Tag: Kunduznah mosque

  • ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕುಂದುಜ್ಹ್‌ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು

    ಕಾಬೂಲ್: ಅಫ್ಘಾನಿಸ್ತಾನದ ಮಝಾರ್ ಇ-ಷರೀಫ್ ಮಸೀದಿ ಮೇಲೆ ಉಗ್ರರು ಬಾಂಬ್ ಸ್ಫೋಟ ನಡೆಸಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 65 ಜನರು ಗಾಯಗೊಂಡಿರುವ ಘಟನೆ ನಡೆದಿದೆ.

    BOMB BLAST (1)

    ಪ್ರಾರ್ಥನಾ ಸಮಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಫ್ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿರುವುದು ತಾನೇ ಎಂದು ತಾಲಿಬಾನ್‌ನ ಸ್ಥಳೀಯ ಮುಖಂಡನೊಬ್ಬ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಪೊಲೀಸ್ ವಕ್ತಾರ ಒಬೈದುಲ್ಲಾ ಅಬೇದಿ ಎಎಫ್‌ಪಿಗೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿಮಾಡಿದೆ. ಇದನ್ನೂ ಓದಿ: ಇಮ್ಲಿವಾಲಿ ಮಸೀದಿ ಮುಂದೆ ನಮಾಜ್ ಮಾಡಿದ 150 ಮಂದಿ ವಿರುದ್ಧ FIR

    BOMB BLAST

    ಶಿಯಾ ಮಸೀದಿಯೊಳಗೆ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 30-40 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್‌ನ ವಕ್ತಾರ ಮೊಹಮ್ಮದ್ ಅಸೀಫ್ ವಾಝೇರಿ ತಿಳಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪ್ರಾಂತೀಯ ಆರೋಗ್ಯ ಮಂಡಳಿಯ ವಕ್ತಾರ ಝಿಯಾ ಝೆಂಡಾನಿ ಅವರು, ಸ್ಫೋಟದಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    TALIBAN
    ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ತಾಲಿಬಾನಿ ಉಗ್ರರು ನಿಂತಿದ್ದ ದೃಶ್ಯ

    ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ದಾಳಿ ಬಗೆಗಿನ ಚಿತ್ರಗಳನ್ನು ಪರಿಶೀಲಿಸಲಾಗಿ ಬಾಂಬ್ ದಾಳಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರತ್ಯಕ್ಷದರ್ಶಿಯೊಬ್ಬರು ಎಎಫ್‌ಪಿಗೆ ದೂರವಾಣಿ ಕರೆಯ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧೀಕೃತ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

    ತಾಲಿಬಾನ್ ಅಫ್ಘಾನಿಸ್ಥಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಬಾಂಬ್ ದಾಳಿಗಳು ಕಡಿಮೆಯಾಗಿದೆ. ಆದರೂ ಆಗಾಗ್ಗೆ ಶಿಯಾ ಉಪಸಮುದಾಯದವರ ಮಸೀದಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.