ಕೀವ್: ಜಗತ್ತಿನ 2ನೇ ಅತಿದೊಡ್ಡ ರಾಷ್ಟ್ರ ರಷ್ಯಾ, ಪುಟ್ಟ ಉಕ್ರೇನ್ ಮೇಲೆ ದಾಳಿ ನಡೆಸಿ ಇಂದಿಗೆ 3 ತಿಂಗಳಾಗಿದೆ. ಇನ್ನೂ ಕೂಡ ಉಕ್ರೇನ್ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಉಕ್ರೇನ್‍ನ ಪ್ರಬಲ ಪೈಪೋಟಿಯಿಂದಾಗಿ ಇನ್ನೂ ಕೂಡ ವಶಕ್ಕೆ ಪಡೆಯಲು ರಷ್ಯಾ ತಿಣುಕಾಡುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾ ದಾಳಿ ನಡೆಸಿ, ಅಪಾರ ಸಾವು-ನೋವು ಮಾಡಿದ್ದನ್ನು ಬಿಟ್ಟರೆ ಸಣ್ಣಪುಟ್ಟ ಗೆಲವು ಸಾಧಿಸಿದೆ. ಇದನ್ನೂ ಓದಿ: ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್
ಪಾಶ್ಚಿಮಾತ್ಯ ರಾಷ್ಟ್ರಗಳು ಕೊಟ್ಟ ಬೆಂಬಲದಿಂದಾಗಿ, ರಷ್ಯಾ ಪಡೆಯನ್ನು ಉಕ್ರೇನ್ ಸಮರ್ಥವಾಗಿ ಎದುರಿಸುತ್ತಿದೆ. ಮರಿಯುಪೋಲ್ ನಗರ ಮಾತ್ರ ರಷ್ಯಾದ ಕೈವಶವಾಗಿದ್ದು, ಕಳೆದ ತಿಂಗಳು ಕೀವ್ ಹಾಗೂ ಸುತ್ತಮುತ್ತಲ ನಗರದಿಂದ ತನ್ನ ಸೇನೆಯನ್ನು ರಷ್ಯಾ ವಾಪಸ್ ಕರೆಸಿಕೊಂಡಿದೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ
ಕೀವ್: ರಾಜತಾಂತ್ರಿಕತೆಯಿಂದ ಮಾತ್ರ ರಷ್ಯಾ – ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್‍ಗೆ ಭೇಟಿ ನೀಡುತ್ತಿರುವ ಪೋರ್ಚುಗೀಸ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸಂಪೂರ್ಣ ಮಿಲಿಟರಿ ವಿಜಯಕ್ಕಿಂತ ರಾಜತಾಂತ್ರಿಕ ಪ್ರಗತಿಯಿಂದ ಮಾತ್ರ ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಹೇಳಿದ್ದಾರೆ.
ಯುದ್ಧವು ರಕ್ತಮಯವಾಗಿರುತ್ತದೆ, ಹೋರಾಟ ಇರುತ್ತದೆ. ಆದರೆ ರಾಜತಾಂತ್ರಿಕತೆಯ ಮೂಲಕ ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು. ಉಕ್ರೇನ್ ಮತ್ತು ರಷ್ಯಾ ನಡುವಿನ ಚರ್ಚೆಗಳು ನಿರ್ಣಾಯಕವಾಗಿ ನಡೆಯುತ್ತವೆ. ಅದು ಯಾವ ಸ್ವರೂಪದಲ್ಲಿ ನನಗೆ ಗೊತ್ತಿಲ್ಲ. ಆದರೆ ಫಲಿತಾಂಶವು ಉಕ್ರೇನ್‍ಗೆ “ನ್ಯಾಯಯುತ” ಎಂದು ಝೆಲೆನ್ಸ್ಕಿ ಭರವಸೆ ನೀಡಿದರು. ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಯಿಂದ ಸ್ಪರ್ಧಿಸಿದ ಗಂಡ-ಹೆಂಡತಿ ಜಯಭೇರಿ
ಫಿನ್‍ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದಂತೆ ರಷ್ಯಾ ನೈಸರ್ಗಿಕ ಅನಿಲ ಸರಬರಾಜನ್ನು ನಿಷೇಧಿಸಿದೆ. ಜೊತೆಗೆ 963 ಅಮೆರಿಕವನ್ನು ರಷ್ಯಾ ಪ್ರವೇಶಿಸದಂತೆ ನಿಷೇಧಿಸಿದೆ. ಈ ಯುದ್ಧದಿಂದಾಗಿ 64 ಲಕ್ಷ ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ. ಹಾಗಾಗಿ ಈ ಯುದ್ಧವನ್ನು ಬಗೆಹರಿಸಲು ರಾಜತಾಂತ್ರಿಕತೆಯೊಂದೆ ಪರಿಹಾರ ಎಂದು ರಷ್ಯಾ ಅಧ್ಯಕ್ಷ ವೊಲೋಡಿಮಿರ್ ಝಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಈಗಾಗಲೇ ಮಾರಿಯುಪೋಲ್ ಉಕ್ಕಿನ ಸ್ಥಾವರದಿಂದ ಸುಮಾರು 2,500 ಉಕ್ರೇನಿಯನ್ ಸೈನಿಕರನ್ನು ಸೆರೆಹಿಡಿಯಲಾಗಿದೆ. 20,000 ಕ್ಕೂ ಹೆಚ್ಚು ಉಕ್ರೇನಿಯನ್ ಪ್ರಜೆಗಳು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಸುಮಾರು ಎರಡೂವರೆ ವರ್ಷಗಳ ನಂತರ, ಸ್ವಿಸ್ ಸ್ಕೀ ರೆಸಾರ್ಟ್ ಪಟ್ಟಣವಾದ ದಾವೋಸ್ ಮತ್ತೊಮ್ಮೆ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು ಆಯೋಜಿಸಲು ಸಿದ್ಧವಾಗಿದೆ. ಭಾರತ ಸೇರಿದಂತೆ ಹಲವಾರು ಜಾಗತಿಕ ನಾಯಕರು ಉಕ್ರೇನ್ ಕುರಿತು ಚರ್ಚಿಸುವ ನಿರೀಕ್ಷೆಯಿದೆ.
ಕೀವ್: ಉಕ್ರೇನ್‌ನ ಬುಚಾ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಕ್ಷಮಿಸಲಾಗದವು. ಆದರೂ ಉಕ್ರೇನ್ ಮತ್ತು ರಷ್ಯಾ ಮಾತುಕತೆ ಮುಂದುವರಿಸುವಂತಹ ಕಠಿಣ ಆಯ್ಕೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ನಗರಗಳಲ್ಲಿ ಇತ್ತೀಚೆಗೆ ನೂರಾರು ಶವಗಳು ಬೀದಿ ಬೀದಿಗಳಲ್ಲಿ ಕಂಡುಬಂದಿದ್ದು ಈ ಮೂಲಕ ರಷ್ಯಾ ಸೈನಿಕರ ಕ್ರೂರತೆ ಬಯಲಾಗಿದೆ. ಜನರ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಸ್ತಾಂಬುಲ್: ಉಕ್ರೇನ್‌ನ ಕೀವ್ ಮತ್ತು ಚೆರ್ನಿಹಿವ್ ಮೇಲೆ ಕೇಂದ್ರೀಕರಿಸಿದ್ದ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆಗೊಳಿಸುವುದಾಗಿ ರಷ್ಯಾ ತಿಳಿಸಿದೆ.
ಇಸ್ತಾಂಬುಲ್ ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚನಾ ತಂಡಗಳ ನಡುವಿನ ಮಂಗಳವಾರ ʼಅರ್ಥಪೂರ್ಣʼ ಮಾತುಕತೆ ನಡೆಯಿತು. ಈ ವೇಳೆ ರಷ್ಯಾ ಮಹತ್ವದ ನಿರ್ಧಾರವನ್ನು ತಿಳಿಸಿದ್ದು, ಯುದ್ಧ ಅಂತ್ಯವಾಗುವ ಸೂಚನೆ ಸಿಕ್ಕಿದೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ
ಪರಸ್ಪರ ನಂಬಿಕೆ ಹೆಚ್ಚಿಸಲು, ಹೆಚ್ಚಿನ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು, ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಕೀವ್ ಮತ್ತು ಚೆರ್ನಿಹಿವ್ ಭಾಗಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ತಿಳಿಸಿದ್ದಾರೆ.
ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು ಹೊಂದದ ಸ್ಥಿತಿಯ ಕುರಿತು ಒಪ್ಪಂದ ಮಾಡಿಕೊಳ್ಳುವ ಮಾತುಕತೆ ಪ್ರಾಯೋಗಿಕ ಹಂತಕ್ಕೆ ತಲುಪಿದೆ. ಅಂದರೆ ಮಿಲಿಟರಿ ಮೈತ್ರಿ ಅಥವಾ ಆತಿಥೇಯ ನೆಲೆಗಳನ್ನು ಸೇರುವುದಿಲ್ಲವೆಂದು ಉಕ್ರೇನ್ ಸಮಾಲೋಚಕರು ತಿಳಿಸಿದ್ದಾರೆ ಎಂದು ಅವರು ಫೋಮಿನ್ ಸ್ಪಷ್ಟಪಡಿಸಿದ್ದಾರೆ. ಇದು ʼಅರ್ಥಪೂರ್ಣʼ ಮಾತುಕತೆ ಎಂದು ರಷ್ಯಾದ ಸಮಾಲೋಚಕರು ಬಣ್ಣಿಸಿದ್ದಾರೆ. ಇದನ್ನೂ ಓದಿ: ನಮ್ಮ ದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರ ಬಳಕೆ: ರಷ್ಯಾ
ಮುಖ್ಯ ಸಂಧಾನಕಾರ ವ್ಲಾಡಿಮಿರ್ ಮೆಡಿನ್‌ಸ್ಕಿ ಅವರು, ಉಕ್ರೇನ್ ಪ್ರಸ್ತಾಪಗಳನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದಿಡಲಾಗುವುದು ಎಂದು ಹೇಳಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫೆ.24 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿಗೆ ಪ್ರಯತ್ನ – ವಿಫಲವಾದ ರಷ್ಯಾ
ಕೀವ್: ರಷ್ಯಾ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಪ್ರಯತ್ನಪಟ್ಟಿದ್ದು, ಈ ಬಾರಿಯೂ ಝೆಲೆನ್ಸ್ಕಿ ಪಾರಾಗಿದ್ದಾರೆ ಎಂದು ಸೋಮವಾರ ವರದಿಗಳು ತಿಳಿಸಿವೆ.
ರಷ್ಯಾದ ವಿಶೇಷ ಪಡೆಯ ನೇತೃತ್ವದ 25 ಸೈನಿಕರ ಗುಂಪನ್ನು ಉಕ್ರೇನ್ ಅಧಿಕಾರಿಗಳು ಸ್ಲೋವಾಕಿಯಾ-ಹಂಗೇರಿ ಗಡಿಯ ಬಳಿ ವಶಪಡಿಸಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷನ ಮೇಲೆ ದಾಳಿ ನಡೆಸುವುದೇ ಈ ಗುಂಪಿನ ಗುರಿಯಾಗಿತ್ತು ಎಂದು ಕೀವ್ ಪೋಸ್ಟ್ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಗುಂಡಿನ ದಾಳಿ – 19 ಜನರ ಸಾವು
⚡️Another attempt on the life of #VladimirZelensky failed.
This time, a military group of 25 people led by the Russian special services was captured near the Slovakia-Hungary border. Their goal was the physical elimination of the #UkrainianPresident. pic.twitter.com/Vp0vDEIZnK
ಕಳೆದ ಬಾರಿ ರಷ್ಯಾ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ನಿವಾಸದ ಬಳಿಯಲ್ಲಿ ಬಾಂಬುಗಳ ದಾಳಿ ನಡೆಸಿತ್ತು. ಆ ಸಂದರ್ಭ ಝೆಲೆನ್ಸ್ಕಿ ಪ್ರಾಣಾಪಾಯದಿಂದ ಪಾರಾಗಿದ್ದು, ರಷ್ಯಾ ತನ್ನನ್ನು ಸೆರೆಹಿಡಿಯುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯ ಮಾಡಿದ್ದರು. ಇದನ್ನೂ ಓದಿ: ವುಹಾನ್ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್
ಕೀವ್: ಮಾಸ್ಕೋದಲ್ಲಿ ಉಕ್ರೇನ್ ಪ್ರಶ್ನೆಗೆ ಅಂತಿಮ ಪರಿಹಾರದ ಯೋಜನೆಗಳು ನಡೆಯುತ್ತಿವೆ. ಇದು 2ನೇ ಮಹಾಯುದ್ಧದ ಸಮಯದಲ್ಲಿ ಯಹೂದಿಗಳ ನರಮೇಧದ ನಾಜಿ ಯೋಜನೆಯನ್ನು ಉಲ್ಲೇಖಿಸುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ರಷ್ಯಾದ ಆಕ್ರಮಣದ ಕುರಿತು ಇಸ್ರೇಲ್‍ನ ಸಂಸತ್ತಿನಲ್ಲಿ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಜನರು, ರಾಜ್ಯ, ಸಂಸ್ಕೃತಿ ಸಂಪೂರ್ಣ ವಿನಾಶವಾಗಿದೆ. ಇದರಿಂದಾಗಿ 2ನೇ ಮಹಾಯುದ್ಧಕ್ಕೆ ಉಕ್ರೇನ್‍ನ ದಾಳಿಯನ್ನು ಹೋಲಿಸುವ ಸಂಪೂರ್ಣ ಹಕ್ಕು ನನಗಿದೆ ಎಂದರು.
ಉಕ್ರೇನ್‍ನ ಜನರ ಪ್ರಸ್ತುತ ಪರಿಸ್ಥಿತಿಯನ್ನು 2ನೇ ಮಹಾಯುದ್ಧದಲ್ಲಿ ಯಹೂದಿಗಳ ನರಮೇಧ ಆದಂತೆ ಆಗಿದೆ ಎಂದ ಅವರು, ನಮ್ಮ ಹಾಗೂ ನಿಮ್ಮ ಬೆದರಿಕೆ ಒಂದೇ ಆಗಿದೆ. ಇದರಿಂದಾಗಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎನ್ನುವ ಸಮಯ ಬಂದಿದೆ ಎಂದು ಮನವಿ ಮಾಡಿದರು. ಇದನ್ನೂ ಓದಿ:ಕಚ್ಚಾತೈಲ ಬೆಲೆ ಮತ್ತೆ ಶೇ.3 ಏರಿಕೆ; ಮಾರುಕಟ್ಟೆಯಿಂದ ಹೊರಬೀಳಲಿದೆಯಾ ರಷ್ಯಾ ತೈಲ
ಅಂತಾರಾಷ್ಟ್ರೀಯ ನಾಯಕರನ್ನು ಆಕರ್ಷಿಸಲು ಝೆಲೆನ್ಸ್ಕಿ ಐತಿಹಾಸಿಕ ದುರಂತಗಳನ್ನು ಆಹ್ವಾನಿಸಿದ್ದು ಇದೇ ಮೊದಲಲ್ಲ. ಅವರು ಪರ್ಲ್ ಹಾರ್ಬರ್ ಮತ್ತು ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ ಸ್ಮರಿಸಿ ಇತರೆ ದೇಶಗಳಿಗೂ ಸಹಾಯವನ್ನು ಮಾಡುವಂತೆ ಮನವಿ ಮಾಡಿದ್ದರು.
ಕೀವ್: ರಷ್ಯಾ ದಾಳಿಯಿಂದ ಕೀವ್ ನಗರವನ್ನು ರಕ್ಷಿಸಲು ಉಕ್ರೇನ್‍ನ ಮಾಜಿ ಟೆನ್ನಿಸ್ ಆಟಗಾರ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಟೆನ್ನಿಸ್ ರಾಕೆಟ್ ಹಿಡಿದ ಕೈಯಲ್ಲಿ ಗನ್ ಹಿಡಿದು ಹೋರಾಡಲು ಮುಂದಾಗಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಕೀವ್ ನಗರ ವಶಪಡಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಈ ನಡುವೆ ಕೀವ್ ವಶಪಡಿಸಿಕೊಳ್ಳಲು ರಷ್ಯಾ ಕ್ಷಿಪಣಿ, ಬಾಂಬ್‍ಗಳ ಸುರಿಮಳೆ ಸುರಿಸುತ್ತಿದೆ. ಹಾಗಾಗಿ ಕೀವ್ ನಗರವನ್ನು ರಷ್ಯಾದಿಂದ ಉಳಿಸಿಕೊಳ್ಳಲು ಅಲೆಕ್ಸಾಂಡರ್ ಡೊಲ್ಗೊಪೊಲೊವ್ ಶಸ್ತ್ರಸಜ್ಜಿತನಾಗಿ ನಿಂತಿರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ
ನಾನು ತಾಯ್ನಾಡಿನ ರಕ್ಷಣೆಗಾಗಿ ಮತ್ತೆ ಕೀವ್‍ಗೆ ಬಂದಿದ್ದೇನೆ. ಕೀವ್‍ನ ಜನ ಯುದ್ಧದಿಂದ ತತ್ತರಿಸಿ ಹೋಗಿದ್ದಾರೆ. ಕೀವ್ ರಕ್ಷಣೆಗಾಗಿ ಉಕ್ರೇನ್ ಸೈನಿಕರು ಹೋರಾಡುತ್ತಿದ್ದಾರೆ. ನನ್ನ ಮನೆಯ ಸದಸ್ಯರನ್ನು ರಕ್ಷಿಸಿದ ಬಳಿಕ ನಾನು ಇದೀಗ ದೇಶದ ರಕ್ಷಣೆಗಾಗಿ ಶಸ್ತ್ರಸ್ತ್ರ ಹಿಡಿದಿದ್ದೇನೆ. ಗನ್ ಹಿಡಿದು ಶೂಟಿಂಗ್ ಮಾಡುವ ಬಗ್ಗೆ ನಾನು ತರಬೇತಿ ಕೂಡ ಪಡೆದಿದ್ದೇನೆ. ನನಗೆ ಮಾಜಿ ಸೈನಿಕರೊಬ್ಬರು 5 ರಿಂದ 7 ದಿನಗಳ ಕಾಲ ತರಬೇತಿ ನೀಡಿದ್ದಾರೆ. ನಾನು ಇದೀಗ ಗನ್ ಹಿಡಿದು ಕೀವ್ ರಕ್ಷಣೆಗಾಗಿ ಮುಂದಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್
Hi Kiev🙏🏻🇺🇦 I’m back, to help with what I can and defend our home. Details in my Instagram https://t.co/1IxTOh6xLM
ಅಲೆಕ್ಸಾಂಡರ್ ಡೊಲ್ಗೊಪೊಲೊವ್ 2012ರಲ್ಲಿ ವಿಶ್ವ ಟೆನ್ನಿಸ್ ರ್ಯಾಂಕಿಂಗ್‍ನಲ್ಲಿ 12 ಸ್ಥಾನ ಪಡೆದಿದ್ದರು. ಆ ಬಳಿಕ 2021ರಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್‍ಗೆ ವಿದಾಯ ಘೋಷಿಸಿದ್ದರು. ಇದೀಗ ಉಕ್ರೇನ್ ರಕ್ಷಣೆಗಾಗಿ ಗನ್ ಹಿಡಿದಿದ್ದಾರೆ. ಈ ಮೊದಲು ಉಕ್ರೇನ್‍ನ ಹಲವು ಕ್ರೀಡಾಪಟುಗಳು ಉಕ್ರೇನ್ ಸೈನ್ಯದೊಂದಿಗೆ ಕೈ ಜೋಡಿಸಿದ್ದು, ಎರಡು ಬಾರಿ ಒಲಿಂಪಿಕ್ಸ್ ಬಾಕ್ಸಿಂಗ್‍ನಲ್ಲಿ ಚಿನ್ನದ ಪದಕ ವಿಜೇತ ವಾಸಿಲಿ ಲೊಮಾಚೆಂಕೊ ಮತ್ತು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಓಲೆಕ್ಸಾಂಡರ್ ಉಸಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಕೀವ್: ಉಕ್ರೇನ್ ವಿರುದ್ಧ ಸತತ 20ನೇ ದಿನವೂ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ದಾಳಿಯಿಂದ ತತ್ತರಿಸಿರುವ ಕೀವ್‍ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಡೀ ಖೇರ್ಸಾನ್ ಪ್ರಾಂತ್ಯವನ್ನು ರಷ್ಯಾ ಪಡೆಗಳು ನಿಯಂತ್ರಣಕ್ಕೆ ತೆಗೆದುಕೊಂಡಿವೆ.
ಕೀವ್ ನಗರದ ಜನವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮುಂದುವರಿಸಿದೆ. ಕೀವ್ ಮೆಟ್ರೋ ಸ್ಟೇಷನ್ ಮೇಲೆಯೂ ದಾಳಿ ನಡೆಸಿದೆ. ಅಲ್ಲದೇ, ಉಕ್ರೇನ್‍ಗೆ ಶಸ್ತ್ರಾಸ್ತ್ರ ಪೂರೈಕೆ ಕಟ್ ಮಾಡುವ ಕಸರತ್ತನ್ನು ರಷ್ಯಾ ಆರಂಭಿಸಿದ್ದು, ಇದರ ಭಾಗವಾಗಿ ಡಿನಿಪ್ರೋ ಏರ್‌ಪೋರ್ಟ್‌ನ ರನ್‍ವೇಯನ್ನು ಹಾಳುಗೆಡವಿದೆ. ಕಳೆದ 24 ಗಂಟೆಯಲ್ಲಿ ಉಕ್ರೇನ್ ಸೇನೆ 13 ಡ್ರೋನ್, 16 ಸೈನಿಕ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸುವಂತೆ ಲೈವ್ ವೇಳೆ ಸೆಟ್‍ಗೆ ಓಡಿ ಬಂದ ಮಹಿಳೆ- ಉಕ್ರೇನ್ ಅಧ್ಯಕ್ಷ ಧನ್ಯವಾದ
ಉಕ್ರೇನ್ ಸೇನೆ ಕೂಡ ಪ್ರತಿ ದಾಳಿ ಸಂಘಟಿಸಿದ್ದು, ರಷ್ಯಾದ ನಾಲ್ಕು ಹೆಲಿಕಾಪ್ಟರ್ ಪತನ ಗೊಳಿಸಿದೆ. ರಷ್ಯಾದ ವಿರುದ್ಧ ನಾವು ಎಲ್ಲಾ ಕಡೆ ಮೇಲುಗೈ ಸಾಧಿಸ್ತಿದ್ದೇವೆ. ಸ್ವಾತಂತ್ರ್ಯ ಬೇಕು ಎಂದರೇ, ಒಂದಿಷ್ಟನ್ನು ಕಳೆದುಕೊಳ್ಳಲೇಬೇಕು. ಅದಕ್ಕಾಗಿಯೇ ನಮ್ಮ ಹೋರಾಟ ಎಂದು ಉಕ್ರೇನ್ ಹೋರಾಟವನ್ನು ಬಲ ಪಡಿಸಿಕೊಂಡಿದೆ. ಇದನ್ನೂ ಓದಿ: ರಷ್ಯಾಗೆ ಸಹಾಯ ಮಾಡದಂತೆ ಚೀನಾಗೆ ಅಮೆರಿಕ ವಾರ್ನಿಂಗ್
ಉಕ್ರೇನ್‍ಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಪೋಲೆಂಡ್, ಝೇಕ್ ರಿಪಬ್ಲಿಕ್, ಸ್ಲೋವೇನಿಯಾ ಪ್ರಧಾನಿಗಳು ಶೀಘ್ರವೇ ಉಕ್ರೇನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮಧ್ಯೆ, ಅಮೆರಿಕಾದ ವ್ಯೋಮಗಾಮಿ ಈ ಮಾಸಾಂತ್ಯದಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಿಂದ ರಷ್ಯಾದ ಸೂಯೆಜ್ ನೌಕೆಯಲ್ಲಿ ಭೂಮಿಗೆ ವಾಪಸ್ ಆಗಬೇಕಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ, ಅವರನ್ನು ಕರೆದುಕೊಂಡು ಬರುತ್ತೋ ಇಲ್ಲವೋ ಎಂಬ ಆತಂಕ ಆವರಿಸಿತ್ತು. ಆದರೆ ಹಾಗೇನು ಮಾಡಲ್ಲ. ಅವರನ್ನು ಅಲ್ಲಿಯೇ ಬಿಟ್ಟು ಬರಲ್ಲ. ನಾವು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುತ್ತೇವೆ ಎಂದು ರೋಸ್ ಕಾಸ್ಮೋಸ್ ಸ್ಪಷ್ಟಪಡಿಸಿದೆ. ಉಕ್ರೇನ್‍ನಲ್ಲಿ ಖಾಸಗಿ ಮಾಧ್ಯಮವೊಂದರ ವರದಿಗಾರ ಬಾಂಬ್ ಬ್ಲಾಸ್ಟ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಯುದ್ಧದಲ್ಲಿ ಇಬ್ಬರೂ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಉಕ್ರೇನ್‍ನಿಂದ ಜನ ಮಹಾ ವಲಸೆ ಹೋಗುತ್ತಿದ್ದಾರೆ.
ವಾಷಿಂಗ್ಟನ್: 20ನೇ ದಿನಕ್ಕೆ ಕಾಲಿಟ್ಟಿರುವ ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‍ಗೆ ಆಯುಧಗಳು, ಆಹಾರ ಮತ್ತು ಹಣದ ರೂಪದಲ್ಲಿ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಉಕ್ರೇನ್‍ನ ಮೇಲೆ ರಷ್ಯಾ ದಾಳಿ ತಾರಕಕ್ಕೆ ಏರುತ್ತಿದ್ದು, ಈ ಬಗ್ಗೆ ಅನೇಕ ರಾಷ್ಟ್ರಗಳು ವಿರೋಧವನ್ನು ವ್ಯಕ್ತಪಡಿಸಿದೆ. ಅದರಲ್ಲೂ ಪ್ರಮುಖವಾಗಿ ಅಮೆರಿಕ ಮೊದಲನಿಂದಲೂ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಟ್ವೀಟ್ ಮಾಡಿ, ಉಕ್ರೇನಿನ ಜನರು ಯುದ್ಧದಿಂದ ಹಾನಿಯಾದ ಪ್ರದೇಶಗಳನ್ನು ತೊರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಾಶ್ರಿತರನ್ನು ನಾವು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಟ್ವೀಟ್‍ನಲ್ಲಿ ಏನಿದೆ?:
ರಷ್ಯಾವನ್ನು ಎದುರಿಸಲು ಉಕ್ರೇನ್‍ನ ಬಳಿ ಸಾಕಷ್ಟು ಶಸ್ತ್ರಗಳಿವೆಯೇ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳುತ್ತಿದ್ದೇವೆ. ಜೊತೆಗೆ ಅಲ್ಲಿನ ನಾಗರಿಕರ ಜೀವವನ್ನು ಉಳಿಸಲು ಹಣ ಮತ್ತು ಆಹಾರವನ್ನು ಕಳಿಸುತ್ತೇವೆ. ಅಲ್ಲದೆ ಉಕ್ರೇನ್‍ನ ನಿರಾಶ್ರಿತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ತೀರ್ಪು ಏನೇ ಬಂದ್ರೂ ಗೌರವಿಸಿ, ಶಾಂತಿ ಕಾಪಾಡಿ: ಗೃಹ ಸಚಿವರ ಮನವಿ
We will make sure Ukraine has weapons to defend against the invading Russian force.
We will send money and food and aid to save Ukrainian lives.
We will welcome Ukrainian refugees with open arms.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದರಿಂದ ಅಮೆರಿಕ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ರಷ್ಯಾದ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹಲವಾರು ಪ್ರಮುಖ ಬ್ಯಾಂಕ್‍ಗಳ ಮೇಲೆ ನಿಬರ್ಂಧ ಹೇರಿದೆ. ಜೊತೆಗೆ ರಷ್ಯಾವನ್ನು SWIFTಹಣಕಾಸು ವ್ಯವಸ್ಥೆಯಿಂದ ಹೊರಹಾಕಿದೆ.
ಕೀವ್: ರಷ್ಯಾದ ಆಕ್ರಮಣಕಾರರು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಆದರೆ ಅವರು ಉಕ್ರೇನ್‍ನನ್ನು ವಶಪಡಿಸಿಕೊಳ್ಳುವಷ್ಟು ಶಕ್ತಿಯನ್ನು ರಷ್ಯಾ ಹೊಂದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೀಕಿಸಿದರು.
ಫೆಬ್ರವರಿ 24ರಂದು ದಾಳಿ ನಡೆಸಿದ ರಷ್ಯಾದ ವಿರುದ್ಧ ಉಕ್ರೇನ್‍ನ ಜನರನ್ನು ಒಗ್ಗೂಡಿಸಲು ಈ ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಉಕ್ರೇನ್‌ನ ಜನರಿಗೆ ಧೈರ್ಯ ತುಂಬುವ ಹಾಗೂ ದೇಶಕ್ಕಾಗಿ ಹೋರಾಡಲು ಸ್ಪೂರ್ತಿ ನೀಡುವ ಸಂದೇಶ ಇದರಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಸಂದೇಶವನ್ನು ಪೋಸ್ಟ್ ಮಾಡಿರುವ ಅವರು, ರಷ್ಯಾದ ಆಕ್ರಮಣಕಾರರು ನಮ್ಮನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಕೇವಲ ಹಿಂಸೆಯ ಮೇಲೆ ಮಾತ್ರ ಹಿಡಿತವನ್ನು ಸಾಧಿಸಿದ್ದಾರೆ ಜೊತೆಗೆ ಅವರ ಹತ್ತಿರ ಶಸ್ತ್ರಾಸ್ತ್ರಗಳು ಹೆಚ್ಚಿವೆ. ಆದರೆ ಅವರಿಗೆ ಉಕ್ರೇನ್‍ನನ್ನು ವಶ ಪಡಿಸಿಕೊಳ್ಳುವ ಶಕ್ತಿ ಹಾಗೂ ಮನೋಭಾವವು ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್
ರಷ್ಯಾದ ಆಕ್ರಮಣಕಾರರು ಸಾಮಾನ್ಯ ಜೀವನಕ್ಕೆ ಯಾವುದೇ ನೈಸರ್ಗಿಕ ಆಧಾರವನ್ನು ಹೊಂದಿಲ್ಲ. ಆದ್ದರಿಂದ ಜನರು ಸಂತೋಷ ಪಡುತ್ತಿದ್ದಾರೆ. ಜೊತೆಗೆ ಕನಸು ಕಾಣುತ್ತಿದ್ದಾರೆ. ಆದರೆ ಅವರು ಸಾಮಾನ್ಯ ಜೀವನನ್ನು ನಡೆಸಲು ಅಸಮರ್ಥರಾಗಿದ್ದಾರೆ. ರಷ್ಯಾ ವಿದೇಶಿ ಭೂಮಿಗೆ ಬಂದಿದೆ. ಅದರ ಕನಸುಗಳನ್ನು ನನಸು ಮಾಡಿಕೊಳ್ಳಲು ಅಸಾಧ್ಯ. ರಷ್ಯಾವು ದೇಶವನ್ನು ಒಡೆದು, ಉಕ್ರೇನ್‍ನಲ್ಲಿ ಹೊಸ ಸುಳ್ಳು ಗಣರಾಜ್ಯಗಳನ್ನು ರಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್