Tag: Kushboo Sundar

  • ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ ನೇಮಕ

    ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ ನೇಮಕ

    ಚೆನ್ನೈ: ತಮಿಳುನಾಡು (Tamil Nadu) ಬಿಜೆಪಿ  (BJP)) ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ (Kushboo Sundar) ನೇಮಕಗೊಂಡಿದ್ದಾರೆ.

    ಮಾಜಿ ಸಂಸದರಾದ ವಿ.ಪಿ ದೊರೈಸಾಮಿ, ಕೆ.ಪಿ.ರಾಮಲಿಂಗಂ, ಶಶಿಕಲಾ ಪುಷ್ಪಾ ಮತ್ತು ಎಂ. ಚಕ್ರವರ್ತಿ ಸೇರಿದಂತೆ ಇತರರು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅವರ ನೇಮಕಾತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅನುಮೋದಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ. ಇದನ್ನೂ ಓದಿ: 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

    ಕೇಶವ ವಿನಾಯಕನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ), ಪ್ರೊ.ರಾಮ ಶ್ರೀನಿವಾಸನ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕರಾಟೆ ಆರ್.ತ್ಯಾಗರಾಜನ್ ರಾಜ್ಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

    ಬಿಜೆಪಿ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಬಗ್ಗೆ ಖುಷ್ಬೂ ಸುಂದರ್‌ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಪ್ರಧಾನಿ ಮೋದಿ ಹಾಗೂ ಜೆ.ಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಮತಗಳ್ಳತನ ಆರೋಪ: ಆ.5 ರಂದು ಅರ್ಧ ಕಿ.ಮೀ ರಾಹುಲ್ ಪಾದಯಾತ್ರೆ, ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

  • ರಿಷಬ್ ಶೆಟ್ಟಿ ದಂಪತಿ ಜೊತೆಗಿನ ಫೋಟೋ ಹಂಚಿಕೊಂಡ ‘ರಣಧೀರ’ ನಟಿ ಖುಷ್ಬೂ

    ರಿಷಬ್ ಶೆಟ್ಟಿ ದಂಪತಿ ಜೊತೆಗಿನ ಫೋಟೋ ಹಂಚಿಕೊಂಡ ‘ರಣಧೀರ’ ನಟಿ ಖುಷ್ಬೂ

    ನ್ನಡದ ನಟಿ ಖುಷ್ಬೂ ಅವರು ‘ಕಾಂತಾರ’ (Kantara) ಹೀರೋ ರಿಷಬ್ ಶೆಟ್ಟಿ (Rishab Shetty) ದಂಪತಿ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರನ್ನ ರಣಧೀರ ನಟಿ ಖುಷ್ಬೂ (Kushboo Sundar) ಕೊಂಡಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಶಾರುಖ್‌ಗೆ ಡಬಲ್ ಧಮಾಕಾ- ಗೆಲುವಿನ ಟ್ರ್ಯಾಕ್‌ಗೆ ಮರಳಿದ ಬಾದ್‌ಶಾ

    ‘ಕಾಂತಾರ’ (Kantara Film) ಸಿನಿಮಾದ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty)  ಜೊತೆ ಬಹುಭಾಷಾ ನಟಿ ಖುಷ್ಬೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೈಮಾ ಅವಾರ್ಡ್‌ಗಾಗಿ (Siima Awards) ದುಬೈಗೆ ಭೇಟಿ ನೀಡಿದ್ದು, ದಕ್ಷಿಣದ ಪ್ರತಿಭಾವಂತ ನಟರನ್ನು ಭೇಟಿಯಾಗಲು ಖುಷಿಯಾಗುತ್ತಿದೆ ಎಂದು ಖುಷ್ಬೂ ಸಂತಸ ವ್ಯಕ್ತಪಡಿಸಿದ್ದಾರೆ.

    ಸೈಮಾ ಅವಾರ್ಡ್ ಸಮಾರಂಭದಲ್ಲಿ ನಟ ರಿಷಬ್ ಶೆಟ್ಟಿ ಅವರು ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ. ಬೆಸ್ಟ್ ನಟಿ ಅವಾರ್ಡ್ ಕಾಂತಾರ ನಟಿ ಸಪ್ತಮಿ (Saptami Gowda) ಬಾಚಿಕೊಂಡಿದ್ದಾರೆ. ಸೈಮಾ ಅವಾರ್ಡ್‌ನಲ್ಲಿ ‘ಕಾಂತಾರ’ ಟೀಮ್ 7ಕ್ಕೂ ಅಧಿಕ ಪ್ರಶಸ್ತಿ, ಹಲವು ವಿಭಾಗಗಳಲ್ಲಿ ಬಾಚಿಕೊಂಡಿದ್ದಾರೆ.

    ಖುಷ್ಬೂ ಸುಂದರ್ (Kushboo Sundar) ಅವರು ಕನ್ನಡದ ರಣಧೀರ (Ranadheera), ಮ್ಯಾಜಿಕ್ ಅಜ್ಜಿ, ಕಲಿಯುಗ ಭೀಮ, ಹೃದಯ ಗೀತೆ, ಪ್ರೇಮಾಗ್ನಿ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ರಣಧೀರ’ ಚಿತ್ರದ ನಟಿ ಖುಷ್ಬೂ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ‘ರಣಧೀರ’ ಚಿತ್ರದ ನಟಿ ಖುಷ್ಬೂ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಣಧೀರ, ಹೃದಯ ಗೀತೆ, ಮ್ಯಾಜಿಕ್ ಅಜ್ಜಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ (Kushboo Sundar) ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತೆಗೆ ದಾಖಲಾಗಿರುವ ನಟಿ, ಬೆಡ್ ಮಲಗಿರುವ ಫೋಟೋವನ್ನ ಶೇರ್ ಮಾಡಿ ತಮ್ಮ ಆರೋಗ್ಯದ (Health) ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ

    ಸದ್ಯ ಅನಾರೋಗ್ಯದ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆ ಟ್ವೀಟ್ ಮಾಡಿರುವ ನಟಿ ಖುಷ್ಬೂ, ಟೇಲ್ ಬೋನ್ ಚಿಕಿತ್ಸೆ ಪಡೆಯುವುದರ ಸಲುವಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಈ ಸಮಸ್ಯೆ ಖುಷ್ಬೂ ಅವರನ್ನು ಬಾಧಿಸಿತ್ತು. ಇದೀಗ ಅದೇ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಮುಂದುವರಿಸಿದ್ದಾರೆ.

    ನಾನೀಗ ಚೇತರಿಕೆಯ ಹಂತದಲ್ಲಿದ್ದೇನೆ. ಕೋಕ್ಸಿಕ್ಸ್ ಅಥವಾ ಟೇಲ್ ಮೂಳೆ ಚಿಕಿತ್ಸೆಯ ಸಲುವಾಗಿ ನಾನು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿಂದೆಯೂ ಈ ಸಮಸ್ಯೆ ಕಾಡಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಬರುವೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅವರ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಟ್ವಿಟ್ ಮಾಡಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹರಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿಯೂ ಖುಷ್ಬೂ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ಶಾಕಿಂಗ್ ಎಂಬಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಂದು ಜ್ವರ, ತಲೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಖುಷ್ಬೂ ಹೇಳಿಕೊಂಡಿದ್ದರು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ

    ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ

    ಖ್ಯಾತ ನಟಿ ಖುಷ್ಬೂ (Kushboo Sundar) ಅವರು ಸಿನಿಮಾ- ರಾಜಕೀಯ (Politics) ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಖುಷ್ಬೂ ಅವರು ಮಗಳ ನಡೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮಗಳನ್ನು ಸರಿಯಾಗಿ ಬೆಳೆಸೋಕೆ ಆಗಲ್ವಾ? ಅಂತಾ ಖುಷ್ಬೂಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು.?

    ನಟಿ ಖುಷ್ಬೂ ಸುಂದರ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆವಂತಿಕಾ (Avantika) ಮತ್ತು ಆನಂದಿತಾ (Ananditha)  ಎಂಬ ಮಕ್ಕಳಿದ್ದಾರೆ. ಇಬ್ಬರೂ ರಾಜಕೀಯ- ಸಿನಿಮಾರಂಗದಿಂದ ದೂರವಿದ್ದಾರೆ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಇದೀಗ ಆವಂತಿಕಾ ಅವರು ಬೋಲ್ಡ್ ಬಟ್ಟೆ, ಒಳಉಡುಪು ಧರಿಸದೇ ಬಟ್ಟೆ ತೊಟ್ಟಿರೋದು, ಮೈ ಮೇಲೆ ಹಾಕಿಸಿಕೊಂಡಿರುವ ಹಚ್ಚೆ, ಕೂದಲಿಗೆ ಕಲರ್ ಮಾಡಿಸಿರೋದು ಇವೆಲ್ಲವೂ ನೋಡಿ ನಟಿ ಖುಷ್ಬೂಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಖುಷ್ಬೂ ಪುತ್ರಿ ಆವಂತಿಕಾ ತನ್ನ ಬಟ್ಟೆಯ ವಿಷ್ಯವಾಗಿ ಸಖತ್‌ ಟ್ರೋಲ್‌ ಕೂಡ ಆಗ್ತೀದ್ದಾರೆ.

     

    View this post on Instagram

     

    A post shared by avantika (@avantikasundar)

    ನಿಮ್ಮ ಮಗಳ ಬಗ್ಗೆ ನೀವು ಗಮನ ವಹಿಸುತ್ತಿಲ್ಲ, ಮಗಳನ್ನು ಸರಿಯಾಗಿ ಬೆಳೆಸಿಲ್ಲ ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ನೆಟ್ಟಿಗರು ಖುಷ್ಬೂಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಆವಂತಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ, ನಿಮ್ಮ ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  • ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಟಿ ಖುಷ್ಬೂ (Kushboo Sundar) ಅವರು ಸಿನಿಮಾ (Film)- ರಾಜಕೀಯ (Politics) ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಖುಷ್ಬೂ ಸಂದರ್ಶನವೊಂದರಲ್ಲಿ ನೆಚ್ಚಿನ ನಟನ ಬಗ್ಗೆ ಅಚ್ಚರಿಯ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಕನ್ನಡದ ರಣಧೀರ, ಅಂಜದ ಗಂಡು, ಯುಗಪುರುಷ, ಸೇರಿದಂತೆ ಪರಭಾಷೆಗಳಲ್ಲೂ ನಟಿಸಿರುವ ಖುಷ್ಬೂ ಸುಂದರ್, ಬಿಗ್ ಮೇಲಿನ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ತನ್ನ ಬೆಡ್‌ರೂಮ್‌ನಲ್ಲಿ ಬಿಗ್ ಬಿ ಫೋಟೋ ಅಂಟಿಸಿರೋದನ್ನ ನಟಿ ಖುಷ್ಬೂ ರಿವೀಲ್ ಮಾಡಿದ್ದಾರೆ.

    ‘ಸ್ಟಾಲಿನ್’ ಎಂಬ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರಿಯ ಪಾತ್ರದಲ್ಲಿ ಖುಷ್ಬೂ ನಟಿಸಿದ್ದರು. ಬಾಲಯ್ಯ ಜೊತೆ ನಟಿಸುವ ಅವಕಾಶ ಒಲಿದು ಬರಲಿಲ್ಲ ಎಂಬ ಕೊರಗಿದೆ. ಈ ವಿಚಾರವನ್ನು ಸ್ವತಃ ಖುಷ್ಬೂ ಸಂದರ್ಶನದಲ್ಲಿ ಹೇಳಿದ್ದಾರೆ. ಇವರ ಜೊತೆ ನಟಿಸೋಕೆ ಇವತ್ತಿಗೂ ಇಷ್ಟಪಡ್ತೀನಿ. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ನಟ ಅಮಿತಾಬ್ ಬಚ್ಚನ್ ಅಂದ್ರೆ ಬಹಳ ಇಷ್ಟ. ಅವರ ದೊಡ್ಡ ಅಭಿಮಾನಿ ನಾನು ಎಂದು ನಟಿ ವಿವರಿಸಿದ್ದಾರೆ.

    ಅಮಿತಾಬ್ ಬಚ್ಚನ್ (Amitabh Bachchan) ಫೋಟೊಗಳನ್ನು ಇವತ್ತಿಗೂ ನನ್ನ ಬೆಡ್ ರೂಮ್‌ನಲ್ಲಿ ಅಂಟಿಸಿಕೊಂಡಿದ್ದೇನೆ. ಅವರೊಟ್ಟಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಆದರೆ ಹೀರೊಯಿನ್ ಆಗಿ ನಟಿಸೋ ಅವಕಾಶ ಸಿಗಲಿಲ್ಲ. ಅವರ ಜೊತೆ ರೊಮ್ಯಾನ್ಸ್ ಮಾಡೋ ಆಸೆ ಇದೆ.‌ ಸಾಕಷ್ಟು ವರ್ಷಗಳ ಹಿಂದೆ  ‘ಚೀನಿ ಕಮ್’ ಚಿತ್ರದಲ್ಲಿ ಅಮಿತಾಬ್ ಜೊತೆ ಟಬು ನಟಿಸಿದ್ದರು. ಈ ವಿಚಾರ ಗೊತ್ತಾಗಿ ಆಕೆಗೆ ಫೋನ್ ಮಾಡಿ ಬೈದಿದ್ದೆ, ಅವರೊಟ್ಟಿಗೆ ಹೇಗೆ ನಟಿಸಿದೆ ಎಂದು ಸರಿಯಾಗಿ ಕ್ಲಾಸ್ ತಗೊಂಡೆ ಎಂದು ನಗುತ್ತಾ ಮಾತನಾಡಿದ್ದಾರೆ. ಈ ಮೂಲಕ ಬಿಗ್ ಬಿ ನನ್ನ ನೆಚ್ಚಿನ ನಟ ಎಂದು ಖುಷ್ಬೂ ಮಾತನಾಡಿದ್ದಾರೆ.

  • ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ತೆಲುಗು ನಟಿ

    ಹುಭಾಷಾ ನಟಿ ಖುಷ್ಬೂ ಸುಂದರ್ (Kushboo Sundar) ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾಗೆ ಗುಡ್ ಬೈ ಹೇಳಿ, ರಾಜಕೀಯ (Politics) ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಖುಷ್ಬೂ ಬಗ್ಗೆ ನಟಿ ಕಾಕಿನಾಡ ಶ್ಯಾಮಲಾ (Shyamala) ಮಾತನಾಡಿರುವ ಹೇಳಿಕೆ ಇದೀಗ ಸಖತ್ ಮಾಡುತ್ತಿದೆ. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ಯಾಮಲಾ ಅವರು ಇದೀಗ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಖುಷ್ಬೂ ಮೊದಲ ಸಂಬಂಧದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಾಕಿನಾಡ ಶ್ಯಾಮಲಾ ಅವರು ಪ್ರಭು- ಖೂಷ್ಬೂ ಸಂಬಂಧದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಖುಷ್ಬೂ ತುಂಬಾ ಒಳ್ಳೆಯ ವ್ಯಕ್ತಿ, ಖುಷ್ಬೂ- ಪ್ರಭು ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು ಬಳಿಕ ಮದುವೆಯಾದರು. ಇವರಿಬ್ಬರ ಮದುವೆಗೆ ಪ್ರಭು ಕುಟುಂಬದಲ್ಲಿ ಆಕ್ಷೇಪವಿದ್ದ ಕಾರಣ ಇಬ್ಬರೂ ಬೇರೆಯಾದರು ಎಂದು ಶ್ಯಾಮಲಾ ಮಾತನಾಡಿದ್ದಾರೆ.

    ಮುಂಬೈನಲ್ಲಿ ಜನಿಸಿದ ಖುಷ್ಬೂ ಅವರು 90ರ ದಶಕದಲ್ಲಿ ಕಾಲಿವುಡ್‌ನಲ್ಲಿ ಸ್ಟಾರ್ ನಾಯಕಿಯಾಗಿ ಬೆಳೆದರು. ಹಿಂದಿಯ ಜೊತೆಗೆ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 1991ರಲ್ಲಿ ಖುಷ್ಬೂ ಮತ್ತು ಪ್ರಭು(Actor Prabhu) ‘ಚಿನ್ನಿ ತಂಬಿ’ ಚಿತ್ರದಲ್ಲಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಈ ಬಗ್ಗೆ ಆಂಗ್ಲ ಸಂದರ್ಶನದಲ್ಲಿ ಖುಷ್ಬೂ ಮುಕ್ತವಾಗಿ ಪ್ರತಿಕ್ರಿಯಿಸಿದ್ದರು.

    ನಾನು ಪ್ರಭು ಜೊತೆ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದೆವು. 1993ರಲ್ಲಿ ಪೋಯಸ್ ಗಾರ್ಡನ್‌ನಲ್ಲಿರುವ ಅವರ ನಿವಾಸದಲ್ಲಿ ವಿವಾಹವಾದೆವು. ಪ್ರಭು ಅವರು ಮೊದಲೇ ಮದುವೆಯಾಗಿದ್ದರು. ಹೀಗಾಗಿ ಅವರ ತಂದೆ ಶಿವಾಜಿ ಗಣೇಶನ್ ಇದನ್ನು ಬಲವಾಗಿ ವಿರೋಧಿಸಿದರು. ಮೊದಲ ಹೆಂಡತಿಯೊದಿಗೆ ಪ್ರಭು ಅವರಿಗೆ ವೈಮಸ್ಸಿತ್ತು. ಮದುವೆಯಾದ ನಾಲ್ಕು ತಿಂಗಳ ನಂತರ ಅನಿವಾರ್ಯ ಕಾರಣಗಳಿಂದಾಗಿ ನಾವಿಬ್ಬರು ಬೇರೆಯಾಗಬೇಕಾಯಿತು ಎಂದು ಕೆಲ ವರ್ಷಗಳ ಹಿಂದೆಯೇ ಖುಷ್ಬೂ ಸ್ಪಷ್ಟನೆ ನೀಡಿದ್ದರು.

    ಬಳಿಕ 2000ರಲ್ಲಿ ನಿರ್ದೇಶಕ ಸಿ.ಸುಂದರ್ C.Sundar ಜೊತೆ ಖುಷ್ಬೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಈಗ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ರಂಗದಲ್ಲಿ ಸಕ್ರೀಯರಾಗಿದ್ದಾರೆ.

  • ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ಅಂಜದ ಗಂಡು, ಯುಗಪುರುಷ, ರಣಧೀರ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ಖುಷ್ಬೂ ಸುಂದರ್ (Kushboo Sundar) ಇತ್ತೀಚಿಗೆ ತನ್ನ ತಂದೆಯಿಂದಲೇ ಎದುರಿಸಿದ ದೌರ್ಜನ್ಯದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈಗ ನಟಿ ಈ ರೀತಿ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಖುಷ್ಬೂ ಮೌನ ಮುರಿದಿದ್ದಾರೆ.

    ತಮ್ಮ 8ನೇ ವಯಸ್ಸಿಗೆ ಖುಷ್ಬೂ ತಮ್ಮ ತಂದೆಯಿಂದಲೇ (Father) ದೌರ್ಜನ್ಯ ಎದುರಿಸಿದ್ದರು. ತಾಯಿಗೂ ಹೇಳದೇ ಇರುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದರ ಬಗ್ಗೆ ಇತ್ತೀಚಿಗೆ ಸಂದರ್ಶನದಲ್ಲಿ ನಟಿ ಬಾಯ್ಬಿಟ್ಟಿದ್ದರು. ಈ ಕುರಿತು ಸಾಕಷ್ಟು ವಿರೋಧ ಬಂದಿರುವ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಶ್ಚರ್ಯಕರ ಹೇಳಿಕೆಯೇನೂ ನೀಡಿಲ್ಲ. ನಾನು ಪ್ರಾಮಾಣಿಕತೆಯಿಂದ ಈ ಮಾತು ಹೇಳಿದ್ದೇನೆ. ನನ್ನ ಜೊತೆ ಈ ರೀತಿ ಆಯ್ತು, ಅಪರಾಧ ಮಾಡಿದವರು ನಾಚಿಕೆ ಪಡಬೇಕು ಎಂದು ಖುಷ್ಬೂ ಸುಂದರ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಗಟ್ಟಿಯಾಗಿ ನಿಲ್ಲಿ ಇದೇ ರಸ್ತೆಯ ಅಂತ್ಯ ಎಂದು ಭಾವಿಸಬೇಡಿ ಎಂದು ಎಲ್ಲರಿಗೂ ನಾನು ಸಂದೇಶ ಕಳಿಸಬೇಕಿದೆ. ನಾನು ಈ ಮಾತು ಹೇಳಿರೋದಿಕ್ಕೆ ಇಷ್ಟು ವರ್ಷ ತೆಗೆದುಕೊಂಡೆ ಎಂದರೆ ಮಹಿಳೆಯರು ಈ ಬಗ್ಗೆ ಮಾತನಾಡಲೇಬೇಕಾದ ಅಗತ್ಯವಿದೆ. ನನ್ನ ಜೊತೆ ಈ ರೀತಿ ಆಯ್ತು, ಏನೇ ಆಗಲಿ ನಾನು ನನ್ನ ಜರ್ನಿಯನ್ನು ಮುಂದುವರೆಸುತ್ತೇನೆ ಎಂದು ಖುಷ್ಬೂ ಹೇಳಿದ್ದಾರೆ.

    ನನ್ನ ಹೆಣ್ಣು ಮಕ್ಕಳಿಗೆ, ಪತಿಗೆ ಈ ವಿಷಯ ಮೊದಲೇ ಗೊತ್ತಿತ್ತು. ಪ್ರತಿ ಸಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದರೆ ನೀನು ಯಾವ ರೀತಿ ಬಟ್ಟೆ ಹಾಕಿದ್ದೆ? ಏನು ಮಾಡುತ್ತಿದ್ದೆ ಎಂದು ಪ್ರಶ್ನೆ ಮಾಡಲಾಗುತ್ತದೆ. ನನ್ನ ಮೇಲೆ ದೌರ್ಜನ್ಯ ಆದಾಗ ನನಗೆ 8 ವರ್ಷ. ನನಗೆ ಆ ವಯಸ್ಸಿನಲ್ಲಿ ಏನು ಗೊತ್ತಾಗುತ್ತದೆ? ನಾನು ಈಗ ಈ ದೌರ್ಜನ್ಯದ ಬಗ್ಗೆ ಮಾತನಾಡಿದ್ದರಿಂದ ನನ್ನ ಪತಿ, ನೀನು ಈಗ ಇದರಿಂದ ಹೊರಗಡೆ ಬಂದಿದ್ದೀಯಾ ಅಲ್ವಾ, ಈಗ ನೀನು ಓಕೆನಾ ಎಂದು ಕೇಳಿದ್ದರು. ಈ ವೇಳೆ ತಮ್ಮ ಕುಟುಂಬದ ಬೆಂಬಲದ ಬಗ್ಗೆ ಖುಷ್ಬೂ ಮಾತನಾಡಿದ್ದಾರೆ. ಈ ಮೂಲಕ ತನ್ನ ಹೇಳಿಕೆಗೆ ವಿರೋಧಿಸಿವರಿಗೆ ತಕ್ಕ ಉತ್ತರ ನೀಡಿದ್ದಾರೆ.

  • ಅಣ್ಣನಿಗಾಗಿ ಅಭಿಮಾನಿಗಳಿಗೆ ಕೋರಿಕೆಯಿಟ್ಟ ನಟಿ ಖುಷ್ಬೂ

    ಅಣ್ಣನಿಗಾಗಿ ಅಭಿಮಾನಿಗಳಿಗೆ ಕೋರಿಕೆಯಿಟ್ಟ ನಟಿ ಖುಷ್ಬೂ

    ಹುಭಾಷಾ ನಟಿ ಖುಷ್ಬೂ (Kushboo Sundar) ಇದೀಗ ಸಂಕಷ್ಟದಲ್ಲಿದ್ದಾರೆ. ಆದರೆ ಆರ್ಥಿಕವಾಗಿ ಅಲ್ಲ, ಹಿರಿಯಣ್ಣ (Brother) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತನ್ನ ಅಣ್ಣನ ಆರೋಗ್ಯದಲ್ಲಿ (Health) ಚೇತರಿಕೆ ಕಾಣಲಿ, ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ನಟಿ ಕೋರಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ: ಪ್ರಶಾಂತ್ ಸಂಬರಗಿ ಎಂಟ್ರಿ

    ಸಿನಿಮಾ ಕಲಾವಿದರು ಕಷ್ಟ ಮತ್ತು ಸುಖ ಎರಡನ್ನ ಅಭಿಮಾನಿಗಳ ಬಳಿ ಹೇಳಿಕೊಳ್ಳುತ್ತಾರೆ. ಇದೀಗ ತಮ್ಮ ಅಭಿಮಾನಿಗಳ ಬಳಿ ವಿಶೇಷ ಕೋರಿಕೆಯೊಂದನ್ನ ಇಟ್ಟಿದ್ದಾರೆ. ತನ್ನ ದೊಡ್ಡ ಅಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಸಲುವಾಗಿ ತಾವು ಪ್ರಾರ್ಥನೆ ಮಾಡಿ ಎಂದು ಫ್ಯಾನ್ಸ್‌ಗೆ ವಿನಂತಿ ಮಾಡಿಕೊಂಡಿದ್ದಾರೆ.

    ವೈಯಕ್ತಿಕ ಬದುಕಿನಲ್ಲಿ ಸಂಕಷ್ಟದಲ್ಲಿದ್ದೇನೆ. ನನ್ನ ದೊಡ್ಡ ಅಣ್ಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣ್ಣನಿಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ ಎಂದು ನಟಿ ಖುಷ್ಬೂ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ನನ್ನ ಹೀರೋ’ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಖುಷ್ಬೂ

    `ನನ್ನ ಹೀರೋ’ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಖುಷ್ಬೂ

    ಟನೆ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಖುಷ್ಬೂ ಸುಂದರ್ ಇದೀಗ ನಟ ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷ್ಬೂ ಖುಷಿಪಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಜೋಡಿಯಾಗಿ ನಟಿಸಿರುವ ಕಮಲ್ ಹಾಸನ್ ಮತ್ತು ಖುಷ್ಬೂ ಇದೀಗ ಮತ್ತೆ ಭೇಟಿಯಾಗಿದ್ದಾರೆ. ನನ್ನ ಹೀರೋ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಖುಷ್ಬೂ ಸಂಭ್ರಮಿಸಿದ್ದಾರೆ. ನನ್ನ ಹೀರೋ, ನನ್ನ ಗೆಳೆಯ, ನನ್ನ ವಿಕ್ರಮ್ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಮಲ್ ಹಾಸಸ್ ನಟನೆಯ ಜೊತೆಗೆ ನಿರ್ಮಾಣ ಮಾಡಿದ `ವಿಕ್ರಮ್’ ಸಿನಿಮಾ ಮೂಲಕ ಕಂಬ್ಯಾಕ್ ಆಗಿದ್ದಾರೆ. `ವಿಕ್ರಮ್’ ಚಿತ್ರದ ಸಕ್ಸಸ್ ಅಲೆಯಲ್ಲಿ ತೆಲುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರರಂಗದ ಸ್ನೇಹಿತರನ್ನು ಕಮಲ್ ಭೇಟಿಯಾಗಿ ಸಕ್ಸಸ್ ಖುಷಿಯಾಗಿ ಸಂಭ್ರಮಿಸುತ್ತಿದ್ದಾರೆ. ಇದೀಗ ವಿಕ್ರಮ್ ಸಿನಿಮಾ ಗೆದ್ದ ಖುಷಿಯಲ್ಲಿ ಕಮಲ್ ಹಾಸನ್, ಖುಷ್ಬೂ ಪರಸ್ಪರ ಭೇಟಿಯಾಗಿದ್ದಾರೆ. ೩೦ ವರ್ಷಗಳಿಂದ ಇಬ್ಬರಿಗೂ ಗೆಳೆತನವಿದ್ದು, ಇಂದಿಗೂ ಪರಸ್ಪರ ಭೇಟಿಯಾಗುತ್ತಾ ಒಬ್ಬರ ಗೆಲುವನ್ನ ಇನ್ನೊಬ್ಬರು ಸಂಭ್ರಮಿಸುತ್ತಾರೆ.

    Live Tv

  • ಒಂಟಿಯಾಗಿರುವುದನ್ನು ನಿಜಕ್ಕೂ ನಾನು ದ್ವೇಷಿಸುತ್ತೇನೆ: ಖುಷ್ಬೂ

    ಒಂಟಿಯಾಗಿರುವುದನ್ನು ನಿಜಕ್ಕೂ ನಾನು ದ್ವೇಷಿಸುತ್ತೇನೆ: ಖುಷ್ಬೂ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ, ರಾಜಕಾರಣಿ ಖುಷ್ಬೂ ಸುಂದರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವಾಗಿ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಒಂಟಿಯಾಗಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಕೋವಿಡ್ ಎರಡು ಅಲೆಯನ್ನು ತಪ್ಪಿಸಿಕೊಂಡೆ. ಆದರೆ ಈಗ ಕೋವಿಡ್ ಪಾಸಿಟಿವ್ ಆಗಿದೆ. ನಿನ್ನೆ ಸಂಜೆಯವರೆಗೂ ನನಗೆ ಕೋವಿಡ್ ನೆಗೆಟಿವ್ ಆಗಿತ್ತು. ನಾನು ಐಸೋಲೇಷನ್‍ನಲ್ಲಿದ್ದೇನೆ. ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ. ಮುಂದಿನ ಐದು ದಿನಗಳಕಾಲ ನನಗೆ ಮನರಂಜನೆ ನೀಡಿ. ಕೊರೊನಾ ಲಕ್ಷಣ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

    ಖುಷ್ಬೂ ಸುಂದರ್ ಅವರು 10 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವ ವಿಚಾರವನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡಿದ್ದರು. ಹೊಸ ಲುಕ್ ಮೂಲಕವಾಗಿ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಖುಷ್ಬೂ ಅವರಿಗೆ ಅಭಿಮಾನಿ ಮದುವೆಯೆ ಪ್ರಪೋಸಲ್‍ಅನ್ನು ಸೋಶಿಯಲ್ ಮೀಡಿಯಾದಲ್ಲಿ ಇಟ್ಟಿದ್ದರು. ಈ ವಿಚಾರ ಕೆಲವು ದಿನಗಳ ಹಿಂದೆ ಸೊಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿತ್ತು.