Tag: kushal nagar

  • ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಷರತ್ತು ಬದ್ಧ ಅನುಮತಿ

    – 140 ಎಕರೆ ಕಾಡು ಬಳಕೆಗೆ ಅಸ್ತು

    ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 4,100 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೈಸೂರು-ಕುಶಾಲನಗರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 140 ಎಕರೆ ಕಾಡು ಬಳಸಲು ಕೇಂದ್ರ ಅರಣ್ಯ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಷರತ್ತುಬದ್ಧ ಅನುಮತಿ ನೀಡಿದೆ.

    ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಗಳಲ್ಲಿ ನಾಗರಹೊಳೆ ಹುಲಿ ಅಭಯಾರಣ್ಯ ಹಾಗೂ ಹುಣಸೂರು ಅರಣ್ಯ ವಿಭಾಗದ ಕಾಡನ್ನು ಹೆದ್ದಾರಿ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಈ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಚಾಲನೆ ನೀಡಿದ್ದರು.ಇದನ್ನೂ ಓದಿ:

    ಯೋಜನೆಗೆ ಕಾಡು ಬಳಕೆಗಾಗಿ ಹೆದ್ದಾರಿ ಪ್ರಾಧಿಕಾರವು 2024ರ ಜುಲೈನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಹುಣಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದರು. ಹೆದ್ದಾರಿ ವಿಸ್ತರಣೆಗಾಗಿ ಹುಣಸೂರು ವಿಭಾಗದಲ್ಲಿ 571 ಮರಗಳನ್ನು ಕಡಿಯಲಾಗುತ್ತದೆ. ಈ ಅರಣ್ಯವು ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿಧಾಮದ ಭಾಗವಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ನಾಗರಹೊಳೆ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಯೋಜನೆಗಾಗಿ 40 ಎಕರೆ ಅರಣ್ಯ ಬಳಸಿಕೊಳ್ಳಲಾಗುತ್ತದೆ. ಇಲ್ಲಿನ ಡಿಸಿಎಫ್ ಪ್ರಕಾರ ಈ ಪ್ರದೇಶವು ಕಾವೇರಿ ಅಧಿಸೂಚಿತ ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ.

    40 ಎಕರೆ ಅರಣ್ಯವು ಅಭಯಾರಣ್ಯದ ಮೀಸಲು ಪ್ರದೇಶದ ಕಾವೇರಿ ಭಾಗದಲ್ಲಿ ಬರುತ್ತದೆಯೇ ಇಲ್ಲವೇ ಎಂಬ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅಭಯಾರಣ್ಯದ ಮೀಸಲು ಪ್ರದೇಶದಲ್ಲಿ ಬಂದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿAದ ಅನುಮೋದನೆ ಪಡೆಯಬೇಕು ಎಂದು ಉನ್ನತಾಧಿಕಾರ ಸಮಿತಿ ಷರತ್ತು ವಿಧಿಸಿದೆ.

    ಕಾಡು ಬಳಕೆಗೆ ಅನುಮೋದನೆ ಕೋರಿರುವ ಪ್ರದೇಶವು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿದ್ದು, ರಾಷ್ಟ್ರೀಯ ವನ್ಯಜೀವಿಧಾಮದಿಂದ ಅಗತ್ಯ ಅನುಮೋದನೆ ಪಡೆಯಬೇಕು ಎಂದು ಸಮಿತಿ ಸೂಚಿಸಿದೆ.ಇದನ್ನೂ ಓದಿ:

  • ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಮಡಿಕೇರಿ: ಕೋವಿಡ್ ಮೂರನೇ ಅಲೆಯಲ್ಲಿ ನಷ್ಟ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ಈಗ ಚೇತರಿಕೆ ಹಾದಿಗೆ ಮರಳಿದೆ.

    ಡಿಸೆಂಬರ್ ತಿಂಗಳಿನಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ನಿಂದಾಗಿ ಸಂಪೂರ್ಣ ನೆಲಕಚ್ಚಿತ್ತು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆರವು ಮಾಡಿದ 2 ವಾರಗಳ ಕಾಲವೂ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಲೇ ಇಲ್ಲ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    3ನೇವಾರದಲ್ಲಾದರೂ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ಕೊಡಗಿನ ಪ್ರವಾಸೋದ್ಯಮಿಗಳಿದ್ದರು. ಈ ವಾರವೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲೇನು ಬಂದಿಲ್ಲ. ಆದರೆ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು ಪ್ರವಾಸಿತಾಣಗಳು ಒಂದಷ್ಟು ಕಳೆ ಪಡೆದುಕೊಂಡಿವೆ.

    ಮಡಿಕೇರಿ ಸಮೀಪದ ಅಬ್ಬಿಜಲಪಾತ, ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ಪ್ರವಾಸಿಗರಷ್ಟು ಪ್ರಮಾಣದಲ್ಲಿ ಈ ಬಾರಿ ಇಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ, ನೈಟ್ಕರ್ಫ್ಯೂಗಳಿಂದ ನಷ್ಟ ಅನುಭವಿಸಿದ್ದ ಪ್ರವಾಸಿಗರ ಅವಲಂಬಿತ ವ್ಯಾಪಾರೋದ್ಯಮಿಗಳು ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಮತ್ತೊಂದೆಡೆ 3ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಅಷ್ಟೊಂದು ಅಪಾಯವಿಲ್ಲ ಎನ್ನುವ ಕಾರಣದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಬಹುತೇಕ ಪ್ರವಾಸಿಗರು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೆ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದಾರೆ.

    ಇದು ಮಾಸ್ಕ್ ಧರಿಸಿ ಓಡಾಡುವ ಪ್ರವಾಸಿಗರಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದ 3 ವಾರಗಳ ಬಳಿಕ ಕೊಡಗಿನ ಪ್ರವಾಸೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿದೆ.

  • ಕೊಡಗಿನ ಪೊಲೀಸ್ ಅಧಿಕಾರಿ ನಾಪತ್ತೆ – ಕುಟುಂಬಸ್ಥರಿಂದ ದೂರು ದಾಖಲು

    ಕೊಡಗಿನ ಪೊಲೀಸ್ ಅಧಿಕಾರಿ ನಾಪತ್ತೆ – ಕುಟುಂಬಸ್ಥರಿಂದ ದೂರು ದಾಖಲು

    ಮಡಿಕೇರಿ: ಕಳೆದ ಎರಡು ದಿನಗಳಿಂದ ಪೊಲೀಸ್ ಎಎಸ್‌ಐಯೋರ್ವರು ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ನಡೆದಿದೆ.

    ಕುಶಾಲನಗರ ಸಂಚಾರಿ ಪೊಲೀಸ್ ಎಎಸ್‌ಐ ಸುರೇಶ್ (51) ನಾಪತ್ತೆಯಾದ ಪೊಲೀಸ್ ಅಧಿಕಾರಿ. ಸುರೇಶ್ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಷ್ಟೇ ಅಲ್ಲದೇ ಕುಶಾಲನಗರದಲ್ಲಿ ಇರುವ ಪೊಲೀಸ್ ಕ್ವಾಟರ್ಸ್‌ಗೆ ಬೀಗ ಹಾಕಿ ಸುರೇಶ್ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ನಿಟ್ಟಿನಲ್ಲಿ ಕುಶಾಲನಗರ ಪೊಲೀಸರು ಹಾಗೂ ಸಹೋದ್ಯೋಗಿಗಳು ಸುರೇಶ್ ಅವರ ಫೋನ್‌ನ ಟವರ್ ಲೊಕೇಶನ್ ಅನ್ನು ಪರಿಶೀಲಿಸಿದಾಗ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ಎಂಬಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರೇಶ್ ಅವರಿಗೆ ಹುಡುಕಾಟದಲ್ಲಿ ನಡೆಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

    ಸುರೇಶ್ ಅವರು ಕಾಣೆಯಾಗಿರುವ ಬೆನ್ನಲ್ಲೇ ಸುರೇಶ್ ಪತ್ನಿಗೆ ವಿಷಯ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಶೋಭಾ ಕುಶಾಲನಗರದ ಪೊಲೀಸ್ ಠಾಣೆಗೆ ದೂರು ನೀಡಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಶೋಭಾ ಅವರು ಸದ್ಯ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

    POLICE JEEP

    ಮೂಲತಃ ಸುರೇಶ್ ಅವರು ಹಾಸನ ಜಿಲ್ಲೆಯ ಕೊಣನೂರಿನವರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಸಾಕಷ್ಟು ರಜೆ ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಪ್ರಕರಣವನ್ನು ಕುಶಾಲನಗರ ಪೊಲೀಸರು ದಾಖಲು ಮಾಡಿಕೊಂಡು ನಾಪತ್ತೆಯಾಗಿರುವ ಸುರೇಶ್ ಅವರ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

  • ಟಿಬೆಟ್ ಕ್ಯಾಂಪ್ ನಲ್ಲಿ ಲಾಕ್ ಡೌನ್ – ಹೊರಗಿನವರಿಗೆ ಪ್ರವೇಶವಿಲ್ಲ

    ಟಿಬೆಟ್ ಕ್ಯಾಂಪ್ ನಲ್ಲಿ ಲಾಕ್ ಡೌನ್ – ಹೊರಗಿನವರಿಗೆ ಪ್ರವೇಶವಿಲ್ಲ

    ಮಡಿಕೇರಿ: ಕೊರೊನಾ ಮಹಾಮಾರಿಯ ಅಬ್ಬರ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ದೇಶದಲ್ಲೇ ಲಾಕ್‍ಡೌನ್ ತೆರವಾಗಿದೆ. ಆದರೂ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಟಿಬೆಟ್ ಕ್ಯಾಂಪಿನಲ್ಲಿ ಮಾತ್ರ ಇಂದಿಗೂ ಲಾಕ್‍ಡೌನ್ ತೆರವಾಗಿಲ್ಲ.

    ಬೈಲುಕೊಪ್ಪದಲ್ಲಿರುವ ಟಿಬೆಟ್ ಕ್ಯಾಂಪ್ ಇಂದಿಗೂ ಸಂಪೂರ್ಣ ಬಂದ್ ಆಗಿದೆ. ಆಧ್ಯಾತ್ಮಿಕ ಕೇಂದ್ರಗಳಾಗಿರುವ ನಾಮ್ಡೋಲಿಂಗ್ ಮೊನಾಸ್ಟ್ರಿ ಸೇರಿದಂತೆ ಕ್ಯಾಂಪ್ ಗಳನ್ನು ಬಂದ್ ಮಾಡಲಾಗಿದೆ. ಹೊರಗಿನವರು ಯಾರು ಈ ಕ್ಯಾಂಪ್ ಅಥವಾ ಮೊನಾಸ್ಟ್ರಿಗಳಿಗೆ ಭೇಟಿ ನೀಡುವಂತಿಲ್ಲ.

    ಈ ಮೊನಾಸ್ಟ್ರಿಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಲಾಮಾ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಹೀಗಾಗಿಯೇ ಮೊನಾಸ್ಟ್ರೀಗಳಿಗೆ ಹೊರಗಿನ ಯಾರು ಭೇಟಿ ನೀಡದಂತೆ ಲಾಕ್ ಡೌನ್ ಮುಂದುವರಿಸಲಾಗಿದೆ. ಒಂದು ವೇಳೆ ಹೊರಗಿನವರಿಗೆ ಬಂದರೆ, ಈ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡಬಹುದೆಂಬ ದೃಷ್ಟಿಯಿಂದ ನಾಮ್ಡೋಲಿಂಗ್ ಮೊನಾಸ್ಟ್ರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಮೊನಾಸ್ಟ್ರಿಗಳಲ್ಲಿ ಬೃಹತ್ ಬುದ್ಧ ಪ್ರತಿಮೆಗಳು ಸೇರಿದಂತೆ ವಿಶೇಷ ದೇವಾಲಯಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈಗ ನಾಮ್ಡೋಲಿಂಗ್ ಮೊನಾಸ್ಟ್ರಿಗಳು ಬಂದ್ ಆಗಿರುವುದರಿಂದ ಮಾಹಿತಿ ಇಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ನಿರಾಶರಾಗಿ ವಾಪಾಸ್ಸಾಗುತ್ತಿದ್ದಾರೆ. ಪ್ರವಾಸಿಗರ ಕೊರತೆಯಿಂದಾಗಿ ಕ್ಯಾಂಪಿನ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಜೊತೆಗೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಿದ್ದು ವ್ಯಾಪಾರಸ್ಥರು ಕೂಡ ಆತಂಕದಲ್ಲಿದ್ದಾರೆ.

    ಸದ್ಯ ಏಪ್ರಿಲ್ ತಿಂಗಳಲ್ಲಿ ಟಿಬೆಟಿಯನ್ನರು ಹೊಸ ವರ್ಷಾಚರಣೆ ಮಾಡುವುದರಿಂದ ಆ ಸಂದರ್ಭಕ್ಕೆ ಲಾಕ್ ಡೌನ್ ತೆರವು ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಸದ್ಯ ದಿನಬಳಕೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲಾಗಿದೆ. ವ್ಯಾಪಾರ ಆದರೂ ಆಗಲಿ ಎಂದು ಕೆಲವು ಸ್ಪೈಸಿಸ್ ಅಂಗಡಿಗಳು ತೆರೆದಿವೆಯಾದರೂ ವ್ಯಾಪಾರ ಮಾತ್ರ ಇಲ್ಲ. ಜೊತೆಗೆ ಅವರದೇ ಆಸ್ಪತ್ರೆಗಳು ತೆರೆದಿದ್ದು, ಕಾರ್ಯನಿರ್ವಹಿಸುತ್ತಿವೆ.