Tag: KUWJ

  • ಪಬ್ಲಿಕ್‌ ಟಿವಿಯ ಕೆಪಿ ನಾಗರಾಜ್‌ಗೆ KUWJ ಪ್ರಶಸ್ತಿ

    ಪಬ್ಲಿಕ್‌ ಟಿವಿಯ ಕೆಪಿ ನಾಗರಾಜ್‌ಗೆ KUWJ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಪಬ್ಲಿಕ್‌ ಟಿವಿ (PUBLiC TV) ಮೈಸೂರು ಪ್ರತಿನಿಧಿ ಕೆಪಿ ನಾಗರಾಜ್‌ (KP Nagaraj) ಅವರಿಗೆ ಪ್ರಶಸ್ತಿ ದೊರೆತಿದೆ.

    ತುಮಕೂರಿನಲ್ಲಿ ಜನವರಿ 18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.

    ಪ್ರಶಸ್ತಿಗಳ ವಿವರ ಇಂತಿದೆ.
    1. ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ)
    ಚಂದ್ರಶೇಖರ ಮುಕ್ಕುಂದಿ, ವಿಜಯ ಕರ್ನಾಟಕ, ಗಂಗಾವತಿ
    ದಿಗಂಬರ ಮುರುಳೀಧರ ಪೂಜಾರ್, ಸಂಯುಕ್ತ ಕರ್ನಾಟಕ, ಗದಗ

    2. ಪಟೇಲ್ ಭೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)
    ಪ್ರಸನ್ನ ಮನೋಹರ ಕುಲಕರ್ಣಿ, ಡೆಕ್ಕನ್ ಹೆರಾಲ್ಡ್, ಖಾನಾಪುರ.
    ರವಿರಾಜ್ ಆರ್ ಗಲಗಲಿ, ವಿಜಯ ಕರ್ನಾಟಕ, ಬಾಗಲಕೋಟೆ

    3. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ)
    ಮಂಜುನಾಥ್.ಕೆ., ವಿಜಯವಾಣಿ, ಬೆಂಗಳೂರು
    ಶಕೀಲ ಚೌದರಿ, ಅ್ಜಲಪುರ, ಕಲಬುರಗಿ

    4. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ)
    ಕೆ.ಓಂಕಾರಮೂರ್ತಿ, ಪ್ರಜಾವಾಣಿ, ಕೋಲಾರ
    ಸಿದ್ದು ಆರ್ ಜಿ ಹಳ್ಳಿ, ಪ್ರಜಾವಾಣಿ, ಮಂಡ್ಯ

    5. ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ)
    ಕಾಯಪಂಡ ಶಶಿ ಸೋಮಯ್ಯ, ಶಕ್ತಿ ಪತ್ರಿಕೆ, ಕೊಡಗು
    ಪುನೀತ್ ಸಿ.ಟಿ., ವಿಜಯವಾಣಿ ಪಿರಿಯಾಪಟ್ಟಣ

    6. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ರಾಜಕೀಯ ವಿಮರ್ಶಾತ್ಮಕ ವರದಿ)
    ಅಪ್ಪಾರಾವ್ ಸೌದಿ, ಕನ್ನಡಪ್ರಭ, ಬೀದರ್.
    ರಮೇಶ್ ದೊಡ್ಡಪುರ, ಹಿರಿಯ ಪತ್ರಕರ್ತರು

    7. ಮಂಗಳ ಎಂ. ಸಿ. ವರ್ಗಿಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನಕ್ಕೆ)
    ಕೋಡಿಬೆಟ್ಟು ರಾಜಲಕ್ಷ್ಮಿ, ಸುಧಾ, ಮಂಗಳೂರು.
    ನಾರಾಯಣ ರೈ ಕುಕ್ಕುವಳ್ಳಿ, ಮಧುಪ್ರಪಂಚ, ಧರ್ಮಸ್ಥಳ

    8) ತಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ (ರೈತಾಪಿ ಜನರ ಸಮಸ್ಯೆ ವರದಿಗಾಗಿ)
    ಪುಟ್ಟರಾಜು, ಸಂಯುಕ್ತ ಕರ್ನಾಟಕ, ದಿಡಗ, ಚನ್ನರಾಯಪಟ್ಟಣ
    ಮರಿದೇವರು ಹೂಗಾರ್, ವಿಜಯವಾಣಿ, ಹುಬ್ಬಳ್ಳಿ.

    9) ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಅತ್ಯುತ್ತಮ ವರದಿ)
    ಗುರುಪ್ರಸಾದ್ ತುಂಬಸೋಗೆ, ಪ್ರತಿನಿಧಿ, ಮೈಸೂರು
    ಹರಿಪ್ರಸಾದ್ ನಂದಳಿಕೆ, ಕಾರ್ಕಳ, ಉಡುಪಿ

    10. ಆರ್.ಎಲ್. ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಅತ್ಯುತ್ತಮ ವರದಿ)
    ರೇಣುಕೇಶ್, ಎಂ., ಹೊಸದಿಗಂತ, ಚಾಮರಾಜನಗರ
    ಶಿವು ಹುಣಸೂರು, ವಿಜಯವಾಣಿ, ಹುಣಸೂರು.

    11. ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಅತ್ಯುತ್ತಮ ವರದಿಗೆ)
    ಡಿ.ಎನ್.ತಿಪ್ಪೇಸ್ವಾಮಿ, ವಿಜಯವಾಣಿ, ಗಂಗಾವತಿ
    ನಜೀರ್ ಅಹಮದ್, ಆಂದೋಲನ, ಮೈಸೂರು

    12. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗೆ)
    ರವಿ ಬಿದನೂರು, ಹೊಸನಗರ, ಶಿವಮೊಗ್ಗ
    ಸಿದ್ಧನಗೌಡ ಎಚ್ ಪಾಟೀಲ್, ಸಂಯುಕ್ತ ಕರ್ನಾಟಕ, ಹಟ್ಟಿ, ರಾಯಚೂರು.

    13. ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ)
    ಡಿ.ಬಿ.ಬಸವರಾಜು, ಉದಯಕಾಲ., ಶಿವಾನಂದ, ಸೂರ್ಯವಂಶ.
    ಮುತ್ತುರಾಜ್, ಪ್ರಜಾ ಟಿವಿ., ಕೆ.ಎಸ್.ನಾಗರಾಜ್, ನಂದೀಶ್ ದುಗಡಿ.,

    14, ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿ ವರದಿ)
    ಹುಡೇಂ ಕೃಷ್ಣಮೂರ್ತಿ, ವಿಜಯ ಕರ್ನಾಟಕ, ಕೂಡ್ಲಿಗಿ, ವಿಜಯನಗರ.
    ವಿಜಯ ಬಾಸ್ಕರರೆಡ್ಡಿ, ಉದಯವಾಣಿ, ಯಾದಗಿರಿ
    ಜಯಂತಿ ಯು.ಎಂ., ಜನಮಿತ್ರ, ಕೊಡಗು

    15. ನಾಡಿಗೇರ ಕೃಷ್ಣರಾಯರ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನಕ್ಕೆ)
    ಸಿದ್ದಯ್ಯ ಹಿರೇಮಠ, ಪ್ರಜಾವಾಣಿ, ದಾವಣಗೆರೆ

    16. ಅತ್ಯುತ್ತಮ ಪುಟ ವಿನ್ಯಾಸಗಾರರಿಗೆ (ಡೆಸ್ಕ್‌ನಲ್ಲಿ ಕೆಲಸ ಮಾಡುವವರು)
    ಜನಾರ್ದನ ನ, ಉದಯವಾಣಿ, ಬೆಂಗಳೂರು
    ವಿಜಯಕುಮಾರ್, ವಿಜಯವಾಣಿ, ಬೆಂಗಳೂರು.

    17. ನ್ಯಾಯಾಲಯದ (ಕೋರ್ಟ್ ಬೀಟ್) ಅತ್ಯುತ್ತಮ ವರದಿಗಾಗಿ
    ಷಣ್ಮುಖಪ್ಪ, ಪ್ರಜಾವಾಣಿ, ಬೆಂಗಳೂರು.

    18. ಸುಣ್ಣುವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ. (ಅತ್ಯುತ್ತಮ ಸೇನಾ ವರದಿಗೆ)
    ವಿಶ್ವಕುಮಾರ್, ಇ.ಆರ್., ಚಿತ್ತಾರ, ಕೊಡಗು.

    19. ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ ( ಇಂಗ್ಲೀಷ್ ಪತ್ರಿಕೆ ವರದಿ)
    ಪಿ.ಶಿಲ್ಪ, ಡೆಕನ್ ಹೆರಾಲ್ಡ್, ಮೈಸೂರು
    ಅಕ್ಷಯ ಪಿ.ವಿ., ಸ್ಟಾರ್ ಆಫ್ ಮೈಸೂರು

    20. ಮಲಗೊಂಡ ಪ್ರಶಸ್ತಿ (ಅತ್ಯುತ್ತಮ ತನಿಖಾ ವರದಿ)
    ಶರಣ ಬಸವ ನೀರ ಮಾನ್ವಿ, ವಿಜಯವಾಣಿ, ಮಾನ್ವಿ
    ಪಿ.ರಾಮಸ್ವಾಮಿ ಕಣ್ವ, ಈ ಸಂಜೆ., ಬೆಂಗಳೂರು.

    21. ನಟ, ನಿರ್ದೇಶಕ ದ್ವಾರಕೀಶ್ ಸ್ಮಾರಕ ಪ್ರಶಸ್ತಿ (ಚಲನ ಚಿತ್ರ ವಿಭಾಗ)
    ಕೆ.ಎಸ್.ವಾಸು, ಹಿರಿಯ ಪತ್ರಕರ್ತರು,

    22.ಅಭಿಮಾನಿ ಪ್ರಕಾಶನ ಪ್ರಶಸ್ತಿ
    ರವಿರಾಜ ಗಲಗಲಿ. ವಿಜಯ ಕರ್ನಾಟಕ, ಬಾಗಲಕೋಟೆ.
    ಮಾಲತೇಶ ಅರಸು, ಈ ನಗರವಾಣಿ, ಚಿತ್ರದುರ್ಗ.

    23.ಸುದ್ದಿಚಿತ್ರ(ಛಾಯಾಚಿತ್ರ ಸಹಿತಿ ವರದಿ)
    ಡಿ.ಜೆ.ಮಲ್ಲಿಕಾಜುನ, ಪ್ರಜಾವಾಣಿ, ಶಿಡ್ಲಘಟ್ಟ
    ನಂದನ್ ಪುಟ್ಟಣ್ಣ, ಕನ್ನಡಪ್ರಭ, ಚನ್ನರಾಯಪಟ್ಟಣ.

    24. ಪೋಟೋಗ್ರಫಿ
    ಅತೀಖುರ್ ರೆಹಮಾನ್, ಹಾಸನ
    ಎಸ್.ಚರಣ್ ಬಿಳಿಗಿರಿ, ಚಾಮರಾಜನಗರ

    ವಿದ್ಯುನ್ಮಾನ (ಟಿವಿ)ವಿಭಾಗ:
    ಅತ್ಯುತ್ತಮ ರಾಜಕೀಯ ವಿಶ್ಲೇಷಣೆ
    ಅಜಿತ್ ಹನುಮಕ್ಕನವರ್, ಸುವರ್ಣ ಟಿವಿ

    ಸಾಮಾಜಿಕ, ಮಾನವೀಯ ವರದಿ
    ಕೆ.ಪಿ.ನಾಗರಾಜ್, ಪಬ್ಲಿಕ್ ಟಿ.ವಿ., ಮೈಸೂರು.

    ವಿದ್ಯುನ್ಮಾನ ವಿಭಾಗ:
    ವಿಜಯ್ ಜೆ.ಆರ್., ಆರ್ ಕನ್ನಡ
    ಸತೀಶ್ ಕುಮಾರ್ ಎಂ., ಟಿವಿ 5
    ಮಂಜುನಾಥ್ ಕೆ.ಬಿ., ಟಿವಿ 9
    ರಶ್ಮಿ ಶ್ರೀನಿವಾಸ ಹಳಕಟ್ಟಿ ರಾಜ್ ನ್ಯೂಸ್

    ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ
    ಮುರುಳೀಧರ್ ಡಿ.ಪಿ.
    ಪದ್ಮ ನಾಗರಾಜ್
    ಮುಮ್ತಾಜ್ ಅಲೀಂ
    ಕೆ.ಆರ್.ರೇಣು- ನವದೆಹಲಿ
    ವೇಣುಗೋಪಾಲ್ – ಕಾಸರಗೋಡು
    ರೋನ್ಸ್ ಬಂಟ್ವಾಳ-ಮುಂಬಯಿ
    ಶರಣಬಸಪ್ಪ ಜಿಡಗ- ಕಲಬುರ್ಗಿ
    ಅಲ್ಲಮಪ್ರಭ ಮಲ್ಲಿಕಾರ್ಜುನ- ವಿಜಯಪುರ
    ಮೊಹಮದ್ ಯೂನಸ್- ಕೋಲಾರ
    ಎಸ್.ಕೆ.ಒಡೆಯರ್ -ದಾವಣಗೆರೆ
    ಗುರುರಾಜ ಹೂಗಾರ್- ಹುಬ್ಬಳ್ಳಿ

  • ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

    ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

    ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ 36ನೆಯ ಪತ್ರಕರ್ತರ ಸಮ್ಮೇಳನ ನಡೆಸಲು ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಉದ್ಘಾಟನೆ ನೆರವೇರಿಸುವಂತೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಲಾಗಿದೆ. ಈ ವಾರದೊಳಗೆ ದಿನಾಂಕ ನಿಗದಿ ಮಾಡಲಾಗುವುದು. ಅಕ್ಟೋಬರ್ ಕೊನೆ ವಾರ ಇಲ್ಲವೇ ನವೆಂಬರ್ ಎರಡನೇ ವಾರದಲ್ಲಿ ಸಮ್ಮೇಳನ ನಡೆಯುವ ಸಾಧ್ಯತೆಗಳಿವೆ ಎಂದರು. ಇದನ್ನೂ ಓದಿ:  ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    Karnataka administered 29.5 Lakh covid vaccine doses in a single day CM Bommai Thanks Modi

    ಈ ಹಿಂದೆ 1996ರಲ್ಲಿ ಕಲಬುರಗಿಯಲ್ಲಿ 20ನೇ ರಾಜ್ಯ ಸಮ್ಮೇಳನ ನಡೆದಿತ್ತು. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಆಗ ವಿದ್ಯುನ್ಮಾನ ಮಾಧ್ಯಮಗಳು ಕಡಿಮೆ ಇದ್ದವು. ಈಗ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಸಮ್ಮೇಳನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಲಾಗುವುದು. ವೃತ್ತಿ ಆಧಾರಿತ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ ಎಂದು ತಿಳಿಸಿದರು.

    ಮೊದಲನೇಯದಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಶರಣಬಸವೇಶ್ವರರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವೇಶ್ವರರ ಮಹಾದಾಸೋಹಿ ಸಂಸ್ಥಾನದ ಅಧ್ಯಕ್ಷರಾದ ಶರಣಬಸವಪ್ಪ ಅವರ ಸಾನಿಧ್ಯದಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ:  ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಕೋವಿಡ್ ಸೋಂಕು ಆತಂಕದ ಹಿನ್ನೆಲೆಯಲ್ಲಿ ಸಮ್ಮೇಳನ ಎರಡು ದಿನದ ಬದಲು ಒಂದು ದಿನ ಮಾತ್ರ ಆಯೋಜಿಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ಉದ್ಘಾಟನೆ, ತದನಂತರ ಗೋಷ್ಠಿ, ಸಂಜೆ ಸಮಾರೋಪ ನಡೆಸಲು ಉದ್ದೇಶಿಸಲಾಗಿದೆ. ಸಮ್ಮೇಳನ ಅಂಗವಾಗಿ ಅರ್ಥಪೂರ್ಣ ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಹೊರಲಾಗುವುದು. ಒಟ್ಟಾರೆ ಸಮ್ಮೇಳನ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

    ಕೆಯುಡಬ್ಲ್ಯೂಜೆ ಪ್ರಶಸ್ತಿ: ಸಮ್ಮೇಳನ ಸಮಾರೋಪದಲ್ಲಿ ಸಂಘದಿಂದ 19 ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. 2 ವರ್ಷ ಸಂಘದಿಂದ ವಾರ್ಷಿಕ ಪ್ರಶಸ್ತಿ ನೀಡಿಲ್ಲ. ಈಗ ಕಲಬುರಗಿ ಸಮ್ಮೇಳನದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹೀಗಾಗಿ ಪತ್ರಕರ್ತರು ತಮ್ಮ ಸಾಮಾಜಿಕ ಪರಿಣಾಮದ ಜತೆಗೆ ಇತರ ವೈವಿಧ್ಯಮಯವಾದ ವಿಶೇಷ ವರದಿಗಳ ಪ್ರತಿಯನ್ನು ಹಾಗೂ ತಮ್ಮ ಸೇವೆಯ ವಿಶಿಷ್ಟತೆಯನ್ನು ಒಳಗೊಂಡಂತೆ ಕುರಿತ ಅರ್ಜಿಯನ್ನು ಪತ್ರಕರ್ತರು ಇದೇ ಸೆ.30ರೊಳಗೆ ಸಲ್ಲಿಸಬೇಕೆಂದು ಪ್ರಕಟಿಸಿದರು. ಇದನ್ನೂ ಓದಿ:  ಹಿಂದೂಗಳ ಭಾವನೆಗೆ ಧಕ್ಕೆ ಬಾರದಂತೆ ಕಾನೂನು: ಅಶೋಕ್

    ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸಮ್ಮೇಳನವನ್ನು ಎಲ್ಲರೂ ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಯಶಸ್ವಿಗೊಳಿಸೋಣ, ಕಲಬುರಗಿಗೆ ಕೀರ್ತಿ ತರೋಣ ಎಂದರು.

    ಖಜಾಂಚಿ ರಾಜು ದೇಶಮುಖ ಸಂಘದ ಪ್ರಧಾನ ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.