Tag: kustagi

  • ಕುಷ್ಟಗಿಯಲ್ಲಿ ಚೆಕ್ ಡ್ಯಾಂ ಅಕ್ರಮ – ಬಿರುಕು, ನೀರಿಲ್ಲದೇ ಅಣೆಕಟ್ಟು ಖಾಲಿ

    ಕುಷ್ಟಗಿಯಲ್ಲಿ ಚೆಕ್ ಡ್ಯಾಂ ಅಕ್ರಮ – ಬಿರುಕು, ನೀರಿಲ್ಲದೇ ಅಣೆಕಟ್ಟು ಖಾಲಿ

    ಕೊಪ್ಪಳ: ಸರ್ಕಾರ ರೈತರ ಅನಕೂಲಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ರೈತರಿಗೆ ನೀರು ಸಿಗಲಿ ಅನ್ನೋ ಉದ್ದೇಶದಿಂದ ಸರ್ಕಾರ ಚೆಕ್ ಡ್ಯಾಂ ನಿರ್ಮಾಣ ಮಾಡುತ್ತದೆ. ಆದರೆ ಚೆಕ್ ಡ್ಯಾಂ ನಿರ್ಮಾಣದ ಹೆಸರಲ್ಲಿ ಗುತ್ತಿಗೆದಾರರು ಸರ್ಕಾರಕ್ಕೆ ಮಂಕು ಬೂದಿ ಎರಚಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ಬೆಂಬಲಿಗರು ಚೆಕ್ ಡ್ಯಾಂ ನಲ್ಲಿ ಕೋಟ್ಯಂತರ ಹಣ ಜೇಬಿಗಿಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕುಷ್ಟಗಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನಿರ್ಮಾಣ ಮಾಡಿದ ಚೆಕ್ ಡ್ಯಾಂಗಳು ಹಳ್ಳ ಹಿಡಿದಿವೆ. ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತದೆ. ಆದರೆ ಕುಷ್ಟಗಿಯಲ್ಲಿ ಗುತ್ತಿಗೆದಾರರು ಕಳಪೆ ಮಟ್ಟದ ಚೆಕ್ ಡ್ಯಾಂ ನಿರ್ಮಾಣ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಕೆಲವು ಹಳ್ಳಿಗಳಲ್ಲಿ ಕೇವಲ ಮಣ್ಣು ಅಗೆದು ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದೇವೆ ಎಂದು ಬೋಗಸ್ ಬಿಲ್ ಎತ್ತಿದ್ದಾರೆ. ಒಂದು ಹನಿ ನೀರಿಲ್ಲದೆ ಚೆಕ್ ಡ್ಯಾಂಗಳು ಒಣಗಿ ನಿಂತಿವೆ. ಕೆಲವು ಈಗಾಗಲೇ ಕಿತ್ತು ಹೋಗಿ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಚೆಕ್ ಡ್ಯಾಂ ನಿರ್ಮಾಣದ ಬಗ್ಗೆ ಕುಷ್ಟಗಿ ರೈತರು ಜಿಲ್ಲಾಡಳಿತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ, ಹೀಗಾಗಿ ಚೆಕ್ ಡ್ಯಾಂನ ಅವ್ಯವಹಾರದ ಬಗ್ಗೆ ಸಿ.ಓ.ಡಿ ತನಿಖೆಗೆ ರೈತರು ಆಗ್ರಹಿಸಿದ್ದಾರೆ.

    ಇದು ಕೇವಲ ಕುಷ್ಟಗಿ ಕಥೆಯಲ್ಲ, ಕೊಪ್ಪಳ ಜಿಲ್ಲೆಯಲ್ಲಿ 2018-19 ರಲ್ಲಿ ಒಟ್ಟು 700ಕ್ಕೂ ಅಧಿಕ ಚೆಕ್ ಡ್ಯಾಂ ನಿರ್ಮಾಣವಾಗಿವೆ. ಆದರೆ ಒಂದು ಚೆಕ್ ಡ್ಯಾಂ ಕೂಡ ವ್ಯವಸ್ಥಿತವಾಗಿ ನಿರ್ಮಾಣ ಮಾಡಿಲ್ಲ. ಕುಷ್ಟಗಿ ತಾಲೂಕಿನ ರೈತರೆಲ್ಲ ಪತ್ರಿಕಾಗೋಷ್ಟಿ ನಡೆಸಿ ಇಡೀ ಜಿಲ್ಲೆಯ ಚೆಕ್ ಡ್ಯಾಂ ಹಗರಣ ಸಿ.ಓ.ಡಿ. ತನಿಖೆಗೆ ಆದೇಶ ಮಾಡಬೇಕೆಂದು ಆಗ್ರಹಿಸಿದರು. ಅಸಲಿಗೆ ಈ ಚೆಕ್ ಡ್ಯಾಂ ನಿರ್ಮಾಣದಲ್ಲಿ ಗುತ್ತಿಗೆದಾರರು ಜೇಬು ತುಂಬಿಸಿಕೊಂಡಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

    ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ್ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರೇ ಈ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದಂತೆ. 700 ಕ್ಕೂ ಅಧಿಕ ಚೆಕ್ ಡ್ಯಾಂ ನಿರ್ಮಾಣದ ಹೆಸರಲ್ಲಿ ಶಾಸಕರ ಬೆಂಬಲಿಗರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ರೈತ ಮುಖಂಡರು ಜಿಪಂ ಸಿ.ಇ.ಓ ಗೆ ಮನವಿ ಮಾಡಿದರೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಚೆಕ್ ಡ್ಯಾಂ ನಿರ್ಮಾಣ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಅದೇ ಗುತ್ತಿಗೆದಾರರಿಂದ ಚೆಕ್ ಡ್ಯಾಂ ಪುನರ್ ನಿರ್ಮಾಣ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

  • ಆತ್ಮಹತ್ಯೆಗೆ ಯತ್ನಿಸಿ, ಲಾರಿಗೆ ಸಿಕ್ಕು ಎರಡೂ ಕಾಲು ಕಳೆದುಕೊಂಡ!

    ಆತ್ಮಹತ್ಯೆಗೆ ಯತ್ನಿಸಿ, ಲಾರಿಗೆ ಸಿಕ್ಕು ಎರಡೂ ಕಾಲು ಕಳೆದುಕೊಂಡ!

    ಕೊಪ್ಪಳ: ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಲಾರಿಗೆ ಸಿಲುಕಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಕುಕನೂರು ಪಟ್ಟಣದ ಪ್ರವಾಸಿ ಮಂದಿರದ ಸಮೀಪದಲ್ಲಿ ನಡೆದಿದೆ.

    ಕುಕನೂರು ಪಟ್ಟಣದ ಹುಸೇನ್ ಸಾಬ್ ಕುಷ್ಟಗಿ (30) ಆತ್ಮಹತ್ಯೆಗೆ ಯತ್ನಿಸಿ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿ. ಅಪಘಾತವನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಹುಸೇನ್ ಬದುಕುಳಿದಿದ್ದು, ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾನೆ.

    ಹುಸೇನ್ ಸಾಬ್ ಮನೆಯಲ್ಲಿ ಜಗಳ ಮಾಡಿಕೊಂಡು ಹೊರ ಬಂದಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದ ಹುಸೇನ್ ಸಾಬ್ ಎದುರಿಗೆ ಬರುತ್ತಿದ್ದ ಲಾರಿಗೆ ಕೈ ಮುಗಿದು ಚಕ್ರಕ್ಕೆ ಬೀಳಲು ಯತ್ನಿಸಿದ್ದಾನೆ. ತಕ್ಷಣವೇ ಜಾಗೃತಗೊಂಡ ಚಾಲಕ ಎಷ್ಟೇ ಪ್ರಯತ್ನಿಸಿದರೂ ಲಾರಿ ನಿಯಂತ್ರಣಕ್ಕೆ ಸಿಗದೇ ಹುಸೇನ್ ಸಾಬ್ ಕಾಲುಗಳ ಮೇಲೆ ಹಾದು ಹೋಗಿದೆ. ಅತೀಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ಹುಸೇಸ್ ಸಾಬ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

    ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಗದ್ದಲದ ಗೂಡಾಯ್ತು ಕಾಂಗ್ರೆಸ್ ಸಾಧನಾ ಸಮಾವೇಶ ಯಾತ್ರೆ-ಪೊಲೀಸರ ಮೇಲೆ ಕಲ್ಲು ತೂರಾಟ

    ಗದ್ದಲದ ಗೂಡಾಯ್ತು ಕಾಂಗ್ರೆಸ್ ಸಾಧನಾ ಸಮಾವೇಶ ಯಾತ್ರೆ-ಪೊಲೀಸರ ಮೇಲೆ ಕಲ್ಲು ತೂರಾಟ

    ಕೊಪ್ಪಳ: ಕುಷ್ಟಗಿಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಪೊಲೀಸರ ವಿರುದ್ಧ ಕಲ್ಲು ತೂರಾಟ ನಡೆಸಿ ಉದ್ಧಟತನ ತೋರಿದ ಘಟನೆ ನಡೆದಿದೆ.

    ಬೆಂಗಳೂರು ಮೂಲದ ಕಾಂಗ್ರೆಸ್ ಮುಖಂಡ ದಿಲೀಪ್ ಕುಮಾರ್ ಎಂಬವರು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಲು ಮುಂದಾಗಿದ್ದರು. ಆದರೆ ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ದೀಲಿಪ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

    ಈ ವೇಳೆ ಸುಖಾಸುಮ್ಮನೇ ಆಕ್ರೋಶಗೊಂಡ ದಿಲೀಪ್ ಬೆಂಬಲಿಗರು ಸಮಾವೇಶದ ಹೊರಗಡೆ ಗೊಂದಲ ಮೂಡಿಸಿಲು ಪ್ರಯತ್ನಿಸಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸಮಾವೇಶಕ್ಕೆ ಹಾಕಲಾಗಿದ್ದ ಕುರ್ಚಿಗಳನ್ನು ಪೊಲೀಸರ ವಿರುದ್ಧ ಎಸೆದಿದ್ದಾರೆ.

    ಕಾರ್ಯಕ್ರಮದ ವೇದಿಕೆ ಎಡಭಾಗದಲ್ಲಿ ಘಟನೆ ನಡೆದಿದ್ದು ಮುಖಂಡ ದಿಲೀಪ್ ಪ್ರತಿಕ್ರಿಯಿಸಿ, ನನ್ನನ್ನು ಇಲ್ಲಿ ತುಳಿಯುವ ಕಾರ್ಯ ಮಾಡಲಾಗುತ್ತದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಪೊಲೀಸರು ಕಾರ್ಯಕರ್ತರನ್ನು ಹರಸಾಹಸ ಪಟ್ಟು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ ಸಿಎಂ ಯಡವಟ್ಟು – ಬಾಯಿತಪ್ಪಿ ರಾಹುಲ್ ಗಾಂಧಿ ಹತ್ಯೆ ಅಂದ್ರು

    https://www.youtube.com/watch?v=QOhBFb5ibNU