Tag: kstdc

  • ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ

    ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ

    ಬೆಂಗಳೂರು: ಬಿಜೆಪಿ (BJP) ಅವರಿಗೆ ದುರ್ಬುದ್ಧಿ ಇದೆ. ವಯನಾಡ್ ಪ್ರಿಯಾಂಕಾ ಗಾಂಧಿ ಅವರ ಕ್ಷೇತ್ರ ಅಂತ ಸಹಿಸೋಕೆ ಆಗದೇ ಏನೇನೋ ಆರೋಪ ಮಾಡ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಾರಿದ್ದಾರೆ.

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಯನಾಡ್ ಪ್ರವಾಸೋದ್ಯಮದ ಪರವಾಗಿ ಜಾಹೀರಾತು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ವಯನಾಡ್ ನಮ್ಮ ಪಕ್ಕದ ಕೇರಳ ರಾಜ್ಯದ ಒಂದು ಜಿಲ್ಲೆಯಾಗಿದೆ. ಅಲ್ಲಿಗೆ ಟೂರಿಸಂಗೆ ಬನ್ನಿ ಅಂತ ಕೆಎಸ್‌ಟಿಡಿಸಿ ಹೇಳಿದೆ ಅಂತ ಬಿಜೆಪಿ ಟೀಕೆ ಮಾಡಿದ್ದಾರೆ. ವಯನಾಡ್ ಪ್ರಿಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ಅದನ್ನ ಸಹಿಸೋಕೆ ಆಗದೇ ಬಿಜೆಪಿಯವರು ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್‌ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್

    ನಮ್ಮ ದೇಶದಲ್ಲಿ ಬೇರೆ ರಾಜ್ಯದ ಟೂರಿಸಂಗೆ ಅವಕಾಶ ಇದೆ. ನಮ್ಮ ಇಲಾಖೆಯಿಂದ ಅಯೋಧ್ಯೆ, ಗಯಾ, ವಾರಣಾಸಿ, ತಮಿಳುನಾಡು, ಚಾರ್ ದಾಮ್, ಮಾನಸ ಸರೋವರಕ್ಕೂ ಕಳುಹಿಸುತ್ತೇವೆ. ಕೇವಲ ದೇವಸ್ಥಾನ ನೋಡೋದು ಅಲ್ಲ ಟೂರಿಸಂಗೂ ನಾವು ಅವಕಾಶ ಕೊಟ್ಟಿದ್ದೇವೆ. ಇದು ಬಿಜೆಪಿ ಅವರಿಗೆ ಗೊತ್ತಿಲ್ವಾ? ಬಿಜೆಪಿಯವರು ತಲೆಬುಡ ಗೊತ್ತಿಲ್ಲದೇ ಮಾತಾಡ್ತಾರೆ ಎಂದು ಗುಡುಗಿದ್ದಾರೆ.

    ಬಿಜೆಪಿ ಅವರು ವಾಟ್ಸಾಪ್ ಯೂನಿವರ್ಸಿಟಿಯಿಂದ ಇಂತಹ ಸುದ್ದಿ ಹರಡಿಸ್ತಾರೆ. ಆರೋಪ ಮಾಡದೇ ಬಿಜೆಪಿ ಅವರಿಗೆ ನಿದ್ರೆ ಬರಲ್ಲ, ಊಟ ಸೇರಲ್ಲ. ಬಿಜೆಪಿ ಅವರಿಗೆ ದುರ್ಬುದ್ಧಿ ಇದೆ. ಇದನ್ನ ಬಿಡಬೇಕು ಅಂತ ಕಿಡಿಕಾರಿದ್ದಾರೆ.

  • ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ದಂಡು ಹರಿದು ಬಂದಿದ್ದು, ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪ್ರವಾಸಿಗರು ಪರದಾಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮಕ್ಕೆ ವೀಕೆಂಡ್ ಹಿನ್ನೆಲೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು (Tourists) ಆಗಮಿಸಿದ್ದರು. ಈ ಹಿನ್ನೆಲೆ ವಾಹನ ದಟ್ಟನೆಯಿಂದಾಗಿ ಗಿರಿಧಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರವಾಸಿಗರು ಪರದಾಡುವಂತಾಗಿತ್ತು. ಇದನ್ನೂ ಓದಿ: PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಅಲ್ಲದೇ ಪ್ರವೇಶ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಗಿ, ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು. ಸಾವಿರಾರು ಜನ ಪ್ರವಾಸಿಗರಿಗೆ 2 ಕೌಂಟರ್‌ನಲ್ಲಿ ಮಾತ್ರ ಟಿಕೆಟ್ ವಿತರಿಸಲಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಈ ಅವ್ಯವಸ್ಥೆಯ ವಿರುದ್ಧ ಪ್ರವಾಸಿಗರು ಆಕ್ರೋಶ ಹಾಕಿದ್ದಾರೆ.

    ಸುರಿಯುವ ಮಳೆಯನ್ನೂ ಲೆಕ್ಕಿಸದೇ ಟಿಕೆಟ್‌ಗಾಗಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರೆನ್ನದೇ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದರು.

  • Chikkaballapura | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳು ವಶಕ್ಕೆ

    Chikkaballapura | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳು ವಶಕ್ಕೆ

    – ಪೊಲೀಸರ ವಿರುದ್ಧವೇ ಕಿರುಕುಳ ಆರೋಪ

    ಚಿಕ್ಕಬಳ್ಳಾಪುರ: ಸೈಡ್‌ ಪಿಕಪ್‌ ಹೆಸರಿನಲ್ಲಿ ನಮ್ಮ ಯಾತ್ರಿ ಹಾಗೂ ರ‍್ಯಾಪಿಡ್‌ ಚಾಲಕರಿಗೆ (Airport Taxi Drivers) ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಪೊಲೀಸರು (Airport Police) ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

    ಸೈಡ್ ಪಿಕಪ್ ಆರೋಪದ ಮೇಲೆ ಟ್ಯಾಕ್ಸಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರಿಂದು ಏರ್ಪೋರ್ಟ್‌ನ ಕೆಎಸ್‌ಟಿಡಿಸಿ (KSTDC) ಚಾಲಕರು ಹಾಗೂ ಪೊಲೀಸರೇ ಕಿರುಕುಳ ನೀಡುತ್ತಿರುವುದಾಗಿ ನಮ್ಮಯಾತ್ರಿ, ರ‍್ಯಾಪಿಡ್‌ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್‌ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ

    ಪ್ರಯಾಣಿಕರನ್ನು ಪಿಕಪ್‌ ಮಾಡಲು ಬಂದಿದ್ದ 20ಕ್ಕೂ ಅಧಿಕ ಟ್ಯಾಕ್ಸಿಗಳನ್ನ ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ. ನಿನ್ನೆ ಸಂಜೆಯಿಂದ ಟ್ಯಾಕ್ಸಿಗಳನ್ನ ಬಿಡದೇ ಕುರುಕುಳ ಕೊಡು್ತಿದ್ದಾರೆ. ಹಬ್ಬದ ದಿನವೂ ಟ್ಯಾಕ್ಸಿ ಬಿಡದೇ ಸತಾಯಿಸುತ್ತಿದ್ದಾರೆ, ಅಂತ ಠಾಣೆ ಎದುರೇ ಬೀಡುಬಿಟ್ಟಿರುವ ಟ್ಯಾಕ್ಸಿ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು | ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಮದರಸಾ ತೆರೆಯಲು ಡಿಸಿ ಅನುಮತಿ – ಗ್ರಾಮಸ್ಥರ ಆಕ್ರೋಶ

    ನಿನ್ನೆ ಸಂಜೆ ಪಿಕಪ್‌ಗೆ ಬಂದಿದ್ದ ಟ್ಯಾಕ್ಸಿಗಳ ಕೀ ಕಿತ್ತುಕೊಂಡು ಕರ್ನಾಟಕ ಪ್ರವಾಸೋದ್ಯಮ ಟ್ಯಾಕ್ಸಿ ಚಾಲಕರೇ ಪೊಲೀಸರಿಗೆ ನೀಡಿದ್ದಾರೆ. ಅವರಿಗೆ ಬಾಡಿಗೆ ಸಿಕ್ಕಿಲ್ಲ ಅಂತ ನಮ್ಮ ಮೇಲೆ ಪ್ರಹಾರ ಮಾಡ್ತಿದ್ದಾರೆ. 2 ದಿನಗಳ ಕಾಲ ಟ್ಯಾಕ್ಸಿ ನಿಲ್ಲಿಸಿದ್ರೆ ನಮ್ಮ ಜೀವನ ಹೇಗೆ ನಡೆಯುತ್ತೆ? ನಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮುಂದೆ ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಪರಮೇಶ್ವರ್

  • ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?

    ಅಂತರರಾಜ್ಯ ಪ್ರವಾಸಿ ತಾಣಗಳಿಗೆ KSTDC ಪ್ಯಾಕೇಜ್ ಟೂರ್ – ಯಾವ ಸ್ಥಳಕ್ಕೆ ಎಷ್ಟು ರೂ?

    ಬೆಂಗಳೂರು:ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (KSTDC) ಪ್ರವಾಸಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಂತರರಾಜ್ಯ ಪ್ರವಾಸಿ ತಾಣಗಳಿಗೆ ಕೆಎಸ್‌ಟಿಡಿಸಿಯಿಂದ ಪ್ಯಾಕೇಜ್ ಟೂರ್ (Package Tour) ಆಯೋಜನೆ ಮಾಡಲಾಗುತ್ತಿದೆ. ಪ್ರಮುಖವಾಗಿ ವಿವಿಧ ಹಾಗೂ ಪ್ರಖ್ಯಾತ 9 ಸ್ಥಳಗಳಿಗೆ ಸರ್ಕಾರದಿಂದ ಕೈಗೆಟ್ಟಕುವ ದರದಲ್ಲಿ ಪ್ಯಾಕೇಜ್ ಮಾಡಲಾಗಿದೆ.ಇಂದಿನಿಂದಲೇ ಬುಕ್ಕಿಂಗ್ ಆರಂಭವಾಗಿವೆ.

    ಈ ಪ್ಯಾಕೇಜ್ ನಲ್ಲಿ ಪ್ರವಾಸಿಗರ ಊಟ, ಹೋಟೆಲ್, ವಸತಿ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿಯಿಂದಲೇ ಆಯೋಜನೆ ಮಾಡಲಾಗಿದೆ. ಎಲ್ಲಾ ಪ್ಯಾಕೇಜ್‌ಗಳಲ್ಲೂ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಲಾಗಿದೆ. ಒಂದು ಟಿಕೆಟ್ ಗಿಂತ‌ ಮೂರು ಜನ ಬುಕ್ ಮಾಡಿದರೆ ಟೂರ್ ಪ್ಯಾಕೇಜ್ ರೇಟ್ ನಲ್ಲಿ ಕಡಿಮೆ ದರ ದೊರೆಯಲಿದೆ.

    ಯಾವ ಸ್ಥಳಕ್ಕೆ ಎಷ್ಟು ರೂ?
    ಕೃಷ್ಣಗಿರಿ ಡ್ಯಾಮ್ ಹೊಗೆನಕಲ್ ಒಂದು ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 1,480 ರೂ.
    ಸೀನಿಯರ್ ಸಿಟಿಜನ್ ಗೆ 200 ರೂಪಾಯಿ ರಿಯಾಯಿತಿ

    ತಿರುವಣ್ಣಮಲೈ-ಗಿರಿವಲಂ 2 ದಿನದ ಟೂರ್ ಪ್ಯಾಕೇಜ್ – ಒಬ್ಬರಿಗೆ 5,210 ರೂ.
    ಸೀನಿಯರ್ ಸಿಟಿಜನ್ 300 ರೂ. ರಿಯಾಯಿತಿ

    ಯಗಚಿ-ಚಿಕ್ಕಮಗಳೂರು ಟೂರ್ ಪ್ಯಾಕೇಜ್ – ಎರಡು ದಿನದ ಪ್ಯಾಕೇಜ್‌ಗೆ 6,460 ರೂ.
    ಸೀನಿಯರ್ ಸಿಟಿಜನ್ 325 ರೂ. ರಿಯಾಯಿತಿ

    ಕೊಚ್ಚಿ-ಆಲೆಪ್ಪಿ ಟೂರ್ ಪ್ಯಾಕೇಜ್  -ನಾಲ್ಕು ದಿನಕ್ಕೆ 12,980 ರೂ.
    ಸೀನಿಯರ್ ಸಿಟಿಜನ್‌ 675 ರೂ.ರಿಯಾಯಿತಿ

    ತಮಿಳುನಾಡು-ನವಗ್ರಹ ಟೂರ್ ಪ್ಯಾಕೇಜ್ – ನಾಲ್ಕು ದಿನಕ್ಕೆ ಒಬ್ಬರಿಗೆ 7,820 ರೂ.
    ತೆಕ್ಕಡಿ-ಮುನ್ನಾರ್ ಟೂರ್ ಪ್ಯಾಕೇಜ್ ಐದು ದಿನಕ್ಕೆ ಒಬ್ಬರಿಗೆ 13,030 ರೂ.

    ತೆಕ್ಕಡಿ-ಆಲೆಪ್ಪಿ-ಮುನಾರ್-ಆರು ದಿನಕ್ಕೆ ಒಬ್ಬರಿಗೆ 20,050 ರೂ.
    ಪಂಡಾರಪುರ-ಶಿರಡಿ-ಎಲ್ಲೋರ-ಕೊಲ್ಲಾಪುರ ಟೂರ್ ಒಬ್ಬರಿಗೆ ಆರು ದಿನಕ್ಕೆ 18,590 ರೂ.

  • ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

    ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

    – ಆಂಧ್ರಪ್ರದೇಶದ ಸಿಎಂಗೆ ಕೆಎಸ್‌ಟಿಡಿಸಿ ಅಧ್ಯಕ್ಷ ಬೇಡಿಕೆ
    – ಭಕ್ತಾದಿಗಳಿಗೆ 350 ರೂಮ್‌ಗಳ ವ್ಯವಸ್ಥೆ

    ಅಮರಾವತಿ/ಬೆಂಗಳೂರು: ಭಾರತದ ಅತೀ ಶ್ರೀಮಂತ ದೇಗುಲಗಳಲ್ಲಿ ತಿರುಪತಿ ವೆಂಕಟೇಶ್ವರ ದೇವಾಲಯವೂ (Tirumala Tirupati Devasthanam) ಒಂದು. ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದು, ತಿರುಪತಿ ಲಡ್ಡು ವಿವಾದದ (Tirupati Laddu Row) ನಂತರವೂ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಕರ್ನಾಟಕದಿಂದಲೂ (Karnataka) ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ (KSTDC), ಆಂಧ್ರ ಸಿಎಂಗೆ ಹೊಸ ಮನವಿ ಮಾಡಿದೆ.

    ತಿರುಪತಿ ಭಕ್ತರ ಪಾಲಿಗೆ ಕಲಿಯುಗದ ವೈಕುಂಠ. ತಿರುಮಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲದೆ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಆಪತ್ತುಗಳನ್ನು ನಿವಾರಿಸುವ ಏಡುಕೊಂಡಲವಾಡ ದರ್ಶನ ಪಡೆಯಲು ಜನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಥವಾ ಕೆಎಸ್‌ಟಿಡಿಸಿಯ ಸೀಟ್‌ಗಳಿಗಾಗಿ ಪ್ರತಿದಿನ ಕಾಯುತ್ತಾರೆ. ಪ್ರತಿದಿನ ಟಿಟಿಡಿಯು ಕೆಎಸ್‌ಟಿಡಿಸಿಗೆ ಕರ್ನಾಟಕದ 250 ಭಕ್ತಾದಿಗಳಿಗೆ ನೇರ ದರ್ಶನಕ್ಕೆ ಸದ್ಯ ಅವಕಾಶ ನೀಡಿದೆ. ಆದರೂ ನೇರ ದರ್ಶನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದು ತಿರುಪತಿ ಲಡ್ಡು ವಿವಾದದ ನಂತರವೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕೆಎಸ್‌ಟಿಡಿಸಿಯು ಪ್ರತಿದಿನ 250 ಜನರಿಗೆ ನೇರ ದರ್ಶನದ ಸಂಖ್ಯೆಯನ್ನು, ಒಂದು ಸಾವಿರಕ್ಕೆ ಹೆಚ್ಚಿಸಬೇಕೆಂದು ಆಂಧ್ರ ಸಿಎಂಗೆ ಮನವಿ ಮಾಡಿದ್ದು, ಸದ್ಯ ಮಾತುಕತೆ ನಡೆದಿದೆ. ಇದನ್ನೂ ಓದಿ: ದೇಶದ ರೈತರಿಗೆ ನವರಾತ್ರಿ ಗಿಫ್ಟ್‌ – ಶನಿವಾರ ಪ್ರಧಾನಿ ಮೋದಿಯಿಂದ 20,000 ಕೋಟಿ ರೂ. ಬಿಡುಗಡೆ

    ಇನ್ನೂ ಸದ್ಯ 250 ಜನ ಭಕ್ತಾದಿಗಳಿಗೆ ನಿಗಮದಿಂದ ಪ್ರತಿನಿತ್ಯ 5-6 ಬಸ್‌ಗಳು ರಾಜ್ಯದಿಂದ ತೆರಳುತ್ತಿದ್ದವು. ಸಾವಿರ ಜನರಿಗೆ ಅವಕಾಶ ಸಿಕ್ಕರೇ, ರಾಜ್ಯದಿಂದ ತಿರುಪತಿಯತ್ತ 10-12 ಬಸ್‌ಗಳು ಪ್ರವಾಸೋದ್ಯಮ ಇಲಾಖೆಯಿಂದ ಸಂಚರಿಸಲಿವೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾದರೂ ಅಲ್ಲಿನ ವಸತಿ ವ್ಯವಸ್ಥೆಗೆ ಆತಂಕಪಡಬೇಕಿಲ್ಲ. ಏಕೆಂದರೆ ತಿರುಪತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 350 ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ

  • ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ದಸರಾ ಕಣ್ತುಂಬಿಕೊಳ್ಳಿ

    ಡಬ್ಬಲ್ ಡೆಕ್ಕರ್ ಬಸ್‌ನಲ್ಲಿ ದಸರಾ ಕಣ್ತುಂಬಿಕೊಳ್ಳಿ

    ಬೆಂಗಳೂರು: ನಾಡಹಬ್ಬ ದಸರಾಗೆ (Dasara) ದಿನಗಣನೆ ಆರಂಭವಾಗಿದ್ದು,ಕರ್ನಾಟಕ ರಾಜ್ಯ ಅಭಿವೃದ್ಧಿ ಪ್ರವಾಸೋದ್ಯಮ ನಿಗಮದಿಂದ(KSTDC) ಮೈಸೂರಿಗೆ  ಆಗಮಿಸಿದ ಪ್ರವಾಸಿಗರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

    ಈ ಬಾರಿಯ ದಸರಾದಲ್ಲಿ ಗತಕಾಲದ ಡಬ್ಬಲ್ ಡೆಕ್ಕರ್ (Double Decker) ಬಸ್‌ ವೈಭವ ಮರುಕಳಿಸಲಿದೆ. ಪ್ರವಾಸಿಗರು ಡಬ್ಬಲ್ ಡೆಕ್ಕರ್ ಬಸ್ ನಲ್ಲಿ ಕುಳಿತು ಮೈಸೂರಿನ (Mysuru) ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪ್ರವಾಸಿಗರು ಬಸ್‌ ಮೇಲ್ಬಾಗದಲ್ಲಿ ಕುಳಿತು ಮೈಸೂರನ್ನು ಸೆರೆಹಿಡಿಯಬಹುದಾಗಿದೆ. ಈ ಬಸ್ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಟಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಸರ್ಕಲ್ ಗೇಟ್, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್ , ಸೈಯಾಜಿರಾವ್ ವೃತ್ತ, ಆರ್ಯುವೇದ ವೈದ್ಯಕೀಯ ಕಾಲೇಜುವರೆಗೆ ರೌಂಡ್ ಹಾಕಲಿದೆ.

    ಒಬ್ಬರಿಗೆ ಟಿಕೆಟ್ ದರ 250 ರೂ. (ಕೆಳಗಡೆ ಸೀಟ್) ಹಾಗೂ ಮೇಲ್ಬಾಗದ ಸೀಟ್‌ಗೆ ಒಬ್ಬರಿಗೆ 500 ರೂಪಾಯಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚೇರ್ ಮನ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇದರ ಜೊತೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಸ್ಪೆಷಲ್‌ ಪ್ಯಾಕೆಜ್‌ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಿಂದ ವಿವಿಧ ಸ್ಥಳಗಳಿಗೆ ದಿನಗಳ ಆಧಾರದ ಮೇಲೆ ಟೂರ್ ಪ್ಯಾಕೆಜ್‌ ಇದೆ. ಜೋಗ್‌ಫಾಲ್ಸ್, ಗೋಕರ್ಣ-ಗೋವಾ, ನಂಜನಗೂಡು, ಬಂಡೀಪುರ-ಊಟಿ, ದೊಡ್ಡ ಬೆಟ್ಟ, ಶ್ರವಣಬೆಳಗೊಳ, ಬೇಲೂರು-ಹಳೇಬೀಡು, ಸೋಮನಾಥಪುರ,ಶಿವನಸುಮುದ್ರ, ತಲಕಾಡು ಮುಡುಕುತೊರೆ ಹೀಗೆ ಹಲವು ಪ್ರವಾಸಿ ತಾಣಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕೆಎಸ್‌ಟಿಡಿಸಿ ಮಾಡಿದೆ.

     

  • ಕೆಐಎಎಲ್‍ನಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಚಲಾಯಿಸುವ ಗೋ ಪಿಂಕ್ ಕ್ಯಾಬ್‍ಗೆ ಚಾಲನೆ

    ಕೆಐಎಎಲ್‍ನಲ್ಲಿ ಮಹಿಳೆಯರಿಗಾಗಿ ಮಹಿಳೆಯರೇ ಚಲಾಯಿಸುವ ಗೋ ಪಿಂಕ್ ಕ್ಯಾಬ್‍ಗೆ ಚಾಲನೆ

    ಚಿಕ್ಕಬಳ್ಳಾಪುರ: ಕ್ಯಾಬ್‍ಗಳಲ್ಲಿ ಮಹಿಳೆಯರಿಗೆ ಚಾಲಕರು ಲೈಂಗಿಕ ಕಿರುಕುಳ ನೀಡಿರುವ ಆರೋಪಗಳು ಕೇಳಿ ಬಂದು ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಲೇರಿದ ಬೆನ್ನಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏಕಾಂಗಿಯಾಗಿ ಬರುವ ಮಹಿಳೆಯರು, ಯುವತಿಯರಿಗೆ ಪ್ರತ್ಯೇಕ ಕ್ಯಾಬ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

    ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‍ಟಿಡಿಸಿ) ಮತ್ತು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರ (ಕೆಐಎಎಲ್) ಈ ಹೊಸ ಯೋಜನೆ ಜಾರಿ ಮಾಡಿದ್ದು, ಕೆಐಎಎಲ್ ನಲ್ಲಿ ಮಹಿಳಾ ಚಾಲಕರಿರುವ ಗೋ ಪಿಂಕ್ ಕ್ಯಾಬ್ ಗಳಿಗೆ ಇಂದಿನಿಂದ ಚಾಲನೆ ನೀಡಲಾಗಿದೆ.

    ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 10 ಗೋ ಪಿಂಕ್ ಕ್ಯಾಬ್ ಗಳಿಗೆ ಕೆಐಎಎಲ್‍ನ ಉಪಾಧ್ಯಕ್ಷ ವೆಂಕಟರಾಮನ್ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಹಿಳಾ ಪ್ರಯಾಣಿಕರ ಸ್ಪಂದನೆ ಗಮನಿಸಿ ಬೇಡಿಕೆಗೆ ಅನುಗುಣವಾಗಿ ಹೆಚ್ಚು ಗೋ ಪಿಂಕ್ ಕ್ಯಾಬ್ ಗಳನ್ನ ರಸ್ತೆಗಿಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಏನೆಲ್ಲಾ ಸೌಲಭ್ಯ ಇರಲಿದೆ: ಗೋ ಪಿಂಕ್ ಕ್ಯಾಬ್ ಗಳಲ್ಲಿ ಜಿಪಿಎಸ್ ಟ್ರಾಕಿಂಗ್ ಸೇರಿದಂತೆ, ಪ್ಯಾನಿಕ್ ಬಟನ್ ಆಳವಡಿಸಲಾಗಿದೆ. 24 ಗಂಟೆಗಳ ಈ ಸೇವೆ ಲಭ್ಯವಿರುತ್ತದೆ. ಕೆಐಎಎಲ್ ಹಾಗೂ ಕೆಎಸ್‍ಟಿಡಿಸಿ ಜೊತೆಗೂಡಿ ಮಹಿಳೆಯರಿಗಾಗಿಯೇ ನೂತನ ಕ್ಯಾಬ್‍ಗಳನ್ನು ರಸ್ತೆಗಿಳಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಎಸ್‍ಟಿಡಿಸಿ ವತಿಯಿಂದ 5 ದಿನ ಚಳಿಗಾಲದ ವಿಶೇಷ ಪ್ರವಾಸ- ಟಿಕೆಟ್ ಎಷ್ಟು?

    ಕೆಎಸ್‍ಟಿಡಿಸಿ ವತಿಯಿಂದ 5 ದಿನ ಚಳಿಗಾಲದ ವಿಶೇಷ ಪ್ರವಾಸ- ಟಿಕೆಟ್ ಎಷ್ಟು?

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‍ಟಿಡಿಸಿ) 5 ದಿನಗಳು ಚಳಿಗಾಲದ ವಿಶೇಷ ಪ್ರವಾಸಗಳನ್ನು ಕೈಗೊಂಡಿದೆ.

    ಅಕ್ಟೋಬರ್-ಜನವರಿ ತಿಂಗಳಲ್ಲಿ ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳಗಳಿಗೆ 5 ದಿನಗಳ ಪ್ರವಾಸವನ್ನು ಆಯೋಜಿಸಿದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ 4,700 ರೂಪಾಯಿ. ಅದೇ ರೀತಿ ಸಮುದ್ರ ತೀರ ಪ್ರವಾಸವಾಗಿ ಗೋವಾ-ಗೋಕರ್ಣಕ್ಕೆ ಪ್ರವಾಸ ಆಯೋಜಿಸಿದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ 5,600 ರೂಪಾಯಿ ಇದೆ.

    ಎಸಿ ಡಿಲಕ್ಸ್ ವಾಹನ ಸೌಲಭ್ಯದ ಪ್ರವಾಸ ಇದಾಗಿದ್ದು, ಪ್ರವಾಸದ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ಕೆಎಸ್‍ಟಿಡಿಸಿ ಬುಕ್ಕಿಂಗ್ ಕೇಂದ್ರ ಅಥವಾ ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ನಿಗಮದ ಕೌಂಟರನ್ನು ಸಂಪರ್ಕಿಸಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ- 080-43344334/35, 8970650070/ 8970650075.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ನಂದಿಬೆಟ್ಟ, ಚಾಮುಂಡಿಬೆಟ್ಟ, ಬೇಲೂರು, ಹಳೇಬೀಡಿಗೆ ಕೆಎಸ್‍ಟಿಡಿಸಿಯಿಂದ ಪ್ರವಾಸ ಆಯೋಜನೆ

    ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.

    ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.

    1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.

    2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.

    ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
    www.kstdc.co  ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.

  • ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವೈರಮುಡಿ ಉತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯ

    ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವೈರಮುಡಿ ಉತ್ಸವಕ್ಕೆ ವಿಶೇಷ ಸಾರಿಗೆ ಸೌಲಭ್ಯ

    ಬೆಂಗಳೂರು: ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.

    ಮಾರ್ಚ್ 26 ರಿಂದ ಆರಂಭವಾಲಿರುವ ಉತ್ಸವಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಭಕ್ತರು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ  ಬೆಂಗಳೂರಿನಿಂದ ಮೇಲುಕೋಟೆಗೆ ಪ್ರಯಾಣಿಸಲು ನಿಗಮದಿಂದ ಎಸಿ ಡಿಲಕ್ಸ್ ವಾಹನ ಸೌಲಭ್ಯದೊಂದಿಗೆ, ಒಂದು ದಿನದ ವ್ಯವಸ್ಥಿತ ಪ್ರವಾಸವನ್ನ ಏರ್ಪಡಿಸಿದೆ.

    ಈ ಕುರಿತು ನಿಗಮ ಪತ್ರಿಕಾ ಪ್ರಕಟಣೆಯನ್ನು ನೀಡಿದ್ದು, ಪ್ರವಾಸ ಕೈಗೊಳ್ಳಲು ಇಚ್ಚಿಸುವವರಿಗೆ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಪ್ರಧಾನ ಕಚೇರಿ ಯಶವಂತಪುರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಕೌಂಟರ್ ಸಂಪರ್ಕಿಸಲು ಕೋರಿದೆ.

    ಟಿಕೆಟ್ ಮುಂಗಡವಾಗಿ ಕಾಯ್ದಿರಿಸಲು ನಿಗಮದ ಏಜೆಂಟ್ ಅವರ ಸಂಪರ್ಕಿಸಿ ಸಹಕಾರ ಪಡೆಯಬಹುದು. ಅಲ್ಲದೇ ನಿಗಮದ ಆನ್ ಲೈನ್ ತಾಣದಲ್ಲೂ ಮುಂಗಡ ಬುಕಿಂಗ್ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದೆ. ಪ್ರತಿ ಪ್ರಯಾಣಿಕರಿಗೆ 765 ರೂ. ದರ ನಿಗದಿ ಪಡಿಸಿದೆ. ಆನ್‍ಲೈನ್ ನಲ್ಲಿ  kstdc.co  ವೆಬ್‍ಸೈಟಿಗೆ ತೆರಳಿ ಟಿಕೆಟ್ ಬುಕ್ ಮಾಡಬಹುದು.