Tag: kyatsandra

  • ತುಮಕೂರು| ಅಂತಾರಾಜ್ಯ ಕಳ್ಳನ ಬಂಧನ – 42 ಬೈಕ್ ಜಪ್ತಿ

    ತುಮಕೂರು| ಅಂತಾರಾಜ್ಯ ಕಳ್ಳನ ಬಂಧನ – 42 ಬೈಕ್ ಜಪ್ತಿ

    ತುಮಕೂರು: ಅಂತಾರಾಜ್ಯ ಬೈಕ್ ಕಳ್ಳನನ್ನು (Thief) ಬಂಧಿಸಿದ ಪೊಲೀಸರು, 21.60 ಲಕ್ಷ ರೂ. ಮೌಲ್ಯದ 42 ಬೈಕ್‌ಗಳನ್ನು (Bike) ಜಪ್ತಿ ಮಾಡಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಮುಭಾರಕ್ ಖಾನ್ ಅಲಿಯಾಸ್ ಮಟನ್ ಮುಭಾರಕ್ (53) ಬಂಧಿತ ಕಳ್ಳ. ಸೆ. 24ರಂದು ನೆಲಮಂಗಲ ತಾಲೂಕಿನ ಚಿಕ್ಕನಹಳ್ಳಿಯ ಕೆಂಪಗಂಗಯ್ಯ ಎಂಬವರ ಬೈಕ್ ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಕಳುವಾಗಿತ್ತು. ಮೇಕೆ ಸಂತೆಯಲ್ಲಿ ಮೇಕೆ ಖರೀದಿಸಲು ಬಂದಿದ್ದಾಗ ಬೈಕ್ ಕಾಣೆಯಾಗಿತ್ತು. ಈ ಕುರಿತು ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಮೀಸಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಹೃದಯಾಘಾತದಿಂದ ಸಾವು

    ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಇದರ ಬೆನ್ನು ಬಿದ್ದ ಪೊಲೀಸ್ ಅಧಿಕಾರಿಗಳು ಮುಭಾರಕ್ ಖಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾಕಷ್ಟು ಕಳವು ಪ್ರಕರಣಗಳು ಹೊರಬಂದಿವೆ. ಇದನ್ನೂ ಓದಿ: ಬುಧವಾರ ಜಮೀರ್ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯುತ್ತೇನೆ: ಅಜ್ಜಂಪೀರ್ ಖಾದ್ರಿ

  • ಬಂಧನದ ಬೆದರಿಕೆ ಒಡ್ಡಿ ಹಣ ಪೀಕಿದ ಪೇದೆ: ಆರೋಪ

    ಬಂಧನದ ಬೆದರಿಕೆ ಒಡ್ಡಿ ಹಣ ಪೀಕಿದ ಪೇದೆ: ಆರೋಪ

    ತುಮಕೂರು: ನಗರದ ಕ್ಯಾತಸಂದ್ರ ಪೊಲೀಸ್ ಠಾಣೆಯ ಪೇದೆಯೊಬ್ಬರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.

    ಗೋಕುಲ ಬಡಾವಣೆ ನಿವಾಸಿ ನಾಗೇಂದ್ರಯ್ಯ ಪೇದೆ ಕಿರಣ್ ಕುಮಾರ್ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 10 ವರ್ಷದ ಹಿಂದೆ ನಾಗೇಂದ್ರಯ್ಯ ಇಸ್ಪಿಟ್ ಅಡ್ಡೆ ನಡೆಸುತ್ತಿದ್ದ ಎಂದು ಬಂಧಿಸಲಾಗಿತ್ತು. ಘಟನೆ ನಂತರದ ಇಸ್ಟಿಟ್ ಆಡಿಸುವುದನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಆದರೂ ಪೇದೆ ಕಿರಣ್ ಕುಮಾರ್, ನಾಗೇಂದ್ರಯ್ಯಗೆ ಬೆದರಿಕೆ ಒಡ್ಡಿ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ ಎಂಬ ಆರೋಪಿಸಲಾಗಿದೆ.

    ತಿಂಗಳಿಗೆ 50 ಸಾವಿರ ರೂ. ಲಂಚ ಕೊಡಬೇಕು ಎಂದು ಕಿರಣ್ ಕುಮಾರ್ ಪದೇ ಪದೇ ಬಂದು ಕಿರುಕುಳ ನೀಡುತ್ತಿದ್ದಾನೆ. ಹಣ ಕೊಡದಿದ್ದರೆ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ನಾಗೇಂದ್ರಯ್ಯ ಆರೋಪಿಸಿದ್ದಾರೆ. ಜೊತೆಗೆ ಕಿರಣ್ ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಪಿ ವಂಶಿಕೃಷ್ಣರ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.