Tag: Kurla

  • ಮುಂಬೈ ಬಸ್ ಅಪಘಾತ: ತರಬೇತಿಯಿಲ್ಲದೇ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದ ಚಾಲಕ

    ಮುಂಬೈ ಬಸ್ ಅಪಘಾತ: ತರಬೇತಿಯಿಲ್ಲದೇ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿದ್ದ ಚಾಲಕ

    ಮುಂಬೈ: ಮುಂಬೈನ (Mumbai) ಕುರ್ಲಾದಲ್ಲಿ (Kurla) ಸೋಮವಾರ (ಡಿ.09) ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ ನಡೆದಿದೆ ಎನ್ನಲಾಗಿತ್ತು. ಆದರೆ ತನಿಖೆಯ ಬಳಿಕ ಚಾಲಕನಿಗೆ ತರಬೇತಿ ಇರಲಿಲ್ಲ. ಹಾಗಾಗಿ ಬ್ರೇಕ್ ಬದಲು ಎಕ್ಸಲೇಟರ್‌ನ್ನು ತುಳಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಮಾಹಿತಿ ಪ್ರಕಾರ, ಚಾಲಕನಿಗೆ ತರಬೇತಿ ಇರಲಿಲ್ಲ. ಆತ ಬ್ರೇಕ್ ಹಾಕುವ ಬದಲು ಎಕ್ಸ್ಲೇಟರ್ ಒತ್ತಿದ್ದ. ಇದರಿಂದ ವಾಹನದ ವೇಗ ಹೆಚ್ಚಾದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.ಇದನ್ನೂ ಓದಿ: ಜಾತಿ ವ್ಯವಸ್ಥೆಯ ಕ್ರೂರ ಘಟನೆ – ಎಸ್‌ಎಂಕೆ ಕೋಲಾರದ ಕಂಬಾಲಪಲ್ಲಿ ದುರಂತ ನಿಭಾಯಿಸಿದ್ದು ಹೇಗೆ?

    ಚಾಲಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಡಿ.1 ರಿಂದ ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಗೆ ಸೇರಿದ್ದನು ಎಂದು ತಿಳಿಸಿದ್ದಾರೆ.

    ಘಟನೆ ಏನು?
    ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದ್ದು, ಬಳಿಕ 30 ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ಜೊತೆಗೆ ಪಾದಚಾರಿಗಳ ಮೇಲೆ ಹಾಯ್ದು ಮುಂದಕ್ಕೆ ಸಾಗಿ, ಎದುರಿಗೆ ಇದ್ದ ಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅಲ್ಲಿಯೇ ನಿಂತಿತ್ತು. ಪರಿಣಾಮ 6 ಜನರು ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದರು.

    ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನಿಗೆ ನಿಯಂತ್ರಣಕ್ಕೆ ಸಿಗದೇ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು.ಇದನ್ನೂ ಓದಿ: ಇಂದು ಎಸ್‌ಎಂಕೆ ಅಂತ್ಯಕ್ರಿಯೆ – ಭದ್ರತೆಗೆ 1,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

  • ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್ – 6 ಮಂದಿ ಸಾವು, 49 ಮಂದಿಗೆ ಗಾಯ

    ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್ – 6 ಮಂದಿ ಸಾವು, 49 ಮಂದಿಗೆ ಗಾಯ

    – 100 ಮೀ. ಉದ್ದಕ್ಕೆ 30-40 ವಾಹನಗಳಿಗೆ ಡಿಕ್ಕಿ

    ಮುಂಬೈ: ಬಸ್‌ನ ಬ್ರೇಕ್‌ಫೇಲ್ ಆಗಿ ನಿಯಂತ್ರಣ ತಪ್ಪಿದ ಪರಿಣಾಮ 6 ಜನ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿರುವ ಘಟನೆ ಮುಂಬೈನ (Mumbai) ಕುರ್ಲಾದಲ್ಲಿ (Kurla) ನಡೆದಿದೆ.

    ಬೃಹತ್ ಮುಂಬೈ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಅಪಘಾತ ಸಂಭವಿಸಿದೆ. ಸೋಮವಾರ (ಡಿ.9) ರಾತ್ರಿ 9:50ಕ್ಕೆ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಬಳಿಕ 30 ರಿಂದ 40 ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಪಾದಚಾರಿಗಳ ಮೇಲೆ ಹಾಯ್ದು ಮುಂದಕ್ಕೆ ಸಾಗಿದೆ. ಎದುರಿಗೆ ಇದ್ದ ಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅಲ್ಲಿಯೇ ನಿಂತಿದೆ.ಇದನ್ನೂ ಓದಿ: ‘ಪುಷ್ಪ 2’ ಸಕ್ಸಸ್‌ ನಂತರ ಬಾಲಿವುಡ್‌ನಲ್ಲಿ ಫಹಾದ್‌ ಫಾಸಿಲ್‌ಗೆ ಬಂಪರ್‌ ಆಫರ್‌

    ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 49 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಯಾನ್ ಮತ್ತು ಕುರ್ಲಾ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿವೆ. ಬಸ್ ಅತೀವೇಗದಿಂದ ಕೆಳಗಿಳಿಯುತ್ತಿದ್ದು, ಮೊದಲು ಆಟೋ ರಿಕ್ಷಾಗೆ ಡಿಕ್ಕಿ ಹೊಡೆಯುತ್ತದೆ.

    ಈ ಕುರಿತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯೊಬ್ಬರು ಮಾತನಾಡಿ, ಬಸ್‌ನ ಬ್ರೆಕ್ ಫೇಲ್ ಆದ ಪರಿಣಾಮ ಈ ಅಪಘಾತ ಸಂಭವಿಸಿದೆ. ವಾಹನವು ಒಲೆಕ್ಟ್ರಾದಿಂದ ತಯಾರಿಸಲ್ಪಟ್ಟ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಆಗಿದ್ದು, ಇದನ್ನು ಬೆಸ್ಟ್ ಲೀಸ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಬಸ್ ಕೇವಲ ಮೂರು ತಿಂಗಳ ಹಳೆಯದು. ಇದನ್ನು ಈ ವರ್ಷ ಆ.20 ರಂದು ಖರೀದಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಅಪಘಾತವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮಾತನಾಡಿ, ನಾನು ರೈಲ್ವೇ ನಿಲ್ದಾಣಕ್ಕೆ ಹೋಗುವಾಗ ಜೋರಾಗಿ ಶಬ್ದವೊಂದು ಕೇಳಿತು. ಸ್ಥಳಕ್ಕೆ ಹೋಗಿ ನೋಡಿದಾಗ ಬಸ್ ಪಾದಚಾರಿಗಳಿಗೆ ಹಾಗೂ ಆಟೋರಿಕ್ಷಾ ಸೇರಿದಂತೆ ಮೂರು ಕಾರುಗಳು ಹಾಗೂ ಪೊಲೀಸ್ ವಾಹನಕ್ಕೂ ಡಿಕ್ಕಿ ಹೊಡೆದಿತ್ತು. ನಾನು ಆಟೋದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂದು ಹೋದೆವು ಎಂದು ತಿಳಿಸಿದ್ದಾರೆ.

    ಸದ್ಯ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಿಎನ್‌ಎಸ್ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಚಾಲಕ ಕುಡಿದು ಬಸ್ ಚಲಾಯಿಸುತ್ತಿದ್ದನಾ? ಎಂದು ತಿಳಿಯಲು ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

  • ಮುಂಬೈನಲ್ಲಿ ಕಟ್ಟಡ ಕುಸಿತ – 17ಕ್ಕೆ ಏರಿದ ಸಾವಿನ ಸಂಖ್ಯೆ

    ಮುಂಬೈನಲ್ಲಿ ಕಟ್ಟಡ ಕುಸಿತ – 17ಕ್ಕೆ ಏರಿದ ಸಾವಿನ ಸಂಖ್ಯೆ

    ಮುಂಬೈ: ಸೋಮವಾರ ತಡರಾತ್ರಿ ಮುಂಬೈನ ಹೃದಯ ಭಾಗದಲ್ಲಿರುವ ಕುರ್ಲಾದಲ್ಲಿ 4 ಅಂತಸ್ತಿನ ಕಟ್ಟಡ ಕುಸಿತವಾಗಿತ್ತು. ಅವಶೇಷಗಳಡಿ ಸಿಲುಕಿ ಇಲ್ಲಿಯವರೆಗೆ 17 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಮಾಹಿತಿ ನೀಡಿದೆ.

    ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ಘಟಿಸಿರುವ ಭಾರೀ ದುರಂತಕ್ಕೆ ಶಿವಸೇನೆಯ ಬಂಡಾಯ ಶಾಸಕ ಮಂಗೇಶ್ ಕುಡಾಲ್ಕರ್ ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಕೇಸ್ ಏರಿಕೆ – ಅಪಾರ್ಟ್ಮೆಂಟ್, ಕಚೇರಿ, ವಿದ್ಯಾಸಂಸ್ಥೆಗಳಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ

    ಈ ಘಟನೆ ನಾಯಕ್ ನಗರ ಪ್ರದೇಶದಲ್ಲಿ ನಡೆದಿದ್ದು, ಕಟ್ಟಡಕ್ಕೆ ಈ ಹಿಂದೆಯೇ ಮುಂಬೈ ಪಾಲಿಕೆ ನೋಟಿಸ್ ಕೊಟ್ಟಿತ್ತು. ಆದರೆ ಕಟ್ಟಡವನ್ನು ತೆರವುಗೊಳಿಸಿರಲಿಲ್ಲ. ಆದರೆ ಇದೀಗ ಅಪಾಯದ ಅಂಚಿನಲ್ಲಿದ್ದ ಕಟ್ಟಡ ತೆರವುಗೊಳಿಸದ ತಪ್ಪಿಗೆ ತಾನೇ ನೆಲಸಮವಾಗಿದ್ದು, 17 ಜನರ ಪ್ರಾಣವನ್ನೂ ತೆಗೆದಿದೆ.

    ಈ ಬಗ್ಗೆ ಶಿವಸೇನೆ ಶಾಸಕ ಸಂಜಯ್ ಪೋಟ್ನಿಸ್, 2016ರಲ್ಲಿ ಕಟ್ಟಡವನ್ನು ಎ1 ವರ್ಗದಲ್ಲಿ ಪಟ್ಟಿ ಮಾಡಲಾಗಿತ್ತು. ಆಡಿಟ್ ಬಳಿಕ ಅದನ್ನು ಎ2 ಅಡಿಯಲ್ಲಿ ಮರು ವರ್ಗೀಕರಿಸಲಾಗಿತ್ತು. ಅದನ್ನು ದುರಸ್ತಿ ಮಾಡಬೇಕಾಗಿತ್ತು. ಆದರೆ ಅದು ಆಗಿರಲಿಲ್ಲ. ಇದರಲ್ಲಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೈತ

    ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಆದಿತ್ಯ ಠಾಕ್ರೆ, ಬಿಎಂಸಿ ಸೂಚನೆಯಿದ್ದಲ್ಲಿ ನಿರ್ಲಕ್ಷಿಸದೇ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿ ಒತ್ತಿ ಹೇಳಿದ್ದಾರೆ.

    Live Tv

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ-ವಿಡಿಯೋ ನೋಡಿ

    ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಸ್ಲಿಪ್ ಆಗಿ ರೈಲಿನ ಅಡಿಗೆ ಸಿಲುಕುತ್ತಿದ್ದ ಮಧ್ಯ ವಯಸ್ಸಿನ ಮಹಿಳೆಯನ್ನು ಪ್ಲಾಟ್ ಫಾರಂ ನಲ್ಲಿದ್ದ ಕೆಲ ಪ್ರಯಾಣಿಕರು ರಕ್ಷಿಸಿದ್ದಾರೆ.

    ಈ ಘಟನೆಯು ಬೆಳಗ್ಗೆ ಸುಮಾರು 11:45ಕ್ಕೆ ಮುಂಬೈ ನಗರದ ಕುರ್ಲಾ ನಿಲ್ದಾಣದ ಪ್ಲಾಟ್ ಫಾರಂ 1 ರಲ್ಲಿ ನಡೆದಿದೆ.

    ಮಹಿಳೆ ತಮ್ಮ ಮಗನ ಜೊತೆ ಬಂದಿದ್ದರು. ಚಲಿಸುತ್ತಿದ್ದ ರೈಲಲ್ಲಿ ಮೊದಲಿಗೆ ಮಗನನ್ನು ಬೋಗಿಗೆ ಹತ್ತಿಸಿದ್ದಾರೆ. ನಂತರ ತಾವು ಸಹ ಹತ್ತಲು ಹೋದಾಗ ಆಯ ತಪ್ಪಿ ರೈಲಿನ ಮೆಟ್ಟಿಲಿಗೂ ಪ್ಲಾಟ್ ಫಾರಂಗೂ ನಡುವೆ ಇರುವ ಗ್ಯಾಪ್ ಗೆ ಜಾರಿದ್ದಾರೆ. ಇದನ್ನೂ ಓದಿ:ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ – ವಿಡಿಯೋ ವೈರಲ್

    ಮಹಿಳೆ ಜಾರಿ ರೈಲಿನಡಿ ಸಿಲುಕುವಷ್ಟರಲ್ಲಿಯೇ ಪ್ಲಾಟ್ ಫಾರಂನಲ್ಲಿದ್ದ ಕೆಲವರು ರಕ್ಷಣೆ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲಿನಲ್ಲಿ ಹತ್ತಿದ್ದ ಮಹಿಳೆಯ ಮಗನನ್ನು ಆರ್ ಪಿಎಫ್ ಪೊಲೀಸರು ತಾಯಿಯೊಂದಿಗೆ ಸೇರಿಸಿದ್ದಾರೆ.