Tag: kushi film

  • ವಧು ವರರಂತೆ ಕಾಣಿಸಿಕೊಂಡ ಸಮಂತಾ- ವಿಜಯ್ ದೇವರಕೊಂಡ

    ವಧು ವರರಂತೆ ಕಾಣಿಸಿಕೊಂಡ ಸಮಂತಾ- ವಿಜಯ್ ದೇವರಕೊಂಡ

    ಟಾಲಿವುಡ್ ನಟಿ ಸಮಂತಾ- ವಿಜಯ್ ದೇವರಕೊಂಡ (Vijay Devarakonda) ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ವಧು- ವರರಂತೆ ಸ್ಯಾಮ್- ವಿಜಯ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ದೇವಸ್ಥಾನದಲ್ಲಿ ಹೋಮ- ಹವನ ಮಾಡಿಸುತ್ತಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಆ್ಯಪಲ್ ಬ್ಯೂಟಿ ಸಮಂತಾ ಸದ್ಯ ‘ಖುಷಿ’ (Kushi Film) ಸಿನಿಮಾದದಲ್ಲಿ ವಿಜಯ್ ಜೊತೆಯಾಗಿ ನಟಿಸುತ್ತಿದ್ದಾರೆ. ಆಗಾಗ ಇಬ್ಬರ ಕ್ಲೋಸಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿರುತ್ತದೆ. ಇದೀಗ ಮತ್ತೆ ಮಧು ಮಕ್ಕಳಂತೆ ಸ್ಯಾಮ್-ವಿಜಯ್ ಕಾಣಿಸಿಕೊಂಡಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಇದೆ ನಂಟು: ತಲೆಕೆಡಿಸಿಕೊಂಡ ಫ್ಯಾನ್ಸ್

    ಸದ್ಯಕ್ಕೆ ‘ಖುಷಿ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇದರ ಅಂಗವಾಗಿ ದೇವಸ್ಥಾನದಲ್ಲಿ ಯಾಗದ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈ ಸೀನ್‌ನಲ್ಲಿ ಸೀರೆಯಲ್ಲಿ ಸಮಂತಾ, ಪಂಚೆಯಲ್ಲಿ ವಿಜಯ್ ದೇವರಕೊಂಡ ನವ ವಿವಾಹಿತ ಜೋಡಿಯಾಗಿ ಕಾಣಿಸಿಕೊಂಡರು. ದೇವಸ್ಥಾನದಲ್ಲಿ ಕುಟುಂಬಸ್ಥರ ಜೊತೆ ವಿಜಯ್-ಸಮಂತಾ ಪೂಜೆ ಮಾಡಿಸಿದ್ದಾರೆ. ಇಬ್ಬರ ವಿಡಿಯೋ ಸದ್ಯ ಸಖತ್ ಸದ್ದು ಮಾಡುತ್ತಿದೆ.

    ‘ಖುಷಿ’ ಸಿನಿಮಾದಲ್ಲಿ ಸಮಂತಾ(Samantha) ಮುಸ್ಲಿಂ ಯುವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಲವರ್ ಬಾಯ್ ಲುಕ್‌ನಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 1ಕ್ಕೆ ‘ಖುಷಿ’ ಸಿನಿಮಾ ತೆರೆಗೆ ಬರಲಿದೆ. ಸ್ಯಾಮ್- ವಿಜಯ್ ಕೆಮಿಸ್ಟ್ರಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಕಾದುನೋಡಬೇಕಿದೆ.

    ಸಮಂತಾ ಅವರು ಸದ್ಯಕ್ಕೆ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಅವರಿಗಿರುವ ಅನಾರೋಗ್ಯ. ಆಟೋಇಮ್ಯೂನ್ ಎನ್ನುವ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಕಳೆದ ವರ್ಷದಿಂದ ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುವಾಗಲೂ ಅವರು ಚಿತ್ರರಂಗದಿಂದ ದೂರವಿದ್ದರು. ಇದೀಗ ಹೆಚ್ಚುವರಿಯಾಗಿ ಮತ್ತೆ ಅವರು ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಈ ಕಾಯಿಲೆಗೆ ಹೆಚ್ಚು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಸಮಂತಾ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾರನ್ನು ಫೇವರೇಟ್ ಗರ್ಲ್ ಎಂದ ‘ಲೈಗರ್’ ಹೀರೋ

    ಸಮಂತಾರನ್ನು ಫೇವರೇಟ್ ಗರ್ಲ್ ಎಂದ ‘ಲೈಗರ್’ ಹೀರೋ

    ಸೌತ್ ಬ್ಯೂಟಿ ಸಮಂತಾ ಸದ್ಯ ‘ಖುಷಿ’ (Kushi Film) ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಜೊತೆ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ಸದ್ಯ ವಿಜಯ್ ಜೊತೆಗಿನ ಚೆಂದದ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಸ್ಯಾಮ್- ವಿಜಯ್ (Vijay) ಕ್ಲೋಸ್ ಅಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಸಮಂತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ‘ಖುಷಿ’ ಅರ್ಧಕ್ಕೆ ನಿಂತಿತ್ತು. ಈಗ ಸಮಂತಾ ಗುಣಮುಖರಾಗಿ ಮತ್ತೆ ನಟನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ಮತ್ತೆ ಶೂಟಿಂಗ್ ಶುರುವಾಗಿದೆ. ವಿಜಯ್- ಸಮಂತಾ ಇಬ್ಬರೂ ಎಂಜಾಯ್ ಮಾಡಿಕೊಂಡು ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಇದನ್ನೂ ಓದಿ:ನೀನು ಮುಸ್ಲಿಂ ಸಮುದಾಯಕ್ಕೆ ಕಳಂಕ ಎಂದವರಿಗೆ ನಟಿ ಸಾರಾ ಹೇಳಿದ್ದೇನು?

    ಸಮಂತಾ (Samantha), ವಿಜಯ್ ದೇವರಕೊಂಡ ಇಬ್ಬರೂ ಟರ್ಕಿಯಲ್ಲಿದ್ದಾರೆ. ‘ಖುಷಿ’ ಸಿನಿಮಾದ ಶೂಟಿಂಗ್‌ಗಾಗಿ ಅಲ್ಲಿಗೆ ಹೋಗಿದ್ದು, ಇಬ್ಬರೂ ಅಲ್ಲಿನ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಸಮಂತಾ ಇಬ್ಬರೂ ಜೊತೆಗಿದ್ದ ಒಂದು ಫೋಟೊವನ್ನು ಶೇರ್ ಮಾಡಿದ್ದರು. ಅಲ್ಲದೆ, ಸ್ನೇಹಿತರು ನಿಮ್ಮ ಕೆಟ್ಟ ಗಳಿಗೆಯನ್ನು ಕಂಡಿದ್ದಾರೆ. ಒಳ್ಳೆಯ ಗಳಿಗೆಯನ್ನೂ ಕಂಡಿದ್ದಾರೆ. ನಿಮ್ಮ ಜೀವನದ ಏಳು-ಬೀಳುಗಳನ್ನು ಗಮನಿಸಿದ್ದಾರೆ. ನೀವು ಮುಂದೆ ಬರುವುದನ್ನು ನೋಡಿದ್ದಾರೆ. ನೀವು ಹಿಂದೆ ಇರುವುದನ್ನೂ ಗಮನಿಸಿದ್ದಾರೆ. ಸ್ನೇಹಿತರು ಸದಾ ನಿಮ್ಮ ಜೊತೆಗೆ ಇರುತ್ತಾರೆ. ಇದು ಎಂತಹ ಅದ್ಭುತ ವರ್ಷ ಎಂದು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಸ್ಯಾಮ್ ಪೋಸ್ಟ್‌ಗೆ, ‘ಫೇವರೇಟ್ ಹುಡುಗಿ’ ಎಂದು ವಿಜಯ್ ರಿಯಾಕ್ಟ್ ಮಾಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಈಗಾಗಲೇ ಸಿನಿಮಾದ ಪೋಸ್ಟರ್ ಲುಕ್, ಸಾಂಗ್ಸ್ ಕಮಾಲ್ ಮಾಡುತ್ತಿದೆ. ವಿಜಯ್, ಸಮಂತಾ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆ ಮೂಡಿ ಬಂದಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ಸಮಂತಾ-ವಿಜಯ್‌ ದೇವರಕೊಂಡ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್

    ಸಮಂತಾ-ವಿಜಯ್‌ ದೇವರಕೊಂಡ ಚಿತ್ರಕ್ಕೆ ರಿಲೀಸ್ ಡೇಟ್ ಫಿಕ್ಸ್

    ಟ ವಿಜಯ್ ದೇವರಕೊಂಡ (Vijay Devarakonda) ಮತ್ತು ಸಮಂತಾ (Samantha) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ವಿಜಯ್- ಸಮಂತಾ ರೊಮ್ಯಾನ್ಸ್ ಅನ್ನು ತೆರೆಯ ಮೇಲೆ ನೋಡಲು ಡೇಟ್ ಫಿಕ್ಸ್ ಆಗಿದೆ.

    `ಲೈಗರ್’ ಚಿತ್ರದ ಸೋಲಿನಿಂದ ಕೆಂಗೆಟ್ಟಿರುವ ವಿಜಯ್ ದೇವರಕೊಂಡಗೆ ಸೌತ್‌ನ ಸಕ್ಸಸ್‌ಫುಲ್ ನಟಿ ಸಮಂತಾ ಇದೀಗ ಸಾಥ್ ನೀಡಿದ್ದಾರೆ. ಖುಷಿ ಸಿನಿಮಾದ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಹಿಂದೆ `ಮಹಾನಟಿ’ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ದರು. ಇದೀಗ ʻಖುಷಿ’ (Kushi) ಎಂಬ ಚೆಂದದ ಲವ್‌ಸ್ಟೋರಿ ಹೇಳಲು ಬರುತ್ತಿದ್ದಾರೆ. ಇದನ್ನೂ ಓದಿ: Biffes 2023- ಇಂದು ಸಂಜೆ 4.30ಕ್ಕೆ ಬೆಂಗಳೂರು ಚಿತ್ರೋತ್ಸವಕ್ಕೆ ಚಾಲನೆ

    ಶಿವ ನಿರ್ವಾಣ ನಿರ್ದೇಶನದ ಖುಷಿ ಸಿನಿಮಾದಲ್ಲಿ ಸಮಂತಾ- ವಿಜಯ್ ದಂಪತಿಗಳಾಗಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಸೆಪ್ಟೆಂಬರ್ 1ರಂದು Kushi ಸಿನಿಮಾ ತೆರೆ ಕಾಣುತ್ತಿದೆ. ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ಬಹುಭಾಷೆಗಳಲ್ಲಿ ಬ್ಯುಸಿಯಿರುವ ಸಮಂತಾ- ವಿಜಯ್ ಜೋಡಿ ಈ ಬಾರಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಚಿತ್ರೀಕರಣಕ್ಕೆ ಮರಳಿದ ಸಮಂತಾಗೆ ಅದ್ದೂರಿಯಾಗಿ ಸ್ವಾಗತಿಸಿದ `ಖುಷಿ’ ಟೀಂ

    ಚಿತ್ರೀಕರಣಕ್ಕೆ ಮರಳಿದ ಸಮಂತಾಗೆ ಅದ್ದೂರಿಯಾಗಿ ಸ್ವಾಗತಿಸಿದ `ಖುಷಿ’ ಟೀಂ

    ಸೌತ್ ಬ್ಯೂಟಿ ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆಯಿಂದ ಬಳುತ್ತಿದ್ದರು. ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್ ನಟಿ ಮರಳಿದ್ದಾರೆ. ಖುಷಿ ಚಿತ್ರತಂಡವನ್ನ ಸಮಂತಾ ಸೇರಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ (Shooting) ಮರಳಿರುವ ಸ್ಯಾಮ್‌ಗೆ `ಖುಷಿ’ (Kushi Film) ಚಿತ್ರತಂಡ ಅದ್ದೂರಿಯಾಗಿ ಸ್ವಾಗತಿಸಿದೆ.

     

    View this post on Instagram

     

    A post shared by Samantha (@samantharuthprabhuoffl)

    ವಿಜಯ್ ದೇವರಕೊಂಡ (Vijay Devarakonda) & ಸಮಂತಾ ನಟನೆಯ `ಖುಷಿ’ (Kushi) ಸಿನಿಮಾ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಮಾ.8ರಿಂದ ಖುಷಿ ಚಿತ್ರದ ಶೂಟಿಂಗ್ ಶೆಡ್ಯೂಲ್ ಮತ್ತೆ ಶುರುವಾಗಿದೆ. ಹಲವು ದಿನದ ನಂತರ ಸಮಂತಾ ತನ್ನ ತಂಡವನ್ನು ಸೇರಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯನ್ನು (Women’s Day) ಟೀಂ ಆಚರಿಸಿದೆ. ಇದನ್ನೂ ಓದಿ: ಬಾಲಿವುಡ್ ಖ್ಯಾತ ನಟ, ನಿರ್ದೇಶಕ ಸತೀಶ್ ಕೌಶಿಕ್ ನಿಧನ

    ಸಮಂತಾ ಚಿತ್ರರಂಗಕ್ಕೆ ಬಂದು 13 ವರ್ಷಗಳಾಗಿದೆ. ಹಾಗಾಗಿ ಮಹಿಳಾ ದಿನಾಚರಣೆಯಂದು (ಮಾ.8) ಸಮಂತಾಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಅದ್ದೂರಿಯಾಗಿ ಸ್ವಾಗತಿಸಿ, ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಲಾಗಿದೆ. ಸಮಂತಾರನ್ನ ಖುಷಿಯಿಂದ ಸ್ವಾಗತಿಸಿದ್ದಾರೆ. ಈ ವೇಳೆ ವಿಜಯ್ ದೇವರಕೊಂಡ, ನಿರ್ದೇಶಕರು ಸೇರಿದಂತೆ ಹಲವು ಭಾಗಿಯಾಗಿದ್ದರು.

     

    View this post on Instagram

     

    A post shared by Mythri Movie Makers (@mythriofficial)

    ವಿಜಯ್- ಸಮಂತಾ ನಟನೆಯ `ಖುಷಿ’ ಚಿತ್ರ ಈ ವರ್ಷ ಡಿಸೆಂಬರ್ 23ರಂದು ತೆರೆಗೆ ಬರಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.