Tag: ktj nagar

  • ಮದುವೆ ಕಾರ್ಡ್ ಕೊಡೋ ನೆಪದಲ್ಲಿ ಕಳುವಿಗೆ ಬಂದ ಖದೀಮರು – ಈಗ ಪೊಲೀಸರ ಅತಿಥಿ

    ಮದುವೆ ಕಾರ್ಡ್ ಕೊಡೋ ನೆಪದಲ್ಲಿ ಕಳುವಿಗೆ ಬಂದ ಖದೀಮರು – ಈಗ ಪೊಲೀಸರ ಅತಿಥಿ

    ದಾವಣಗೆರೆ: ಜನರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡಾ ಖದೀಮರ ಬಲೆಗೆ ಬಿದ್ದೇ ಬೀಳುತ್ತಾರೆ. ಮನೆಯಲ್ಲಿ ಒಂದಿಬ್ಬರು ಇದ್ದ ಸಂದರ್ಭದಲ್ಲಿ ಮದುವೆಯ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿ ಮೈ ಮೇಲೆ ಹಾಕಿದ್ದ ಬಂಗಾರದ ಒಡವೆಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿ ಸಿಗದಿದ್ದಾಗ ಕೊನೆಗೆ ಮೊಬೈಲ್ ಕದ್ದು ಓಡಿ ಹೋಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು (Thieves) ಪೊಲೀಸರು ಬಂಧಿಸಿದ್ದಾರೆ.

    ಘಟನೆ ದಾವಣಗೆರೆಯ ಕೆಟಿಜೆ ನಗರ (KTJ Nagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯೊಂದರಲ್ಲಿ ಮಹಿಳೆಯರು ಟಿವಿ ನೋಡುತ್ತಿದ್ದಾಗ ಇಬ್ಬರು ಖದೀಮರು ಮನೆಗೆ ಭೇಟಿ ನೀಡಿದ್ದಾರೆ. ನಾವು ಮದುವೆ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮಹಿಳೆಯರ ಬಾಯಿ ಮುಚ್ಚಿ, ಕೊರಳಿನಲ್ಲಿದ್ದ ಬಂಗಾರ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯರು ಜೋರಾಗಿ ಕೂಗಿಕೊಂಡಾಗ ಅಕ್ಕ-ಪಕ್ಕದಲ್ಲಿದ್ದ ಜನರು ಅಲ್ಲಿಗೆ ಧಾವಿಸಿದ್ದಾರೆ. ಇದನ್ನೂ ಓದಿ: ಪ್ರತಿ ಆರ್ಡರ್‌ನಲ್ಲೂ ಚಾಕ್ಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಝೋಮ್ಯಾಟೋ ಸಿಬ್ಬಂದಿ!

    ಈ ವೇಳೆ ಕಳ್ಳರು ಬಂಗಾರ ಸಿಗದ ಹಿನ್ನೆಲೆ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಮಂಜುನಾಥ್ ಭಜಂತ್ರಿ ಹಾಗೂ ಪಿ ಮಂಜುನಾಥ್‌ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ಇಂತಹ ಕೃತ್ಯ ನಡೆಸುತ್ತಿರುವವರಿಂದ ಎಚ್ಚರಿಕೆಯಿಂದ ಇರಿ ಎಂದು ಜನರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೆ.ಆರ್‌. ಪುರಂ ತಹಶೀಲ್ದಾರ್‌ ಅಜಿತ್‌ ರೈಗೆ 7 ದಿನ ಪೊಲೀಸ್‌ ಕಸ್ಟಡಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ದಾವಣಗೆರೆ: ನಿನ್ನೆ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ನಡೆದಿದೆ.

    7 ವರ್ಷದ ಗಣ್ಯ ಮೃತ ಬಾಲಕ. ನಗರದ ಚಿಕ್ಕಮ್ಮಣಿ ದೇವರಾಜ್ ಅರಸು ಬಡವಾಣೆಯಯ ನಿವಾಸಿ ಗಣ್ಯ, ನಿನ್ನೆ ಮಧ್ಯಾಹ್ನ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಪಕ್ಕದ ಕೆರೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.  ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಹಾವಳಿ – ರೋಗಿಗಳಲ್ಲಿ ಆತಂಕ

    ಬುದ್ಧಿಮಾಂದ್ಯ ಬಾಲಕನಾಗಿದ್ದ ಗಣ್ಯ, ತಮ್ಮ ದೊಡ್ಡಮ್ಮನ ಮನೆಯಿಂದ ತಿರುಗಾಡುತ್ತಾ ಕೆರೆಗೆ ಬಂದು ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಕೆರೆಗೆ ಕಾಂಪೌಂಡ್ ಕಟ್ಟದ ಹಿನ್ನೆಲೆ ಬಾಲಕ ನೀರಿಗೆ ಬಿದ್ದು ಮೃತನಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ:ಕಲಿಕೆಯ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು: ಜೊಲ್ಲೆ

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬಾಲಕನ ಮೃತ ದೇಹವನ್ನು ಹೊರತೆಗೆದಿದ್ದಾರೆ. ಇನ್ನೂ ಸ್ಥಳಕ್ಕೆ ಮೇಯರ್ ಹಾಗೂ ಆಯುಕ್ತರು ಬರುವಂತೆ ಜನರು ಆಗ್ರಹಿಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.