Tag: kumbhamela

  • Kumbhamela | ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ

    Kumbhamela | ಸಾಮೂಹಿಕ ಮತಾಂತರದ ಆತಂಕ – ಯೋಗಿಗೆ ಮೌಲ್ವಿ ಪತ್ರ

    ಲಕ್ನೋ: ಪ್ರಯಾಗರಾಜ್‌ದಲ್ಲಿ ನಡೆಯಲಿರುವ ಮಹಾಕುಂಭಮೇಳದ ಸಮಯದಲ್ಲಿ ಮುಸ್ಲಿಮರ ಸಾಮೂಹಿಕ ನಡೆಯುತ್ತದೆ ಎಂದು ಹಿರಿಯ ಮೌಲ್ವಿಯೊಬ್ಬರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಪತ್ರ ಬರೆಯುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

    ಪ್ರಯಾಗರಾಜ್‌ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ವರ್ಷ ಜನವರಿ 13ರಿಂದ ಫೆಬ್ರವರಿ 26ರವರೆಗೆ ಕುಂಭಮೇಳ ಆಯೋಜಿಸಲಾಗಿದ್ದು, ಈ ಕುಂಭಮೇಳದಲ್ಲಿ ಸಾಮೂಹಿಕ ಮತಾಂತರದ ಆತಂಕವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಸತತ 40 ಗಂಟೆ ಡಿಜಿಟಲ್ ಅರೆಸ್ಟ್ – ಕರಾಳ ಅನುಭವ ಹಂಚಿಕೊಂಡ ಖ್ಯಾತ ಯೂಟ್ಯೂಬರ್!

    ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ಜಿ ಬರೇಲ್ವಿ ಅವರು ಪತ್ರ ಬರೆದಿದ್ದಾರೆ. ಈ ಮುಂಚೆ ಮಹಾಕುಂಭದಲ್ಲಿ ಭಾಗಿಯಾಗದಂತೆ ಮುಸ್ಲಿಮರಿಗೆ ಸಲಹೆ ನೀಡಿದ್ದರು. ಇದೀಗ ಈಗ ಕುಂಭಮೇಳದ ಸಂದರ್ಭದಲ್ಲಿ ನೂರಾರು ಮುಸ್ಲಿಮರನ್ನು ಮತಾಂತರ ಮಾಡುವ ಯೋಜನೆಗಳನ್ನು ವಿಫಲಗೊಳಿಸಬೇಕು. ಜವಾಬ್ದಾರಿಯುತ ನಾಗರಿಕನಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಮತಾಂತರದ ಬಗ್ಗೆ ನಂಬಲರ್ಹ ಮೂಲಗಳಿಂದ ತಮಗೆ ಮಾಹಿತಿ ಸಿಕ್ಕಿದೆ. ಈಗ ಅದನ್ನು ನಿಲ್ಲಿಸುವ ಹೊಣೆ ರಾಜ್ಯ ಸರ್ಕಾರದ್ದು ಎಂದಿದ್ದಾರೆ.

    ಕಳೆದ ವರ್ಷ ನವೆಂಬರ್‌ನಲ್ಲಿ ಅಖಾರ ಪರಿಷತ್ ಮತ್ತು ನಾಗಾ ಸಾಧುಗಳು ಸಭೆ ನಡೆಸಿದ್ದು, ಕುಂಭಮೇಳದ ಸಂದರ್ಭ ಮುಸ್ಲಿಮರು ಅಂಗಡಿಗಳನ್ನು ಇಡುವುದನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದಾರೆ. ಆದ್ದರಿಂದ ಯಾವುದೇ ತೊಂದರೆ ತಪ್ಪಿಸಲು ಮುಸ್ಲಿಮರಿಗೆ ಮಹಾಕುಂಭಕ್ಕೆ ಹೋಗದಂತೆ ನಾನು ಸಲಹೆ ನೀಡಿದ್ದೇನೆ ಎಂದೂ ಹೇಳಿದ್ದಾರೆ.

    ಈ ಕುರಿತು ಜಮಿಯತ್ ಉಲಮಾ-ಎ-ಹಿಂದ್‌ನ ಉತ್ತರ ಪ್ರದೇಶ ಘಟಕದ ಕಾನೂನು ಸಲಹೆಗಾರ ಮೌಲಾನಾ ಕಾಬ್ ರಶೀದಿ ಮಾತನಾಡಿ, ಹಿಂದೂಗಳ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೂ ಮೊದಲು ಮುಸ್ಲಿಮರು ಚರ್ಚೆಯ ಕೇಂದ್ರವಾಗಿರುವುದು ಇದೇ ಮೊದಲು ಎಂದು ಹೇಳಿದರು.

    ಕಳೆದ ವರ್ಷ ಅಖಿಲ ಭಾರತೀಯ ಅಖಾಡ ಪರಿಷತ್ತು, ಸನಾತನ ಧರ್ಮದ ನಿಜವಾದ ಅನುಯಾಯಿಗಳೆಂದು ಸಾಬೀತು ಮಾಡಲು ಹಿಂದೂಗಳ ಅಂಗಡಿಗಳಿಂದ ಮಾತ್ರ ಮಹಾಕುಂಭಕ್ಕಾಗಿ ಸರಕುಗಳನ್ನು ಖರೀದಿಸಿ ಎಂದು ಕರೆ ನೀಡಿತ್ತು.ಇದನ್ನೂ ಓದಿ:ಶಿವಮೊಗ್ಗ | ಹಿರಿಯ ಸಾಹಿತಿ ಡಾ.ನಾ ಡಿಸೋಜ ನಿಧನ

  • ಸಕ್ಕರೆನಾಡಲ್ಲಿ ಮಹಾಕುಂಭ ಮೇಳ ಸಂಭ್ರಮ- 4 ದಿನಗಳ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

    ಸಕ್ಕರೆನಾಡಲ್ಲಿ ಮಹಾಕುಂಭ ಮೇಳ ಸಂಭ್ರಮ- 4 ದಿನಗಳ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿರುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಮಹಾಕುಂಭ ಮೇಳ ಜರುಗಲಿದೆ. ಈ ಕುಂಭಮೇಳಕ್ಕೆ ದೇಶದ ಹಲವು ಸಾಧು-ಸಂತರ ಆಗಮಿಸಲಿದ್ದು, ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಹೌದು. ನಾಳೆಯಿಂದ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಮಹಾಕುಂಭ ಮೇಳ (Maha kumbamela) ಜರುಗಲಿದೆ. ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ 4 ದಿನಗಳ ಕಾಲ ಸಂಭ್ರಮ ಮನೆ ಮಾಡಲಿದೆ. ಈ ಅಂಬಿಗರ ಹಳ್ಳಿಯ ಸಂಗಮ ಕ್ಷೇತ್ರಕ್ಕೆ ಒಂದು ಇತಿಹಾಸವೇ ಇದೆ. ಬಾಲ್ಯದಲ್ಲಿ ಮಲೆ ಮಹದೇಶ್ವರರು ನಡೆಸಿದ ಪವಾಡವನ್ನ ಜನ ಇಂದಿಗೂ ಮರೆತಿಲ್ಲ. ಹೀಗಾಗಿ ಈ ಒಂದು ಸ್ವಕ್ಷೇತ್ರದಲ್ಲಿ ಮಹಾಮೇಳ ನಡೀತಿದೆ. ಮಂಡ್ಯ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇದನ್ನೂ ಓದಿ: ಜನವರಿ 6 ರಿಂದ 8ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

    ಈ ಮಹಾಕುಂಭಮೇಳ ಸುತ್ತೂರು ಶ್ರೀ, ಆದಿಚುಂಚನಗಿರಿಯ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha swamiji) ದಿವ್ಯಸಾನಿಧ್ಯದಲ್ಲಿ ಜರುಗಲಿದೆ. ಈ ಸಂಭ್ರಮದಲ್ಲಿ ಸಿಎಂ ಬೊಮ್ಮಾಯಿ (Basavaraj Bommai), ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಸೇರಿದಂತೆ ಬಿಜೆಪಿ (BJP)ಯ ಹಲವು ನಾಯಕರು ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲ ಅಕ್ಟೋಬರ್ 16ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಸೇರಿದಂತೆ ದೇಶದ ಹಲವು ಸಾಧು-ಸಂತರು, ಮಠಾಧಿಪತಿಗಳು, ನಾಗಸಾಧುಗಳು ಮಹಾಮೇಳಕ್ಕೆ ಸಾಕ್ಷಿಯಾಗಲಿದ್ದಾರೆ.

    ಇವತ್ತು ಸ್ಥಳಕ್ಕೆ ಸಚಿವ ನಾರಾಯಣಗೌಡ (Narayana Gowda) ಭೇಟಿ ನೀಡಿ ಮಹಾಮೇಳದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಅತ್ತ ಸುತ್ತೂರು ಶ್ರೀಗಳು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಹಾಮೇಳದ ಬಗ್ಗೆ ಮಾಹಿತಿ ಹಂಚಿಕೊಂಡ್ರು. ಇದನ್ನೂ ಓದಿ: ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ

    ಒಟ್ಟಾರೆ ಪವಾಡ ಪುರುಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಕುಂಭ ಮೇಳದ ಕಲರವ ಮನೆ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]