Tag: KSRTC bus

  • ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ

    ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ

    ಬೆಂಗಳೂರು: ಆಯುಧ ಪೂಜೆ (Ayudha Pooja) ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಬಸ್‌ಗೆ ಕೇವಲ 150 ರೂ. ರಿಲೀಸ್‌ ಮಾಡಿದೆ.

    ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಸಾರಿಗೆ ಇಲಾಖೆಯು ಪ್ರತಿ ಬಸ್‌, ಇಲಾಖಾ ವಾಹನಕ್ಕೆ ಹಣ ಬಿಡುಗಡೆ ಮಾಡಲಿದೆ. ಈ ಬಾರಿ ಕೇವಲ 150 ರೂ. ಬಿಡುಗಡೆ ಮಾಡಿದೆ. ಇದಕ್ಕೆ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

    ಹಬ್ಬದ ದಿನಗಳಲ್ಲಿ ಹೂ-ಹಣ್ಣು, ಹಾರ ಎಲ್ಲದರ ಬೆಲೆಯೂ ಏರಿಕೆ ಆಗುವುದು ಸಾಮಾನ್ಯ. ಒಂದು ಮಾರು ಹೂವಿನ ಹಾರವೇ ಹಬ್ಬದಲ್ಲಿ 100 ರೂ. ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.

    ವಿಭಾಗೀಯ ಕಾರ್ಯಾಗಾರಕ್ಕೆ 2000 ರೂ. ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂ. ಹಣವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕೂ ನಿಗಮಗಳಿಗೆ ಒಂದು ಬಸ್‌ಗೆ 150 ರೂ. ಸಿಗಲಿದೆ. ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

  • ಕಂದಕಕ್ಕೆ ಉರುಳಿದ ಸಾರಿಗೆ ಬಸ್‌ – 16 ಮಂದಿಗೆ ಗಾಯ

    ಕಂದಕಕ್ಕೆ ಉರುಳಿದ ಸಾರಿಗೆ ಬಸ್‌ – 16 ಮಂದಿಗೆ ಗಾಯ

    ದಾವಣಗೆರೆ/ ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್‌ (KSRTC Bus) ಕಂದಕಕ್ಕೆ ಉರುಳಿದ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಣಿವೆಹಳ್ಳಿಯಲ್ಲಿ ನಡೆದಿದೆ.

    ಬಸ್‌ ಹೊಸಪೇಟೆಯಿಂದ – ದಾವಣಗೆರೆಗೆ (Davanagere) ಹೊರಟಿತ್ತು. ಮಾರ್ಗ ಮಧ್ಯೆ ಕಣಿವೆಹಳ್ಳಿ ಬಳಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಪರಿಣಾಮ 16 ಜನರಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹರಪನಹಳ್ಳಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗದಗ | ಕತ್ತೆಕಿರುಬಕ್ಕೆ ಡಿಕ್ಕಿಯಾಗಿ ಕಂದಕಕ್ಕೆ ಉರುಳಿದ ಪೊಲೀಸ್ ಜೀಪ್

    ಬಸ್‌ ಕಂದಕಕ್ಕೆ ಉರುಳಿದ್ದರೂ ಸಹ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಗಾಜಿಯಾಬಾದ್‌ ಎನ್‌ಕೌಂಟರ್‌ – ಕಳ್ಳನ ಕಾಲುಮುರಿದು ಬಂಧಿಸಿದ ಮಹಿಳಾ ಪೊಲೀಸರ ತಂಡ

  • KSRTC ಬಸ್‌ಗಳಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್‌, 13 ಕೋಟಿ ದಂಡ – ಫೈನ್‌ ಮನ್ನಾಗೆ ಸಾರಿಗೆ ಸಚಿವರ ಪತ್ರ

    KSRTC ಬಸ್‌ಗಳಿಂದ ಟ್ರಾಫಿಕ್‌ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್‌, 13 ಕೋಟಿ ದಂಡ – ಫೈನ್‌ ಮನ್ನಾಗೆ ಸಾರಿಗೆ ಸಚಿವರ ಪತ್ರ

    ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ (KSRTC Bus) ಮೇಲಿನ ಟ್ರಾಫಿಕ್‌ ಫೈನ್‌ ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವರು ಪತ್ರ ಬರೆದಿದ್ದಾರೆ.

    ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ 13 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ. ಬಸ್‌ಗಳ ಮೇಲೆ ಒಟ್ಟು 2,69,198 ಪ್ರಕರಣಗಳಿವೆ. ಶೇ.50 ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಫೈನ್ 6,64,96,400 ರೂ. ಆಗುತ್ತದೆ. ಆದರೆ, ಈ ದಂಡವನ್ನು ಮನ್ನಾ ಮಾಡುವಂತೆ ಗೃಹ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ರಾಜ್ಯದಲ್ಲಿ ಒಟ್ಟು 24,000 ಬಸ್‌ಗಳಿವೆ. ಕೆಲ ವೇಳೆ ಸಿಸಿಟಿವಿಯಲ್ಲಿ ತಪ್ಪಾಗಿ ರೆಕಾರ್ಡ್ ಆಗಿದೆ. ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದಾಗ, 1,95,009 ಪ್ರಕರಣಗಳು Lane Discipline Violationಗೆ ಸಂಬಂಧಿಸಿದ್ದು. ವಾಹನಗಳು ಲೇನ್‌ನಲ್ಲಿ ಚಲಿಸುವಾಗ ಲೇನ್‌ ಪಟ್ಟಿಗಳನ್ನು ಸ್ವಲ್ಪ ತಾಗಿದರೂ ಸಹ ಸದರಿ ಸ್ಥಳದಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಲೇನ್‌ ಉಲ್ಲಂಘನೆ ಎಂದು ದಂಡ ವಿಧಿಸಲಾಗುತ್ತಿದೆ.

    58,499 ಪ್ರಕರಣಗಳು ಸೀಟ್‌ ಬೆಲ್ಟ್‌ ಧರಿಸದೇ ಇರುವ ಬಗ್ಗೆ ದಾಖಲಾಗಿದೆ. ಸೀಲ್ಟ್‌ ಬೆಲ್ಟ್‌ ಹಾಕಿದ್ದರೂ ಪ್ರಕರಣಗಳು ದಾಖಲಾಗುತ್ತಿವೆ. ನಿಯಮದಂತೆ ಒಂದು ಅಪರಾಧಕ್ಕೆ ಸಂಬಂಧಪಟ್ಟಂತೆ 24 ಗಂಟೆಯ ಅವಧಿಯಲ್ಲಿ ಒಂದು ಬಾರಿ ದಂಡ ವಿಧಿಸಿ ರಶೀದಿ ಪಡೆದಿದ್ದಲ್ಲಿ ಬೇರೊಂದು ಕಡೆ ಸದರಿ ರಸೀದಿ ತೋರಿದಲ್ಲಿ ಪುನಃ ವಿಧಿಸಿರುವ ದಂಡದಿಂದ ವಿನಾಯಿತಿ ಇರುತ್ತಿತ್ತು. ಆದರೆ, ಪ್ರಸ್ತುತ ಹೈವೇಯಲ್ಲಿ ಜಿಲ್ಲಾವಾರು ಪ್ರಕರಣಗಳು ದಾಖಲಾಗುತ್ತಿವೆ. ಉದಾಹರಣೆಗೆ, ಒಂದೇ ದಿನದಲ್ಲಿ ರಾಮನಗರ, ಮಂಡ್ಯ, ಮೈಸೂರು ಜಿಲ್ಲಾವಾರು ಒಂದೇ ವಾಹನಕ್ಕೆ ಒಂದೇ ತರಹದ ಉಲ್ಲಂಘನೆಗೆ ದಂಡಗಳನ್ನು ಹಾಕಲಾಗಿದೆ. ಒಟ್ಟು 2,69,198 ಪ್ರಕರಣಗಳ ಪೈಕಿ 2,53,508 ಪ್ರಕರಣಗಳು ಮೇಲಿನ ಎರಡು ವಿಧವಾದ ಪ್ರಕರಣಗಳಿಂದ ಕೂಡಿರುತ್ತದೆ.

    ಪ್ರಮುಖ ವಿಚಾರಗಳನ್ನು ಗೃಹ ಸಚಿವರ ಗಮನಕ್ಕೆ ತಂದು ದಂಡವನ್ನು ಮನ್ನಾ ಮಾಡುವಂತೆ ಸಾರಿಗೆ ಸಚಿವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

  • ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ

    ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ

    ಶಿವಮೊಗ್ಗ: ನೂತನ ಸೇತುವೆ ಉದ್ಘಾಟನೆಯಾದ ಬೆನ್ನಲ್ಲೇ ಬೆಂಗಳೂರಿನಿಂದ (Bengaluru) ಸಿಗಂದೂರಿಗೆ (Siganduru) ಕೆಎಸ್‌ಆರ್‌ಟಿಸಿ ನಾನ್​ ಎಸಿ ಬಸ್​ ಸಂಚಾರ ಆರಂಭವಾಗಿದೆ. ಈ ಬಗ್ಗೆ ಕೆಎಸ್​ಆರ್​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರು ಮತ್ತು ಸಿಗಂದೂರು ನಡುವೆ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್​ (Non AC Sleeper Bus) ಪ್ರಾರಂಭಿಸಿದೆ. ಆ. 22 ರಿಂದ ಸಂಚಾರ ಆರಂಭಿಸಿದೆ. ಬೆಂಗಳೂರಿನಿಂದ ರಾತ್ರಿ 9:40ಕ್ಕೆ ಹೊರಟು ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಮತ್ತು ಶಿವಮೊಗ್ಗ ತಲುಪಲಿದೆ. ಬಳಿಕ ಸಿಗಂದೂರನ್ನು ಬೆಳಗ್ಗೆ 6 ಗಂಟೆಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್‌ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

    ಸಿಗಂದೂರು ಕಡೆಯಿಂದ ರಾತ್ರಿ 8 ಗಂಟೆಗೆ ಹೊರಡಲಿದ್ದು, ಬೆಂಗಳೂರಿಗೆ ಬೆಳಗಿನ ಜಾವ 4:15 ಕ್ಕೆ ತಲುಪಲಿದೆ. ಟಿಕೆಟ್​ ದರ 950 ರೂ. ನಷ್ಟಿದೆ. ಟಿಕೆಟ್‌ಗಳನ್ನು KSRTCಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಮತ್ತು www.ksrtc.karnataka.gov.in ಮೂಲಕ ಕಾಯ್ದಿರಿಸಬಹುದು. ಮಾಹಿತಿಗಾಗಿ 080-26252625, 7760990100,7760990560, 7760990287 ನಂಬರ್​ಗಳನ್ನು ಸಂಪರ್ಕಿಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಬಸ್‌ ಸಂಚಾರದಿಂದ ಬೆಂಗಳೂರಿನಿಂದ ಸಿಗಂದೂರು ದೇವಾಲಯಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ. ಅಲ್ಲದೇ ಒಂದೇ ದಿನದಲ್ಲಿ ಸಿಗಂದೂರು ಸಮೀಪದ ಕೆಲವು ಪ್ರವಾಸಿ ತಾಣಗಳಲ್ಲಿ ಸುತ್ತಿ ವಾಪಸ್‌ ಬರುವ ಅವಕಾಶ ಸಿಕ್ಕಂತಾಗಿದೆ.  ಇದನ್ನೂ ಓದಿ: ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ – ಪೊಲೀಸರಿಂದ ಪುಂಡನಿಗೆ ದಂಡದ ರುಚಿ!

  • ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

    ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ – ರಾಯರ ದರ್ಶನ ಪಡೆದು ವಾಪಸ್ಸಾಗ್ತಿದ್ದ ಇಬ್ಬರು ಸಾವು

    ಬಳ್ಳಾರಿ: ರಸ್ತೆ ಬದಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siraguppa) ತಾಲೂಕಿನ ಬೈರಾಪುರ ಕ್ರಾಸ್ (Bairapura Cross) ಬಳಿ ನಡೆದಿದೆ.

    ಮಂಡ್ಯ (Mandya) ಮೂಲದ ಶ್ವೇತಾ(38), ಕನಕಪುರ (Kanakapura) ಮೂಲದ ಬಾಲನಾಯಕ(42) ಮೃತರು. ಘಟನೆಯಲ್ಲಿ 10ಕ್ಕೂಜ ಹೆಚ್ಚು ಜನರು ಗಾಯಗೊಂಡಿದ್ದಾರೆ.ಇದನ್ನೂ ಓದಿ: ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

    ಮೃತರಿಬ್ಬರು ಮಂತ್ರಾಲಯ (Mantralaya) ರಾಯರ ದರ್ಶನಕ್ಕೆ ಬಂದಿದ್ದರು. ರಾಯರ ದರ್ಶನ ಮುಗಿಸಿ ಮಸ್ಕಿಯಿಂದ (Maski) ಬೆಂಗಳೂರಿಗೆ (Bengaluru) ಸರ್ಕಾರಿ ಬಸ್ಸಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಗಾಯಾಳುಗಳನ್ನು ಸಿರುಗುಪ್ಪ ತಾಲೂಕಾಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಬಳ್ಳಾರಿ ಎಸ್ಪಿ ಡಾ.ಶೋಭಾರಾಣಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

  • ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ದುರ್ಮರಣ

    ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ದುರ್ಮರಣ

    ನೆಲಮಂಗಲ: ಕುರಿ, ಮೇಕೆ ತುಂಬಿದ್ದ ಲಾರಿಗೆ (Lorry) ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ಲಾರಿ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ನೆಲಮಂಗಲ ಸಂಚಾರಿ ಪೊಲೀಸ್ (Nelamangala Traffic Police) ಠಾಣಾ ವ್ಯಾಪ್ತಿಯ ಗುಂಡೇನಹಳ್ಳಿ ಬಳಿ ಘಟನೆ ನಡೆದಿದೆ.

    ಲಾರಿ ಚಾಲಕ ಸೀನಪ್ಪ (50), ನಜೀರ್ ಅಹ್ಮದ್ (36) ಮೃತರೆಂದು ಗುರುತಿಸಲಾಗಿದೆ. ಕುರಿ ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು (Bengaluru) ಕಡೆಗೆ ಬರುತ್ತಿದ್ದ ಲಾರಿ ಗುಂಡೇನಹಳ್ಳಿ ಬಳಿ ಪಂಚರ್ ಆಗಿತ್ತು. ಇದನ್ನೂ ಓದಿ: ಕಾಶ್ಮೀರದಲ್ಲಿ ಮೇಘಸ್ಫೋಟ | ದುರಂತ ನಡೆದಾಗ ಸ್ಥಳದಲ್ಲಿ 1,200 ಜನ ಇದ್ದರು: ಬಿಜೆಪಿ ಶಾಸಕ ಬಾಂಬ್‌

    ಲಾರಿ ಟಯರ್ ಪಂಚರ್ ಆಗಿ ರಸ್ತೆ ಬದಿ ಟಯರ್ ಬದಲಿಸುವ ವೇಳೆ, ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತೋರ್ವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆಯು ನಸುಕಿನ ಜಾವ 3:30ರ ಸುಮಾರಿಗೆ ನಡೆದಿದೆ.

    ಘಟನಾಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಾರವಾರ | ನಿಂತಿದ್ದ ಲಾರಿಗೆ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ – 3 ಸಾವು, 7 ಜನರ ಸ್ಥಿತಿ ಗಂಭೀರ

    ಕಾರವಾರ | ನಿಂತಿದ್ದ ಲಾರಿಗೆ ಕೆಎಸ್‍ಆರ್‌ಟಿಸಿ ಬಸ್ ಡಿಕ್ಕಿ – 3 ಸಾವು, 7 ಜನರ ಸ್ಥಿತಿ ಗಂಭೀರ

    ಕಾರವಾರ: ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕೆಎಸ್‍ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ (Accident) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲ್ಲಾಪುರದ ಮಾವಳ್ಳಿ ಕ್ರಾಸ್ ಬಳಿ ಶುಕ್ರವಾರ (ಆ.15) ಮಧ್ಯರಾತ್ರಿ ನಡೆದಿದೆ. ಅಪಘಾತದಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತರನ್ನು ಬಾಗಲಕೋಟೆ (Bagalkote) ಮೂಲದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವಾ ಬೂದನ್ನವರ (30) ಎಂದು ಗುರುತಿಸಲಾಗಿದೆ. ಮತ್ತೊಬ್ಬ 45 ವರ್ಷದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. 7 ಹಾಗೂ 12 ವರ್ಷದ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    ಬಾಗಲಕೋಟೆಯಿಂದ ಮಂಗಳೂರು ಕಡೆ ಹೊಗುತ್ತಿದ್ದ ಬಸ್, ಮಾವಳ್ಳಿ ಕ್ರಾಸ್ ಬಳಿ ಇಂಡಿಕೇಟರ್ ಹಾಕದೇ ನಿಲ್ಲಿಸಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿಯಾಗಿದೆ. ವೇಗವಾಗಿ ಗುದ್ದಿದ ಪರಿಣಾಮ ಬಸ್ ಒಂದು ಬದಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇನ್ನೂ ಓವರ್‌ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

    ಮೃತರು ಕೆಲಸದ ನಿಮಿತ್ತ ಬಾಗಲಕೊಟೆಯಿಂದ ಮಂಗಳೂರು ಕಡೆಗೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಬಸ್ ಚಾಲಕ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಯಲ್ಲಾಪುರ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಬಸ್ ಚಾಲಕ ಯಮನಪ್ಪ ಮಾಗಿ ಮೇಲೆ ಪ್ರಕರಣ ದಾಖಲಾಗಿದೆ.‌ ಇದನ್ನೂ ಓದಿ: ಹುಮಾಯೂನ್ ಸಮಾಧಿ ಬಳಿಯ ಮಸೀದಿಯ ಮೇಲ್ಛಾವಣಿ ಕುಸಿದು ಐವರು ಸಾವು

  • ದಾವಣಗೆರೆ | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಆರ್‌ಟಿಓ ಅಧೀಕ್ಷಕ ಸಾವು

    ದಾವಣಗೆರೆ | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ಆರ್‌ಟಿಓ ಅಧೀಕ್ಷಕ ಸಾವು

    ದಾವಣಗೆರೆ: ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಆರ್‌ಟಿಓ ಅಧೀಕ್ಷಕ ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ (Davanagere) ನಗರದ ರಿಂಗ್ ರೋಡ್‌ನ ನವೋದಯ ಶಾಲೆ ಎದುರು ನಡೆದಿದೆ.

    ಆರ್‌ಟಿಓ ಕಚೇರಿಯ ಅಧೀಕ್ಷಕರಾಗಿದ್ದ ತಿಪ್ಪೇಸ್ವಾಮಿ (43) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹೆಂಡತಿಗಾಗಿ ಕಳ್ಳ ಪೊಲೀಸ್ ಆದ, ಕಾನ್‌ಸ್ಟೇಬಲ್ ಸಸ್ಪೆಂಡ್‌ ಆದ!

    ನಗರದ ರಿಂಗ್ ರೋಡ್ ಬಳಿ ತಿಪ್ಪೇಸ್ವಾಮಿ ಅವರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ತಿಪ್ಪೇಸ್ವಾಮಿ ಅವರು ರಸ್ತೆಗೆ ಬಿದ್ದಿದ್ದರು. ಅವರು ಹೆಲ್ಮೆಟ್ ಧರಿಸಿದ್ದರೂ ಬಸ್‌ನ ಟೈಯರ್ ಅವರ ತಲೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Dharmasthala‌ Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ

    ಮೂಲತ: ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿ ಶಿವಣಿ ನಿವಾಸಿಯಾಗಿದ್ದ ತಿಪ್ಪೇಸ್ವಾಮಿ ಅವರು ದಾವಣಗೆರೆಯಲ್ಲಿ ಆರ್‌ಟಿಓ ಕಚೇರಿಯ ಅಧೀಕ್ಷಕರಾಗಿದ್ದರು.

    ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ನಗರ ಡಿವೈಎಸ್ಪಿ ಶರಣಬಸವೇಶ್ವರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • KSRTC ಬಸ್, ಕಾರು ಮುಖಾಮುಖಿ ಡಿಕ್ಕಿ – ಚಾಲಕ ಸಾವು, ಓರ್ವ ಗಂಭೀರ

    KSRTC ಬಸ್, ಕಾರು ಮುಖಾಮುಖಿ ಡಿಕ್ಕಿ – ಚಾಲಕ ಸಾವು, ಓರ್ವ ಗಂಭೀರ

    ಮೈಸೂರು: ಕೆಎಸ್‌ಆರ್‌ಟಿಸಿ ಬಸ್ (KSRTC Bus) ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮೈಸೂರು (Mysuru) ಜಿಲ್ಲೆ ಕೆ.ಆರ್ ನಗರ (KR Nagar) ತಾಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ.

    ಅಪಘಾತದಲ್ಲಿ ಕಾರು ಚಾಲಕ ಮೈಸೂರಿನ ಕನಕದಾಸನಗರ ನಿವಾಸಿ ಸುನೀಲ್ (34) ಮೃತಪಟ್ಟಿದ್ದು, ರಮೇಶ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಯಾದ ಸುನೀಲ್ ತಮ್ಮ ಕಾರಿನಲ್ಲಿ ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದರು. ಬಸ್ ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಅಧ್ಯಕ್ಷನಾಗಿ ರೌಡಿಶೀಟರ್ ನೇಮಕ – ನಾನು ಶಿಫಾರಸು ಪತ್ರ ಕೊಟ್ಟಿಲ್ಲ: ದಿನೇಶ್ ಗುಂಡೂರಾವ್

    ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ ಗಾಯಗಳಾಗಿವೆ. ಕಾರಿನಲ್ಲಿದ್ದ ಉಳಿದವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಸಮಗ್ರ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಥಾಪನೆ: ದಿನೇಶ್ ಗುಂಡೂರಾವ್

  • ನೆಲಮಂಗಲ | ಆಟೋಗೆ KSRTC ಬಸ್ ಡಿಕ್ಕಿ – ಮೂವರು ಸಾವು

    ನೆಲಮಂಗಲ | ಆಟೋಗೆ KSRTC ಬಸ್ ಡಿಕ್ಕಿ – ಮೂವರು ಸಾವು

    ನೆಲಮಂಗಲ: ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ (KSRTC) ಆಟೋಗೆ (Auto) ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಬಳಿ ನಡೆದಿದೆ.

    ಹಾಸನ – ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಶಾಂತಿನಗರ ಗ್ರಾಮದ ಶ್ರೀನಿವಾಸ್ ಹಾಗೂ ಪುಟ್ಟಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 13 ವರ್ಷದ ವರ್ಷಿಣಿ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಲೇಖನ ಎಂಬ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ನಾಗರತ್ನಮ್ಮ ಹಾಗೂ ವೆಂಕಟೇಶ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬರೀ ಭಾಷಣ ಮಾಡ್ಕೊಂಡು ಕೂತ್ರೆ ಆಗಲ್ಲ, ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡ್ಬೇಕು: ಖರ್ಗೆ

    ಬೆಂಗಳೂರು ಮಾರ್ಗದಲ್ಲಿ ಹೊರನಾಡಿಗೆ ಸಂಚರಿಸುತ್ತಿದ್ದ ಬಸ್ ನೆಲಮಂಗಲ ಬಳಿ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತ ಶ್ರೀನಿವಾಸ್ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ನೌಕರನಾಗಿದ್ದು, ವಾಟರ್ ಮೆನ್ ಕೆಲಸ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಆಟೋ ಓಡಿಸುತ್ತಿದ್ದರು. ಇದನ್ನೂ ಓದಿ: ಜಲ ಮಾರ್ಗ ಬಂದ್ – ಪಾಕ್‌ಗೆ ಹೋಗುವ, ಬರುವ ಹಡಗುಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಭಾರತ

    ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಟ್ರಾಫಿಕ್ ಪೊಲೀಸರು ಹರಸಾಹಸಪಟ್ಟರು. ಮೃತರು ಶಾಂತಿನಗರದಿಂದ ನೆಲಮಂಗಲ ನಗರಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಒಂದೇ ಕುಟುಂಬಕ್ಕೆ ಸೇರಿದ ಆರು ಜನ ಈ ಆಟೋದಲ್ಲಿ ಸಂಚಾರ ಮಾಡುತ್ತಿದ್ದರು. ಬಸ್ ಚಾಲಕನ ವೇಗದ ಅಜಾಗರೂಕ ಚಾಲನೆಯಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: Mangaluru | ಕರಾವಳಿಯಲ್ಲಿ ನಿಲ್ಲದ ಪ್ರತೀಕಾರದ ಹತ್ಯೆ