Tag: Kushka

  • ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಷ್ಕಾ’ ಮಾಡುವ ರೆಸಿಪಿ

    ನಾನ್‍ವೆಜ್ ಪ್ರಿಯರಿಗೆ ಕುಷ್ಕಾ ಮಾಡುವ ವಿಧಾನ ತುಂಬಾ ಸುಲಭವಾಗಿದೆ. ಇದು ಎಲ್ಲ ನಾನ್‍ವೆಜ್ ಪ್ರಿಯರಿಗೆ ತುಂಬಾ ಇಷ್ಟವಾದ ಪಾಕವಿಧಾನವಾಗಿದೆ. ‘ಕುಷ್ಕಾ’ ತಿನ್ನಲು ಇಷ್ಟಪಡದವರೂ ಸಹ ಇಂದು ನಾವು ಹೇಳಿಕೊಡುವ ರೆಸಿಪಿ ಮಾಡಿ ಸವಿದ್ರೆ, ಇಷ್ಟಪಡುತ್ತಾರೆ.

    ಬೇಕಾಗಿರುವ ಪದಾರ್ಥಗಳು:
    * ಬಾಸ್ಮತಿ ಅಕ್ಕಿ – 1 ಕಪ್
    * ನೀರು – 2 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಕಟ್ ಮಾಡಿದ ಟೊಮೆಟೊ – ಅರ್ಧ ಕಪ್


    * ಹಸಿರು ಮೆಣಸಿನಕಾಯಿ – 1
    * ಎಣ್ಣೆ – 2 ಟೀಸ್ಪೂನ್
    * ದಾಲ್ಚಿನ್ನಿ – 1
    * ಲವಂಗ – 4
    * ಏಲಕ್ಕಿ – 3
    * ಮೊಸರು – 2 ಟೀಸ್ಪೂನ್
    * ರೆಡ್ ಚಿಲ್ಲಿ ಪೌಡರ್ – 2 ಟೀಸ್ಪೂನ್


    * ಅರಿಶಿನ ಪುಡಿ – 1 ಟೀಸ್ಪೂನ್
    * ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    * ಪುದೀನ ಸೊಪ್ಪು – 1 ಕಪ್
    * ಅಗತ್ಯವಿರುವಷ್ಟು ಉಪ್ಪು
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 2

    ಮಾಡುವ ವಿಧಾನ:
    * ಬಾಸ್ಮತಿ ಅಕ್ಕಿಯನ್ನು 2 ಕಪ್ ನೀರಿನಲ್ಲಿ ತೊಳೆದು 15-20 ನಿಮಿಷಗಳ ಕಾಲ ನೆನೆಸಿಡಿ. ಕುಷ್ಕಾ ಮಸಾಲಾ ಪೇಸ್ಟ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ, ದಾಲ್ಚಿನ್ನಿ, ಏಲಕ್ಕಿ, ಲವಂಗ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ರೆಡಿ ಮಾಡಿಕೊಳ್ಳಿ.
    * ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ. ಮೆಂತ್ಯ ಎಲೆ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ.
    * ನಂತರ ಕಟ್ ಮಾಡಿದ ಈರುಳ್ಳಿ, ಟೊಮೆಟೊ ಜೊತೆಗೆ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಫ್ರೈ ಮಾಡಿ.
    * ಮಸಾಲಾ ಮಿಶ್ರಣವನ್ನು ಪೇಸ್ಟ್ ಅನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ.
    * ನಂತರ ಅದಕ್ಕೆ ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅಗತ್ಯಕ್ಕೆ ಉಪ್ಪು ಸೇರಿಸಿ. 2-3 ನಿಮಿಷಗಳ ಕಾಲ ಫ್ರೈ ಮಾಡಿ.
    * ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಒಂದೆರಡು ನಿಮಿಷ ಬೇಯಿಸಿ. ಈಗ ಸಣ್ಣಗೆ ಕತ್ತರಿಸಿದ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಫ್ರೈ ಮಾಡಿ.

    * ನಂತರ ನೆನೆಸಿದ ಬಾಸ್ಮತಿ ಅಕ್ಕಿಯಿಂದ ನೀರನ್ನು ಸುರಿಯಿರಿ ಮತ್ತು ಅಗತ್ಯವಿದ್ದರೆ ಉಪ್ಪನ್ನು ಹಾಕಿ. ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿದ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
    * ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ 12-15 ನಿಮಿಷ ಬೇಯಿಸಿ.
    * ಶಾಖವನ್ನು ಆಫ್ ಮಾಡಿ ಮತ್ತು ಅದನ್ನು ತೆರೆಯುವ ಮೊದಲು 5-10 ನಿಮಿಷಗಳ ಕಾಲ ಬಿಡಿ.

    – ಕುಷ್ಕಾ ಈಗ ಸವಿಯಲು ಸಿದ್ಧವಾಗಿದ್ದು, ಈರುಳ್ಳಿ ಮತ್ತು ರೈಯಿತಾ ಜೊತೆಗೆ ಬಿಸಿಯಾಗಿ ಬಡಿಸಿ.

    Live Tv
    [brid partner=56869869 player=32851 video=960834 autoplay=true]

  • ಐರಾ ಫಿಲಂಸ್ ಸಂಸ್ಥೆಯಡಿ ‘ಕುಷ್ಕ’ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ 26ಕ್ಕೆ ಬಿಡುಗಡೆ

    ಐರಾ ಫಿಲಂಸ್ ಸಂಸ್ಥೆಯಡಿ ‘ಕುಷ್ಕ’ ಸಿನಿಮಾ ರಾಜ್ಯಾದ್ಯಂತ ಫೆಬ್ರವರಿ 26ಕ್ಕೆ ಬಿಡುಗಡೆ

    ಟ್ರೇಲರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿದ್ದ ‘ಕುಷ್ಕ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 26ಕ್ಕೆ ‘ಕುಷ್ಕ’ ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರೋದು ಕನ್ಪರ್ಮ್ ಆಗಿದ್ದು, ಐರಾ ಫಿಲಂಸ್ ಸಂಸ್ಥೆ ‘ಕುಷ್ಕ’ ಸಿನಿಮಾವನ್ನು ವಿತರಣೆ ಮಾಡುತ್ತಿದೆ. ಐಒನ್, ಒಂದು ಶಿಕಾರಿಯ ಕಥೆ ಸಿನಿಮಾ ವಿತರಣೆ ಮಾಡಿದ್ದ ಐರಾ ಫಿಲಂಸ್ ಸಂಸ್ಥೆ ಇದೀಗ ‘ಕುಷ್ಕ’ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ವಿತರಣೆ ಜೊತೆ ಸಹ ನಿರ್ಮಾಪಕನಾಗಿಯೂ ಈ ಚಿತ್ರಕ್ಕೆ ಬಂಡವಾಳ ಹೂಡಿದೆ ಐರಾ ಫಿಲಂಸ್.

    ಸಿನಿಮಾ ವಿತರಣೆ ಜೊತೆ ಸಿನಿಮಾ ನಿರ್ಮಾಣದಲ್ಲೂ ನಿರತವಾಗಿರುವ ಈ ಸಂಸ್ಥೆ ಕನ್ನಡ ಹಾಗೂ ತಮಿಳು ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದೆ. ‘ಕುಷ್ಕ’ ಚಿತ್ರಕ್ಕೆ ವಿಕ್ರಮ್ ಯೋಗಾನಂದ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜೊತೆಗೆ ಸಂಕಲನ, ಛಾಯಾಗ್ರಹಣದ ಹೊಣೆಯನ್ನು ವಿಕ್ರಮ್ ಯೋಗಾನಂದ್ ಹೊತ್ತುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರ ವಶಪಡಿಸಿಕೊಳ್ಳಲು ಹಿಂದೆ ಬೀಳುವ ಅಂತರಾಷ್ಟ್ರೀಯ ಸ್ಮಗ್ಲರ್‍ಗಳು, ಭೂಗತ ಪಾತಕಿಗಳ ಸುತ್ತ ‘ಕುಷ್ಕ’ ಸಿನಿಮಾ ಸುತ್ತಲಿದ್ದು, ಪ್ರೇಕ್ಷಕರಿಗೆ ಕುಷ್ಕ ಭರಪೂರ ಮನರಂಜನೆ ನೀಡಲಿದೆ ಎನ್ನೋದು ಚಿತ್ರತಂಡದ ಭರವಸೆಯ ಮಾತುಗಳು.

    ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಚಿತ್ರದಲ್ಲಿ ಕಾಮಿಡಿ ವಿಲನ್ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದುಗೌಡ ನಾಯಕನಾಗಿ, ಸಂಜನಾ ಆನಂದ್ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಶೋಭರಾಜ್, ಕೈಲಾಶ್ ಪಾಲ್, ರಾಕ್‍ಲೈನ್ ಸುಧಾಕರ್, ಜೀವನ್, ಅರುಣ್, ಮಾಧುರಿ ಬ್ರಗಾಂಝ ಚಿತ್ರದ ತಾರಾಬಳಗದಲ್ಲಿ ಬಣ್ಣಹಚ್ಚಿದ್ದಾರೆ. ಕುಷ್ಕ ಚಿತ್ರಕ್ಕೆ ಪ್ರತಾಪ್ ರೆಡ್ಡಿ, ಮಧು ಗೌಡ ಬಂಡವಾಳ ಹೂಡಿದ್ದು, ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಹಾಗೂ ಪಿಎಂ ಪ್ರೊಡಕ್ಷನ್ಸ್ ಬ್ಯಾನರ್?ನಡಿ ಸಿನಿಮಾ ನಿರ್ಮಾಣವಾಗಿದೆ. ಬಾಲರಾಜ್ ಚಿತ್ರಕಥೆ, ಅಭಿಲಾಶ್ ಗುಪ್ತ ಸಂಗೀತ ಸಂಯೋಜನೆ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಕುಷ್ಕ’ ಸಿನಿಮಾ ಐರಾ ಫಿಲಂಸ್ ಸಂಸ್ಥೆಯಡಿ ಇದೇ ತಿಂಗಳ 26ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ.

  • ಮಠ ಗುರುಪ್ರಸಾದ್ ಈಗ ‘ಕುಷ್ಕ’ ಹೀರೋ!

    ಮಠ ಗುರುಪ್ರಸಾದ್ ಈಗ ‘ಕುಷ್ಕ’ ಹೀರೋ!

    ಬೆಂಗಳೂರು: ಮೊನ್ನೆಯಷ್ಟೇ ಮೀ ಟೂ ಬಗ್ಗೆ ಮಾತಾಡಿ ವಿವಾದವೊಂದರ ಕೇಂದ್ರ ಬಿಂದುವಾಗಿದ್ದವರು ನಿರ್ದೇಶಕ ಗುರುಪ್ರಸಾದ್. ಅದೇ ಸಂದರ್ಭದಲ್ಲಿ ಅವರು ಮೀ ಟೂ ಅಂತಲೇ ಚಿತ್ರ ಮಾಡಿ ಅದರಲ್ಲಿ ತಾನೇ ಹೀರೋ ಆಗೋದಾಗಿಯೂ ಹೇಳಿಕೊಂಡಿದ್ದರು. ಆದರೆ ಅದಕ್ಕೂ ಮುಂಚೆಯೇ ಅವರು ಕುಷ್ಕ ಎಂಬ ಚಿತ್ರದ ಮೂಲಕ ಹೀರೋ ಆಗಿ ಅವತರಿಸಿದ್ದಾರೆ.

    ಈ ಹಿಂದೆ ಹೀಗೊಂದ್ ದಿನ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕ್ರಮ್ ಯೋಗನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ. ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡೇ ನಿರ್ದೇಶಕರಾಗಿದ್ದ ಗುರುಪ್ರಸಾದ್ ನಾಯಕನಾಗಲು ಮನಸು ಮಾಡಿದ್ದಾರಂತೆ.

    ಈ ಚಿತ್ರಕ್ಕೆ ಈ ಹಿಂದಿನಿಂದಲೇ ಸದ್ದಿಲ್ಲದೇ ತಯಾರಿ ನಡೆದಿತ್ತು. ಇದೀಗ ಈ ಚಿತ್ರಕ್ಕೆ ಬೇಕಾದ ಲುಕ್ಕಿನಲ್ಲಿ ಗುರು ಪ್ರಸಾದ್ ಅವರ ಫೋಟೋಶೂಟ್ ಕೂಡಾ ನಡೆದಿದೆಯಂತೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಈವರೆಗೆ ಗುರುತಿಸಿಕೊಂಡಿದ್ದವರು ಗುರುಪ್ರಸಾದ್. ಇದೀಗ ಅವರು ಏಕಾಏಕಿ ನಟನೆಗಿಳಿದು ನಾಯಕರಾಗಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾವು ಗಂಡಸರು ಮಾತಾಡಲು ಶುರು ಮಾಡಿದ್ರೆ, ಅವ್ರೆಲ್ಲಾ ಆತ್ಮಹತ್ಯೆ ಮಾಡ್ಕೋಬೇಕಾಗುತ್ತೆ: ಗುರುಪ್ರಸಾದ್

    ನಾವು ಗಂಡಸರು ಮಾತಾಡಲು ಶುರು ಮಾಡಿದ್ರೆ, ಅವ್ರೆಲ್ಲಾ ಆತ್ಮಹತ್ಯೆ ಮಾಡ್ಕೋಬೇಕಾಗುತ್ತೆ: ಗುರುಪ್ರಸಾದ್

    ಬೆಂಗಳೂರು: ಕೆಲವರು ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಪತಿವ್ರತೆಯವರಂತೆ ಪೋಸ್ ಕೊಡಲು ಹೊರಟ್ಟಿದ್ದಾರೆ. ನಾವು ಗಂಡಸರು ಮಾತಾಡಲು ಶುರು ಮಾಡಿದರೆ, ಅವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ‘ಮಠ’ ಚಿತ್ರದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಮೀಟೂ ವೇದಿಕೆ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ‘ಕುಷ್ಕಾ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು, ಇಬ್ಬರು ತಮ್ಮ ಪತಿ, ಅತ್ತೆ, ಮಾವನ ಎದುರಿಗೆ ತಾವು ಪತಿವ್ರತೆಯರು ಅಂತ ಸಾಬೀತುಪಡಿಸಲು ಹೊರಟ್ಟಿದ್ದಾರೆ. ಯಾವಾಗಲೋ ಆಗಿದ್ದನ್ನು ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ಅವಕಾಶ ಸಿಗುವಾಗ ಹಾಗೂ ಕೆಲಸ ಮಾಡುವಾಗ ಸುಮ್ಮನಿದ್ದು, ಎರಡು ವರ್ಷಗಳ ನಂತರ ಮಾತನಾಡುವುದು ಸರಿಯಲ್ಲ ಎಂದು ಗುಡುಗಿದರು.

    ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಎರಡನೇ ಸಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಎಲ್ಲಾ ಹೇಳಿದ್ದೀವಿ. ಬೆನ್ನು ತೋರಿಸುವ ಸೀನ್ ಶೂಟ್ ಮಾಡುವಾಗ ನನ್ನ ಹೆಂಡತಿ ಮತ್ತು ಮಗಳು ಅಲ್ಲೇ ಇದ್ದರು. ಯಾವುದೇ ರೀತಿಯ ಮುಜುಗರ ಆಗುವಂತಹ ಸನ್ನಿವೇಶ ಅಂದು ಆಗಿರಲಿಲ್ಲ ಎಂದು ಹೇಳಿದರು.

    ಸಂಗೀತಾ ಮೀಟೂ ಆರೋಪ ಮಾಡುವಾಗ ನಾನು ಯಾರನ್ನು ಉಲ್ಲೇಖಿಸಿ ಈ ಪೋಸ್ಟ್ ಹಾಕಿದ್ದೇನೆ ಎನ್ನುವುದನ್ನು ಹೇಳಲಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಲಿ. ಅವಕಾಶ ಬೇಕಿದ್ದಾಗ ಯಾವ ರೀತಿ ಇರುತ್ತಾರೆ ಹಾಗೂ ಬೆಳೆದಾಗ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ನಾನು ನೋಡಿದ್ದೇನೆ. ದೊಡ್ಡ ದೊಡ್ಡ ನಟಿಯರ ಜೊತೆಗೂ ನಾನು ಕೆಲಸ ಮಾಡಿದ್ದೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv