Tag: kushtagi

  • ಕೊಪ್ಪಳ | 2 ಕುಟುಂಬಗಳ ನಡುವೆ ಆಸ್ತಿ ಕಲಹ – ಯುವಕನ ಕೊಲೆ

    ಕೊಪ್ಪಳ | 2 ಕುಟುಂಬಗಳ ನಡುವೆ ಆಸ್ತಿ ಕಲಹ – ಯುವಕನ ಕೊಲೆ

    ಕೊಪ್ಪಳ: ಎರಡು ಕುಟುಂಬಗಳ ನಡುವಿನ ಆಸ್ತಿ ಕಲಹ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಕುಷ್ಟಗಿ (Kushtagi) ತಾಲೂಕಿನ ತಾವರಗೇರಾ (Tavaragera) ಪಟ್ಟಣದಲ್ಲಿ ನಡೆದಿದೆ.

    ಚೆನ್ನಪ್ಪ ನಾರಿನಾಳ(35) ಕೊಲೆಯಾದ ದುರ್ದೈವಿ. ಶನಿವಾರ ಮಧ್ಯರಾತ್ರಿ ರವಿ ನಾರಿನಾಳ ಹಾಗೂ ಚೆನ್ನಪ್ಪ ನಾರಿನಾಳ ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು. ಈ ಜಗಳ ಅತಿರೇಕಕ್ಕೆ ತಿರುಗಿ ರವಿ ನಾರಿನಾಳ ಹಾಗೂ ಸಹಚರರು, ಚೆನ್ನಪ್ಪ ನಾರಿನಾಳರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: Raichur | ಗೆಲುವಿನ ಸಂಭ್ರಮಾಚರಣೆ ವೇಳೆ ಹುಚ್ಚಾಟ – 8 ಮಂದಿ RCB ಫ್ಯಾನ್ಸ್ ಅರೆಸ್ಟ್

    ಪ್ರಕರಣದ ಕುರಿತು ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ ಮಾತನಾಡಿ, ಶನಿವಾರ ಮಧ್ಯರಾತ್ರಿ ತಾವರಗೇರಾ ಪಟ್ಟಣದಲ್ಲಿ ಚೆನ್ನಪ್ಪ ಎಂಬ ವ್ಯಕ್ತಿಯ ಕೊಲೆಯಾಗಿದೆ. 4 ಜನ ಯುವಕರು ಸೇರಿ ಕೊಲೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬಿಸ್ತಿ ಮತ್ತು ನಾರಿನಾಳ ಕುಟುಂಬದ ನಡುವೆ ಹಗೆತನ ಇತ್ತು. ಆಸ್ತಿ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಕಲಹವಿತ್ತು ಎಂದಿದ್ದಾರೆ. ಇದನ್ನೂ ಓದಿ: ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್

    ಈ ಎರಡೂ ಕುಟುಂಬಗಳ ಕುರಿತು ಈ ಹಿಂದೆಯೇ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಟುಂಬದ ಹಲವರ ಮೇಲೆ ರೌಡಿಶೀಟರ್ ಸಹ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಬದಲಾವಣೆ ಮಾಡಿ ಎಂದು ಕೇಳಿಲ್ಲ: ದಿನೇಶ್ ಗುಂಡೂರಾವ್ ಸ್ಪಷ್ಟನೆ

    ಕೊಲೆ ಪ್ರಕರಣ ಸಂಬಂಧ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

  • ಕುಷ್ಟಗಿ ರೈಲು ಸಂಚಾರ ಶೀಘ್ರವೇ ಆರಂಭ: ಬಸವರಾಜ ರಾಯರೆಡ್ಡಿ

    ಕುಷ್ಟಗಿ ರೈಲು ಸಂಚಾರ ಶೀಘ್ರವೇ ಆರಂಭ: ಬಸವರಾಜ ರಾಯರೆಡ್ಡಿ

    ಗದಗ: ವಾಡಿ ರೈಲ್ವೆ ಮಾರ್ಗದಲ್ಲಿ ಗದಗದಿಂದ ಕುಷ್ಟಗಿವರೆಗೆ (Kushtagi) ಶೀಘ್ರದಲ್ಲೇ ಸಂಚಾರ ಆರಂಭವಾಗಲಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja Rayareddy) ಹೇಳಿದರು.

    ಸಂಸದ ರಾಜಶೇಖರ ಹಿಟ್ನಾಳ್ (Chandrashekhar Hitnal) ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಗದಗದಿಂದ ಕುಷ್ಟಗಿವರೆಗೆ ರೈಲ್ವೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲು ಓಡಿಸಲಾಗಿದೆ. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಜೊತೆಗೆ ಮಾತನಾಡಿ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡಲಾಗುವುದು ಎಂದರು. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್‌ ಯೂಟರ್ನ್‌

    ರೈಲ್ವೆ ಸಚಿವರ ಸಮಯ ನೋಡಿಕೊಂಡು ಯಲಬುರ್ಗಾ ಅಥವಾ ಕುಷ್ಟಗಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಿಗದಿ ಮಾಡಲಾಗುವುದು. ಇದೀಗ ಕುಷ್ಟಗಿಯಿಂದ ಸುರಪುರದವರೆಗೆ ಒಂದೇ ಟೆಂಡರ್ ಕರೆದಿದ್ದಾರೆ. ಮುಂದಿನ 3 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

    ಯಲಬುರ್ಗಾ ತಾಲೂಕು ಇಟಗಿ (Itagi) ಗ್ರಾಮದಲ್ಲಿ ರೈಲ್ವೆ ನಿಲ್ದಾಣ ಮಂಜೂರಾಗಿದೆ. ಐತಿಹಾಸಿಕ ಸ್ಥಳ ಇಟಗಿಯಲ್ಲಿ ಇಟಗಿ ಮಹದೇವ್ ರೈಲ್ವೆ ನಿಲ್ದಾಣ ಎಂಬ ಹೆಸರಿನಲ್ಲಿ ನಿರ್ಮಾಣ ಆಗಲಿದೆ. ರಾಜ್ಯ ಸರ್ಕಾರ ಅರ್ಧ ಹಣ ಕೊಟ್ಟು ಭೂಮಿ ನೀಡುತ್ತಿದೆ ಎಂದರು. ಇದನ್ನೂ ಓದಿ: ಬ್ರಾಹ್ಮಣರ ಸಂಖ್ಯೆ 15 ಲಕ್ಷ ಅಲ್ಲ, ನಮ್ಮ ಸಂಖ್ಯೆ 45 ಲಕ್ಷ: ಅಶೋಕ್ ಹಾರನಹಳ್ಳಿ

    ಗದಗ-ವಾಡಿ ರೈಲ್ವೆ ಯೋಜನೆಗೆ ಅಗತ್ಯ ಇರುವ ಪೂರ್ಣ ಪ್ರಮಾಣದ ಭೂಸ್ವಾಧೀನ ಆಗಿದೆ. ಗದಗ-ವಾಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯಲ್ಲಿ ಅಂಡರ್‌ಪಾಸ್ ಕೆಲಸದಲ್ಲಿ ತಾಂತ್ರಿಕ ಸಮಸ್ಯೆ ಆಗಿರುವ ಹಾಗೂ ಕಳಪೆ ಕಾಮಗಾರಿ ನಡೆದ ಬಗ್ಗೆ ಮಾಹಿತಿ ಇದೆ. ಕೂಡಲೇ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಆರಂಭದಲ್ಲಿ ಕೇವಲ 2 ಸಾವಿರ ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿ ಇದಾಗಿತ್ತು. ಇದೀಗ 4 ಸಾವಿರ ಕೋಟಿ ರೂ.ವರೆಗೆ ಹೆಚ್ಚುವರಿಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    ಮುನಿರಾಬಾದ್‌ನಿಂದ ಮೆಹಬೂಬ್ ರೈಲ್ವೆ ಮಾರ್ಗದ ಯೋಜನೆ ಕರ್ನಾಟಕದಲ್ಲಿ ಸಿಂಧನೂರುವರೆಗೆ ಪೂರ್ಣಗೊಂಡು, ಅಲ್ಲಿಂದ ರಾಯಚೂರುವರೆಗೆ ಕಾಮಗಾರಿ ನಡೆಯುತ್ತಿದೆ. ಆಂಧ್ರದಲ್ಲಿ ಈ ಲೈನ್ ಕಂಪ್ಲೀಟ್ ಆಗಿದೆ. ಕರ್ನಾಟಕದಲ್ಲಿ ಭೂ ಸ್ವಾಧೀನ ಸಮಸ್ಯೆಯಿಂದ ವಿಳಂಬ ಆಗಿತ್ತು. ಖರ್ಗೆ ಅವರ ಒತ್ತಾಸೆಯಿಂದ ಯೋಜನೆ ಮಂಜೂರಾಗಿತ್ತು ಎಂದು ಮಾಹಿತಿ ನೀಡಿದರು.

  • ಕೊಪ್ಪಳ | ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಲ್ಲಿ ಪುರುಷನಿಗೆ ಥಳಿಸಿದ ಮಹಿಳಾ ಪ್ರಯಾಣಿಕರು

    ಕೊಪ್ಪಳ | ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಲ್ಲಿ ಪುರುಷನಿಗೆ ಥಳಿಸಿದ ಮಹಿಳಾ ಪ್ರಯಾಣಿಕರು

    ಕೊಪ್ಪಳ: ಜಿಲ್ಲೆಯ ಕೆಎಸ್‌ಆರ್‌ಟಿಸಿ (KSRTC) ಬಸ್‌ವೊಂದರಲ್ಲಿ ಓರ್ವ ಪುರುಷ ಪ್ರಯಾಣಿಕನಿಗೆ ಮಹಿಳಾ ಪ್ರಯಾಣಿಕರು ಸೇರಿ ಥಳಿಸಿದ ಘಟನೆಯೊಂದು ನಡೆದಿದೆ.ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬಿಜೆಪಿಗೆ ದೇಣಿಗೆ ಜಾಸ್ತಿ

    ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kushtagi) ಮಾರ್ಗ ಮಧ್ಯೆ ಸರ್ಕಾರಿ ಬಸ್‌ನಲ್ಲಿ ಹೋಗುವಾಗ ಗಲಾಟೆಯಾಗಿದೆ. ಬಸ್ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೊರಟಿತ್ತು. ಈ ವೇಳೆ ಬಸ್‌ನಲ್ಲಿದ್ದ ಮಹಿಳೆಯರು ಹಾಗೂ ಓರ್ವ ಪುರುಷನ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ನಡುವೆಯೇ ಮಹಿಳೆಯರು ಪುರುಷನಿಗೆ ಥಳಿಸಿದ್ದು, ಗಲಾಟೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.

    ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರ ಜೊತೆ ಪುರುಷ ಅನುಚಿತವಾಗಿ ವರ್ತಿಸಿದ್ದು, ಗಲಾಟೆಗೆ ಕಾರಣ ಎಂದು ಶಂಕಿಸಲಾಗಿದೆ.ಇದನ್ನೂ ಓದಿ: ಎಂಜಿನ್ ವೈಫಲ್ಯ – ಬ್ರೆಜಿಲ್‌ನಲ್ಲಿ ನೇರವಾಗಿ ರಸ್ತೆಗೆ ಲ್ಯಾಂಡ್ ಆದ ವಿಮಾನ

  • ಅಂಗನವಾಡಿಯಲ್ಲಿ ಆಟವಾಡುತ್ತಾ ಕುಸಿದು ಬಿದ್ದು 5ರ ಬಾಲಕಿ ಸಾವು

    ಅಂಗನವಾಡಿಯಲ್ಲಿ ಆಟವಾಡುತ್ತಾ ಕುಸಿದು ಬಿದ್ದು 5ರ ಬಾಲಕಿ ಸಾವು

    ಕೊಪ್ಪಳ: ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದು 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ತೇಜಸ್ವಿ ಸೂರ್ಯ ಮದುವೆ – ಎಲ್ಲಿ? ಯಾವಾಗ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್‌

    ಮೃತ ಬಾಲಕಿಯನ್ನು ಅಲಿಯಾ ಮಹ್ಮದ್ ರಿಯಾಜ್ (5) ಎಂದು ತಿಳಿಯಲಾಗಿದ್ದು, ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

    ಮಧ್ಯಾಹ್ನದ ವೇಳೆ ಬಾಲಕಿ ಅಂಗನವಾಡಿಯಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾಲಕಿಯನ್ನು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸುತ್ತಿದ್ದಾಗ, ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ವೈದ್ಯರ ತಪಾಸಣೆಯ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ನಿಮ್ಮ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು, ಶೀಘ್ರವೇ ಭೇಟಿಯಾಗುತ್ತೇನೆ: ಅಭಿಮಾನಿಗಳಿಗೆ ದರ್ಶನ್‌ ಪತ್ರ

     

  • ಸಿಮೆಂಟ್ ಲಾರಿ, ಬುಲೆರೋ ಮುಖಾಮುಖಿ ಡಿಕ್ಕಿ – ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನ

    ಸಿಮೆಂಟ್ ಲಾರಿ, ಬುಲೆರೋ ಮುಖಾಮುಖಿ ಡಿಕ್ಕಿ – ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನ

    ಕೊಪ್ಪಳ: ಸಿಮೆಂಟ್ ಲಾರಿ ಹಾಗೂ ಬುಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಕುಷ್ಟಗಿ (Kushtagi) ತಾಲೂಕಿನ ನಂದಾಪೂರ ಕ್ರಾಸ್ (Nandapura Cross) ಬಳಿ ನಡೆದಿದೆ.

    ಮೃತರನ್ನು ಲಿಂಗಸಗೂರು ತಾಲೂಕಿನ ತೊಡಕಿ ಗ್ರಾಮದವರಾದ ಸಿದ್ಧಪ್ಪ ಪೊಲೀಸಗೌಡರ (25), ಅಂಜನಪ್ಪ ಪೊಲೀಸ್‌ಗೌಡರ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟಿಬೆಟನ್‌ ಧರ್ಮಗುರು ದಲೈ ಲಾಮಾಗೆ ಜೀವ ಬೆದರಿಕೆ – ಕೇಂದ್ರದಿಂದ ʻZʼ ಶ್ರೇಣಿಯ ಭದ್ರತೆ

    ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಸಿಮೆಂಟ್ ಮಿಕ್ಸರ್ ಯಂತ್ರದ ಲಾರಿಯನ್ನು ತೆಗೆದುಕೊಂಡು ಕುಷ್ಟಗಿ ಕಡೆಗೆ ಹೊರಟಿದ್ದರು. ಇದೇ ವೇಳೆ ಕುಷ್ಟಗಿ ತರಕಾರಿ ಮಾರುಕಟ್ಟೆಗೆ ಸೌತೆಕಾಯಿ ಹಾಕಿ, ಲಿಂಗಸಗೂರು ಕಡೆಗೆ ಹೊರಟಿದ್ದ ಬುಲೆರೋ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಬುಲೆರೋ ವಾಹನಕ್ಕೆ ಬೆಂಕಿ ಆವರಿಸಿದ್ದು, ಇಬ್ಬರು ಸಜೀವ ದಹನಗೊಂಡಿದ್ದಾರೆ.

    ಈ ಕುರಿತು ಅಗ್ನಿಶಾಮಕ ಠಾಣಾಧಿಕಾರಿ ರಾಜು ನರಸಪ್ಪ ಮಾತನಾಡಿ, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರೊಳಗೆ ಬೊಲೆರೋ ವಾಹನದಲ್ಲಿದ್ದ ಇಬ್ಬರೂ ಸಂಪೂರ್ಣ ಸುಟ್ಟು ಕರಕಲಾಗಿದ್ದರು ಎಂದು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ತಾವರಗೇರಾ ಪಿಎಸ್‌ಐ ಸೇರಿದಂತೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ ಅವರು ಭೇಟಿ ನೀಡಿ, ಪರಿಶೀಲಿಸಿದರು.ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ವಿಜಯೇಂದ್ರ

  • ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಬಿಡೋ ಬಗ್ಗೆ ಚಿಂತನೆ – ವಿ.ಸೋಮಣ್ಣ

    ಕೊಪ್ಪಳ: ಅಂಜನಾದ್ರಿಯಿಂದ (Anjanadri) ಅಯೋಧ್ಯೆಗೆ (Ayodhya) ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ, ಪ್ರಸ್ತಾವನೆ ತೆಗೆದುಕೊಂಡಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ (V Somanna) ಹೇಳಿದರು.

    ಕೊಪ್ಪಳ (Koppal) ನಗರದಲ್ಲಿರುವ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಬಳಿಕ ಕುಷ್ಟಗಿ (Kushtagi) ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು.ಇದನ್ನೂ ಓದಿ: ತವರು ಸೇರಿದ್ದ ಪತ್ನಿಯನ್ನು ಹಾಡಹಗಲೇ ಅಪಹರಿಸಿದ ಪತಿ!

    ಉದ್ಘಾಟಿಸಿ ಮಾತನಾಡಿದ ಅವರು, ಕೊಪ್ಪಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನ ಕೈಗೊಳ್ಳಲಾಗಿದೆ. ಕೊಪ್ಪಳ ಗಂಗಾವತಿ ಹಾಗೂ ಮುನಿರಾಬಾದ್ ರೈಲು ನಿಲ್ದಾಣದ ಉನ್ನತೀಕರಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ 13 ಕೋಟಿ ರೂ. ಹಣವನ್ನ ನೀಡಿದೆ. ಅದರ ಹೊರತಾಗಿ ಉಳಿದ ಹಣವನ್ನ ಕೇಂದ್ರ ಸರ್ಕಾರ ನೀಡಿದೆ. ಮೇಲ್ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಇನ್ನೂ ಅಂಜನಾದ್ರಿಯಿಂದ ಅಯೋಧ್ಯೆಗೆ ರೈಲು ಯೋಜನೆಗೆ ಪ್ರಸ್ತಾವನೆ ತೆಗೆದುಕೊಂಡಿದ್ದೇನೆ, ರೈಲು ಬಿಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಬಳಿಕ ಅದನ್ನ ಪರೀಶಿಲನೆ ಮಾಡುತ್ತೇನೆ ಎಂದು ಹೇಳಿದರು.

    ಅಮೃತ ಯೋಜನೆಯಲ್ಲಿ ರಾಜ್ಯದ 61 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮಾಡುತ್ತಿದ್ದೇವೆ. ಗದಗ-ವಾಡಿ ಹೊಸ ಲೈನ್ ಕಾಮಗಾರಿ ಆದಷ್ಟು ಬೇಗನೆ ಮುಗಿಸುತ್ತೇವೆ. ಮೇಲ್ಸೇತುವೆಗೆ ವ್ಯಕ್ತಿ ಹೆಸರು ಇಡುವ ನಿಯಮಗಳಿವೆ. ಅವೆಲ್ಲವುಗಳನ್ನು ಪಾಲನೆ ಮಾಡಬೇಕು. ರೈಲ್ವೆಯ ಟಿಕೆಟ್ ದರ ಶೇ.56ರಷ್ಟು ಕಡಿಮೆಯಿದೆ. ಗೂಡ್ಸ್ ರೈಲುಗಳ ಆದಾಯದಿಂದ ಟಿಕೆಟ್ ದರ ಹೊಂದಾಣಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ಕೇಂದ್ರ ಸಚಿವ ಅಮಿತ್‌ ಶಾ

     

  • ಮಧ್ಯರಾತ್ರಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ 6 ಲಾರಿ ವಶಕ್ಕೆ

    ಮಧ್ಯರಾತ್ರಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಸಾಗಿಸುತ್ತಿದ್ದ 6 ಲಾರಿ ವಶಕ್ಕೆ

    ಕೊಪ್ಪಳ: ಗ್ರಾನೈಟ್ ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 6 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕುಷ್ಟಗಿ ಸಮೀಪ ನಡೆದಿದೆ.

    ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಕುಷ್ಟಗಿ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ಜನವರಿ 3ರಂದು ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 3 ಲಾರಿಯಲ್ಲಿ ದ್ರಾಕ್ಷಿ ಕಲ್ಲಿನ ಕಂಬ ಹಾಗೂ 3 ಲಾರಿಯಲ್ಲಿ ಗ್ರಾನೈಟ್ ಕಲ್ಲು ಸಾಗಿಸಲಾಗುತ್ತಿತ್ತು. ಆರು ಲಾರಿಗಳನ್ನು ತಪಾಸಣೆ ಮಾಡಿದಾಗ ಅಂದಾಜು ಮೂರು ಲಕ್ಷ ರೂಪಾಯಿ ಮೌಲ್ಯದ ಕಲ್ಲು ಸಿಕ್ಕಿವೆ.

    ಪರಿಶೀಲನೆ ಬಳಿಕ 6 ಲಾರಿ ಸೇರಿದಂತೆ ಕಲ್ಲುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭೂ ವಿಜ್ಞಾನಿಗಳಾದ ವಿಶ್ವನಾಥ್ ಹಾಗೂ ದಿಲೀಪ್ ಕುಮಾರ್ ಇದ್ದರು.

  • ಮಿನಿ ವಿಧಾನಸೌಧಕ್ಕೊಂದು ಶೌಚಾಲಯ ನಿರ್ಮಿಸಿಕೊಡಿ-ಸಾರ್ವಜನಿಕರ ಒತ್ತಾಯ

    ಮಿನಿ ವಿಧಾನಸೌಧಕ್ಕೊಂದು ಶೌಚಾಲಯ ನಿರ್ಮಿಸಿಕೊಡಿ-ಸಾರ್ವಜನಿಕರ ಒತ್ತಾಯ

    ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಕಚೇರಿಗೆ ಆಗಮಿಸುವ ಸಾರ್ವಜನಿಕರು ಶೌಚಾಲಯವಿಲ್ಲದೆ ಪರಿತಪಿಸುವಂತಾಗಿದೆ.

    ನಿತ್ಯ ಸಾವಿರಾರು ಜನ ಸಂಪರ್ಕಕ್ಕಿರುವ ಮಿನಿ ವಿಧಾನಸೌಧದಲ್ಲಿ ಕನಿಷ್ಠ ಒಂದು ಶೌಚಾಲಯವಿಲ್ಲ. ಸಾರ್ವಜನಿಕ ಶೌಚಾಲಯ ಇಲ್ಲದಿರೋದರಿಂದ ಮಿನಿ ವಿಧಾನಸೌಧದ ಹೊರಾಂಗಣವೇ ಮೂತ್ರ ಹಾಗೂ ಶೌಚಾಲಯವಾಗಿ ಮಾರ್ಪಟ್ಟಿದೆ.


    ಈ ಬೃಹತ್ ಕಟ್ಟಡ 10 ರಿಂದ 12 ಸರ್ಕಾರಿ ಇಲಾಖೆ ಕಚೇರಿಗಳನ್ನು ಹೊಂದಿದ್ದರೂ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪೇಚಾಡುವಂತಾಗಿದೆ. ಕಚೇರಿಗಳಿಗೆ ಆಗಮಿಸುವ ಮಹಿಳಾ ಅಧಿಕಾರಿಗಳು ಮೂತ್ರ ಹಾಗೂ ಶೌಚಾಲಯಕ್ಕೆ ಒಂದು ಕಿ.ಮೀ ದೂರದ ಪ್ರವಾಸಿ ಮಂದಿರ ಎಡತಾಕುವುದು ಅನಿವಾರ್ಯವಾಗಿದೆ. ತಾಲೂಕಾ ದಂಡಾಧಿಕಾರಿಗಳು ಸೇರಿದಂತೆ ಇನ್ನೂಳಿದ ಪ್ರಮುಖ ತಾಲೂಕಾ ಕೇಂದ್ರಗಳನ್ನು ಹೊಂದಿದ ಮಿನಿ ವಿಧಾನಸೌಧಕ್ಕೆ ಸಂಬಂಧಿಸಿದವರು ಕೂಡಲೇ ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕೆಂಬ ಅಳಲು ಇಲ್ಲಿಗೆ ಬೇಟಿಕೊಡುವ ಸಾರ್ವಜನಿಕರು ಸೇರಿದಂತೆ ನೌಕರರ ಒತ್ತಾಯವಾಗಿದೆ.

  • ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಮದುವೆಯಾಗಲು ನಿರಾಕರಿಸಿದ ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಗ್ನಪ್ರೇಮಿ

    ಕೊಪ್ಪಳ: ಮದುವೆಯಾಗಲು ನಿರಾಕರಿಸಿದ ಯುವತಿ ಮೇಲೆ ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

    ಮುದೇನೂರು ಗ್ರಾಮದ ಯುವತಿ ಶಹನಾಜ್ ತಾವರಗೇರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಗಂಗಾವತಿ ತಾಲೂಕು ಮರ್ಲಾನಹಳ್ಳಿ ಗ್ರಾಮದ ಅಮರೇಗೌಡ ಈ ಕೃತ್ಯವೆಸಗಿದ್ದಾನೆ.

    ಯಲಬುರ್ಗಾ ತಾಲೂಕು ಚೌಡಾಪುರ ಗ್ರಾಮದ ನಿವಾಸಿಯಾದ 23 ವರ್ಷದ ಶಹನಾಜ್, ಕಿರಿಯ ಆರೋಗ್ಯ ಸಹಾಯಕಿಯಾಗಿ ಮುದೇನೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಕುಷ್ಟಗಿಯಲ್ಲಿ ನಡೆಯುತ್ತಿರುವ ತರಬೇತಿಗೆ ಹಾಜರಾಗಲು ಶಹನಾಜ್ ತಾಯಿಯೊಂದಿಗೆ ಮುದೇನೂರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಡ್ರಾಪ್ ಮಾಡುವುದಾಗಿ ಬೈಕ್‍ನಲ್ಲಿ ಕರೆತಂದ ಅಮರೇಶ, ಕುಷ್ಟಗಿ ಸಮೀಪ ಬೈಕ್ ನಿಲ್ಲಿಸಿ ಶಹನಾಜ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಮಗಳ ಸಹಾಯಕ್ಕೆ ಮುಂದಾದ ಶಹನಾಜ್ ತಾಯಿಗೂ ಎದೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಇಬ್ಬರೂ ಸದ್ಯ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶಹನಾಜ್‍ಗೆ ಇತ್ತೀಚೆಗೆ ಬೇರೊಬ್ಬರೊಂದಿಗೆ ವಿವಾಹ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ. ಕೊಲೆಗೆ ಯತ್ನಿಸಿದ ಅಮರೇಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.