Tag: Kudla Rampage

  • ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ – ಗಿರೀಶ್ ಮಟ್ಟಣ್ಣನವರ್, Kudla Rampage ಮೇಲೆ ಎಫ್‌ಐಆರ್

    ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ – ಗಿರೀಶ್ ಮಟ್ಟಣ್ಣನವರ್, Kudla Rampage ಮೇಲೆ ಎಫ್‌ಐಆರ್

    ಹುಬ್ಬಳ್ಳಿ: ಧರ್ಮಸ್ಥಳ (Dharmasthala) ವಿಚಾರ ಮಾತನಾಡುವ ಭರದಲ್ಲಿ ಜೈನ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ (Girish Mattannavar) ಹಾಗೂ ಅವರ ಹೇಳಿಕೆ ಪ್ರಸಾರ ಮಾಡಿರುವ Kudla Rampage ಯೂಟ್ಯೂಬ್ ಚಾನೆಲ್‌ನ ಮಾಲೀಕನ ವಿರುದ್ಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಜೈನ್ ಧರ್ಮೀಯರು ಕ್ರೂರಿಗಳು, ಸ್ತ್ರೀಲೋಲರು, ಮತಾಂಧರು ಸೇರಿದಂತೆ ಇತ್ಯಾದಿ ಪದಗಳನ್ನು ಜೈನರ ವಿರುದ್ಧ ಬಳಕೆ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ಅದನ್ನು Kudla Rampage ಚಾನೆಲಿನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಿಂದಾಗಿ ಜೈನ ಸಮಾಜಕ್ಕೆ ನೋವಾಗಿದೆ ಎಂದು ಹುಬ್ಬಳ್ಳಿ ಜೈನ್ ಸಮಾಜದ ಮುಖಂಡ ಅಜಿತ್, ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಸಂಸಾರದಲ್ಲಿ ಹುಳಿ ಹಿಂಡಿದ ಬ್ಯೂಟಿ ಪಾರ್ಲರ್ ಆಂಟಿ – ಗೃಹಿಣಿ ಅನುಮಾನಾಸ್ಪದ ಸಾವು; ಕೊಲೆ ಆರೋಪ

    ಜೈನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಇಬ್ಬರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಜಿತ್ ಆಗ್ರಹಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಬಿಎನ್‌ಎಸ್ 2023 ಕಾಯ್ದೆಯ ಕಲಂ 299, 196(1)(ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.