Tag: Kurudumale Ganapati Temple

  • ಗಣೇಶ ಚತುರ್ಥಿ – ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ, ಅಲಂಕಾರ

    ಗಣೇಶ ಚತುರ್ಥಿ – ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ, ಅಲಂಕಾರ

    ಕೋಲಾರ: ದೇಶದಲ್ಲೆಡೆ ಇಂದು ಗಣೇಶ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಅದರಂತೆ ಕೋಲಾರ (Kolar) ಜಿಲ್ಲೆಯ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲೂ (Kurudumale Vinayaka Temple) ಹಬ್ಬದ ಸಂಭ್ರಮ ಕಳೆಕಟ್ಟಿದೆ.

    ಪೌರಾಣಿಕ ಹಿನ್ನೆಲೆ ಇರುವ ಕುರುಡುಮಲೆ ವಿನಾಯಕನ ದೇವಸ್ಥಾನ ರಾಜಕೀಯವಾಗಿಯೂ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಏಕಶಿಲಾ ಸಾಲಿಗ್ರಾಮ ಮೂರ್ತಿ ಗಣೇಶನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಕುರುಡುಮಲೆ ವಿನಾಯಕನ ದರ್ಶನಕ್ಕೆ ಜನರ ದಂಡು ಆಗಮಿಸಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರನಿಗೆ ಜೈಲಲ್ಲಿ ಇಡಿ ಡ್ರಿಲ್

    ಗಣೇಶ ಚತುರ್ಥಿ (Ganesha Chaturthi) ಹಿನ್ನೆಲೆಯಲ್ಲಿ ವಿನಾಯಕನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಕೋಲಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹೊರ ರಾಜ್ಯದಿಂದಲೂ ಭಕ್ತರ ಸಮೂಹ ಬಂದಿದೆ. ಇನ್ನೂ ವಿಶ್ವದ ಏಕೈಕ ಏಕಶಿಲಾ ಸಾಲಿಗ್ರಾಮ ಶಿಲಾಗಣಪತಿ ಅನ್ನೋ ನಂಬಿಕೆ ಇಲ್ಲಿದ್ದು, ಸಾವಿರಾರು ಭಕ್ತರು ಇಂದು ವಿನಾಯಕನ ದರ್ಶನ ಪಡೆದಿದ್ದಾರೆ. ಇನ್ನೂ ಗಣಪನ ದರ್ಶನ ಪಡೆಯಲು ಇಂದು ಬೆಳಗಿನಿಂದಲೇ ಭಕ್ತರ ದಂಡು ದೇವಸ್ಥಾನದ ಬಳಿ ನೆರೆದಿದ್ದು, ಇಲ್ಲಿನ ಇತಿಹಾಸದ ಪ್ರಕಾರ ಈ ಗಣಪತಿ ಮೂರ್ತಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನು ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಇದನ್ನೂ ಓದಿ: ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು

    ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕನ ವಿಗ್ರಹವು 13 ಅಡಿ ಎತ್ತರವಿದೆ. ಇಲ್ಲಿರುವ ದೇಗುಲವು ಶ್ರೀಕೃಷ್ಣ ದೇವರಾಯನ ಆಡಳಿತ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ಕುರುಡುಮಲೆ ಐತಿಹ್ಯ ಹೊಯ್ಸಳರ ಕಾಲದಲ್ಲಿ ಇದೊಂದು ಉಪನಗರವಾಗಿಯೇ ಪ್ರಸಿದ್ಧವಾಗಿತ್ತು. ತದನಂತರ ವಿಜಯನಗರವನ್ನು ಆಳಿದ ಆರಂಭಿಕ ಅರಸರ ಕಾಲದಲ್ಲಿ ಮುಳುವಾಯಿ ನಗರದ ಜೊತೆಜೊತೆಯಲ್ಲೇ ಇಲ್ಲಿಯೂ ದೇವಾಲಯಗಳ ಅಭಿವೃದ್ಧಿಗೊಂಡವು ಅನ್ನೋದು ಇತಿಹಾಸ ಎನ್ನಲಾಗಿದೆ. ಇದನ್ನೂ ಓದಿ: ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ

  • ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕುರುಡುಮಲೆ ವಿನಾಯಕನ ಹುಂಡಿಗೆ 2 ಕಂತೆ ಹಣ ಹಾಕಿದ ಯಡಿಯೂರಪ್ಪ – ಎಲ್ಲರಲ್ಲೂ ಅಚ್ಚರಿ

    ಕೋಲಾರ: ಕುರುಡುಮಲೆ ಗಣಪತಿ ದೇವಾಲಯದ (Kurudumale Ganapati Temple) ಹುಂಡಿಗೆ 1 ಲಕ್ಷ ರೂ. ಹಣವನ್ನು ಬಿಎಸ್ ಯಡಿಯೂರಪ್ಪ (BS Yediyurappa) ಹಾಕಿ ಗಮನ ಸೆಳೆದರು.

    ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಕಂತೆ ಕಂತೆ ಹಣ ಹಾಕೋದನ್ನು ನಾವು ನೋಡಿದ್ದೇವೆ. ಆದರೆ ಇಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕ ದೇವಾಲಯದ ಹುಂಡಿಗೆ ಯಡಿಯೂರಪ್ಪ 2 ಕಂತೆ ಎಂದರೆ 1 ಲಕ್ಷ ರೂ. ಹಣವನ್ನು ಹಾಕಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ವಿನಾಯಕನ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ ಯಡಿಯೂರಪ್ಪ, ದೇವರ ದರ್ಶನಕ್ಕೂ ಮುನ್ನ ದೇವಾಲಯದ ಪ್ರಾಂಗಣದಲ್ಲಿದ್ದ ಹುಂಡಿಗೆ 2 ಕಂತೆ ಹಣ ಹಾಕಿದರು. ಇದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು. ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಸ್ಥಾನದಲ್ಲೂ ಬಿಜೆಪಿ ಗೆಲುವು ಖಚಿತ: ಕಟೀಲ್ ವಿಶ್ವಾಸ

    ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಜನಾಂದೋಲನಾ ಮಾಡಲು ನಗರದಲ್ಲಿ ಚಾಲನೆ ನೀಡಿದರು. ಗೌರಿ-ಗಣೇಶ ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗಾಗಲೇ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಈಶ್ವರಪ್ಪ ಮತ್ತಿತರರು ಭಾಗಿಯಾಗಿದ್ದರು. ಇದನ್ನೂ ಓದಿ: ಹಣ ತೆಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೋ ಇಲ್ವೋ? ಇದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು: ಜಗದೀಶ್ ಶೆಟ್ಟರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]