Tag: Kundagola

  • ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ – ಶ್ರೀರಾಮುಲು ಗಂಭೀರ ಆರೋಪ

    ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ – ಶ್ರೀರಾಮುಲು ಗಂಭೀರ ಆರೋಪ

    ಹುಬ್ಬಳ್ಳಿ: ಕುಂದಗೋಳ ಉಪಚುನಾವಣಾ ಕಣದಲ್ಲಿ ಸಾವಿನ ರಾಜಕೀಯ ಶುರುವಾಗಿದ್ದು, ಸಚಿವ ಸಿಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ. ಅವರ ಕಿರುಕುಳದಿಂದಲೇ ಶಿವಳ್ಳಿ ಅವರು ಮೃತಪಟ್ಟಿದ್ದಾರೆ ಎಂದು ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

    ಹುಬ್ಬಳ್ಳಿಯ ಬೆಟದೂರು ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರವೇ ಕಾರಣವಾಗಿದೆ. ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಸಚಿವರು ಮೃತಟ್ಟಿದ್ದಾರೆ. ಆದರೆ ಕುಂದಗೋಳ ಜನರಿಗೆ ಸೇಡು ತಿರುಸಿಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಬೇಕು. ಅವರು ರೈತರಿಗಾಗಿ ಬಹಳ ವರ್ಷಗಳಿಂದ ಹೋರಾಟ ಮಾಡಿದ್ದು, ನಮ್ಮ ಜೀವ ಹೋದರೂ ಬಿಎಸ್‍ವೈ ಸಿಎಂ ಆಗಬೇಕು. ಮುಂದೆ ಅವರಿಗೆ ವಯಸ್ಸು ಸಹಕರಿಸುವುದಿಲ್ಲವಾದ ಕಾರಣ ಈ ಬಾರಿಯೇ ಅವರು ಮುಖ್ಯಮಂತ್ರಿ ಆಗಬೇಕು ಎಂದರು.

    ಬಿಎಸ್‍ವೈ ಅವರಿಗೆ ನಾಟಕ ಮಾಡುವುದು ಗೊತ್ತಿಲ್ಲ. ಅವರಿಗೆ ಸ್ವಲ್ಪವೇ ಸಿಡುಕು ಸ್ವಭಾವವಿದೆ ಅಷ್ಟೇ. ನಾನು ಎಂದು ಯಡಿಯೂರಪ್ಪ ಬಗ್ಗೆ ಮಾತನಾಡಿಲ್ಲ. ಈ ಹಿಂದೆ ಬಿಎಸ್‍ವೈ ಬಳಿಕ ಜಗದೀಶ ಶೆಟ್ಟರ್ ಸಿಎಂ ಆಗಬೇಕು ಎಂದು ಬಯಸಿದ್ದೆ. ರಾಜಕೀಯ ಅಸ್ತಿತ್ವದ ಪ್ರಶ್ನೆಯಿಂದ ಪಾರ್ಟಿ ಮಾಡಿದ್ದೆ ಅಷ್ಟೇ ಎಂದರು.

  • ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ – ಕಾರ್ಯಕರ್ತರಿಗೆ ಡಿಕೆಶಿ ರಾಜಕೀಯ ಪಾಠ

    ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ – ಕಾರ್ಯಕರ್ತರಿಗೆ ಡಿಕೆಶಿ ರಾಜಕೀಯ ಪಾಠ

    ಹುಬ್ಬಳ್ಳಿ: ಸುಮ್ಮನೆ ಬಿಳಿ ಬಟ್ಟೆ ತೊಟ್ಟರೆ ಲೀಡರ್ ಆಗಲ್ಲ. ಯಾರು ತಮ್ಮ ತಮ್ಮ ಬೂತ್‍ಗಳಲ್ಲಿ ಲೀಡ್ ತಂದು ಕೊಡುತ್ತಾರೋ ಅವರು ನಿಜವಾದ ನಾಯಕರು ಎಂದು ಕುಂದಗೋಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ಡಿ.ಕೆ.ಶಿವಕುಮಾರ್ ರಾಜಕೀಯ ಪಾಠವನ್ನು ಮಾಡಿದ್ದಾರೆ.

    ಪ್ರಚಾರ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಮತಗಟ್ಟೆಗಳಲ್ಲಿ ಲೀಡ್ ತಂದು ಕೊಟ್ಟವರು ನನ್ನ ತರಹ ಲೀಡರ್ ಆಗುತ್ತಾರೆ. ಬಿಳಿ ಬಟ್ಟೆ ತೊಟ್ಟು ನನ್ನ ಜೊತೆ ಬಂದರೆ ನಾನು ಅವರನ್ನು ನಂಬಲ್ಲ. ಯಾರು ಏನೇ ಹೇಳಿದರು ನೀವು ಎಲ್ಲರ ಮನೆಗೆ ಹೋಗಿ ಪ್ರಚಾರ ಮಾಡಬೇಕು. ಕ್ಷೇತ್ರದಲ್ಲಿ ಕುಸುಮಾ ಶಿವಳ್ಳಿಯವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಕಾರ್ಯಕರ್ತರಿಗೆ ಚುನಾವಣೆ ಉತ್ಸಾಹ ತುಂಬಿದರು.

    ಬಿಜೆಪಿಯ ಸ್ಥಳೀಯ ನಾಯಕರಿಗೆ ಆಹ್ವಾನ ಕೊಡುತ್ತೇನೆ, ನಮ್ಮ ಪಕ್ಷದ ಜೊತೆಗೆ ನೀವು ಕೈ ಜೋಡಿಸಬೇಕು ಎಂದರು. ಈ ಚುನಾವಣೆ ನಡೆಯುತ್ತಿರುವುದು, ಮೋದಿಗಾಗಿ ಅಲ್ಲ. ಇಲ್ಲಿ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಅಭ್ಯರ್ಥಿಗಳಲ್ಲ. ಇಲ್ಲಿ ನಡೆಯುತ್ತಿರುವುದು ಸಿ.ಎಸ್.ಶಿವಳ್ಳಿಯವರ ಚುನಾವಣೆ, ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಇವತ್ತಿನಿಂದ 18 ರವರೆಗೆ ನಮ್ಮ ಕೆಲಸ ನಡೆಯುತ್ತದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಸಿದ್ದರಾಮಯ್ಯ ನಮ್ಮ ನಾಯಕ: ಇದಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ನಾಯಕರು, ನಾವು ಅವರನ್ನು ಮೂಲೆ ಗುಂಪು ಮಾಡುವ ಮಾತೇ ಇಲ್ಲಾ. ನಾವೆಲ್ಲಾ ಸೇರಿ ಅವರ ಕೈ ಬಲಪಡಿಸುತ್ತೆವೆ. ಸರ್ಕಾರ ಸುಭದ್ರವಾಗಿದೆ ಮುಂದೆಯೂ ಇರಲಿದೆ. ರಾಜಕೀಯ ಚದುರಂಗ ಆಟದ ಬಗ್ಗೆ ಮೇ 23ರ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

  • ಬಂಡಾಯ ಶಮನ ಮಾಡಿ ‘ಟ್ರಬಲ್ ಶೂಟರ್’ ಆಗಿ ಹೊರ ಹೊಮ್ಮಿದ ಜಮೀರ್ ಅಹ್ಮದ್

    ಬಂಡಾಯ ಶಮನ ಮಾಡಿ ‘ಟ್ರಬಲ್ ಶೂಟರ್’ ಆಗಿ ಹೊರ ಹೊಮ್ಮಿದ ಜಮೀರ್ ಅಹ್ಮದ್

    ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ 6 ಮಂದಿ ಪಕ್ಷದ ಮುಖಂಡರನ್ನು ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಯಶಸ್ವಿಯಾಗಿದ್ದಾರೆ.

    ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಕೆ ಮಾಡಿದ್ದ ಅಷ್ಟು ಮಂದಿಯ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಲು ಜಮೀರ್ ಸಫಲರಾಗಿದ್ದು, ಕುಂದಗೋಳ ತಾಲೂಕು ಅಧಿಕಾರಿಗಳ ಕಚೇರಿಗೆ ಕರೆದುಕೊಂಡ ಬಂದು ನಾಮಪತ್ರ ವಾಪಸ್ ಪಡೆದರು.

    ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಬಂಡಾಯ ನಾಯಕರು ಅಸಮಾಧಾನದಿಂದ ನಾಮಪತ್ರ ಸಲ್ಲಿಸಿದ್ದರು. ಒಟ್ಟಾರೆ ಜೆಡಿಎಸ್ ಅಭ್ಯರ್ಥಿ ಸೇರಿ 9 ಮಂದಿ ಇಂದು ನಾಮಪತ್ರ ವಾಪಸ್ ಪಡೆದು ಪಕ್ಷದ ಮೇಲೆ ಅಭಿಮಾನ ತೋರಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕೈ ಬಂಡಾಯ ಅಭ್ಯರ್ಥಿಗಳಾಗಿದ್ದ ಸುರೇಶ್ ಸವಣೂರು, ಹೆಚ್.ಎಲ್.ನದಾಫ್, ಚಂದ್ರಶೇಖರ್ ಜುಟ್ಟಲ್, ಜೆ.ಡಿ.ಘೋರ್ಪಡೆ, ಶಿವಾನಂದ ಬೆಂತೂರು, ವಿಶ್ವಾನಥ ಕುಬಿಹಾಳ ಸೇರಿದಂತೆ 9 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.

    ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮುಖಂಡರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದರು. ಸದ್ಯ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯವನ್ನು ತಿಳಿಗೊಳಿಸಿ ಜಮೀರ್ ಅಹ್ಮದ್ ಅವರು ಮತ್ತೊಬ್ಬ ಟ್ರಬಲ್ ಶೂಟರ್ ಆಗಿ ಹೊರ ಹೊರಹೊಮ್ಮಿದ್ದಾರೆ.

  • ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಡಿಕೆಶಿ ‘ಉತ್ತರ’ ದಂಡಯಾತ್ರೆಗೆ ಬ್ರೇಕ್ ಹಾಕಲು ಮುಂದಾದ್ರಾ ಸಿದ್ದರಾಮಯ್ಯ ಶಿಷ್ಯರು!

    ಬೆಂಗಳೂರು: ಕರ್ನಾಟಕದ ಲೋಕಸಭಾ ಚುನಾವಣೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿಯ ಉಪ ಚುನವಣೆಯ ಕಾವು ಏರತೊಡಗಿದೆ. ಕುಂದಗೋಳ ಕಾಂಗ್ರೆಸ್ ಅಂಗಳದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಶಿವಾನಂದ್ ಬೆಂತೂರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕುಂದಗೋಳ ಚುನಾವಣೆಯ ಜವಾಬ್ದಾರಿಯನ್ನು ಕೈ ಕಮಾಂಡ್ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಉತ್ತರ ಕರ್ನಾಟಕದ ದಂಡಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ತಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯರೇ ಮುಂದಾದ್ರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿವೆ.

    ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಕುಸುಮಾ ಶಿವಳ್ಳಿಗೆ ಟಿಕೆಟ್ ನೀಡಿದಕ್ಕೆ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಬಂಡಾಯವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಜಾರಕಿಹೊಳಿ ಸಹೋದರು ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಡಿಕೆಶಿ ಟಾರ್ಗೆಟ್ ಯಾಕೆ?
    ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಹೆಗಲಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ. ಒಂದು ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ರೆ ಜಯದ ಕ್ರೆಡಿಟ್ ಶಿವಕುಮಾರ್ ಅವರಿಗೆ ಸಿಗಲಿದೆ. ಈ ಒಂದು ಗೆಲುವಿನ ಮೂಲಕ ಉತ್ತರ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಹಿಡಿತ ಹೆಚ್ಚಾಗುತ್ತೆ ಅನ್ನೋ ಭಯ ಜಾರಕಿಹೊಳಿ ಸೋದರರು ಮತ್ತು ಸ್ಥಳೀಯ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಮ್ಮದೇ ಅಭ್ಯರ್ಥಿಯನ್ನು ಸೋಲಿಸಲು ಸ್ಥಳೀಯ ನಾಯಕರು ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕುಸುಮಾ ಶಿವಳ್ಳು ಸೋಲು ಕಂಡರೆ ಸಿದ್ದರಾಮಯ್ಯರಿಗೂ ಮುಖಭಂಗ, ಡಿಕೆಶಿಗೂ ಭಾರೀ ಹಿನ್ನಡೆ ನಿಶ್ಚಿತ. ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಸಮಯದಲ್ಲಿಯೂ ಡಿ.ಕೆ.ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದರು. ಅಂದು ಸಹ ಜಾರಕಿಹೊಳಿ ಸೋದರರು ಬಹಿರಂಗವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

  • ಕುಂದಗೋಳ ಕ್ಷೇತ್ರದ ಉಪ ಚುನಾವಣೆ- ಕಾಂಗ್ರೆಸ್, ಬಿಜೆಪಿಯಲ್ಲಿ ಭಿನ್ನಮತ

    ಕುಂದಗೋಳ ಕ್ಷೇತ್ರದ ಉಪ ಚುನಾವಣೆ- ಕಾಂಗ್ರೆಸ್, ಬಿಜೆಪಿಯಲ್ಲಿ ಭಿನ್ನಮತ

    – ಮೋದಿ, ಶಾಗೆ ಕಾರ್ಯಕರ್ತರು ಟ್ವೀಟ್

    ಹುಬ್ಬಳ್ಳಿ: ಸಚಿವ ಸಿ.ಎಸ್ ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್-ಬಿಜೆಪಿಯಲ್ಲೀಗ ಭಿನ್ನಮತ ಸೃಷ್ಟಿಸಿದೆ.

    ಬಿಜೆಪಿಯಿಂದ ಎಸ್.ಐ ಚಿಕ್ಕನಗೌಡ್ರು ಮತ್ತು ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ರೂ ಚಿಕ್ಕನಗೌಡ್ರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಪಾಟೀಲ್ ಈಗ ಕಮಲ ನಾಯಕರ ಕೈಗೆ ಸಿಗ್ತಿಲ್ಲ. ಇತ್ತ ಶಿವಳ್ಳಿ ಪತ್ನಿ ಕುಸುಮಾಗೆ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್‍ನಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ 19 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಭಿನ್ನಮತೀಯ ಶಿವಾನಂದ ಬೆಂಥೂರ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ.

    ಮಾಜಿ ಸಿಎಂ ಶೆಟ್ಟರ್ ಈ ಬಗ್ಗೆ ಪ್ರತಿಕ್ರಿಯಿಸಿ ಅಸಮಾಧಾನ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಎಸ್ಐ ಚಿಕ್ಕನಗೌಡ್ರು ಹಾಗೂ ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾದ್ರು. ಹಾಗಾಗಿ ಕಳೆದ ಬಾರಿ ಭಾರೀ ಕಡಿಮೆ ಅಂತರದಿಂದ ಸೋತ ಎಸ್ ಐ ಚಿಕ್ಕನಗೌಡರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಎಂ.ಆರ್ ಪಾಟೀಲ್ ಅವರು ಟಿಕೆಟ್ ಕೇಳಿದ್ರು. ಆದರೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ ಸೂಕ್ತ ಸ್ಥಾನ ಮಾನ ನೀಡೋದಾಗಿ ಭರವಸೆ ನೀಡಿದ್ರೂ ಸಹ ಅವರು ಮಾತ್ರ ನಾಯಕರ ಕೈಗೆ ಸಿಗುತ್ತಿಲ್ಲ. ಇನ್ನೆರಡು ದಿನದಲ್ಲಿ ಎಂ.ಆರ್ ಪಾಟೀಲರನ್ನು ಸಮಾಧಾನಪಡಿಸಿ ಒಗ್ಗಟ್ಟಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.

    ಆದ್ರೆ ಇತ್ತ ಬಿಜೆಪಿ ಕಾರ್ಯಕರ್ತರು ಮಾತ್ರ ಎಮ್.ಆರ್ ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ಟ್ವೀಟ್ ಮಾಡಿದ್ದು ಕ್ಷೇತ್ರದಲ್ಲಿ ಉತ್ತಮ ಹೆಸರಿರುವ ಅಭ್ಯರ್ಥಿಗೆ ರಾಜ್ಯ ನಾಯಕರು ಟಿಕೆಟ್ ಕೊಡುತ್ತಿಲ್ಲ. ದಯಮಾಡಿ ಅರ್ಹ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ.

  • ಕುಂದಗೋಳಕ್ಕೆ ಮೇ 19 ರಂದು ಉಪಚುನಾವಣೆ

    ಕುಂದಗೋಳಕ್ಕೆ ಮೇ 19 ರಂದು ಉಪಚುನಾವಣೆ

    ಬೆಂಗಳೂರು: ರಾಜ್ಯ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದೆ.

    ಮೇ 19 ರಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ದಿನವಾಗಿದ್ದು, ಅಂದೇ ಕುಂದಗೋಳದಲ್ಲೂ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಾಮಪತ್ರ ಸಲ್ಲಿಸಲು ಏ.29 ಕೊನೆ ದಿನವಾಗಿದ್ದು, ಏ.30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 2 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನಾಂಕವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಮೇ 23 ರಂದು ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.

    ಮಾರ್ಚ್ 22 ರಂದು ಹೃದಯಾಘಾತದಿಂದ ಸಚಿವರು ಮೃತ ಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಶಿವಳ್ಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ವಿಶ್ರಾಂತಿ ಇಲ್ಲದೇ ಸತತವಾಗಿ ಕಾರ್ಯನಿರ್ವಹಿಸಿದ ಕಾರಣದಿಂದ ಹೃದಯಾಘಾತ ಸಂಭವಿಸಿತ್ತು.

    ಮಹದಾಯಿ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಳ್ಳಿ ಅವರು 1994ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕುಂದಗೋಳ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಆಯ್ಕೆ ಆಗಿ, ಈ ಬಾರಿ ಸಚಿವರಾಗಿದ್ರು. ಸಿದ್ದರಾಮಯ್ಯ ಆಪ್ತ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ನಡೆಸಿದ್ದ ಶಿವಳ್ಳಿ ಅವರು 2004 ಗೆಲುವು ಪಡೆದರೆ, 2008 ರಲ್ಲಿ ಸೋಲುಂಡಿದ್ದರು. ಆದರೆ 2013, 2018 ರಲ್ಲಿ ಗೆಲುವು ಪಡೆದಿದ್ದು 2018ರ ಚುನಾವಣೆಯಲ್ಲಿ 64,871 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಸರಳ ಸಜ್ಜನ ಜೀವನಕ್ಕೆ ಹೆಸರಾಗಿದ್ದ ಶಿವಳ್ಳಿ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

  • ಕಾರ್ಗಿಲ್‍ನಲ್ಲಿ ಪಾಕ್ ವಿರುದ್ಧ ಸೆಣಸಿದ್ದ ಯೋಧ-ವಿದ್ಯಾರ್ಥಿಗಳಿಗೆ ಉಚಿತ ಸೇನಾ ತರಬೇತಿ

    ಕಾರ್ಗಿಲ್‍ನಲ್ಲಿ ಪಾಕ್ ವಿರುದ್ಧ ಸೆಣಸಿದ್ದ ಯೋಧ-ವಿದ್ಯಾರ್ಥಿಗಳಿಗೆ ಉಚಿತ ಸೇನಾ ತರಬೇತಿ

    -ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಬೋಧನೆ

    ಧಾರವಾಡ/ಹುಬ್ಬಳ್ಳಿ: ಸೇನೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಅದೆಷ್ಟೋ ಜನರು ಕನಸು ಕಾಣುತ್ತಾರೆ. ಆದ್ರೆ ಎಲ್ಲರಿಗೂ ಆ ಅದೃಷ್ಟ ಸಿಗಲ್ಲ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹುಬ್ಬಳ್ಳಿಯ ನಿವೃತ್ತ ಯೋಧ ನಾಗರಾಜ್ ಅವರು ಶಾಲೆಯಲ್ಲಿ ಸೇನಾ ತರಬೇತಿ ನೀಡುತ್ತಿದ್ದಾರೆ.

    ಧಾರವಾಡದ ಕುಂದಗೋಳದ ನಿವಾಸಿ ನಾಗರಾಜ್ ಗವಳಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಾಗರಾಜ್ ವಿದ್ಯಾರ್ಥಿಗಳಿಗೆ ಸೇನಾ ಕಸರತ್ತು ಹೇಳಿಕೊಡುತ್ತಿದ್ದಾರೆ. 1999ರಲ್ಲಿ ಕಾರ್ಗಿಲ್‍ ವಶ ಪಡಿಸಿಕೊಂಡಿದ್ದ ಪಾಕಿಸ್ತಾನವನ್ನು ಸದೆಬಡಿದ ಆಪರೇಷನ್ ಪರಾಕ್ರಮ ಮತ್ತು ಆಪರೇಷನ್ ವಿಜಯ್ ಎರಡರಲ್ಲೂ ಭಾಗಿಯಾಗಿದ್ದ ಧೀರ ಯೋಧ. 2010ರಲ್ಲಿ ಹವಾಲ್ದಾರ್ ವೃತ್ತಿಯಿಂದ ನಿವೃತ್ತರಾಗಿರೋ ನಾಗರಾಜ್, ಕುಂದಗೋಳದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಸೆಲ್ಫ್ ಡಿಫೆನ್ಸ್ ತರಬೇತಿ ನೀಡುತ್ತಿದ್ದಾರೆ. 5 ವರ್ಷದಿಂದ ಜಿಲ್ಲೆಯ ಕೆಲ ಕಾಲೇಜ್‍ಗಳಲ್ಲಿ ಉಚಿತ ಸೈನಿಕ ತರಬೇತಿಯನ್ನೂ ಕೊಡುತ್ತಿದ್ದಾರೆ. ದೇಶವನ್ನು ಕಾಯೋ ಹೆಗ್ಗಳಿಕೆ, ಅಲ್ಲಿನ ಕಷ್ಟ ಸ್ಥಿತಿಯನ್ನೂ ಮಕ್ಕಳಿಗೆ ನಾಗರಾಜ್ ಮನವರಿಕೆ ಮಾಡಿಕೊಡುತ್ತಿದ್ದಾರೆ.

    https://www.youtube.com/watch?v=bzVl6Whz15o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯವರು ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ- ಶಾಸಕ ಶಿವಳ್ಳಿ

    ಬಿಜೆಪಿಯವರು ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ- ಶಾಸಕ ಶಿವಳ್ಳಿ

    ಹುಬ್ಬಳ್ಳಿ: ನನಗೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ. ಅವರು ನೀಡಲು ಮುಂದಾದ ಎಲ್ಲ ಭರವಸೆಗಳನ್ನು ನಾನು ತಳ್ಳಿ ಹಾಕಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬಿಜೆಪಿಯವರು ಯಾವ ಭರವಸೆ ನೀಡಿದ್ದರು ಎನ್ನುವುದನ್ನು ನಾನು ಹೇಳುವುದಿಲ್ಲ. ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್. ಹೀಗಾಗಿ ಪಕ್ಷವನ್ನು ಬಿಟ್ಟು ಹೋಗುವ ವಿಚಾರವನ್ನು ಎಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಿಂದುಳಿದ ವರ್ಗದ ಹಿರಿಯ ಕಾಂಗ್ರೆಸ್ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ. ಈ ಕುರಿತು ಪಕ್ಷದ ನಾಯಕರಿಗೆ ಹಾಗೂ ಹೈಕಮಾಂಡ್‍ಗೆ ಒತ್ತಡ ಹೇರಿದ್ದು ನಿಜ. ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿಲ್ಲ. ವಯಸ್ಸಿದೆ, ಅವಕಾಶಗಳಿವೆ ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಶಾಸಕರು ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಒಂದು ವೇಳೆ ಸರ್ಕಾರ ಬೀಳಿಸಬೇಕು ಅಂದರೆ 14 ಜನ ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ, ಜಯಗಳಿಸಿ ಬರುವುದು ಅಸಾಧ್ಯ. ಹೀಗಾಗಿ ಯಾರೊಬ್ಬರೂ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕೈ ಶಾಸಕ ಶಿವಳ್ಳಿ

    ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ: ಕೈ ಶಾಸಕ ಶಿವಳ್ಳಿ

    ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 9 ಕಾಂಗ್ರೆಸ್ ಶಾಸಕರು ಜಯಗಳಿಸಿದ್ದೇವೆ. ಅವರಲ್ಲಿ ನಾನು ಹಿರಿಯ ಸ್ಥಾನದಲ್ಲಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇತ್ತು ಎಂದು ಶಾಸಕ ಎಸ್.ಸಿ.ಶಿವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಉತ್ತರ ಕರ್ನಾಟಕ ಭಾಗದ ಕುರುಬ ಸಮಾಜದ ಪ್ರಭಾವಿ ವ್ಯಕ್ತಿಯಾಗಿರುವೆ. ಅಲ್ಲದೇ ಕುಂದಗೋಳ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ನನಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಗಾಢವಾಗಿತ್ತು. ಆದರೆ ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಿದ್ದು, ಭಾರೀ ನಿರಾಶೆ ಉಂಟಾಗಿದೆ ಎಂದು ಅವರು ಹೇಳಿದರು.

    ಮುಂದಿನ ಕ್ರಮದ ಬಗ್ಗೆ ಕ್ಷೇತ್ರ ಕಾರ್ಯಕರ್ತರ ಜೊತೆಗೆ ಚರ್ಚೆ ನಡೆಸುತ್ತೇನೆ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಲ್ಲಿ ಆತಂಕ ಮೂಡಿಸಿದ್ದಾರೆ.

    ಇತ್ತ ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಸಿ.ಎಸ್ ಶಿವಳ್ಳಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದು, ಪಕ್ಷದ ಮುಖಂಡರ ಜತೆ ಚರ್ಚೆಗೆ ಶಿವಳ್ಳಿ ನಕಾರ ವ್ಯಕ್ತಪಡಿಸಿದ್ದಾರೆ.

  • ಧಾರವಾಡದಲ್ಲಿ ಗರಿ ಗರಿ ರಾಜಕೀಯ ಗಿರಮಿಟ್ಟು – ಅಖಾಡ ಹೇಗಿದೆ?

    ಧಾರವಾಡದಲ್ಲಿ ಗರಿ ಗರಿ ರಾಜಕೀಯ ಗಿರಮಿಟ್ಟು – ಅಖಾಡ ಹೇಗಿದೆ?

    ಧಾರವಾಡ ಒಂದು ರೀತಿಯಲ್ಲಿ ಹೈ ವೋಲ್ಟೇಜ್ ಮ್ಯಾಚ್ ನಡೆಯೋ ಕ್ಷೇತ್ರ. ಈ ಬಾರಿ ಧಾರವಾಡದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ, ಮಹದಾಯಿ, ಕಳಸಾ-ಬಂಡೂರಿ ಹೋರಾಟಗಳೇ ಹೈಲೈಟ್. ಧರ್ಮಯುದ್ಧದ ಜೊತೆಗೆ ಸೇರಿರೋ ಜಲಯುದ್ಧದ ನಡುವೆ ಗೆಲುವಿನ ಝಂಡಾ ಹಾರಿಸೋರು ಯಾರು ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಅಂದ ಹಾಗೆ, ಧಾರವಾಡದ ಮತಬ್ಯಾಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಹಾಗೂ ವೀರಶೈವ ಮತದಾರರೇ ನಿರ್ಣಾಯಕರು. 8 ವಿಧಾನಸಭಾ ಕ್ಷೇತ್ರಗಳಿರೋ ಧಾರವಾಡದಲ್ಲಿ 4ರಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿಷ್ಟೇ ಜೆಡಿಎಸ್ ತಮ್ಮ ತಮ್ಮ ಅಸ್ತಿತ್ವ ಕಂಡುಕೊಂಡಿವೆ.

    ಧಾರವಾಡ…ಅಲ್ಲಲ್ಲ..ದಾರವಾಡ..!
    ಅವಳಿ ನಗರದಲ್ಲಿ ಒಂದಾದ ಧಾರವಾಡ ಜಿಲ್ಲೆಗೆ ಈ ಹೆಸರು ಬರೋದ್ರ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ವಿಜಯನಗರ ಕಾಲದಲ್ಲಿ ಧಾರರಾವ್ ಅನ್ನೋನು 1403ರಲ್ಲಿ ಇಲ್ಲಿ ಕೋಟೆ ಕಟ್ಟಿದನಂತೆ. ಹೀಗಾಗಿ ದಾರವಾಡ ಅಂತಾ ಕರೆಯಲಾಯ್ತು. ಕಾಲ ಸರಿದಂತೆ ಇದು ಧಾರವಾಡವಾಗಿ ಜನರ ಬಾಯಲ್ಲಿ ರೂಪಾಂತರವಾಗ್ತಾ ಹೋಯ್ತು. ಶಾಸನಗಳಲ್ಲಿ ದಾರವಾಡ ಅನ್ನೋ ಹೆಸ್ರೇ ಉಲ್ಲೇಖವಾಗಿದೆ.

    ಕೇಳಿಸದೆ ಧಾರವಾಡದ ಕಲ್ಲು ಕಲ್ಲಿನಲೂ ಸಂಗೀತ ಸುಧೆ..!
    ಧಾರವಾಡ ಕರ್ನಾಟಕದ ಸಾಂಸ್ಕೃತಿಕ ಸ್ವರ ಸಾಮ್ರಾಟ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರೂರು. ದೇಶ ವಿದೇಶಗಳಲ್ಲಿ ಪ್ರಖ್ಯಾತಿಗಳಿಸಿದ ಪಂಡಿತ ಮಲ್ಲಿಕಾರ್ಜುನ ಮನಸೂರರು, ಡಾ. ಗಂಗೂಬಾಯಿ ಹಾನಗಲ್, ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಭೀಮಸೇನ ಜೋಷಿ, ಮಾಧವಗುಡಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಸಂಗೀತಾ ಕಟ್ಟಿ, ಕೈವಲ್ಯ ಗುರವ, ಕೊಳಲು ವಾದಕ ಪ್ರವೀಣ್ ಗೊಡ್ಕಿಂಡಿ, ಗೀತಾ ಜಾವಡೇಕರ್, ಹೀಗೆ ಸಂಗೀತ ಕ್ಷೇತ್ರಕ್ಕೆ ಅಗಣಿತ ಕೊಡುಗೆ ಕೊಟ್ಟ ದಿಗ್ಗಜರ ಊರು ಧಾರವಾಡ.

    ಇಲ್ಲರಳುವ ಹೂವೂ ಸೂಸುತ್ತೆ ಅಕ್ಷರಗಳ ಕಂಪು..!
    ಧಾರವಾಡದ ಜನರಿಗೆ ಸಾಹಿತ್ಯ ಪ್ರೇಮ, ಭಾಷಾ ಪ್ರೀತಿ ತುಸು ಜಾಸ್ತಿ ಅಂತಾನೇ ಅನ್ಸುತ್ತೆ. ಯಾಕಂದ್ರೆ, ಊರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನ ಯಾರೂ ಮರೆಯೋ ಹಾಗೇ ಇಲ್ಲ. ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ದ.ರಾ.ಬೇಂದ್ರೆ ,ಆನಂದಕಂದ (ಬೆಟಗೇರಿ ಕೃಷ್ಣಶರ್ಮ), ಆಲೂರು ವೆಂಕಟರಾಯರು, ಎಂ.ಎಂ.ಕಲಬುರ್ಗಿ, ಕೀರ್ತಿನಾಥ ಕುರ್ತಕೋಟಿ, ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಸಾಗುತ್ತೆ.

    ಧಾರವಾಡ ಹೆಸರಿನ ಜೊತೆ ಬೆಸೆದುಕೊಂಡ ಸಿಹಿಯ ನಂಟು..
    ಧಾರವಾಡ ಹೆಸರು ಕೇಳಿದ ತಕ್ಷಣ ನೆನಪಾಗೋದು ಧಾರವಾಡ ಪೇಡ. ಈ ಸ್ವಾದ ಧಾರವಾಡಕ್ಕೆ ಬೆಸೆದುಕೊಂಡು 175 ವರ್ಷಗಳೇ ಕಳೆದವು ಅಂದ್ರೆ ನೀವು ನಂಬಲೇಬೇಕು. ಆಂಗ್ಲ ಪದದಿಂದ ಈ ಸಿಹಿಗೆ ಪೇಡಾ ಅನ್ನೋ ಪದ ಬಂತು ಅನ್ನೋ ಉಲ್ಲೇಖಗಳೂ ಸಿಗುತ್ವೆ. ಅಂದ ಹಾಗೆ, ಮೊದಲಿಗೆ ಉತ್ತರ ಭಾರತದಿಂದ ಧಾರವಾಡಕ್ಕೆ ವಲಸೆ ಬಂದ ಠಾಕೂರರು ಈ ಸಿಹಿ ತಿಂಡಿಯನ್ನ ತಮ್ಮ ಹೊಟ್ಟೆ ಪಾಡಿಗಾಗಿ ಮಾಡೋದಕ್ಕೆ ಶುರು ಮಾಡಿದ್ರು. ಮೊದಲಿಗೆ ಠಾಕೂರ ಪೇಡಾ ಅಂತಿದ್ದಿದ್ದು ಕಾಲ ಕ್ರಮೇಣವಾಗಿ ಧಾರವಾಡ ಪೇಡಾ ಆಯ್ತು.

    ಕುಂದಗೋಳದಲ್ಲಿ ವಿಜಯದ ಗೋಲ್ ಹೊಡೆಯೋರು ಯಾರು..?
    ಕುಂದಗೋಳ ಅಂದ್ರೆ ಒಂದರ್ಥದಲ್ಲಿ ಬರಡು ನೆಲ. ಲಿಂಗಾಯತ ವೀರಶೈವರು, ಕುರುಬರ ಮತಗಳೇ ಇಲ್ಲಿ ನಿರ್ಣಾಯಕ. ಕಳೆದ ಬಾರಿ ಸಿ ಎಸ್ ಶಿವಳ್ಳಿ ಕಾಂಗ್ರೆಸ್ ನಿಂದ ಗೆದ್ದಿದ್ರು. ಈ ಬಾರಿ ಕೂಡಾ ಸಿಎಸ್ ಶಿವಳ್ಳಿಯವ್ರೇ ಕಾಂಗ್ರೆಸ್ ಕ್ಯಾಂಡಿಡೇಟ್. ಕಳೆದ ಬಾರಿ ಬಿಜೆಪಿ ಹಾಗೂ ಕೆಜೆಪಿ ಒಡೆದ ಲಾಭ ಪಡೆದಿದ್ದ ಶಿವಳ್ಳಿ ಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡೋದ್ರಲ್ಲಿ ಸಂಶಯವೇ ಇಲ್ಲ. ಚಿಕ್ಕನಗೌಡ ಈಶ್ವರಗೌಡ ಬಿಜೆಪಿಯ ಹುರಿಯಾಳು. ಜೆಡಿಎಸ್ ನಿಂದ ಮಲ್ಲಿಕಾರ್ಜುನ ಅಕ್ಕಿ ಕಣದಲ್ಲಿದ್ದಾರೆ. ಕುಂದರಗೋಳದ ಮತದಾರ ಯಾರನ್ನ ಗೆಲುವಿನ ಗಾದಿಯಲ್ಲಿ ಕೂರಿಸ್ತಾನೆ ಅನ್ನೋದೇ ನಿಗೂಢ.

    ಗ್ರಾಮೀಣ ಕ್ಷೇತ್ರದಲ್ಲಿ ಮಿಣ ಮಿಣ ಮಿನುಗೋರ್ಯಾರು..?
    ಧಾರವಾಡ ಗ್ರಾಮೀಣ ಸಚಿವ ವಿನಯ್ ಕುಲಕರ್ಣಿಯವ್ರ ಕ್ಷೇತ್ರ. ಇಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಕೊಟ್ಟಿದ್ದಾರೆ ಅನ್ನೋದಕ್ಕಿಂತ ಇತ್ತೀಚಿಗಿನ ಕೆಲವೊಂದಷ್ಟು ಬೆಳವಣಿಗೆಗಳಿಗೇ ಈ ಕ್ಷೇತ್ರ ಸುದ್ದಿ ಮಾಡಿತ್ತು. ಯೋಗೇಶ್ ಗೌಡ ಕೊಲೆ ಪ್ರಕರಣ, ಲಿಂಗಾಯತ ಪ್ರತ್ಯೇಕ ಧರ್ಮದ ಗೊಂದಲಗಳು ವಿನಯ್ ಕುಲಕರ್ಣಿಯವ್ರಿಗೆ ಹಿನ್ನಡೆ ತಂದ್ರೆ ಅಚ್ಚರಿ ಏನಿಲ್ಲ. ಇವರಿಗೆ ಪ್ರಬಲ ಪೈಪೋಟಿ ಕೊಡೋದಕ್ಕೆ ಬಿಜೆಪಿಯಿಂದ ಅಮೃತ ದೇಸಾಯಿ ಶಕ್ತಿ ಮೀರಿ ಕ್ಯಾಂಪೇನ್ ನಲ್ಲಿ ತೊಡಗಿದ್ದಾರೆ. ಇಲ್ಲಿ ಇವರಿಬ್ಬರ ನಡುವೆಯೇ ನೇರ ಹಣಾಹಣಿ.

    ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ ಯಾರು ಉತ್ತಮ..?
    ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ 2013ರಲ್ಲಿ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ರಾಜಕೀಯದಿಂದ ದೂರ ಸರಿದ ಬಳಿಕ ಅವ್ರ ಪುತ್ರ ಅಖಾಡಕ್ಕೆ ಧುಮುಕಿದ್ರು. ದೂರದೃಷ್ಟಿ ಉಳ್ಳ ಹಾಗೆಯೇ ಕೈ ಮತ್ತು ಬಾಯಿ ಶುದ್ಧವಿರೋ ರಾಜಕಾರಣಿ ಅನ್ನೋ ಹೆಗ್ಗಳಿಕೆಯನ್ನೂ ಗಳಿಸಿದ ಅರವಿಂದ ಬೆಲ್ಲದ 2013ರಲ್ಲಿ ಗೆದ್ದಿದ್ರು. ಕಾಂಗ್ರೆಸ್ ನಿಂದ ಮಾಜಿ ಸಚಿವ ಎಸ್.ಆರ್. ಮೋರೆ ಆಕಾಂಕ್ಷಿಯಾಗಿದ್ರೂ ಈ ಬಾರಿ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ್ ಗೆ ಕಾಂಗ್ರೆಸ್ ಮಣೆ ಹಾಕ್ತು. ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ತೀವ್ರ ಹಣಾಹಣಿ ಇರೋದು.

    ಕಲಘಟಗಿಯ ರಣಭೂಮಿಯಲ್ಲಿ ಗೆಲ್ಲೋನೇ ಗಟ್ಟಿಗ..!
    ಬಹುಶಃ ಧಾರವಾಡದ ಜನ ಅದ್ರಲ್ಲೂ ರೈತರು ಹಾಲಿ ಶಾಸಕ ಸಂತೋಷ್ ಲಾಡ್ ರ ಕೆಲಸವನ್ನು ಎಂದಿಗೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿ ರಾಜಕಾರಣವನ್ನು ಪರಿಚಯಿಸಿ ಬೆಳೆಸಿದವ್ರು. ಕೊಳವೆ ಬಾವಿ ಕೊರೆಯೋ ಯಂತ್ರ ತರಿಸಿ ರೈತರಿಗೆ ಅನುಕೂಲ ಮಾಡಿಕೊಟ್ರು. ಒಂದು ರೀತಿಯಲ್ಲಿ ಕಲಘಟಗಿ ಕ್ಷೇತ್ರದ ಜನ್ರಿಗೆ ಲಾಡ್ ಲಾರ್ಡ್ ಥರಾ ಭಾಸವಾದ್ರು. ಆದ್ರೆ ಈ ಬಾರಿ ಬಿಜೆಪಿಯಿಂದ ನಿಂತಿರೋ ಸಿಎಂ ನಿಂಬಣ್ಣವರ್ ಹಾಗೂ ಜೆಡಿಎಸ್ ನಿಂದ ಕಂಟೆಸ್ಟ್ ಮಾಡ್ತಿರೋ ಎ.ಎಸ್ ರುದ್ರಪ್ಪ ಯಾವ ರೀತಿಯ ಪೈಪೋಟಿ ಕೊಡ್ತಾರೆ ಅನ್ನೋದಷ್ಟೇ ಸದ್ಯಕ್ಕಿರೋ ಕೌತುಕ.

    ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ಗೆಲುವಿನ ಟ್ರಿಣ್ ಟ್ರಿಣ್ ಬಾರಿಸೋರು ಯಾರು..?
    ಇಲ್ಲಿ 1994ರಿಂದಲೂ ಜನ ಕಮಲವನ್ನ ಮುದುಡೋಕೆ ಬಿಟ್ಟೇ ಇಲ್ಲ. ಜನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಿಗೇ ಜೈ ಅನ್ತಾ ಬಂದಿದ್ದಾರೆ. ಅಭಿವೃದ್ಧಿಯ ಮಂತ್ರವನ್ನು ಜಪಿಸ್ತಾನೇ ತಮ್ಮ ಕ್ಷೇತ್ರವನ್ನ ಮತ್ತಷ್ಟು ಬಲಪಡಿಸ್ತಾನೇ ಬಂದಿದ್ದಾರೆ. ಇನ್ನು, ತಾವು ಮುಖ್ಯಮಂತ್ರಿ ಗಾದಿಯಲ್ಲಿ ಕೂತಾಗ್ಲೂ ಒಂದಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಇಂಪ್ಲಿಮೇಟ್ ಮಾಡಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಜನ್ರೊಂದಿಗೆ ವನ್ ಟು ವನ್ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಕಾರ್ಯಕರ್ತರೂ ತಮ್ಮ ನಾಯಕನನ್ನ ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲಿ ಉದ್ಭವವಾಗಿಲ್ಲ. ಕಾಂಗ್ರೆಸ್ ಈ ಬಾರಿ ಮಹೇಶ್ ಸಿ ನಲ್ವಾಡ್ ರನ್ನ ತನ್ನ ಹುರಿಯಾಳಾಗಿ ಕಣಕ್ಕಿಳಿಸಿದ್ದು ಪ್ರಬಲ ಪೈಪೋಟಿ ಕೊಡೋದಕ್ಕೆ ರೆಡಿಯಾಗಿದೆ. ಇನ್ನುಳಿದಂತೆ ಜೆಡಿಎಸ್ ನಿಂದ ರಾಜಣ್ಣ ಕೊರವಿ, ಆಮ್ ಆದ್ಮಿ ಪಕ್ಷದಿಂದ ಸಂತೋಷ್ ನರಗುಂದ್ ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ.

    ಶಿಗ್ಗಾಂವಿಯಲ್ಲಿ ಓಡೋ ಕುದುರೆಗೆ ಲಗಾಮುಹಾಕೋರು ಯಾರು..?
    2008ರಿಂದಲೂ ಶಾಸಕ ಸ್ಥಾನದಲ್ಲಿ ಗಟ್ಟಿಯಾಗಿ ಕೂತಿರೋ ಹಾಲಿ ಶಾಸಕ ಬಿಜೆಪಿಯ ಬಸವರಾಜ ಬೊಮ್ಮಾಯಿ ಕೆಲಸಗಳನ್ನೂ ಮಾಡಿದ್ದಾರೆ. ಇವ್ರ ಕೆಲಸಗಳೇ ಈ ಬಾರಿಯೂ ಶ್ರೀರಕ್ಷೆಯಾಗುತ್ತಾ ಅನ್ನೋದೇ ಪ್ರಶ್ನೆ. ಕ್ಷೇತ್ರದಲ್ಲಿ ಮುಸಲ್ಮಾನ ಮತದಾರರ ಸಂಖ್ಯೆ ಜಾಸ್ತಿ ಇರೋದು ಕೂಡಾ ನಿರ್ಣಾಯಕವಾಗುವ ಸಾಧ್ಯತೆಗಳಿವೆ. ಸಯ್ಯೇದ ಅಜಿಂಪಿರ್ ಎಸ್ ಖಾದ್ರಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿರೋದ್ರಿಂದ ಮುಸಲ್ಮಾನ ಮತಗಳನ್ನು ಸೆಳೆಯೋ ಸಾಧ್ಯತೆಗಳಿವೆ. ಜೆಡಿಎಸ್ ನ ಅಶೋಕ್ ಬೇವಿನಮರದ ಈ ಬಾರಿ ಬಿಜೆಪಿಗೆ ಟಫ್ ಕಾಂಪಿಟೀಶನ್ ಕೊಡೋದ್ರಲ್ಲಿ ಡೌಟೇ ಇಲ್ಲ ಅನ್ನೋ ವಾತಾವರಣ ಸೃಷ್ಟಿಯಾಗಿದೆ.

    ಹೋರಾಟದ ನಾಡಲ್ಲಿ ಕದನ ಕಲಿಗಳ ಹೋರಾಟ!
    ನವಲಗುಂದ ಅಪ್ಪಟ ಹೋರಾಟದ ಕಿಚ್ಚು ಹತ್ತಿಸಿದ ನೆಲ. ಇಲ್ಲಿನ ಜನ ಹೋರಾಟಗಳನ್ನು ನೋಡಿಕೊಂಡೇ, ಅದ್ರ ನಡುವೆಯೇ ಬೆಳೆದವರು ಅಂದ್ರೂ ತಪ್ಪಾಗೋದಿಲ್ಲ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಹೋರಾಟ, ಪೊಲೀಸ್ ದೌರ್ಜನ್ಯ ಇತ್ಯಾದಿಯಿಂದ ಸುದ್ದಿಯಾಗುತ್ತಲೇ ಇರುವ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಲಿಂಗಾಯತ-ವೀರಶೈವ, ಕುರುಬ ಸಮಾಜದವರ ಮತಗಳೇ ನಿರ್ಣಾಯಕ. ಬಿಜೆಪಿ ಸೋಲಿಸಿದ ಜೆಡಿಎಸ್ ನ ಎನ್.ಎಚ್. ಕೋನರೆಡ್ಡಿ ಹಾಲಿ ಶಾಸಕ. ಕಾಂಗ್ರೆಸ್ ನಿಂದ ವಿನೋದ್ ಎಸ್ ಸೂತಿ ಇಳಿದಿದ್ರೆ, ಬಿಜೆಪಿಯಿಂದ ಶಂಕರಪ್ಪ ಗೌಡ ಪಾಟೀಲ್ ಮುನೇನ್ ಕೊಪ್ಪ ಗಾದಿ ಏರೋ ಪೈಪೋಟಿಯಲ್ಲಿದ್ದಾರೆ.