ಮೈಸೂರು: ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯೊಬ್ಬರು ಸ್ಪೀಕರ್ (Speaker) ಆಗಿ ಕೆಲಸ ಮಾಡಿದ್ದಾರೆ. ಅವರೇ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಕೆ.ಎಸ್. ನಾಗರತ್ನಮ್ಮ .
ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿಯ ಸಾಹುಕಾರ್ ಕೆ.ಸಿ. ಸುಬ್ಬಣ್ಣ ಅವರ ಧರ್ಮಪತ್ನಿ ನಾಗರತ್ನಮ್ಮ. 1957, 1962, 1967, 1972, 1983, 1985 ಹಾಗೂ 1989 – ಹೀಗೆ 7 ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ (Gundlupet) ಇಂದಿರಾಗಾಂಧಿ, ಗುಂಡ್ಲುಪೇಟೆ ಅಮ್ಮ ಎಂದೇ ಹೆಸರಾಗಿದ್ದರು. 1972 ರಿಂದ 1978 ರವರೆಗೆ ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಅವರು ಎಚ್.ಕೆ. ಶಿವರುದ್ರಪ್ಪ ಅವರ ಎದುರು ಪರಾಭವಗೊಂಡಿದ್ದರು. ಇದನ್ನೂ ಓದಿ: ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್
1985ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಎಸ್. ನಾಗರತ್ನಮ್ಮ ( KS Nagarathnamma) ಅವರು ರಾಜ್ಯದ ಪ್ರಥಮ ವಿರೋಧ ಪಕ್ಷದ ನಾಯಕಿಯಾಗಿಯೂ 1987 ಜ. 29 ರಿಂದ 1989 ಏ. 21 ರವರೆಗೆ ಕೆಲಸ ಮಾಡಿದ್ದರು. ಆದರೆ, ಮಂತ್ರಿಯಾಗಲು 1990ರವರೆಗೆ ಕಾಯಬೇಕಾಯಿತು. ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದರು. ಮೈಸೂರು ಜಿಲ್ಲೆಯ ಪ್ರಥಮ ಮಹಿಳಾ ಉಸ್ತುವಾರಿ ಸಚಿವೆಯೂ ಆಗಿದ್ದರು. ಸಚಿವೆ ಆಗಿದ್ದಾಗಲೇ ನಿಧನರಾದರು. ಇದನ್ನೂ ಓದಿ:ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ
ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Election) ದಿನಾಂಕ ಪ್ರಕಟವಾಗುತ್ತಿದ್ದಂತೆ 3 ಪಕ್ಷಗಳಲ್ಲೂ ಸಿದ್ಧತೆ ಜೋರಾಗಿದೆ. ಅದೇ ರೀತಿ ಮೈಸೂರು, ಚಾಮರಾಜನಗರ (Chamarajanagar) ಜಿಲ್ಲೆಯಲ್ಲೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳಾ ಜನಪ್ರತಿನಿಧಿಗಳು (Women MLA) ನಿರಂತರವಾಗಿ ಮನಗೆದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಕಳೆದ 65 ವರ್ಷಗಳಲ್ಲಿ ವಿಧಾನಸಭೆಗೆ 8 ಮಹಿಳೆಯರು ಮಾತ್ರ ಆಯ್ಕೆಯಾಗಿದ್ದಾರೆ.
ಚಾಮರಾಜನಗರದ ಗುಂಡ್ಲುಪೇಟೆ ಕ್ಷೇತ್ರದಿಂದ ಕೆ.ಎಸ್. ನಾಗರತ್ನಮ್ಮ (KS Nagarathnamma) ಅವರು 1957, 1962, 1967, 1972, 1983, 1985 ಹಾಗೂ 1989- ಹೀಗೆ 7 ಬಾರಿ ಆಯ್ಕೆಯಾಗಿದ್ದಾರೆ. 1978ರಲ್ಲಿ ಎಚ್.ಕೆ. ಶಿವರುದ್ರಪ್ಪ ಅವರೆದುರು ಪರಾಭವಗೊಂಡಿದ್ದನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ 1957 ರಿಂದ 1989ರವರೆಗೆ ಅಂದರೆ ನಿಧನರಾಗುವವರೆಗೆ ಗುಂಡ್ಲುಪೇಟೆ ಕ್ಷೇತ್ರ ಅವರ ಹಿಡಿತದಲ್ಲಿಯೇ ಇತ್ತು. ಅವರು 1972 ರಿಂದ 78 ರವರೆಗೆ ರಾಜ್ಯದ ಮೊದಲ ಮಹಿಳಾ ಸ್ಪೀಕರ್, 1985ರಲ್ಲಿ ರಾಜ್ಯದ ಮೊದಲ ಪ್ರತಿಪಕ್ಷ ನಾಯಕಿಯಾಗಿದ್ದರು. ಜೊತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿದ್ದರು.
1957ರಲ್ಲಿ ಕೊಳ್ಳೇಗಾಲ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್‍ನ ಕೆಂಪಮ್ಮ ಆಯ್ಕೆಯಾಗಿದ್ದರು. 1994ರಲ್ಲಿ ಮತ್ತೆ ಅವರಿಗೆ 37 ವರ್ಷಗಳ ನಂತರ ಕಾಂಗ್ರೆಸ್ (Congress) ಟಿಕೆಟ್ ನೀಡಲಾಗಿತ್ತು. ಆದರೆ ಜನತಾದಳದ ಎಸ್. ಜಯಣ್ಣ ಅವರ ಎದುರು ಸೋತರು. 1978ರಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕಾಂಗ್ರೆಸ್‍ನ ಸುಶೀಲಾ ಚೆಲುವರಾಜ್ ಆಯ್ಕೆಯಾದರು. 1983ರಲ್ಲಿ ಸೋತರು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಅವರು 1983, 1989ರಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1985, 1994, 1999ರಲ್ಲಿ ಸೋತರು. ಇವರು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವೆಯಾಗಿದ್ದರು. 1991ರಿಂದ 1996ರವರೆಗೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದಿದ್ದರು.
1984ರಲ್ಲಿ ಅಜೀಜ್ ಸೇಠ್ ಅವರು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರಿಂದ 1985ರಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಮುಕ್ತಾರುನ್ನೀಸಾ ಬೇಗಂ ಅವರಿಗೆ ಕಾಂಗ್ರೆಸ್ ಟಿಕೆಟ್ ಮೇಲೆ ಗೆಲ್ಲುವ ಅವಕಾಶ ಸಿಕ್ಕಿತು. ನಂತರ ಮತ್ತೆ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಆದರೆ ಬೇಗಂ ವಿಧಾನ ಪರಿಷತ್ ಸದಸ್ಯೆಯಾಗಿದ್ದರು. 2004ರಲ್ಲಿ ಜೆ. ಸುನೀತಾ ವೀರಪ್ಪಗೌಡ ಅವರು ಬನ್ನೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ (BJP) ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 2008ರ ವೇಳೆಗೆ ಬನ್ನೂರು ಕ್ಷೇತ್ರ ರದ್ದಾಗಿದ್ದರಿಂದ ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. ಇವರು 4 ಬಾರಿ ಜಿಪಂ ಸದಸ್ಯರು ಹಾಗೂ 2 ಬಾರಿ ಅಧ್ಯಕ್ಷರಾಗಿದ್ದರು.
2004ರಲ್ಲಿ ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಜೆಡಿಎಸ್ ಟಿಕೆಟ್ ಮೇಲೆ ಆಯ್ಕೆಯಾದರು. 2008ರ ವೇಳೆಗೆ ಇವರು ಬಿಎಸ್ಪಿಯಿಂದ, 2013ರಲ್ಲಿ ಜೆಡಿಎಸ್‍ನಿಂದ (JDS) ಸ್ಪರ್ಧಿಸಿ ಸೋತರು. 2017ರ ಉಪ ಚುನಾವಣೆಯಲ್ಲಿ ಡಾ.ಗೀತಾ ಮಹದೇವಪ್ರಸಾದ್ (Geetha Mahadevaprasad) ಅವರು ಗುಂಡ್ಲುಪೇಟೆ ಕ್ಷೇತ್ರದಿಂದ ಆಯ್ಕೆಯಾದರು. ಆದರೆ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು.