Tag: kushi

  • ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?

    ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?

    ಮೊನ್ನೆಯಷ್ಟೇ ‘ಖುಷಿ’ (Kushi) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijaya Devarakonda) ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದರು. ಈಗ ಸಮಂತಾ (Samantha) ಏಕಾಏಕಿ ವಿಮಾನ ಏರಿದ್ದಾರೆ. ಮೂರು ನಾಲ್ಕು ತಿಂಗಳು ಸ್ಯಾಮ್ ಭಾರತದಿಂದ ನಾಪತ್ತೆ. ಆರೋಗ್ಯಕ್ಕಾಗಿ ಮತ್ತೆ ಚಿಕಿತ್ಸೆಗೆ ಅಮೆರಿಕಾಗೆ ಹಾರಿದ್ರಾ ಸಮಂತಾ? ಇಲ್ಲಿದೆ ಮಾಹಿತಿ.

    ಮೊನ್ನೆ ಮೊನ್ನೆ ತಾನೇ ಖುಷಿ (Kushi) ಸಿನಿಮಾ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ಭರ್ಜರಿಯಾಗಿ ಕುಣಿದಿದ್ದರು. ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ವೆರೈಟಿ ಡ್ರೆಸ್‌ಗಳಲ್ಲಿ ಬೆಂಕಿ ಹಚ್ಚಿದ್ದರು. ಮಯೋಸಿಟೀಸ್ ಖಾಯಿಲೆ ಮರೆತು ಜನರು ಕೇಕೆ ಹಾಕುವಂತೆ ಮಾಡಿದ್ದರು. ನೋವನ್ನು ಒಳಗಿಟ್ಟುಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಭಿಮಾನಿಗಳಿಗೆ ಐ ಟು ಲವ್ ಯೂ ನಿಮಗಾಗಿ ಸಿನಿಮಾ ಮಾಡ್ತೀನಿ. ನಟಿಸುತ್ತೀನಿ ಅಂತಾ ಫ್ಯಾನ್ಸ್‌ಗೆ ಪ್ರಾಮೀಸ್ ಮಾಡಿದ್ದರು. ವೇದಿಕೆಯ ಮೇಲೆ ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾದರು.‌ ಇದನ್ನೂ ಓದಿ:ಕಾಲಿವುಡ್‌ನ ಈ ಹೀರೋ ಜೊತೆ ನಟಿಸುವಾಸೆ ಎಂದ ಶಿವಣ್ಣ

    ಒಂದು ವರ್ಷ ಯಾವುದೇ ಸಿನಿಮಾ ಮಾಡಲ್ಲ ಎಂದು ಘೋಷಿಸಿದ್ದು ಗೊತ್ತು. ಅದಾದ ಮೇಲೆ ಯೋಗ, ಧ್ಯಾನದ ಮೊರೆ ಹೋದರು. ಕೆಲ ದಿನಗಳ ಹಿಂದೆ ಬಾಲಿ ದ್ವೀಪದಲ್ಲಿ ಬೀಡು ಬಿಟ್ಟಿದ್ದರು. ಇನ್ಯಾವಾಗ ಸಮಂತಾ ದರ್ಶನ ಅಂತಾ ಕಾಯುವ ಸಮಯದಲ್ಲಿ ಖುಷಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದರು. ಈಗ ಸಿನಿಮಾ ಬಿಡುಗಡೆ ಮುನ್ನವೇ ಮತ್ತೆ ಫ್ಲೈಟ್ ಹತ್ತಿದ್ದಾರೆ. ಅವರು ನೇರವಾಗಿ ಅಮೆರಿಕಾಗೆ (America)  ಪ್ರಯಾಣ ಬೆಳೆಸಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳು ನಾಟ್ ರೀಚೇಬಲ್ ಆಗಿರುತ್ತಾರಂತೆ.

    ಮಯೋಸಿಟೀಸ್ ಚಿಕಿತ್ಸೆಗಾಗಿಯೇ ಅಮೆರಿಕಾಗೆ ಹೋಗಿದ್ದು ಸತ್ಯ. ಮೂರು ನಾಲ್ಕು ತಿಂಗಳು ಅಲ್ಲೇ ಇರಲಿದ್ದಾರಾ ಅಥವಾ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರಾ? ಸದ್ಯಕ್ಕೆ ಅದರ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಒಟ್ನಲ್ಲಿ ಸಮಂತಾ ಸಂಕಟ ನೋಡಿ ಅಭಿಮಾನಿಗಳು ಕೂಡ ಬೇಸರ ಹೊರಹಾಕಿದ್ದಾರೆ. ಸ್ಯಾಮ್‌ಗೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡಿದ್ದಾರೆ. ಅದೇನೇ ಇರಲಿ ಸಮಂತಾ ಗುಣಮುಖರಾಗಿ ಬರಲಿ ಎಂಬುದೇ ಅಭಿಮಾನಿಗಳ ಆಶಯ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

    ಬರೋಬ್ಬರಿ 20 ವರ್ಷಗಳ ಬಳಿಕ ದಳಪತಿ ವಿಜಯ್ ಜೊತೆ ಜ್ಯೋತಿಕಾ ನಟನೆ

    ಮಿಳಿನ ಸೂಪರ್ ಹಿಟ್ ಜೋಡಿ ವಿಜಯ್- ಜ್ಯೋತಿಕಾ (Jyothika) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬರೋಬ್ಬರಿ 20 ವರ್ಷಗಳ ನಂತರ ವಿಜಯ್- ಜ್ಯೋತಿಕಾ ತೆರೆಯ ಮೇಲೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಆ‌ಗಸ್ಟ್‌ 16ರಂದು ಸ್ಪಂದನಾ ಉತ್ತರ ಕ್ರಿಯೆಗೆ ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

    ವಿಜಯ್ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಎಂಬ ಸುದ್ದಿಯ ನಡುವೆ ಹೊಸ ಸಿನಿಮಾದ ಅಪ್‌ಡೇಟ್ ವಿಷ್ಯವಾಗಿ ಮತ್ತೆ ನ್ಯೂಸ್‌ನಲ್ಲಿದ್ದಾರೆ. ದಳಪತಿ ವಿಜಯ್ (Thalapathy Vijay) ಅವರು ಈಗ ‘ಲಿಯೋ’ (Leo) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಅವರ ಹೊಸ ಸಿನಿಮಾದ ಬಗ್ಗೆಯೂ ಗಾಸಿಪ್ ಹಬ್ಬಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿರುವ ವಿಜಯ್ ಅವರ ಹೊಸ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದು, ಆ ಚಿತ್ರದಲ್ಲಿ ಜ್ಯೋತಿಕಾ (Jyotika) ಕೂಡ ನಟಿಸುತ್ತಾರೆ ಎಂದು ಎನ್ನಲಾಗಿದೆ.

    ಬಹುಭಾಷೆಯ ಸಿನಿಮಾಗಳಲ್ಲಿ ಜ್ಯೋತಿಕಾ ಮಿಂಚಿದ್ದಾರೆ. ತಮಿಳಿನ ಖುಷಿ, ತಿರುಮಲೈ ಸಿನಿಮಾಗಳಲ್ಲಿ ಜ್ಯೋತಿಕಾ ಮತ್ತು ದಳಪತಿ ವಿಜಯ್ ಅವರು ಜೊತೆಯಾಗಿ ನಟಿಸಿದ್ದರು. ಈಗ ಅವರು 2 ದಶಕದ ಬಳಿಕ ತೆರೆಹಂಚಿಕೊಳ್ಳಲಿದ್ದಾರೆ ಎಂಬ ವಿಷಯ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸುದ್ದಿ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಿದೆ. ಈ ಸಿನಿಮಾದಲ್ಲಿ ಜ್ಯೋತಿಕಾ ಅವರು ನಾಯಕಿ ಪಾತ್ರ ಮಾಡುತ್ತಾರೋ ಅಥವಾ ಬೇರೆ ಯಾವುದಾದರೂ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಒಟ್ನಲ್ಲಿ ತಮಿಳಿನ ಹಿಟ್ ಜೋಡಿ ವಿಜಯ್- ಜ್ಯೋತಿಕಾ ಒಟ್ಟಿಗೆ ತೆರೆ ಹಂಚಿಕೊಳ್ತಾರೆ ಎಂದಾಕ್ಷಣ ಫ್ಯಾನ್ಸ್‌ಗೆ ನಿರೀಕ್ಷೆ ಡಬಲ್ ಆಗಿದೆ. ತೆರೆಯ ಮೇಲೆ ಕಾತರದಿಂದ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾ ಜೊತೆಗಿನ ‘ಖುಷಿ’ಯ ಕ್ಷಣ ಹಂಚಿಕೊಂಡ ವಿಜಯ್‌ ದೇವರಕೊಂಡ

    ಸಮಂತಾ ಜೊತೆಗಿನ ‘ಖುಷಿ’ಯ ಕ್ಷಣ ಹಂಚಿಕೊಂಡ ವಿಜಯ್‌ ದೇವರಕೊಂಡ

    ಟಾಲಿವುಡ್ (Tollywood) ನಟ ವಿಜಯ್ ದೇವರಕೊಂಡ- ಸಮಂತಾ ರುತ್ ಪ್ರಭು ಅವರು ‘ಖುಷಿ’ (Kushi) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಸಮಂತಾ- ವಿಜಯ್ ನಡುವೆ ಆಪ್ತತೆ ಹೆಚ್ಚಾಗಿದೆ. ಈ ಕುರಿತ ಫೋಟೋ, ವೀಡಿಯೋ ಎಲ್ಲೆಡೆ ಸದ್ದು ಮಾಡ್ತಿದೆ.

     

    View this post on Instagram

     

    A post shared by Samantha (@samantharuthprabhuoffl)

    ‘ಲೈಗರ್’ (Liger) ಸಿನಿಮಾ ನಂತರ ವಿಜಯ್ ದೇವರಕೊಂಡ (Vijay Devarakonda) ತೆಲುಗಿನ ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ವಿಜಯ್- ಸ್ಯಾಮ್ ಜೊತೆಯಾಗಿ ನಟಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಒಡನಾಟ ಹೇಗಿತ್ತು ಎಂದು ವಿಜಯ್ ರೀಲ್ಸ್ ವೀಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ (Samantha) ಸಿಂಗಲ್ ಆಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾಗಿ ಸಮಂತಾ ಗಮನವೆಲ್ಲಾ ಸಿನಿಮಾಗಳ ಮೇಲಿದೆ. ಸೌತ್- ಬಾಲಿವುಡ್ (Bollywood) ಸಿನಿಮಾಗಳಲ್ಲಿ ಸ್ಯಾಮ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

     

    View this post on Instagram

     

    A post shared by Vijay Deverakonda (@thedeverakonda)

    ‘ಖುಷಿ’ ಸಿನಿಮಾ ಫಸ್ಟ್ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿತ್ತು. ಅಭಿಮಾನಿಗಳಿಂದ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದೆ. ವಿಜಯ್- ಸಮಂತಾ (Samantha) ಖುಷಿಯ ಕ್ಷಣಗಳನ್ನ ನೋಡಿ, ಈ ಪರಿ ಸ್ನೇಹ ಹೆಚ್ಚಾಗಲು ಕಾರಣವೇನು? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

  • ವಿಜಯ್ ದೇವರಕೊಂಡ ಮೇಲೆ ಮುನಿಸಿಕೊಂಡ ಪವನ್ ಕಲ್ಯಾಣ ಫ್ಯಾನ್ಸ್

    ವಿಜಯ್ ದೇವರಕೊಂಡ ಮೇಲೆ ಮುನಿಸಿಕೊಂಡ ಪವನ್ ಕಲ್ಯಾಣ ಫ್ಯಾನ್ಸ್

    ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಚಿತ್ರದ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈಗ ವಿಜಯ್ ನಟನೆಯ `ಖುಷಿ’ ಚಿತ್ರದ ವಿಚಾರವಾಗಿ ಪವನ್ ಕಲ್ಯಾಣ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.

    ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರೋ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಸಿನಿಮಾ ಮೇಲೆ ಪವನ್ ಕಲ್ಯಾಣ್ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ. ವಿಜಯ್ ಅಭಿನಯದ `ಖುಷಿ’ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ.

    ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ಭೂಮಿಕಾ ಜೋಡಿಯಾಗಿ ನಟಿಸಿದ ಚಿತ್ರ `ಖುಷಿ’ ಚಿತ್ರ ಮತ್ತೆ 20 ವರ್ಷಗಳ ನಂತರ ತೆರೆಗೆ ಬರುತ್ತಿದೆ. ಹಳೆಯ ಚಿತ್ರದ ಫೀಲ್ ಅನ್ನು ಈಗೀನ ವಿಜಯ್‌ ನಟನೆಯ ಚಿತ್ರ ಹಾಳು ಮಾಡುತ್ತಿದೆ ಎಂದು ಪವರ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. `ಖುಷಿ’ ಚಿತ್ರದಲ್ಲಿ ಪವನ್ ಮತ್ತು ಭೂಮಿಕಾ ಜೋಡಿ ಫ್ಯಾನ್ಸ್‌ಗೆ ಸಖತ್ ಮೋಡಿ ಮಾಡಿತ್ತು. ಪವನ್ ಕಲ್ಯಾಣ್ ಅಂದ್ರೆ ಖುಷಿ, ಖುಷಿ ಅಂದ್ರೆ ಪವನ್ ಕಲ್ಯಾಣ್ ಹೀಗಿರುವಾಗ ಈ ಚಿತ್ರದ ಟೈಟಲ್ ಅನ್ನು ವಿಜಯ್ ದೇವರಕೊಂಡ ಚಿತ್ರದಲ್ಲಿ ಮರುಬಳಕೆ ಮಾಡಿಕೊಂಡಿರುವುದರ ಬಗ್ಗೆ ಪವನ್ ಕಲ್ಯಾಣ್‌ ಫ್ಯಾನ್ಸ್‌ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

    ಪವನ್ ಕಲ್ಯಾಣ್ ತಿರುಗಿ ಬೀಳುತ್ತಿದ್ದಂತೆ ವಿಜಯ್ ಪರವಾಗಿ ದೇವರಕೊಂಡ ಫ್ಯಾನ್ಸ್ ಮಾತನಾಡಿದ್ದಾರೆ. ಟೈಟಲ್ ಅನ್ನು ಮರುಬಳಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಈ ರೀತಿ ಹಲವು ಬಾರಿ ನಡೆದಿದೆ ಅಂತಾ ನೆಚ್ಚಿನ ನಟನಿಗೆ ಫ್ಯಾನ್ಸ್ ಸಾಥ್ ನೀಡಿದ್ದಾರೆ. ಇನ್ನು ಪವನ್ ಕಲ್ಯಾಣ್ ನಟನೆಯ `ಖುಷಿ’ ಚಿತ್ರದ ಮುಂದೆ ವಿಜಯ್ ನಟನೆಯ `ಖುಷಿ’ ಸಿನಿಮಾ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.