Tag: Kusuma

  • ತಾರಕಕ್ಕೇರಿದ ಕುಸುಮಾ Vs ಮುನಿರತ್ನ ಫೈಟ್‌ – ಪಟಾಕಿ ಹಂಚಲು ಪೊಲೀಸರಿಂದ ತಡೆ

    ತಾರಕಕ್ಕೇರಿದ ಕುಸುಮಾ Vs ಮುನಿರತ್ನ ಫೈಟ್‌ – ಪಟಾಕಿ ಹಂಚಲು ಪೊಲೀಸರಿಂದ ತಡೆ

    ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಶಾಸಕ ಮುನಿರತ್ನ (Munirathna) ಮತ್ತು ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ (Kusuma) ನಡುವಿನ ಫೈಟ್‌ ತಾರಕಕ್ಕೆ ಏರಿದೆ. ಕ್ಷೇತ್ರದ ಜನರಿಗೆ ದೀಪಾವಳಿ (Deepavali) ಪಟಾಕಿ ಹಂಚಲು ಮುಂದಾಗಿದ್ದ ಮುನಿರತ್ನ ಅವರಿಗೆ ಪೊಲೀಸರು ತಡೆ ಒಡ್ಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಮುನಿರತ್ನ, ಪಟಾಕಿ ಇಟ್ಟಿದ್ದಾರೆ ಅಂತ ಪೊಲೀಸರಿಗೆ ಕುಸುಮ ಕಡೆಯವರು ದೂರು ಕೊಟ್ಟಿದ್ದಾರೆ. ಪೊಲೀಸರು ಬನ್ನಿ ಸಾರ್ ಕಚೇರಿ ಬೀಗ ತಗೀರಿ ಅಂತ ಕೇಳಿಕೊಂಡಿದ್ದಾರೆ. ಪ್ರತಿ ವರ್ಷ ಪಟಾಕಿಯನ್ನು ಹಂಚಲಾಗುತ್ತಿದೆ. ನಾನೊಬ್ಬನೇ ಅಲ್ಲ ಹಲವು ಮಂದಿ ಪಟಾಕಿಯನ್ನು ಹಂಚುತ್ತಾರೆ. ಎಲ್ಲಿಯೂ ಇಲ್ಲದ ನಿಯಮ ನನಗೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

     

    ಪ್ರತೀ ವರ್ಷ ನೋಟ್ ಬುಕ್, ಸಂಕ್ರಾಂತಿ ಕಿಟ್ ಕೊಡೋದು, ಗಣೇಶ ಹಬ್ಬಮಾಡೋದು ಮಾಡುತ್ತೇವೆ. ಗಾರ್ಮೆಂಟ್ಸ್, ಮದುವೆ ಛತ್ರದಲ್ಲಿ ಕೆಲಸ ಮಾಡುವವರು ಪಟಾಕಿ ಕೇಳಿದ್ದರು. ಪ್ರತೀ ವರ್ಷ ಪಟಾಕಿ ಕೊಡುತ್ತೇವೆ. ಆದರೆ ಈ ವರ್ಷ ಪಟಾಕಿ ಕೊಡದಂತೆ ಪೊಲೀಸರ ದಂಡೇ ಬಂದಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ತೊಂದರೆ ಅನುಭವಿಸುವರು ಯಾರು ಎಂದರೆ ಅದು ಲಕ್ಷ್ಮಿದೇವಿ ವಾರ್ಡ್‌ ಸದಸ್ಯರು. ಇಲ್ಲಿ ಗ್ರಾಮ ದೇವರ ಹಬ್ಬ, ಗಣಪತಿ ಹಬ್ಬವನ್ನು ಆಚರಿಸಬೇಕಾದರೂ ನ್ಯಾಯಾಲಯದಿಂದ ಅನುಮತಿ ತರಬೇಕು ಎಂದು ಬೇಸರ ವ್ಯಕ್ತಪಡಿಸಿದ್ದರು.

    ಇಲ್ಲಿ ಯಾರದರೂ ಪ್ರಶ್ನೆ ಮಾಡಿದರೆ ಅವರ ವಿರುದ್ಧ ದಲಿತ ದೌರ್ಜನ್ಯ ಕೇಸ್‌ ಹಾಕಲಾಗುತ್ತದೆ. ನಮ್ಮ 43 ಒಕ್ಕಲಿಗ ಹುಡುಗರ ವಿರುದ್ಧ ದಲಿತ ದೌರ್ಜನ್ಯ ಕೇಸ್‌ ಹಾಕಿದ್ದಾರೆ. ಜೆಪಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್‌ ಪರಾಜಿತ ಅಭ್ಯರ್ಥಿ ಕುಸುಮಾ ಅವರನ್ನು  ಕರೆದುಕೊಂಡು ಹೋಗಿದ್ದಾರೆ. ನನಗೆ ಮುನಿರತ್ನ ಕಥೆ ಬೇಡ. ಕ್ಷೇತ್ರದಲ್ಲಿ ಸಮಸ್ಯೆ ಇದ್ರೆ ಕುಸುಮಾಗೆ ಹೇಳಿ ಎಂದರು. ಈಗಲೂ ಅದೇ ಸಮಸ್ಯೆ ಎಂದು ಸಿಟ್ಟು ಹೊರಹಾಕಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳೆಯರು ಅವರು, ಕೋವಿಡ್‌ ಸಮಯದಲ್ಲಿ ನಮಗೆ ಸಹಾಯ ಇವರೇ ಸಹಾಯ ಮಾಡಿದ್ದಾರೆ. ನಮಗೆ ಯಾರು ಸಹೋದರರು ಇಲ್ಲ. ಇವರೇ ನಮಗೆ ಬಾಗಿನ ಕೊಡುತ್ತಾರೆ. ಒಂದು ಹಬ್ಬವನ್ನು ಆಚರಿಸಲು ನಮಗೆ ನೀವು ಬಿಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

  • ರೇಪ್‌ ಕೇಸ್ ಕೊಟ್ಟವರು ಪರಿಚಯವೇ ಇಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಲಿ: ಮುನಿರತ್ನ

    ರೇಪ್‌ ಕೇಸ್ ಕೊಟ್ಟವರು ಪರಿಚಯವೇ ಇಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡಲಿ: ಮುನಿರತ್ನ

    ಬೆಂಗಳೂರು: ತಮ್ಮ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್‌ನ (Congress) ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡ ಇದೆ ಅಂತಶಾಸಕ ಮುನಿರತ್ನ (Munirathna) ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಶಾಸಕರು, ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್‌ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರ್ತೇನೆ. ಕುಸುಮಾ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು ಅವರಿಗೆ ಪರಿಚಯವೇ ಇಲ್ಲ ಅಂತಾ ದೇವರ ಎದುರೇ ಪ್ರಮಾಣ ಮಾಡಿ ಹೇಳಿಬಿಡಲಿ ಅಂತ ಮುನಿರತ್ನ ಸವಾಲು ಹಾಕಿದ್ರು. ಇದನ್ನೂ ಓದಿ: ಸ್ವಯಂ ಪ್ರಚಾರ ಮಾಡಿಕೊಳ್ಳದೇ, ಪ್ರಶಸ್ತಿ ಸ್ವೀಕರಿಸದೇ ದೇಶಸೇವೆ ಮಾಡಿದ್ರು: ವಿರೇಂದ್ರ ಹೆಗ್ಗಡೆ ಸಂತಾಪ

    ನೀವು ಬುದ್ದಿವಂತರು, ವಿದ್ಯಾವಂತರು ಕೆಳಮಟ್ಟದ ರಾಜಕಾರಣ ಮಾಡಬೇಡಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಿ, ಅಪಪ್ರಚಾರ ಮಾಡಬೇಡಿ ಅಂತ ಕಿಡಿಕಾರಿದರು. ಇದನ್ನೂ ಓದಿ: ದೆಹಲಿ, ಉತ್ತರಾಖಂಡ್‌ನಲ್ಲಿ ಮಳೆ; ಪಶ್ಚಿಮ ಹಿಮಾಲಯದಲ್ಲಿ ಹಿಮಪಾತ – ಹವಾಮಾನ ಇಲಾಖೆ ಮುನ್ನೆಚ್ಚರಿಕೆ

    ಒಬ್ಬ ಶಾಸಕ ಕ್ಷೇತ್ರದಲ್ಲಿ ಬರಬಾರದು ಅಂತ ಮಾತನಾಡುತ್ತಿರುವುದು ಇದೇ ಮೊದಲು. ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ. ಅದಕ್ಕೆ ನಾವು ಬದ್ಧವಾಗಿರಬೇಕು. ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ ಇದ್ದವರು. ಅವರು ಅವರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ನನ್ನ ಕೇಸ್ ಕೋರ್ಟ್‌ನಲ್ಲಿದೆ. ಕ್ಷೇತ್ರಕ್ಕೆ ಹೋಗುವಹಾಗಿಲ್ಲ ಅಂದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – 42 ಭಕ್ತಾಧಿಗಳ ಸ್ಥಿತಿ ಗಂಭೀರ

  • ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್ – ಡಿಕೆಶಿ, ಡಿಕೆಸು, ಕುಸುಮ, ಹನುಮಂತರಾಯಪ್ಪ ವಿರುದ್ಧ ದೂರು

    ಮುನಿರತ್ನ ಮೇಲೆ ಮೊಟ್ಟೆ ಎಸೆತ ಕೇಸ್ – ಡಿಕೆಶಿ, ಡಿಕೆಸು, ಕುಸುಮ, ಹನುಮಂತರಾಯಪ್ಪ ವಿರುದ್ಧ ದೂರು

    – ಆರೋಪಿಗಳ ಹೆಸರು ನಮೂದಿಸದೇ ಪೊಲೀಸರಿಂದ ಝೀರೋ ಎಫ್‌ಐಆರ್ ದಾಖಲು

    ಬೆಂಗಳೂರು: ಶಾಸಕ ಮುನಿರತ್ನ (Muniratna) ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಕುಸುಮಾ ಹಾಗೂ ಹನುಮಂತರಾಯಪ್ಪ ವಿರುದ್ಧ ಮುನಿರತ್ನ ಅವರು ದೂರು ನೀಡಿದ್ದಾರೆ. ಆದರೆ, ನಂದಿನಿ ಲೇಔಟ್ ಠಾಣೆ ಪೊಲೀಸರು ಯಾರ ಹೆಸರನ್ನೂ ಉಲ್ಲೇಖಿಸದೇ ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ.

    ಮುನಿರತ್ನ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ ಹಲ್ಲೆ ಮತ್ತು ಕೊಲೆ ಮಾಡುವ ಮುಂದುವರೆದ ಭಾಗವಾಗಿ ಸಂಚಿನಂತೆ ಮೊಟ್ಟೆ ಎಸೆಯಲಾಗಿದೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಕುಸುಮಾರನ್ನು ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಸಂಚು, ಆಸೀಡ್‌ ದಾಳಿ : ಮುನಿರತ್ನ

    ನಿನ್ನೆ ನಡೆದ ಘಟನೆ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಲ್ಲೆ ಮಾಡಿದವರ ಹೆಸರು ಅಪರಿಚಿತರು ಅಂತ ಎಫ್‌ಐಆರ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಯಾವ ಆರೋಪಿಗಳ ಹೆಸರೂ ಉಲ್ಲೇಖಿಸದೇ ಝೀರೋ ಎಫ್‌ಐಆರ್ ದಾಖಲಾಗಿದೆ.

    ಶಾಸಕರ ಹೇಳಿಕೆ ದಾಖಲಿಸಿ, ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷ ಸಾಕ್ಷಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಮೊಬೈಲ್ ವೀಡಿಯೊಗಳ ಸಂಗ್ರಹಿಸಲಾಗಿದೆ. ಸಿಸಿಟಿವಿ ವೀಡಿಯೊಗಳನ್ನ ಸಹ ಪೊಲೀಸರು ಸಂಗ್ರಹಿಸಿದ್ದಾರೆ. ಆದರೆ, ಮೊಟ್ಟೆ ಎಸೆದವರ ಬಗ್ಗೆ ವೀಡಿಯೊಗಳಲ್ಲಿ ದಾಖಲಾಗಿಲ್ಲ. ಹೀಗಾಗಿ ಸಾಕ್ಷಿಗಳ ಹೇಳಿಕೆ ಮೇಲೆ ತನಿಖೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಮುನಿರತ್ನರ ಕೂದಲು ಸ್ವಲ್ಪ ಸುಟ್ಟಿದೆ: ಮೊಟ್ಟೆ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಸಂಸದ ಡಾ.ಮಂಜುನಾಥ್‌

    ಮೊಟ್ಟೆ ಎಸೆದವರು ಎಂದು ಆರೋಪ ಹೊತ್ತವರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ. ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎಂಬವರು ದೂರು ನೀಡಿದ್ದಾರೆ.

  • ವೇಲು ನಾಯ್ಕರ್ ಡಿಕೆಶಿ ಬಗ್ಗೆಯೂ ಹೇಳಿದ್ದ – ಹನಿಟ್ರ್ಯಾಪ್‌ ಆರೋಪಕ್ಕೆ ಮುನಿರತ್ನ ತಿರುಗೇಟು

    ವೇಲು ನಾಯ್ಕರ್ ಡಿಕೆಶಿ ಬಗ್ಗೆಯೂ ಹೇಳಿದ್ದ – ಹನಿಟ್ರ್ಯಾಪ್‌ ಆರೋಪಕ್ಕೆ ಮುನಿರತ್ನ ತಿರುಗೇಟು

    – ವೇಲು ನಾಯ್ಕರ್ ಡಿ.ಕೆ ಸುರೇಶ್ – ಕುಸುಮಾ ಬಗ್ಗೆ ಮಾತಾಡಿದ್ದ

    ಬೆಂಗಳೂರು: ಮುನಿರತ್ನ (Munirathna) ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್‌ ಮಾಡಿಸುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದ್ದು, ಇದಕ್ಕೆ ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ಮುನಿರತ್ನ ಅವರು ತಿರುಗೇಟು ನೀಡಿದ್ದಾರೆ.

    `ಪಬ್ಲಿಕ್ ಟಿವಿ’ (Public TV) ಜೊತೆಗೆ ಮಾತನಾಡಿದ ಅವರು, ಸಚಿವರಾಗಿದ್ದ ಮುನಿರತ್ನ ಅವರು ಹನಿಟ್ರ್ಯಾಪ್‌ ಮಾಡಿಸುತ್ತಿದ್ದರು ಎಂಬ ಮುನಿರತ್ನ ಬೆಂಬಲಿಗ ವೇಲು ನಾಯ್ಕರ್ ಗಂಭೀರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಇದೇ ವ್ಯಕ್ತಿ ನನ್ನ ಬಳಿ ಇದ್ದಾಗ ಡಿ.ಕೆ ಶಿವಕುಮಾರ್ ಬಗ್ಗೆ ಹೇಳಿದ್ದ. ಡಿ.ಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರನ್ನ ಹನಿಟ್ರ್ಯಾಪ್‌ ಮಾಡಿಸಿ ಹಾಳು ಮಾಡಿಬಿಟ್ರು ಸರ್ ಅಂತಾ ಹೇಳಿದ್ದ. ಜೊತೆಗೆ ಸಂಸದ ಡಿ.ಕೆ ಸುರೇಶ್ ಮತ್ತು ಡಿ.ಕೆ ರವಿ ಪತ್ನಿ ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ. ನಾನೇ ಆಗ ಇದೆಲ್ಲ ನನ್ನ ಬಳಿ ಹೇಳಬೇಡ ಅಂತಾ ಬೈದು ಕಳಿಸಿದ್ದೆ ಎಂದು ತಿಳಿಸಿದ್ದಾರೆ.

    ನನ್ನ ವಿರುದ್ಧ ವೇಲ್ ನಾಯ್ಕರ್ ಆರೋಪ ಮಾಡಿಲ್ಲ. ಡಿ.ಕೆ ಸುರೇಶ್ (DK Suresh) ಮತ್ತು ಡಿ.ಕೆ ಶಿವಕುಮಾರ್ (DK Shivakumar) ಆರೋಪ ಮಾಡಿಸಿದ್ದಾರೆ. ವೇಲ್ ನಾಯ್ಕರ್ ನಮ್ಮವನು ಅಂತಾ ನಂಬಿಕೆ ಬರಬೇಕಾದ್ರೆ ಇಂತಹದ್ದೇನಾದರೂ ಮಾಡಬೇಕಲ್ಲ. ಅದಕ್ಕೆ ದಾಖಲೆಯಾಗಿ ಈ ಆರೋಪ ಮಾಡಿದ್ದಾರೆ ಅಷ್ಟೇ ಇದೆಲ್ಲವೂ ಶುದ್ಧ ಸುಳ್ಳು ಎಂದು ಆರೋಪಗಳನ್ನ ತಳ್ಳಿಹಾಕಿದ್ದಾರೆ.

    ಬಿಜೆಪಿ ನಗರಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಮೀಸಲಾತಿ ಉದ್ದೇಶದಿಂದ ಹೋಗಿದ್ದಾರೆ. ಈ ಮುನಿರತ್ನ ಅವರ ಬಳಿ ಅಧಿಕಾರ ಇಲ್ಲ. ಹಾಗಾಗಿ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಕರ್ಮ ಯಾರನ್ನೂ ಬಿಡಲ್ಲ, ನಾನು ದೇವರನ್ನು ನಂಬ್ತೀನಿ: ಕುಸುಮಾ

    ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಬೆಳವಣಿಗೆ ಬಗ್ಗೆ ನಾನು ಮಾತಾಡಲ್ಲ. ಆದರೆ ನಾನು ದೇವರನ್ನು ನಂಬುತ್ತೇನೆ ಎಂದು ಡಿ.ಕೆ ರವಿ (DK Ravi) ಪತ್ನಿ ಕುಸುಮಾ (Kusuma) ತಿಳಿಸಿದ್ದಾರೆ.

    ಐಪಿಎಸ್‌ ಅಧಿಕಾರಿ ರೂಪಾ (Roopa IPS) ಹಾಗೂ ರೋಹಿಣಿ ಸಿಂಧೂರಿಯ (Rohin Sindhuri) ಜಟಾಪಟಿಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಮ ಯಾರನ್ನು ಬಿಡುವುದಿಲ್ಲ. ಇದೇ ಜನ್ಮದಲ್ಲಿ ಇಲ್ಲೇ ಅನುಭವಿಸುತ್ತೇವೆ ಎಂಬ ನಂಬಿಕೆ ಇಟ್ಟಿಕೊಂಡಿದ್ದೇನೆ. ನಾನು ಯಾರ ಪರನೂ ನಿಲ್ಲಲ್ಲ. ಆದರೆ ನನಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಅನ್ನೋದಷ್ಟೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

    ನನಗೆ ಆದ ನೋವು, ನನ್ನ ಕುಟುಂಬಕ್ಕೆ ಆದ ನೋವು ಬೇರೆ ಯಾರಿಗೂ ಆಗಬಾರದು. ಸಿಬಿಐ ರಿಪೋರ್ಟ್ ಬಂದ ಮೇಲೆ, ಅದರಲ್ಲಿ ಏನಿತ್ತು ಎನ್ನುವುದನ್ನು ಯಾರು ತಿಳಿದುಕೊಳ್ಳಲಿಲ್ಲ. ಇನ್ನೂ ಹಲವು ಸತ್ಯಗಳಿವೆ. ಅದನ್ನು ಯಾರು ಯೋಚನೆ ಮಾಡಿಲ್ಲ. ರಿಪೋರ್ಟ್‍ನಲ್ಲಿ ಎಲ್ಲವೂ ವಿಸ್ತಾರವಾಗಿ ವಿವರಣೆ ಇದೆ. ಅದು ಎಲ್ಲರಿಗೂ ಗೊತ್ತಾಗಲಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಣಕ್ಕಾಗಿ ಪೀಡಿಸುತ್ತಿದ್ದ ಪ್ರಾಣ ಸ್ನೇಹಿತನನ್ನೇ ಹತ್ಯೆಗೈದ

    ಯಾವ ಕಾರಣಕ್ಕೆ ರವಿ ಸಾವನ್ನಪ್ಪಿದ್ರು ಅನ್ನೋದು ಸಿಬಿಐ ವರದಿಯಲ್ಲಿದೆ. ಡಿ.ಕೆ ರವಿಗೆ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆ ಇರಲಿಲ್ಲ. ಆ ರೀತಿಯ ಹೇಳಿಕೆ ನೀಡುತ್ತಿರುವುದು ಡಿ.ಕೆ ರವಿಗೆ ನೀಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಲ್ಲು-ಬಾಣಕ್ಕೆ 2000 ಕೋಟಿ ಡೀಲ್ – ಸಂಜಯ್ ರಾವತ್ ಬಾಂಬ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ- ಪ್ರೊಫೆಸರ್ ನಾಗರಾಜ್ ಅರೆಸ್ಟ್

    ಬೆಂಗಳೂರು: ಅಸಿಸ್ಟೆಂಟ್ ಫ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಯಾಗ್ರಫಿ ಪ್ರೊಫೆಸರ್ ನಾಗರಾಜ್‍ನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

    ನಾಗರಾಜ್, ಧಾರವಾಡ ಕರ್ನಾಟಕ ಯೂನಿವರ್ಸಿಟಿಯ ವ್ಯಾಲ್ಯುಯೇಷನ್ ರಿಜಿಸ್ಟ್ರಾರ್ ಆಗಿದ್ದು, ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಿರ್ಲಕ್ಷ್ಯ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿ ಹಿನ್ನೆಲೆ ನಾಗರಾಜ್ ತಂಗಿ ಮಗಳು ಕುಸುಮಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಶ್ನೆ ಪತ್ರಿಕೆ ತಯಾರಿ ವೇಳೆ ಸೌಮ್ಯಳಿಗೆ ಫೋಟೋ ತೆಗೆದು ಕುಸುಮ ಕಳಿಸಿದ್ದಳು. ಅಕ್ರಮದಲ್ಲಿ ಭಾಗಿ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    ಈ ಬಗ್ಗೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾರ್ಚ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳಿಗೆ ಪ್ರಶ್ನೆಗಳು ಸಿಕ್ಕಿತ್ತು. ಈ ಸಂಬಂಧ ಪರೀಕ್ಷಾ ಪ್ರಾಧಿಕಾರ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿದ್ದೇವೆ ಎಂದರು. ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

    ಆರೋಪಿಗಳಿಗೆ ಸಂಬಂಧಿಸಿದಂತೆ ಮನೆ, ಸಂಬಂಧಪಟ್ಟ ಸ್ಥಳಗಳಲ್ಲೂ ಪರಿಶೀಲನೆ ಮಾಡ್ತಿದ್ದೇವೆ. ಎಲ್ಲಾ ಮಾಹಿತಿ ಸಂಗ್ರಹಿಸಿ, ಇನ್ನು ಕೆಲವ್ರನ್ನ ಮೇಲೆ ಶಂಕೆ ಬಂದಿದೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಉಳಿದವ್ರನ್ನು ಬಂಧಿಸಿ, ತನಿಖೆ ಮಾಡಲಾಗುತ್ತೆ. ಸದ್ಯ ಪ್ರೊಫೆಸರ್ ನಾಗರಾಜ್‍ನನ್ನ ಸಹ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

  • ಆರ್‌ಆರ್‌ನಗರ ಕುರುಕ್ಷೇತ್ರ ಗೆದ್ದ ಮುನಿರತ್ನ – ಗೆಲುವಿಗೆ ಕಾರಣವಾಗಿದ್ದು ಏನು?

    ಆರ್‌ಆರ್‌ನಗರ ಕುರುಕ್ಷೇತ್ರ ಗೆದ್ದ ಮುನಿರತ್ನ – ಗೆಲುವಿಗೆ ಕಾರಣವಾಗಿದ್ದು ಏನು?

    ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,734 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 67,798 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕೇಶವಮೂರ್ತಿ 10,251 ಮತಗಳನ್ನು ಪಡೆದಿದ್ದಾರೆ. ಒಟ್ಟು 57,936 ಮತಗಳ ಅಂತರದಿಂದ ಮುನಿರತ್ನ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ.

    ಗೆಲುವಿಗೆ ಕಾರಣ ಏನು?
    ಆರ್ ಆರ್ ನಗರದಲ್ಲಿ ಎರಡು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮುನಿರತ್ನ ಅವರ ಕೈ ಹಿಡಿದಿದೆ. ಇದರ ಜೊತೆಯಲ್ಲಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ವೈಯಕ್ತಿಕವಾಗಿ ಇರುವ ವರ್ಚಸ್ಸು ನೆರವಾಗಿದೆ.

    ಆರ್ ಆರ್ ನಗರ ಕ್ಷೇತ್ರದ ಜನತೆಗೆ ಮುನಿರತ್ನ ಪರಿಚಯದ ಮುಖ, ಕೈಗೆ ಸುಲಭವಾಗಿ ಸಿಗುವ ಜನಪ್ರತಿನಿಧಿ ಎಂಬ ಭಾವನೆ ಇದೆ. ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದ ಬಡಜನರಿಗೆ ರೇಷನ್ ಕಿಟ್ ವಿತರಣೆ, ಆರ್ಥಿಕ ನೆರವು ಕೊಟ್ಟಿದ್ದು ಸಹಾಯ ಮಾಡಿದೆ.

    ಮನಿರತ್ನ ಗೆದ್ದರೆ ಸಚಿವರಾಗುವುದಾಗಿ ಖುದ್ದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅಷ್ಟೇ ಸಚಿವರು, ಬಿಜೆಪಿ ನಾಯಕರು ಕೇಡರ್ ಬೇಸ್ ಕಾರ್ಯತಂತ್ರಗಳನ್ನು ನಡೆಸಿ ಪ್ರಚಾರ ನಡೆಸಿದ್ದರು.

    ತಮ್ಮ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಹೊರಗಿನ ಜನರನ್ನ ಕರೆತಂದು ಅಶಾಂತಿ ಉಂಟುಮಾಡ್ತಿದ್ದಾರೆ ಎಂದು ಆರೋಪಿಸಿ ಪ್ರಚಾರ ಮಾಡಿದ್ದರು. ಇದರ ಜೊತೆ ಜೆಡಿಎಸ್, ಹೆಚ್ ಡಿಕೆ, ದೇವೇಗೌಡರ ಬಗ್ಗೆ ಪ್ರಚಾರದ ಉದ್ದಕ್ಕೂ ಸಾಫ್ಟ್ ಕಾರ್ನರ್ ತೋರಿದ್ದು ಮುನಿರತ್ನ ಅವರ ಕೈ ಹಿಡಿದಿದೆ.

  • ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ, ಕಾರ್ಯಕರ್ತರು ಧೃತಿಗೆಡಬಾರದು: ಡಿ.ಕೆ.ಸುರೇಶ್

    ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ, ಕಾರ್ಯಕರ್ತರು ಧೃತಿಗೆಡಬಾರದು: ಡಿ.ಕೆ.ಸುರೇಶ್

    ಬೆಂಗಳೂರು: ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಸೋಲನುಭವಿಸಿದ್ದಾರೆ. ಫಲಿತಾಂಶದ ಬೆನ್ನಲ್ಲೇ ಇದೀಗ ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ ಮತದಾರರಿಗೆ ಧನ್ಯವಾದ ತಿಳಿಸಿದ್ದು, ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮೊದಲಿಗೆ ಆರ್‍ಆರ್ ನಗರ ಉಪಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷವನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಮತದಾರರ ತೀರ್ಪಿಗೆ ನಾವೆಲ್ಲ ತಲೆಬಾಗಲೇಬೇಕಿದೆ. ಈ ಫಲಿತಾಂಶದಿಂದ ಯಾವ ಕಾರ್ಯಕರ್ತರೂ ಧೃತಿಗೆಡುವ ಅವಶ್ಯಕತೆ ಇಲ್ಲ. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳೋಣ ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ಈ ಫಲಿತಾಂಶವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದೊಡ್ಡ ಮಟ್ಟದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ. ಪಕ್ಷ ಸಂಘಟನೆಯ ಎಲ್ಲ ಸಂದರ್ಭಗಳಲ್ಲೂ ನಾನು ನಿಮ್ಮ ಜೊತೆಗಿರುತ್ತೇನೆ. ಉಪಚುನಾವಣೆಗೆ ಸಹಕರಿಸಿದ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.

    ಮುನಿರತ್ನ ಗೆಲುವು

    ಆರ್.ಆರ್. ನಗರ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಸದ್ಯ ಚುನಾವಣೆ ಅಧಿಕಾರಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

    * ಬಿಜೆಪಿ ಪಡೆದ ಮತ-12,5734
    * ಕಾಂಗ್ರೆಸ್ ಪಡೆದ ಮತ -6,7798
    * ಜೆಡಿಎಸ್ ಪಡೆದ – 10,251
    * ಬಿಜೆಪಿ ಲೀಡ್- 57,936

  • ಕಣ್ಣೀರು ಹಾಕಿದ್ರೆ ಮತದಾರರು ಕರಗೋದಿಲ್ಲ- ಕುಸುಮಾಗೆ ಮುನಿರತ್ನ ಟಾಂಗ್

    ಕಣ್ಣೀರು ಹಾಕಿದ್ರೆ ಮತದಾರರು ಕರಗೋದಿಲ್ಲ- ಕುಸುಮಾಗೆ ಮುನಿರತ್ನ ಟಾಂಗ್

    ಬೆಂಗಳೂರು: ಬರೀ ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ ಎಂದು ಉಪಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿರುವ ಮುನಿರತ್ನ ಅವರು ಕಾಂಗ್ರೆಸ್ಸಿನ ಕುಸುಮಾಗೆ ಟಾಂಗ್ ನೀಡಿದ್ದಾರೆ.

    ಗೆಲುವು ಸಾಧಿಸಿರುವ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ರಾಜರಾಜೇಶ್ವರಿ ನಗರದ ಮತದಾರರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿ, ಸತ್ಯ ಮಾತಾಡಿ. ಕೊನೆಯ ಕ್ಷಣದಲ್ಲಿ ನಾನು ಬಳಸದೇ ಇರುವ ಪದವನ್ನು ಬಳಸಿದ್ದೇನೆ ಅಂತ ಕಣ್ಣೀರು ಹಾಕಿದ್ದೀರಲ್ವ ಅದಕ್ಕಿಂತ ದೊಡ್ಡ ತಪ್ಪು ಇನ್ಯಾವುದೂ ಇಲ್ಲ. ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ನನ್ನ ಬಾಯಲ್ಲಿ ಕೊನೆಯುಸಿರು ಇರುವವರೆಗೆ ಯಾವುದೇ ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ. ಅಂತಹ ಪಾಪದ ಕೆಲಸ, ಪಾಪದ ಮಾತುಗಳು ನನ್ನ ಬಾಯಲ್ಲಿ ಬರಲ್ಲ. ಆದರೂ ಅಂತಹ ಪಾಪದ ಪದವನ್ನು ನಾನು ಉಪಯೋಗಿಸಿದ್ದೀನಿ ಎಂದು ಕಣ್ಣೀರು ಹಾಕಿದ್ರಿ. ಹೀಗಾಗಿ ಇನ್ನು ಮುಂದಕ್ಕಾದರೂ ಸತ್ಯ ಮಾತಾಡಿ ಎಂದು ಸಲಹೆ ಎಂದರು.

    ಈ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತೇನೆ. ಹಾಗೆಯೇ ಕ್ಷೇತ್ರದ ಅಭಿವೃದ್ಧಿ ಆಗಬೇಕು. ಹಳೆಯ ಬೆಂಗಳೂರು ಸುಮಾರು 50 ವರ್ಷಗಳಿಂದ ಅಭಿವೃದ್ಧಿ ಆಗಿದೆ. ಅದಕ್ಕಿಂತ ಉತ್ತಮವಾದ ರೀತಿಯಲ್ಲಿ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರು. ಇದನ್ನೂ ಓದಿ: ಶಿರಾದಲ್ಲಿ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ: ವಿಜಯೇಂದ್ರ

    ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿರುವುದಕ್ಕೆ ಖಂಡಿತವಾಗಿ ಪ್ರಾಮಾಣಿಕವಾಗಿ ಸೇವೆ, ಕೆಲಸ ಮಾಡುತ್ತೇನೆ. ನಮಗೆ ಇನ್ನೂ ಎರಡೂವರೆ ವರ್ಷ ಸಮಯಾವಕಾಶ ಇದೆ. ಅಷ್ಟರೊಳಗಡೆ ನಾನು ನನ್ನ ಶಕ್ತಿ ಮೀರಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಜನರ ಋಣ ತೀರಿಸುವುದಾಗಿ ಚಾಮುಂಡೇಶ್ವರಿ ಮೇಲೆ ಆಣೆ ಪ್ರಮಾಣ ಮಾಡುವುದರೊಂದಿಗೆ ಕ್ಷೇತ್ರದ ಜನರಿಗೆ ಭರವಸೆ ನೀಡಿದರು.

    ಕಳೆದ ಬಾರಿ ಸುಮಾರು 26 ಸಾವಿರ ಲೀಡ್ ಬಂದಿತ್ತು. ಆದರೆ ಈ ಬಾರಿ ಸುಮಾರು 57 ಸಾವಿರ ಲೀಡ್ ಬಂದಿದೆ. ಇದು ನನ್ನ ಕ್ಷೇತ್ರದ ಮತದಾರ ದೇವರುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. ಮೊದಲನೇ ಚುನಾವಣೆ 17 ಸಾವಿರ, ಎರಡನೇ ಚುನಾವಣೆ 26 ಸಾವಿರ ಹಾಗೂ ಮೂರನೇ ಚುನಾವಣೆ 57 ಸಾವಿರ ಎಂದು ತಿಳಿಸಿದರು.

    ನನ್ನ ಗೆಲುವಿಗೆ ಭಾರತೀಯ ಜನತಾ ಪಾರ್ಟಿ, ನಾಯಕರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲಾ ಸಚಿವರು, ಶಾಸಕರ ಮಿತ್ರರು ಹಾಗೂ ಕಾರ್ಯಕರ್ತರು ಕಾರಣವಾಗಿದ್ದು, ಪ್ರತಿಯೊಬ್ಬರಿಗೂ ಈ ಅಂತರವನ್ನು ಅರ್ಪಿಸುವುದಾಗಿ ತಿಳಿಸಿದರು.

    ಆರ್.ಆರ್. ನಗರ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 57936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಸದ್ಯ ಚುನಾವಣೆ ಅಧಿಕಾರಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

    * ಬಿಜೆಪಿ ಪಡೆದ ಮತ-125734
    * ಕಾಂಗ್ರೆಸ್ ಪಡೆದ ಮತ -67798
    * ಜೆಡಿಎಸ್ ಪಡೆದ – 10251
    * ಬಿಜೆಪಿ ಲೀಡ್- 57936

  • ಗೆಲುವಿನ ವಿಶ್ವಾಸದಲ್ಲಿ ಮುನಿರತ್ನ – ಇತ್ತ ಕುಸುಮಾರಿಂದ ಟೆಂಪಲ್ ರನ್

    ಗೆಲುವಿನ ವಿಶ್ವಾಸದಲ್ಲಿ ಮುನಿರತ್ನ – ಇತ್ತ ಕುಸುಮಾರಿಂದ ಟೆಂಪಲ್ ರನ್

    ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್ ಆರ್ ನಗರ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಆರಂಭವಾಗಿದೆ.

    ಆರ್‍ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಗೆಲುವಿನ ವಿಶ್ವಾಸದಲ್ಲಿದ್ದಾರೆ. ಕೌಂಟಿಂಗ್ ಆರಂಭದ ಬಳಿಕ ಮತ ಎಣಿಕಾ ಕೇಂದ್ರದ ಕಡೆ ಹೋಗಲು ನಿರ್ಧಾರ ಮಾಡಿದ್ದಾರೆ. ಸದ್ಯ ಟಿವಿಯಲ್ಲಿಯೇ ಬೆಳವಣಿಗೆಗಳನ್ನು ವೀಕ್ಷಿಸ್ತಿರೊ ಮುನಿರತ್ನ ಅವರು, ಚುನಾವಣಾ ಫಲಿತಾಂಶಕ್ಕೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಿನ್ನೆ ಆಗಮಿಸಿದ್ದಾರೆ.

    ಇತ್ತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಕುಟುಂಬಸ್ಥರ ಜೊತೆ ಶೇಷಾದ್ರಿಪುರಂನಲ್ಲಿರೋ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ವಿಜಯನಗರದ ಆದಿಚುಂಚನಗಿರಿ ಮಠದ ಶಿವ ದೇವಾಲಯ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.