Tag: Kumbh Mela Stampede

  • ಕುಂಭಮೇಳದಲ್ಲಿ ಕಾಲ್ತುಳಿತ – ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

    ಕುಂಭಮೇಳದಲ್ಲಿ ಕಾಲ್ತುಳಿತ – ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

    ನವದೆಹಲಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ (Kumbh Mela Stampede) ಸಂಭವಿಸಿ 30 ಜನರು ಸಾವನ್ನಪ್ಪಿ 90ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದು ದುರದೃಷ್ಟಕರ ಎಂದಿರುವ ಸುಪ್ರೀಂ ಕೋರ್ಟ್ (Supreme Court), ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಈ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದೆ.

    ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ವಕೀಲ ವಿಶಾಲ್ ತಿವಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾ. ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸಿತು.

    ವಿಚಾರಣೆ ವೇಳೆ ಇದು ದುರದೃಷ್ಟಕರ ಘಟನೆ ಮತ್ತು ಕಳವಳಕಾರಿ ವಿಷಯವಾಗಿದೆ ಎಂದ ಪೀಠ, ಈ ಬಗ್ಗೆ ಹೈಕೋರ್ಟ್‌ ಅನ್ನು ಸಂಪರ್ಕಿಸಿ ಎಂದು ಸಲಹೆ ನೀಡಿತು. ಅಲ್ಲದೇ, ಈಗಾಗಲೇ ನ್ಯಾಯಾಂಗ ಆಯೋಗವನ್ನು ರಚಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಿವಾರಿ ಅವರಿಗೆ ತಿಳಿಸಿದರು.

    ಉತ್ತರ ಪ್ರದೇಶ ಸರ್ಕಾರ ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಕಾಲ್ತುಳಿತ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಇದೇ ರೀತಿಯ ಮನವಿಯ ಬಗ್ಗೆ ಮಾಹಿತಿ ನೀಡಿದರು.

    ನಿವೃತ್ತ ನ್ಯಾಯಾಧೀಶ ಹರ್ಷ್ ಕುಮಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯು ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಮಾಜಿ ಪೊಲೀಸ್ ಮುಖ್ಯಸ್ಥ ವಿಕೆ ಗುಪ್ತಾ ಮತ್ತು ನಿವೃತ್ತ ನಾಗರಿಕ ಸೇವಕ ಡಿಕೆ ಸಿಂಗ್ ಕೂಡ ಸಮಿತಿಯ ಭಾಗವಾಗಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪ್ರತ್ಯೇಕ ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ.

    ಜ.29 ರಂದು ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದರು. 60 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ವಿಶಾಲ್ ತಿವಾರಿ ಅವರು PIL ಸಲ್ಲಿಸಿದ್ದರು.

  • ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಚಿತ್ರದುರ್ಗದಿಂದ ತೆರಳಿದ್ದ ನಾಗ ಸಾಧು ಸಾವು

    ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಚಿತ್ರದುರ್ಗದಿಂದ ತೆರಳಿದ್ದ ನಾಗ ಸಾಧು ಸಾವು

    ಚಿತ್ರದುರ್ಗ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ (Maha Kumbh 2025) ಕಾಲ್ತುಳಿತಕ್ಕೆ ಸಿಕ್ಕಿ ಕರ್ನಾಟಕ ಮೂಲದ ನಾಗ ಸಾಧು‌ (Naga Sadhu) ಸಾವನ್ನಪ್ಪಿರುವ ಪ್ರಕರಣ‌ತಡವಾಗಿ ಬೆಳಕಿಗೆ ಬಂದಿದೆ.

    ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ಕಳೆದ 7 ವರ್ಷಗಳಿಂದ ನೆಲೆಸಿದ್ದ ನಾಗಸಾಧು ರಾಜನಾಥ್ ಮಹಾರಾಜ್(49) ಕಾಲ್ತುಳಿತಕ್ಕೆ ಸಿಲುಕಿ ದುರ್ಮರಣಕ್ಕಿಡಾಗಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದ ರಾಜನಾಥ್ ಮಹಾರಾಜ್ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀಗಳ ಒಡನಾಡಿಯಾಗಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ

    ಇವರ ಸಾವಿನ ಬಗ್ಗೆ ಉತ್ತರಪ್ರದೇಶದ ಪೊಲೀಸರು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜನಾಥ್ ಸಾವಿನ ಬಗ್ಗೆ ಖಚಿತ ಪಡಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗದಲ್ಲಿ ಲಂಬಾಣಿ ಗುರುಪೀಠದ ಸರ್ಧಾರ್ ಸೇವಾಲಾಲ್‌ ಸ್ವಾಮೀಜಿ ʻಪಬ್ಲಿಕ್ ಟಿವಿʼ‌ಜೊತೆಗೆ ಮಾತನಾಡಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್‌ – ಟಿಕೆಟ್‌ ಸಿಗದಿದ್ದಕ್ಕೆ ಸಿಟ್ಟಿಗೆದ್ದು ಐವರು ಶಾಸಕರು ರಾಜೀನಾಮೆ

    ಚಿತ್ರದುರ್ಗಕ್ಕೆ ‌ರಾಜನಾಥ್ ಮಹಾರಾಜರ ಪಾರ್ಥಿವ ಶರೀರವನ್ನು ತಲುಪಿಸುವಂತೆ ಉತ್ತರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಕ್ಕೆ ಸರ್ಧಾರ್ ಸೇವಾಲಾಲ್ ಸ್ವಾಮೀಜಿ ಮನವಿ ಮಾಡಿದ್ದಾರೆ. ಅಲ್ಲದೇ ಕಾಲ್ತುಳಿತದಿಂದ ಸಾವುನೋವಾಗದಂತೆ ಕ್ರಮವಹಿಸುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ:  ಗ್ರಾಪಂ ಮಾಜಿ ಅಧ್ಯಕ್ಷನ ಮಗನ ಕೊಲೆ – ಚರಂಡಿಯಲ್ಲಿ ಶವ ಮುಚ್ಚಿಹಾಕಿ ಕೊಲೆಗಾರ ಎಸ್ಕೇಪ್

  • ಕುಂಭಮೇಳದಲ್ಲಿ ಕಾಲ್ತುಳಿತ; ಕಣ್ಣೆದುರೇ ಪತಿ ದಾರುಣ ಸಾವು ನೆನೆದು ಪತ್ನಿ ಕಣ್ಣೀರು

    ಕುಂಭಮೇಳದಲ್ಲಿ ಕಾಲ್ತುಳಿತ; ಕಣ್ಣೆದುರೇ ಪತಿ ದಾರುಣ ಸಾವು ನೆನೆದು ಪತ್ನಿ ಕಣ್ಣೀರು

    – ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದು ಓಡಿದರು
    – ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ

    ಬೆಳಗಾವಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಘಟನೆ ಬಗ್ಗೆ ಮೃತ ಅರುಣ್‌ ಕೋಪರ್ಡೆ ಅವರ ಪತ್ನಿ ಕಾಂಚನಾ ಅವರು ಮಾತನಾಡಿದ್ದಾರೆ. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಹೋದರು. ‘ಕಾಪಾಡಿ.. ಕಾಪಾಡಿ..’ ಅಂತ ಕೂಗಿಕೊಂಡರೂ ಯಾರೂ ಕೇಳಲಿಲ್ಲ ಎಂದು ದುರಂತ ನೆನೆದು ಕಣ್ಣೀರಿಟ್ಟಿದ್ದಾರೆ.

    ಕಾಲ್ತುಳಿತದಿಂದ ಬಚಾವ್‌ ಆಗಿ ಬೆಳಗಾವಿಗೆ ಆಗಮಿಸಿದ ಮೃತ ಅರುಣ್ ಕೋಪರ್ಡೆ ಪತ್ನಿ ಕಾಂಚನಾ ಅವರು ‘ಪಬ್ಲಿಕ್‌ ಟಿವಿ’ ಜೊತೆಗೆ ಮಾತನಾಡಿದ್ದಾರೆ.

    ಜ.25 ಕ್ಕೆ ನಾವು ಹೋಗಿದ್ದೆವು. 28 ಕ್ಕೆ ಪ್ರಯಾಗ್‌ರಾಜ್‌ ತಲುಪಿದೆವು. ಪುಣ್ಯಸ್ನಾನಕ್ಕೆ ಹೋದಾಗ ಏಕಾಏಕಿ ಗದ್ದಲ ಪ್ರಾರಂಭವಾಯಿತು. ನಾನು ಮತ್ತು ನನ್ನ ಪತಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದೆವು. ನೂಕು ನುಗ್ಗಲಿನಲ್ಲಿ ಪತಿ ನನ್ನ ಕೈ ಬಿಟ್ಟರು. ನಾನೊಂದು ಕಡೆ ಅವರೊಂದು ಕಡೆಯಾದೆವು. ನೋಡ ನೋಡುತ್ತಿದ್ದಂತೆ ನೂಕು ನುಗ್ಗಲು ಜಾಸ್ತಿಯಾಗಿ ಅವರು ಕೆಳಗೆ ಬಿದ್ದರು.

    ಸುಮಾರು ಐವತ್ತರಿಂದ ಅರವತ್ತು ಜನ ನಮ್ಮ ಮೇಲೆ ಬಿದ್ದರು. ನೂಕುನುಗ್ಗಲಲ್ಲಿ ಜನ ನಮ್ಮನ್ನು ಬೀಳಿಸಿ ತುಳಿದುಕೊಂಡು ಓಡಿದರು. ಕಾಪಾಡಿ.. ಕಾಪಾಡಿ ಅಂತ ಕೂಗಿಕೊಂಡರೂ ಯಾರೂ ಕೇಳಿಲಿಲ್ಲ. ಕೊನೆಗೆ ಎದ್ದು ನೋಡಿದಾಗ ಯಾರೋ ನನಗೆ ನೀರು ಕುಡಿಸಿದರು. ನನ್ನ ಪತಿ ಮಲಗಿದಂತೆಯೇ ಇದ್ದರು. ಅವರನ್ನು ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಯಿತು. ಆದರೆ, ಪತಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಕಾಂಚನಾ ದುಃಖಿಸಿದರು.

  • ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ: ಮುತಾಲಿಕ್‌

    ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ: ಮುತಾಲಿಕ್‌

    ಹುಬ್ಬಳ್ಳಿ: ವಿರೋಧಿಗಳ ಷಡ್ಯಂತ್ರದಿಂದ ಪ್ರಯಾಗ್‌ರಾಜ್‌‌ನಲ್ಲಿ ಇಂತಹ ಘಟನೆ ನಡೆದಿದೆ. ನ್ಯಾಯಾಂಗ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಗಡೆ ಬರಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಒತ್ತಾಯಿಸಿದ್ದಾರೆ.

    ಕುಂಭಮೇಳದಲ್ಲಿ ಕಾಲ್ತುಳಿತ (Kumbh Mela Stampede) ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಈ ಕೃತ್ಯ ಎಸಗಿದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಘಟನೆ ಅತ್ಯಂತ ಖೇದಕರವಾಗಿದ್ದು, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

    ನಾವು ಈಗಾಗಲೇ ಪ್ರಯಾಗ್‌ರಾಜ್ ಪ್ರಯಾಣ ಮಾಡಿ ಬಂದಿದ್ದೇವೆ. ಅಲ್ಲಿ ಬಹಳಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಕೋಟಿಗಟ್ಟಲೇ ಜನರಿಗೆ ವ್ಯವಸ್ಥೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮೌನಿ ಅಮಾವಾಸ್ಯೆ ದಿನ ಎಂಟು ಕೋಟಿ ಜನರು ಸ್ನಾನಕ್ಕೆ ಬಂದಿದ್ದರು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಇಂತಹ ಘಟನೆ ಆಗಬಾರದು, ಈಗ ನಡೆದು ಹೋಗಿದೆ. ಇದಕ್ಕೆ ವಿರೋಧ ಪಕ್ಷದವರು ಬೇರೆ ಬೇರೆ ನಾಟಕವನ್ನ ಆಡುತ್ತಿದ್ದಾರೆ‌. ಈ ಹಿಂದೆ ನೆಹರೂ ಅಲ್ಲಿಯ ಕುಂಭಮೇಳಕ್ಕೆ ಬಂದಾಗ ನೂಕುನುಗ್ಗಲು ನಡೆದು 800 ಜನರು ಸಾವನ್ನಪ್ಪಿದ್ದರು. ಕಾಂಗ್ರೆಸ್‌ನವರು 800 ಜನರನ್ನ ಕೊಂದು ಹಾಕಿದ್ದಾರೆ. ಅಖಿಲೇಶ್ ಅವರೇ 2013 ರಲ್ಲಿ ಕುಂಭಮೇಳವಾದಾಗ ಸಾವಾಗಿವೆ. ಈ ಸಾವಿನಲ್ಲಿ ರಾಜಕೀಯ ಮಾಡಬಾರದು ಎಂದು ಮುತಾಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳ ಕಾಲ್ತುಳಿತ ದುರಂತ – ಕನ್ನಡಿಗರ ನೆರವಿಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

  • ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗ್ತಿಲ್ಲ: ಪೇಜಾವರ ಶ್ರೀ

    ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗ್ತಿಲ್ಲ: ಪೇಜಾವರ ಶ್ರೀ

    – ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು

    ಉಡುಪಿ: ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿದ್ದು, ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ ಎಂದು ಉಡುಪಿಯ (Udupi) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Teertha Swamiji) ಹೇಳಿದರು.

    ದೇವಾಲಯಗಳು ಸರ್ಕಾರದ ಕಪಿಮುಷ್ಠಿಯಲ್ಲಿವೆ. ಜೀರ್ಣೋದ್ಧಾರ ಇಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಇಲ್ಲ. ಭಕ್ತರ ಕಾಣಿಕೆ ಸದ್ವಿನಿಯೋಗ ಆಗುತ್ತಿಲ್ಲ. ದೇಗುಲದ ಸಂಪತ್ತಿಂದ ಊರಿಗೆ ಶಿಕ್ಷಣ ಆಗಬೇಕು. ಊರಿನ ಜನರ ವೈದ್ಯಕೀಯಕ್ಕೆ ಹಣ ಬಳಕೆಯಾಗಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಅಯೋಧ್ಯೆಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿಗಳೆಲ್ಲ ಪೂರ್ಣವಾಗಲಿದೆ. ಅಯೋಧ್ಯೆಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆಯಿದೆ. ತಿರುಪತಿಯಂತೆ ಬದಲಿಸಿದರೆ ವ್ಯವಸ್ಥೆ ಸಂಕೋಚ ಮಾಡಿದಂತಾಗುತ್ತದೆ. ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಿ, ಅಪಾಯಕ್ಕೊಳಗಾಗಬೇಡಿ ಎಂದು ಕಿವಿಮಾತು ಹೇಳಿದರು.

    ಪ್ರಯಾಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬ ಮಾಹಿತಿ. ಮುಂದಿನ ಎಲ್ಲಾ ಉತ್ಸವಗಳು ಸಾಂಗವಾಗಿ ನಡೆಯಲಿ. ಪ್ರಯಾಗದಲ್ಲಿ ಅಭೂತಪೂರ್ವ ವ್ಯವಸ್ಥೆ ಇದೆ. ಯಾವುದೇ ಅನಾನುಕೂಲತೆಗಳು ಆಗದಂತೆ ದೇವರಲ್ಲಿ ಪ್ರಾರ್ಥನೆ ಎಂದರು. ಇದನ್ನೂ ಓದಿ: ಚಂಡೀಗಢ ಮೇಯರ್‌ ಚುನಾವಣೆ ಗೆದ್ದ ಬಿಜೆಪಿ; ಎಎಪಿ-ಕಾಂಗ್ರೆಸ್‌ ಮೈತ್ರಿಗೆ ಮುಖಭಂಗ

    ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಹೇಳನ ವಿಚಾರವಾಗಿ ಮಾತನಾಡಿ, ಯಾರೂ ಕೂಡಾ ಬಹುಮತವನ್ನು ಕಡೆಗಣಿಸಬೇಡಿ. ಖರ್ಗೆಯವರ ಹೇಳಿಕೆ ಅವರ ಆಶಯ ತೆರೆದಿಟ್ಟಿದೆ. ಬಹುಮತದ ಎಲ್ಲರ ಭಾವನೆಯನ್ನು ನಾವು ಗೌರವಿಸಬೇಕು, ಯಾರನ್ನೂ ನೋಯಿಸಬಾರದು. ಇಂತಹ ಹೇಳಿಕೆ ನಿಮ್ಮ ಘನತೆಗೆ ತಕ್ಕದಾದುದ್ದಲ್ಲ. ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಖರ್ಗೆಯವರದ್ದು ಬಾಲಿಶ ಹೇಳಿಕೆ. ಕುಂಭಮೇಳದಲ್ಲಿ ಮಿಂದ ಮಂದಿ ಮೂರ್ಖರಾ? ಕುಂಭಮೇಳಕ್ಕೆ ಬಂದ ಎಲ್ಲರನ್ನ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು. ದೇಶ-ವಿದೇಶದಿಂದ ಜನ ಬರ್ತಾಯಿದ್ದಾರೆ. ರಾಜಕೀಯ ಪಕ್ಷಗಳು ಎಲ್ಲರೂ ಮತಭೇದ ಮರೆತು ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಸಿನಿಂದ ಎಲ್ಲರೂ ವರ್ತನೆ ಮಾಡಬೇಕು ಎಂದು ತಿಳಿಸಿದರು.

  • ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮನೆಯೊಡತಿಯ ಸಾವಿನಿಂದ ಆಹಾರ ತೊರೆದ ಶ್ವಾನ!

    ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮನೆಯೊಡತಿಯ ಸಾವಿನಿಂದ ಆಹಾರ ತೊರೆದ ಶ್ವಾನ!

    – ಶ್ವಾನದ ಮುನ್ಸೂಚನೆ ಇದ್ದರೂ ಎಡವಿದ್ವಿ!

    ಬೆಳಗಾವಿ: ಪ್ರಯಾಗ್‍ರಾಜ್‍ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಡಗಾವಿಯ ಮೇಘಾ ಹತ್ತರವಾಟ ಹಾಗೂ ಜ್ಯೋತಿ ಹತ್ತರವಾಟ ಅವರ ಮನೆಯ ಶ್ವಾನ ಆಹಾರ ತೊರೆದು ಬೇಸರದಲ್ಲಿ ಕುಳಿತಿದೆ.

    ಪ್ರಯಾಗರಾಜ್‍ಗೆ ಹೋದಾಗಿಂದಲೂ ಶ್ವಾನ ಸನ್ನಿ ಸಪ್ಪೆಯಾಗಿ ಕುಳಿತಿದೆ. ಅವರು ಕುಂಭಮೇಳಕ್ಕೆ ತೆರಳಿದ ದಿನ ಸಹ ಶ್ವಾನ ಆಹಾರ ತ್ಯಜಿಸಿತ್ತು. ಈ ಮೂಲಕ ಶ್ವಾನ ದುರಂತದ ಮುನ್ಸೂಚನೆ ನೀಡಿತ್ತು ಎಂದು ಮೃತ ಮೇಘಾಳ ಸಹೋದರಿ ಮಾನಸಿ ದುಃಖ ಹೊರ ಹಾಕಿದ್ದಾರೆ.

    ಮೇಘಾಳ ಹಠಕ್ಕಾಗಿ ಪ್ರಯಾಗರಾಜ್ ಕಳಿಸುವಂತಾಯಿತು. ಶ್ವಾನದ ಮುನ್ಸೂಚನೆ ಬಗ್ಗೆ ಇದ್ದರೂ ನಾವು ನಿರ್ಲಕ್ಷ್ಯ ಮಾಡಿದೆವು ಎಂದು ಮೇಘಾಳ ತಂದೆ ದೀಪಕ ಹತ್ತರವಾಟ ದುಃಖ ಹೊರಹಾಕಿದ್ದಾರೆ.

    ಮೇಘಾ ಹಠ ಹಿಡಿದು ಪ್ರಯಾಗರಾಜ್‍ಗೆ ಹೋಗಿದ್ದಳು. ಅವಳೊಟ್ಟಿಗೆ ತಾಯಿಯನ್ನು ಕಳಿಸಿ ಇಬ್ಬರನ್ನ ಕಳೆದುಕೊಳ್ಳುವಂತಾಯಿತು ಎಂದು ಅವರ ಅಜ್ಜಿ ಕಣ್ಣೀರಿಟ್ಟಿದ್ದಾರೆ.