Tag: kt rama rao

  • ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಬಿಜೆಪಿಯನ್ನು ಗೆಲ್ಲಿಸಿದ ರಾಹುಲ್‌ಗೆ ಅಭಿನಂದನೆಗಳು: ಕೆ.ಟಿ ರಾಮ್ ರಾವ್

    ಹೈದರಾಬಾದ್: ಬಿಜೆಪಿಯನ್ನು (BJP) ಮತ್ತೊಮ್ಮೆ ಗೆಲ್ಲಿಸಿದ್ದಕ್ಕಾಗಿ ರಾಹುಲ್ ಗಾಂಧಿಯವರಿಗೆ (Rahul Gandhi) ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಆರ್‌ಎಸ್‌ನ ಹಾಲಿ ರಾಜ್ಯಾಧ್ಯಕ್ಷ ಕೆ.ಟಿ ರಾಮ್ ರಾವ್ (KT Rama Rao) ವ್ಯಂಗ್ಯವಾಡಿದ್ದಾರೆ.


    ತೆಲಂಗಾಣದಲ್ಲಿ ದೆಹಲಿ ಚುನಾವಣಾ (Delhi Election) ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಅವರು ಬಿಜೆಪಿಯನ್ನು ಸೋಲಿಸುವಲ್ಲಿ ರಾಹುಲ್ ಗಾಂಧಿಯವರು ಅಸಮರ್ಥರು ಎಂದು ದೆಹಲಿ ಚುನಾವಣಾ ಫಲಿತಾಂಶವು ಸಾಬೀತು ಮಾಡಿದೆ. ಅವರು ಸ್ವಂತ ಬಲದಿಂದಲೂ ಸಹ ಗೆಲ್ಲಲು ಸಾಧ್ಯವಿಲ್ಲ. ಅಲ್ಲದೆ ಇತರೇ ಸ್ಥಳೀಯ ಪಕ್ಷಗಳನ್ನು ದುರ್ಬಲಗೊಳಿಸಿ, ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

    ಬಿಜೆಪಿಯನ್ನು ಗೆಲ್ಲಿಸಿದಂತಹ ರಾಹುಲ್ ಗಾಂಧಿಯವರಿಗೆ ನಾನು ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಈ ಸಾಧನೆಯ ಬಗ್ಗೆ ಅವರಿಗೆ ಬಹಳ ಹೆಮ್ಮೆ ಇದೆ ಎಂದು ನಾನು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.

     

  • ನಾಗಾ-ಸಮಂತಾ ಡಿವೋರ್ಸ್‌ ಕಿಚ್ಚು ಹಚ್ಚಿದ ತೆಲಂಗಾಣ ಸಚಿವೆ; ರಾಜಕೀಯ ಜಗಳಗಳಿಂದ ನನ್ನ ಹೆಸರು ದೂರವಿಡಿ: ಸಮಂತಾ

    ನಾಗಾ-ಸಮಂತಾ ಡಿವೋರ್ಸ್‌ ಕಿಚ್ಚು ಹಚ್ಚಿದ ತೆಲಂಗಾಣ ಸಚಿವೆ; ರಾಜಕೀಯ ಜಗಳಗಳಿಂದ ನನ್ನ ಹೆಸರು ದೂರವಿಡಿ: ಸಮಂತಾ

    ನವದೆಹಲಿ: ಟಾಲಿವುಡ್ ನಟ ನಾಗಚೈತನ್ಯ ಮತ್ತು ಸಮಂತಾ (Samantha Ruth Prabhu) ದಾಂಪತ್ಯ ಮುರಿದುಬೀಳಲು ಬಿಆರ್‌ಎಸ್ ಮುಖಂಡ ಕೆಟಿಆರ್ ಅವರೇ ಕಾರಣ ಎಂದು ಸಚಿವೆ ಕೊಂಡಾ ಸುರೇಖಾ ಸ್ಫೋಟಕ ಆರೋಪ ಮಾಡಿದ್ದಾರೆ.

    ಕೆಟಿಆರ್ (KT Rama Rao) ಬಳಿ ಹೋಗ್ಲಿಲ್ಲ ಅಂದ್ರೆ ಮನೆಯಲ್ಲಿ ಇರುವಂತಿಲ್ಲ ಎಂದು ಸಮಂತಾಗೆ ನಟ ನಾಗಾರ್ಜುನ ಬೆದರಿಕೆ ಹಾಕಿದ್ರೂ ಅಂತಾನೂ ಆಪಾದಿಸಿದ್ದಾರೆ. ಅಷ್ಟೇ ಅಲ್ಲ, ರಕುಲ್‌ ಪ್ರೀತ್‌ ಸಿಂಗ್ ಸೇರಿ ನಟಿಯರು ಬೇಗ ಮದ್ವೆ ಮಾಡಿಕೊಂಡು ಫೀಲ್ಡ್ ತೊರೆಯಲು ಕೂಡ ಕೆಟಿಆರ್ ಕೊಟ್ಟ ಟಾರ್ಚರ್ ಕೂಡ ಕಾರಣ ಎಂದು ಕೊಂಡಾ ಸುರೇಖ ಹೇಳಿರುವ ಆಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಇದಕ್ಕೆ ನಟ ನಾಗಾರ್ಜುನ, ನಟಿ ಸಮಂತಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಚಿವೆ ಕೊಂಡಾ ಸುರೇಖಾ ಹೇಳಿಕೆಯನ್ನು ಖಂಡಿಸ್ತಿದ್ದೇನೆ. ರಾಜಕಾರಣದಿಂದ ದೂರ ಇರುವ ಸಿನಿ ಪ್ರಮುಖರನ್ನು ದಯಮಾಡಿ, ನಿಮ್ಮ ಎದುರಾಳಿಗಳನ್ನು ಟೀಕೆ ಮಾಡಲು ಬಳಸಿಕೊಳ್ಳಬೇಡಿ. ದಯಮಾಡಿ ಇತರರ ವೈಯಕ್ತಿಕ ವಿಷಯಗಳನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಮಾಡಿರುವ ಆರೋಪಗಳು ಸಂಪೂರ್ಣ ಅಸಂಬದ್ಧ. ಸುಳ್ಳಿನಿಂದ ಕೂಡಿವೆ. ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ನಾಗಾರ್ಜುನ ಆಗ್ರಹಿಸಿದ್ದಾರೆ.

    ಸಮಂತಾ ಹೇಳಿದ್ದೇನು?
    ಕೊಂಡಾ ಸುರೇಖಾ ಅವರ ಹೇಳಿಕೆಗೆ ನಟಿ ಸಮಂತಾ ರುತ್‌ ಪ್ರಭು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಗೌರವಿಸಿ, ರಾಜಕೀಯ ಜಗಳಗಳಿಂದ ನನ್ನ ಹೆಸರನ್ನು ದೂರವಿಡಿ ಎಂದು ಹೇಳಿದ್ದಾರೆ.

  • ಬಿದ್ದು ಕಾಲು ಮುರಿದುಕೊಂಡ ಕೆಟಿಆರ್- ಯಾವುದಾದ್ರೂ ಓಟಿಟಿ ಶೋನ ಸಲಹೆ ನೀಡಿ

    ಬಿದ್ದು ಕಾಲು ಮುರಿದುಕೊಂಡ ಕೆಟಿಆರ್- ಯಾವುದಾದ್ರೂ ಓಟಿಟಿ ಶೋನ ಸಲಹೆ ನೀಡಿ

    ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಬಿದ್ದು, ಕಾಲು ಮುರಿದುಕೊಂಡಿದ್ದಾರೆ.

    ಈ ಬಗ್ಗೆ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದು, ಬಿದ್ದು ಕಾಲಿನ ಪಾದಕ್ಕೆ ಪೆಟ್ಟಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು 3 ವಾರಗಳ ವಿಶ್ರಾಂತಿಯನ್ನು ಸೂಚಿಸಿದ್ದಾರೆ. ಯಾವುದಾದರೂ ಯೋಗ್ಯ ಓಟಿಟಿ ಶೋನ ಕುರಿತು ಸಲಹೆ ನೀಡುತ್ತೀರಾ ಎಂದು ತಿಳಿಸಿದ್ದಾರೆ.

    ಈ ಟ್ವೀಟ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶೀಘ್ರವಾಗಿ ಗುಣವಾಗಲಿ ಎಂದು ಹಾರೈಸಿದರೆ, ಇನ್ನೂ ಕೆಲವರು ಓಟಿಟಿಯಲ್ಲಿ ಯಾವುದಾದರೂ ಚೆನ್ನಾಗಿರುವ ಶೋ ಇದ್ದರೆ ತಿಳಿಸಿ ಎಂದಿದ್ದಕ್ಕೆ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಇಂದು ಕೆಟಿಆರ್ ಅವರ ಜನ್ಮ ದಿನವಾಗಿದೆ. ಆದರೆ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಜನ್ಮದಿನವನ್ನು ಆಚರಿಸದಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದ ಬದಲಾಗಿ ಗಿಫ್ಟ್ ಎ ಸ್ಮೈಲ್ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವವರಿಗೆ ಉದಾರವಾಗಿ ದೇಣಿಗೆ ನೀಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಟ್ರಾಫಿಕ್ ಪೊಲೀಸ್

    Live Tv
    [brid partner=56869869 player=32851 video=960834 autoplay=true]

  • ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

    ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

    ಹೈದರಾಬಾದ್: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿರುವ ನಾಥುರಾಮ್ ಗೋಡ್ಸೆ ಅವರ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ರಾಮ್‍ರಾವ್ ಆರೋಪಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ. ಪ್ರಧಾನಿ ಮೋದಿ ಮೌನವಾಗಿ ಮತ್ತು ನೇರವಾಗಿ ಗೋಡ್ಸೆಯ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    NARENDRA MODI

    ಗುಜರಾತ್ ಶಾಸಕನನ್ನು ಅಸ್ಸಾಂ ಪೊಲೀಸರು ಬಂಧಿಸುವಂತೆ ಮಾಡಿದ ಮೋದಿ ಸರ್ಕಾರಕ್ಕೆ ಧೈರ್ಯವಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ

    ಸಮಾಜದ ಕೆಲವು ವರ್ಗಗಳು ಬೆದರಿಕೆ ಮತ್ತು ಅಸುರಕ್ಷಿತ ಭಾವನೆಗಳನ್ನು ಅನುಭವಿಸುವ ಹಲವಾರು ಘಟನೆಗಳು ದೇಶಾದ್ಯಂತ ನಡೆಯುತ್ತಿವೆ. ಇದೆಲ್ಲವೂ ಸಂಪೂರ್ಣವಾಗಿ ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತಿದ್ದರೂ ಪ್ರಧಾನಿ ಅವರು ಒಂದು ಮಾತನ್ನೂ ಹೇಳುತ್ತಿಲ್ಲ ಎಂದು ಕಿಡಿಕಾರಿದರು.

    ಬಿಜೆಪಿಯ ಏರಿಕೆಯನ್ನು ನಾನು ನೋಡುತ್ತಿಲ್ಲ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆ ಅಧಿಕವಾಗುತ್ತಿದೆ. ನಿರುದ್ಯೋಗವು 45 ವರ್ಷಗಳಲ್ಲಿ ಅತ್ಯಧಿಕವಾಗುತ್ತದೆ. ಜೊತೆಗೆ ಹಣದುಬ್ಬರವು 30 ವರ್ಷಗಳಲ್ಲಿ ಗರಿಷ್ಠವಾಗುತ್ತದೆ. ನಾನು ಅದರ ಬಗ್ಗೆ ಮಾತನಾಡಲು ಬಯಸುತ್ತೇನೆ. ಆದರೆ ಇಂದು ದೇಶದಲ್ಲಿ ದಿಕ್ಕು ತಪ್ಪಿಸುವ ತಂತ್ರಗಳು ಗೆಲ್ಲುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್

    ಬಿಜೆಪಿಯ ವಿಫಲ ಮಾದರಿಯನ್ನು ಬಯಲಿಗೆಳೆದು ತೆಲಂಗಾಣದ ಸುವರ್ಣ ಮಾದರಿಯನ್ನು ದೇಶದ ಮುಂದೆ ಬಿಂಬಿಸಲು ಟಿಆರ್‍ಎಸ್ ಬಯಸಿದೆ. ತೆಲಂಗಾಣದ ಯಶಸ್ವಿ ಮಾದರಿ ರಾಷ್ಟ್ರಮಟ್ಟದಲ್ಲಿ ಕಾರ್ಯಸೂಚಿಯನ್ನು ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ತೆಲಂಗಾಣದಲ್ಲೂ ಪ್ರತಿಧ್ವನಿಸುತ್ತಿದೆ ರಾಜ್ಯದ 40% ಕಮಿಷನ್ – ಕರ್ನಾಟಕ ಸರ್ಕಾರವನ್ನು ಅಣಕಿಸಿದ ಕೆಟಿಆರ್

    ತೆಲಂಗಾಣದಲ್ಲೂ ಪ್ರತಿಧ್ವನಿಸುತ್ತಿದೆ ರಾಜ್ಯದ 40% ಕಮಿಷನ್ – ಕರ್ನಾಟಕ ಸರ್ಕಾರವನ್ನು ಅಣಕಿಸಿದ ಕೆಟಿಆರ್

    ರಾಯಚೂರು: ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಪಾದಯಾತ್ರೆ ನಡೆಸಿದೆ. ಆದ್ರೆ ತೆಲಂಗಾಣ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರೀಯ ಸಮಿತಿ ರಾಜ್ಯದ 40% ಕಮಿಷನ್ ವಿಚಾರವನ್ನು ಇಟ್ಟುಕೊಂಡು ತಿರುಗೇಟು ನೀಡುತ್ತಿದೆ.

    ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಕರ್ನಾಟಕದ ಬಿಜೆಪಿ ಸರ್ಕಾರ ಕಮಿಷನ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕೆಟಿಆರ್ ರಾಜ್ಯದ ಕುರಿತು ಮಾತನಾಡಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಕಮಿಷನ್ ವಿಚಾರ ಇಟ್ಕೊಂಡು ಕರ್ನಾಟಕ ಸರ್ಕಾರ ಹಾಗೂ ತೆಲಂಗಾಣ ಬಿಜೆಪಿ ನಾಯಕರನ್ನು ಕೆಟಿಆರ್ ಕೆಣಕಿದ್ದಾರೆ. ಕರ್ನಾಟಕದಲ್ಲಿ 40 ಪರ್ಸಂಟೇಜ್ ವಿಚಾರವಾಗಿ ದೊಡ್ಡ ಚರ್ಚೆ ಆಗ್ತಿದೆ. ಸಚಿವರೇ ಗುತ್ತಿಗೆದಾರರಿಗೆ ಕಿರುಕುಳ ನೀಡ್ತಿದ್ದಾರೆ ಎಂದು ಹೋರಾಟ ನಡೆದಿವೆ. ಗುತ್ತಿಗೆದಾರ ಸಚಿವರ ಹೆಸರೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಧಾನ ಮಂತ್ರಿಯವರಿಗೂ ಕಮಿಷನ್ ದಂಧೆಯ ಬಗ್ಗೆ ದೂರು ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಐಟಿ ಕಂಪನಿಗಳಿಗೆ ತೆಲಂಗಾಣ ಆಫರ್ – ಬಿಜೆಪಿ ನಾಯಕರು ಕಿಡಿ

    ಆಂಧ್ರಪ್ರದೇಶದ ಕರೀಂನಗರ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪಾದಯಾತ್ರೆಗೆ ಟಾಂಗ್ ಕೊಡಲು ಕೆಟಿಆರ್ ಕರ್ನಾಟಕ ಸರ್ಕಾರವನ್ನು ಅಣಕವಾಡಿದ್ದು, ತೆಲಂಗಾಣ ಗಡಿ ಭಾಗದ ಕರ್ನಾಟಕದ ಜಿಲ್ಲೆಗಳಿಗೆ ಹೋಗಿ ಬನ್ನಿ. ರಾಯಚೂರು, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಹೋಗಿ. ಅಲ್ಲಿ ಸರಿಯಾಗಿ ಪಿಂಚಣಿ ಬರುತ್ತಿಲ್ಲ, ವಿದ್ಯುತ್ ಇಲ್ಲ, ಸರ್ಕಾರಿ ಸೌಲಭ್ಯಗಳೇ ಸರಿಯಾಗಿ ಸಿಗುತ್ತಿಲ್ಲ ಇದೇ ಕಾರಣಕ್ಕೆ ನಮ್ಮನ್ನು ತೆಲಂಗಾಣಕ್ಕೆ ಸೇರಿಸಿ ಅಂತ ರಾಯಚೂರಿನ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಹೇಳಿದ್ರು. ಕರ್ನಾಟಕದ ಬಿಜೆಪಿ ಶಾಸಕರೇ ನಮ್ಮ ಆಡಳಿತ ಮೆಚ್ಚಿಕೊಂಡಿದ್ದಾರೆ. ಇದು ಬಿಜೆಪಿಯ ಪರಸ್ಥಿತಿ ಹೇಳುತ್ತದೆ ಎಂದು ಕೆ.ಟಿ.ರಾಮರಾವ್ ಅಣಕವಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿ ಕ್ರೌರ್ಯ ಮೆರೆದ ಕಿಡಿಗೇಡಿ

    ಕೆಲದಿನಗಳ ಹಿಂದೆ ಬೆಂಗಳೂರಿನ ಸ್ಟಾರ್ಟ್ ಕಂಪನಿಗಳನ್ನು ಹೈದ್ರಾಬಾದ್‍ಗೆ ಬನ್ನಿ ಎಂದು ಆಹ್ವಾನಿಸಿ ಕೆಟಿಆರ್ ವಿವಾದ ಕಿಡಿ ಹೊತ್ತಿಸಿದ್ದರು. ಇದೀಗ ಬಿಜೆಪಿ ನಾಯಕರನ್ನು ಟೀಕಿಸಲು ಕರ್ನಾಟಕವನ್ನು ಅಸ್ತ್ರವನ್ನಾಗಿಸಿಕೊಂಡು ಕರ್ನಾಟಕದಲ್ಲಿ ವಿಫಲ ಸರ್ಕಾರ ಇದೆ. ಸುಮ್ನೆ ನಮ್ ಸರ್ಕಾರದ ಬಗ್ಗೆ ಮಾತಾಡ್ತಿದ್ದೀರಾ ನಿಮಗೆ ನಾಚಿಕೆ ಆಗ್ಬೇಕು ಎಂದು ಬಿಜೆಪಿ ನಾಯಕ ಬಂಡಿ ಸಂಜಯ್‍ರನ್ನು ಕೆಟಿಆರ್ ತರಾಟೆಗೆ ತೆಗೆದುಕೊಂಡಿದ್ದಾರೆ.

     

  • 2023ಕ್ಕೆ ಕೆಟಿಆರ್‌, ಡಿಕೆಶಿ ಇಬ್ಬರು ಪ್ಯಾಕ್ ಅಪ್: ಬಿಜೆಪಿ ಟ್ವೀಟ್ ತಿವಿತ

    2023ಕ್ಕೆ ಕೆಟಿಆರ್‌, ಡಿಕೆಶಿ ಇಬ್ಬರು ಪ್ಯಾಕ್ ಅಪ್: ಬಿಜೆಪಿ ಟ್ವೀಟ್ ತಿವಿತ

    ಬೆಂಗಳೂರು: ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೈದರಾಬಾದ್‍ಗೆ ಬನ್ನಿ ಎಂದು ಬೆಂಗಳೂರು ಸ್ಟಾರ್ಟ್ ಅಪ್ ಕಂಪನಿಗೆ ಆಹ್ವಾನ ನೀಡಿದ್ದ ತೆಲಂಗಾಣ ಸಚಿವ ಕೆಟಿ ರಾಮರಾವ್ ರಾಜ್ಯ ಬಿಜೆಪಿ ಸಚಿವರು ತಿರುಗೇಟು ನೀಡಿದ್ದಾರೆ.

    ಕೆಟಿ ರಾಮರಾವ್ ಚಾಲೆಂಜ್ ಸ್ವೀಕಾರ ಮಾಡುವುದಾಗಿ ಟ್ವೀಟ್ ಮಾಡಿದ್ದ ಡಿಕೆಶಿಗೂ ಬಿಜೆಪಿ ತಿರುಗೇಟು ಕೊಟ್ಟಿದೆ. 2023ರಲ್ಲಿ ಡಿ.ಕೆ ಶಿವಕುಮಾರ್, ಕೆಟಿ ರಾಮರಾವ್ ಇಬ್ಬರು ಪ್ಯಾಕ್‍ಅಪ್ ಮಾಡಬೇಕಾಗುತ್ತದೆ. ಡಬ್ಬಲ್ ಇಂಜಿನ್ ಸರ್ಕಾರ ಕರ್ನಾಟಕ ಮಾತ್ರವಲ್ಲ ತೆಲಂಗಾಣದಲ್ಲೂ ಗೆಲುವು ಸಾಧಿಸಲಿದೆ. ಆಗ ಎರಡು ಕಡೆ ಅಭಿವೃದ್ಧಿ ಆಗುತ್ತೆ ಅಂತಾ ಬಿಜೆಪಿ ಟ್ವೀಟ್ ಮಾಡಿ ತಿವಿದಿದೆ. ಇದೇ ವೇಳೆ ಸಚಿವ ಅಶ್ವಥ್ ನಾರಾಯಣ್ ಕೂಡ ತಿರುಗೇಟು ನೀಡಿದ್ದು, ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಜನತೆಯ ಹಿತ ಕಾಪಾಡುವ ಬಗ್ಗೆ ನೀವು ಯೋಚಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ತೆಲಂಗಾಣ ಸರ್ಕಾರದೊಂದಿಗೆ ನೀವು ಯಾವ ರೀತಿಯ ರಾಜಕೀಯ ಹೊಂದಾಣಿಕೆಯನ್ನು ಹೊಂದಿದ್ದೀರಿ? ನಿಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಬೇಕಾಗಿ ರಾಜ್ಯದ ಘನತೆಯ ಬಗ್ಗೆ ಸವಾಲು ಹಾಕಬೇಡಿ ಅಂತಾ ಖಾರವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಧ್ವನಿವರ್ದಕದ ವಿಷಯ ತೀರ್ಮಾನ ಮಾಡಿ ನಿಗದಿ ಮಾಡಿದ್ದಾರೆ: ಡಿ.ಕೆ ಶಿವಕುಮಾರ್

    ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಖಾತಾ ಬುಕ್‍ನ ಸಿಇಓ ರವೀಶ್ ನರೇಶ್ ದ್ವನಿ ಎತ್ತಿದ್ರು. ಬೆಂಗಳೂರಿನ ಕೋರಮಂಗಲದ ಸ್ಟಾರ್ಟ್ ಅಪ್ ಕಂಪನಿ ಖಾತಾಬುಕ್ ಸಂಸ್ಥಾಪಕ ರವೀಶ್ ನರೇಶ್, ಐದು ದಿನಗಳ ಹಿಂದೆ ಟ್ವೀಟ್ ಮಾಡಿ, ರಸ್ತೆ, ನೀರು, ಟ್ರಾಫಿಕ್ ಸೇರಿ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗೋಳು ಹೇಳಿಕೊಂಡು ಪ್ರಧಾನಿ ಮೋದಿ, ರಾಜ್ಯ ಸರ್ಕಾರ, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿದ್ರು. ಈ ನುಡವೆ ರವೀಶ್ ನರೇಶ್ ಟ್ವೀಟ್ ಅನ್ನೇ ಬಂಡವಾಳ ಮಾಡಿಕೊಂಡು ತೆಲಂಗಾಣ ಸಚಿವ ಕೆಟಿ ರಾಮರಾವ್, ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಮ್ಮ ಹೈದ್ರಾಬಾದ್‍ಗೆ ಬನ್ನಿ, ಎಲ್ಲ ರೀತಿಯ ಮೂಲಭೂತಸೌಕರ್ಯ ಒದಗಿಸುವುದಾಗಿ ಹೇಳಿದೆ.

    ಆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಕ್ರಿಯಿಸಿ, ನಿಮ್ಮ ಚಾಲೆಂಜ್ ಸ್ವೀಕರಿಸ್ತೇನೆ. 2023ಕ್ಕೆ ನಮ್ಮದೇ ಸರ್ಕಾರ ಬರುತ್ತೆನೆ. ಬೆಂಗಳೂರನ್ನು ಮತ್ತೊಮ್ಮೆ ಉತ್ತಮ ನಗರಿಯನ್ನಾಗಿ ರೂಪಿಸ್ತೇನೆ ಎಂದು ಕೆಟಿಆರ್‍ಗೆ ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ರಿಯಾಕ್ಷನ್ ನೀಡಿದ ಕೆಟಿ ರಾಮರಾವ್, ನಿಮ್ ರಾಜ್ಯದ ರಾಜಕೀಯ ನಂಗೊತ್ತಿಲ್ಲ. ನಿಮ್ ಪಕ್ಷ ಗೆಲ್ಲುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ. ಆದರೆ ನಿಮ್ಮ ಚಾಲೆಂಜ್ ಅನ್ನು ನಾನು ತೆಗೆದುಕೊಳ್ತೇನೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೃಷ್ಟಿಯಲ್ಲಿ ಕರ್ನಾಟಕ – ತೆಲಂಗಾಣ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಎಂದು ಟ್ವೀಟಿಸಿದ್ದಾರೆ. ಜೊತೆಗೆ ಹಲಾಲ್, ಹಿಜಬ್ ರಾಜಕೀಯ ಬೇಡ ಅಂತಾನೂ ಕುಟುಕಿದ್ದಾರೆ.

  • ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಹೈದರಾಬಾದ್: ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ಅನೇಕ ಘಟನೆಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಜಗ್ಗಿತಲ ಪಟ್ಟಣದ 12 ವರ್ಷದ ನ್ಯೂಸ್ ಪೇಪರ್ ಹುಡುಗ ಸಚಿವರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

    ಸೈಕಲ್ ಮೂಲಕ ಹುಡುಗ ನ್ಯೂಸ್ ಪೇಪರ್ ಹಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವೀಡಿಯೋವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದು, ಇದೇ ವೀಡಿಯೋ ಸಚಿವರ ಗಮನ ಸೆಳೆದಿದೆ.

    ವೀಡಿಯೋದಲ್ಲಿ ಏನಿದೆ?
    ಹುಡುಗ ಸೈಕಲ್‍ನಲ್ಲಿ ಪೇಪರ್ ಹಾಕುವಾಗ ಬೈಕ್ ಮೇಲೆ ಬರುವ ವ್ಯಕ್ತಿ ಹುಡುಗನ ಹತ್ತಿರ ಬೈಕ್ ನಿಲ್ಲಿಸಿ ನಿನ್ನ ಶಾಲೆ ಯಾವುದು ಎಂದು ಪ್ರಶ್ನಿಸುತ್ತಾರೆ. ಸರ್ಕಾರಿ ಹೈಸ್ಕೂಲ್ ಎಂದು ಉತ್ತರಿಸುತ್ತಾನೆ. ಅದು ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದಾಗ ಹಳೆ ಬಸ್ ನಿಲ್ದಾಣದ ಬಳಿ ಇದೆ ಎಂದು ಹುಡುಗ ಉತ್ತರಿಸುತ್ತಾನೆ. ಈ ವಯಸ್ಸಿನಲ್ಲೇ ಪೇಪರ್ ಹಾಕುತ್ತಿದ್ದಿಯ ಎಂದು ಕೇಳಿದಾಗ, ಹಾಕಬಾರದಾ ಎಂದು ಹುಡುಗನೇ ಮುರು ಪ್ರಶ್ನಿಸುತ್ತಾನೆ. ಹಾಗೇನು ಇಲ್ಲ, ನೀನು ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಆದರೆ ಓದಿಕೊಳ್ಳುವ ವಯಸ್ಸಿನಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದೀಯಲ್ಲ ಅದಕ್ಕೆ ಕೇಳಿದೆ ಎಂದು ಬೈಕ್ ಸವಾರ ಹೇಳುತ್ತಾರೆ.

    ಬೈಕ್ ಸವಾರರ ಪ್ರಶ್ನಗೆ ಉತ್ತರಿಸಿದ ಬಾಲಕ ಚೆನ್ನಾಗಿ ಓದುತ್ತೇನೆ. ಹಾಗೇ ಕೆಲಸವನ್ನು ಮಾಡುತ್ತೇನೆ. ಅದರಲ್ಲೇನು ತಪ್ಪಿದೆ ಎನ್ನುತ್ತಾರೆ. ತಪ್ಪೇನು ಇಲ್ಲ ಓದಿಕೊಳ್ಳುವ ವಯಸ್ಸಿನಲ್ಲಿ ನೀನು ಇಷ್ಟು ಕಷ್ಟಪಡುತ್ತಿದ್ದೀಯಲ್ಲ ಅದು ನನಗೆ ಇಷ್ಟವಾಯಿತ್ತು ಅದಕ್ಕೆ ಕೇಳಿದೆ ಎನ್ನುತ್ತಾರೆ. ಈಗ ಕಷ್ಟಪಟ್ಟರೆ ಏನಾದರೂ ಸಾಧಿಸಬಹುದು ಎಂದು ಹೇಳುತ್ತಾನೆ.

    ಈ ವೀಡಿಯೋ ಟ್ವೀಟ​ರ್‌​ನಲ್ಲಿ ಶೇರ್ ಮಾಡಿಕೊಂಡಿರುವ ಕೆ.ಟಿ ರಾಮರಾವ್, ಜಗ್ಗಿತಲ ಪಟ್ಟಣದ ಈ ವೀಡಿಯೋ ನಿಜಕ್ಕೂ ನನಗೆ ಇಷ್ಟವಾಯಿತು. ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಪ್ರಕಾಶ್ ಅವರ ನಂಬಿಕೆ, ಚಿಂತನೆ ಮತ್ತು ಅಭಿವ್ಯಕ್ತಿಯ ಸ್ಥಿರತೆ ನನಗೆ ಇಷ್ಟವಾಯಿತ್ತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗಿದೆ.