Tag: Kumbh Mela 2025

  • ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಹಾಕುಂಭಮೇಳದ (Kumbh Mela 2025) ನೀಲಿ ಕಂಗಳ ಚೆಲುವೆ ಮೊನಲಿಸಾ (Monalisa Bhosle) ನಟಿಯಾಗಿ ಕ್ಯಾಮೆರಾ ಮುಂದೆ ಬರಲಿ ಎಂದು ಕಾಯುತ್ತಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಬಾಲಿವುಡ್‌ನಲ್ಲಿ ಮತ್ತೊಂದು ಬಿಗ್ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

    ಕುಂಭಮೇಳದ ಸುಂದರಿ ಮೊನಲಿಸಾಗೆ ಬಂಪರ್ ಅವಕಾಶವೊಂದು ಸಿಕ್ಕಿದೆ. ಬಾಲಿವುಡ್ ಸಿನಿಮಾ ಅಲ್ಲ, ಬದಲಾಗಿ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಹಾಡೊಂದರಲ್ಲಿ ನಟ ಉತ್ಕರ್ಷ್ ಸಿಂಗ್ ಜೊತೆ ಮೊನಲಿಸಾ ಹೆಜ್ಜೆ ಹಾಕಿದ್ದಾರೆ. ಇದರ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಸದ್ಯದಲ್ಲೇ ಯೂಟ್ಯೂಬ್‌ನಲ್ಲಿ ಈ ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ:ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾವೊಂದರಲ್ಲಿ ನಾಯಕಿ ಪಾತ್ರಕ್ಕೆ ಮೊನಲಿಸಾಗೆ ಆಫರ್ ನೀಡಿದ್ದರು. ಆ ನಂತರ ಓರ್ವ ಯುವತಿ ಮೇಲಿನ ಅತ್ಯಾಚಾರ ಆರೋಪದ ಕೇಸ್‌ನಲ್ಲಿ ನಿರ್ದೇಶಕನನ್ನು ಬಂಧಿಸಲಾಗಿತ್ತು. ಮೊನಲಿಸಾ ನಟಿಯಾಗುವ ಅವಕಾಶಕ್ಕೆ ಬ್ರೇಕ್ ಬಿದ್ದಿತ್ತು. ಈಗ ಮತ್ತೆ ಒಂದೊಳ್ಳೆಯ ಅವಕಾಶ ಅವರನ್ನು ಅರಸಿ ಬಂದಿದೆ.

    ಮಹಾಕುಂಭಮೇಳದಲ್ಲಿ ಮೊನಲಿಸಾ ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾತ್ರೋ ರಾತ್ರಿ ಈ ನೀಲಿ ಕಂಗಳ ಚೆಲುವೆ ಆನ್‌ಲೈನ್‌ನಲ್ಲಿ ಸ್ಟಾರ್ ಆದರು. ಹಾಗಾಗಿ ಮೊನಲಿಸಾ ಮೇಲೆ ಪಡ್ಡೆಹುಡುಗರಿಗೆ ಸಖತ್ ಕ್ರೇಜ್ ಇದೆ.

  • ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ, ಕೊಲೆಯಂಥ ಒಂದೇ ಒಂದು ಕೇಸ್‌ ವರದಿಯಾಗಿಲ್ಲ: ಯೋಗಿ ಆದಿತ್ಯನಾಥ್‌

    – 130 ದೋಣಿಗಳನ್ನು ಹೊಂದಿದ್ದ ಕುಟಂಬವೊಂದು 30 ಕೋಟಿ ಲಾಭ ಗಳಿಸಿದೆ ಎಂದ ಸಿಎಂ

    ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ (Maha Kumbh Mela) 130 ದೋಣಿಗಳನ್ನು ಹೊಂದಿರುವ ಕುಟುಂಬ 30 ಕೋಟಿ ರೂ. ಲಾಭ ಗಳಿಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ. ಆ ಮೂಲಕ ಕುಂಭಮೇಳವನ್ನು ಟೀಕಿಸಿದ್ದ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

    ವಿಧಾನಸಭೆಯಲ್ಲಿ ಅಂಗೀಕರಿಸಲಾದ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳಿಗೆ ಸಿಎಂ ಚಾಟಿ ಬೀಸಿದ್ದಾರೆ. ಜನರು ನಿಮ್ಮ ಮಾತು ಕೇಳುತ್ತಿಲ್ಲ. ನಿಮ್ಮ ಕೌಂಟ್‌ಡೌನ್‌ ಶುರುವಾಗಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ಪ್ರಯಾಗ್‌ರಾಜ್‌ನ ದೋಣಿ ಚಾಲಕರನ್ನು ಶೋಷಿಸಲಾಗಿದೆ ಎಂಬ ಸಮಾಜವಾದಿ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಾನು ದೋಣಿ ಚಾಲಕನ ಕುಟುಂಬದ ಯಶಸ್ಸಿನ ಕಥೆಯನ್ನು ಹೇಳುತ್ತಿದ್ದೇನೆ. ಅವರ ಬಳಿ 130 ದೋಣಿಗಳಿವೆ. 45 ದಿನಗಳಲ್ಲಿ (ಮಹಾ ಕುಂಭ) ಅವರು 30 ಕೋಟಿ ರೂ. ಲಾಭ ಗಳಿಸಿದ್ದಾರೆ. ಇದರರ್ಥ ಪ್ರತಿ ದೋಣಿಯಿಂದ 23 ಲಕ್ಷ ರೂ. ಗಳಿಸಿದ್ದಾರೆ. ಪ್ರತಿದಿನ ಅವರು ಒಂದು ದೋಣಿಯಿಂದ 50,000-52,000 ರೂ. ಗಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕುಂಭಮೇಳದಲ್ಲಿ ಕಿರುಕುಳ, ಅಪಹರಣ, ದರೋಡೆ ಅಥವಾ ಕೊಲೆಯ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಅರವತ್ತಾರು ಕೋಟಿ ಜನರು ಆಗಮಿಸಿ ಭಾಗವಹಿಸಿದರು. ಕುಂಭಮೇಳದಲ್ಲಿ ಪಾಲ್ಗೊಂಡು ಸಂತೋಷದಿಂದ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದ ವ್ಯವಸ್ಥೆ ಬಗ್ಗೆ ಡಿಕೆಶಿ ಶ್ಲಾಘನೆ – ಯುಪಿ ವಿಧಾನಸಭೆಯಲ್ಲಿ ಯೋಗಿ ಮಾತು

    ಮಹಾ ಕುಂಭಮೇಳಕ್ಕೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿತ್ತು. ಇದರಿಂದ ದಾಖಲೆಯ 3 ಲಕ್ಷ ಕೋಟಿ ರೂಪಾಯಿ ವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸಮರ್ಥಿಸಿಕೊಂಡಿದ್ದಾರೆ.

    ಈ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ 40,000 ಕೋಟಿ ರೂ., ಆಹಾರ ಮತ್ತು ದಿನನಿತ್ಯದ ಅಗತ್ಯ ವಸ್ತುಗಳಲ್ಲಿ 33,000 ಕೋಟಿ ರೂ., ಸಾರಿಗೆಯಲ್ಲಿ 1.5 ಲಕ್ಷ ಕೋಟಿ ರೂ., ಧಾರ್ಮಿಕ ಕೊಡುಗೆಗಳಲ್ಲಿ 20,000 ಕೋಟಿ ರೂ., ದೇಣಿಗೆಗಳಲ್ಲಿ 660 ಕೋಟಿ ರೂ., ಟೋಲ್ ತೆರಿಗೆಯಲ್ಲಿ 300 ಕೋಟಿ ರೂ., ಇತರ ಆದಾಯದಲ್ಲಿ 66,000 ಕೋಟಿ ರೂ. ಗಳಿಸಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ

  • ಅನುಮತಿಯಿಲ್ಲದೇ ಕತ್ರಿನಾ ಕೈಫ್ ವಿಡಿಯೋ ಶೂಟ್ ಮಾಡಿದವರಿಗೆ ರವೀನಾ ಟಂಡನ್ ಕಿಡಿ

    ಅನುಮತಿಯಿಲ್ಲದೇ ಕತ್ರಿನಾ ಕೈಫ್ ವಿಡಿಯೋ ಶೂಟ್ ಮಾಡಿದವರಿಗೆ ರವೀನಾ ಟಂಡನ್ ಕಿಡಿ

    ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಕೆಲದಿನಗಳ ಹಿಂದೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಭಾಗಿಯಾಗಿದ್ದ ವಿಡಿಯೋ ಇದೀಗ ಟ್ರೋಲ್‌ ಆಗಿದೆ. ಅತ್ತೆಯೊಂದಿಗೆ ತ್ರಿವೇಣಿ ಸಂಗಮದಲ್ಲಿ ನಟಿ ಪವಿತ್ರಾಸ್ನಾನ ಮಾಡಿದ್ದ ವಿಡಿಯೋ ವೈರಲ್‌ ಆಗಿದೆ. ನಟಿ ಪವಿತ್ರಾಸ್ನಾನ ಮಾಡುತ್ತಿರುವ ವಿಡಿಯೋವನ್ನು ಕೆಲ ಪುರುಷರು ಶೂಟ್ ಮಾಡಿ ರೀಲ್ಸ್ ಮಾಡಿದ್ದಾರೆ. ಈ ಹಿನ್ನೆಲೆ ಕತ್ರಿನಾ ಅನುಮತಿಯಿಲ್ಲದೇ ವಿಡಿಯೋಶೂಟ್ ಮಾಡಿದ ಕಿಡಿಗೇಡಿಗಳಿಗೆ ‘ಕೆಜಿಎಫ್‌ 2’ (KGF 2) ಖ್ಯಾತಿಯ ರವೀನಾ ಟಂಡನ್ ಕಿಡಿಕಾರಿದ್ದಾರೆ.

    ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ಪವಿತ್ರಾಸ್ನಾನ ಮಾಡುತ್ತಿರುವ ಇಬ್ಬರೂ ಪುರುಷರು ನಗುತ್ತಾ ‘ಇದು ನಾನು, ಇದು ನನ್ನ ಸಹೋದರ, ಮತ್ತು ಹಿಂದೆ ಕತ್ರಿನಾ ಕೈಫ್ ಇದ್ದಾರೆ ಎಂದು ಹೇಳಿದ್ದಾರೆ. ನಟಿಯ ಅನುಮತಿಯಿಲ್ಲದೇ ವಿಡಿಯೋ ತೆಗೆದಿದಲ್ಲದೇ ನಟಿಯ ನೋಡಿ ನಗುತ್ತಿರುವ ಪುರುಷರ ನಡೆಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ನೋಡಿ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಕೂಡ ಪ್ರತಿಕ್ರಿಯಿಸಿ, ಇದು ಅಸಹ್ಯಕರ. ಈ ರೀತಿಯ ಜನರು ಶಾಂತಿಯು ಮತ್ತು ಅರ್ಥಪೂರ್ಣ ಕ್ಷಣವನ್ನು ಹಾಳು ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆಗೆ ನಟಿ ಛೀಮಾರಿ ಹಾಕಿದ್ದಾರೆ. ರವೀನಾ ನಡೆಗೆ ಅನೇಕರು ಬೆಂಬಲಿಸಿದ್ದಾರೆ.

  • ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ಪುತ್ರಿ ಐಶ್ವರ್ಯ (Aisshwarya DKS Hegde) ಪಾಲ್ಗೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿ-ಭಾವ ಮೆರೆದಿದ್ದಾರೆ.

    ಕುಂಭಮೇಳದಲ್ಲಿ (Kumbh Mela 2025) ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ಹಂಚಿಕೊಂಡಿದ್ದಾರೆ.

    ತಂದೆ ಡಿ.ಕೆ.ಶಿವಕುಮಾರ್‌ ಕುಂಭಮೇಳಕ್ಕೆ ಹೋಗುವ ಮುನ್ನ ಐಶ್ವರ್ಯ ಭೇಟಿ ಕೊಟ್ಟಿದ್ದಾರೆ. ಇದೇ ಫೆ.9, 10 ರಂದು ಕುಂಭಮೇಳಕ್ಕೆ ತೆರಳುವುದಾಗಿ ಡಿಕೆಶಿ ಹೇಳಿದ್ದರು.

    ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ 2025ರ ಮಹಾ ಕುಂಭಮೇಳಕ್ಕೆ ಜ.13 ರಂದು ಅದ್ದೂರಿ ಚಾಲನೆ ಸಿಕ್ಕಿದೆ. 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಫೆ.26 ರ ವರೆಗೆ ಉತ್ಸವ ಜರುಗಲಿದೆ.