳು ಅದರ ವಿದ್ಯುತ್, ಆಹಾರ, ನೀರು ಮತ್ತು ಸಾರಿಗೆಯನ್ನು ಕಡಿತಗೊಳಿಸಿದ್ದವು. ಇದರಿಂದ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌ ದಾಳಿ ಮಾಡುತ್ತಿದೆ ಎಂದು ಟೀಕಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಲ್ಪ ಅವಧಿಯವರೆಗೆ ಕದನ ವಿರಾಮ ಘೋಷಿಸಿದೆ. ಇದನ್ನೂ ಓದಿ: ಭಾರತದ ಗೋಧಿ ಚೆನ್ನಾಗಿದೆ, ನಿಮ್ಮದು ಕಳಪೆಯಾಗಿದೆ: ಪಾಕಿಸ್ತಾನ ವಿರುದ್ಧ ತಾಲಿಬಾನ್ ಕಿಡಿ

    ಉಕ್ರೇನ್ ಹಾಗೂ ರಷ್ಯಾ ಕದನ ವಿರಾಮ ಘೋಷಿಸುವಂತೆ ಭಾರತ ಕೋರಿತ್ತು. ಅಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎರಡೂ ದೇಶಗಳು ಕದನ ವಿರಾಮವನ್ನು ಅನುಷ್ಠಾನಗೊಳಿಸಬೇಕಿದೆ. ಐರೋಪ್ಯ ಒಕ್ಕೂಟಗಳು ಕದನ ವಿರಾಮ ಘೋಷಿಸಲು ಹಲವು ದಿನಗಳಿಂದಲೇ ರಷ್ಯಾ ಹಾಗೂ ಉಕ್ರೇನ್‍ಗೆ ಮನವಿ ಮಾಡಿದ್ದವು. ಭಾರತ ಶುಕ್ರವಾರ ಕದನ ವಿರಾಮ ಘೋಷಿಸುವಂತೆ ಮನವಿ ಮಾಡಿತ್ತು.  ಇದನ್ನೂ ಓದಿ: ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ

  • ಖಾರ್ಕಿವ್‍ನಿಂದ ಮರಳಿದ ಮುಂಡಗೋಡಿನ ಸ್ನೇಹಾ

    ಖಾರ್ಕಿವ್‍ನಿಂದ ಮರಳಿದ ಮುಂಡಗೋಡಿನ ಸ್ನೇಹಾ

    ಕಾರವಾರ: ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸ್ನೇಹಾ ಹೊಸಮನಿ ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ದೆಹಲಿ ಕರ್ನಾಟಕ ಭವನಕ್ಕೆ ತೆರಳಿದ್ದಾರೆ.

    ಸ್ನೇಹಾರೊಂದಿಗೆ 15ಕ್ಕೂ ಅಧಿಕ ಮಂದಿ ಕನ್ನಡಿಗರು ದೆಹಲಿಗೆ ಆಗಮಿಸಿದ್ದು, ಇಂದು ದೆಹಲಿಯಿಂದ ಬೆಂಗಳೂರಿಗೆ ತೆರಳಿ ಭಾನುವಾರ ಊರಿಗೆ ಮರಳಲಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

    ಸ್ನೇಹಾ ಅವರು ಉಕ್ರೆನ್‍ನ ಖಾರ್ಕಿವ್‍ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಉಕ್ರೇನ್‍ನ ಖಾರ್ಕಿವ್‍ನಲ್ಲಿ ಸಿಲುಕಿಕೊಂಡಿದ್ದರು. ಕೇಂದ್ರ ಗೃಹ ಇಲಾಖೆ ಹಾಗೂ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿ ಸೂಚನೆಯಂತೆ ರುಮೇನಿಯಾಕ್ಕೆ ತನ್ನ ಸ್ನೇಹಿತರೊಂದಿಗೆ ಪ್ರಯಾಣ ಬೆಳಸಿದ್ದರು. ರುಮೇನಿಯಾ ಗಡಿಯಿಂದ ಭಾರತಕ್ಕೆ ಮರಳಿರುವ ಅವರು ಭಾನುವಾರ ಮನೆಗೆ ತೆರಳಲಿದ್ದಾರೆ.  ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

    ಕಳೆದ ಒಂದು ವಾರದಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಅದರಲ್ಲೂ ಉಕ್ರೇನ್‍ನ ಪ್ರಮುಖ ನಗರಗಳಾದ ಕೀವ್ ಮತ್ತು ಖಾರ್ಕಿವ್ ದಾಳಿಗೆ ತತ್ತರಿಸಿಹೋಗಿದೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‍ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‍ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್‍ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

  • ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ

    ರಷ್ಯನ್ನರ ವಿರುದ್ಧ ಹೋರಾಡಲು ಸ್ಥಳೀಯರಿಂದ ಪೆಟ್ರೋಲ್ ಬಾಂಬ್ ದಾಳಿ

    ಕೀವ್: ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್ ಪ್ರಜೆಗಳು ಪೆಟ್ರೋಲ್ ಬಾಂಬ್‍ಗಳ ದಾಳಿ ನಡೆಸುತ್ತಿದ್ದಾರೆ.

    ಕೀವ್‍ನ ಚೆಕ್‍ಪಾಯಿಂಟ್‍ನಲ್ಲಿ ಉಕ್ರೇನ್‍ನ ಸ್ಥಳೀಯರು ಪೆಟ್ರೋಲ್ ಬಾಂಬ್‍ಗಳನ್ನು ತಾವೇ ತಯಾರಿಸಿ ರಷ್ಯನ್ನರ ವಿರುದ್ಧ ಹೋರಾಡಲು ಸಿದ್ಧ ಎನ್ನುತ್ತ ತಮ್ಮ ರೋಷವನ್ನು ತೋಸಿಕೊಳ್ಳುತ್ತಿದ್ದಾರೆ.

    ಈಗಾಗಲೇ ಉಕ್ರೇನ್‍ನ 6 ಸಾವಿರ ಸೈನಿಕರನ್ನು ಬಲಿ ತೆಗೆದುಕೊಂಡಿರುವ ರಷ್ಯಾ ವಿರುದ್ಧ ಹೋರಾಡಲು ಸ್ಥಳೀಯರೂ ಎದೆಗುಂದದೆ ನಿಂತಿದ್ದಾರೆ. ಪೆಟ್ರೋಲ್ ಬಾಂಬುಗಳನ್ನು ತಯಾರಿಸಿ ರಷ್ಯಾದ ಸೈನ್ಯವನ್ನು ಎದುರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

    ನಾವು ನಮ್ಮ ಮಾತೃಭೂಮಿಗಾಗಿ ಹೋರಾಡುತ್ತಿದ್ದೇವೆ. ನಾವು ರಷ್ಯನ್ನರಿಗೆ ಹೆದರುವುದಿಲ್ಲ. ನಮ್ಮಲ್ಲೂ ಉತ್ತಮ ಹೋರಾಟಗಾರರು ಇದ್ದಾರೆ. ಶಸ್ತ್ರಾಸ್ತ್ರ ಅಥವಾ ಪೆಟ್ರೋಲ್ ಬಾಂಬ್‍ಗಳಿಲ್ಲದಿದ್ದರೂ ಅವರೊಂದಿಗೆ ನಾವು ಹೋರಾಡಲು ಸಿದ್ಧರಾಗಿದ್ದೇವೆ ಎಂದು ಉಕ್ರೇನ್ ಪ್ರಜೆಗಳು ಆವೇಶ ಭರಿತ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: 3ನೇ ವಿಶ್ವ ಯುದ್ಧದಲ್ಲಿ ಪರಮಾಣ ಶಸ್ತ್ರಾಸ್ತ್ರ ಇರುತ್ತೆ: ರಷ್ಯಾ ಸಚಿವ

    ಉಕ್ರೇನ್‍ನಲ್ಲಿ ಸೈನಿಕರು, ನಾಗರಿಕರು, ಹಿರಿಯರು, ಮಹಿಳೆಯರು ಎನ್ನದೇ ಎಲ್ಲರೂ ಒಗ್ಗೂಡಿ ರಷ್ಯಾದ ವಿರುದ್ಧ ಹೋರಾಡುತ್ತಿದ್ದಾರೆ. ಶಸ್ತ್ರಾಸ್ತ್ರಗಳ ಕೊರತೆಯಿದ್ದರೂ ಒಂದೆರಡು ದಿನಗಳಲ್ಲಿ ಉಕ್ರೇನ್ ಸರ್ಕಾರ ಶಸ್ತ್ರಾಸ್ತ್ರ ಒದಗಿಸಲಿದೆ ಎಂಬ ಭರವಸೆಯಲ್ಲಿ ಕಾಯುತ್ತಿದ್ದಾರೆ. ತಮ್ಮ ತೋಳುಗಳಲ್ಲಿ ಹಳದಿ ಬಣ್ಣದ ಬ್ಯಾಂಡ್‍ಗಳನ್ನು ಧರಿಸಿ ತಮ್ಮನ್ನು ತಾವು ಕೀವ್‍ನ ರಕ್ಷಕರು ಎಂದು ಕರೆಯುತ್ತಿದ್ದಾರೆ.

  • ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್

    ಕೀವ್: ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ಪ್ರಾರಂಭಿಸಿ ವಾರವೇ ಕಳೆದಿದೆ. ಸಾವಿರಾರು ಸೈನಿಕರು ಹಾಗೂ ನಿವಾಸಿಗಳ ಮಾರಣ ಹೋಮದ ಬಳಿಕವೂ ರಷ್ಯಾದ ರುದ್ರತಾಂಡವ ಇನ್ನೂ ನಿಂತಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಜನರು ಊಟ ವಸತಿಯಿಲ್ಲದೇ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.

    ರಷ್ಯಾದಿಂದ ಮಾರಣಾಂತಿ ಶೆಲ್ ದಾಳಿಯ ನಡುವೆಯೂ ಕೀವ್‍ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ತನ್ನ ರೆಸ್ಟೋರೆಂಟ್‍ನಲ್ಲಿ ನೂರಾರು ಜನರಿಗೆ ಊಟ ವಸತಿ ನೀಡಿ ಆಶ್ರಯದಾತನಾಗಿದ್ದಾನೆ.

    ಉಕ್ರೇನ್ ರಾಜಧಾನಿ ಕೀವ್‍ನಲ್ಲಿರುವ ಸಾಥಿಯಾ ರೆಸ್ಟೋರೆಂಟ್‍ನ ಮಾಲೀಕ ಮನೀಶ್ ಡೇವ್ ಯುದ್ಧ ಪ್ರಾರಂಭವಾದಾಗಿನಿಂದ ಅನೇಕರಿಗೆ ಆಹಾರ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾನೆ. ನನ್ನಿಂದ ಸಾಧ್ಯವಾದಷ್ಟು ದಿನ ಇಲ್ಲಿ ಕಷ್ಟದಲಿರುವ ಜನರಿಗೆ ಆಹಾರ ಹಾಗೂ ಆಶ್ರಯ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳುತ್ತಾರೆ ಮನೀಶ್. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಗುಜರಾತ್‍ನ ವಡೋದರಾ ಮೂಲದ ಮನೀಶ್ 2021ರಲ್ಲಿ ಕೀವ್‍ಗೆ ಬಂದಿದ್ದರು. ಕೀವ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಮನೀಶ್ ರೆಸ್ಟೋರೆಂಟ್ ತೆರೆದಿದ್ದರು. ಇದೀಗ ಇವರ ರೆಸ್ಟೋರೆಂಟ್ ಯುದ್ಧದ ಪರಿಸ್ಥಿತಿಯಲ್ಲಿ ಜನರಿಗೆ ಆಶ್ರಯತಾಣವಾಗಿದೆ.

    ಮನೀಶ್ ಅವರ ರೆಸ್ಟೋರೆಂಟ್‍ನಲ್ಲಿ ಇದೀಗ ಮಕ್ಕಳು, ಗರ್ಭಿಣಿಯರು, ವಿದ್ಯಾರ್ಥಿಗಳು, ಮನೆ ಕಳೆದುಕೊಂಡಿರುವವರು ಹಾಗೂ ಹಿರಿಯ ನಾಗರಿಕರು ಸೇರಿದಂತೆ 130ಕ್ಕೂ ಹೆಚ್ಚು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು: ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ ಬೆನ್ನಲ್ಲೇ ಮೋದಿಯಿಂದ 4ನೇ ಬಾರಿಗೆ ಉನ್ನತ ಸಭೆ

    ಕೀವ್‍ನ ಬೊಗೊಮೆಲೆಟ್ಸ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ಇರುವ ಸಾಥಿಯಾ ರೆಸ್ಟೋರೆಂಟ್‍ನಲ್ಲಿ ಯಾವುದೇ ದೇಶದ ಜನರು ಬಂದು ಆಶ್ರಯ ಪಡೆಯಬಹುದು ಎಂದು ಮನೀಶ್ ತಿಳಿಸಿದ್ದಾರೆ.

  • ತಕ್ಷಣವೇ ಉಕ್ರೇನ್‌ ರಾಜಧಾನಿ ತೊರೆಯಿರಿ: ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

    ತಕ್ಷಣವೇ ಉಕ್ರೇನ್‌ ರಾಜಧಾನಿ ತೊರೆಯಿರಿ: ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

    ನವದೆಹಲಿ: ರಷ್ಯಾದ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ಈಗಿಂದೀಗಲೇ ತೊರೆಯಿರಿ ಎಂದು ಭಾರತ ಮೂಲದ ನಾಗರಿಕರಿಗೆ ರಾಯಭಾರಿ ಕಚೇರಿ ತಿಳಿಸಿದೆ.

    ಉಕ್ರೇನ್‌ ರಾಜಧಾನಿಯಲ್ಲಿರುವ ಭಾರತೀಯ ಮೂಲದವರು ಈ ಕೂಡಲೇ ಕೀವ್‌ ಅನ್ನು ತೊರೆಯಿರಿ. ರೈಲು ಅಥವಾ ಇನ್ನಿತರ ಲಭ್ಯ ಸಾರಿಗೆ ವ್ಯವಸ್ಥೆ ಮೂಲಕ ರಾಜಧಾನಿಯಿಂದ ಹೊರಡಿ ಎಂದು ಉಕ್ರೇನ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಟ್ವೀಟ್‌ ಮಾಡಿ ತಿಳಿಸಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಬಳಸಿ ರಷ್ಯಾದ ಮಿಲಿಟರಿ ಟ್ಯಾಂಕ್ ಹೊತ್ತೊಯ್ದ ರೈತ

    ಕೀವ್‌ನ ವಾಯುವ್ಯ ರಸ್ತೆಗಳಲ್ಲಿ ರಷ್ಯಾ ಸೇನಾ ವಾಹನಗಳಿರುವ ಉಪಗ್ರಹ ಚಿತ್ರಗಳು ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಈ ಸಲಹೆಯನ್ನು ಪೋಸ್ಟ್ ಮಾಡಲಾಗಿದೆ. ಯುಎಸ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ ನೂರಾರು ಟ್ಯಾಂಕ್‌ಗಳು, ಫಿರಂಗಿಗಳು, ಶಸ್ತ್ರಸಜ್ಜಿತ ಮತ್ತು ಲಾಜಿಸ್ಟಿಕ್ ವಾಹನಗಳಿವೆ. ಕೀವ್‌ನಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಹೆಚ್ಚಿನ ದಾಳಿಯಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

    ಯುದ್ಧಪೀಡಿತ ರಾಷ್ಟ್ರ ಉಕ್ರೇನ್‌ನಲ್ಲಿ 16,000 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಉಕ್ರೇನ್‌ ಬಂಕರ್‌ಗಳು, ಮೆಟ್ರೋ ನಿಲ್ದಾಣಗಳು, ಬಾಂಬ್‌ ಸೆಲ್ಟರ್‌ಗಳಲ್ಲಿ ಅಡಗಿರುವ ವಿದ್ಯಾರ್ಥಿಗಳು ಸಹಾಯಕ್ಕಾಗಿ ಬೇಡಿಕೆ ಇಡುತ್ತಿರುವ ಫೋಟೋ, ವೀಡಿಯೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್

    ಇದುವರೆಗೆ 8,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಉಕ್ರೇನ್‌ನ ಪೂರ್ವ ಭಾಗಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.

  • ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್

    ಪುಟಿನ್ ಆದೇಶ ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದ್ರೆ ಪ್ರತೀ ಸೈನಿಕರೊಂದಿಗೆ ಸೆಕ್ಸ್‌ಗೆ ಸಿದ್ಧಳಿದ್ದೇನೆ: ಮಾಡೆಲ್

    ಕೀವ್: ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧವನ್ನು ತಡೆಯಲು ವಿದೇಶಿ ಮಾಡೆಲ್ ಒಬ್ಬರು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆದೇಶಗಳನ್ನು ನಿರಾಕರಿಸಿ ಉಕ್ರೇನ್‍ನಿಂದ ಹಿಂದಿರುಗಿದರೆ ಅವರ ಪ್ರತಿಯೊಬ್ಬ ಸೈನಿಕರೊಂದಿಗೆ ಸಂಭೋಗಿಸಲು ಸಿದ್ಧಳಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.

    ಮಾಡೆಲ್, ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೋಸ್ಕರ ಫೋನ್ಸ್ ವೆಬ್‍ಸೈಟ್‍ವೊಂದನ್ನು ಹೊಂದಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಲಿಲ್ಲಿ ಸಮ್ಮರ್ಸ್ ಎಂಬ ಖಾತೆಯೊಂದನ್ನು ಹೊಂದಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಬರೆಯುತ್ತಿದ್ದಾರೆ. ಈಗ ಅವರು ಉಕ್ರೇನ್‍ನಲ್ಲಿ ನಡೆಯುತ್ತಿರುವ ರಕ್ತಪಾತವನ್ನು ತಡೆಯಲು ರಷ್ಯಾದ ಸೈನಿಕರಿಗೆ ಲೈಂಗಿಕತೆಯ ಆಯ್ಕೆಯೊಂದನ್ನು ನೀಡಿದ್ದಾರೆ. ‘ಉಕ್ರೇನ್‍ಗಾಗಿ ತನ್ನ ಶಸ್ತ್ರಾಸ್ತ್ರಗಳನ್ನು ಮತ್ತು ದ್ವೇಷವನ್ನು ತ್ಯಜಿಸಲು ಸಿದ್ಧವಾಗಿರುವ ಪ್ರತಿಯೊಬ್ಬ ರಷ್ಯಾದ ಸೈನಿಕನೊಂದಿಗೆ ನಾನು ಲೈಂಗಿಕತೆ ಹೊಂದಲು ಸಿದ್ಧಳಿದ್ದೇನೆ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಡಬ್ಲ್ಯುಹೆಚ್‍ಒನಿಂದ ಎಚ್ಚರಿಕೆ- ಯುದ್ಧ ಬಿಕ್ಕಟ್ಟಿನ ಮಧ್ಯೆ ಉಕ್ರೇನ್‍ಗೆ ಮತ್ತೊಂದು ಆತಂಕ

    ಕೇವಲ ರಷ್ಯಾ ಅಲ್ಲದೇ ಪ್ರತಿಯೊಬ್ಬ ಸೈನಿಕನಿಗೂ ಒಂದು ಕೊಡುಗೆ ಇದೆ. ಲಿಲ್ಲಿ ಸಮ್ಮರ್ಸ್ ಮೊದಲಿನಿಂದಲೂ ಉಕ್ರೇನ್ ಅನ್ನು ಬೆಂಬಲಿಸುತ್ತಿದ್ದಾರೆ. ಉಕ್ರೇನಿಯನ್ ಧ್ವಜದೊಂದಿಗೆ ಅನೇಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶಾಂತಿಗಾಗಿ ಮನವಿ ಮಾಡಿದ್ದಾರೆ. ರಷ್ಯಾದ ಪಡೆಗಳು ತಮ್ಮ ಅಧ್ಯಕ್ಷರ ಆದೇಶಗಳನ್ನು ಪಾಲಿಸಲು ನಿರಾಕರಿಸಬೇಕು ಮತ್ತು ಉಕ್ರೇನ್ ಬಿಟ್ಟು ಹಿಂದಿರುಗಬೇಕು ಎಂದಿದ್ದರು. ಹಾಗೇನಾದರೂ ಮಾಡಿದರೆ, ನಾನು ಅವರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಲು ಸಿದ್ಧಳಿದ್ದೇನೆ. ನನ್ನ ಕೊಡುಗೆ ಪ್ರತಿ ರಷ್ಯಾದ ಸೈನಿಕನಿಗೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ಟ್ವೀಟ್‍ನಲ್ಲಿ ಏನಿದೆ?
    ‘ಯಾರಾದರೂ ಒಬ್ಬ ರಷ್ಯನ್ ಸತ್ತರೆ, ನಾನು ನಗ್ನ ಫೋಟೋವನ್ನು ಹಂಚಿಕೊಳ್ಳುತ್ತೇನೆ. ಅದೇ ರೀತಿ, ರಷ್ಯಾದ ಟ್ಯಾಂಕ್ ನಾಶವಾದಾಗ, ಅನುಯಾಯಿಗಳು ನನ್ನ ಮಾದಕ ವೀಡಿಯೋವನ್ನು ಪಡೆಯುತ್ತಾರೆ. ಯಾರಾದರೂ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದರೆ, ನಾನು ಅವನಿಗೆ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶವನ್ನು ನೀಡುತ್ತೇನೆ  ಎಂದಿದ್ದಾರೆ.

    ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ವಿರುದ್ಧದ ಯುದ್ಧದ ನಿರ್ಧಾರಕ್ಕೆ ಸಾಕಷ್ಟು ವಿರೋಧವಿದೆ. ರಷ್ಯಾದ ಅನೇಕ ಸೆಲೆಬ್ರಿಟಿಗಳು ಕೂಡ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.

  • WHOನಿಂದ ಎಚ್ಚರಿಕೆ- ಯುದ್ಧ ಬಿಕ್ಕಟ್ಟಿನ ಮಧ್ಯೆ ಉಕ್ರೇನ್‍ಗೆ ಮತ್ತೊಂದು ಆತಂಕ

    WHOನಿಂದ ಎಚ್ಚರಿಕೆ- ಯುದ್ಧ ಬಿಕ್ಕಟ್ಟಿನ ಮಧ್ಯೆ ಉಕ್ರೇನ್‍ಗೆ ಮತ್ತೊಂದು ಆತಂಕ

    ಕೀವ್: ಉಕ್ರೇನ್‍ನಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ಕೀವ್ ಸೇರಿದಂತೆ ಇತರ ನಗರಗಳ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ತಕ್ಷಣವೇ ತಲುಪಿಸದಿದ್ದರೆ ಪರಿಸ್ಥಿತಿಯು ತುಂಬಾ ಅಪಾಯಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‍ಒ) ಎಚ್ಚರಿಸಿದೆ. ಡಬ್ಲ್ಯುಹೆಚ್‍ಒ ಪ್ರಕಾರ, ಉಕ್ರೇನ್‍ನಲ್ಲಿ 600 ಆಸ್ಪತ್ರೆಗಳಿವೆ. ಅಲ್ಲಿ 1,700 ಕೊರೊನಾ ರೋಗಿಗಳು ದಾಖಲಾಗಿದ್ದಾರೆ.

    ಉಕ್ರೇನ್‍ನಲ್ಲಿ ಉಸಿರಾಟದ ಬಿಕ್ಕಟ್ಟು:
    ಕೊರೊನಾ ರೋಗಿಗಳನ್ನು ಹೊರತುಪಡಿಸಿ ಉಕ್ರೇನ್‍ನಲ್ಲಿ ನವಜಾತ ಶಿಶುಗಳು, ಗರ್ಭಿಣಿಯರು ಮತ್ತು ವೃದ್ಧರಿಗೂ ಕಾಲಕಾಲಕ್ಕೆ ಆಮ್ಲಜನಕದ ಅಗತ್ಯವಿರಬಹುದು ಅಂತ ಡಬ್ಲ್ಯುಹೆಚ್‍ಒ ಉಲ್ಲೇಖಿಸಿದೆ. ಯುದ್ಧದ ಭರಾಟೆಯಲ್ಲಿ ಜನರ ಮನಸ್ಥಿತಿಯ ಮೇಲೂ ಪರಿಣಾಮ ಬೀರಿ ಪರಿಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ಇಂತಹ ವಿಷಮ ಪರಿಸ್ಥಿತಿಯಿಂದಾಗಿ ಅಲ್ಲಿನ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಆಕ್ಸಿಜನ್ ಜನರೇಟರ್ ಪ್ಲಾಂಟ್‍ನಿಂದ ಆಸ್ಪತ್ರೆಗೆ ಆಮ್ಲಜನಕ ಸಾಗಿಸುವಲ್ಲಿಯೂ ಲಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ.  ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

    ವಿದ್ಯುತ್ ಬಿಕ್ಕಟ್ಟು ಕೂಡ ತೀವ್ರಗೊಂಡಿದೆ:
    ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ಗಂಟೆಗಳು ಕಳೆದಿವೆ. ನಿನ್ನೆ ಐದನೇ ದಿನದ ದಾಳಿ ನಡೆದಿದೆ. ಈ ಬಿಕ್ಕಟ್ಟಿನ ಮಧ್ಯೆ ಉಕ್ರೇನ್‍ನಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯ ಸೇವೆಗಳ ಮೇಲೆ ಗಂಭೀರ ಪರಿಣಾಮ ಕಾಣಿಸಿಕೊಂಡಿದೆ. ಅದೇ ರೀತಿ ಅಂಬುಲೆನ್ಸ್ ಮೂಲಕ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಾಗ ಅವರ ಮೇಲೆ ಗುಂಡು ಹಾರಿಸುವ ಅಪಾಯ ಕೂಡ ಹೆಚ್ಚಾಗಿದೆ.

  • ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ವೊಲೊಡಿಮಿರ್ ಝೆಲೆನ್ಸ್ಕಿ

    ಕೀವ್: ರಷ್ಯಾದ ವಿರುದ್ಧ ಹೋರಾಡಲು ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಣೆ ಮಾಡಿದ್ದಾರೆ.

    ಉಲ್ಬಣಗೊಳ್ಳುತ್ತಿರುವ ಯುದ್ಧದ ಪರಿಸ್ಥಿತಿಯ ಮಧ್ಯೆ, ಅವರು ಸೋಮವಾರ (ಫೆಬ್ರವರಿ 28) ರಷ್ಯಾದೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದರೆ ಹಿಂದಿನ ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್ ಗಡಿ ತಲುಪಿದ್ರೂ ಭಾರತಕ್ಕೆ ಬರಲಾಗದೆ ರಾಯಚೂರು ವಿದ್ಯಾರ್ಥಿಗಳು ಪರದಾಟ

    ರಷ್ಯಾದ ಪಡೆಗಳ ಆಕ್ರಮಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್ ವಿಶೇಷ ಕಾರ್ಯವಿಧಾನದ ಅಡಿಯಲ್ಲಿ ಸದಸ್ಯತ್ವವನ್ನು ಪಡೆಯಲು ತಕ್ಷಣವೇ ಅವಕಾಶ ನೀಡುವಂತೆ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟವನ್ನು ಕೇಳಿಕೊಂಡಿದ್ದಾರೆ.ಇದನ್ನೂ ಓದಿ: ನಮ್ಮ ಸ್ವಂತ ಜನರನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ಝೆಲೆನ್ಸ್ಕಿಯು ರಷ್ಯಾದ ಸೈನಿಕರಿಗೆ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದು, ನಿಮ್ಮ ಪ್ರಾಣವನ್ನು ಉಳಿಸಿಕೊಂಡು ಇಲ್ಲಿಂದ ಹೊರಡಿ ಎಂದು ಹೇಳಿದ್ದಾರೆ.