Tag: Kunigal Ranganath

  • ರಾಜಣ್ಣ ವಜಾ ಬೆನ್ನಲ್ಲೇ ಹೊಸ ಬಾಂಬ್‌ ಸಿಡಿಸಿದ ಕುಣಿಗಲ್‌ ರಂಗನಾಥ್‌

    ರಾಜಣ್ಣ ವಜಾ ಬೆನ್ನಲ್ಲೇ ಹೊಸ ಬಾಂಬ್‌ ಸಿಡಿಸಿದ ಕುಣಿಗಲ್‌ ರಂಗನಾಥ್‌

    ಬೆಂಗಳೂರು: ಸಹಕಾರ ಮಂತ್ರಿ ಕೆಎನ್‌ ರಾಜಣ್ಣ (KN Rajanna) ವಜಾ ಬೆನ್ನಲ್ಲೇ ಡಿಕೆ ಶಿವಕುಮಾರ್‌ (DK Shivakumar) ಆಪ್ತ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಶಾಸಕ ರಂಗನಾಥ್‌ (Kunigal Ranganath) ಬಾಂಬ್‌ ಸಿಡಿಸಿದ್ದಾರೆ.

    ಇದು ಸಚಿವ ಸಂಪುಟ ಪುನಾರಚನೆ ಇರಬಹುದು ಅಥವಾ ಡಿಸಿಸಿ ಬ್ಯಾಂಕ್‌ ಚುನಾವಣೆ ಇರಬಹುದು. ಈ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ಕಿಕ್‌ಔಟ್‌

    ರಾಜಣ್ಣ ರಾಜೀನಾಮೆಯಿಂದ ತುಮಕೂರು ಜಿಲ್ಲೆಗೆ ಆಗುವ ಪರಿಣಾಮದ ಬಗ್ಗೆ ಈಗಲೇ ನಾನು ಏನು ಹೇಳಲಾರೆ. ಇದು ಸಿಎಂ ನಿರ್ಧಾರವೂ ಇರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದಲೇ ರಾಜಣ್ಣ ಉಚ್ಚಾಟನೆ? – ಆಪ್ತನನ್ನು ಉಳಿಸಲು ಸಿಎಂ ಕಸರತ್ತು

    ಹೈಕಮಾಂಡ್‌ ಖಡಕ್‌ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಆಪ್ತ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದಾರೆ.

  • ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    – ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದ ಶಾಸಕ
    – ವಿಪಕ್ಷದವರಿಗೆ ನಾವು ಆಹಾರ ಆಗಬಾರದು ಎಂದು ಕಿವಿಮಾತು

    ಬೆಂಗಳೂರು: ಕುಣಿಗಲ್‌ ನೀರಿನ ಸಮಸ್ಯೆ ಪರಿಹರಿಸಲು ಡಿಕೆ ಶಿವಕುಮಾರ್‌ (DK Shivakumar) ಅವರು ಕ್ಯಾಬಿನೆಟ್‌ನಲ್ಲಿ ನಮಗೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಇದಕ್ಕೆ ರಾಜೇಂದ್ರ ರಾಜಣ್ಣ ಅವರು ಯಾಕೆ ಮಾತಾಡ್ತಾರೆ. ನಾನು ಫೋನ್‌ ಮಾಡಿ ಬೆದರಿಕೆ ಹಾಕ್ತೀನಿ ಅಂತಾರೆ, ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನು ಸಾಮಾನ್ಯ ರೈತನ ಮಗ ಅಂತ ಕುಣಿಗಲ್‌ ಶಾಸಕ ರಂಗನಾಥ್‌ (HD Ranganath) ಅವರು ಸಚಿವ ರಾಜಣ್ಣ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    Rajendra DK Shivakumar

    ಹೇಮಾವತಿ ಕೆನಾಲ್‌ (Hemavathi canal) ವಿಚಾರದಲ್ಲಿ ಕುಣಿಗಲ್ ಶಾಸಕ ರಂಗನಾಥ್ ಬೆದರಿಕೆ ಹಾಕ್ತಿದ್ದಾರೆ ಎಂಬ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹೇಳಿಕೆ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇದನ್ನೂ ಓದಿ: ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ

    ಫೋನ್‌ನಲ್ಲಿ ಮಾತಾಡಿದ್ರೆ ಅದು ಬೆದರಿಕೆ ಹೇಗೆ ಆಗಬೇಕು? ನಮ್ಮ ಸರ್ಕಾರ ಬಂದಿದೆ. ಜನರ ಪರ ನಾವು ಕೆಲಸ ಮಾಡೋಣ. ಶಿರಸಾವಹಿಸಿ ಕೆಲಸ ಮಾಡೋಣ. ಸಹಕಾರ ಸಂಘದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರೇ ಅನೇಕ ವರ್ಷಗಳಿಂದ ಇದ್ದಾರೆ. ನಾನು ಕಾಂಗ್ರೆಸ್ ಬೆಂಬಲಿಗರನ್ನ ತರೋಕೆ ಪ್ರಯತ್ನ ಮಾಡ್ತಿದ್ದೇನೆ. ಹೀಗಾಗಿ ಸಹಕಾರಿ ಸಂಘದಿಂದ ಸಾಲ ಕೊಡಿ ಅಂತ ಸದನದಲ್ಲಿ ಕೇಳಿದ್ದೇನೆ. ರಾಜಣ್ಣ ಜೊತೆ ನನಗೆ ವೈಮನಸ್ಯ ಇಲ್ಲ. ಅವರ ಜೊತೆ ಸಲುಗೆಯಿಂದ ಬಂದಿದ್ದೇನೆ. ಯಾಕೆ ನನ್ನ ಮೇಲೆ ಭಿನ್ನಾಭಿಪ್ರಾಯ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ನಾನು ಯಾವ ಮಂತ್ರಿ ಮಗ ಅಲ್ಲ. ಬೆದರಿಕೆ ಹಾಕೋ ಗುಣ ಇಲ್ಲ. ಡಿಕೆ ಶಿವಕುಮಾರ್ ಅವರು ಶಾಸಕನಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿ ಕೊಟ್ಟಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ. ನಾನು ಯಾರಿಗೂ ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್

    ಕುಣಿಗಲ್‌ಗೆ ಕೊರಟಗೆರೆಯಿಂದ ನೀರು ತೆಗೆದುಕೊಂಡು ಹೋಗ್ತಿದ್ದಾರೆ, ಮಧುಗಿರಿಗೆ ಕೊಡ್ತಿಲ್ಲ ಅಂತ ರಾಜೇಂದ್ರ ರಾಜಣ್ಣ ಅರೋಪ ಮಾಡಿದ್ದಾರೆ. ನನ್ನನ್ನ ಜನ ಎರಡು ಬಾರಿ ಗೆಲ್ಲಿಸಿದ್ದಾರೆ ಅವರಿಗೆ ನೀರು ಕೊಡಬೇಕು. ಕುಣಿಗಲ್‌ಗೆ 90% ನೀರು ಹರಿದಿಲ್ಲ. ಕುಣಿಗಲ್‌ಗೆ ಹಾಸನದಿಂದ ನೀರು ಬೇಕು, ನೀರು ತರಲು ನಾನು ಹೋರಾಟ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ರಾಜಣ್ಣರನ್ನ `ಹನಿ’ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನಿಸಿದ್ದಾರೆ – ಪುತ್ರ ರಾಜೇಂದ್ರ

    ಅಲ್ಲದೇ ರಾಜಣ್ಣ ಬಗ್ಗೆ ನಾನೇನು ಹೇಳೊಲ್ಲ. ರಾಜಣ್ಣ ಹಿರಿಯರು. ಅವರ ಬಗ್ಗೆ ನಾನು ಹೇಳೊಲ್ಲ. ನನ್ನ ತಾಲೂಕಿನ ರೈತರಿಗೆ ಸಾಲ ಕೊಡಿಸೋದು ತಪ್ಪಾ? ಯಾಕೆ ರಾಜಣ್ಣ ಹೀಗೆ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಯಾರು ಎಷ್ಟೇ ಪ್ರವೋಕ್ ಮಾಡಿದ್ರು ನಾನು ಪ್ರವೋಕ್ ಆಗೊಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾಕೆ ಗೊಂದಲದ ಹೇಳಿಕೆ ಕೊಡ್ತೀರಾ? ಸಿಎಂ, ಡಿಸಿಎಂ ಅವರು ಉತ್ತಮ ಕೆಲಸ ಮಾಡ್ತಾರೆ ಅಂತ ಜನರು ನಿರೀಕ್ಷೆ ಇಟ್ಟಿದ್ದಾರೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ನಿರೀಕ್ಷೆ ಇದೆ, ಅದನ್ನ ಮಾಡಬೇಕು. ಬೀದಿಯಲ್ಲಿ ಮಾತಾಡೋದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮದುಗಿರಿಯವರಿಗೆ ನೀರು ತರೋಕೆ ನಾವು ಪ್ರಯತ್ನ ಮಾಡ್ತೀನಿ. ನಾನೇ ನಿಂತು ಮಧುಗಿರಿ ರೈತರಿಗೆ ನೀರು ಕೊಡ್ತೀನಿ. ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದಾರೆ.

    ಮುಂದುವರಿದು.. ವಿರೋಧ ಪಕ್ಷದವರಿಗೆ ನಾವು ಆಹಾರ ಆಗಬಾರದು. ನಮ್ಮಲ್ಲಿ ಶಿಸ್ತು ಬರಬೇಕು. ಇಲ್ಲದೇ ಹೋದ್ರೆ ಜನ ಆಡಿಕೊಳ್ತಾರೆ. ಜನರ ಪರ ನಾವು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

  • ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ

    ಹೇಮಾವತಿ ಕೆನಾಲ್ ಕದನ – ಡಿಕೆಶಿ ಸಂಬಂಧಿ ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ: ರಾಜೇಂದ್ರ ರಾಜಣ್ಣ

    ಬೆಂಗಳೂರು: ಹೇಮಾವತಿ ಕೆನಾಲ್ ವಿಚಾರದಲ್ಲಿ ಡಿಕೆಶಿ (DK Shivakumar) ಸಂಬಂಧಿ ಕುಣಿಗಲ್ ಶಾಸಕ ರಂಗನಾಥ್ (Kunigal Ranganath) ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಮಧುಗಿರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನನಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. 2 ತಿಂಗಳಿಂದ ಕುಣಿಗಲ್ ಕ್ಷೇತ್ರದವರು ಲಿಂಕ್ ಕೆನಾಲ್ ವಿಚಾರವಾಗಿ ಫೋನ್ ಮಾಡುತ್ತಿದ್ದರು. ಲಿಂಕ್ ಕೆನಾಲ್ ಕಾಮಗಾರಿ ನಾನು ಹಾಗೂ ಸಚಿವರು ನಿಲ್ಲಿಸುತ್ತೇವೆ. ನೀವು ತಡೆಯುತ್ತೀರಾ? ನಮ್ಮ ತಾಲೂಕಿಗೆ ನೀರು ಬರುವುದನ್ನು ನೀವು ಅಪ್ಪ, ಮಗ ಯಾಕೆ ಅಡಚಣೆ ಮಾಡ್ತೀರಾ? ಎಂದು ಧಮ್ಕಿ ಹಾಕಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ


    ಡಿಕೆಶಿ ಕನಸಿನ ಕೂಸು ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ (Hemavathi Express Canal) ಪರೋಕ್ಷವಾಗಿ ವಿರೋಧಿಸಿದ ಅವರು, ಲಿಂಕ್ ಕೆನಾಲ್‌ನ್ನು ನಾವು ತಡೆದಿಲ್ಲ. ಟೆಂಡರ್ ಆಗಿದೆ ಕಾಮಗಾರಿ ನಡೆಯುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ನಿಂದ ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ತೊಂದರೆ ಆಗುತ್ತದೆ. ನಮ್ಮ ಕುಡಿಯುವ ನೀರನ್ನು ನೀವು ದಾರಿ ಮಧ್ಯದಲ್ಲೇ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು? ಎಂದು ಕಿಡಿಕಾರಿದರು.

    ಇನ್ನೂ ಸಹಕಾರಿ ಸಚಿವರಿಂದ ಸಹಕಾರ ಸಿಗುತ್ತಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದ ಕುಣಿಗಲ್ ಶಾಸಕ ರಂಗನಾಥ್‌ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸಂಬಂಧಿ ಪ್ರಭಾವಿ ಸಚಿವರಿದ್ದಾರೆ ಎಂದು ಹೇಳಿ ನೀವು ನೀರು ತೆಗೆದುಕೊಂಡು ಹೋಗಬಹುದಾ? ಎಕ್ಸ್‌ಪ್ರೆಸ್‌ ಕೆನಾಲ್ ವಿಚಾರದಲ್ಲಿ ಜಿಲ್ಲೆಗೆ ಆಗುವ ಅನ್ಯಾಯವನ್ನು ರಾಜಣ್ಣ ಅವರು ಕ್ಯಾಬಿನೆಟ್‌ನಲ್ಲಿ ಹೇಳಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ನಮ್ಮ ಮೇಲೆ ಮಾತನಾಡೋದು ಸರಿನಾ? ಎಂದು ಟಾಂಗ್ ಕೊಟ್ಟರು.

    ಡಿಕೆಶಿ ಪ್ರತಿಕ್ರಿಯೆ ಏನು?
    ಹೇಮಾವತಿ ಕೆನಾಲ್ (Hemavathi Canal) ವಿಚಾರದಲ್ಲಿ ರಾಜೇಂದ್ರ ಏನು ಬೇಕಾದರು ಮಾತನಾಡಲಿ, ಕಳೆದ 20-30 ವರ್ಷದಿಂದ ವೈ.ಕೆ ರಾಮಯ್ಯ ಕಾಲದಿಂದ ಎಲ್ಲಾ ನಡೆಯುತ್ತಿದೆ. ಕುಮಾರಸ್ವಾಮಿ (HD Kumaraswamy) ಸರ್ಕಾರದಲ್ಲೇ ಪಾಸ್ ಮಾಡಿದ್ದೆವು. ರೈತರಿಗೆ ನೀರು ಸಿಗಬೇಕಾದ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

  • 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ : ಕುಣಿಗಲ್ ರಂಗನಾಥ್

    2028ರಲ್ಲಿ ನಮ್ಮ ಸರ್ಕಾರ ಬಂದ್ರೆ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ : ಕುಣಿಗಲ್ ರಂಗನಾಥ್

    ಬೆಂಗಳೂರು: 2028ರಲ್ಲಿ ನಮ್ಮ ಸರ್ಕಾರ ಬಂದರೆ 2000 ರೂ. ಇರುವ ಗೃಹಲಕ್ಷ್ಮಿ ಹಣವನ್ನ 4,000 ರೂ.ಗೆ ಏರಿಸುತ್ತೇವೆ ಎಂದು ಶಾಸಕ ಕುಣಿಗಲ್ ರಂಗನಾಥ್ (Kunigal Ranganath) ಹೇಳಿದರು.

    ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನವೇ ನಾನು ಹೇಗಾದರೂ ಬಡವರಿಗೆ ಸಹಾಯ ಮಾಡಬೇಕು ಎಂದು ಹೇಳಿದ್ದರು. ಗೃಹಲಕ್ಷ್ಮಿಯು ವಿಶೇಷವಾದ ಹಣಕಾಸು ಯೋಜನೆಯಾಗಿದೆ. ಇವತ್ತು ಬಹಳಷ್ಟು ಜನರು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾರೆ. 2000 ರೂ ಏನಾಗುತ್ತೆ? 2,000ದಲ್ಲಿ ಏನು ಬದಲಾಗುತ್ತದೆ. ಈ ಬದಲಾವಣೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದರು. ಇದನ್ನೂ ಓದಿ: ಕಲುಷಿತ ಆಹಾರ ಸೇವನೆ ಕೇಸ್‌ | ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ – ಮಂಡ್ಯ ಡಿಸಿ

    ಹಳ್ಳಿಯಲ್ಲಿ ಇರುವವರಿಗೆ ಇನ್ನೂ 5,000 ಮನೆಗಳನ್ನು ಕೊಡಿಸಬೇಕು ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಕೆಲವು ಕುಟುಂಬಗಳು ಗುಡಿಸಲಲ್ಲಿ ವಾಸಮಾಡುತ್ತಿದ್ದಾರೆ. 24,000 ಸಾವಿರ ರೂ. ಪ್ರತಿ ವರ್ಷ ಕೊಟ್ಟರೇ ಆ ಬದುಕಿನ ಬದಲಾವಣೆಯ ಬೆಳಕನ್ನು ನೋಡಬೇಕು ಅಂದರೆ ಬೆಂಗಳೂರಲ್ಲಿ ಇರೋರು ಬಂದು ನೋಡಬೇಕು ಎಂದು ನುಡಿದರು. ಇದನ್ನೂ ಓದಿ: ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕೊಡಿಸಿ: ಟಿ.ಎ.ಶರವಣ ಮನವಿ

    ದಯವಿಟ್ಟು ಗ್ಯಾರಂಟಿ ಸ್ಕೀಂ ಗೃಹಲಕ್ಷ್ಮಿ ಬಗ್ಗೆ ಯಾರಾದರು ವಿರೋಧ ಮಾಡಿದರೆ ಆ ಶಾಪ ತಟ್ಟುತ್ತದೆ ಎಂದು ಹೇಳಲು ಇಚ್ಛೆ ಪಡುತ್ತೇನೆ. ಇವತ್ತು ನಾನು ಚಾಲೆಂಜ್ ಹಾಕುತ್ತಿದ್ದೇನೆ. ಮುಂದಿನ ಸರ್ಕಾರ ಯಾವುದೇ ಬದಲಾವಣೆ ಆದರೂ ಯಾರೂ ಗ್ಯಾರೆಂಟಿ ಸ್ಕೀಂ ನಿಲ್ಲಸಲು ಆಗುವುದಿಲ್ಲ. ಮುಂದಿನ ಸಾಲಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಾಪಾಸ್ ಅಧಿಕಾರಕ್ಕೆ ಬಂದರೆ 2000 ರೂ. ಅನ್ನು 4000 ರೂ.ಗೆ ಏರಿಕೆ ಮಾಡಲು ನಾವು ತಯರಾಗುತ್ತೇವೆ ಎಂದರು. ಇದನ್ನೂ ಓದಿ: ಕೋಲಾರ| ಕುಡಿಯಲು ಹಣ ನೀಡದ ಚಿಕ್ಕಮ್ಮ – ಬಿಯರ್ ಬಾಟಲಿಯಿಂದ ತಿವಿದು ಕೊಲೆ ಯತ್ನ