Tag: Kumaraswamy couple

  • 35 ವರ್ಷದ ನಂತ್ರ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ ಸಿಎಂ ದಂಪತಿಯಿಂದ ಬಾಗಿನ

    35 ವರ್ಷದ ನಂತ್ರ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ ಸಿಎಂ ದಂಪತಿಯಿಂದ ಬಾಗಿನ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಬಾಗಿನ ಅರ್ಪಿಸಿದ್ದಾರೆ.

    ಗುರುವಾರ ಸಿಎಂ ಕುಮಾರಸ್ವಾಮಿ ಸುಮಾರು 4 ಗಂಟೆ ವೇಳೆಗೆ ಕೊಡಗಿಗೆ ಆಗಮಿಸಿದ್ದರು. ಮೊದಲು ಹಾರಂಗಿ ಜಲಾಶಯದ ಬಳಿಯಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಬಾಗಿನ ಅರ್ಪಿಸಿದ್ದಾರೆ. ಜಲಾಶಯ ಭರ್ತಿಗೊಂಡ ನಂತರ ಗುಂಡುರಾವ್ ಬಳಿಕ ಕುಮಾರಸ್ವಾಮಿ ಅವರೇ ಬಾಗಿನ ಅರ್ಪಿಸಿದರು ಎಂಬ ಕೀರ್ತಿಗೂ ಕೂಡ ಪಾತ್ರರಾದರು.

    ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ಡಿ.ಕೆ, 35 ವರ್ಷದ ಬಳಿಕ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ಜನರಿಗೆ ಸಂಕಷ್ಟ ಕೂಡ ಎದುರಾಗಿರುವುದು ತಿಳಿದುಬಂದಿದೆ. ನಾಡಿಗೆ ನೀರುಣಿಸುವ ಕೊಡಗಿನ ಜನರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.

    ಸಿಎಂ ಬಾಗಿನ ಕಾರ್ಯಕ್ರಮಕ್ಕೆ ಸಚಿವ ಡಿ.ಕೆ ಶಿವಕುಮಾರ್, ಹೆಚ್.ಡಿ ರೇವಣ್ಣ, ಎಂಎಲ್ ಸಿ ಬೋಜೆಗೌಡ, ಶಾಸಕ ಬೋಪಯ್ಯ, ಅಪ್ಪಚ್ಚು ರಂಜನ್ ಮತ್ತು ಸುನೀಲ್ ಸುಬ್ರಮಣಿ ಅವರು ಸಾಥ್ ನೀಡಿದ್ದಾರೆ.