Tag: kumbalagodu

  • ಬೆಂಗಳೂರು| ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

    ಬೆಂಗಳೂರು| ಉಸಿರುಗಟ್ಟಿಸಿ 7 ವರ್ಷದ ಮಗಳ ಕೊಂದ ಮಲತಂದೆ

    ಬೆಂಗಳೂರು: ಉಸಿರುಗಟ್ಟಿಸಿ 7 ವರ್ಷದ ಬಾಲಕಿಯನ್ನು ಮಲತಂದೆ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿರಿ (7) ಕೊಲೆಯಾದ ಬಾಲಕಿ. ಮಲತಂದೆ ದರ್ಶನ್ ಎಂಬಾಂತ ಹತ್ಯೆ ಮಾಡಿದ್ದಾನೆ. ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಘಟನೆ ನಡೆದಿದೆ.

    ಮೊದಲ ಗಂಡ ಮೃತಪಟ್ಟ ಮೇಲೆ ದರ್ಶನ್ ಜೊತೆ ಬಾಲಕಿಯ ತಾಯಿ ವಿವಾಹವಾಗಿದ್ದರು. ಹೆಂಡತಿ ಜೊತೆ ಗಲಾಟೆ ಮಾಡಿ ಮಗಳನ್ನ ಆರೋಪಿ ಹತ್ಯೆ ಮಾಡಿದ್ದಾನೆ.

    ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿ ದರ್ಶನ್‌ ಪರಾರಿಯಾಗಿದ್ದಾನೆ.

  • Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

    Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

    ಬೆಂಗಳೂರು: ಮಗುವನ್ನು ನೋಡಿಕೊಳ್ಳಲು ಬಂದ ಯುವತಿಯೊಬ್ಬಳು ಕೇವಲ 30 ನಿಮಿಷದಲ್ಲಿ 32,000 ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೋಡಿನಲ್ಲಿ (Kumbalagodu) ನಡೆದಿದೆ.

    ಇಲ್ಲಿನ ನಿವಾಸಿಯಾದ ರಶ್ಮಿ ಸೇಲ್ಸ್ ಮ್ಯಾನೇಜರ್ ಆಗಿದ್ದು, ಪತಿ ಅನೂಪ್ ಖಾಸಗಿ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ ಎಂದು ‘ಸುಲೇಖಾ’ ಆಪ್ ಮೂಲಕ ಸಮೀಕ್ಷ ಮೇಡ್ ಸರ್ವಿಸ್‌ನಲ್ಲಿ ಮನೆ ಕೆಲಸದವರನ್ನು ಹುಡುಕಿದ್ದರು. ಈ ವೇಳೆ ಆಪ್‌ನಲ್ಲಿ ಸಚಿನ್ ಎಂಬಾತ ಸಂಪರ್ಕಕ್ಕೆ ಬಂದು ಬಿಮಲಾ ಎಂಬ ಯುವತಿಯನ್ನು ಕೆಲಸಕ್ಕೆ ಕಳುಹಿಸಿ ಕೊಡೋದಾಗಿ ಹೇಳಿದ್ದರು. ಅದರಂತೆ ಯುವತಿ ಬಿಮಲಾ, ಆ ದಂಪತಿಗಳ ಮನೆಗೆ ಬಂದು ಅರ್ಧ ಗಂಟೆ ಮನೆಯೆಲ್ಲಾ ಸಂಪೂರ್ಣವಾಗಿ ನೋಡಿಕೊಂಡು ಎರಡು ತಿಂಗಳ ಸಂಬಳ ಅಡ್ವಾನ್ಸ್ ಎಂದು 32,000 ಪಡೆದು ಫೋನ್‌ನಲ್ಲಿ ಮಾತಾಡುವಂತೆ ನಟಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಯುವತಿ ವಾಪಸ್ ಬರದೇ ಇದ್ದಾಗ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಮೋಸ ಹೋಗಿರುವುದು ಗೊತ್ತಾಗಿದೆ. ಒಂದು ವೇಳೆ ಮಗುವನ್ನು ಆರೈಕೆಗೆ ಆಕೆಯ ಕೈಗೆ ಕೊಟ್ಟು ಹೋಗಿದ್ದರೆ ಏನಾಗುತ್ತಿತ್ತು? ಮನೆಯಲ್ಲಿದ್ದ ಹಣ, ಚಿನ್ನಾಭರಣದ ಗತಿಯೇನು ಎಂದು ರಶ್ಮಿ ದಂಪತಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಈ ಬಗ್ಗೆ ಕುಂಬಳಗೂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆನ್‌ಲೈನ್ ಮೂಲಕ ಅಪರಿಚಿತ ವ್ಯಕ್ತಿಗಳನ್ನು ಕೆಲಸಕ್ಕೆ ಕರೆದುಕೊಳ್ಳುವ ಮುನ್ನ ಎಚ್ಚರವಹಿಸಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರ ಬಿಡುಗಡೆಯಾದರಷ್ಟೇ ಪ್ರದರ್ಶನ: ವಿಕ್ಟರಿ ಥಿಯೇಟರ್ ಯೂ ಟರ್ನ್

  • ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಶಶಾಂಕ್ ಸಾವು

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಶಶಾಂಕ್ ಸಾವು

    ಬೆಂಗಳೂರು: ಪ್ರೀತಿ ವಿಚಾರಕ್ಕೆ ಯುವಕನನ್ನು ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ್ದರಿಂದ ಗಂಭೀರ ಗಾಯಗೊಂಡಿದ್ದ ಶಶಾಂಕ್ (Shashank) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ  ಸಾವನ್ನಪ್ಪಿದ್ದಾನೆ.

    ಆರ್‌ಆರ್ ನಗರದ ನಿವಾಸಿ ರಂಗನಾಥ್ ಹಾಗೂ ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್‌ನನ್ನು (19) ದುಷ್ಕರ್ಮಿಗಳು ಕಿಡ್ನಾಪ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಿಂದಾಗಿ ಶಶಾಂಕ್ ದೇಹದ 90% ರಷ್ಟು ಭಾಗ ಸುಟ್ಟು ಹೋಗಿತ್ತು. ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆಯೇನು?
    ನಗರದ ಖಾಸಗಿ ಕಾಲೇಜಿನಲ್ಲಿ ಯುವಕ ಸಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ. ಶಶಾಂಕ್ ತನ್ನ ಸಂಬಂಧಿಕರ ಮಗಳೊಬ್ಬಳನ್ನು ಪ್ರೀತಿಸುತಿದ್ದ. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಇದೇ ಕಾರಣಕ್ಕೆ ಕಾಲೇಜ್ ಬಳಿ ಇದ್ದ ಯುವಕನನ್ನು ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಶಶಾಂಕ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಯುವತಿಯ ಪೋಷಕರು ಆತನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಇದಾದ ಬಳಿಕ ಯುವತಿಯ ವಿಚಾರದಿಂದ ದೂರ ಇರುತ್ತೇನೆ ಎಂದು ಶಶಾಂಕ್ ಹೇಳಿದ್ದ. ಆದರೂ ದುಷ್ಕರ್ಮಿಗಳು ಶಶಾಂಕ್ ಮೇಲೆ ವಿಕೃತಿ ಮೆರೆದಿದ್ದರು. ಇದನ್ನೂ ಓದಿ: ಅಪ್ಪ-ಅಮ್ಮನ ತಲೆಗೆ ರಾಡ್‍ನಿಂದ ಹೊಡೆದು ಕೊಂದು ಮಗ ಎಸ್ಕೇಪ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

    ವಾಹನ ಸವಾರನ ಮೇಲೆ‌ ಎಕ್ಸ್‌ಪ್ರೆಸ್‌ ವೇ ಟೋಲ್ ಸಿಬ್ಬಂದಿ ಹಲ್ಲೆ

    ರಾಮನಗರ: ವಾಹನ ಸವಾರನ ಮೇಲೆ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ (Bengaluru Mysuru Expressway) ಕಣಿಮಿಣಿಕೆ ಟೋಲ್ ಪ್ಲಾಜಾ (Kaniminike toll plaza) ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.

    ತಣಿಸಂದ್ರ (Thanisandra) ನಿವಾಸಿ ವಿಶ್ವನಾಥ್ ಎಂಬವರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಫಾಸ್ಟ್ ಟ್ಯಾಗ್‍ನಲ್ಲಿ (FASTag) ಹಣ ಕಡಿತವಾಗದ ವಿಚಾರಕ್ಕೆ ವಿಶ್ವನಾಥ್ ಹಾಗೂ ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿ ಒಟ್ಟಾಗಿ ಸೇರಿ ವಿಶ್ವನಾಥ್ ಅವರಿಗೆ ಥಳಿಸಿದ್ದಾರೆ. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?

    ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕುಂಬಳಗೂಡು (Kumbalagodu) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಿಳಾ ಸಮಾನತೆ ಸಾರಿದ ನೆಲದಲ್ಲಿ ಪುರುಷರದ್ದೇ ದರ್ಬಾರ್

  • ಬೆಂಗ್ಳೂರಲ್ಲಿ ಅಗ್ನಿ ಅವಘಡ – ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗ್ಳೂರಲ್ಲಿ ಅಗ್ನಿ ಅವಘಡ – ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ಬೆಂಗಳೂರು: ಕುಂಬಳಗೋಡು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಸೋನಿಯಾ ಕೆಮಿಕಲ್ ಫ್ಯಾಕ್ಟರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

    ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುಮಾರು 8 ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸೋನಿಯಾ ಇಂಡಸ್ಟ್ರೀಸ್‍ನಲ್ಲಿ ಬ್ಯಾಟರಿಗೆ ಬಳಸುವ ಆಸಿರ್ ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.

    ಇತ್ತ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಿಲಿಂಡರ್ ಸ್ಫೋಟ ಪ್ರಕರಣ ದಾಖಲಾಗಿದೆ. ಗ್ಯಾಸ್ ಸೋರಿಕೆಯಿಂದ ಚಂದ್ರಲೇಔಟ್ ನ ಅತ್ತಿಗುಪ್ಪೆಯಲ್ಲಿನ ಮನೆಯೊಂದರಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇದನ್ನೂ ಓದಿ: ಸ್ಕಾರ್ಫ್ ವಿವಾದ, ಕಾಲೇಜಿಗೆ ಕೇಸರಿ ಶಲ್ಯ ಹಾಕಿಕೊಂಡು ಬಂದ ವಿದ್ಯಾರ್ಥಿಗಳು

    ಸ್ಫೋಟದ ರಭಸಕ್ಕೆ ಮನೆಯಲ್ಲಿರೋ ವಸ್ತುಗಳು ಚೆಲ್ಲಾಪಿಲ್ಲಿ ಆಗಿದೆ. ಘಟನೆಯಲ್ಲಿ ಮೂರು ಮಕ್ಕಳು ಸೇರಿ ಒಟ್ಟು ಏಳು ಮಂದಿಗೆ ಗಂಭೀರವಾಗಿ ಗಾಯಗಳಾಗಿದೆ. ಸುಕುಮಾರ್(48), ಹರ್ಷಾ(41), ಘನಶ್ರೀ (13), ಹೇಮೇಶ್ವರ್ (7)ರಾಮಕ್ಕ (65), ಅನಿತಾ(31), ರಚನಾ(21) ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಹೊಸ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ ಭಾರತೀಯ ಯೋಧರು – ವಿಶೇಷತೆ ಏನು?