https://youtu.be/lnz1AwgVEwY
Tag: kumara swamy
-

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಚುನಾವಣೆಗೆ ಇನ್ನೂ 23 ದಿನಗಳು ಬಾಕಿ ಉಳಿದಿವೆ. ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂತ್ರ-ಪ್ರತಿತಂತ್ರದಲ್ಲಿ ತೊಡಗಿದ್ದಾರೆ. ಪಬ್ಲಿಕ್‍ಟಿವಿ ಕೂಡ ಮಿನಿ ಸರ್ವೇ ನಡೆಸಿದೆ.
ಈ ಸರ್ವೆ ವೇಳೆ ಹಲವಾರು ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಈಗ ಚುನಾವಣೆ ನಡೆದ್ರೆ ನೀವು ಯಾರಿಗೆ ಮತ ಚಲಾಯಿಸುತ್ತೀರಿ? ಪ್ರತ್ಯೇಕ ಧರ್ಮದ ವಿಚಾರ ಎಲೆಕ್ಷನ್‍ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ? ಹೀಗೆ ನಾನಾ ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಪಬ್ಲಿಕ್ ಟಿವಿಯ ಪ್ರಶ್ನಾವಳಿಯೇನು? ಮತದಾರರ ಉತ್ತರವೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.
1. ಲಿಂಗಾಯತ ಧರ್ಮ ವಿಚಾರ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ವರದಾನನಾ? ತಿರುಗುಬಾಣನಾ?
ಹೌದು. ಕಾಂಗ್ರೆಸ್ ಗೆ ಲಾಭದಾಯಕ – 30.41%
ಇಲ್ಲ. ಕಾಂಗ್ರೆಸ್ ನಷ್ಟ – 19.51%
ಬಿಜೆಪಿಗೆ ನಷ್ಟ – 6.07%
ಬಿಜೆಪಿಗೆ ಲಾಭ – 13.50%
ರಾಜಕೀಯ, ಧರ್ಮದ ಮಿಶ್ರಣ ತಪ್ಪು – 20.49%
ಏನು ಹೇಳಲ್ಲ – 10.02%
2. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದಿಂದ ಇತರೆ ಜಾತಿಗಳು ಸಿಟ್ಟಾಗಿದ್ದಾವಾ?
ಹೌದು – 42.44%
ಇಲ್ಲ – 22.35%
ಗೊತ್ತಿಲ್ಲ – 35.21%
3.ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮುಂತಾದ ಭಾಗ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯದ ಭಾಗ್ಯ ತಂದುಕೊಡುತ್ತಾ?
ಹೌದು. ಖಂಡಿತ – 28.02%
ಸ್ವಲ್ಪ ಅನುಕೂಲ – 36.87%
ಇಲ್ಲ – 27.52%
ಗೊತ್ತಿಲ್ಲ – 7.59%
4.ಕಾಂಗ್ರೆಸ್, ಬಿಜೆಪಿ ಮಠ ಮಂದಿರ ಪಾಲಿಟಿಕ್ಸ್ ಕ್ಲಿಕ್ ಆಗುತ್ತಾ?
ಕಾಂಗ್ರೆಸ್ ಗೆ ಲಾಭ, ಬಿಜೆಪಿಗೆ ನಷ್ಟ – 16.37%
ಕಾಂಗ್ರೆಸ್ ಗೆ ನಷ್ಟ, ಬಿಜೆಪಿಗೆ ಲಾಭ – 22.57%
ಇಬ್ಬರಿಗೂ ಸ್ವಲ್ಪ ಲಾಭ ಆಗಬಹುದು – 32.01%
ಇಬ್ಬರಿಗೂ ನಷ್ಟವಾಗಬಹುದು – 12.01%
ಏನು ಹೇಳಲ್ಲ – 17.04%
5. ಜೆಡಿಎಸ್ ಹಾಗೂ ಬಿಎಸ್‍ಪಿ ಚುನಾವಣಾ ಮೈತ್ರಿಯಿಂದ ದಲಿತರ ವೋಟು ಡಿವೈಡ್ ಆಗುತ್ತಾ?
ಹೌದು. ಮತ ವಿಭಜನೆ ಆಗುತ್ತೆ – 20.14%
ಇಲ್ಲ. ವ್ಯತ್ಯಾಸ ಆಗಲ್ಲ – 56.50%
ಗೊತ್ತಿಲ್ಲ – 23.36%
6. ಸಿದ್ದರಾಮಯ್ಯ ಸರ್ಕಾರಕ್ಕೆ ನೀವು ಕೋಡೋ ಅಂಕ ಎಷ್ಟು?
ಅತ್ಯುತ್ತಮ – 12.29%
ಉತ್ತಮ – 21.61%
ಸಾಧಾರಣ – 33.74%
ಕಳಪೆ – 17.86%
ಅತಿ ಕಳಪೆ – 14.50%
7.ಈ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಹಾಕುತ್ತೀರಿ
ಪಕ್ಷ – 11.18%
ಅಭಿವೃದ್ಧಿ – 3.74%
ಅಭ್ಯರ್ಥಿ – 12.93%
ಜಾತಿ – 18.93%
ಧರ್ಮ – 20.24%
ಸಿಎಂ ಸಿದ್ದರಾಮಯ್ಯ – 7.71%
ನರೇಂದ್ರ ಮೋದಿ – 16.12%
ಕುಮಾರಸ್ವಾಮಿ – 6.15%
ಇತರೆ – 3.00%
8. ಈ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?
ಕಾಂಗ್ರೆಸ್ – 30.82%
ಬಿಜೆಪಿ – 29.65%
ಜಿಡಿಎಸ್ – 22.52%
ನೋಟಾ – 5.17%
ಇತರೆ – 11.84%

9. ನಿಮ್ಮ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?
ಸಿದ್ದರಾಮಯ್ಯ – 24.66%
ಯಡಿಯೂರಪ್ಪ – 21.65%
ಕುಮಾರಸ್ವಾಮಿ – 20.63%
ಮಲ್ಲಿಕಾರ್ಜುನ ಖರ್ಗೆ – 4.67%
ಜಿ. ಪರಮೇಶ್ವರ್ – 3.86%
ಹೊಸ ಮುಖ – 12.09%
ಏನು ಹೇಳಲ್ಲ – 9.90%
ಇತರೆ – 2.54%
10. ಈ ಬಾರಿ ಸ್ವತಂತ್ರ ಸರ್ಕಾರವೋ, ಸಮ್ಮಿಶ್ರ ಸರ್ಕಾರವೋ?
ಪೂರ್ಣ ಬಹುಮತ ಸರ್ಕಾರ – 39.64%
ಅತಂತ್ರ ಪರಿಸ್ಥಿತಿ – 43.23%
ಗೊತ್ತಿಲ್ಲ -17.13%
11. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
ಬಿಜೆಪಿ + ಜೆಡಿಎಸ್ – 44.30%
ಕಾಂಗ್ರೆಸ್ + ಜೆಡಿಎಸ್ – 28.73%
ಬಿಜೆಪಿ + ಕಾಂಗ್ರೆಸ್ – 6.74%
ಯಾವುದು ಇಲ್ಲ – 20.23%
12. ಬಿಜೆಪಿಗೆ ಮೋದಿಯೇ ಆಸರೆನಾ ಅಥವಾ ಬಿಎಸ್‍ವೈ ಆಸರೆನಾ?
ಮೋದಿ ಆಸರೆ
ಹೌದು – 67.20%
ಇಲ್ಲ – 22.36%
ಗೊತ್ತಿಲ್ಲ – 10.44%
ಬಿಎಸ್‍ವೈ ಆಸರೆ
ಹೌದು – 19.22%
ಇಲ್ಲ – 57.66%
ಗೊತ್ತಿಲ್ಲ – 23.12%
13. ಕಾಂಗ್ರೆಸ್‍ಗೆ ರಾಹುಲ್ ಆಸರೆನಾ ಅಥವಾ ಸಿದ್ದರಾಮಯ್ಯ ಆಸರೆನಾ?
ರಾಹುಲ್ ಆಸರೆ
ಹೌದು – 24.98%
ಇಲ್ಲ – 52.86%
ಗೊತ್ತಿಲ್ಲ – 22.16%
ಸಿದ್ದರಾಮಯ್ಯ ಆಸರೆ
ಹೌದು – 45.57%
ಇಲ್ಲ – 22.18%
ಗೊತ್ತಿಲ್ಲ – 32.25%
14. ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ ಎಂದು ಭಾವಿಸುತ್ತೀರಾ?
ಬಿಜೆಪಿ ಹಿಂದೂಪರ, ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ – 29.54%
ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ – 35.73%
ಏನು ಹೇಳಲ್ಲ – 34.73%15. ಪಬ್ಲಿಕ್ ಸರ್ವೆಯ ಅಂತಿಮ ಫಲಿತಾಂಶ?
ಕಾಂಗ್ರೆಸ್ 85-95
ಬಿಜೆಪಿ 75-85
ಜೆಡಿಎಸ್ 40-45
ಇತರೆ 05
-

ಸಿದ್ದರಾಮಯ್ಯನವರಿಗೆ ಅಪ್ಪ ಇದ್ದಾರೋ ಇಲ್ವೋ: ಎಚ್‍ಡಿಕೆ ತಿರುಗೇಟು
ಹಾವೇರಿ: ಆಣೆ ಹಾಕುವುದಾದರೆ ಸಿದ್ದರಾಮಯ್ಯನವರು ಅವರ ಅಪ್ಪನ ಮೇಲೆ ಹಾಕಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರಿಗೆ ಅಪ್ಪ ಇದ್ದಾರೋ ಇಲ್ವೋ ಎಂದು ಪ್ರಶ್ನಿಸಿದ ಅವರು, ನಮ್ಮ ಅಪ್ಪನ ಮೇಲೆ ಏನಕ್ಕೆ ಆಣೆ ಹಾಕುತ್ತಾರೆ? ಸಿಎಂ ಇದೇ ಮೊದಲ ಬಾರಿ ಅಲ್ಲ ಬಹಳಷ್ಟು ಬಾರಿ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಅಂತ ಮುಖ್ಯಮಂತ್ರಿಗಳು ತಿಳಿದು ಕೊಳ್ಳಬೇಕು. ಸಾರ್ವಜನಿಕವಾಗಿ ಹೀಗೆ ಲಘುವಾಗಿ ಮಾತನಾಡುವುದನ್ನು ಮುಖ್ಯ ಮಂತ್ರಿಗಳು ಬಿಡಬೇಕು ಎಂದು ಎಚ್‍ಡಿಕೆ ಸಲಹೆ ನೀಡಿದರು. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ
ಸಿದ್ದರಾಮಯ್ಯನವರು ರಾಮನಗರ ಕ್ಷೇತ್ರಕ್ಕೆ ಬಂದು ಒಂದು ವಾರ ಹಳ್ಳಿ ಹಳ್ಳಿಯಲ್ಲಿ ಕ್ಯಾಂಪೇನ್ ಮಾಡಲಿ. ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಯಾರು ಗೆಲ್ಲುತ್ತಾರೆ ಒಂದು ಪರೀಕ್ಷೆ ಆಗಿ ಹೋಗಲಿ ಎಂದು ಸಿಎಂಗೆ ಸವಾಲು ಹಾಕಿದ್ದಾರೆ.
ಕಳೆದ 5 ವರ್ಷದಲ್ಲಿ ರಾಮನಗರ ಕ್ಷೇತ್ರದಲ್ಲಿ ಅವರು ಏನು ಕೆಲಸ ಮಾಡಿದ್ದಾರೆ ಅಂತ ಮತ ಕೇಳಲು ಹೋಗುತ್ತಾರೆ? ರಾಮನಗರದಲ್ಲಿ ಒಂದು ದಿನ, ಶಿಕಾರಿಪುರದಲ್ಲಿ ಒಂದು ದಿನ ಪ್ರಚಾರ ಮಾಡಿದರೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರನ್ನು ಸೋಲಿಸುತ್ತೇನೆ ಎಂದು ಉದ್ಧಟತನದ ಮಾತುಗಳನ್ನು ಆಡಿದ್ದಾರೆ. ಆದರೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಆರು ದಿನದಿಂದ ಮತ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಇದನ್ನೂ ಓದಿ: ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೀನಿ – ಸಿಎಂಗೆ ಯಡಿಯೂರಪ್ಪ ತಿರುಗೇಟು
ರಾಜ್ಯದ 224 ಕ್ಷೇತ್ರಗಳ ಮತದಾರರ ಮತವನ್ನು ಜೇಬಿನಲ್ಲಿ ಇಟ್ಟುಕೊಂಡಂತೆ ವರ್ತಿಸುತ್ತಿದ್ದಾರೆ. ಅವರ ಅಪ್ಪನಾಣೆ ಗೆಲ್ಲೊದಕ್ಕೆ ಆಗಲ್ಲ. ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಹೇಳುತ್ತಾರೆ. ಮುಖ್ಯಮಂತ್ರಿ ಯಾರು ಆಗಬೇಕು ಅಂತ ತೀರ್ಮಾನ ಮಾಡುವುದು ಜನ ಎಂದು ತಿರುಗೇಟು ನೀಡಿದರು.
ಮುಖ್ಯಮಂತಿಗಳು ಜಾತಿ ಸಭೆಗಳನ್ನು ಮಾಡುತ್ತಿದ್ದಾರೆ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವಾ? ಚುನಾವಣಾ ಆಯೋಗ ಏನು ಮಾಡುತ್ತಿದೆ? ಪೊಲೀಸ್ ವಾಹನದಲ್ಲಿ ಈಗಿನ ಸರ್ಕಾರ ಹಣವನ್ನು ಸಾಗಿಸುತ್ತದೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತದೆ. ನಾನು ಮುಖ್ಯಮಂತ್ರಿಯಾದಾಗ ಆ ಸ್ಥಾನವನ್ನು ಯಾವತ್ತೂ ದುರುಪಯೋಗ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.


