Tag: Kukke Shree Subrahmanya Temple

  • ಕುಕ್ಕೆ ದೇಗುಲದಲ್ಲಿ ಕತ್ರಿನಾ ಕೈಫ್- ಆಶ್ಲೇಷಾ ಬಲಿ ಪೂಜೆ ಮಾಡಿಸಿದ ನಟಿ

    ಕುಕ್ಕೆ ದೇಗುಲದಲ್ಲಿ ಕತ್ರಿನಾ ಕೈಫ್- ಆಶ್ಲೇಷಾ ಬಲಿ ಪೂಜೆ ಮಾಡಿಸಿದ ನಟಿ

    ಬಾಲಿವುಡ್ ನಟಿ ಕತ್ರಿನಾ ಕೈಫ್  (Katrina Kaif) ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ತಂಗಿದ್ದಾರೆ. ದೇವಸ್ಥಾನದಲ್ಲಿ ಇಂದು (ಮಾ.12) ಆಶ್ಲೇಷಾ ಬಲಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಟಿ ರನ್ಯಾ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್

    ನಿನ್ನೆಯಿಂದ (ಮಾ.11) ಕತ್ರಿನಾ ದೇವಸ್ಥಾನದಲ್ಲಿ ವಿವಿಧ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ, ನಾಗ ಪ್ರತಿಷ್ಠಾ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಸಂತಾನ, ವ್ಯವಹಾರಿಕ, ಕೌಟುಂಬಿಕ, ಜೀವನದ ಒಳಿತಿಗಾಗಿ ಕತ್ರಿನಾ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.

    ಸಾಮಾನ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡುತ್ತಾರೆ. ದೋಷ ನಿವಾರಣೆಗೆ ಅನೇಕರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುತ್ತಾರೆ. ಹಾಗಾಗಿ ಬಾಲಿವುಡ್ ನಟಿ ಕತ್ರಿನಾ ಕೂಡ ಸುಬ್ರಹ್ಮಣ್ಯನ ಮೊರೆ ಹೋಗಿದ್ದಾರೆ.

  • ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದ ಶ್ರೀರಾಮುಲು

    ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದ ಶ್ರೀರಾಮುಲು

    ಮಂಗಳೂರು: ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ, ಶಾಸಕ ಬಿ. ಶ್ರೀರಾಮುಲು ಭೇಟಿ ನೀಡಿದ್ದರು.

    ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿರುವ ಶ್ರೀರಾಮುಲು ಅವರು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಹಾಗೂ ಮಹಾಭಿಷೇಕ ಸೇವೆ ನೆರವೇರಿಸಿದರು. ಅಲ್ಲದೇ ಮಧ್ಯಾಹ್ನದ ಮಹಾಪೂಜೆಯ ಬಳಿಕ ನಾಗಪ್ರತಿಷ್ಠೆ ಸೇವೆ ನಡೆಯಲಿದೆ. ಶ್ರೀರಾಮುಲುರಿಗೆ ಸ್ಥಳೀಯ ಬಿಜೆಪಿ ಮುಖಂಡರ ಸಾಥ್ ನೀಡಿದರು.

    ಲಕ್ಷಾಂತರ ಮಂದಿಯ ಭಕ್ತರು ಪ್ರತಿ ವರ್ಷ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ನಾಗ ಕ್ಷೇತ್ರವೆಂದೇ ಹೆಸರು ಪಡೆದಿರುವ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಸೇವೆ ಸೇರಿದಂತೆ 500ಕ್ಕೂ ಹೆಚ್ಚು ಸೇವೆಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ, ಇತ್ಯಾದಿ ಉಪವಾಸ ದಿನಗಳು ಮತ್ತು ವಾರ್ಷಿಕ ಜಾತ್ರಾ ಸಮಯ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಆಶ್ಲೇಷ ಬಲಿ ಸೇವೆ ನಡೆಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv