Tag: KSBCL

  • ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

    ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

    – ಅಬಕಾರಿ ಇಲಾಖೆಗೆ ಹರಿದು ಬಂತು ನೂರಾರು ಕೋಟಿ ರೂ. ಆದಾಯ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ.

    ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು. ಇದನ್ನೂ ಓದಿ: ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಕಳೆದ ವರ್ಷ 2023ರ ಡಿ.31 ರಂದು 193 ಕೋಟಿ ರೂಪಾಯಿ ಮದ್ಯ ಮಾರಾಟ ಆಗಿತ್ತು. ಈ ಬಾರಿ 2024 ಡಿ.31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.

    ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಹರಿದುಬಂದಿದೆ. ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯವಾಗಿದೆ. ಇದನ್ನೂ ಓದಿ: ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಎಸ್‌ಬಿಸಿಎಲ್‌ನಿಂದ ವ್ಯಾಪಾರ ಆಗಿರುವ ಮದ್ಯದ ಮಾಹಿತಿ ಇದಾಗಿದೆ. ಡಿ.27ರ ಶುಕ್ರವಾರದಂದು ಬರೋಬ್ಬರಿ 408.58 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಐಎಂಎಲ್- 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327.50 ಕೋಟಿ ರೂ. ಆದಾಯ ಬಂದಿತ್ತು. ಬಿಯರ್- 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80.58 ಕೋಟಿ ರೂ. ಆದಾಯ ಬಂದಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರೂ. ಆದಾಯವಾಗಿತ್ತು.

  • 3ನೇ ದಿನ ಬರೋಬ್ಬರಿ 230 ಕೋಟಿ ರೂ. ಮದ್ಯ ಮಾರಾಟ

    3ನೇ ದಿನ ಬರೋಬ್ಬರಿ 230 ಕೋಟಿ ರೂ. ಮದ್ಯ ಮಾರಾಟ

    ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯ ಮಾರಾಟವನ್ನು ಆರಂಭಿಸಿ 3 ದಿನ ಕಳೆದಿದ್ದು, ಇಂದು ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಯಮ) ಬರೋಬ್ಬರಿ 230 ಕೋಟಿ ರೂ. ವ್ಯಾಪಾರ ನಡೆಸಿದೆ.

    ಇಂದು 15.6 ಕೋಟಿ ರೂ. ಮೌಲ್ಯದ 7 ಲಕ್ಷ ಲೀಟರ್ ಬಿಯರ್, 216 ಕೋಟಿ ರೂ. ಮೌಲ್ಯದ 39 ಲಕ್ಷ ಲೀಟರ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮಾರಾಟವಾಗಿದೆ.

    ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನ 45 ಕೋಟಿ ರೂ. ಹಾಗೂ 2ನೇ ದಿನ 197 ಕೋಟಿ ರೂ. ಮದ್ಯ ಮಾರಾಟವಾಗಿತ್ತು. ಎರಡು ದಿನದ ಮದ್ಯ ಮಾರಾಟಕ್ಕಿಂತ ಇಂದು ಹೆಚ್ಚು ಮದ್ಯ ಮಾರಾಟ ಮಾಡಲಾಗಿದೆ. ಅಲ್ಲದೇ ನಿನ್ನೆಯ ದಾಖಲೆಯನ್ನು ಮುರಿದು ಮದ್ಯದಂಗಡಿಗಳು 230 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿವೆ. ನಿನ್ನೆ ಕೆಎಸ್‍ಬಿಸಿಎಲ್‍ನಿಂದ 2.50 ಕೋಟಿ ರೂ. ಮೌಲ್ಯದ 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿತ್ತು.

    ಇತ್ತ ಲಾಕ್‍ಡೌನ್ ನಿಂದಾಗಿ ಎಣ್ಣೆ ಇಲ್ಲದೆ 42 ದಿನಗಳನ್ನು ಮುಗಿಸಿದ ಮದ್ಯಪ್ರಿಯರಿಗೆ ಸರ್ಕಾರ ಇಂದು ಬಿಗ್ ಶಾಕ್ ನೀಡಿತ್ತು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಒಂದು ಕಡೆ ಕೋವಿಡ್ ನಿಯಂತ್ರಣ ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಎರಡನ್ನೂ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ ರಾಜ್ಯದಲ್ಲಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ತಿಳಿಸಿದ್ದರು.

  • ಇಂದು ಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ

    ಇಂದು ಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ

    ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ.

    ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ.

    ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್‍) ನಿಂದ ಪೂರೈಕೆ ಮಾಡಲಾದ ಮದ್ಯದ ಮಾಹಿತಿಯನ್ನು ನೀಡಲಾಗಿದ್ದು, 3.95 ಲಕ್ಷ ಕೇಸ್ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ 79 ಸಾವಿರ ಕೇಸ್ ಬಿಯರ್ ಪೂರೈಕೆ ಮಾಡಲಾಗಿದೆ. ಇದರ ಅಂದಾಜು ಬೆಲೆ 183  ಕೋಟಿ  ರೂ. ಆಗಿದೆ.

    ಬೆಂಗಳೂರಲ್ಲಿ ಒಟ್ಟು 22 ಕೆಎಸ್‍ಬಿಸಿಎಲ್ ಗೋಡೌನ್ ಗಳಿದ್ದು, ನಾಳೆಯಿಂದ ಎಲ್ಲಾ ಮದ್ಯದಂಗಡಿಗಳಲ್ಲಿ ಫುಲ್ ಸ್ಟಾಕ್ ಇರುವಂತೆ ಪೂರೈಸಲಾಗಿದೆ. ಯಶವಂತಪುರದ ಕೆಎಸ್‍ಬಿಸಿಎಲ್ ಗೋಡೌನ್ ನಿಂದ ಐಎಂಎಲ್ 4 ಸಾವಿರ ಕೇಸ್ ಹಾಗೂ 1,550 ಬಿಯರ್ ಕೇಸ್‍ಗಳನ್ನು ಯಶವಂತಪುರ ವ್ಯಾಪ್ತಿಯಲ್ಲಿರುವ 28 ಸಿ.ಎಲ್ 2 ಶಾಪ್‍ಗಳಿಗೆ ಸರಬರಾಜು ಮಾಡಲಾಗಿದೆ. ಇದರ ಅಂದಾಜು ಬೆಲೆ 2.50 ಕೋಟಿ ಆಗಿದೆ.

    ನಿನ್ನೆ ಮೊದಲ ದಿನವೇ 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಆಗಿತ್ತು. ಅಲ್ಲದೇ ಎಲ್ಲಾ ಪ್ರದೇಶಗಳಲ್ಲಿ ಮದ್ಯ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.