Tag: kumar sngakkara

  • ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ  ಧೋನಿ

    ಏಕದಿನ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಧೋನಿ

    ಕ್ಯಾಂಡಿ: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.

    ಹೌದು. ಇನ್ನು ಒಂದು ಸ್ಟಂಪ್ ಔಟ್ ಮಾಡಿದರೆ ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಲಿದ್ದಾರೆ.

    ಕ್ಯಾಂಡಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಚಹಲ್ ಬೌಲಿಂಗ್ ನಲ್ಲಿ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಈ ವಿಶ್ವದಾಖಲೆ ಸಾಧನೆಯ ಸಮೀಪ ಬಂದಿದ್ದು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

    ಇಂದಿನ ಪಂದ್ಯ ಸೇರಿದಂತೆ ಧೋನಿ ಒಟ್ಟು 298 ಪಂದ್ಯಗಳ 293 ಇನ್ನಿಂಗ್ಸ್ ಮೂಲಕ 99 ಸ್ಟಪ್ ಔಟ್ ಮಾಡಿದ್ದಾರೆ. 278 ಕ್ಯಾಚ್ ಗಳನ್ನು ಪಡೆಯುವ ಮೂಲಕ ಒಟ್ಟು 377 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ.

    ಏಕದಿನದ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿರೋ ಕೀಪರ್‍ಗಳ ಪಟ್ಟಿಯಲ್ಲಿ 99 ಸ್ಟಂಪ್ ಮಾಡುವ ಮೂಲಕ ಧೋನಿ ಮತ್ತು ಕುಮಾರ ಸಂಗಕ್ಕಾರ(404 ಪಂದ್ಯ, 353 ಇನ್ನಿಂಗ್ಸ್) ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. 75 ಸ್ಟಂಪ್ ಔಟ್ ಮಾಡುವ ಮೂಲಕ ಶ್ರೀಲಂಕಾದ ರಮೇಶ್ ಕಲುವಿತರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೋಯಿನ್ ಖಾನ್ 73 ಸ್ಟಂಪ್ ಔಟ್ ಮಾಡಿದ್ದರೆ, ಆಸ್ಟ್ರೇಲಿಯಾದ ಆಡಂ ಗಿಲ್‍ಕ್ರಿಸ್ಟ್ 55 ಸ್ಟಂಪ್ ಔಟ್ ಮಾಡುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ.

    4ನೇ ಸ್ಥಾನ: ಅತಿ ಹೆಚ್ಚು ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ವಿಕೆಟ್ ಕೀಪರ್‍ಗಳ ಪಟ್ಟಿಯಲ್ಲಿ ಧೋನಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 482(383 ಕ್ಯಾಚ್, 99 ಸ್ಟಂಪ್) ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗಿಲ್‍ಕ್ರಿಸ್ಟ್ 472(417 ಕ್ಯಾಚ್, 55 ಸ್ಟಂಪ್) ಇದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ 424 ಬಲಿ(402 ಕ್ಯಾಚ್, 22 ಸ್ಟಂಪ್) ಪಡೆಯುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

    ಸದ್ಯ ಒಟ್ಟು 377 ಮಂದಿಯನ್ನು ಔಟ್ ಮಾಡಿರುವ ಧೋನಿ 2019ರ ವಿಶ್ವಕಪ್ ಕ್ರಿಕೆಟ್‍ವರೆಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದರೆ ಸಂಗಕ್ಕಾರ ನಿರ್ಮಿಸಿದ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

    ಭಾರತದಲ್ಲಿ ಯಾರು ಎಷ್ಟು? ಭಾರತದ ಪರವಾಗಿ ನಯನ್ ಮೊಂಗಿಯಾ 44 ಸ್ಟಂಪ್ ಔಟ್ ಮಾಡಿದ್ದರೆ, ಕಿರಣ್ ಮೊರೆ 27 ಸ್ಟಂಪ್ ಔಟ್ ಮಾಡಿದ್ದಾರೆ. ಚಂದ್ರಕಾಂತ್ ಪಂಡಿತ್ 15 ಸ್ಟಂಪ್ ಮಾಡಿದ್ದರೆ, ರಾಹುಲ್ ದ್ರಾವಿಡ್ 14 ಸ್ಟಂಪ್ ಔಟ್ ಮಾಡಿದ್ದಾರೆ.

    ಇದನ್ನೂ ಓದಿ:ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

    https://youtu.be/ZTprzduNDDk

    https://youtu.be/ULWBPEngbpk

    https://youtu.be/B8kTz5cnvgo