Tag: kukke shree subrahamanya

  • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಿರ್ದೇಶಕ ಭೇಟಿ

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಿರ್ದೇಶಕ ಭೇಟಿ

    ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ, ನಿರ್ಮಾಣದ ಮಾಡುವುದರ ಮೂಲಕ ಗುರುತಿಸಿಕೊಂಡಿರುವ ಮಧುರ್ ಭಂಡಾರ್ಕರ್ ಈಗ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ವಿಶೇಷ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬಿಟೌನ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರನಾಗಿ ಮಧುರ್ ಭಂಡಾರ್ಕರ್ ಸೈ ಎನಿಸಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ ನಟನೆಯ ಫ್ಯಾಷನ್, ಟ್ರಾಫಿಕ್ ಸಿಗ್ನಲ್, ಹೀರೋಯಿನ್ ಹೀಗೆ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

    ಇದೀಗ ನಿರ್ದೇಶಕ ಮಧುರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ, ಸುಬ್ರಮಣ್ಯ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ. ಈ ಕುರಿತು ತಮ್ಮ ಟ್ವೀಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

    ಒಂದರಲ್ಲಿ ದೇವಾಲಯದ ಫೋಟೋ ಮತ್ತು ಇನ್ನೋಂದರಲ್ಲಿ ತಾವು ನಿಂತಿರುವ ಫೋಟೋವನ್ನು ಮಧುರ್ ಭಂಡಾರ್ಕರ್ ಶೇರ್ ಮಾಡಿದ್ದಾರೆ. ನಿರ್ದೇಶಕ ಮಧುರ್ ಕರ್ನಾಟಕಕ್ಕೆ ಭೇಟಿ ಕೊಟ್ಟು, ಫೋಟೋ ಶೇರ್ ಮಾಡಿರುವ ಕುರಿತಯ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    Live Tv

  • ಮಂಗಳೂರು: ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳಿಸಿ ಸಿಕ್ಕಿಬಿದ್ದ ಪೊಲಿಟಿಕಲ್ ಮೇಷ್ಟ್ರು ಎಸ್ಕೇಪ್

    ಮಂಗಳೂರು: ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳಿಸಿ ಸಿಕ್ಕಿಬಿದ್ದ ಪೊಲಿಟಿಕಲ್ ಮೇಷ್ಟ್ರು ಎಸ್ಕೇಪ್

    ಮಂಗಳೂರು: ಗುರು ದೇವೋಭವ ಎಂಬ ಮಾತಿದೆ, ಅದಕ್ಕಾಗಿ ಗುರುವನ್ನು ಶ್ರೇಷ್ಠ ಭಾವನೆಯಿಂದ ಕಾಣುತ್ತಾರೆ. ಆದ್ರೆ ಅದೇ ಗುರು ಕೀಚಕನಾದ್ರೆ ಎಂತಹ ಅಸಹ್ಯ ಅಲ್ವಾ?. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನ ಪ್ರಾಧ್ಯಾಪಕನೊಬ್ಬನ ಲಫಂಗತನ ಇದೀಗ ಬಯಲಾಗಿದೆ.

    ಕುಕ್ಕೆ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದಲ್ಲಿ ಹದಿನೈದು ವರ್ಷಗಳಿಂದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕನಾಗಿರುವ ಪುಷ್ಪರಾಜ್ ಕೆ ವಿದ್ಯಾರ್ಥಿನಿಗೆ ಅಸಹ್ಯವಾದ ಸಂದೇಶ ಕಳುಹಿಸಿದ್ದಾನೆ. ಫೇಸ್ ಬುಕ್ ಮೆಸೇಂಜರ್ ನಲ್ಲಿ ವಿದ್ಯಾರ್ಥಿನಿ ಗೆ ಅಶ್ಲೀಲ ಮೆಸೇಜ್ ಗಳನ್ನು ಪೋಲಿ ಲೆಕ್ಚರ್ ಕಳುಹಿಸಿದ್ದು, ಇದೀಗ ಗುರುವಿನ ಉಪಟಳ ತಡೆಯಲಾರದೆ ಸಂತ್ರಸ್ತ ವಿದ್ಯಾರ್ಥಿನಿ ಪುಷ್ಪರಾಜನ ಕಾಮ ಪುರಾಣವನ್ನು ಬಯಲು ಮಾಡಿದ್ದಾಳೆ.

    ತನ್ನ ಕಾಮಕಾಂಡ ಬಯಲಾಗುತ್ತಿದ್ದಂತೆಯೇ ಪುಷ್ಪರಾಜ್ ಕಾಲೇಜಿಗೆ ರಜೆ ಹಾಕಿದ್ದು, ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾನೆ ಎಂದು ತಿಳಿದುಬಂದಿದೆ. ಗುರುವೇ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.