Tag: KTM

  • ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?

    ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?

    ಬೆಂಗಳೂರು: ಸುಂಕದಕಟ್ಟೆ ಶಾಂತಿಧಾಮ ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕೆಟಿಎಂ ಡ್ಯೂಕ್ ನಲ್ಲಿ ಬಂದ ಇಬ್ಬರು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಎಕ್ಸ್ ಕ್ಲೂಸೀವ್ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ. ವೀಡಿಯೋದಲ್ಲಿ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಝೋಮ್ಯಾಟೊ ಬ್ಯಾಗ್ ಹಿಡಿದು ಇಬ್ಬರು ಕೆಟಿಎಂ ಡ್ಯೂಕ್ ಬೈಕಿನಲ್ಲಿ ಬಂದಿರುವುದನ್ನು ಕಾಣಬಹುದಾಗಿದೆ. ಈ ಇಬ್ಬರೇ ಎಲ್ಲಾ ಕಡೆ Sorry ಬರೆದಿದ್ದಾರೆ ಎಂದು ಶಂಕಿಸಲಾಗಿದೆ. ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಇಬ್ಬರು ಬಂದಿದ್ದಾರೆ. ಅಲ್ಲದೆ ಬ್ಯಾಗ್ ನೊಳಗೆ ಕೆಂಪು ಬಣ್ಣದ ಸ್ಪ್ರೇ ತಂದಿದ್ರು. ಸ್ಪ್ರೇ ಮೂಲಕ Sorry ಎಂದು ಬರೆದಿದ್ದಾರೆ. ತನ್ನ ಪ್ರೇಯಸಿಗಾಗಿ ಈ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    ರಸ್ತೆ, ಮನೆಯ ಕಾಂಪೌಂಡ್, ಗೋಡೆ, ಸ್ಕೂಲ್ ಮೆಟ್ಟಿಲು, ಸ್ಕೂಲ್ ಕಾಂಪೌಂಡ್ ಹೀಗೆ ಎಲ್ಲಾ ಕಡೆ Sorry ಅಂತಾ ಬರೆಯಲಾಗಿದೆ. ಸ್ಪ್ರೇ ಪೈಂಟ್ ನಲ್ಲಿ ಈ ರೀತಿ ಬರೆಯಲಾಗಿದೆ. ಮನೆಯ ಗೋಡೆಯೊಂದರ ಮೇಲೆ Sorry Ma, Sorry Pa ಅಂತಾ ಸಹ ಬರೆಯಲಾಗಿದೆ. ಮತ್ತೊಂದು ಕಡೆ ಹಾರ್ಟ್ ಸಿಂಬಲ್ ಸಹ ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯೇ ಈ ರೀತಿ ಹುಚ್ಚಾಟ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

    ಇಡೀ ರಸ್ತೆಯಲ್ಲಿ Sorry ಬರೆದಿರೋ ದುಷ್ಕರ್ಮಿಗಳು, ಕಾಲೇಜು ಹೆಸರಿಗೆ ಮಸಿ ಬಳಿಯೋಕೆ ಮಾಡಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಶಾಂತಿಧಾಮ ಕಾಲೇಜು ಪ್ರಾಂಶುಪಾಲರಿಂದ ಮಾಹಿತಿ ನೀಡಿದ್ದಾರೆ. ಸದ್ಯ Sorry ಎಂದು ಬರೆದಿರುವ ಸೂತ್ರದಾರನ ಹಿಂದೆ ಪೊಲೀಸರು ಬಿದ್ದಿದ್ದಾರೆ.

  • ಮನೆಯಲ್ಲಿ 2 ಲಕ್ಷ ರೂ. ಕದ್ದು ಕೆಟಿಎಂ ಬೈಕ್ ಖರೀದಿಸಿದ ಬಾಲಕ

    ಮನೆಯಲ್ಲಿ 2 ಲಕ್ಷ ರೂ. ಕದ್ದು ಕೆಟಿಎಂ ಬೈಕ್ ಖರೀದಿಸಿದ ಬಾಲಕ

    – ಬೈಕ್ ಶೋರೂಂ ಸಿಬ್ಬಂದಿಗೆ ಥಳಿಸಿದ ತಂದೆ

    ಹೈದರಾಬಾದ್: ಅಪ್ರಾಪ್ತ ಮಗನಿಗೆ ದುಬಾರಿ ಬೈಕ್ ಮಾರಿದ ಶೋರೂಂ ಸಿಬ್ಬಂದಿಯನ್ನು ತಂದೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ರಸೂಲ್‍ಪುರ್ ನಿವಾಸಿ 17 ವರ್ಷದ ಬಾಲಕನೋರ್ವ ಕೆಟಿಎಂ ಬೈಕ್ ಖರೀದಿಗಾಗಿ ಮನೆಯಲ್ಲಿದ್ದ 2 ಲಕ್ಷ ರೂ. ಕದಿದ್ದ. ಬಳಿಕ ಆ ಹಣದಿಂದ ಬೇಗಂಪೇಟ್‍ನಲ್ಲಿರುವ ಕೆಟಿಎಂ ಬೈಕ್ ಶೋ ರೂಂನಲ್ಲಿ 2.20 ಲಕ್ಷ ರೂ. ಮೌಲ್ಯದ ಬೈಕ್ ಖರೀದಿಸಿದ್ದ. ಬೈಕ್ ಖರೀದಿಸಿ ಕಳೆದ ನಾಲ್ಕು ತಿಂಗಳಾಗಿದ್ದರೂ ಪೋಷಕರಿಗೆ ಯಾವುದೇ ಮಾಹಿತಿ ಇರಲಿಲ್ಲ.

    ಬಾಲಕ ತನ್ನ ಬೈಕ್ ಅನ್ನು ಹಾಸ್ಟೇಲ್ ಹಾಗೂ ಸ್ನೇಹಿತರ ಮನೆಯಲ್ಲಿ ಇಡುತ್ತಿದ್ದ. ಆದರೆ ಶನಿವಾರ ಸ್ನೇಹಿತರೊಂದಿಗೆ ಜಾಲಿ ರೈಡ್ ಹೋದಾಗ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಪೋಷಕರು ಮಗ ಸ್ನೇಹಿತರನ್ನು ವಿಚಾರಿಸಿದ ಬೈಕ್ ಖರೀದಿಸಿರುವುದು ತಿಳಿದು ಬಂದಿದೆ ಎಂದು ಬೇಗಂಪೇಟ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಾಲಕ ಮನೆಯಲ್ಲಿ ಕದ್ದ 2 ಲಕ್ಷ ರೂ.ವನ್ನು ಕೊಟ್ಟು ಬೈಕ್ ಖರೀಸಿದ್ದಾನೆ. ಜೊತೆಗೆ ಬೈಕ್ ತೆಗೆದುಕೊಳ್ಳುವಾಗ ತನ್ನ ಸಹೋದರನ ದಾಖಲೆಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದಕ್ಕೆ ಬಾಲಕನ ಪೋಷಕರು ಬೈಕ್ ಶೋರೂಂನ ಇಬ್ಬರು ಸಿಬ್ಬಂದಿಯನ್ನು ಥಳಿಸಿ, ಶೋರೂಂ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಶೋರೂಂ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.