Tag: kupwara

  • ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಮೇಘಸ್ಫೋಟ – 5 ದಿನಗಳಲ್ಲಿ 3ನೇ ದುರಂತ

    ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಮೇಘಸ್ಫೋಟ – 5 ದಿನಗಳಲ್ಲಿ 3ನೇ ದುರಂತ

    – ನಿನ್ನೆ ಕಥುವಾದಲ್ಲಿ ಮೇಘಸ್ಫೋಟದಿಂದ 7 ಮಂದಿ ಸಾವು

    ಶ್ರೀನಗರ: ಕಿಶ್ತ್ವಾರ, ಕಥುವಾ ಬಳಿಕ ಈಗ ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಪ್ವಾರಾ ಜಿಲ್ಲೆಯಲ್ಲಿ ಮೇಘಸ್ಫೋಟದಿಂದ (Kupwara Cloudburst) ಹಠಾತ್‌ ಪ್ರವಾಹ ಸಂಭವಿಸಿದೆ. 5 ದಿನಗಳಲ್ಲಿ ಇದು 3ನೇ ದುರಂತವಾಗಿದೆ.

    ಉತ್ತರ ಕಾಶ್ಮೀರದ ಕುಪ್ವಾರಾದ ವಾರ್ನೋ ಅರಣ್ಯ ಪ್ರದೇಶದಲ್ಲಿ ಮೇಘಸ್ಫೋಟದಿಂದ ಹಠಾತ್‌ ಪ್ರವಾಹ (Flash Floods) ಸಂಭವಿಸಿದೆ. ಅದೃಷ್ಟವಶಾತ್‌ ಈವರೆಗೆ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯಾಗಲಿ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಣ ಮಳೆಗೆ ನಡುಗಿದ ಮುಂಬೈ – ಹಲವೆಡೆ ಟ್ರಾಫಿಕ್‌ ಜಾಮ್‌, ಶಾಲಾ-ಕಾಲೇಜುಗಳಿಗೆ ರಜೆ, ರೆಡ್‌ ಅಲರ್ಟ್‌ ಘೋಷಣೆ

    Kathua Cloudburst 2

    ಕಥುವಾದಲ್ಲಿ 7 ಮಂದಿ ಸಾವು
    ಇನ್ನೂ ಒಂದು ದಿನದ ಹಿಂದಷ್ಟೇ ಕಥುವಾ (Kathua) ಜಿಲ್ಲೆಯ ಜಂಗ್ಲೋಟ್‌ ಹಳ್ಳಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಐವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. 9ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ | ಕಥುವಾದಲ್ಲಿ ಮೇಘಸ್ಫೋಟದಿಂದ ಹಠಾತ್‌ ಪ್ರವಾಹ – ನಾಲ್ವರು ಸಾವು

    ಇದಕ್ಕೂ ಮುನ್ನ ಕಳೆದ ಗುರುವಾರ ಜಮ್ಮು ಕಾಶ್ಮೀರದ ಕಿಶ್ತ್ವಾರ ಜಿಲ್ಲೆಯ ಚಶೋತಿ ಗ್ರಾಮದಲ್ಲಿ ಉಂಟಾದ ಮೇಘಸ್ಫೋಟದಿಂದ 65 ಮಂದಿ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸದ್ಯ ನಾಪತ್ತೆಯಾದವರಿಗಾಗಿ ಕಳೆದ 5 ದಿನಗಳಿಂದಲೂ ಇಲ್ಲಿ ಶೋಧಕಾರ್ಯ ನಡೆಯುತ್ತಿದೆ. ಈ ಹೊತ್ತಿನಲ್ಲೇ ಕುಪ್ವಾರಾದಲ್ಲಿ ಮೇಘಸ್ಫೋಟ ಸಂಭವಿಸಿದೆ.  ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

  • ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ (Kupwara) ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Indian Army) ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಯಾಚರಣೆ ನಡೆದ ಸ್ಥಳದಿಂದ ಎಕೆ 47 ರೈಫಲ್‌, ಎರಡು ಹ್ಯಾಂಡ್ ಗ್ರೆನೇಡ್‌, ನಾಲ್ಕು ಮ್ಯಾಗಜೀನ್‌ಗಳು, ಮದ್ದುಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಲಾಬ್ ಪ್ರದೇಶದಲ್ಲಿ ಮಂಗಳವಾರ ಕಾರ್ಯಾಚರಣೆ ಆರಂಭವಾಗಿತ್ತು. ಬುಧವಾರ ಸಹ ಈ ಕಾರ್ಯಾಚರಣೆ ಮುಂದುವರೆದಿತ್ತು. ಓರ್ವ ಉಗ್ರನ ಹತ್ಯೆಯ ನಂತರ ಈ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳವಾರ ಬಂಡಿಪೋರಾ ಜಿಲ್ಲೆಯ ಕೆತ್ಸುನ್ ಅರಣ್ಯದಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆಗೈಯ್ಯಲಾಗಿತ್ತು. ಆ ಪ್ರದೇಶದಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

    ಕಾಶ್ಮೀರದಲ್ಲಿ ನೂತನ ಸರ್ಕಾರ ರಚನೆಯಾದಗಿನಿಂದ ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ. ನವೆಂಬರ್ 2 ರಂದು, ಹಳೆಯ ಶ್ರೀನಗರ ನಗರದ ಖನ್ಯಾರ್ ಪ್ರದೇಶದಲ್ಲಿ ನಡದ ಕಾರ್ಯಾಚರಣೆಯಲ್ಲಿ ಎಲ್ಇಟಿಯ ಕಮಾಂಡರ್‌ನನ್ನು ಹತ್ಯೆಗೈಯ್ಯಲಾಗಿತ್ತು. ಈ ಕಾರ್ಯಾಚರಣೆ ವೇಳೆ ಇಬ್ಬರು ಸ್ಥಳೀಯ ಪೊಲೀಸರು ಮತ್ತು ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.

    ಕಳೆದ ತಿಂಗಳು ಗಂದರ್‌ಬಾಲ್ ಜಿಲ್ಲೆಯ ಗಗಂಗೀರ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರನ್ನು ಸಾವನ್ನಪ್ಪಿದ್ದರು.

  • ಕಾಶ್ಮೀರ ಗಡಿಯಲ್ಲಿ ಒಳ ನುಸುಳುತ್ತಿದ್ದ ಐವರು ವಿದೇಶಿ ಭಯೋತ್ಪಾದಕರ ಹತ್ಯೆ

    ಕಾಶ್ಮೀರ ಗಡಿಯಲ್ಲಿ ಒಳ ನುಸುಳುತ್ತಿದ್ದ ಐವರು ವಿದೇಶಿ ಭಯೋತ್ಪಾದಕರ ಹತ್ಯೆ

    ಶ್ರೀನಗರ: ಜಮ್ಮು ಕಾಶ್ಮೀರದ (Jammu And Kashmir) ಕುಪ್ವಾರದ (Kupwara) ಗಡಿ ನಿಯಂತ್ರಣಾ ರೇಖೆ ಬಳಿ ಒಳನುಸುಳುತ್ತಿದ್ದ (Infiltration)  5 ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಕಾಶ್ಮೀರದ ಎಲ್‌ಒಸಿ (LOC) ಬಳಿಯ ಜುಮಗುಂಡ್ (Jumagund) ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮುಂಜಾನೆ ವೇಳೆ 5 ಭಯೋತ್ಪಾದಕರನ್ನು ಹತ್ತಿಕ್ಕಲಾಗಿದೆ. 5 ವಿದೇಶಿ ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಗಳು ಮುಂದುವರೆಯುತ್ತಿವೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ವಿಜಯ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು

    ಪೂಂಚ್ ಸೆಕ್ಟರ್‌ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆಯನ್ನು ವಿಫಲಗೊಳಿಸಿದ ಭದ್ರತಾ ಪಡೆ, ಭಯೋತ್ಪಾದಕರಿಂದ ಬೃಹತ್ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ವಶಪಡಿಸಿಕೊಂಡಿದೆ. ಫೆಬ್ರವರಿಯಿಂದ ಇಲ್ಲಿಯವರೆಗೆ ಒಟ್ಟು 10 ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್‍ ತೀರದಲ್ಲಿಅಲ್ಲೋಲ ಕಲ್ಲೋಲ

    ಇದೇ ಜೂನ್ 13ರಂದು ಕುಪ್ವಾರದ ಗಡಿ ನಿಯಂತ್ರಣಾ ರೇಖೆ ಇಬ್ಬರು ಭಯೋತ್ಪಾದಕರನ್ನು (Terrorists) ಭದ್ರತಾಪಡೆ (Security Force) ಹತ್ಯೆ ಮಾಡಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ವರ್ಷದಲ್ಲಿ 5 ಭಯೋತ್ಪಾದಕರನ್ನು ಏಕಕಾಲದಲ್ಲಿ ಎನ್‌ಕೌಂಟರ್ ಮಾಡಿರುವುದು ಇದೇ ಮೊದಲಾಗಿದೆ. ಇದನ್ನೂ ಓದಿ: ಪತ್ನಿಯನ್ನು ಅಪ್ಪಿಕೊಂಡು ಹೊಡೆದ ಗುಂಡು ತನಗೂ ಮುಳುವಾಯ್ತು- ದಂಪತಿ ಸಾವು

    ಭದ್ರತಾ ಪಡೆ ಭಯೋತ್ಪಾದಕರಿಂದ ಒಟ್ಟು 2 ಎಕೆ 47, 48 ಸುತ್ತಿನ ಮದ್ದುಗುಂಡುಗಳು, 4 ನಿಯತಕಾಲಿಕಗಳು, 4 ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Biparjoy Cyclone ಅಬ್ಬರ ನಡುವೆ ಹೆಣ್ಣುಮಗುವಿಗೆ ‘ಬಿಪರ್‌ಜಾಯ್‌’ ಅಂತ ಹೆಸರಿಟ್ಟ ದಂಪತಿ

  • ಕುಪ್ವಾರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ

    ಕುಪ್ವಾರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಮಂಗಳವಾರ ಹಜಾಮ್ ಮೊಹಲ್ಲಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

    10 ಪಿಸ್ತೂಲ್‍ಗಳು, 17 ಪಿಸ್ತೂಲ್ ಮ್ಯಾಗಜೀನ್‍ಗಳು, 54 ಪಿಸ್ತೂಲ್ ರೌಂಡ್‍ಗಳು ಮತ್ತು 5 ಗ್ರೆನೇಡ್‍ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

    ಪೊಲೀಸರು ಮತ್ತು ಸೇನೆಯು ಉಗ್ರರ ಅಡಗುತಾಣವನ್ನು ಭೇದಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

    ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಗಡಿಯಾಚೆಯಿಂದ ಕಳ್ಳಸಾಗಣೆ ಮಾಡಿ ಆ ಪ್ರದೇಶದಲ್ಲಿ ಇರಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರಾಗಿ ಹೊಸದಾಗಿ ಸೇರಿದವರಿಗೆ ಈ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಿತರಣೆ ಮಾಡಲು ಇಲ್ಲಿ ಸಂಗ್ರಹಿಸಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಶ್ರೀನಗರ: ಕುಪ್ವಾರದಲ್ಲಿ ಹಿಮಪಾತದಿಂದ ರಸ್ತೆ ಬಂದ್ ಆಗಿದ್ದರಿಂದ ಸೈನಿಕರ ವಾಹನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆರ್ಮಿ ಅಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸೋಮವಾರ ಬೆಳಗ್ಗೆ ಕಲರೂಸ್ ಕಂಪನಿ ಕಮಾಂಡರ್ ಗೆ ಕೆರೆ ಮಾಡಿದ ಆಶಾ ಕಾರ್ಯಕರ್ತೆ ಗರ್ಭಿಣಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಹಿಮಪಾತದಿಂದಾಗಿ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಬರುತ್ತಿಲ್ಲ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು.

    ಕೂಡಲೇ ಕಾರ್ಯಪ್ರವೃತ್ತರಾದ ಕಮಾಂಡರ್ ಆಶಾ ಕಾರ್ಯಕರ್ತೆ ಸೂಚಿಸಿ ದ ನಾರಿಕೂಟ್ ಸ್ಥಳಕ್ಕೆ ಸೇನೆ ವೈದ್ಯಕೀಯ ಟೀಂ ಕಳುಹಿಸಿದ್ದಾರೆ. ಸೇನಾ ವಾಹನದಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲಿ ಹೆರಿಗೆಯಾಗಿದೆ. ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ನಂತರ ಮಗು ಮತ್ತು ತಾಯಿಯನ್ನ ಕಲರೂ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ಮೋದಿ ಕ್ರಮ ಕೈಗೊಳ್ಳದಿದ್ರೆ ನಾನೇ ಸೇಡು ತೀರಿಸ್ಕೊಳ್ತೀನಿ: ಕುಪ್ವಾರದಲ್ಲಿ ಹುತಾತ್ಮ ಯೋಧನ ತಾಯಿ

    ನವದೆಹಲಿ: ಮೋದಿ ಕ್ರಮ ಕೂಗೊಳ್ಳಲು ವಿಫಲರಾದ್ರೆ ನಾನೇ ನನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ತೀನಿ ಎಂದು ಕುಪ್ವಾರದಲ್ಲಿ ಹುತಾತ್ಮರಾದ ಯೋಧರೊಬ್ಬರ ತಾಯಿ ಹೇಳಿಕೆ ನೀಡಿದ್ದಾರೆ.

    ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಸೇರಿ ಮೂವರು ಯೋಧರು ಗುರುವಾರದಂದು ಹುತಾತ್ಮರಾಗಿದ್ದರು. ಕ್ಯಾಪ್ಟನ್ ಆಯುಷ್ ಯಾದವ್, ಜೆಸಿಒ ಭೂಪ್ ಸಿಂಗ್ ಗುಜ್ಜರ್ ದುಸ್ಸಾ ಹಾಗೂ ನಾೈಕ್ ವೆಂಕಟ್ ರಮಣ್ ಹುತಾತ್ಮರಾದ ಸೈನಿಕರು. ಇಬ್ಬರು ಉಗ್ರರನ್ನು ಸೇನಾ ಪಡೆ ಹೊಡೆದುರುಳಿಸಿತ್ತು.

    25 ವರ್ಷದ ಮಗ ಆಯುಷ್ ಯಾದವ್ ಉಗ್ರರ ದಾಳಿಗೆ ಬಲಿಯಾಗಿರೋದ್ರಿಂದ ಮನನೊಂದ ತಾಯಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿಯನ್ನ ಒತ್ತಾಯಿಸಿದ್ದಾರೆ. ಒಂದು ವೇಳೆ ಪ್ರಧಾನಿಯವರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ರೆ ನಾನೇ ಮಗನ ಸಾವಿನ ಸೇಡು ತೀರಿಸುತ್ತೇನೆ ಅಂತಾ ತಿಳಿಸಿದ್ದಾರೆ.

    ಆಯುಷ್ ಯಾದವ್ ತಂದೆ ಅರುಣ್ ಕಂಟ್ ಯಾದವ್ ಕೂಡ ಉಗ್ರರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದು, ಈ ರೀತಿ ನಮ್ಮ ಮಕ್ಕಳು ಹತ್ಯೆಯಾಗೋದನ್ನ ಎಲ್ಲಿಯತನಕ ನೋಡಿಕೊಂಡಿರಲು ಸಾಧ್ಯ? ಎಂದಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಹೋರಾಟಗಾರರ ಬಗ್ಗೆ ಕಿಡಿಕಾರಿದ ಅವರು, ಇಂತಹ ಘಟನೆಗಳ ಬಗ್ಗೆ ಅವರು ತುಟಿ ಬಿಚ್ಚಲ್ಲ. ಸೈನಿಕರು ಪ್ರತೀಕಾರ ತೀರಿಸಿಕೊಂಡಾಗ ಮಾನವ ಹಕ್ಕುಗಳ ಹೋರಾಟಗಾರರು ದೂರುತ್ತಾರೆ. ಆದ್ರೆ ಈ ಘಟನೆ ಅವರಿಗೇನೂ ಅಲ್ಲ. ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದಾಗ ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ, ತನಿಖೆಗಳು ನಡೆಯುತ್ತದೆ, ಕ್ರಮ ಕೈಗೊಳ್ತಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು.

    ನನ್ನ ಅಣ್ಣನ ಮಗಳು ಮತ್ತು ಆಕೆಯ ಗಂಡ ಇಬ್ಬರೂ ಮೇಜರ್‍ಗಳಾಗಿದ್ದಾರೆ. ನನ್ನ ಮಗ ಬದುಕಿದ್ದರೆ ಮುಂದೊಂದು ದಿನ ಆತನೂ ಮೇಜರ್ ಆಗ್ತಿದ್ದ ಅಂತಾ ಯಾದವ್ ಹೇಳಿದ್ರು.

    ದೇಶದಲ್ಲಿ ಯಾವ ರೀತಿಯ ವಾತಾವರಣ ಇದೆ ಅಂತ ನೀವು ನೋಡಬಹುದು. ಬಲವಾದ ನೀತಿ ಇಲ್ಲದಿದ್ರೆ ಮತ್ತು ಸೂಕ್ತ ಕ್ರಮ ಕೈಗೊಳ್ಳದಿದ್ರೆ ಇದು ಮುಂದುವರೆಯುತ್ತದೆ. ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಏನಾದ್ರೂ ಮಾಡಲೇಬೇಕು. ಬೇರೆ ಯಾರ ಮಕ್ಕಳಿಗೂ ಈ ರೀತಿ ಆಗಬಾರದು ಅಂತ ಯಾದವ್ ಮರುಗಿದ್ರು.

  • ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    ಕುಪ್ವಾರದಲ್ಲಿ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ- 3 ಯೋಧರು ಹುತಾತ್ಮ

    – ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಗಡಿ ನಿಯಂತ್ರಣಾ ರೇಖೆಯ ಬಳಿ ಸೇನಾ ನೆಲೆ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ 3 ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಮುಂಜಾನೆ 4 ಗಂಟೆಯ ವೇಳೆಗೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಯೋಧರು ಮತ್ತು ಉಗ್ರರ ಮಧ್ಯೆ 4 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಯೋಧರ ಕಾರ್ಯಾಚರಣೆ ಮುಂದುವರೆದಿದೆ.

    ಕಳೆದ ವರ್ಷ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದಿಂದ ನುಸುಳಿ ಬಂದ ಉಗ್ರರು ನಡೆಸಿದ ದಾಳಿಯಲ್ಲಿ  19 ಯೋಧರು ಹುತಾತ್ಮರಾಗಿದ್ದರು.

  • ತಾಯಿಯ ಶವವನ್ನು ಹೊತ್ತು ಹಿಮದ ಮೇಲೆಯೇ 30 ಕಿ.ಮೀ ನಡೆದ ಭಾರತೀಯ ಯೋಧ!

    ನವದೆಹಲಿ: ಭಾರತೀಯ ಸೇನಾ ಯೋಧರೊಬ್ಬರು ದಟ್ಟವಾದ ಹಿಮದ ರಾಶಿಯನ್ನು ಲೆಕ್ಕಿಸದೆ 10 ಗಂಟೆಯಲ್ಲಿ ಸುಮಾರು 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಂತಹ ಮನಕಲಕುವ ಘಟನೆ ನಡೆದಿದೆ.

    ಏನಿದು ಘಟನೆ?: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ತಹಸಿಲ್ ಪ್ರಾಂತ್ಯದ ಮೊಹಮದ್ ಅಬ್ಬಾಸ್ ಎಂಬ ಯೋಧ ಪಂಜಾಬಿನ ಪಠಣ್‍ಕೋಟ್‍ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಚಳಿ ಹೆಚ್ಚಿರುವ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿಯನ್ನು ಪಠಾಣಕೋಟ್‍ಗೆ ಕರೆಸಿದ್ದರು. ಆದ್ರೆ ವಾರದ ಹಿಂದೆ ಅಬ್ಬಾಸ್ ಅವರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮರುದಿನ ಸೇನೆಯು ತಾಯಿಯ ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದೆ. ಬಳಿಕ ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ದಟ್ಟವಾದ ಹಿಮದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಯೋಧ ಮತ್ತೆ ಸ್ಥಳೀಯ ಆಡಳಿತದ ಸಹಾಯವನ್ನು ಬಯಸಿದ್ದರು. ಆದ್ರೆ ಪರಿಸ್ಥಿತಿ ಕ್ಲಿಷ್ಟವಾಗಿದ್ದರಿಂದ ಸೇನೆಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಕುಪ್ವಾರಾದವರೆಗೆ ಹೇಗಾದ್ರೂ ಮಾಡಿ ಅಬ್ಬಾಸ್ ತಾಯಿಯ ದೇಹವನ್ನು ತಂದಿದ್ದರು. ಆದ್ರೆ ಅಲ್ಲಿಂದ ಅವರ ಸ್ವಗ್ರಾಮಕ್ಕೆ 30 ಕಿ.ಮಿ. ದೂರವಿದೆ. ಈ ಗ್ರಾಮವು ಎತ್ತರದಲ್ಲಿರುವುದರಿಂದ ಅಲ್ಲಿಗೆ ವಾಹನ ಸಂಚರಿಸುತ್ತಿಲ್ಲ. ಹೀಗಾಗಿ ಈ ಕೆಟ್ಟ ಪರಿಸ್ಥಿಯಲ್ಲೂ ತನ್ನ ಹಠ ಬಿಡೆದೆ ಕೊರೆಯುವ ಚಳಿಯಲ್ಲಿಯೂ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾರೆ.

    ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಹಾಗೂ ಸ್ಥಳೀಯರು ಅಬ್ಬಾಸ್ ಸಹಾಯಕ್ಕೆ ಧಾವಿಸಿದ್ದಾರೆ. `ಸೇನೆಯವರು ಹೆಲಿಕಾಪ್ಟರ್ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಅಂತಾ ಅಬ್ಬಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರ ಈ ಆರೋಪವನ್ನು ಸೇನೆ ತಳ್ಳಿಹಾಕಿದೆ.

    ಒಟ್ಟಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ತಾಯಿಯ ಅಂತ್ಯಸಂಸ್ಕಾರ ವನ್ನು ಗುರುವಾರ ಸಂಜೆ ಸ್ವಗ್ರಾಮದಲ್ಲೇ ಅಬ್ಬಾಸ್ ನೆರವೇರಿಸಿದ್ದಾರೆ.