Tag: Kudalasangama

  • ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ

    ಇಂದು ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಅಸ್ಥಿ ವಿಸರ್ಜನೆ

    ವಿಜಯಪುರ: ಸಿದ್ದೇಶ್ವರ ಶ್ರೀಗಳು (Siddheshwar shree) ಅಗಲಿ 8 ದಿನ ಕಳೆದಿದೆ. ಶ್ರೀಗಳ ಅಸ್ಥಿ ವಿಸರ್ಜನೆ (Asthi Visarjan) ಕಾರ್ಯಕ್ರಮ ಇಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ (Kudalasangama) ನದಿಯಲ್ಲಿ ಮತ್ತು ಗೋಕರ್ಣದ(Gokarna) ಸಾಗರದಲ್ಲಿ ನಡೆಯಲಿದೆ.

    ವಿಜಯಪುರದ ಬಸವತಂವ ಪಾಟೀಲ ಅವರ ವಾಹನದಲ್ಲಿ ಶ್ರೀಗಳ ಅಸ್ಥಿಯನ್ನು ತೆಗೆದುಕೊಂಡು ತೆರಳಲಾಯಿತು. ವಿಶೇಷ ವಾಹನಕ್ಕೆ ಶ್ರೀಗಳ ಭಾವಚಿತ್ರ ಹಾಕಿ ಹೂವಿನಿಂದ ಅಲಂಕಾರ ಮಾಡಿ ಬಸವಲಿಂಗ ಸ್ವಾಮಿಜಿ ಮತ್ತು ಇತರೇ ಸ್ವಾಮೀಜಿಗಳು ಆಶ್ರಮದ ಶ್ರೀಗಳ ಕೋಣೆಯಲ್ಲಿ ಇರಿಸಲಾಗಿದ್ದ ಅಸ್ಥಿಗಳನ್ನು ಹೊರತಂದರು.

    ಅಸ್ಥಿಗಳನ್ನು ಹಿಡಿದು ಆಶ್ರಮದ ಆವರಣದಲ್ಲಿಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಪ್ರದಕ್ಷಿಣೆ ಹಾಕಿ ಭಜನೆ ಮಾಡಲಾಯಿತು. ತದನಂತರ ವಿಶೇಷ ವಾಹನದಲ್ಲಿ ಅಸ್ಥಿಗಳನ್ನಿಟ್ಟುಕೊಂಡು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ವಾಹನ ಕೂಡಲಸಂಗಮಕ್ಕೆ ತೆರಳಿತು.

    ಈ ವಾಹನದೊಂದಿಗೆ ನೂರಾರು ಭಕ್ತರು ತಮ್ಮ ವಾಹನಗಳ ಮೂಲಕ ತೆರಳಿದರು. ಮೊದಲು ಕೂಡಲಸಂಗಮದಲ್ಲಿ ಬೆಳಗ್ಗೆ ಅಸ್ಥಿ ವಿಸರ್ಜನೆ ನಡೆಯಲಿದ್ದು, ನಂತರ ಸಂಜೆ 5 ಗಂಟೆಗೆ ಗೋಕರ್ಣದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಸವಣ್ಣ ಐಕ್ಯ ಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲರ ಭೇಟಿ

    ಬಸವಣ್ಣ ಐಕ್ಯ ಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲರ ಭೇಟಿ

    ಬಾಗಲಕೋಟೆ: ಧಾರ್ಮಿಕ ಕ್ಷೇತ್ರ ಹಾಗೂ ಅಣ್ಣ ಬಸವಣ್ಣನ ಐಕ್ಯ ಸ್ಥಳವಾಗಿರುವ ಕೂಡಲಸಂಗಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ, ಸಂಗಮನಾಥನ ದರ್ಶನ ಪಡೆದುಕೊಂಡರು.

    ತ್ರಿವೇಣಿ ಸಂಗಮ ಕೂಡಲಸಂಗಮಕ್ಕೆ ಇದೇ ಪ್ರಥಮ ಬಾರಿಗೆ ಭೇಟಿ ನೀಡಿದ ಅವರು ದೇವಾಲಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಐಕ್ಯಮಂಟಪದ ದರ್ಶನ ಪಡೆದ ಅವರು, ಬಸವಣ್ಣ ಹಾಗೂ ಧಾರ್ಮಿಕ ಕೇಂದ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದುಕೊಂಡರು. ಇದನ್ನೂ ಓದಿ: ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ 

    ಬಸವಣ್ಣನವರ ಐಕ್ಯ ಸ್ಥಳವನ್ನು ನೀರಿನಲ್ಲಿ ಕಟ್ಟಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಆಶ್ಚರ್ಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಸವ ಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಅವರು ಉಪಸ್ಥಿತರಿದ್ದರು.

  • ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಲಿಂಗಾಯತ ಧರ್ಮದ ಆಳ ಅರಿವು ಪೇಜಾವರ ಶ್ರೀಗಳಿಗೆ ತಿಳಿದಿಲ್ಲ- ಮಾದೇಶ್ವರ ಸ್ವಾಮೀಜಿ

    ಬಾಗಲಕೋಟೆ: ಪೇಜಾವರ ಶ್ರೀಗಳಿಗೆ ಲಿಂಗಾಯತ ಧರ್ಮದ ಆಳ ಅರಿವು ತಿಳಿದಿಲ್ಲ ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಮಾದೇಶ್ವರ ಸ್ವಾಮೀಜಿ ಕಿಡಿ ಕಾರಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆಗೆ ನಾನು ಸಿದ್ಧ ಎಂಬ ಪೇಜಾವರಶ್ರೀಗಳ ಹೇಳಿಕೆಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಅವರು, 40 ವರ್ಷಗಳಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಹೋರಾಟ ನಡೆಯುತ್ತಿದೆ. ಪೇಜಾವರ ಶ್ರೀಗಳಿಗೆ ಇಂದಿಗೂ ಲಿಂಗಾಯತ ಧರ್ಮದ ಬಗ್ಗೆ ಅರಿವಾಗಿಲ್ಲ ಎಂದು ಹರಿಹಾಯ್ದರು.

    ಲಿಂಗಾಯತ ಧರ್ಮದ ಬಗ್ಗೆ ಲಿಂಗೈಕ್ಯ ಮಾತೆ ಮಹಾದೇವಿ ಅವರು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಮಾತೆ ಮಹಾದೇವಿ ಅವರು ಚರ್ಚೆಗೆ ಆಹ್ವಾನಿಸಿದಾಗ ಪೇಜಾವರ ಶ್ರೀಗಳು ಎಂದೂ ಬರಲಿಲ್ಲ. ಈಗ ಮಾತೆ ಮಹಾದೇವಿಯವರು ಬಿತ್ತಿದ ಬೀಜವಾಗಿ ನಾವು ಲಕ್ಷಾಂತರ ಜನರಿದ್ದೇವೆ ಎಂದು ತಿಳಿಸಿದ್ದಾರೆ.

    ಚರ್ಚೆಗೆ ಸಿದ್ಧ: ಪೇಜಾವರ ಶ್ರೀಗಳು ಎಲ್ಲಿಯಾದರೂ ವೇದಿಕೆ ಸಿದ್ದಪಡಿಸಲಿ, ನಾವು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ ಅವರು, ಮಾತೆ ಮಹಾದೇವಿ ಸೇರಿದಂತೆ ಅನೇಕ ಮಠಾಧೀಶರು ಲಿಂಗಾಯತ ಧರ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ. ಅವುಗಳನ್ನು ಪೇಜಾವರ ಶ್ರೀಗಳಿಗೆ ಕೊಡುತ್ತೇವೆ ಅವರು ಅಧ್ಯಯನ ಮಾಡಲಿ ಎಂದು ಕುಟುಕಿದರು.

  • ಎಂ.ಬಿ.ಪಾಟೀಲ್ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡೋಣ- ಮಾತೆ ಮಹಾದೇವಿ

    ಎಂ.ಬಿ.ಪಾಟೀಲ್ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡೋಣ- ಮಾತೆ ಮಹಾದೇವಿ

    – ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗೋದು ಒಳ್ಳೆಯದು
    – ಬಿಎಸ್‍ವೈ ತೆಗಳಿ ಮಾಜಿ ಸಿಎಂ ಹೊಗಳಿದ ಮಾತೆ ಮಹಾದೇವಿ

    ಬಾಗಲಕೋಟೆ: ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿಯಾಗಬೇಕು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು ಎಂದು ಬಸವ ಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ಹೇಳಿದ್ದಾರೆ.

    ಜಿಲ್ಲೆಯ ಕೂಡಲಸಂಗಮದಲ್ಲಿ ನಡೆದ ಶರಣ ಮೇಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಎಷ್ಟು ಕೊಂಡಾಡಿದರೂ ಸಾಲದು. ಒಂದು ವೇಳೆ ಅವರ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಸಮಿತಿ ರಚನೆಗೆ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯರ ಕಾರ್ಯಕ್ಕೆ ಬೆಲೆ ಕಟ್ಟಲು ಆಗಲ್ಲ. ಆದರೆ ಕೆಲವರು ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುತ್ತಿದ್ದಾರೆ ಅಂತ ಅಪಪ್ರಚಾರ ಮಾಡಿದರು ಎಂದು ದೂರಿದರು.

    ನಿವೃತ್ತ ನ್ಯಾ. ನಾಗಮೋಹನ ದಾಸ್ ವರದಿ ನಮಗೆ ದೊಡ್ಡ ಅಸ್ತ್ರ ಇದ್ದಂತೆ. ಅದರಿಂದ ಮುಂದೆ ನಮಗೆ ಯಶಸ್ಸು ಸಿಗುತ್ತದೆ. ಆದರೆ ಪ್ರತ್ಯೇಕ ಲಿಂಗಾಯತ ಹೋರಾಟದಿಂದ ಎಂ.ಬಿ.ಪಾಟೀಲ್ ಅವರಿಗೆ ಅನ್ಯಾಯವಾಯಿತು. ಅವರ ಉತ್ತಮ ಕಾರ್ಯಗಳಿಂದ ಚುನಾವಣೆಯಲ್ಲಿ ಜಯಗಳಿಸಿದರೂ ಮಂತ್ರಿ ಸ್ಥಾನ ಬೇಗ ಸಿಗಲಿಲ್ಲ. ನಿರಂತರ ಹೋರಾಟದಿಂದ ಎಂ.ಬಿ.ಪಾಟೀಲ್ ಅವರು ಗೃಹ ಸಚಿವರಾಗಿದ್ದು ನಮಗೆ ಸಂತಸ ತಂದಿದೆ ಎಂದರು.

    ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ನಾವು ಒಂದು ಹಂತದಲ್ಲಿ ಗೆದ್ದಿದ್ದೀವೆ. ಮುಂದೆ ಕಾನೂನಾತ್ಮಕ ಹೋರಾಟ ಮಾಡೋಣ. ನಮ್ಮ ಹೋರಾಟದ ರಾಜಕೀಯ ಮುಖಂಡರು ಎಂ.ಬಿ.ಪಾಟೀಲ್ ಅಂತ ನಿರ್ಣಯ ತೆಗೆದುಕೊಂಡಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಎಲ್ಲ ಲಿಂಗಾಯತ ರಾಜಕಾರಣಿಗಳು ಮುನ್ನಡೆಯಬೇಕು. ಎಂ.ಬಿ.ಪಾಟೀಲ್ ಸಿಎಂ ಆಗಬೇಕು ಎನ್ನುವುದು ನಮ್ಮೆಲ್ಲರಿಗೂ ಕನಸು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೂಡಲಸಂಗಮಕ್ಕೆ ಭೇಟಿ ನೀಡಿದಾಗ ಸಿಎಂ ಆಗಬೇಕು ಅಂತ ಸಂಕಲ್ಪ ಮಾಡಿದ್ದೇವು. ಅದರಂತೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಬಾರಿ ಎಂ.ಬಿ.ಪಾಟೀಲ ಅವರು ಸಿಎಂ ಆಗಬೇಕು ಅಂತ ಸಂಕಲ್ಪ ಮಾಡೋಣ ಎಂದ ಅವರು, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾಣಕ್ಕೆ ಹೋಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.

    ಸಿದ್ದರಾಮಯ್ಯ ಅವರು ಬಸವಣ್ಣನವರ ವಚನ, ತತ್ವಗಳನ್ನು ಅಚ್ಚುಕಟ್ಟಾಗಿ ಹೇಳಿದ ವಿಡಿಯೋ ಒಂದನ್ನು ಇತ್ತೀಚಿಗೆ ಯೂಟ್ಯೂಬ್‍ನಲ್ಲಿ ನೋಡಿದ್ದೇನೆ. ಆದರೆ ಅದೇ ವೇದಿಕೆಯಲ್ಲಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದ ಒಂದೇ ಒಂದು ಬಾರಿಯೂ ಬಸವಣ್ಣನ ಶಬ್ದ ಬರಲಿಲ್ಲ. ಸಿದ್ದರಾಮಯ್ಯ ಅವರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಹೀಗಾಗಿ ಅವರು ರಾಷ್ಟ್ರ ರಾಜಕಾರಣಕ್ಕೆ ಮುಂದಾಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಈ ಸಂದೇಶವನ್ನು ಅವರಿಗೆ ಮುಟ್ಟಿಸುವ ಜವಾಬ್ದಾರಿ ಎಂ.ಬಿ.ಪಾಟೀಲ್‍ರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv