Tag: Kshatriya

  • ಕ್ಷತ್ರಿಯ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತೇವೆ: ಸಿಎಂ ಭರವಸೆ

    ಕ್ಷತ್ರಿಯ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತೇವೆ: ಸಿಎಂ ಭರವಸೆ

    ಬೆಂಗಳೂರು: ಕ್ಷತ್ರಿಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿಂದು ಬೃಹತ್ ಕ್ಷತ್ರಿಯ ಸಮಾವೇಶ (Karnataka Kshatriya Samavesha) ನಡೆಯಿತು. ಸಮಾವೇಶದಲ್ಲಿ ಕ್ಷತ್ರಿಯ ಸಮುದಾಯದ ಎಲ್ಲ 38 ಪಂಗಡಗಳು ಒಟ್ಟಾಗಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದವು.

    ನಗರದ ಅರಮನೆ ಮೈದಾನದಲ್ಲಿ ರಾಜ್ಯ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ (Uday Singh) ನೇತೃತ್ವದಲ್ಲಿ ಕ್ಷತ್ರಿಯ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ (CM Basavaraj Bommai) ಚಾಲನೆ ಕೊಟ್ಟರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಸದ ಪಿಸಿ ಮೋಹನ್, ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್ ಸೇರಿ ಸಮುದಾಯದ ಮಠಾಧೀಶರು, ಪ್ರಮುಖರು ಭಾಗವಹಿಸಿದ್ದರು. ಸಮಾವೇಶದಲ್ಲಿ ರಾಜಕೀಯ ಪ್ರಾತಿನಿಧ್ಯ ಸಿಗದಿದ್ದರೆ, ಒಗ್ಗಟ್ಟಾಗಿ ಹೋರಾಟದ ಸುಳಿವು ಕೊಡಲಾಯಿತು.

    ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಗೆ ಸಮುದಾಯದ ಬೇಡಿಕೆಗಳ ಪಟ್ಟಿ ಕೊಡಲಾಯಿತು. ಬಳಿಕ ಮಾತಾಡಿದ ಸಿಎಂ ಬೊಮ್ಮಾಯಿ ಕ್ಷತ್ರಿಯ ಸಮುದಾಯದ ಅವಿರತ ದೇಶ ಸೇವೆ ಬಗ್ಗೆ ಮೆಚ್ಚುಗೆಯ ಮಾತಾಡಿದರು. ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಸಿಎಂ ಭರವಸೆ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ 150 ಸ್ಥಾನ ಗೆದ್ದು BJP ಅಧಿಕಾರಕ್ಕೆ ಬರೋದು ಖಚಿತ – ಅರುಣ್ ಸಿಂಗ್ ವಿಶ್ವಾಸ

    ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಎಲ್ಲ ಬೇಡಿಕೆಗಳನ್ನೂ ಈಡೇರಿಸುವಲ್ಲಿ ಸಮುದಾಯ ಮತ್ತು ಸರ್ಕಾರ ನಡುವೆ ದೂತನಾಗಿ ಇರುತ್ತೇನೆ ಎಂದು ಭರವಸೆ ನೀಡಿದರು..

    ಬೆಂಗಳೂರು ನಗರದಲ್ಲಿ ಶೇ. 25 ರಷ್ಟು ಕ್ಷತ್ರಿಯ ಸಮುದಾಯದವರಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಕನಿಷ್ಠ 20 ರಿಂದ 25 ಸಾವಿರ ಕ್ಷತ್ರಿಯ ಸಮುದಾಯದವರು ಇದ್ದಾರೆ. ಸುಮಾರು 150 ವಿಧಾನಸಭಾ ಕ್ಷೇತ್ರಗಳಲ್ಲಿ ಸಮುದಾಯದ ಪ್ರಾಬಲ್ಯ ಇದೆ. ಆದ್ದರಿಂದ ಈ ಬಾರಿ ನಮಗೆ ಪ್ರಾತಿನಿಧ್ಯ ನೀಡಿ ಎನ್ನುವ ಸಂದೇಶವನ್ನು ಸಮಾವೇಶದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಕ್ಷತ್ರಿಯ ಸಮುದಾಯ ರವಾನಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ಕ್ಷತ್ರಿಯ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಅಭಿಮಾನಿಗಳಿಗೆ ಎರಡು ಸರ್ಪ್ರೈಸ್ ವಿಚಾರಗಳಿವೆ.

    ಅನಿಲ್ ಮಂಡ್ಯ ನಿರ್ದೇಶನದ ಮತ್ತು ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯದ ಟೀಸರ್ ಅನ್ನು ಚಿರು ಹುಟ್ಟುಹಬ್ಬವಾದ ಇಂದು ಬಿಡುಗಡೆ ಮಾಡಲಾಗಿದೆ. ಈ ಟೀಸರಿನಲ್ಲಿ ಚಿರು ಹುಟ್ಟುಹಬ್ಬ ಆಚರಿಸಿಕೊಂಡಿರುವ, ಮತ್ತು ಮಗುವನ್ನು ಅಪ್ಪಿ ಮುದ್ದಾಡುವ ಎರಡು ಮನಕಲಕುವ ದೃಶ್ಯಗಳನ್ನು ನಾವು ಕಾಣಬಹುದು. ಇದನ್ನು ಓದಿ: ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ – ಮೇಘನಾ ವೀಡಿಯೋ

    ರೀಯಲ್ ಲೈಫ್‍ನಲ್ಲಿ ಅನುಭವಿಸಲಾಗದ್ದನ್ನು ಚಿರು ತಮ್ಮ ಅಭಿನಯದ ಕೊನೆಯ ಸಿನಿಮಾದಲ್ಲಿ ರೀಲ್‍ನಲ್ಲಿ ಅನುಭವಿಸಿದ್ದಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಲು ಅವರು ಇಲ್ಲ. ಆದರೆ ಸಿನಿಮಾದಲ್ಲಿ ಚಿರು ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿ ಸಂಭ್ರಮಿಸಿದ್ದಾರೆ. ಚಿರು ಪತ್ನಿ ಮೇಘನಾ ತುಂಬು ಗರ್ಭಿಣಿ ಮಗುವನ್ನು ಹೆತ್ತಿ ಆಡಸಬೇಕಾದ ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಸಿನಿಮಾದ ದೃಶ್ಯದಲ್ಲಿ ಅವರು ಮಗುವನ್ನು ಹೆತ್ತಿ ಆಡಿಸಿದ್ದಾರೆ. ಈ ಎರಡು ದೃಶ್ಯಗಳು ನೋಡುಗರಿಗೆ ಕಣ್ಣೀರು ತರಿಸುತ್ತವೆ. ಇದನ್ನು ಓದಿ: ಹಳೆಯ ಫೋಟೋ ಹಂಚಿಕೊಂಡು ಅಣ್ಣನಿಗೆ ಧ್ರುವ ವಿಶ್

    ಈ ಬಾರಿ ಚಿರುವಿಲ್ಲದೇ ಅವರ ಅಭಿಮಾನಿಗಳು ಮೊದಲ ವರ್ಷದ ಹುಟ್ಟಹಬ್ಬ ಆಚರಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ (39) ಅವರು ಜೂನ್ 7ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಜೂನ್ 6ರ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಜೂನ್ 7ರಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ: ಅವಳಿ ಮಕ್ಕಳು ಆದ್ರೂ ಆಗ್ಬೋದು: ನಸುನಕ್ಕ ಮೇಘನಾ

    ಇಂದು ಬೆಳಗ್ಗೆ ಧ್ರುವ ಹಾಗೂ ಮೇಘನಾ ಸಹ ಫೋಟೋ ಹಾಕಿ ಚಿರು ಹಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.

  • ಅಣ್ಣ ಚಿರು ಅಭಿನಯದ ‘ಕ್ಷತ್ರಿಯ’ನಿಗೆ ತಮ್ಮ ಧೃವ ಸರ್ಜಾ ಚಾಲನೆ

    ಅಣ್ಣ ಚಿರು ಅಭಿನಯದ ‘ಕ್ಷತ್ರಿಯ’ನಿಗೆ ತಮ್ಮ ಧೃವ ಸರ್ಜಾ ಚಾಲನೆ

    ಬೆಂಗಳೂರು: ಚಿರಂಜೀವಿ ಸರ್ಜಾ ನಟನೆಯಲ್ಲಿ ಮೂಡಿಬರುತ್ತಿರುವ `ಕ್ಷತ್ರಿಯ’ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರಂನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಅಣ್ಣ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ಸಹೋದರ ಧುವ ಸರ್ಜಾ ಕ್ಲಾಪ್ ಮಾಡಿದರೆ, ನಿರ್ದೇಶಕ ಸಂತೋಷ್ ಆನಂದರಾಮ್ ಕ್ಯಾಮೆರಾ ಚಾಲನೆ ಮಾಡಿದರು. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ಚಿರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ನಿರ್ದೇಶಕ ಅನಿಲ್ ಮಂಡ್ಯ ಒಂದು ಲೈನ್ ಹೇಳುತ್ತಿದ್ದಂತೇ ತಕ್ಷಣ ಅವರನ್ನು ಕರೆಸಿಕೊಂಡು ಪೂರ್ತಿ ಕತೆ ಕೇಳಿದೆ. ಅದ್ಭುತವಾದ ಕಥೆ ಇರುವ ಕಾರಣಕ್ಕೆ ತಕ್ಷಣ ಈ ಸಿನಿಮಾದಲ್ಲಿ ನಟಿಸಲೇ ಬೇಕು ಎಂದು ಒಪ್ಪಿಕೊಂಡೆ. ಈ ಸಿನಿಮಾಗಾಗಿ ಅನಿಲ್ ಮಾಡಿಕೊಂಡಿರುವ ತಯಾರಿ ಕೂಡಾ ಅಷ್ಟೇ ಅಚ್ಚುಕಟ್ಟಾಗಿದೆ. ಈಗಾಗಲೇ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದಿರುವ ಅನಿಲ್ ಚಿತ್ರಕತೆಯನ್ನು ಕೂಡಾ ತೀರಾ ವಿಶೇಷವೆನ್ನುವಂತೆ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಭರ್ಜರಿ ಚೇತನ್ ಅವರು ಸಂಭಾಷಣೆ ರಚಿಸುತ್ತಿದ್ದಾರೆ. ನಾನು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಕ್ಷತ್ರಿಯ ಸಿನಿಮಾ ಬೇರೆಯದ್ದೇ ರೀತಿಯಲ್ಲಿ ಮೂಡಿಬರಲಿದೆ ಎಂದು ಚಿರಂಜೀವಿ ಸರ್ಜಾ ವಿಶ್ವಾಸ ವ್ಯಕ್ತಪಡಿಸಿದರು.

    ಮತ್ತೊಂದು ವಿಶೇಷವೆಂದರೆ ಈ ನಿರ್ಮಾಪಕರು ನನಗೆ ಬಹಳ ಆತ್ಮೀಯವಾಗಿರುವವರು. ಈಗಾಗಲೇ ಇದೇ ಬ್ಯಾನರಿನಲ್ಲಿ ನಾನು ಸಂಹಾರ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನಗೆ ಇದು ಒಂಥರಾ ಹೋಂ ಬ್ಯಾನರ್ ಇದ್ದಂತೆ. ಅಕ್ಕ ತಮ್ಮನ ನಡುವಿನ ಬಾಂಧವ್ಯದ ಕತೆ ಕೂಡಾ ಇದರಲ್ಲಿ ಸಮ್ಮಿಳಿತಗೊಂಡಿದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥಾವಸ್ತು ಈ ಚಿತ್ರದಲ್ಲಿರುವುದರಿಂದ ಪ್ರೇಕ್ಷಕರು ಕೂಡಾ ಇಲ್ಲಿನ ಪಾತ್ರಗಳೊಂದಿಗೆ ಕನೆಕ್ಟ್ ಆಗಿಬಿಡುತ್ತಾರೆ. ತೀರಾ ಜವಾಬ್ದಾರಿಯುತ ಅಕ್ಕನಿಗೆ ಒಬ್ಬ ತರ್ಲೆ ತಮ್ಮ ಇದ್ದರೆ ಹೇಗಿರುತ್ತದೆ, ನಂತರ ಆತ ಸಮಾಜದ ಒಳಿತಿಗಾಗಿ ಶ್ರಮಿಸುವಂತವನಾದರೆ ಹೇಗಿರುತ್ತದೆ ಅನ್ನೋದರ ಎಳೆ ಈ ಸಿನಿಮಾದಲ್ಲಿದೆ ಎಂದು ನಾಯಕನಟ ಚಿರಂಜೀವಿ ಸರ್ಜಾ ಹೇಳಿದರು.

    ಕನ್ನಡ ಚಿತ್ರರಂಗದ ಸಾಕಷ್ಟು ಸ್ಟಾರ್ ಡೈರೆಕ್ಟರುಗಳ ಜೊತೆಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ವಾಸು, ದಿನಕರ್ ತೂಗುದೀಪ, ತರುಣ್ ಸುಧೀರ್, ಮುಂಗಾರುಮಳೆ ಕೃಷ್ಣ ಮತ್ತು ಸಂತೋಷ್ ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವರು. ಈಗ ಚಿರು ಹೀರೋ ಆಗಿರುವ ಕ್ಷತ್ರಿಯ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

    ನಾಯಕನಟನನ್ನು ಕೇಂದ್ರೀಕರಿಸಿಕೊಂಡು ಬರೆದಿರುವ ಈ ಕಥೆಯ ಮೊದಲಾರ್ಧದಲ್ಲಿ ಸೆಂಟಿಮೆಂಟ್ ಕಥಾವಸ್ತುವಿದ್ದರೆ, ದ್ವಿತೀಯಾರ್ಧದಲ್ಲಿ ಪಕ್ಕಾ ಕಮರ್ಷಿಯಲ್ ಅಂಶಗಳಿಂದ ಒಳಗೊಂಡಿದೆ. ಬೆಂಗಳೂರು, ಮೈಸೂರು, ಬಾಂಬೆ ಸೇರಿದಂತೆ ಹಲವು ಲೊಕೇಶನ್ನುಗಳಲ್ಲಿ ಸರಿಸುಮಾರು ಐವತ್ತೈದು ದಿನಗಳ ಶೂಟಿಂಗ್ ಪ್ಲಾನ್ ಹಾಕಿಕೊಂಡಿದ್ದೇವೆ. ನಾಯಕಿಯ ಪಾತ್ರಕ್ಕಾಗಿ ಮಾತುಕತೆ ನಡೆಯುತ್ತಿದ್ದು ಇನ್ನೂ ಅಂತಿಮವಾಗಿಲ್ಲ. ದೇವರಾಜ್, ಸುಧಾರಾಣಿ, ಸಾಧುಕೋಕಿಲಾ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಈವರೆಗೂ ಕನ್ನಡಕ್ಕೆ ಬಂದಿರದ ಬಾಂಬೆಯ ಹೆಸರಾಂತ ವಿಲನ್ ಒಬ್ಬರು ಕೂಡಾ `ಕ್ಷತ್ರಿಯ’ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ. ನನ್ನ ಹೆಸರಲ್ಲೇ ಮಂಡ್ಯದ ಹೆಸರಿದೆ. ಇಂದು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ದಿನದಂದೇ ನನ್ನ ನಿರ್ದೇಶನದ ಮೊದಲ ಚಿತ್ರ ಮುಹೂರ್ತ ಆಚರಿಸಿಕೊಂಡಿರುವುದು ನನ್ನ ಪಾಲಿನ ಅದೃಷ್ಟ ಎಂದೇ ಭಾವಿಸಿದ್ದೇನೆ ಎಂದು ನಿರ್ದೇಶಕ ಅನಿಲ್ ಮಂಡ್ಯ ತಿಳಿಸಿದರು.

    ಅನಿಲ್ ಸಿದ್ಧಪಡಿಸಿಕೊಂಡಿದ್ದ ಸಬ್ಜೆಕ್ಟಿಗೆ ಹೊಂದುವ ಶೀರ್ಷಿಕೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಕ್ಷತ್ರಿಯ ಎನ್ನುವ ಟೈಟಲ್ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದರೂ ಅದು ಮತ್ತೊಬ್ಬ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಬಳಿ ಇತ್ತು. ನಿರ್ಮಾಪಕ ಜಯಣ್ಣ ಅನಿಲ್ ಅವರಿಗೆ ಆತ್ಮೀಯರಾಗಿದ್ದು ಕ್ಷತ್ರಿಯ ಟೈಟಲ್ ಬೇಕು ಎಂದು ವಿನಂತಿಸಿದ್ದರು. ಜಯಣ್ಣ ಒಂದು ಮಾತು ಕೇಳುತ್ತಿದ್ದಂತೇ ಕೆ.ಪಿ. ಶ್ರೀಕಾಂತ್ ಪ್ರೀತಿಯಿಂದಲೇ ಶೀರ್ಷಿಕೆ ನೀಡಿದ್ದಾರೆ. ನಮಗಾಗಿ ತಮ್ಮ ಬ್ಯಾನರಿನಲ್ಲಿದ್ದ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿರುವ ಶ್ರೀಕಾಂತ್ ಅವರ ಸಿನಿಮಾ ಪ್ರೀತಿ ಮತ್ತು ಜಯಣ್ಣ ಅವರ ಮಾತಿನ ಮೇಲೆ ಅವರಿಟ್ಟಿರುವ ಗೌರವ ನಿಜಕ್ಕೂ ದೊಡ್ಡದು ಎನ್ನುವುದು ನಿರ್ಮಾಪಕ ಎ.ವೆಂಕಟೇಶ್ ಅವರ ಮಾತಾಗಿತ್ತು.

    ಅಂದಹಾಗೆ ಕ್ಷತ್ರಿಯ ಸಿನಿಮಾವನ್ನು ಈ ಹಿಂದೆ ಇದೇ ಚಿರು ನಟನೆಯ ಸಂಹಾರ ಚಿತ್ರವನ್ನು ನಿರ್ಮಿಸಿದ್ದ ವೈಷ್ಣವಿ ಮನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎ.ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ.ವಿ.ಮನೀಶ್ ಮತ್ತು ಎಂ.ಜೆ. ವಿಷ್ಣುವರ್ಧನ್ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮವಿಶ್ ಸಂಗೀತಲ್ಲಿ ಐದು ಹಾಡುಗಳು ಮೂಡಿಬರುತ್ತಿದ್ದು ಯೋಗರಾಜ್ ಭಟ್, ಡಾ. ವಿ ನಾಗೇಂದ್ರ ಪ್ರಸಾದ್ ಮುಂತಾದವರು ಸಾಹಿತ್ಯ ರಚಿಸುತ್ತಿದ್ದಾರೆ. ಡಾ. ಕೆ. ರವಿವರ್ಮ ಸಾಹಸವಿರುವ ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಕುಮಾರ್ ಸಂಭಾಷಣೆ ರಚಿಸುತ್ತಿದ್ದಾರೆ. ರವಿ.ವಿ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

  • ಪದ್ಮಾವತಿ ಸಿನಿಮಾ ಬ್ಯಾನ್ ಮಾಡೋದು ಸೂಕ್ತ ಎಂದ ಬಿಜೆಪಿ

    ಪದ್ಮಾವತಿ ಸಿನಿಮಾ ಬ್ಯಾನ್ ಮಾಡೋದು ಸೂಕ್ತ ಎಂದ ಬಿಜೆಪಿ

    ಗಾಂಧಿನಗರ: ಭಾರತೀಯ ಸಿನಿಮಾ ಲೋಕದ ಬಹು ನಿರೀಕ್ಷಿತ ಚಿತ್ರ ಎಂದು ಹೇಳಲಾಗುವ `ಪದ್ಮಾವತಿ’ಯ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ಗುಜರಾತಿನ ಹಿರಿಯ ನಾಯಕ ಶಂಕರ್ ಸಿನ್ಹ ವಾಘೇಲಾ ಸಿನಿಮಾದ ವಿರುದ್ಧ ಹರಿಹಾಯ್ದಿದ್ದರು. ಆದರೆ ಇದೀಗ ಸ್ಥಳೀಯ ಬಿಜೆಪಿ ಸಿನಿಮಾವನ್ನು ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಅಥವಾ ಬ್ಯಾನ್ ಮಾಡವುದು ಸೂಕ್ತ ಎಂದು ತಿಳಿಸಿದೆ.

    ಬಿಡುಗಡೆಗೂ ಮುನ್ನ ನಮಗೆ ನಮಗೆ ಪ್ರತ್ಯೇಕವಾಗಿ ಸಿನಿಮಾ ತೋರಿಸಬೇಕು. ಇದರಿಂದ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ದೃಶ್ಯಗಳಿಲ್ಲ ಎಂಬುವುದು ಖಚಿತವಾಗುತ್ತದೆ. ಇದರಿಂದ ವಿಧಾನಸಭೆ ಕ್ಷೇತ್ರದ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಶಾಂತಿ ನೆಲಸುವಂತೆ ಆಗುತ್ತದೆ ಎಂದು ಸ್ಥಳೀಯ ರಜಪೂತ ನಾಯಕರು ಚುನಾವಣಾ ಆಯೋಗ ಮತ್ತು ಗುಜರಾತ ಚುನಾವಣಾ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ.

    ಪದ್ಮಾವತಿ ಸಿನಿಮಾವನ್ನು ಗುಜರಾತಿನಲ್ಲಿ ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಇಲ್ಲವೇ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡೋದು ಒಳ್ಳೆಯದು. ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಮುಖಂಡರು ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವುದರಿಂದ ಸಿನಿಮಾದಿಂದಾಗಿ ಗಲಾಟೆಗಳು ಉಂಟಾಗಬಹುದು. ಒಂದು ವೇಳೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಜನತೆಯ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ವಕ್ತಾರ ಜಡೇಜಾ ತಿಳಿಸಿದ್ದಾರೆ.

    ಇದನ್ನೂ ಓದಿ: ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್

    ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

    ಸಿನಿಮಾದಲ್ಲಿ ಯವುದೇ ರೀತಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟಣೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಎಲ್ಲರನ್ನು ಸೆಳೆಯಲಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಪದ್ಮಾವತಿ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

    ಗುಜರಾತ್ ನಲ್ಲಿ ಡಿಸೆಂಬರ್ 9ರಂದು ಮೊದಲ ಹಂತದ ಚುನಾವಣೆ ನಡೆದರೆ, ಡಿಸೆಂಬರ್ 18 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.