Tag: Kumbhamela 2025

  • ಶಾಹಿ ಸ್ನಾನ ಮಾಡಿ ವಿಡಿಯೋ ಹಂಚಿಕೊಂಡ ಪವಿತ್ರಾ ಗೌಡ

    ಶಾಹಿ ಸ್ನಾನ ಮಾಡಿ ವಿಡಿಯೋ ಹಂಚಿಕೊಂಡ ಪವಿತ್ರಾ ಗೌಡ

    ಪ್ರಯಾಗ್‌ರಾಜ್: ಸ್ಯಾಂಡಲ್‌ವುಡ್ ನಟಿ ಪವಿತ್ರಾ ಗೌಡ (Pavithra Gowda) ಅವರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಅದಷ್ಟೇ ಅಲ್ಲ, ಶಾಹಿ ಸ್ನಾನ ಮಾಡಿ ನಟಿ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತಡವಾದ್ರೂ ಈ ಸೆಲೆಬ್ರೇಷನ್ ಪ್ರೀತಿಯಿಂದ ತುಂಬಿದೆ – ಹೊಸ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

    ‘ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಾಳು’. ನಾನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರಹರ ಮಹಾದೇವ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಇನ್ನೂ ಪವಿತ್ರಾ ಅವರು ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಬೇಲ್ ಸಿಕ್ಕಿದೆ. ಇದರ ನಡುವೆ ತಮ್ಮ ಫ್ಯಾಷನ್ ಬೂಟಿಕ್ ಉದ್ಯಮದ ಕಡೆ ನಟಿ ಹೆಚ್ಚು ಗಮನ ವಹಿಸುತ್ತಿದ್ದಾರೆ.

  • Kumbhamela | ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ

    Kumbhamela | ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ

    ಲಕ್ನೋ: ಪ್ರಯಾಗರಾಜ್‌ದಲ್ಲಿ ನಡೆಯಲಿರುವ ಮಹಾಕುಂಭಮೇಳದ ಸಮಯದಲ್ಲಿ ಮುಸ್ಲಿಮರ ಸಾಮೂಹಿಕ ನಡೆಯುತ್ತದೆ ಎಂದು ಹಿರಿಯ ಮೌಲ್ವಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಪತ್ರ ಬರೆಯುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

    ಪ್ರಯಾಗರಾಜ್‌ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭಮೇಳ ಆಯೋಜಿಸಲಾಗಿದ್ದು, ಈ ಕುಂಭಮೇಳದಲ್ಲಿ ಸಾಮೂಹಿಕ ಮತಾಂತರದ ಆತಂಕವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಸತತ 40 ಗಂಟೆ ಡಿಜಿಟಲ್ ಅರೆಸ್ಟ್ – ಕರಾಳ ಅನುಭವ ಹಂಚಿಕೊಂಡ ಖ್ಯಾತ ಯೂಟ್ಯೂಬರ್!

    ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ ಬರೇಲ್ವಿ ಅವರು ಪತ್ರ ಬರೆದಿದ್ದಾರೆ. ಈ ಮುಂಚೆ ಮಹಾಕುಂಭದಲ್ಲಿ ಭಾಗಿಯಾಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದರು. ಇದೀಗ ಈಗ ಕುಂಭಮೇಳದ ಸಂದರ್ಭದಲ್ಲಿ ನೂರಾರು ಮುಸ್ಲಿಮರನ್ನು ಮತಾಂತರ ಮಾಡುವ ಯೋಜನೆಗಳನ್ನು ವಿಫಲಗೊಳಿಸಬೇಕು. ಜವಾಬ್ದಾರಿಯುತ ನಾಗರಿಕನಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಮತಾಂತರದ ಬಗ್ಗೆ ನಂಬಲರ್ಹ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿದೆ. ಈಗ ಅದನ್ನು ನಿಲ್ಲಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಅಖಾರ ಪರಿಷತ್ ಮತ್ತು ನಾಗಾ ಸಾಧುಗಳು ಸಭೆ ನಡೆಸಿದ್ದು, ಕುಂಭಮೇಳದ ಸಂದರ್ಭ ಮುಸ್ಲಿಮರು ಅಂಗಡಿಗಳನ್ನು ಇಡುವುದನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಯಾವುದೇ ತೊಂದರೆ ತಪ್ಪಿಸಲು ಮುಸ್ಲಿಮರಿಗೆ ಮಹಾಕುಂಭಕ್ಕೆ ಹೋಗದಂತೆ ನಾನು ಸಲಹೆ ನೀಡಿದ್ದೇನೆ ಎಂದೂ ಹೇಳಿದ್ದಾರೆ.

    ಈ ಕುರಿತು ಜಮಿಯತ್ ಉಲಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾನೂನು ಸಲಹೆಗಾರ ಮೌಲಾನಾ ಕಾಬ್ ರಶೀದಿ ಮಾತನಾಡಿ, ಹಿಂದೂಗಳ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಮುಸ್ಲಿಮರು ಚರ್ಚೆಯ ಕೇಂದ್ರವಾಗಿರುವುದು ಇದೇ ಮೊದಲು ಎಂದು ಹೇಳಿದರು.

    ಕಳೆದ ವರ್ಷ ಅಖಿಲ ಭಾರತೀಯ ಅಖಾಡ ಪರಿಷತ್ತು, ಸನಾತನ ಧರ್ಮದ ನಿಜವಾದ ಅನುಯಾಯಿಗಳೆಂದು ಸಾಬೀತು ಮಾಡಲು ಹಿಂದೂಗಳ ಅಂಗಡಿಗಳಿಂದ ಮಾತ್ರ ಮಹಾಕುಂಭಕ್ಕಾಗಿ ಸರಕುಗಳನ್ನು ಖರೀದಿಸಿ ಎಂದು ಕರೆ ನೀಡಿತ್ತು.ಇದನ್ನೂ ಓದಿ:ಶಿವಮೊಗ್ಗ | ಹಿರಿಯ ಸಾಹಿತಿ ಡಾ.ನಾ ಡಿಸೋಜ ನಿಧನ