Tag: Kumta

  • ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಎತ್ತಿ ಹಿಡಿದ ಕೋರ್ಟ್ – ಏನಿದು ವಿವಾದ?

    ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಎತ್ತಿ ಹಿಡಿದ ಕೋರ್ಟ್ – ಏನಿದು ವಿವಾದ?

    ಕಾರವಾರ: ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ (Dinakar Shetty) ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಧಾರವಾಡ ಕೋರ್ಟ್‌ ತೀರ್ಪು ನೀಡಿದೆ.

    2023 ರ ವಿಧಾನಸಭೆ ಚುನಾವಣೆಯಲ್ಲಿ 673 ಮತಗಳ ಅಲ್ಪ ಮತದಿಂದ ಗೆಲುವು ಕಂಡಿದ್ದ ಬಿಜೆಪಿ ಶಾಸಕ ದಿನಕರ್ ಶೆಟ್ಟಿಯ ಆಯ್ಕೆ ಪ್ರಶ್ನಿಸಿ ಅಲ್ಪ ಮತದಲ್ಲಿ ಪರಾಭವಗೊಂಡಿದ್ದ ಜೆಡಿಎಸ್‌ನ ಸೂರಜ್ ಸೂನಿ ಎರಡು ವರ್ಷದ ಹಿಂದೆ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ಜನರ ಕ್ಷಮೆಯಾಚಿಸಬೇಕು: ರವಿಕುಮಾರ್

    ದೂರಿನ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಸೂರಜ್ ಸೋನಿ ಅವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ 59,966 ಮತ ಗಳಿಸಿದ್ದರು. ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ 59,293 ಮತ ಗಳಿಸಿದ್ದರು. 673 ಮತದಲ್ಲಿ ಬಿಜೆಪಿ ದಿನಕರ್ ಶೆಟ್ಟಿ ಗೆಲವು ಕಂಡಿದ್ದರು. ಈ ಗೆಲುವನ್ನು ಎತ್ತಿ ಹಿಡಿದ ಧಾರವಾಡ ಹೈಕೋರ್ಟ್, ಈ ಆದೇಶ ಮಾಡಿದೆ.

    ಕ್ಷೇತ್ರ- ಕುಮಟಾ ವಿಧಾನಸಭಾ ಕ್ಷೇತ್ರ
    ದಿನಕರ್ ಶೆಟ್ಟಿ (ಬಿಜೆಪಿ) – ಗೆಲುವು
    ಪಡೆದ ಮತಗಳ ಸಂಖ್ಯೆ – 59,966
    ಸೂರಜ್ ನಾಯ್ಕ ಸೋನಿ (ಜೆಡಿಎಸ್) – ಸೋಲು
    ಪಡೆದ ಮತಗಳ ಸಂಖ್ಯೆ – 59,293
    ಗೆಲುವಿನ ಅಂತರ – 673

  • ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

    ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರಾಫ್ಟ್‌ (Raft) ಪತ್ತೆಯಾದ ಘಟನೆ ನಡೆದಿದೆ.‌

    ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರಾಫ್ಟ್‌ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಈ ವಸ್ತುಗಳು ಕೇರಳದ ಕೊಚ್ಚಿಯಲ್ಲಿ ಮುಳುಗಿರುವ ಹಡಗಿನ ರಾಫ್ಟ್ ಎಂಬ ಶಂಕೆ ವ್ಯಕ್ತವಾಗಿದೆ. ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು (ಎಂಎಸ್ಸಿ ಎಲ್ಸಾ 3 ಎಂಬ ಹಡಗು) ಕೊಚ್ಚಿ ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಈ ಹಡಗಿನ ರಾಫ್ಟ್‌ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

  • ಉತ್ತರ ಕನ್ನಡದಲ್ಲಿ ಭಾರೀ ಮಳೆ – ಗುಡ್ಡ ಕುಸಿತ, ರಸ್ತೆಗುರುಳಿದ ಬೃಹತ್ ಬಂಡೆ

    ಉತ್ತರ ಕನ್ನಡದಲ್ಲಿ ಭಾರೀ ಮಳೆ – ಗುಡ್ಡ ಕುಸಿತ, ರಸ್ತೆಗುರುಳಿದ ಬೃಹತ್ ಬಂಡೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು (Rain), ಕುಮಟಾ (Kumta) ತಾಲೂಕಿನ ಮುಸುಗುಪ್ಪ ಬಳಿ ಮೂರೂರು-ಹರಕಡೆ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿದಿದೆ.

    ಗುಡ್ಡ ಕುಸಿತದಿಂದ (Landslide ) ರಸ್ತೆಗೆ ಭಾರೀ ಗಾತ್ರದ ಬಂಡೆಗಲ್ಲು ಉರುಳಿ ಬಂದಿದೆ. ಪರಿಣಾಮ ಮೂರೂರು-ಹರಕಡೆ ನಡುವಿನ ರಸ್ತೆ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಹನ ಸವಾರರಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಹೈವೇ| ಕುಮಟಾ – ಶಿರಸಿ ಸಂಪರ್ಕ ಕಡಿತ

    ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ (Rain) ದೇವಿಮನೆ ಘಟ್ಟದಲ್ಲಿ (Devimane Ghat) ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿತ್ತು. ಇದರಿಂದ ಕುಮಟಾ – ಶಿರಸಿ (Kumta- Sirsi) ಸಂಪರ್ಕ ಕಡಿತಗೊಂಡಿತ್ತು. ಕಳೆದ ಒಂದು ವರ್ಷದಿಂದ 766ಇ ಹೆದ್ದಾರಿ ಕಾಮಗಾರಿ ನಡೆಯುತಿತ್ತು.

    ಮುಂಗಾರಿನ ಆರಂಭದಲ್ಲೇ ಮಳೆ ಅಬ್ಬರಿಸುತ್ತಿದ್ದು, ರಾಜ್ಯದ ನಾನ ಕಡೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಆರಂಭದಲ್ಲೇ ಹೀಗಾದರೆ, ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಎಂಬ ಆತಂಕ ಸಹ ಜನರನ್ನು ಕಾಡುತ್ತಿದೆ. ಇದನ್ನೂ ಓದಿ: ಧಾರಾಕಾರ ಮಳೆ – ಹೇಮಾವತಿ ಡ್ಯಾಂ ಒಳಹರಿವಿನಲ್ಲಿ ಭಾರೀ ಏರಿಕೆ

     

  • ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ – ಜಿಲ್ಲಾಧಿಕಾರಿಗಳ ಸ್ಪಷ್ಟನೆ ಏನು?

    ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪ ಅನುಭವ – ಜಿಲ್ಲಾಧಿಕಾರಿಗಳ ಸ್ಪಷ್ಟನೆ ಏನು?

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗದಲ್ಲಿ ಇದ್ದಕ್ಕಿದ್ದಂತೆ ಭೂಮಿ ನಡುಗಿದ ಅನುಭವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಸುದ್ದಿ ʻಪಬ್ಲಿಕ್ ಟಿವಿʼಯಲ್ಲಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ನೈಸರ್ಗಿಕ ಪ್ರಕೃತಿ ವಿಕೋಪ ಕೇಂದ್ರದಲ್ಲಿ ವಿಚಾರಿಸಿದ್ದೇವೆ. ಯಾವುದೇ ರೀತಿಯ (Earthquakes) ಭೂಕಂಪನವಾಗಿಲ್ಲ. ರಿಕ್ಟರ್ ಮಾಪನದಲ್ಲೂ ದಾಖಲಾಗಿಲ್ಲ. ಹೀಗಾಗಿ ಜನ ಭಯಪಡುವ ಅವಶ್ಯಕತೆ ಇಲ್ಲ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಯಾವುದೇ ಸ್ಫೋಟ ನಡೆಸಿಲ್ಲ. ಜನ ಕಳುಹಿಸಿದ ಆಡಿಯೋ ಪರಿಶೀಲನೆ ಮಾಡಿದ್ದೇವೆ. ಭೂ ಕಂಪನವಾದಾಗ ರಿಕ್ಟರ್ ಮಾಪನದಲ್ಲಿ ರೆಕಾರ್ಡ್‌ ಆಗಬೇಕು, ಯಾವುದೂ ರೆಕಾರ್ಡ್‌ ಆಗಿಲ್ಲ. ಈ ಬಗ್ಗೆ ಜನರಿಂದ ಮಾಹಿತಿ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

    ಶಿರಸಿ ತಾಲೂಕಿನ ಮತ್ತಿಘಟ್ಟಾ, ಸಂಪಖಂಡ, ಹೆಗಡೆಕಟ್ಟಾ, ಯಲ್ಲಾಪುರ ತಾಲೂಕಿನ ಚೌವತ್ತಿ, ಸಿದ್ದಾಪುರ ತಾಲೂಕಿನ ಕಾನಸೂರು, ತಟ್ಟಿಕೈ, ಮಾವಿನಗುಂಡಿ, ಹಲಗೇರಿ, ಕುಮಟಾ ಹಾಗೂ ಶಿರಸಿ ತಾಲೂಕಿನ ಗಡಿ ಭಾಗವಾದ ದೇವಿಮನೆ ಘಟ್ಟ ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು ಎಂದು ಜನ ಮಾಹಿತಿ ನೀಡಿದ್ದರು. ಹಲವು ಪ್ರತ್ಯಕ್ಷದರ್ಶಿಗಳು ನಾಲ್ಕೈದು ಬಾರಿ ಭೂಮಿ ಕಂಪಿಸಿದೆ ಎಂದರೆ, ಹಲವರು ಗುಡುಗು ಬಂದಂತೆ ಅನುಭವವಾಗಿ ಭೂಮಿ ಕಂಪಿಸಿದೆ ಎಂದು ಹೇಳಿಕೊಂಡಿದ್ದಾರೆ.

    ರಿಕ್ಟರ್ ಮಾಪನದಲ್ಲೂ ದಾಖಲಾಗದೇ ಹೀಗೆ ಕಂಪಿಸಿದ ಅನುಭವ ಆಗಿರುವುದು ಸಾಕಷ್ಟು ಪ್ರಶ್ನೆ ಏಳುವಂತೆ ಮಾಡಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಭಾವದಿಂದ ಭೂಮಿಯ ಆಳದಲ್ಲಿ ಯಾವುದಾದರೂ ದೊಡ್ಡ ಬಂಡೆಕಲ್ಲು ಜಾರುವಂತೆ ಮಾಡಿದೆಯೇ? ಎಂಬ ಬಗ್ಗೆಯೂ ಪ್ರಶ್ನೆ ಎದ್ದಿದೆ. ಈ ಹಿಂದೆ ಘಟ್ಟ ಭಾಗದಲ್ಲಿ ನಿರಂತರವಾಗಿ ಭೂಕುಸಿತ ಸಹ ಆಗಿದೆ. ಹೀಗಾಗಿ ಮತ್ತೆ ಭೂಮಿ ಕುಸಿಯುವ ಮುನ್ಸೂಚನೆಯಾ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

  • ಶಿರಸಿ, ಕುಮಟಾದ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪನ – ಭಯಭೀತರಾದ ಜನ

    ಶಿರಸಿ, ಕುಮಟಾದ ಪಶ್ಚಿಮ ಘಟ್ಟ ಭಾಗದಲ್ಲಿ ಭೂಕಂಪನ – ಭಯಭೀತರಾದ ಜನ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ಹಾಗೂ ಕುಮಟಾ (Kumta) ಭಾಗದ ಘಟ್ಟ ಪ್ರದೇಶದಲ್ಲಿ ಮೂರು ಸೆಕೆಂಡ್‌ಗೂ ಹೆಚ್ಚಿನ ಸಮಯ ಭೂಕಂಪನದ (Earthquakes) ಅನುಭವವಾಗಿದೆ. ಇದರಿಂದ ಆ ಪ್ರದೇಶದ ಜನ ಭಯಭೀತರಾಗಿದ್ದಾರೆ.

    ಕುಮಟಾ ತಾಲೂಕಿನ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಭೂಮಿ ಕಂಪಿಸಿದೆ. ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು ಕಲ್ಲುಗಳನ್ನು ಸಿಡಿಸಿರಬಹುದು ಇದರಿಂದ ಕಂಪನ ಉಂಟಾಗಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು.

    ಈಗ ಹಿಂದೂ ಮಹಾಸಾಗರದಲ್ಲಿ 10 ಕಿ.ಮೀ ಆಳದ ರಿಡ್ಜ್ ಮಧ್ಯದಲ್ಲಿ ಅಲ್ಪ ಮಟ್ಟದ ಭೂಕಂಪನವಾಗಿದೆ. ಇದರಿಂದಲೇ ಪಶ್ಚಿಮ ಘಟ್ಟ ಭಾಗದಲ್ಲೂ ಭೂಮಿ ಕಂಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.

  • ಕುಡುಕ ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಮಾಡಿದ್ದು ಆತ್ಮಹತ್ಯೆ ನಾಟಕ!

    ಕುಡುಕ ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಮಾಡಿದ್ದು ಆತ್ಮಹತ್ಯೆ ನಾಟಕ!

    ಕಾರವಾರ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬ ಗಾದೆಯೊಂದಿದೆ. ಆದರೆ ಗಂಡ-ಹೆಂಡತಿ ಜಗಳ ಮುಂದುವರಿದರೆ ಏನಾಗುತ್ತೆ ಅನ್ನೋದಕ್ಕೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಎಂಬ ಗೃಹಿಣಿ ಮಾಡಿದ ಪಜೀತಿ ಯಾರಿಗೂ ಬೇಡ.

    ಕಳೆದೆರಡು ದಿನಗಳ ಹಿಂದೆ ಗೃಹಿಣಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂಬ ವರದಿಗೆ ಟ್ವಿಸ್ಟ್ ಸಿಕ್ಕಿದೆ. ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ಕುಮಟಾದ ಹೆಡ್‌ಬಂದರ್ ಸಮುದ್ರದ ಬಳಿ ತಾನು ತಂದಿದ್ದ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದಂತೆ ನಾಟಕವಾಡಿದ್ದಾಳೆ.

    ಸಮುದ್ರದಲ್ಲಿ ಆಕೆಯ ವೇಲ್ ಬಿದ್ದು ತೇಲುತ್ತಿದ್ದುದ್ದನ್ನು ಕಂಡು ಲೈಫ್ ಗಾರ್ಡಗಳು, ಪೊಲೀಸರು ಸಮುದ್ರ ಜಾಲಾಡಿದ್ದಾರೆ. ಆದರೆ ಆಕೆಯ ಶವ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪಿಎಸ್‌ಐ ನವೀನ್ ನೇತೃತ್ವದ ತಂಡ ಸಮುದ್ರ ಜಾಲಾಡುವ ಜೊತೆ ಬೇರೆ ರೀತಿಯಲ್ಲೂ ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ಚಿಕ್ಕಪ್ಪನನ್ನೇ ಕೊಂದ ಪ್ರಕರಣ – ಜ್ಯೂಸ್ ಅಂತ ಹೇಳಿ ಮದ್ಯ ಕುಡಿಸಿದ್ದಕ್ಕೆ ಬರ್ಬರ ಹತ್ಯೆ

    ಕೊನೆಗೆ ಆಟೋ ಚಾಲಕರೊಬ್ಬರ ಮೂಲಕ ಆಕೆ ಬೇರೆಡೆ ಅಡಗಿರುವ ಕುರಿತು ಮಾಹಿತಿ ಕಲೆಹಾಕಿ ಬಲೆ ಬೀಸಿದಾಗ ಸಾವಿನ ನಾಟಕವಾಡಿರುವುದು ಪತ್ತೆಯಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ತಾನು ಗಂಡನ ಮೇಲೆ ಕೋಪಕ್ಕೆ ಹೀಗೆ ಮಾಡಿದ್ದೇನೆ. ಪ್ರತಿ ದಿನ ಕುಡಿದು ನನ್ನೊಂದಿಗೆ ಜಗಳವಾಡುತಿದ್ದ, ಹೊಡೆಯುತಿದ್ದ. ಹೀಗಾಗಿ ಆತನಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

    ಸದ್ಯ ಆತ್ಮಹತ್ಯೆ ಪ್ರಕರಣವೇನೋ ಸುಖಾಂತ್ಯ ಕಂಡಿದೆ. ಆದರೆ ಗಂಡ-ಹೆಂಡತಿ ಜಗಳದಿಂದ ಪೊಲೀಸರು, ದಿನವಿಡೀ ರಕ್ಷಣಾ ಕಾರ್ಯದಲ್ಲಿ ತೊಡಗಿದ ಲೈಫ್ ಗಾರ್ಡ್‌ಗಳ ಸಮಯ ವ್ಯರ್ಥ ಮಾಡಿದ್ದು ಮಾತ್ರ ವಿಪರ್ಯಾಸವಾಗಿದೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

  • ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

    ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

    ಕಾರವಾರ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕರೆದುಕೊಂಡು ಆತ್ಮಹತ್ಯೆಗೆ (Suicide) ಮುಂದಾದರೂ ಕೊನೆಗೆ ಮುಗ್ದ ಮಕ್ಕಳನ್ನು ಬಲಿಕೊಡಲು ಮನಸ್ಸಾಗದೇ ತಾನೊಬ್ಬಳೇ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾದ (Kumta) ಹೆಡ್‌ಬಂದರ್ ಬಳಿ ನಡೆದಿದೆ.

    ಕುಮಟಾದ ಸಾಂತಗಲ್ ಗ್ರಾಮದ ನಿವೇದಿತಾ ನಾಗರಾಜ ಭಂಡಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಿಂದ ಸ್ಕೂಟಿಯಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ಯೋಜಿಸಿದ್ದಳು. ಆದರೆ ಮಕ್ಕಳನ್ನು ಬಲಿ ಕೊಡಲು ಮನಸ್ಸು ಒಪ್ಪದೇ ಕುಮಟಾದ ಪಿಕ್‌ಅಪ್ ಬಸ್‌ನಿಲ್ದಾಣದ ಬಳಿ ಅವರಿಬ್ಬರನ್ನು ಬಿಟ್ಟು, ಬಳಿಕ ತಾನೊಬ್ಬಳೇ ಕುಮಟಾದ ಬಂದರಿನ ಕಡಲ ತೀರಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಕಳ್ಳರಿಗೆ ಮೆಣಸಿನಕಾಯಿ ತಿನ್ನಲು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

    ಸಮುದ್ರಕ್ಕೆ ಹಾರುವುದಕ್ಕೂ ಮುನ್ನ ಮಹಿಳೆ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾಳೆ. ಮಹಿಳೆ ಸಮುದ್ರಕ್ಕೆ ಹಾರುವುದನ್ನು ಗಮನಿಸಿದ ಲೈಫ್‌ಗಾರ್ಡ್‌ಗಳು ಆಕೆಯ ರಕ್ಷಣೆಗೆ ಮುಂದಾದರೂ ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಕೊನೆಗೆ ಮಹಿಳೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಲಗಿದ್ದಾಗ ತಲೆಗೆ ದೊಣ್ಣೆಯಿಂದ ಹೊಡೆದು ಪತ್ನಿ ಕೊಂದ ಪತಿ

  • ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗ ಸಾವು – ಮೂವರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ (Sea) ಈಜಲು ತೆರಳಿದ್ದ ಪ್ರವಾಸಿಗನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಮಟಾದ (Kumta) ಬಾಡದಲ್ಲಿ ನಡೆದಿದೆ. ಮತ್ತೊಂದು ಕಡೆ ಮುರ್ಡೇಶ್ವರದಲ್ಲಿ (Murdeshwar) ಸಮುದ್ರದಲ್ಲಿ ಮುಳುಗುತ್ತಿದ್ದ ಮೂರು ಜನ ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಮೃತನನ್ನು ಶಿವಮೊಗ್ಗ (Shivamogga) ಮೂಲದ ಪ್ರಶಾಂತ್ ಗುಪ್ತ ಎಂದು ಗುರುತಿಸಲಾಗಿದೆ. ಮೃತ ಪ್ರಶಾಂತ್ 11 ಜನರೊಂದಿಗೆ ಕುಮಟಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕುಮಟಾ ಪೊಲೀಸ್‌ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಮೆದುಳು ರಕ್ತಸ್ರಾವದಿಂದ ಸಾವು

    ಇನ್ನೊಂದೆಡೆ ಮುರ್ಡೇಶ್ವರದಲ್ಲಿ ಬಾಗಲಕೋಟೆಯಿಂದ ಬಂದಿದ್ದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಸವನಗೌಡ ಪಾಟೀಲ್ (22), ಶರಣು ಇಂಚಲ್ (21), ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಶಶಿ, ಪಾಂಡು, ರಾಮಚಂದ್ರ ಅವರು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿದ ಲೈಫ್ ಗಾರ್ಡ್ ಸಿಬ್ಬಂದಿಯಾಗಿದ್ದಾರೆ.

    ದಸರಾ ರಜೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಪ್ರವಾಸಿಗರು ಸಮುದ್ರಕ್ಕೆ ಇಳಿದು ತೊಂದರೆಗೆ ಸಿಲುಕುತ್ತಿದ್ದಾರೆ. ಇದನ್ನೂ ಓದಿ: ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಇನ್ನೊಬ್ಬ ವ್ಯಕ್ತಿ ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಮಟಾದಲ್ಲಿ ಅಬ್ಬರದ ಮಳೆ 30 ಮರಗಳು ಧರೆಗೆ

    ಕುಮಟಾದಲ್ಲಿ ಅಬ್ಬರದ ಮಳೆ 30 ಮರಗಳು ಧರೆಗೆ

    – ಗೋಕರ್ಣ ದೇವಾಲಯದ ಭೋಜನ ಶಾಲೆಯ ಮೇಲೂ ಉರುಳಿದ ಮರ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ (Kumta) ಬಾರೀ ಗಾಳಿ ಮಳೆಗೆ (Rain )30 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮಾಸ್ತಿಕಟ್ಟೆ ಬಳಿ ಗೂಡಂಗಡಿಗೆ ಮರ ಬಿದ್ದು ಓರ್ವನಿಗೆ ಗಂಭೀರ ಗಾಯವಾಗಿದ್ದು ಎರಡು ಬೈಕ್‍ಗಳು ಜಖಂಗೊಂಡಿವೆ.

    ಕುಮಟಾದ ನಾಲ್ಕು ಮನೆಗಳು, ಶಾಲೆಯ ಕೋಣೆಯೊಂದು ಮರ ಬಿದ್ದ ಪರಿಣಾಮ ಸಂಪೂರ್ಣ ಜಕಂ ಆಗಿದೆ.

    ಗೋಕರ್ಣದ (Gokarna) ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನ ಭೋಜನ ಶಾಲೆಯ ಮೇಲೆ ಮರ ಉರುಳಿ ಹಾನಿಯಾಗಿದೆ. ಅಲ್ಲದೇ ಕುಮಟಾದಲ್ಲಿ ಅಘನಾಶಿನಿ ನದಿ ನೀರಿನ ಪ್ರವಾಹದಿಂದ ಹಂದಿಗೋಣ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೆಲವರನ್ನು ಹಂದಿಗೋಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

    ಕುಮಟಾದಲ್ಲಿ ಸಂಜೆಯಿಂದ ಅಬ್ಬರದ ಮಳೆ ಗಾಳಿಗೆ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿಗಳು ಹಾನಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಭಿನ್ನಮತ ಸ್ಫೋಟ – ಮಾಜಿ ಶಾಸಕಿ ಮನೆಗೆ ತೆರಳಿ ಸ್ಪರ್ಧೆಗೆ ಒತ್ತಾಯಿಸಿದ ಕಾರ್ಯಕರ್ತರು

    ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಭಿನ್ನಮತ ಸ್ಫೋಟ – ಮಾಜಿ ಶಾಸಕಿ ಮನೆಗೆ ತೆರಳಿ ಸ್ಪರ್ಧೆಗೆ ಒತ್ತಾಯಿಸಿದ ಕಾರ್ಯಕರ್ತರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ (Kumta) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಭಿನ್ನಮತ ಸ್ಫೋಟಗೊಂಡಿದೆ.

    ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ನಾಮಪತ್ರ ಸಲ್ಲಿಕೆ ವೇಳೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಆಳ್ವ ಅವರನ್ನು ಬೆಂಬಲಿಸದೆ, ನೇರವಾಗಿ  ಕಾಂಗ್ರೆಸ್ ಮಾಜಿ ಶಾಸಕಿ ಶಾರದಾ ಶೆಟ್ಟಿ (Sharada Shetty) ಅವರ ಮನೆಗೆ ತೆರಳಿದ್ದಾರೆ. ಹಾಗೂ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಬೇಕು ಎಂದು ಅವರನ್ನು ಒತ್ತಾಯಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಸ್ಪರ್ಧಿಸಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿಯವರು ನೂರಾರು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದ್ದಾರೆ. ಇದನ್ನು ಓದಿ: ಪುತ್ರನ ನಾಮಪತ್ರ ಸಲ್ಲಿಸಲು ತನ್ನ ಹಳೆಯ ಅಂಬಾಸಿಡಾರ್ ಕಾರಿನಲ್ಲಿ ಪ್ರಯಾಣಿಸಿದ ಯಡಿಯೂರಪ್ಪ

    ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವ ವಿರುದ್ಧ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‍ನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಇದನ್ನು ಓದಿ: ಟಿಕೆಟ್ ಸಿಗದಿದ್ದಕೆ 5 ವರ್ಷಗಳ ಬಳಿಕ ಮತ್ತೆ ಹುದ್ದೆಯನ್ನೇರಿದ ಪೊಲೀಸ್ ಅಧಿಕಾರಿ: ಸಾರ್ವಜನಿಕ ವಲಯದಲ್ಲಿ ಚರ್ಚೆ