Tag: kumarswamy

  • ಸಿಎಂ ಆಗಿ ಎಚ್‍ಡಿಕೆ, ಡಿಸಿಎಂ ಆಗಿ ಪರಂ ಇಂದು ಪ್ರಮಾಣವಚನ- ಟ್ರಾಫಿಕ್ ಜಾಮ್ ತಪ್ಪಿಸಲು ಮಾರ್ಗ ಬದಲಾವಣೆ

    ಸಿಎಂ ಆಗಿ ಎಚ್‍ಡಿಕೆ, ಡಿಸಿಎಂ ಆಗಿ ಪರಂ ಇಂದು ಪ್ರಮಾಣವಚನ- ಟ್ರಾಫಿಕ್ ಜಾಮ್ ತಪ್ಪಿಸಲು ಮಾರ್ಗ ಬದಲಾವಣೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಸಂಜೆ 4.30ಕ್ಕೆ ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಕುಮಾರಸ್ವಾಮಿ ಜೊತೆಗೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ವಜೂಭಾಯ್ ರೂಢಾಬಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಚಿವರು ವಿಶ್ವಾಸಮತ ಯಾಚನೆಯ ಬಳಿಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧ ಸಂಪೂರ್ಣ ಸಜ್ಜಾಗಿದೆ. ಬೃಹತ್ ವೇದಿಕೆ, ಎಲ್‍ಇಡಿ ವ್ಯವಸ್ಥೆ, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸದನದಲ್ಲಿ ಇದೇ 25ರಂದು ಕುಮಾರಸ್ವಾಮಿ ವಿಶ್ವಾಸಮತಯಾಚಿಸಲಿದ್ದು, ಮೇ 28ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವವರೆಗೆ ಕಾಂಗ್ರೆಸ್ ಶಾಸಕರು ಹಿಲ್ಟನ್ ರೆಸಾರ್ಟ್ ನಲ್ಲಿ, ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. 14 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ. 2004ರಲ್ಲಿ ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಆಗ ಜೆಡಿಎಸ್‍ನಲ್ಲಿದ್ದ ಸಿದ್ದರಾಮಯ್ಯ ಡಿಸಿಎಂ ಆಗಿದ್ರು.

    ಮಾರ್ಗ ಬದಲಾವಣೆ:
    ಪದಗ್ರಹಣ ಕಾರ್ಯಕ್ರಮದಿಂದಾಗಿ ಟ್ರಾಫಿಕ್ ಜಾಮ್ ತಪ್ಪಿಸುವ ಸಲುವಾಗಿ ಪೊಲೀಸರು ರಸ್ತೆ ಮಾರ್ಗದಲ್ಲೂ ಬದಲಾವಣೆ ಮಾಡಿದ್ದಾರೆ.
    * ಶಿವಾಜಿನಗರ ಕಡೆಯಿಂದ ವಿಧಾನಸೌಧ ಕಡೆ ಬರುವ ವಾಹನಗಳು ಬಾಳಕುಂದ್ರಿ ಸರ್ಕಲ್‍ನಿಂದ ತಿಮ್ಮಯ್ಯ ರಸ್ತೆ ಮೂಲಕ ಚಾಲುಕ್ಯ ಸರ್ಕಲ್‍ಗೆ ಬರತಕ್ಕದ್ದು
    * ಮೈಸೂರು ರಸ್ತೆ ಮೂಲಕ ಬರುವವರು ಟೌನ್‍ಹಾಲ್, ಎನ್.ಆರ್ ಜಂಕ್ಷನ್‍ನಿಂದ ಬಲ ತಿರುವು ಪಡೆದು ಹಡ್ಸನ್ ಸರ್ಕಲ್, ಕ್ವೀನ್ಸ್ ಸರ್ಕಲ್, ಅನಿಲ್‍ಕುಂಬ್ಳೆ ಸರ್ಕಲ್‍ನಿಂದ ಆರ್ ಬಿಐ ಜಂಕ್ಷನ್ ಮೂಲಕ ಕೃಷ್ಣ ವಿಹಾರಕ್ಕೆ ಬರಬೇಕು.
    * ತುಮಕೂರು ಕಡೆಯಿಂದ ಬರುವವರು ಗೊರಗುಂಟೆಪಾಳ್ಯ ಬಳಿ ಎಡ ತಿರುವು ಪಡೆದು ಬಿಇಎಲ್ ಸರ್ಕಲ್, ಹೆಬ್ಬಾಳ, ಮೇಕ್ರಿ ಸರ್ಕಲ್ ಮೂಲಕ ಪ್ಯಾಲೇಸ್ ಗ್ರೌಂಡ್ ಸೇರಬೇಕು.
    * ಕೋಲಾರ ಕಡೆಯಿಂದ ಬರುವವರು ಹಳೇ ಮದ್ರಾಸ್ ರಸ್ತೆ ಮೂಲಕ ರಾಮಮೂರ್ತಿನಗರ ಮಾರ್ಗವಾಗಿ ರಿಂಗ್ ರೋಡ್, ಹೆಬ್ಬಾಳ ಮೂಲಕ ಅರಮನೆ ಮೈದಾನಕ್ಕೆ ಸೇರತಕ್ಕದ್ದು.

    ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಇರುವಂತೆಯೇ ಸಮನ್ವಯ ಸಮಿತಿ ಇಲ್ಲದೆಯೇ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅಧಿಕಾರ ಹಂಚಿಕೆ ನಡೆದಿದೆ. ಈ ಸಂಬಂಧ ಎಚ್‍ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿದ್ರು. ಬಳಿಕ ಪ್ರತಿಕ್ರಿಯಿಸಿದ ಕೆಸಿ ವೇಣುಗೋಪಾಲ್, ಸಿಎಂ ಮತ್ತು ಡಿಸಿಎಂ ಮಾತ್ರ ಪ್ರಮಾಣ ವಚನ ಸ್ವೀಕರಿಸ್ತಾರೆ. ಸಚಿವರು ವಿಶ್ವಾಸಮತಯಾಚನೆ ಬಳಿಕ ಪ್ರಮಾಣವಚನ ಸ್ವೀಕರಿಸ್ತಾರೆ. ಸಮನ್ವಯ ಸಮಿತಿಯನ್ನೂ ವಿಶ್ವಾಸಮತಯಾಚನೆ ಬಳಿಕವೇ ರಚಿಸಲಾಗುತ್ತೆ ಅಂದ್ರು.

    ಕಾರ್ಯಕ್ರಮಕ್ಕೆ ಗಣ್ಯರ ಆಗಮನ:
    ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಸಿಂಗ್ ಯಾದವ್, ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್, ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್, ಚಿತ್ರನಟ ಕಮಲಹಾಸನ್ ಸೇರಿದಂತೆ ಹಲವು ಗಣ್ಯರು ಇಂದು ಕುಮಾರಪರ್ವದ ಆರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಕರ್ನಾಟಕ ಜನತೆ ಉತ್ತಮ ಸರ್ಕಾರವನ್ನೇ ಆಯ್ಕೆ ಮಾಡಿದ್ದಾರೆ ಅಂದ್ರು.

  • ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

    ಚಿಕ್ಕಮಗಳೂರು: ಕಳೆದ ನಾಲ್ಕೈದು ವರ್ಷದಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿರೋ 24 ವರ್ಷದ ಪದವೀಧರ ಯುವಕನೊಬ್ಬ ನಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.

    ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.

    ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

  • 4ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ- ಹೆಚ್‍ಡಿಕೆ ಜೊತೆ ಚರ್ಚಿಸುತ್ತೇನೆ ಅಂದ್ರು ಶಾಸಕ ಕೋನರೆಡ್ಡಿ

    4ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ- ಹೆಚ್‍ಡಿಕೆ ಜೊತೆ ಚರ್ಚಿಸುತ್ತೇನೆ ಅಂದ್ರು ಶಾಸಕ ಕೋನರೆಡ್ಡಿ

    ಬೆಂಗಳೂರು: ಕನಿಷ್ಟ ವೇತನ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಇಂದು ರಾಜ್ಯ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಲಿದೆ. ಗುರುವಾರ ರಾತ್ರಿ ಶಾಸಕ ಕೋನರೆಡ್ಡಿ ಪ್ರತಿಭಟನಾಕಾರರನ್ನು ಭೇಟಿ ಮಾಡಿದ್ರು. ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಖುದ್ದು ಅವರಿಂದಲೇ ಮಾಹಿತಿ ಪಡೆದ್ರು. ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಇಂದು ಅಧಿವೇಶದನಲ್ಲಿ ಖುದ್ದು ನಾನೇ ಈ ಕುರಿತು ಪ್ರಸ್ತಾಪ ಮಾಡುತ್ತೇನೆ ಅಂದ್ರು. ಇದನ್ನೂ ಓದಿ:  ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

  • ಮುಂದಿನ ಚುನಾವಣೆಯಲ್ಲಿ ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತ

    ಮುಂದಿನ ಚುನಾವಣೆಯಲ್ಲಿ ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತ

    ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತ ಅಂತ ಭವಾನಿ ರೇವಣ್ಣ ಹೇಳಿದ್ದಾರೆ.

    ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ಪ್ರಜ್ವಲ್ ಸ್ಪರ್ಧೆ ಖಚಿತವಾಗಿದ್ದು, ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂದ್ರು.

    ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

    ಆದ್ರೆ ಆತ ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬುದನ್ನು ಗೌಡರೇ ನಿರ್ಧಾರ ಮಾಡಲಿದ್ದಾರೆ. ಹಾಸನ ಜಿಲ್ಲೆ ಬೇಲೂರು ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಎರಡೂ ಕಡೆ ವಾತಾವರಣ ಚೆನ್ನಾಗಿದೆ ಅಂದ್ರು.

    ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಚುನಾವಣೆಗೆ ನಿಲ್ತಾರಾ: ಎಚ್‍ಡಿ ರೇವಣ್ಣ ಹೇಳಿದ್ದು ಹೀಗೆ

    ಈ ಹಿಂದೆ ನಮ್ಮ ಕುಟುಂಬದಿಂದ ರೇವಣ್ಣ ಹಾಗೂ ಕುಮಾರಸ್ವಾಮಿ ಇಬ್ಬರೇ ಸ್ಪರ್ಧೆ ಮಾಡಲಿದ್ದಾರೆ ಎಂದು ಗೌಡರು ಹೇಳಿದ್ದರು. ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಪ್ರಸ್ತುತ ನಮ್ಮ ಲೋಕಸಭೆಯ ಅಭ್ಯರ್ಥಿ ದೇವೇಗೌಡ ಅವರೇ ಇದ್ದಾರೆ. ಅವರು ಇರುವವರೆಗೂ ಈ ಪ್ರಶ್ನೆ ಉದ್ಭವವಾಗೊಲ್ಲ ಅಂತ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಕೂಡ ಈ ಹಿಂದೆ ಹೇಳಿದ್ದರು.

    ಇದನ್ನೂ ಓದಿ: ದೇವೇಗೌಡರ ಇಷ್ಟಕ್ಕೆ ವಿರುದ್ಧವಾಗಿ ನಡೆಯಲ್ಲ: ಭವಾನಿ ರೇವಣ್ಣ

  • ದರ್ಶನ್ ರಾಜಕೀಯಕ್ಕೆ ಎಂಟ್ರಿ: ಮಾಜಿ ಪ್ರಧಾನಿ ಎಚ್‍ಡಿಡಿ ಹೇಳಿದ್ದು ಹೀಗೆ

    ದರ್ಶನ್ ರಾಜಕೀಯಕ್ಕೆ ಎಂಟ್ರಿ: ಮಾಜಿ ಪ್ರಧಾನಿ ಎಚ್‍ಡಿಡಿ ಹೇಳಿದ್ದು ಹೀಗೆ

    ಬೆಂಗಳೂರು: ದರ್ಶನ್ ನಮ್ಮ ಪಕ್ಷಕ್ಕೆ ಬರುವುದಾದ್ದರೆ ಅವರಿಗೆ ಸ್ವಾಗತಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

    ದರ್ಶನ್ ರಾಜಕೀಯ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸಿನಿಮಾದವರು ರಾಜಕೀಯಕ್ಕೆ ಬರುವುದು ಹಾಗೂ ರಾಜಕೀಯದವರು ಸಿನಿಮಾರಂಗಕ್ಕೆ ಹೋಗುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಪಕ್ಷಕ್ಕೆ ಅವರು ಸೇರ್ಪಡೆಯಾದರೆ ಸ್ವಾಗತ ಎಂದು ಹೇಳಿದರು.

    ಮಾತನ್ನು ಮುಂದುವರಿಸಿ, ದರ್ಶನ್ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವುದು ಎಲ್ಲ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದು ಅವರು ಪ್ರತಿಕ್ರಿಯಿಸಿದರು.

    ದರ್ಶನ್ ಕಾಂಗ್ರೆಸ್ ಸೇರ್ಪಡೆಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಈ ವಿಚಾರದ ಬಗ್ಗೆ ಇದೂವರೆಗೂ ದರ್ಶನ್ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿಲ್ಲ.

     

  • ಹೋಟೆಲ್ಲಿಂದ ತಂದ್ರೂ ಊಟ ಮಾಡಿದ್ದು ದಲಿತರ ಮನೆಯಲ್ಲಿ ಅಲ್ಲವೇ: ಡಿವಿಎಸ್ ಪ್ರಶ್ನೆ

    ಹೋಟೆಲ್ಲಿಂದ ತಂದ್ರೂ ಊಟ ಮಾಡಿದ್ದು ದಲಿತರ ಮನೆಯಲ್ಲಿ ಅಲ್ಲವೇ: ಡಿವಿಎಸ್ ಪ್ರಶ್ನೆ

    ಬೆಂಗಳೂರು: ದಲಿತರ ಮನೆ ತುಂಬಾ ಚಿಕ್ಕದಾಗಿದೆ. ಎಲ್ಲರಿಗೂ ಊಟ ಒದಗಿಸುವುದು ಕಷ್ಟವಾಗಿತ್ತು. ಹೀಗಾಗಿ ಅವರು ಅಲ್ಲಿಂದ ತಂದು ಊಟಹಾಕಿದ್ದು ತಪ್ಪೇ. ದಲಿತರ ಮನೆಯಲ್ಲೇ ಊಟ ಮಾಡಿದ್ದು ನಿಜವಲ್ಲವೇ ಅಂತಾ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.

    ಬಿಜೆಪಿ ನಾಯಕರ ಬರ ಪ್ರವಾಸದ ವೇಳೆ ತುಮಕೂರಿನಲ್ಲಿ ದಲಿತರ ಮನೆಯಲ್ಲಿ ಹೊಟೇಲ್ ತಿಂಡಿ ತಿಂದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿ, ಭಾರತೀಯ ಜನತಾ ಪಾರ್ಟಿಯ `ನಮ್ಮ ನಡೆ ಶೋಷಿತರ ಕಡೆ’ ಎಂದು ಹೇಳುತ್ತಿರೋದು ಕಾಂಗ್ರೆಸ್ಸಿನವರಿಗೆ ಭಯ ಹುಟ್ಟಿಸಿದೆ. ಯಾಕಂದ್ರೆ ನನ್ನ ನಡೆ ಎಲ್ಲ ಫೈಲ್ ಆಗಿದೆ. ನನಗೆ ಇನ್ನು ಇರೋದು ಒಂದೇ ನಡೆ. ಅದು ಸೀದಾ ನನ್ನ ಮನೆ ಮೈಸೂರು ಕಡೆಗೆ ಅಂತಾ ಸಿಎಂ ಮನದಲ್ಲಿ ಭಾವಿಸಿದ್ದಾರೆ. ಹೀಗಾಗಿ ಆ ಹೆದರಿಕೆಯಿಂದಾ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅಂತಾ ಹೇಳಿದ್ರು.ನಾನು ಕೇಳ್ತೀನಿ ತಿಂಡಿ ಯಾರು ಮಾಡಿದ್ರು? ಗದ್ದೆಯಲ್ಲಿ ಭತ್ತ ಯಾರು ಬೆಳೆಸಿದ್ರು? ಯಾವ ಮಿಲ್ ನಲ್ಲಿ ಭತ್ತವನ್ನ ಅಕ್ಕಿ ಮಾಡಿದ್ರು? ಅದನ್ನ ಯಾರು ರುಬ್ಬಿದ್ರು? ಇದೆಲ್ಲ ಅವರಿಗೆ ಮುಖ್ಯವಾಗಿದೆ. ಒಂದು ದಲಿತ ಮನೆಯಲ್ಲಿ ಯಾರು ನಮಗೆ ಪ್ರೀತಿಯಿಂದ ಬಡಿಸಿದ್ರು? ಯಾರ ತಟ್ಟೆಯಲ್ಲಿ ತಿಂದೆವು? ತಮ್ಮ ಕೈಯಾರೆ ಬಡಿಸಿದವರು ಯಾರು? ಇದನ್ನ ನೋಡಬೇಕೇ ಹೊರತು ಯಾರು ಮಾಡಿದ್ರು ಅನ್ನೋದು ಮುಖ್ಯವಲ್ಲ ಎಂದು ತಿಳಿಸಿದ್ರು.

    ಇದನ್ನೂ ಓದಿ: ವೀಡಿಯೋ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ ಬಿಜೆಪಿ ನಾಯಕರ ಬಣ್ಣ ಬಯಲು

    ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಹತಾಶಾ ಭಾವನೆ ಎಲ್ಲಿವರೆಗೆ ಬಂದಿದೆ ಅಂದ್ರೆ ಇನ್ನು ಒಂದು ವರ್ಷ ಹಿಂಗೆ ಬಿಜೆಪಿ ಮೇಲೆ ಗೂಬೆ ಕೂರಿಸ್ತಾ ಇರ್ತಾರೆ. ಅವರಿಗೆ ಇದೇ ಕೆಲಸ. ಯಾಕಂದ್ರೆ ಅವರಿಂದ ಬೇರೇನೂ ಮಾಡಲು ಸಾಧ್ಯವಿಲ್ಲ ಅಂತಾ ಡಿವಿಎಸ್ ಹೇಳಿದ್ರು.

    ತಿವಾರಿ ಪ್ರಕರಣ ಸಿಬಿಐಗೆ ವಹಿಸಿ: ಇದೇ ವೇಳೆ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕದ ಕುರಿತು ಮಾತನಾಡಿದ ಅವರು, ಇದು ಎರಡು ರಾಜ್ಯಗಳಿಗೆ ಅನ್ವಯಿಸುತ್ತೆ. ರಾಜ್ಯದ ಪೊಲೀಸ್ ಅಧಿಕಾರಿಗಳನ್ನ ತನಿಖೆಗೆ ಅಲ್ಲಿಗೆ ಕಳುಹಿಸಬೇಕು. ಎರಡು ರಾಜ್ಯಗಳ ಪೊಲೀಸರು ಪರಸ್ಪರ ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಆ ಕೆಲಸ ಮಾಡಬೇಕಿತ್ತು. ತಿವಾರಿ ಸಹೋದರ ಆರೋಪ ಮಾಡಿದ್ದಾರೆ. ನಾಲ್ಕು ತಿಂಗಳು ವೇತನ ನೀಡಿರಲಿಲ್ಲವೆಂದು ಹೇಳಿದ್ದಾರೆ. ಜೊತೆಗೆ ಸಾವಿರಾರು ಕೋಟಿ ರೂ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ವಹಿಸಬೇಕು. ಆಗ ಸಾರ್ವಜನಿಕರಿಗೆ ಸಂಶಯ ನಿವಾರಣೆಯಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸುವುದಿಲ್ಲ ಅಂತಾ ಹೇಳಿದ್ದಾರೆ.

  • ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30ಕ್ಕೇರಲಿ ಸಮಸ್ಯೆಯಿಲ್ಲ: ಎಚ್‍ಡಿಕೆ

    ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30ಕ್ಕೇರಲಿ ಸಮಸ್ಯೆಯಿಲ್ಲ: ಎಚ್‍ಡಿಕೆ

    ತುಮಕೂರು: ಬಂಡಾಯ ಶಾಸಕರ ಸಂಖ್ಯೆ 15 ಅಲ್ಲ 30 ಕ್ಕೆ ಏರಲಿ ಸಮಸ್ಯೆಯಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟಾಂಗ್ ಜಮೀರ್ ಅಹಮದ್‍ಗೆ ಟಾಂಗ್ ನೀಡಿದ್ದಾರೆ.

    ಇಂದು ಸಿ.ಎಸ್ ಪುರದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನ ಪ್ರಮುಖ ನಾಯಕರು ಜೆಡಿಎಸ್ ಸೇರಲಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೆ ಎಚ್. ವಿಶ್ವನಾಥ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕಾಂಗ್ರೆಸ್ ನಲ್ಲಿ ವಿಶ್ವನಾಥ್ ಸೇರಿದ್ದಂತೆ ಹಿರಿಯ ಮುಖಂಡರು ಮೂಲೆ ಗುಂಪಾಗುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.

    ಮೈಸೂರಿನ ಮಾಜಿ ಸಂಸದ ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್ ಸೇರ್ಪಡೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅವರು ಈವರೆಗೂ ನನ್ನನ್ನು ಭೇಟಿ ಮಾಡಿಲ್ಲ, ಈ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

    ಶಾಸಕ ಎಂ.ಟಿ ಕೃಷ್ಣಪ್ಪ ಅವರು ಆಯೋಜಿಸಿದ ಈ ಕಾರ್ಯಕ್ರಮ 11.30 ಪ್ರಾರಂಭವಾಗಬೇಕಿತ್ತು. ಆದರೆ 3 ಗಂಟೆ ತಡವಾಗಿ ಆರಂಭವಾಗಿತ್ತು. ಇದರಿಂದ ಗಂಟೆಗಟ್ಟಲೆ ಕಾದು ಸುಸ್ತಾಗಿದ್ದ ಜನ ಮಜ್ಜಿಗೆಗೆ ಮುಗಿಬಿದ್ದಿದ್ದರು. ಬಿಸಿಲ ಬೇಗೆ ತಡೆಯಲಾರದೆ ಕಿತ್ತಾಡಿಕೊಂಡು ಜನ ಮಜ್ಜಿಗೆ ಪಡೆದರು.

    ಜಮೀರ್ ಅಹ್ಮದ್ ಏನ್ ಹೇಳಿದ್ರು?: ನಾವು ಇರುವುದು ಏಳು ಜನರಲ್ಲ 15 ಜನರಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಶಾಸಕರು ನಾವು 15 ಜನ ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ 120 ಸ್ಥಾನಗಳನ್ನು ಗೆದ್ದರೆ ತಾವು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳುವುದಲ್ಲದೇ ರಾಜ್ಯವನ್ನೇ ತೊರೆಯುತ್ತೇವೆ. ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಂಡ್ರೂ ನಾವು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲವೆಂದು ಜಮೀರ್ ಅಹಮದ್ ಹೇಳಿದ್ದರು.

  • ಮೋದಿಯ ಒನ್ ಮ್ಯಾನ್ ಶೋ ಕೆಲಸ ಮಾಡಿದೆ: ಎಚ್‍ಡಿಡಿ

    ಮೋದಿಯ ಒನ್ ಮ್ಯಾನ್ ಶೋ ಕೆಲಸ ಮಾಡಿದೆ: ಎಚ್‍ಡಿಡಿ

    ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಮೋದಿಯವರ ಒನ್ ಮ್ಯಾನ್ ಶೋ ಕೆಲಸ ಮಾಡಿದೆ ಅಂತಾ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ರೈತರ ಸಾಲ ಮನ್ನಾ ಮಾಡೋದಾಗಿ ಭರವಸೆ ನೀಡಿದ್ರು. 2014 ರಲ್ಲಿ ಹಿಂದೆ ಕೊಟ್ಟ ಭರವಸೆ ಹಾಗೂ ರೈತರ ಸಾಲ ಮನ್ನಾ ಮಾಡುವ ಭರವಸೆ ಸಹ ಈ ಗೆಲುವಿಗೆ ಕಾರಣ ಅಂತಾ ವ್ಯಂಗ್ಯವಾಡಿದ್ರು.

    ರೈತರಪರ ಹೋರಾಟ: 80 ಜನ ಸಂಸದರಿದ್ದಾರೆ ಹಾಗಾಗಿ ಈ ಗೆಲುವು ಸಾಧ್ಯವಾಗಿದೆ. ಉತ್ತರ ಪ್ರದೇಶದ ಗೆಲುವು ಇಲ್ಲಿನ ಬಿಜೆಪಿ ನಾಯಕರಿಗೆ ಉತ್ಸಾಹ ಹೆಚ್ಚಿಸಿರೋದ್ರಲ್ಲಿ ಅನುಮಾನವಿಲ್ಲ. ಸಿಎಂ ಸಿದ್ಧರಾಮಯ್ಯ ಬಜೆಟ್‍ನಲ್ಲಿ ಭರವಸೆ ಕೊಡ್ತಾರೆ. ನಾವು ಏನು ಭರವಸೆ ನೀಡೋಕೆ ಸಾಧ್ಯ?. ನಾವು ಕೇವಲ ಪ್ರವಾಸ ಮಾಡಬಹುದಷ್ಟೆ. ರೈತರ ಪರವಾಗಿ ಹೋರಾಟ ಮಾಡುತ್ತೆವೆ ಅಂತಾ ಹೇಳಿದ್ರು.

    ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ: ತೆಂಗು ಬೆಳೆಗಾರರಿಗೆ ನಷ್ಟ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ್ದೆ. ಈ ವೇಳೆ ತೆಂಗು ಬೆಳೆಗಾರರ ಸ್ಥಿತಿಗತಿಗಳ ಬಗ್ಗೆ ಪ್ರಧಾನಿಗೆ ತಿಳಿಸಿದ್ದೇನೆ. ಆದ್ರೆ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ. ರೈತರ ಸಾಲ ಮನ್ನ ಮಾಡೋದಾಗಿ ತಿಳಿಸಿದ್ದಾರೆ. ಈಗಾಲಾದ್ರು ಅವರ ಮಾತು ಉಳಿಸಿಕೊಂಡ್ರೆ 2019ಕ್ಕೆ ಪ್ರಧಾನಿ ಸ್ಥಾನಲ್ಲಿದ್ದುಕೊಂಡು ರೋಡ್ ಶೋ ಮಾಡುವ ಅವಶ್ಯಕತೆ ಬರೋದಿಲ್ಲ ಅಂತಾ ಪ್ರಧಾನಿ ವಿರುದ್ಧ ಮಾಜಿ ಪ್ರಧಾನಿ ಹೇಳಿದರು.

    ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಪ್ರಾದೇಶಿಕ ಪಕ್ಷಗಳು ಎಲ್ಲೂ ಹೋಗೋದಿಲ್ಲ, ಅಲ್ಲಿ ಅಲ್ಲೆ ಇರುತ್ತವೆ. ಯಾವತ್ತಿಗೂ ಪ್ರಾದೇಶಿಕ ಪಕ್ಷಗಳನ್ನು ಅಳಿಸಿ ಹಾಕೋದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ತುಳಿಯೋದಕ್ಕೆ ಪ್ರಯತ್ನಿಸಿದ್ರು ನಾವು ಇಲ್ಲೇ ಇದ್ದೇವಲ್ಲ. ಮತದಾನದಲ್ಲಿ ಗೋಲ್ ಮಾಲ್ ಬಗ್ಗೆ ನಾನು ಮಾತನಾಡೋದಿಲ್ಲ. ಈ ಸಮಯದಲ್ಲಿ ತೀರ್ಪು ಒಪ್ಪಬೇಕಷ್ಟೆ. ಈ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. 20 ತಿಂಗಳಲ್ಲೇ ಕುಮಾರಸ್ವಾಮಿ ಅತ್ಯುತ್ತಮ ಕೆಲಸ ಮಾಡಿದ್ರು. ಅದ್ಯಾವುದನ್ನು ಅಳಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಚರಿಷ್ಮಾ ಮಾಸುವಂತೆ ಮಾಡೋಕೆ ಯಾರಿಂದ್ಲೂ ಸಾಧ್ಯವಾಗಲಿಲ್ಲ ಅಂತಾ ಅವರು ಹೇಳಿದ್ರು.

    ಉಪಚುನಾವಣೆಗೆ ಶೀಘ್ರವೇ ಅಭ್ಯರ್ಥಿ ಡಿಸೈಡ್: ಇದೇ ತಿಂಗಳ 15 ರಂದು ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಉಪ ಚುನಾವಣೆ ಅಭ್ಯರ್ಥಿ ಫೈನಲ್ ಮಾಡುತ್ತೇವೆ. ಎಲ್ಲ ಶಾಸಕರು ಹಾಗೂ ಮೈಸೂರು ಚಾಮರಾಜ ನಗರ ಜಿಲ್ಲೆಯವರ ಅಭಿಪ್ರಾಯ ಪಡೆದು ಅಭ್ಯರ್ಥಿ ಡಿಸೈಡ್ ಮಾಡ್ತೇವೆ. ರಾಜಕೀಯಾ ಹರಿಯುವ ನೀರು. ಇಲ್ಲಿ ಯಾರು ಯಾರನ್ನು ವಾಶ್ ಔಟ್ ಮಾಡೋಕೆ ಸಾಧ್ಯವಿಲ್ಲ ಅಂತಾ ಮಾಜಿ ಪ್ರಧಾನಿ ಖಡಕ್ಕಾಗಿಯೇ ನುಡಿದರು.