Tag: kumara krupa

  • ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

    ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

    ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ (Santro Ravi) ಎಂಬಾತನ ವಿಚಾರದಲ್ಲಿ ರಾಡಿ ಎದ್ದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಫೋಟೋ, ವಿಡಿಯೋ ಸಮರ ಶುರುವಾಗಿದೆ. ಮೈಸೂರಿನಲ್ಲಿ ಓಡಾಡಿಕೊಂಡಿದ್ದ ಈ ರೌಡಿಶೀಟರ್ ರವಿ ಬೆಂಗಳೂರಿಗೆ ಬಂದಿದ್ದೇ ಒಂದು ರೋಚಕ ಕಹಾನಿ.

    ಯಾರು ಈ ಸ್ಯಾಂಟ್ರೋ ರವಿ?
    ಸ್ಯಾಂಟ್ರೋ ರವಿಯ ಮೂಲ ಹೆಸರು ಮಂಜುನಾಥ್. ಮಂಡ್ಯ (Mandya) ಮೂಲದ ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ. ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು.

    ತಂದೆಯ ಮರಣದ ನಂತರ ಮಂಜುನಾಥ್ ಅಡ್ಡದಾರಿ ಹಿಡಿದಿದ್ದ. ಹೆತ್ತ ತಾಯಿ ಹಾಗೂ ಸಹೋದರರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದ ಈತ ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ .2000 ಇಸವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ ರವಿ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ. ಇದನ್ನೂ ಓದಿ: ಹೆಚ್‌ಡಿಕೆ ಜೊತೆಗೆ ಸ್ಯಾಂಟ್ರೋ ರವಿ ಸಂಪರ್ಕ ಹೇಗೆ ಎಂಬುದು ಗೊತ್ತಾಗಬೇಕು- ಆರಗ ಜ್ಞಾನೇಂದ್ರ

    ಮೈಸೂರಿನಲ್ಲಿ ಏನು ಮಾಡುತ್ತಿದ್ದ?
    ಮೈಸೂರಿನಲ್ಲಿ (Mysuru) ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ (Santro Car) ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ.

    ಕುಮಾರಕೃಪಾದಲ್ಲಿ ವಾಸ:
    ಮೈಸೂರಿನ ಗಲ್ಲಿ ಗಲ್ಲಿ ಅಲೆಯುತ್ತಿದ್ದ ಸ್ಯಾಂಟ್ರೋ ರವಿ ಬೆಂಗಳೂರಿಗೆ ಬಂದ ಬಳಿಕ ರಾಜಕಾರಣಿಗಳ ಸ್ನೇಹ ಬೆಳೆಸಿದ. ತನ್ನ ಪಿಂಪ್ ವ್ಯವಹಾರಕ್ಕೆ ರಾಜಕಾರಣಿಗಳ ಶ್ರೀರಕ್ಷೆ, ಕೃಪಾಕಟಾಕ್ಷ ಪಡೆದುಕೊಂಡ. ಪಿಂಪ್ ಕೆಲಸ ಗೊತ್ತಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಅತಿಥಿ ಗೃಹವನ್ನೇ ಕುಮಾರ ಕೃಪಾ ಗೆಸ್ಟ್ (Kumara Krupa) ಹೌಸ್ ಅನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ.

     

    ಗೆಸ್ಟ್‌ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಇದರಿಂದಾಗಿ ಆತನಿಗೆ ತನ್ನ ವ್ಯವಹಾರ ನಡೆಸುವುದಕ್ಕೆ ಸುಲಭ ಆಗಿತ್ತು. ಈತನ ದಂಧೆ ಬಗ್ಗೆ ಯಾರಿಗೂ ಅನುಮಾನವೇ ಬರುತ್ತಿರಲಿಲ್ಲ. ವರ್ಗಾವಣೆ ದಂಧೆಯನ್ನು ಕೂಡ ತುಂಬಾ ಚೆನ್ನಾಗಿ ನಡೆಸಬಹುದಾಗಿತ್ತು. ಅದಕ್ಕಾಗಿಯೇ ಕುಮಾರಕೃಪಾ ಗೆಸ್ಟ್‌ ಹೌಸ್‌ ಖಾಯಂ ಜಾಗವಾಗಿ ಹೋಗಿತ್ತು.

    ಪತ್ನಿ ಹೇಳಿದ್ದೇನು?
    ಸ್ಯಾಂಟ್ರೋ ರವಿ ಪಿಂಪ್ ಆಗಿದ್ದ ಎನ್ನುವುದಕ್ಕೆ ಪತ್ನಿಯೇ ಸಾಕ್ಷಿ ಹೇಳಿದ್ದಾರೆ. ಕೆಲಸ ಹುಡುಕುತ್ತಿದ್ದ ನಾನು ಮಂಜುನಾಥ್‌ನನ್ನು ಭೇಟಿಯಾದೆ. ಕೆಲಸ ಕೊಡಿಸಿದ ಬಳಿಕ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದ. ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ನಗ್ನ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದ ಎಂಬುದಾಗಿ ಪತ್ನಿ ಸ್ಫೋಟಕ ಸತ್ಯ ಹೇಳಿದ್ದಾರೆ. ಅಲ್ಲದೇ ಇತರರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ದೈಹಿಕವಾಗಿ ಹಲ್ಲೆ, ಕಿರುಕುಳ ನೀಡಿ ನನ್ನ ಮೇಲೆಯೇ ಕ್ರಿಮಿನಲ್‌ ಕೇಸ್‌ ಹಾಕಿದ್ದಾನೆ ಎಂದು ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಎಡವಟ್ಟು- ಹೀಗೆ ಮಾಡ್ಬಹುದಾ ಸಚಿವರೇ?

    ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಎಡವಟ್ಟು- ಹೀಗೆ ಮಾಡ್ಬಹುದಾ ಸಚಿವರೇ?

    ಬೆಂಗಳೂರು: ಮೈತ್ರಿ ಸರ್ಕಾರದಲ್ಲಿಯೇ ಸೂಪರ್ ಸಿಎಂ ಅಂತಾನೆ ಕರೆಸಿಕೊಳ್ಳುವ ಎಚ್.ಡಿ.ರೇವಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಸರ್ಕಾರ ರಚನೆಯ ಬಳಿಕ ಎಲ್ಲ ಸಚಿವರಿಗೂ ಸರ್ಕಾರಿ ಬಂಗಲೆಯನ್ನು ನೀಡಲಾಗಿದೆ. ಆದ್ರೆ ಎಚ್.ಡಿ.ರೇವಣ್ಣ ತಮ್ಮ ಕಟ್ಟಡದ ಕೊಳಚೆ ನೀರನ್ನು ರಸ್ತೆಗೆ ತಿರುಗಿಸುವ ಕೆಲಸ ಮಾಡಿದ್ದಾರೆ.

    ಸದ್ಯ ಆಷಾಢ ಮಾಸ ಇರೋದರಿಂದ ಸರ್ಕಾರಿ ಬಂಗಲೆಗೆ ಸಚಿವರು ಪ್ರವೇಶ ಮಾಡಿಲ್ಲ. ಆಷಾಢ ಕಳೆದ ಮೇಲೆ ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ನಂಬರ್ 1 ನಿವಾಸಕ್ಕೆ ಎಚ್.ಡಿ.ರೇವಣ್ಣ ಪ್ರವೇಶ ಮಾಡಲಿದ್ದಾರೆ. ಆದರೆ ಪ್ರವೇಶಕ್ಕೂ ಮುನ್ನವೇ ವಾಸ್ತು ಪ್ರಕಾರ ಕಟ್ಟಡದ ನವೀಕರಣ ನಡೆಯುತ್ತಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಹೆಚ್.ಸಿ.ಮಹಾದೇವಪ್ಪ ತಮ್ಮ ಪ್ರವೇಶದ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡದ ನವೀಕರಣಗೊಳಿಸಿದ್ದರು. ಈಗ ಮತ್ತೆ ಅದೇ ಕಟ್ಟಡದ ನವೀಕರಣ ನಡೆಯುತ್ತಿದೆ.

    ಮಳೆಯಾದರೆ ಕುಮಾರ ಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.

    ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿದಂತಾಗುತ್ತದೆ. ಸಚಿವರೇ ನೀವು ಹೇಗೆ ಮಾಡಬಹುದಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

  • ಅತಿಥಿ ಗೃಹವಿದ್ರೂ ಸ್ಟಾರ್ ಹೋಟೆಲ್‍ಗಳಲ್ಲಿ ಗಣ್ಯರಿಗೆ ರೂಮ್ ಬುಕ್- 4 ವರ್ಷಗಳಲ್ಲಿ ಸರ್ಕಾರಕ್ಕೆ ಲಾಸ್ ಆಗಿದ್ದೆಷ್ಟು ಗೊತ್ತಾ?

    ಅತಿಥಿ ಗೃಹವಿದ್ರೂ ಸ್ಟಾರ್ ಹೋಟೆಲ್‍ಗಳಲ್ಲಿ ಗಣ್ಯರಿಗೆ ರೂಮ್ ಬುಕ್- 4 ವರ್ಷಗಳಲ್ಲಿ ಸರ್ಕಾರಕ್ಕೆ ಲಾಸ್ ಆಗಿದ್ದೆಷ್ಟು ಗೊತ್ತಾ?

    ಬೆಂಗಳೂರು: ರಾಜ್ಯಕ್ಕೆ ಬರೋ ಗಣ್ಯರಿಗೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅದ್ಧೂರಿ ಅತಿಥಿ ಗೃಹವಿದೆ. ಆದ್ರೆ ಅಧಿಕಾರಿಗಳು ಮಾತ್ರ ಆ ಗೆಸ್ಟ್ ಹೌಸ್ ಬದಲಿಗೆ ಸ್ಟಾರ್ ಹೋಟೆಲ್‍ಗಳಲ್ಲೇ ಅತಿಥಿಗಳಿಗೆ ಸತ್ಕಾರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡ್ತಿದ್ದಾರೆ.

    ಕುಮಾರ ಕೃಪ ಅತಿಥಿ ಗೃಹ ರಾಜ್ಯಕ್ಕೆ ಆಗಮಿಸುವ ಗಣ್ಯರ ಆತಿಥ್ಯಕ್ಕೆಂದು ಸರ್ಕಾರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಅದ್ಧೂರಿ ಗೆಸ್ಟ್‍ಹೌಸ್. ಅತ್ಯುತ್ತಮ ಸೌಕರ್ಯ ಹೊಂದಿರುವ ಈ ಅತಿಥಿ ಗೃಹದ ಉಪಯೋಗ ಮಾತ್ರ ಶೂನ್ಯ. ಯಾಕಂದ್ರೆ ನಮ್ಮ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸುವ ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳನ್ನೇ ಬುಕ್ ಮಾಡ್ತಿದ್ದಾರೆ. ಇದರಿಂದಾಗಿ ಕಳೆದ 4 ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೃಥಾ ಖರ್ಚಾಗಿದೆ.

    ಕುಮಾರ ಕೃಪ ಅತಿಥಿ ಗೃಹದಲ್ಲಿ ಯಾವ ಸ್ಟಾರ್ ಹೋಟೆಲ್‍ಗಳಿಗೂ ಕಮ್ಮಿಯಿಲ್ಲದ 12 ವಿವಿಐಪಿ ರೂಂಗಳು ಇವೆ. 26 ಸಾಮಾನ್ಯ ರೂಂಗಳಿವೆ. ಆದ್ರೂ ತಾಜ್‍ವೆಸ್ಟ್ ಎಂಡ್, ದಿ ಕ್ಯಾಪಿಟಲ್, ಐಟಿಸಿ ಗಾರ್ಡೇನೀಯ, ಲಲಿತ ಮಹಲ್, ವಿಂಡ್ಸರ್ ಮ್ಯಾನರ್ ಸ್ಟಾರ್ ಹೋಟೆಲ್‍ಗಳಲ್ಲೇ ರೂಂ ಬುಕ್ ಮಾಡಿ, ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲೀ ಪಾಟೀಲ್ ಆರ್‍ಟಿಐ ಅಡಿ ಈ ಎಲ್ಲಾ ಮಾಹಿತಿಯನ್ನ ಪಡೆದಿದ್ದಾರೆ.

    ಜೊತೆಗೆ ಅತಿಥಿಗೃಹದ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರ ವ್ಯಯಿಸುತ್ತಿದೆ. ಆದ್ರೂ ಅಧಿಕಾರಿಗಳು ದುಡ್ಡು ಹೊಡೆಯಲು ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡ್ತಿದ್ದಾರೆ. ನಮ್ ತೆರಿಗೆ ದುಡ್ಡಲ್ಲಿ ಈ ತರಾದ ಶೋಕಿ ಎಷ್ಟು ಸರಿ ಅನ್ನೋದು ಜನಸಾಮಾನ್ಯರ ಪ್ರಶ್ನೆ.