Tag: kunigal mla

  • ಡಿಕೆಶಿ ಸಿಎಂ ಆಗಬೇಕು, ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ: ಕುಣಿಗಲ್ ರಂಗನಾಥ್

    ಡಿಕೆಶಿ ಸಿಎಂ ಆಗಬೇಕು, ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ: ಕುಣಿಗಲ್ ರಂಗನಾಥ್

    ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಸಿಎಂ ಆಗಬೇಕು ಅಂತಾ ಕಾರ್ಯಕರ್ತರು ಹೇಳೋದ್ರಲ್ಲಿ ಅರ್ಥ ಇದೆ. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ನಾನೂ ಹೇಳಿದ್ದೇನೆ ಅಂತಾ ಕುಣಿಗಲ್ ಶಾಸಕ ರಂಗನಾಥ್ (Ranganath) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಆಗುವ ಹೇಳಿಕೆ ಕೊಡಬಾರದು. ಕೆಲವು ವಿಚಾರದಲ್ಲಿ ನನಗೂ ಅಸಮಾಧಾನ ಇದೆ. ಆದರೆ ತುಮಕೂರು ವಿಚಾರದಲ್ಲಿ ನಾನು ಹೋಗಿ ಕೂತು, ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ರಾಜಣ್ಣನವರು ನಮ್ಮ ಜಿಲ್ಲೆಯ ಹಿರಿಯ ನಾಯಕರು. ಅವರು ಬೇರೆ ಪಾರ್ಟಿಗೆ ಹೋಗಿ ಬಂದಿರಬಹುದು. ಆದ್ರೆ ಬಿಜೆಪಿಗೆ ಹೋಗೋ ನಿರ್ಧಾರ ಮಾಡಲ್ಲ. ಆ ವಿಚಾರದಲ್ಲಿ ಮಾತಾಡುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

     ಹೈಕಮಾಂಡ್ ವಿರುದ್ಧ ಮಾತಾಡಿದ್ದಕ್ಕೆ ವಜಾ ಮಾಡಿದ್ದಾರೆ. ಹೈಕಮಾಂಡ್‌ನವರೇ ಮಂತ್ರಿ ಮಾಡಿದ್ದಾರೆ. ರಾಜೇಂದ್ರ ಅವರು ದೊಡ್ಡ ರಾಜಕಾರಣಿ. ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ಅವರಿಗೆ ಎಂಎಲ್‌ಸಿ ಚುನಾವಣೆಯಲ್ಲಿ ನಾನೂ ಸಾಥ್ ಕೊಟ್ಟಿದ್ದೇನೆ. ರಾಜಣ್ಣ ಲಾಯಲ್ಟಿ ಬಗ್ಗೆ ನಾನು ಮಾತಾಡಲ್ಲ ಎಂದು ಹೇಳಿ ಜಾರಿಕೊಂಡರು.

  • ಅಪಘಾತದಲ್ಲಿ ಮೂಳೆ ಮುರಿತ – ವ್ಯಕ್ತಿಯ ಆಪರೇಷನ್ ಮಾಡಿದ ಶಾಸಕ ರಂಗನಾಥ್

    ಅಪಘಾತದಲ್ಲಿ ಮೂಳೆ ಮುರಿತ – ವ್ಯಕ್ತಿಯ ಆಪರೇಷನ್ ಮಾಡಿದ ಶಾಸಕ ರಂಗನಾಥ್

    ತುಮಕೂರು: ಕುಣಿಗಲ್‌ನ ಶಾಸಕ ಡಾ.ರಂಗನಾಥ್ (Dr.Ranganath) ತನ್ನ ಕ್ಷೇತ್ರದ ಮತದಾರನಿಗೆ ಮೂಳೆ ಆಪರೇಷನ್ ಮಾಡಿದ್ದಾರೆ.

    ಕುಣಿಗಲ್ (Kunigal) ತಾಲೂಕಿನ ಅಮೃತೂರು ಬಳಿಯ ದೊಡ್ಡಕಲ್ಲಹಳ್ಳಿ ಗ್ರಾಮದ ಪರಮೇಶ್ ಅವರಿಗೆ ಬೈಕ್ ಅಪಘಾತದಲ್ಲಿ ಮೂಳೆ ಮುರಿದಿತ್ತು. ಆರ್ಥಿಕ ಸಮಸ್ಯೆಯಿಂದ ಪರಮೇಶ್ ಚಿಕಿತ್ಸೆ ಪಡೆಯಲಾಗಿರಲಿಲ್ಲ. ಈ ಹಿನ್ನೆಲೆ ಅವರು ಶಾಸಕರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ಡಿಕೆಶಿ ಪರ ಕೆಲ ಶಾಸಕರ ಬೆಂಬಲ ಮಾತ್ರ ಇದೆ, 5 ವರ್ಷವೂ ನಾನೇ ಸಿಎಂ – ಡೆಲ್ಲಿಯಲ್ಲಿ ಸಿಎಂ ಗೂಗ್ಲಿ

    ಕೂಡಲೇ ಶಾಸಕರು ಪರಮೇಶ್‌ರನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ರಂಗನಾಥ್ ಅವರು ಸ್ವತಃ ತಾವೇ ಮುಂದೆ ನಿಂತು ಭುಜದ ಮೂಳೆ ಆಪರೇಷನ್ ಮಾಡಿದ್ದಾರೆ. ಇದೀಗ ಶಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ರೈತನ ಕಾಲು ಮುರಿತ – ನಡುರಸ್ತೆಯಲ್ಲೇ ಮಲಗಿಸಿ ಪ್ರತಿಭಟಿಸಿದ ಗ್ರಾಮಸ್ಥರು

  • ಕುಣಿಗಲ್ ಶಾಸಕರಿಗೆ ಕೊರೊನಾ ಪಾಸಿಟಿವ್

    ಕುಣಿಗಲ್ ಶಾಸಕರಿಗೆ ಕೊರೊನಾ ಪಾಸಿಟಿವ್

    ತುಮಕೂರು: ಕುಣಿಗಲ್ ಶಾಸಕ ಡಾ. ರಂಗನಾಥ್‍ಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು ತನಗೆ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ಶಾಸಕರು ಕಳೆದ ವಾರ ಕುಣಿಗಲ್ ಪೋಲಿಸರೊಂದಿಗೆ ಸಭೆ ನಡೆಸಿದ್ದರು. ಆ ವೇಳೆ ಸೋಂಕಿತ ಪೇದೆಯಿಂದ ಶಾಸಕರಿಗೆ ಸೋಂಕು ತಗುಲಿರೋ ಸಾಧ್ಯತೆ ಇದೆ.

    ಈ ಹಿನ್ನೆಲೆಯಲ್ಲಿ ಶಾಸಕರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಭಾನುವಾರ ಬೆಂಗಳೂರಿನಲ್ಲೇ ಸ್ಯಾಂಪಲ್ ಕೊಟ್ಟಿದ್ದರು. ಇಂದು ಬೆಳಗ್ಗೆ ರಿಪೋರ್ಟ್ ಬಂದಿದ್ದು ಪಾಸಿಟಿವ್ ದೃಢಪಟ್ಟಿದೆ. ಹಾಗಾಗಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದ್ದು, ಈ ಮಧ್ಯೆ ಸಚಿವರು, ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರು ಶಾಸಕ ಭರತ್ ಶೆಟ್ಟಿ ಅವರಿಗೂ ಕೊರೊನಾ ಸೋಂಕು ದೃಢವಾಗಿತ್ತು. ಈ ಬಗ್ಗೆ ಸ್ವಥಃ ಶಾಸಕರೇ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದರು.