ಸೌತ್ ನಟಿ ಸಮಂತಾ (Samantha) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಹೋದರ ಮದುವೆಯಲ್ಲಿ (Wedding) ನಟಿ ಮಿರ ಮಿರ ಅಂತ ಮಿಂಚಿದ್ದಾರೆ. ಮದುವೆ ಸಡಗರದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

ಸಮಂತಾ ಅಣ್ಣ ಡೇವಿಡ್ ಪ್ರಭು (David Prabhu) ಫಾರಿನ್‌ನಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. ನೇರಳೆ ಬಣ್ಣದ ಗೌನ್ ಧರಿಸಿ ನಟಿ ಕಂಗೊಳಿಸಿದ್ದಾರೆ. ಹೂಗುಚ್ಛ ಹಿಡಿದು ನಟಿ ಮಿಂಚಿದ್ದಾರೆ.
View this post on Instagram
ನಟಿಗೆ ಇಬ್ಬರೂ ಸಹೋದರರು ಇದ್ದಾರೆ. ಅದರಲ್ಲಿ ಅಣ್ಣ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ನಗರದ ಗ್ರೇಟ್ ಲೇಕ್ ಬಳಿ ನಿಖೊಲೆ ಅವರನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ ವೈಯಕ್ತಿಕ: ಡಾ.ರಾಜ್ ನೆನಪಿಸಿಕೊಂಡ ಗುರುಕಿರಣ್
ಅಂದಹಾಗೆ, ಆದಿತ್ಯಾ ರಾಯ್ ಕಪೂರ್ ಜೊತೆ ಸಮಂತಾ ಹೊಸ ಬಾಲಿವುಡ್ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡಿದ್ದಾರೆ.





ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಇರೋ ಸಮಂತಾ ಅಲ್ಲಿಂದಲೇ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮಾಡದಿದ್ದರೂ ಇನ್ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಕೃಪೆಯಿಂದ ಹಣ ದುಡಿಯುತ್ತಿದ್ದಾರೆ. ಫೋಟೋಶೂಟ್, ಜಾಹೀರಾತಿನಿಂದಾಗಿ ಹಣ ಗಳಿಸುತ್ತಾರೆ. ಇತ್ತೀಚೆಗೆ ತಮ್ಮದೇ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹೊಸದೊಂದು ವೀಡಿಯೋ ಹಾಕಿರುವ ಸಮಂತಾ ಅದರಲ್ಲಿ ಲಿವರ್ ಡೀಟಾಕ್ಸಿಂಗ್ ಬಗ್ಗೆ ಮಾತನಾಡಿದ್ದಾರೆ.
ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ (Pushpa) ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.





‘ಖುಷಿ’ ಸಿನಿಮಾ ಐದು ದಿನಗಳ ಹಿಂದೆ ದೇಶ ವಿದೇಶದಲ್ಲಿ ತೆರೆ ಕಂಡಿತ್ತು. ವಿಜಯ್(Vijay Devarakonda)- ಸಮಂತಾ ಜೋಡಿ ಪಕ್ಕಾ ಕ್ಲಿಕ್ ಆಗುತ್ತದೆ. ಇದನ್ನೇ ಎಲ್ಲರೂ ನಂಬಿದ್ದರು. ಸಮಂತಾ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಹೋಗಿದ್ದರು. ಅಲ್ಲೂ ಪ್ರಚಾರ ಮಾಡಿದರು. ಇಲ್ಲಿ ದೇವರಕೊಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಿದರು. ಹಾಡು, ಟ್ರೈಲರ್ ಎಲ್ಲಾ ಮೋಡಿ ಮಾಡಿತು. ಸಿನಿಮಾ ತೆರೆ ಕಂಡ ದಿನ ಮೂವತ್ತು ಕೋಟಿ ಬಾಚಿತು. ಈಗ ಎಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆಯಿತು. ಗೆದ್ದೇ ಬಿಟ್ಟಿದ್ದರು. ಸೋಮವಾರ (ಸೆ.4) ಮಕಾಡೆ ಮಲಗಿತಲ್ಲ. ಚಿತ್ರದ ಕಲೆಕ್ಷನ್ ಈಗ ಕೊಂಚ ಡಲ್ ಆಗಿದೆ. ಇದನ್ನೂ ಓದಿ:









