Tag: KSOU

  • ಮುಕ್ತ ವಿವಿಯಲ್ಲಿ 250 ಕೋಟಿ ಅಕ್ರಮ – ಎಫ್‌ಐಆರ್‌ ದಾಖಲಿಸಿದ ಸಿಬಿಐ

    ಮುಕ್ತ ವಿವಿಯಲ್ಲಿ 250 ಕೋಟಿ ಅಕ್ರಮ – ಎಫ್‌ಐಆರ್‌ ದಾಖಲಿಸಿದ ಸಿಬಿಐ

    ನವದೆಹಲಿ/ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಸುಮಾರು 300 ಕೋಟಿ ರೂ. ನಿಧಿಯನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಅಪರಿಚಿತ ಅಧಿಕಾರಿಗಳ ವಿರುದ್ಧಎಫ್‌ಐಆರ್‌ ದಾಖಲಿಸಿದೆ.

    ಕೆಎಸ್‌ಒಯು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ 2009-10 ರಿಂದ 2012-13 ರ ನಡುವೆ 250 ಕೋಟಿ ರೂ., 2013-14 ರಲ್ಲಿ 50 ಕೋಟಿ ರೂ. ಅಕ್ರಮ ಎಸಗಿರುವುದು ಲೆಕ್ಕ ಪರಿಶೋಧನೆ ವೇಳೆ ಬೆಳಕಿಗೆ ಬಂದಿತ್ತು.

    ಸಹಭಾಗಿತ್ವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ, ಅಧ್ಯಯನ ಕೇಂದ್ರ ಸ್ಥಾಪನೆ ಹಾಗೂ ಇತರ ಶುಲ್ಕವಾಗಿ ಹಣವನ್ನು ಸಂಗ್ರಹಿಸಿವೆ. ಈ ಮೊತ್ತವನ್ನು ಸಂಸ್ಥೆಗಳು ವಿವಿಗೆ ಜಮೆ ಮಾಡಬೇಕಿತ್ತು. ಆದರೆ ಕೆಲವು ಸಂಸ್ಥೆಗಳು ಜಮೆ ಮಾಡುವ ಹಣದಲ್ಲಿ ವ್ಯತ್ಯಾಸ ಮಾಡಿದ್ದ ವಿಚಾರ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ದರ್ಶನ್ ಜೊತೆಗಿನ ಮನಸ್ತಾಪ: ಅವರಿಗೆ ಒಂದಷ್ಟು ಪ್ರಶ್ನೆ ಕೇಳಿಬೇಕಿದೆ ಎಂದ ಧ್ರುವ

    ಭಾರೀ ಮೊತ್ತ ತಾಳೆಯಾಗದ ಕಾರಣ 2022ರ ಫೆಬ್ರವರಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರ ಪತ್ರ ಹಾಗೂ ವಿವಿಯ ಆಡಳಿತ ಮಂಡಳಿಯ ಸಭೆಯ ನಿರ್ಣಯ ಆಧರಿಸಿ ರಾಜ್ಯಪಾಲರು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರವು ಈ ವರ್ಷ ಮಾರ್ಚ್‌ 13ರಂದು ಸಿಬಿಐ ತನಿಖೆಗೆ ಆದೇಶಿಸಿತ್ತು. ಅಷ್ಟೇ ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು, ಲೆಕ್ಕಪರಿಶೋಧಕರು, ಬ್ಯಾಂಕುಗಳು ಸಿಬಿಐಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. 2009 ರಿಂದ 2016ರ ನಡುವಿನ ವ್ಯವಹಾರ ತನಿಖೆ ನಡೆಸುವಂತೆ ಕೋರಿ ಸಿಬಿಐಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KSOU ಕರ್ಮಕಾಂಡ: 500 ಸಿಬ್ಬಂದಿ ಜಾಗಕ್ಕೆ 1,300 ಸಿಬ್ಬಂದಿ ನೇಮಕ; ಆದಾಯ 86 ಕೋಟಿ, ಖರ್ಚು 263 ಕೋಟಿ

    KSOU ಕರ್ಮಕಾಂಡ: 500 ಸಿಬ್ಬಂದಿ ಜಾಗಕ್ಕೆ 1,300 ಸಿಬ್ಬಂದಿ ನೇಮಕ; ಆದಾಯ 86 ಕೋಟಿ, ಖರ್ಚು 263 ಕೋಟಿ

    ಮೈಸೂರು: ಇನ್ನೆರೆಡು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಚ್ಚಿ ಹೋಗಲಿದೆಯೇ? ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ ವಿಶ್ವವಿದ್ಯಾಲಯದ 2023-24ರ ಆಯವ್ಯಯ.

    ಹೌದು. ವಿಶ್ವವಿದ್ಯಾಲಯಕ್ಕೆ ಇರುವುದು 86 ಕೋಟಿ ಆದಾಯ. ಆದ್ರೆ ವಿವಿ ಖರ್ಚು ಮಾಡುತ್ತಿರುವುದು 263 ಕೋಟಿ ರೂ. ಹೆಚ್ಚುವರಿಯಾಗಿ 177 ಕೋಟಿ ಖರ್ಚು ಮಾಡಿದೆ. ಸರ್ಕಾರದಿಂದ ವಿವಿಗೆ ಒಂದು ಪೈಸೆ ಅನುದಾನವೂ ಬರುವುದಿಲ್ಲ. ಆದ್ರೂ ಖರ್ಚು ಮಾತ್ರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಿದೆ. ಇದನ್ನೂ  ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

    ವಿವಿಯ ಖಾತೆಯಲ್ಲಿನ ಡೆಪಾಸಿಟ್ ಹಣವನ್ನೇ ತೆಗೆದು ಖರ್ಚು ಮಾಡಲು ವಿವಿಯ ಕುಲಪತಿ ಮುಂದಾಗಿದ್ದಾರೆ. ಇದೇ ರೀತಿ 2-3 ವರ್ಷ ಹಣ ವ್ಯಯ ಮಾಡಿದ್ರೆ ಸಂಪೂರ್ಣ ಹಣ ಬರಿದಾಗಲಿದೆ. ಈ ರೀತಿ ಹಣ ಬರಿದಾದ್ರೆ ವಿವಿಯ ನೌಕರರಿಗೂ ವೇತನ ನೀಡುವುದಕ್ಕೂ ಸಮಸ್ಯೆಯಾಗುವ ಸ್ಥಿತಿ ಎದುರಾಗಲಿದೆ. ಇದನ್ನೂ  ಓದಿ: ತಮಿಳುನಾಡಿಗೆ ಕಾವೇರಿ ನೀರು; ಇಂದು ಕೆಆರ್‌ಎಸ್ ಡ್ಯಾಂ ಮುತ್ತಿಗೆಗೆ ಅನ್ನದಾತರ ಕರೆ

    ರಾಜ್ಯ ಮುಕ್ತ ವಿವಿಯಲ್ಲಿ ಯುಜಿಸಿ ಹಾಗೂ ಸರ್ಕಾರದ ನಿಯಮಗಳಿಗೆ ಎಳ್ಳಷ್ಟು ಬೆಲೆಯೇ ಇಲ್ಲ. ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮ ನೇಮಕಾತಿಯೂ ನಡೆದಿದೆ. ನಿಯಮಗಳ ಪ್ರಕಾರ 500 ಬೋಧಕೇತರ ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದರೆ ಮುಕ್ತ ವಿವಿಯಲ್ಲಿ 1,300ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ವಿವಿಯ ಅಕ್ರಮದ ವಿರುದ್ಧ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಹೆಚ್.ಕೆ ಜಗದೀಶ್ ಬಾಬು ಈ ಮಾಹಿತಿ ನೀಡಿದ್ದಾರೆ.

    ಅಲ್ಲದೇ ಕಳೆದ ಮಾರ್ಚ್ ತಿಂಗಳಿನಲ್ಲಿ ಬಳ್ಳಾರಿಯ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಪುಸ್ತಕ ಇಟ್ಟುಕೊಂಡೇ ಪರೀಕ್ಷೆ ಬರೆದಿದ್ದಾರೆ. ಇದರಿಂದ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನವಿದೆ. ಇದನ್ನ ನಮ್ಮಲ್ಲೇ ತನಿಖೆ ಮಾಡಿ ಮುಚ್ಚಿಹಾಕುವುದು ಬೇಡ. ಈ ಹಿಂದೆಯೂ ಒಂದು ಕೆಎಸ್‌ಒಯು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಲಾಗಿದೆ. ಅದೇ ರೀತಿ ಈ ಪ್ರಕರಣವನ್ನೂ ಉನ್ನತಮಟ್ಟದ ತನಿಖೆಗೆ ನೀಡಬೇಕು ಎಂದು ಜಗದೀಶ್ ಬಾಬು ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೆಎಸ್ಒಯುಗೆ ಸಿಕ್ತು ಯುಜಿಸಿ ಮಾನ್ಯತೆ!

    ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೆಎಸ್ಒಯುಗೆ ಸಿಕ್ತು ಯುಜಿಸಿ ಮಾನ್ಯತೆ!

    ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮತ್ತೆ ಮಾನ್ಯತೆ ನೀಡಿದೆ.

    ಹೌದು. ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡಲು ಒಪ್ಪಿದ್ದು, ಈ ಸಂಬಂಧ ಆಗಸ್ಟ್ 10ರೊಳಗಾಗಿ ಆದೇಶ ನೀಡಲಿದೆ ಎಂದು ತಿಳಿದು ಬಂದಿದೆ.

    ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದು ಮಾಡಿದ್ದ ಹಿನ್ನೆಲೆಯಲ್ಲಿ, ಇಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದಗೌಡರು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಕೆಎಸ್‍ಓಯುನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು.

    ಕೇಂದ್ರ ಸಚಿವ ಸದಾನಂದಗೌಡ ಮನವಿಗೆ ಸ್ಪಂದಿಸಿದ ಮಾನವ ಸಂಪನ್ಮೂಲ ಇಲಾಖೆಯು ಕೆಎಸ್‍ಓಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ್ದು, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಯುಜಿಸಿ ಮಾನ್ಯತೆಯನ್ನು ನೀಡುವಂತೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಯುಜಿಸಿ ಗೆ ಕಡತ ರವಾನಿಸಿದೆ.

    ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರಕಾರವು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಬರೆದು ಡಿವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

    https://www.youtube.com/watch?v=CAKZXF9tw0w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews