Tag: kushee ravi

  • ಪ್ರಣಂ ದೇವರಾಜ್ ನಟಿಸಿರುವ `ಸನ್ ಆಫ್ ಮುತ್ತಣ್ಣ’ ರಿಲೀಸ್ ಡೇಟ್ ಫಿಕ್ಸ್

    ಪ್ರಣಂ ದೇವರಾಜ್ ನಟಿಸಿರುವ `ಸನ್ ಆಫ್ ಮುತ್ತಣ್ಣ’ ರಿಲೀಸ್ ಡೇಟ್ ಫಿಕ್ಸ್

    ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ (Pranam Devaraj) ನಾಯಕನಾಗಿ ನಟಿಸಿರುವ `S\O ಮುತ್ತಣ್ಣ’ ಚಿತ್ರ (Son of Muthanna Movie) ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಚಿತ್ರದ ಕಮಂಗಿ ನನ್ನ ಮಗನೆ ಹಾಡು ಈಗಾಗಲೇ ಜನಮನ ಗೆದ್ದಿದೆ. ಟೀಸರ್ ಕೂಡ ಮೆಚ್ಚುಗೆ ಪಡೆದಿದೆ. ಬಹು ನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಆ ಕಾತುರಕ್ಕೆ ಈಗ ತೆರೆ ಬಿದ್ದಿದೆ.

    “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಪ್ರತಿಷ್ಠಿತ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಆಗಸ್ಟ್ ಮೊದಲವಾರದಲ್ಲಿ ಚಿತ್ರವನ್ನು ಅಮೆರಿಕ ಹಾಗೂ ದುಬೈನಲ್ಲಿ ಬಿಡುಗಡೆ ಮಾಡುವ ಸಿದ್ದತೆಯನ್ನು ಚಿತ್ರತಂಡ ನಡೆಸಿದೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ಅಪ್ಪ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು (Rangayana Ragu) ಹಾಗೂ ಪ್ರಣಂ ದೇವರಾಜ್ ತಂದೆ – ಮಗನಾಗಿ ಅಭಿನಯಿಸದ್ದಾರೆ. ಅಪ್ಪ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಲಿದೆ. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್‌ಆರ್‌ಕೆ ಫಿಲಂಸ್ ಸಾಥ್ ನೀಡಿದೆ. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ. ಇದನ್ನೂ ಓದಿ: ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ

  • 100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್

    100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್

    ದಾ ಹೊಸತನ ಮೂಲಕ ದಾಖಲೆ ಬರೆಯುವ ಜೀ ಕನ್ನಡ ಮೊದಲ ಬಾರಿಗೆ zee5 ಒಟಿಟಿಯಲ್ಲಿ ಬಿಡುಗಡೆ ಮಾಡಿರುವ ‘ಅಯ್ಯನ ಮನೆ’ (Ayyana Mane) ವೆಬ್ ಸರಣಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಕಳೆದ ತಿಂಗಳ 25ರಂದು zee5ನಲ್ಲಿ ಸ್ಟ್ರೀಮಿಂಗ್ ಕಂಡ ‘ಅಯ್ಯನ ಮನೆ’ ಮಿನಿ ವೆಬ್ ಸಿರೀಸ್ ಈಗ ದಾಖಲೆ ಬರೆದಿದೆ. ಜಾಜಿಯ ರೋಚಕ ಕಥೆಯ ಈ ವೆಬ್ ಸರಣಿ ಬರೋಬ್ಬರಿ 100 ಮಿಲಿಯನ್ ಮಿನಿಟ್ ವೀಕ್ಷಣೆ ಕಂಡಿದೆ. ಇದನ್ನೂ ಓದಿ:ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    7 ಸಂಚಿಕೆಗಳನ್ನು ಒಳಗೊಂಡಿರುವ ‘ಅಯ್ಯನ ಮನೆ’ ವೆಬ್ ಸರಣಿಯಲ್ಲಿ ‘ದಿಯಾ’ ಸಿನಿಮಾ ನಟಿ ಖುಷಿ ರವಿ (Kushi Ravi) ಜಾಜಿ ಪಾತ್ರದಲ್ಲಿ ನಟಿಸಿದ್ದಾರೆ. ‘ಒಲವಿನ ನಿಲ್ದಾಣ’ ಸೀರಿಯಲ್‌ನ ನಾಯಕ ನಟ ಅಕ್ಷಯ್ ನಾಯಕ್, ಹಾಗೂ ಕಾಂತಾರ ನಟಿ ಮಾನಸಿ ಸುಧೀರ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜಾಜಿಯನ್ನು ಅವರ ಪತಿ ಜಾಜಿಯನ್ನು ಅತೀಯಾಗಿ ಪ್ರೀತಿಸುತ್ತಾನೆ. ಜಾಜಿ ಕೂಡ ಸಂಪ್ರದಾಯಿಕ ಹುಡುಗಿಯಾಗಿದ್ದು, ಇವಳ ಭಾವನಾತ್ಮಕ ಪಯಣ ಹಾಗೂ ಮನೆಯಲ್ಲಿನ ರಹಸ್ಯಗಳನ್ನು ಬಯಲು ಮಾಡುತ್ತಾ? ಇಲ್ಲವೇ ಇವಳೇ ರಹಸ್ಯವಾಗಿರುತ್ತಾಳಾ ಎಂಬ ಕುತೂಹಲಗಳಿವೆ. ಇದನ್ನೂ ಓದಿ:ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

    ‘ಅಯ್ಯನ ಮನೆ’ ವೆಬ್ ಸೀರೀಸ್ ಅನ್ನು ನಿರ್ದೇಶಕ ರಮೇಶ್ ಇಂದಿರಾ (Ramesh Indira) ಅವರು ನಿರ್ದೇಶಿಸಿದ್ದಾರೆ. ಈ ವೆಬ್ ಸಿರೀಸ್‌ನಲ್ಲಿ ರಮೇಶ್ ಇಂದಿರಾ, ಶೋಭರಾಜ್ ಪಾವೂರ್, ಅನಘಾ ನಾಗೇಶ್, ರಮ್ಯಾ ಶಂಕರ್, ಗೌರಿ ಕೃಷ್ಣ, ವಿಜಯ್ ಶೋಭರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಶೃತಿ ನಾಯ್ಡು ಅವರು ವೆಬ್ ಸರಣಿಗೆ ಬಂಡವಾಳ ಹೂಡಿದ್ದಾರೆ.

  • ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

    ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

    ದಾ ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುವ ‘ದಿಯಾ’ (Dia) ಖ್ಯಾತಿಯ ಖುಷಿ ರವಿ (Kushee Ravi) ಕನ್ನಡ ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಿನಿ ವೆಬ್ ಸಿರೀಸ್ ಕಥೆ ಹೇಳಲು ರೆಡಿಯಾಗಿದ್ದಾರೆ. ನಟಿ ಖುಷಿಗೆ ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ರಮೇಶ್ ಇಂದಿರಾ (Ramesh Indira) ಆ್ಯಕ್ಷನ್ ಕಟ್ ಹೇಳಿದ್ದಾರೆ. ʻಲವ್ ಯೂ ಮನುʼ ಎನ್ನುತ್ತ ಭಯ ಹುಟ್ಟಿಸಿದ್ದ ರಮೇಶ್ ಮತ್ತೆ ನಿರ್ದೇಶನದ ಕ್ಯಾಪ್ ಧರಿಸಿದ್ದಾರೆ.

    ವೆಬ್ ಸೀರೀಸ್‌ಗೆ ‘ಅಯ್ಯನ ಮನೆ’ ಎಂದು ಕ್ಯಾಚಿ ಟೈಟಲ್ ಇಡಲಾಗಿದೆ. ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಎಷ್ಟೋ ಮುಚ್ಚಿಟ್ಟ ವಿಷಯಗಳು ಇರುತ್ತವೆ ಅನ್ನೋದನ್ನು ಈ ಮಿನಿ ಸೀರೀಸ್ ಮೂಲಕ ರಮೇಶ್ ಇಂದಿರಾ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ರಮೇಶ್ ಇಂದಿರಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಅಯ್ಯನ ಮನೆ’ ವೆಬ್ ಸೀರೀಸ್‌ಗೆ ಶೃತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಏಳು ಎಪಿಸೋಡ್ ಹೊಂದಿರುವ ವೆಬ್ ಸೀರೀಸ್‌ನಲ್ಲಿ ಖುಷಿ ರವಿ, ಅಕ್ಷಯ್ ನಾಯಕ್, ಮಾನಸಿ ಸುಧೀರ್ ಅಭಿನಯಿಸಿದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಘರ್ಷಿಸುವ ಕಥೆಯನ್ನೊಳಗೊಂಡಿದ್ದು, ಇದೇ ತಿಂಗಳ 25ರಿಂದ ಜೀ5 ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಚಿಕ್ಕಮಗಳೂರಿನ ಅಯ್ಯನ ಮನೆ ಕುಟುಂಬದಲ್ಲಿ ಅಡಗಿರುವ ಸತ್ಯಗಳ ಸುತ್ತಕಥೆ ಸಾಗುತ್ತದೆ. ಇದೊಂದು ಮಿಸ್ಟ್ರಿ ಕಥೆಯೊಳಗೊಂಡಿದ್ದು, ಪ್ರೇಕ್ಷಕರನ್ನು ಪ್ರತಿ ಕ್ಷಣ ಎಕ್ಸೈಟ್ ಆಗುವಂತೆ ಮಾಡುತ್ತದೆ. ಈಗಾಗಲೇ ಹಲವು ಹಿಟ್ ಚಿತ್ರ ಕೊಟ್ಟುರುವ ರಮೇಶ್ ಇಂದಿರಾ ಹೊಸ ಬಗೆಯ ಕಥೆಯ ಮೂಲಕ ಒಟಿಟಿ ಪ್ರೇಕ್ಷಕರನ್ನು ತಲುಪಲಿದ್ದಾರೆ. ಇದನ್ನೂ ಓದಿ:ತಮಿಳಿನತ್ತ ಕನ್ನಡದ ನಟ- ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ರಮೇಶ್ ಇಂದಿರಾ

    ‘ಅಯ್ಯನ ಮನೆ’ ವೆಬ್ ಸೀರೀಸ್ ಬಗ್ಗೆ ನಿರ್ದೇಶಕರಾದ ರಮೇಶ್ ಇಂದಿರಾ ಮಾತನಾಡಿ, ಅಯ್ಯನ ಮನೆ ರೋಚಕತೆ ಜೊತೆಗೆ ಭಯ, ನಂಬಿಕೆ ಮತ್ತು ಫ್ಯಾಮಿಲಿ ಕಥೆಯೊನ್ನೊಳಗೊಂಡಿದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯದವನ್ನು ಅನಾವರಣ ಮಾಡುತ್ತದೆ. ಅಯ್ಯನ ಮನೆ ವೆಬ್ ಸರಣಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರುವಂತೆ ಮಾಡುತ್ತದೆ ಎಂದರು.

    ಜಾಜಿ ಪಾತ್ರ ಮಾಡಿರುವ ಖುಷಿ ರವಿ ಮಾತನಾಡಿ, ಮುಗ್ದತೆ, ಗಂಡನ ಪ್ರೀತಿಯ ಹೆಂಡತಿ, ಸಂಪ್ರದಾಯಕ್ಕೆ ನಡೆದುಕೊಳ್ಳುವ ಹೆಣ್ಣು ಮಗಳಾಗಿ ನಟಿಸಿದ್ದೇನೆ. ಇದೊಂದು ಎಮೋಷನ್ ಪಯಣ. ಜೊತೆಗೆ ಅನೇಕ ರಹಸ್ಯಗಳ ಕಥಾಹಂದರ. ನಾನು ವೆಬ್ ಸರಣಿ ನೋಡಲು ಕಾತರಳಾಗಿದ್ದೇನೆ ಎಂದು ತಿಳಿಸಿದ್ದಾರೆ.

  • ದುಬೈನಲ್ಲಿ ನಮ್ರತಾ, ದಿವ್ಯಾ ಉರುಡುಗ, ಖುಷಿ ಜಾಲಿ ವೆಕೇಷನ್

    ದುಬೈನಲ್ಲಿ ನಮ್ರತಾ, ದಿವ್ಯಾ ಉರುಡುಗ, ಖುಷಿ ಜಾಲಿ ವೆಕೇಷನ್

    ಸ್ಯಾಂಡಲ್‌ವುಡ್ ನಟಿಯರಾದ ನಮ್ರತಾ ಗೌಡ, ಖುಷಿ ರವಿ, ದಿವ್ಯಾ ಉರುಡುಗ (Divya Uruduga) ದುಬೈನಲ್ಲಿ ವೆಕೇಷನ್ ಮೂಡ್‌ನಲ್ಲಿದ್ದಾರೆ. ಸುಂದರ ಜಾಗಗಳಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಿ ಮೊಮ್ಮಗನ ಜೊತೆ ಸುಹಾನಾ ಖಾನ್‌ ಫೋಟೋ ವೈರಲ್- ಡೇಟಿಂಗ್‌ ಬಗ್ಗೆ ಶುರುವಾಯ್ತು ಚರ್ಚೆ

    ಸೂರ್ಯನ ಕಿರಣಕ್ಕೆ ಮೈಯೊಡ್ಡಿ ನಮ್ರತಾ(Namratha Gowda), ಖುಷಿ (Kushee Ravi), ದಿವ್ಯಾ ನಿಂತಿರುವ ಫೋಟೋಗಳನ್ನು ನಮ್ರತಾ ಶೇರ್ ಮಾಡಿದ್ದಾರೆ. ದುಬೈನ ಮರುಳುಗಾಡಿನಲ್ಲಿ ಸೇರಿದಂತೆ ಹಲವು ಜಾಗಗಳಿಗೆ ಅವರು ಭೇಟಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ವಿಭಿನ್ನ ಎನಿಸುವಂತಹ ತಿನಿಸುಗಳನ್ನು ಟೆಸ್ಟ್ ಮಾಡಿದ್ದಾರೆ.

    ಅಂದಹಾಗೆ, ಕೆಲಸಕ್ಕೆ ಬ್ರೇಕ್ ನೀಡಿ ದುಬೈಗೆ ಹೋಗಿದ್ದಕ್ಕೆ ಕಾರಣವಿದೆ. ಅದವೇ ರಾಜ್ ಕಪ್ ಕ್ರಿಕೆಟ್ ಟೂರ್ನ್‌ಮೆಂಟ್‌ಗಾಗಿ ನಟಿಯರು ತೆರಳಿದ್ದಾರೆ. ಸದ್ಯ ದಿವ್ಯಾ ಉರುಡುಗ (Divya Uruduga) ‘ನಿನಗಾಗಿ’ ಸೀರಿಯಲ್ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ.

    ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ 10’ ಆದ್ಮೇಲೆ ಹಲವು ಶೋ ಮತ್ತು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮಾಡಲು ಉತ್ತಮ ಕಥೆಗಾಗಿ ಎದುರು ನೋಡ್ತಿದ್ದಾರೆ.ಖುಷಿ ರವಿ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರಗಳ ಜೊತೆ ತೆಲುಗಿನಲ್ಲೂ ಖುಷಿಗೆ ಬೇಡಿಕೆಯಿದೆ.

  • ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಸ್ಯಾಂಡಲ್‌ವುಡ್ ನಟಿಯರಾದ ದಿವ್ಯಾ ಉರುಡುಗ (Divya Uruduga), ಖುಷಿ ರವಿ (Ravi Kushee), ನಮ್ರತಾ ಗೌಡ ದುಬೈಗೆ ಹಾರಿದ್ದಾರೆ. ಅಲ್ಲಿನ ಸುಂದರ ಸ್ಥಳಗಳಿಗೆ ಭೇಟಿ ನೀಡಿರುವ ಕಲರ್‌ಫುಲ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ? ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಏನಿದೆ?

     

    View this post on Instagram

     

    A post shared by DU✨ (@divya_uruduga)

    ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ ದುಬೈನಲ್ಲಿದ್ದಾರೆ. ಅವರೊಂದಿಗೆ ಖುಷಿ ರವಿ, ನಮ್ರತಾ (Namratha Gowda) ಸಾಥ್ ನೀಡಿದ್ದಾರೆ. ಮರಳಿನಲ್ಲಿ ಬಳಸುವ ಸ್ಯಾಂಡ್ ಮೋಟರ್ ಬೈಕ್ ಅನ್ನು ಏರಿ ಖುಷಿ, ದಿವ್ಯಾ ರೌಂಡ್ ಹೊಡೆದಿದ್ದಾರೆ.

     

    View this post on Instagram

     

    A post shared by Kushee Ravi (@iamkusheeraviofficial)

    ಅದಷ್ಟೇ ಅಲ್ಲ, ಸಾಕಿರುವ ರಣಹದ್ದನ್ನು ಕೈಯಲ್ಲಿ ಹಿಡಿದು ನಟಿಯರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ದಿವ್ಯಾ, ನಮ್ರತಾ, ಖುಷಿ ರಣಹದ್ದನ್ನು ಹಿಡಿದು ಖುಷಿಪಟ್ಟಿದ್ದಾರೆ.

    ಅಂದಹಾಗೆ, ಕೆಲಸಕ್ಕೆ ಬ್ರೇಕ್ ನೀಡಿ ದುಬೈಗೆ ಹೋಗಿದ್ದಕ್ಕೆ ಕಾರಣವಿದೆ. ಅದವೇ ರಾಜ್ ಕಪ್ ಕ್ರಿಕೆಟ್ ಟೂರ್ನ್ಮೆಂಟ್‌ಗಾಗಿ ನಟಿಯರು ತೆರಳಿದ್ದಾರೆ. ಸದ್ಯ ದಿವ್ಯಾ ಉರುಡುಗ ‘ನಿನಗಾಗಿ’ (Ninagai)  ಸೀರಿಯಲ್ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ.

    ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ 10’ ಆದ್ಮೇಲೆ ಹಲವು ಶೋ ಮತ್ತು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮಾಡಲು ಉತ್ತಮ ಕಥೆಗಾಗಿ ಎದುರು ನೋಡ್ತಿದ್ದಾರೆ.


    ‘ದಿಯಾ’ (Dia) ಖ್ಯಾತಿಯ ಖುಷಿ ರವಿ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಚಿತ್ರಗಳ ಜೊತೆ ತೆಲುಗಿನಲ್ಲೂ ಖುಷಿಗೆ ಬೇಡಿಕೆಯಿದೆ.

  • ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

    ‘S/O ಮುತ್ತಣ್ಣ’ ಚಿತ್ರದ ಟೀಸರ್ ರಿಲೀಸ್- ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

    ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲು ಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ ‘S/O ಮುತ್ತಣ್ಣ’. ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘S/O ಮುತ್ತಣ್ಣ’ನಿಗೆ (S/o Muttanna) ಸಾಥ್ ಕೊಟ್ಟಿದ್ದಾರೆ.

    ಪ್ರಣಂ ನಟನೆಯ ಸಿನಿಮಾದ ಟೀಸರ್‌ ಬಿಡುಗಡೆ ಬಳಿಕ ಮಾತನಾಡಿ ಡಾ.ಶಿವರಾಜ್ ಕುಮಾರ್, ದೇವರಾಜ್ ಅವರ ಫ್ಯಾಮಿಲಿ ಎಂದರೆ ನಮಗೆ ಅಭಿಮಾನ, ಪ್ರೀತಿ, ವಿಶ್ವಾಸ. ಟೀಸರ್ ನೋಡಿ ಖುಷಿಯಾಯ್ತು. ತಂದೆ- ಮಗನ ಬಾಂಧವ್ಯ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅಪ್ಪಾಜಿ ಜೊತೆ ನನ್ನ ಹಳೆ ನೆನಪುಗಳನ್ನು ನೋಡಿ ಖುಷಿಯಾಯ್ತು, ತಂದೆ ಮಗನ ಬಾಂಧವ್ಯದ ಸಿನಿಮಾ ಚೆನ್ನಾಗಿ ಹೋಗುತ್ತದೆ ಎಂಬ ಭರವಸೆ ಇದೆ. ಈ ಟೀಸರ್ ಸಮಾರಂಭದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ದೇವರಾಜ್ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ. ಕನ್ನಡ ಇಂಡಸ್ಟ್ರಿಗೆ ಯಾರೇ ಆಗಲಿ ಸಪೋರ್ಟ್ ಮಾಡುತ್ತೇವೆ. ಯಾರೇ ಆಗಲಿ ನಮ್ಮ ಭಾಷೆ ಉಳಿಬೇಕು ಅಂದರೆ ಯಾವ ಹೀರೋ ನಟಿಸಿದರೂ ಆ ಸಿನಿಮಾಗಳು ಗೆಲ್ಲಬೇಕು ಎಂದರು.

    ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮುತ್ತಣ್ಣ ಟೈಟಲ್ ಯಾಕೆ ಇಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಾಗಿರಬೇಕು. ಒರಿಜನಲ್ ಮುತ್ತಣ್ಣನೇ ಬಂದಿದ್ದಾರೆ. ಪುರಾತನ ಫಿಲ್ಮಂಸ್ ಹರಿಯಣ್ಣ ಶಿವಣ್ಣನಿಗೆ (Shivarajkumar) ದೊಡ್ಡ ಅಭಿಮಾನಿ. ಶಿವಣ್ಣನೇ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದು ಎಲ್ಲರ ಕನಸಾಗಿತ್ತು. ಯಂಗ್ ಡೈನಾಮಿಕ್ ಪ್ರಣಂಗೆ ಒಳ್ಳೆದಾಗಲಿ. ಇವರು ಬೆಳೆಯಬೇಕು, ಉಳಿಯಬೇಕು, ತಂದೆ- ತಾಯಿಯಂತೆಯೇ ಹೆಸರನ್ನು ಗಳಿಸಬೇಕು ಎನ್ನುವುದು ಯಾವುದೇ ಕಲಾವಿದರ ಮಕ್ಕಳಿಗಿರುವ ಆಸೆ. ಅದನ್ನು ಪ್ರಜ್ವಲ್ ಹಾಗೂ ಪ್ರಣಂ ಇಬ್ಬರಲ್ಲಿಯೂ ಇದೆ. ಪ್ರಣಂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದರು.

    ನಾಯಕ ಪ್ರಣಂ ದೇವರಾಜ್ (Pranam Devaraj) ಮಾತನಾಡಿ, ರಿಯಲ್ ಸನ್ ಆಫ್ ಮುತ್ತಣ್ಣ, ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ಮಾಡಿ ಕೊಟ್ಟಿರೋದು ಖುಷಿ ಕೊಟ್ಟಿದೆ. ನಾವೆಲ್ಲರೂ ಶಿವಣ್ಣನ ಅಭಿಮಾನಿ. ನಿಮ್ಮನ್ನು ನೋಡಿಕೊಂಡು ಬೆಳೆದಿರುವುದು. ನಿಮ್ಮ ಡ್ಯಾನ್ಸ್, ನಟನೆ, ಆಕ್ಷನ್ ಎಲ್ಲದಕ್ಕೂ ಅಭಿಮಾನಿ. ನಾನು ಸಾಕಷ್ಟು ಚಿಕ್ಕವನು ಅವರ ಬಗ್ಗೆ ಮಾತಾನಾಡಲು. ಮುಂದೆ ಬರುವ ಜನರೇಷನ್ ಗೆ ನೀವೇ ಸ್ಫೂರ್ತಿ. ಸಾಮಾನ್ಯ ಮನುಷ್ಯ ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ ಆದ ಬಳಿಕ ಎಷ್ಟೋ ಕಥೆ ಹುಟ್ಟುತ್ತವೆ. ಅಪ್ಪ- ಮಗನ ಬಾಂಧವ್ಯವನ್ನು ಹೇಗೆ ಇರುತ್ತೇ ಅನ್ನೋದನ್ನು ಸನ್ ಆಫ್ ಮುತ್ತಣ್ಣದಲ್ಲಿ ಮಾಡಿದ್ದೇವೆ. ನಾನು ಸ್ವಲ್ಪ ಬೆಟ್ಟರ್ ಆಕ್ಟರ್ ಆಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕರು ಕಾರಣ. ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ ಎಂದು ತಿಳಿಸಿದರು.

    ನಟಿ ಖುಷಿ ರವಿ (Kushee Ravi) ಮಾತನಾಡಿ, ಶಿವಣ್ಣ ನಮ್ಮ ಸಿನಿಮಾದ ಟೀಸರ್ ಲಾಂಚ್ ಮಾಡೋದಿಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ದೇವರಾಜ್ ಸರ್, ಅಮ್ಮ, ಪ್ರಜ್ವಲ್ ಸರ್, ರಾಗಿಣಿ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಸನ್ ಆಫ್ ಮುತ್ತಣ್ಣ, ಅಪ್ಪ- ಮಗನ ಎಮೋಷನ್ ಇರುವ ಸಿನಿಮಾ. ಇಡೀ ಕುಟುಂಬ ನೋಡುವಂತಹ ಸಿನಿಮಾ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿದೆ ಎಂದು ತಿಳಿಸಿದರು.


    ಎಮೋಷನ್ ನಿಂದಲೇ ಶುರುವಾಗುವ ಟೀಸರ್‌ನಲ್ಲಿ ಅಪ್ಪ- ಮಗನ ಬಾಂಧವ್ಯವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಟೀಸರ್ ನಲ್ಲಿ ಡೈಲಾಗ್ ಗಳು ಕಾಡುತ್ತವೆ. ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷರ ಕಲಿಸುವ ಅಪ್ಪ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗುವ ಕ್ಯಾಪ್ಟನ್ ಆಗಿ ರಂಗಾಯಣ ರಘು ಇಷ್ಟವಾಗ್ತಾರೆ. ಅಪ್ಪನನ್ನು ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುವ ಮಗನಾಗಿ ಪ್ರಣಂ ಗಮನಸೆಳೆಯುತ್ತಾರೆ.

     

    View this post on Instagram

     

    A post shared by Pranam Devaraj (@pranamdevaraj)

    ಶ್ರೀಕಾಂತ್‌ ಹುಣಸೂರು ‘S/O ಮುತ್ತಣ್ಣ’ನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪುರಾತನ‌ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

  • ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ಪ್ರಣಂ ದೇವರಾಜ್, ಖುಷಿ ರವಿ ನಟನೆಯ ‘S/o ಮುತ್ತಣ್ಣ’ನಿಗೆ ಕುಂಬಳಕಾಯಿ ಪ್ರಾಪ್ತಿ

    ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಸಿನಿಮಾ ಸೆಟ್ಟೇರಿದ ಜಾಗದಲ್ಲಿ ಕುಂಬಳಕಾಯಿ ಹೊಡೆಯಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅದರಂತೆ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಿ ಕುಂಬಳಕಾಯಿ ಹೊಡೆಯಲಾಗಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದೆ.

    ನಟ ಪ್ರಣಂ ದೇವರಾಜ್ (Pranam Devaraj) ಮಾತನಾಡಿ, ಇವತ್ತು ಖುಷಿಯೂ ಇದೆ. ಬೇಜಾರು ಇದೆ. ಖುಷಿ ಏನಕ್ಕೆ ಅಂದರೆ ನನ್ನ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೇಜಾರು ಏನಕ್ಕೆ ಅಂದರೆ ನಾಳೆಯಿಂದ ಇವರು ಯಾರು ಸಿಗಲ್ಲ ಅಂತಾ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು. ಟೆನ್ಷನ್ ಕೂಡ ಇತ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಅಪ್ಪ ಮತ್ತು ಮಗನ ಬಾಂಧವ್ಯದ ಕಥೆ ಇದು. ನಮ್ಮ ಅಪ್ಪ ಮತ್ತು ಮಗನ ಬಾಂಧವ್ಯ ಹೇಗಿದೆ ಅಂತ ಗೊತ್ತಿದೆ, ರಘು ಸರ್ ಸೆಟ್‌ನಲ್ಲಿ ನನಗೆ ತಂದೆ ತರ ಇದ್ದರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಖುಷಿ ರವಿ ಅದ್ಭುತ ನಟಿ. ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ. ಪುರಾತನ ಫಿಲ್ಮಂಸ್ ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ ಎಂದರು.

    ನಾಯಕಿ ಖುಷಿ ರವಿ (Kushee Ravi) ಮಾತನಾಡಿ, ಶೂಟ್ ಮುಗಿಸಿ, ದೃಷ್ಟಿ ತೆಗೆದು ಕುಂಬಳಕಾಯಿ ಹೊಡೆಯೋದನ್ನು ನೋಡಿದ್ದೇವೆ. ಆದರೆ ಪುರಾತನ ಫಿಲ್ಮಂಸ್ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ. 49 ದಿನ ಜರ್ನಿಯಲ್ಲಿಯೂ ಯಾವುದೇ ರೀತಿ ಕೊರತೆ ಇಲ್ಲದ ರೀತಿ ನೋಡಿಕೊಂಡಿದ್ದಾರೆ. ಹರೀಶ್ ಸರ್‌ಗೆ ಧನ್ಯವಾದ. ನಿರ್ದೇಶಕ ಶ್ರೀಕಾಂತ್ ಸರ್ ತುಂಬಾ ಕ್ಲಾರಿಟಿ ಇದೆ. ಈ ಜನರೇಷನ್‌ಗೆ ಅಪ್ಪ-ಮಗ, ಅಪ್ಪ-ಮಗಳು, ಸ್ನೇಹ ಎಲ್ಲಾ ಎಮೋಷನ್ ಸಿನಿಮಾದಲ್ಲಿ ತೋರಿಸಿದ್ದಾರೆ. ಸಾಂಗ್ ಸಚಿನ್ ಬಸ್ರೂರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ಅದ್ಭುತವಾಗಿ ನನ್ನ ಕೈಯಿಂದ ಡ್ಯಾನ್ಸ್ ಮಾಡಿಸಿದ್ದಾರೆ. ಕೃಷ್ಣಣ್ಣ ನಮ್ಮನ್ನು ತುಂಬಾ ಚೆನ್ನಾಗಿ ಕ್ಯಾಪ್ಟರ್ ಮಾಡಿದ್ದಾರೆ ಎಂದರು.

    ನಿರ್ದೇಶಕ ಶ್ರೀಕಾಂತ್ ಮಾತನಾಡಿ, ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಶುರು ಮಾಡಿದ್ವಿ. ಹಾಗಾಗಿ ನಿರ್ಮಾಪಕರು ಇಲ್ಲಿಯೇ ಕುಂಬಳಕಾಯಿ ಹೊಡೆಯಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಇಲ್ಲಿಯೇ ಕುಂಬಳಕಾಯಿ ಹೊಡೆದಿದ್ದೇವೆ. 49 ದಿನ ಶೂಟಿಂಗ್ ನಡೆಸಲಾಗಿದೆ. ವಾರಣಾಸಿ, ಬೆಂಗಳೂರಿನಲ್ಲಿ ನಡೆಸಲಾಗಿದೆ ಎಂದರು.

    ‘ಸನ್ ಆಫ್ ಮುತ್ತಣ್ಣ’ ಸಿನಿಮಾವನ್ನು ಶ್ರೀಕಾಂತ್ ಹುಣ್ಸೂರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಶ್ರೀಕಾಂತ್, ಈ ಸಿನಿಮಾದ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಪ್ರಣಂ ದೇವರಾಜ್ ನಾಯಕನಾಗಿ ನಟಿಸಿದ್ದು, ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸೇರಿದಂತೆ ಅನೇಕರು ನಟಿಸಿದ್ದಾರೆ.

    ಶೀರ್ಷಿಕೆಯೇ ಹೇಳುತ್ತಿರುವಂತೆ ಈ ಸಿನಿಮಾ ಅಪ್ಪ-ಮಗನ ಬಾಂಧವ್ಯದ ಕಥೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. ‘ಸನ್ ಆಫ್ ಮುತ್ತಣ್ಣ’ ಸಿನಿಮಾಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಮಾಡುತ್ತಿದ್ದಾರೆ. ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ.

  • ತೆಲುಗಿನಲ್ಲಿ ಖುಷಿ ರವಿ ಮೇನಿಯಾ ಶುರು

    ತೆಲುಗಿನಲ್ಲಿ ಖುಷಿ ರವಿ ಮೇನಿಯಾ ಶುರು

    ಸ್ಯಾಂಡಲ್‌ವುಡ್‌ನಲ್ಲಿ ದಿಯಾ (Dia), ಸ್ಪೂಕಿ ಕಾಲೇಜ್ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಾಯಕಿ ಖುಷಿ ರವಿ (Kushee Ravi) ಅವರು ಇದೀಗ ತೆಲುಗಿನತ್ತ (Tollywood) ಮುಖ ಮಾಡಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತೆಲುಗಿನಲ್ಲೂ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಹೊಸ ಸಿನಿಮಾಗಳನ್ನ ಒಪ್ಪಿಕೊಳ್ಳುವ ಮೂಲಕ ಟಾಲಿವುಡ್‌ನಲ್ಲಿ ಖುಷಿ ಮೇನಿಯಾ ಶುರುವಾಗಿದೆ.

    ಕನ್ನಡದ ದಿಯಾ ಬ್ಯೂಟಿ ಖುಷಿ ಅವರು ಈಗಾಗಲೇ ರುದ್ರ (Rudra) ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಿದೆ. ಮೊದಲ ಸಿನಿಮಾ ತೆರೆಗೆ ಬರುವ ಮುಂಚೆಯೇ ಖುಷಿ, ಮತ್ತೊಂದು ಬಂಪರ್ ಚಾನ್ಸ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಹೆಸರಿಡದ ತೆಲುಗಿನ ಹಾರಾರ್ ಚಿತ್ರದಲ್ಲಿ ಖುಷಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ:Captain Miller Trailer: ಮಾಸ್‌ ಆಗಿ ಎಂಟ್ರಿ ಕೊಟ್ರು ಧನುಷ್‌-ಶಿವಣ್ಣ

    ನವ ನಿರ್ದೇಶಕ ಸಾಯಿಕಿರಣ್ ಅವರು ಖುಷಿ ಅವರ ಹೊಸ ಪ್ರಾಜೆಕ್ಟ್‌ಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 90ರ ದಶಕದ ಕಥೆಯನ್ನು ಒಳಗೊಂಡಿದ್ದು, ನಟಿ ಖುಷಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಸವಾಲಿನ ಪಾತ್ರವಾಗಿದೆ. ವಿಭಿನ್ನ ರೀತಿಯಲ್ಲಿ ಟೈಟಲ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತೆಲುಗು, ತಮಿಳಿನ ಜನಪ್ರಿಯ ನಟ ಶ್ರೀಕಾಂತ್ (Srikanth)  ಅವರು ಈ ಸಿನಿಮಾದ ಹೀರೋ ಆಗಿದ್ದಾರೆ.

    ನಟಿ ಖುಷಿಯ ಅವರ ಕೈಯಲ್ಲಿ ತೆಲುಗಿನ ಎರಡು ಸಿನಿಮಾ, ಕನ್ನಡದ ‘ಕೇಸ್ ಆಫ್ ಕೊಂಡಾಣ’, ‘ಫುಲ್ ಮೀಲ್ಸ್’ ಚಿತ್ರಗಳಿವೆ. ಒಟ್ನಲ್ಲಿ ಬಗೆ ಬಗೆಯ ಪಾತ್ರದ ಮೂಲಕ ಮೋಡಿ ಮಾಡಲು ಖುಷಿ ರವಿ ರೆಡಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದ ಹಾಗೆಯೇ ತೆಲುಗಿನಲ್ಲಿ ಪ್ರತಿಭಾನ್ವಿತ ನಟಿ ಖುಷಿ ಅದೃಷ್ಟ ಖುಲಾಯಿಸುತ್ತಾ ಎಂದು ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

    ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

    `ಸೀತಾರಾಮ್ ಬಿನೋಯ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ (Devi Prasad Shetty) ತಮ್ಮ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ನಟಿಸಿದ್ದ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ದೇವಿ ಪ್ರಸಾದ್ ಶೆಟ್ಟಿ ಈಗ ಮತ್ತೊಮ್ಮೆ ಚಿನ್ನಾರಿ ಮುತ್ತನ ಜೊತೆ ಕೈ ಜೋಡಿಸಿದ್ದಾರೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ್ ಸ್ವಾಮಿ ದೇಗುಲದಲ್ಲಿ ಸಿನಿಮಾ `ಕೇಸ್ ಆಫ್ ಕೊಂಡಾಣ’ (Case Of Kondana) ಸರಳವಾಗಿ ಮುಹೂರ್ತ ನೆರವೇರಿಸಿದೆ.

     

    View this post on Instagram

     

    A post shared by Kushee Ravi (@iamkusheeraviofficial)

    ನಟ ವಿಜಯ್ ಮಾತನಾಡಿ, `ಸೀತಾರಾಮ್ ಬಿನೋಯ್’ ಕೇಸ್ ನಂಬರ್ 18ರ ನಂತರ ಇವರು ನನಗೆ ಮತ್ತೊಮ್ಮೆ ನಟಿಸಲು ಅವಕಾಶ ಕೊಟ್ಟಿದ್ದಾರೆ. ಸಾಧಾರಣವಾಗಿ ಒಂದೊಳ್ಳೆ ತಂಡ ಸಿಗುವುದು ಅಪರೂಪ. ದೇವಿ ಡೆಡಿಕೇಷನ್, ಕೆಲಸದ ಬಗ್ಗೆ ಇರುವ ಸೀರಿಯಸ್‌ನೆಸ್ ನೋಡಿದ್ದೇನೆ. ಪ್ರತಿಯೊಬ್ಬರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದರು. ಇದನ್ನೂ ಓದಿ:‘ಯಶೋದಾ’ ಟೀಸರ್ನಲ್ಲಿ ಸಮಂತಾ ಮತ್ತೊಂದು ಮುಖ ಅನಾವರಣ

    ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವಿರುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಬಾರಿ ತನಿಖಾ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 19/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಭಾವನಾ ಮೆನನ್ (Bhavana Menon) ಇಬ್ಬರು ಪೊಲೀಸ್ ಅಧಿಕಾರಿಗಳಾಗಿ ನಟಿಸಲಿದ್ದಾರೆ. `ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ (Kushee Ravi) ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ಶೀಘ್ರವಾಗಿ ನೀಡಲಿದೆ.

    ಸಾತ್ವಿಕ್ ಹೆಬ್ಬಾರ್ ಮತ್ತು ದೇವಿ ಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ʻಕೇಸ್ ಆಫ್ ಕೊಂಡಾಣ’ಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸೆಪ್ಟೆಂಬರ್ 28ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಧರೆಗಿಳಿದ ದೇವತೆಯಾದ ದಿಯಾ ಖ್ಯಾತಿಯ ನಟಿ ಖುಷಿ

    ಧರೆಗಿಳಿದ ದೇವತೆಯಾದ ದಿಯಾ ಖ್ಯಾತಿಯ ನಟಿ ಖುಷಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅದ್ಭುತವಾದ ಫೊಟೋಶೂಟ್ ಮಾಡಿಸುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬಕ್ಕೆಂದು ಲಕ್ಷ್ಮಿಯಂತೆ ವೇಷಭೂಷಣ ತೊಟ್ಟು ಈ ಫೋಟೋ ಶೂಟ್‍ನಲ್ಲಿ ಖುಷಿ ಸಾಕ್ಷಾತ್ ಧರೆಗಿಳಿದ ಮಹಾಲಕ್ಷ್ಮಿಯಂತೆ ಕಾಣಿಸುತ್ತಿದ್ದಾರೆ. ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆ ಧರಿಸಿ ಚೆಂದದ ಆಭರಣಗಳನ್ನು ತೊಟ್ಟುಕೊಂಡು ಖುಷಿ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.

     

    View this post on Instagram

     

    A post shared by Kushee Ravi (@iamkusheeraviofficial)

    ಈ ಫೋಟೋಗಳನ್ನು ಖುಷಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಸದ್ಯ ಖುಷಿಯ ಈ ಮಹಾಲಕ್ಷ್ಮಿ ಅವತಾರವನ್ನು ಕಂಡ ಅಭಿಮಾನಿಗಳು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ. ನೀವು ಸಾಕ್ಷಾತ್ ಲಕ್ಷ್ಮಿಯಂತೆ ಕಾಣಿಸುತ್ತಿದ್ದೀರಾ, ಪದಗಳೆ ಸಿಗುತ್ತಿಲ್ಲ. ದಿಯಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೆ ಹಣ ಸಂಭಾವನೆ ಪಡೆಯುತ್ತಾರೆ ಪರಮ ಸುಂದರಿ

     

    View this post on Instagram

     

    A post shared by Kushee Ravi (@iamkusheeraviofficial)

    ಪ್ರತಿಯೊಬ್ಬ ಮಹಿಳೆಗೂ ಮಹಾಲಕ್ಷ್ಮಿ ಹಬ್ಬಾ ತುಂಬಾ ವಿಶೇಷವಾಗಿದೆ. ಈ ವಿಶೇಷ ದಿನ ಇಂತಹ ಅದ್ಭುತವಾದ ಫೋಟೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.