Tag: Kudremukha

  • 4 ವರ್ಷದ ಮಗು ಜೊತೆ ಪೊಲೀಸರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಎಫ್‍ಐಆರ್ ಮಾಡಿಸಿದ ಮಹಿಳೆ!

    4 ವರ್ಷದ ಮಗು ಜೊತೆ ಪೊಲೀಸರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಎಫ್‍ಐಆರ್ ಮಾಡಿಸಿದ ಮಹಿಳೆ!

    ಚಿಕ್ಕಮಗಳೂರು: ಅಸಭ್ಯ ವರ್ತನೆ ತೋರಿ, ಜೀವ ಬೆದರಿಕೆ ಹಾಕಿದ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು 4 ವರ್ಷದ ಮಗುವಿನೊಂದಿಗೆ ಮಧ್ಯರಾತ್ರ್ರಿ 1 ಗಂಟೆವರೆಗೂ ಠಾಣೆಯಲ್ಲಿ ಪ್ರತಿಭಟಿಸಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕುದುರೆಮುಖದಲ್ಲಿ (Kudremukha) ನಡೆದಿದೆ.

    ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಸಂಸೆ ಗ್ರಾಮದ ಮಹಿಳೆಯೊಬ್ಬರು ಪಕ್ಕದ ಮನೆಯ ಯುವಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೆ ಪತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಎರಡು ದಿನದ ಹಿಂದೆ ದೂರು ನೀಡಲು ಠಾಣೆಗೆ ಬಂದಿದ್ದರು. ಅಲ್ಲದೆ ಅಸಭ್ಯವಾಗಿ ವರ್ತಿಸಿದ ಯುವಕರ ವೀಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಗುವಿಗೆ ಊಟ ಮಾಡಿಸಿ ಠಾಣೆಯಲ್ಲಿಯೇ ಮಲಗಿಸಿದ್ದಾರೆ. ಇದನ್ನೂ ಓದಿ: ನಿನ್ನ ಅಂತ್ಯ ನಿಶ್ಚಿತ – ಸಾಹಿತಿ ಬಂಜಗೆರೆ ಜಯಪ್ರಕಾಶ್‍ಗೆ ಜೀವ ಬೆದರಿಕೆ

    ಮಹಿಳೆಯ ಪ್ರತಿಭಟನೆಗೆ ಮಣಿದ ಪೊಲೀಸರು ಮಧ್ಯರಾತ್ರಿ ಯುವಕರ ವಿರುದ್ಧ ಎಫ್‍ಐಆರ್ (FIR) ದಾಖಲಿಸಿದ್ದಾರೆ. ಮಹಿಳೆಯ ಪಕ್ಕದ ಮನೆಯ ಯುವಕರಾದ ನವೀನ್, ಶ್ರೇಯಾಂಶ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: 10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್

  • ಬೆಂಗ್ಳೂರಲ್ಲಿ ಆಂಟಿಯ ಓಲೈಕೆಗಾಗಿ ಅಂಕಲ್‍ನನ್ನೇ ಕೊಂದ್ರು!

    ಬೆಂಗ್ಳೂರಲ್ಲಿ ಆಂಟಿಯ ಓಲೈಕೆಗಾಗಿ ಅಂಕಲ್‍ನನ್ನೇ ಕೊಂದ್ರು!

    -ತಲೆಗೆ ರಾಡ್‍ನಿಂದ ಹೊಡೆದು, ಕತ್ತು ಕೊಯ್ದು ಕುದುರೆಮುಖದ ನದಿಗೆ ಬಿಸಾಡಿದ್ರು

    ಬೆಂಗಳೂರು: ಮಹಿಳೆಗೋಸ್ಕರ ಪತಿಯನ್ನ ಕೊಲೆ ಮಾಡಿ ಮೂಟೆ ಕಟ್ಟಿ ನಂತರ ಶವವನ್ನು ಕಾರಿನ ಡಿಕ್ಕಿಯಲ್ಲಿ ಸಾಗಿಸಿ ಕುದುರೆಮುಖದ ಬಳಿ ನದಿಗೆ ಎಸೆದ ಘಟನೆಯೊಂದು ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ನವಾಜ್(30) ಹತ್ಯೆಗೀಡಾದ ವ್ಯಕ್ತಿ. ಹಂತಕರು ಆಗಸ್ಟ್ 20 ರಂದು ನಸುಕಿನ ಜಾವ ನವಾಜ್ ನನ್ನು ಕ್ಯಾಂಟರ್ ವಾಹನ ಬಾಡಿಗೆಗೆ ಬೇಕು ಅಂತಾ ಕರೆಸಿಕೊಂಡು ಕೊಲೆ ಮಾಡಿದ್ದರು.

    ಬೆಳಕಿಗೆ ಬಂದಿದ್ದು ಹೇಗೆ?:
    ನವಾಜ್ ತಲೆಗೆ ರಾಡ್‍ನಿಂದ ಹೊಡೆದು ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ನಂತರ ಶವವನ್ನು ಇಟಿಯೋಸ್ ಕಾರಿನ ಡಿಕ್ಕಿಯಲ್ಲಿಟ್ಟು ಕುದುರೆಮುಖ ಹತ್ತಿರ ನದಿಗೆ ಎಸೆದಿದ್ದರು. ಇತ್ತ ಹೊರ ಹೋಗಿದ್ದ ನವಾಜ್ ಮನೆಗೆ ಬಾರದಿದ್ದಾಗ ಪತ್ನಿ ಆಯೇಷಾ ವರ್ತೂರು ಪೊಲೀಸರಿಗೆ ದೂರು ನೀಡಿದ್ದರು. ಎರಡು ದಿನವಾದ್ರೂ ನವಾಜ್ ಬಗ್ಗೆ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರು ನವಾಜ್ ಮೊಬೈಲ್‍ನ ಸಿಡಿಆರ್ ಪರಿಶೀಲನೆ ನಡೆಸಿದ್ದರು. ನಸುಕಿನ ಜಾವ 3.10ಕ್ಕೆ ಬಂದಿದ್ದ ಕರೆ ಬಗ್ಗೆ ತನಿಖೆ ನಡೆಸಿದ್ದರು.

    ವರ್ತೂರು ಪೊಲೀಸರು ತನಿಖೆ ನಡೆಸಿದ ವೇಳೆ ಶಿವಕುಮಾರ್ ಸ್ನೇಹಿತ ಪವನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪವನ್ ವಿಚಾರಣೆ ವೇಳೆ ನವಾಜ್ ಕೊಲೆ ಮಾಡಿದ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಪೊಲೀಸರು ಶಿವಕುಮಾರ್ ಸಹಿತ ನಾಲ್ವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಶಿವಕುಮಾರ್ ಕೊಲೆ ಹಿಂದಿನ ಕಾರಣ ಬಾಯ್ಬಿಟ್ಟಿದ್ದಾನೆ.

    ಕೊಲೆಗೆ ಕಾರಣವೇನು:
    ಕೊಲೆಯಾದ ನವಾಜ್ ಪತ್ನಿ ಆಯಿಷಾಳನ್ನು ಶಿವಕುಮಾರ್ ಪ್ರೀತಿಸುತ್ತಿದ್ದನು. ಆದರೆ ಆಯಿಷಾಳಿಗೆ ಮದುವೆಯಾಗಿದೆ ಅಂತ ತಡವಾಗಿ ಗೊತ್ತಾಗಿತ್ತು. ಹೀಗಾಗಿ ಹೇಗಾದ್ರೂ ಮಾಡಿ ಆಕೆಯನ್ನು ಪಡೆದುಕೊಳ್ಳಬೇಕು ಅಂತ ಹಠ ಹಿಡಿದಿದ್ದನು. ಇದಕ್ಕಾಗಿ ಪ್ರೇಯಸಿಯ ಪತಿಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದನು. ಅಲ್ಲದೇ ಈ ಬಗ್ಗೆ ತನ್ನ ಗೆಳೆಯರಿಗೂ ತಿಳಿಸಿ ಅವರ ಜೊತೆಗೂಡಿ ನವಾಜ್ ನನ್ನು ಹತ್ಯೆ ಮಾಡಲಾಯಿತು ಅಂತ ಹೇಳಿದ್ದಾನೆ.

    1 ವರ್ಷದ ಹಿಂದೆ ಆಯಿಷಾ ಮತ್ತು ನವಾಜ್ ಮದುವೆಯಾಗಿದ್ದರು. ದಂಪತಿ ಬಾಡಿಗೆ ಮನೆಯಲ್ಲಿದ್ದಾಗ ಆಯಿಷಾಗೆ ಶಿವಕುಮಾರ್ ಪರಿಚಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುದುರೆಮುಖ-ಮಂಗಳೂರು ಸಂಚಾರ ಆರಂಭ

    ಕುದುರೆಮುಖ-ಮಂಗಳೂರು ಸಂಚಾರ ಆರಂಭ

    ಚಿಕ್ಕಮಗಳೂರು: ರಸ್ತೆ ಮೇಲೆ ಗುಡ್ಡ ಕುಸಿದ ಕಾರಣದಿಂದ ಬೆಳಗ್ಗಿನಿಂದಲೂ ಸಂಚಾರ ಬಂದ್ ಆಗಿದ್ದ ಮಗಳೂರು-ಕುದುರೆಮುಖ ನಡುವಿನ ಸಂಚಾರ ಆರಂಭವಾಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ರಸ್ತೆ ಮೇಲೆ ಮಣ್ಣು ಕುಸಿದಿತ್ತು, ಪರಿಣಾಮ ಬೆಳಗ್ಗಿನಿಂದ ಕಳಸ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ವಾಹನ ಸವಾರರು ದಾರಿ ನಡುವೆಯೇ ಪರದಾಟ ನಡೆಸಿದ್ದರು.

    ಗುಡ್ಡ ಕುಸಿತ ಕುರಿತು ಮಾಹಿತಿ ಪಡೆದು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ ಪೊಲೀಸರು ತಾತ್ಕಾಲಿಕವಾಗಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡಿ ಸಂಜೆ ವೇಳೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಲಾರಿಗಳಿಗೆ ನಿಷೇಧವಾದ ಹಿನ್ನೆಲೆಯಲ್ಲಿ ಶನಿವಾರದಿಂದ ಭಾರೀ ಗಾತ್ರದ ವಾಹನಗಳು ಈ ಮಾರ್ಗವಾಗಿ ಮಂಗಳೂರು ತಲುಪುತ್ತಿದ್ದವು. ಅದ್ದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕಾರ್ಯಾಚರಣೆ ನಡೆಲು ಪೊಲೀಸರು ಹೆಚ್ಚು ಶ್ರಮ ವಹಿಸಿದ್ದು, ಮಳೆ ಮುಂದುವರಿದಿರುವ ಕಾರಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬಿಡುಬಿಟ್ಟಿದ್ದಾರೆ. ಇದನ್ನು ಓದಿ:  ಮಲೆನಾಡಲ್ಲಿ ಗುಡ್ಡ ಕುಸಿತ: ಕುದುರೆಮುಖ ಸಂಪೂರ್ಣ ಬಂದ್ 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆನಾಡಲ್ಲಿ ಗುಡ್ಡ ಕುಸಿತ: ಕುದುರೆಮುಖ ಸಂಪೂರ್ಣ ಬಂದ್

    ಮಲೆನಾಡಲ್ಲಿ ಗುಡ್ಡ ಕುಸಿತ: ಕುದುರೆಮುಖ ಸಂಪೂರ್ಣ ಬಂದ್

    ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದ್ದು, ಮೂರು ಗ್ರಾಮಗಳಲ್ಲಿ ಮನೆಪಕ್ಕದಲ್ಲೇ ಗುಡ್ಡ ಕುಸಿದಿದೆ.

    ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮದಲ್ಲಿ ಗುಡ್ಡ ಕುಸಿದು ಮಣ್ಣು ಮನೆಗೆ ಅಪ್ಪಳಿಸಿದೆ. ರವಿಶಂಕರ್, ಶ್ರೀಪಾಲ್, ವರ್ಧಮಾನಯ್ಯಾನವರ ನಿವಾಸಕ್ಕೆ ಮಣ್ಣು ಅಪ್ಪಳಿಸಿದ್ದು, ಮನೆಯವರಲ್ಲಿ ಆತಂಕ ಉಂಟಾಗಿದೆ.

    ರಾಜ್ಯ ಹೆದ್ದಾರಿ 66ರಲ್ಲಿ ನಾಲ್ಕು ಕಡೆ ರಸ್ತೆಯ ಮೇಲೆ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಕುಸಿತದಿಂದಾಗಿ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಪರಿಣಾಮ ಕಳಸ ಸಂಚಾರ ಕೂಡ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

    ಕುದುರೆಮುಖ ಸಮೀಪದ ರಸ್ತೆಯಲ್ಲಿ ಗುಡ್ಡ ಕುಸಿದು ಬೀಳುತ್ತಿದೆ. ಹಾಗಾಗಿ ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿ ವಾಹನ ಸಂಚಾರ ಮಾಡದಂತೆ ತಡೆಯುತ್ತಿದ್ದಾರೆ. ಚಾರ್ಮಾಡಿ ಘಾಟ್ ನಲ್ಲಿ ಲಾರಿಗಳಿಗೆ ನಿಷೇಧವಾದ ಹಿನ್ನೆಲೆಯಲ್ಲಿ ಶನಿವಾರದಿಂದ ಭಾರೀ ಗಾತ್ರದ ವಾಹನಗಳು ಈ ಮಾರ್ಗವಾಗಿ ಮಂಗಳೂರು ತಲುಪುತ್ತಿದ್ದವು. ಆದರೆ ಆದರೆ ಈಗ ಗುಡ್ಡ ಕುಸಿದು ಬೀಳುತ್ತಿರುವ ಕಾರಣ ಕುದುರೆಮುಖ ಮಾರ್ಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv