Tag: KS Eshwarppa

  • ಅ.20ಕ್ಕೆ ಬಾಗಲಕೋಟೆಯಲ್ಲಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಸಭೆ: ಕೆಎಸ್ ಈಶ್ವರಪ್ಪ

    ಅ.20ಕ್ಕೆ ಬಾಗಲಕೋಟೆಯಲ್ಲಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಸಭೆ: ಕೆಎಸ್ ಈಶ್ವರಪ್ಪ

    ಶಿವಮೊಗ್ಗ: ಹಿಂದೂ ಧರ್ಮದ ಎಲ್ಲಾ ಸಮುದಾಯದ ಬಡವರ ಏಳಿಗೆಗಾಗಿ ರಾಯಣ್ಣ ಚನ್ನಮ್ಮ ಬ್ರಿಗೇಡ್ (Rayanna Channamma Brigade) ಆರಂಭಿಸುತ್ತಿದ್ದು, ಅ.20 ರಂದು ಬಾಗಲಕೋಟೆಯ (Bgalkote) ಚರಂತಿಮಠ ಸಭಾಂಗಣದಲ್ಲಿ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ತಿಳಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೆ. ಆಗ ಈ ಬ್ರಿಗೇಡ್ ನಿಲ್ಲಿಸುವಂತೆ ಯಡಿಯೂರಪ್ಪ ಅವರು ತಿಳಿಸಿದ್ದರು. ಹೀಗಾಗಿ ಬ್ರಿಗೇಡ್ ಸ್ಥಗಿತಗೊಳಿಸಿದ್ದೆ. ಆದರೆ ಈ ಬಾರಿ ಅಂತಹ ತಪ್ಪು ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಇಸ್ರೇಲ್‌ ಜೊತೆ ಮೋದಿಗೆ ಉತ್ತಮ ಸಂಬಂಧವಿದೆ – ಕಾಂಗ್ರೆಸ್‌ನಿಂದ ಇವಿಎಂ-ಪೇಜರ್‌ ಅನುಮಾನ

    ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ 25 ಮಂದಿ ಸಾಧು ಸಂತರು ಭಾಗವಹಿಸಲಿದ್ದು, ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ| ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ಕಾರು – ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

  • ಕಾಂಗ್ರೆಸ್‌ನ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ

    ಕಾಂಗ್ರೆಸ್‌ನ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ

    ಶಿವಮೊಗ್ಗ: ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರಧ್ವಜ ನನ್ನ ತಾಯಿ ಸಮಾನ. ಇದಕ್ಕೆ ಯಾರದರೂ ಅವಮಾನ ಮಾಡಿದರೇ ಅವರು ರಾಷ್ಟ್ರದ್ರೋಹಿ ಎನಿಸಿಕೊಳ್ಳುತ್ತಾನೆ. ಇದನ್ನು ಈ ಮೊದಲೆ ಸ್ಪಷ್ಟಪಡಿಸಿದ್ದೇನೆ ಎಂದರು.

    ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕೆಂಬ ಅಭಿಲಾಷೆ ರಾಜ್ಯದ ಜನರದ್ದಿದೆ. ಇಲ್ಲಿಯವರೆಗೆ ನಿಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡು ಒಂದು ವಾರ ಕಳೆದಿದ್ದೀರಿ. ಇನ್ನೂ ಒಂದು ವಾರ ಉಳಿಯುತ್ತದೆ. ಇದರಿಂದಾಗಿ ಈಗಲಾದರೂ ಜನರ ಅಭಿಪ್ರಾಯವನ್ನು ಚರ್ಚಿಸೋಣ. ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಜನಸಾಮಾನ್ಯರ ಕಷ್ಟಕ್ಕೆ, ಜ್ವಲಂತ ಸಮಸ್ಯೆ ಇವೆ ಎಂದು ಮನವಿ ಮಾಡಿದರು. ಇದನ್ನೂ ಓದಿ:  ಸಿಎಂಗೆ ಸ್ವಾಭಿಮಾನ ಇದ್ದರೆ ಬಚ್ಚಲು ಬಾಯಿ ಈಶ್ವರಪ್ಪರನ್ನು ವಜಾ ಮಾಡಲಿ: ಡಿಕೆಶಿ

    ಭಗವಾಧ್ವಜದ ವಿವಾದವನ್ನು ಇಲ್ಲಿಗೆ ಬಿಡಿ ಎಂದು ನಾನು ಹೇಳಲ್ಲ. ಎರಡು ಪಕ್ಷದವರು ಜನರ ಮಧ್ಯೆ ಹೋಗೋಣ ಬನ್ನಿ. ರಾಷ್ಟ್ರಧ್ವಜದ ಬಗ್ಗೆ ಜನರೇ ತೀರ್ಮಾನ ಮಾಡಲಿ. ಅವರು ಬರಲಿ, ನಾವು ಹೋಗೋಣ ಬನ್ನಿ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡೊಲ್ಲ. ವಿಧಾನಸಭೆ ಕಲಾಪದಲ್ಲಿ ಈ ವಿಷಯವನ್ನು ಕೈ ಬಿಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಧರಣಿ ಮಾಡ್ತಿದ್ದೇವೆ: ಯು.ಟಿ. ಖಾದರ್

  • ಕಾಂಗ್ರೆಸ್‍ನ ಮತ ಬ್ಯಾಂಕ್, ಬಿಜೆಪಿ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಹಾಳು: ಹೆಚ್.ವಿಶ್ವನಾಥ್ ಕಿಡಿ

    ಕಾಂಗ್ರೆಸ್‍ನ ಮತ ಬ್ಯಾಂಕ್, ಬಿಜೆಪಿ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಹಾಳು: ಹೆಚ್.ವಿಶ್ವನಾಥ್ ಕಿಡಿ

    ಮೈಸೂರು: ಒಂದು ಕಡೆ ಕಾಂಗ್ರೆಸ್ ಮತ ಬ್ಯಾಂಕ್ ಲೆಕ್ಕ, ಇನ್ನೊಂದು ಕಡೆ ಬಿಜೆಪಿಯ ಕೆಲವರ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಕೆಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಒಬ್ಬ ವಿದ್ಯಾರ್ಥಿನಿ ಹೇಳುತ್ತಾಳೆ. ವಿದ್ಯಾರ್ಥಿನಿಯನ್ನು ಆ ರೀತಿ ಮಾತಾಡುವಂತೆ ಕಾಂಗ್ರೆಸ್ ಟ್ಯೂನ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‍ಗಾಗಿ ಮನಸ್ಸು ಕೆಡಿಸುತ್ತಿದೆ. ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಕಾಂಗ್ರೆಸ್ ಮಕ್ಕಳಿಗೆ ಹೇಳಿ ಕೊಡುತ್ತಿದೆ. ಇದು ದುರಂತವಾಗಿದೆ. ಒಟ್ಟಿನಲ್ಲಿ ಹಿಜಾಬ್ ವಿಚಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಇದು ತಿಳಿಯಾಗಬೇಕು. ಕೋರ್ಟ್ ಆದೇಶ ಪಾಲನೆ ಆಗಬೇಕು ಎಂದು ಒತ್ತಾಯಿಸಿದರು.

    ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ ಎಂದು ಹೇಳಿದರು. ಇದನ್ನೂ ಓದಿ: ಯುಪಿಯಲ್ಲಿ ಎಸ್‍ಪಿ ಅಧಿಕಾರಕ್ಕೆ ಬಂದ್ರೆ ದೇಶಾದ್ಯಂತ ಭಯೋತ್ಪಾದನೆ ಹರಡಿಸುತ್ತೆ: ಅಮಿತ್ ಶಾ

    ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದ್ದು ತಪ್ಪು. ಸಿದ್ದರಾಮಯ್ಯನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸಬಾರದಿತ್ತು. ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿದ್ದು ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು. ಮುಖ್ಯಮಂತ್ರಿ, ಎರಡೂ ಸದನಗಳ ನಾಯಕರು, ಸ್ಪೀಕರ್‌ಗಳು ಮೊದಲು ಸಭೆ ಮಾಡಲಿ. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

  • ಈಶ್ವರಪ್ಪ ಹೇಳಿಕೆಗೆ ಯೂತ್ ಕಾಂಗ್ರೆಸ್ ಗರಂ – ಪ್ರತಿಕೃತಿ ದಹಿಸಿ ಆಕ್ರೋಶ

    ಈಶ್ವರಪ್ಪ ಹೇಳಿಕೆಗೆ ಯೂತ್ ಕಾಂಗ್ರೆಸ್ ಗರಂ – ಪ್ರತಿಕೃತಿ ದಹಿಸಿ ಆಕ್ರೋಶ

    ಧಾರವಾಡ: ರಾಷ್ಟ್ರ ಧ್ವಜದ ಕುರಿತಾಗಿ ಸಚಿವ ಕೆಎಸ್ ಈಶ್ವರಪ್ಪ ನೀಡಿದ ಹೇಳಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಧಾರವಾಡದ ಕಡಪಾ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ತೆರಳಿ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈಶ್ವರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ಪಾಕ್ ಇವರಪ್ಪನ ಮನೆನಾ..? – ರಾಜಕಾರಣಿಗಳ ವಿರುದ್ಧ ಉಡುಪಿ ವಿದ್ಯಾರ್ಥಿನಿಯರ ಕಿಡಿ

    ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಟಣೆ ಕೂಗಿದ್ದಾರೆ. ರಾಷ್ಟ್ರ ಧ್ವಜ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಈಶ್ವರಪ್ಪ ವಿರುದ್ಧ ಮುಖ್ಯಮಂತ್ರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗೋದಾದ್ರೆ ಸ್ವಾಗತಿಸುತ್ತೇನೆ: ರಘುಪತಿ ಭಟ್

  • ಮೆಸ್ಕಾಂ ಇಲಾಖೆಯ ಅವ್ಯವಹಾರ ಬಯಲುಗೊಳಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಮೆಸ್ಕಾಂ ಇಲಾಖೆಯ ಅವ್ಯವಹಾರ ಬಯಲುಗೊಳಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಶಿವಮೊಗ್ಗ: ಮೆಸ್ಕಾಂ ಇಲಾಖೆಯ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಲಾಖೆಯ ಅವ್ಯವಹಾರ ಬಯಲಿಗೆಳೆದಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಯಲ್ಲಿ 12 ಕೋಟಿ 21 ಲಕ್ಷ ವ್ಯತ್ಯಾಸವಾಗಿದ್ದು, 2017 ರಲ್ಲಿ ಕಾಮಗಾರಿ ಆರಂಭವಾಗಿದೆ. ನಿಗದಿಯಂತೆ 2020 ರಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ನಿನ್ನೆಯವರೆಗೂ ಕಾಮಗಾರಿ ಮುಗಿದಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಕಾಮಗಾರಿ ಮುಗಿಯದಿರುವ ಬಗ್ಗೆ ಸಚಿವ ಈಶ್ವರಪ್ಪ ಪೋಟೋ ಪ್ರದರ್ಶನ ಮಾಡಿದ್ದಾರೆ. ಕಾಮಗಾರಿ ಮುಗಿಯದಿದ್ದರೂ, ಕಾಮಗಾರಿ ಮುಗಿದಿದೆ ಎಂದು ಎರಡು ತಿಂಗಳ ಹಿಂದೆಯೇ ಸರ್ಟಿಫಿಕೇಟ್ ಕೊಟ್ಟಿದ್ದೀರಿ ಎಂದು ಗುಡುಗಿದ್ದಾರೆ.

    ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಈ ರೀತಿಯ ಅವ್ಯವಹಾರ ನಮ್ಮ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಎಷ್ಟು ಆಗಿರಬಹುದು. ಈ ರೀತಿಯ ಸರ್ಟಿಫಿಕೇಟ್ ಕೊಡೋದಕ್ಕೆ ನೀವು ಇಷ್ಟೆಲ್ಲಾ ಓದ್ದಿದ್ದೀರಿ. ನಿಮ್ಮ ಅಪ್ಪ, ಅಮ್ಮ ನಿಮ್ಮನ್ನು ಓದಿಸಿ, ಕೆಲಸ ಕೊಡಿಸಿರೋದು ಈ ರೀತಿ ಸರ್ಟಿಫಿಕೇಟ್ ಕೊಡೋದಕ್ಕ? ಸರಕಾರದ ದುಡ್ಡು, ಸಾಮಾನ್ಯ ಜನರ ದುಡ್ಡು ಇದು, ಕೆಲಸ ಮಾಡದೇ ಹಣ ಪಡೆಯುತ್ತಾರೆ ಅಂದ್ರೆ ಹೇಗೆ? ಸರಿಯಾಗಿ ಕೆಲಸ ಮಾಡಲು ಏನು ರೋಗ ಆಗಿದೆ ಅಂತಾ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

  • ಡಿಯರ್ ಹೈಕಮಾಂಡ್, ಪ್ಲೀಸ್ ಸೇವ್ ಪಾರ್ಟಿ ಸೇವ್ ಗವರ್ನ್‌ಮೆಂಟ್‌

    ಡಿಯರ್ ಹೈಕಮಾಂಡ್, ಪ್ಲೀಸ್ ಸೇವ್ ಪಾರ್ಟಿ ಸೇವ್ ಗವರ್ನ್‌ಮೆಂಟ್‌

    – ಹೈಕಮಾಂಡ್‌ಗೆ ಪತ್ರ ಬರೆಯಲು ಮುಂದಾದ ಬಿಜೆಪಿ ನಿಷ್ಠರು

    ಬೆಂಗಳೂರು: ಈಶ್ವರಪ್ಪ, ಯಡಿಯೂರಪ್ಪ ಮಧ್ಯೆ ಗುದ್ದಾಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸಿಎಂ ವಿರುದ್ಧ ತಿರುಗಿ ಬಿದ್ದ ಈಶ್ವರಪ್ಪ ನಡೆಗೆ ಸ್ವಪಕ್ಷೀಯರ ಆಕ್ರೋಶಗೊಂಡಿದ್ದು ಹೈಕಮಾಂಡ್ ಬಾಗಿಲು ತಟ್ಟಲು ಮುಂದಾಗಿದ್ದಾರೆ.

    ಒಬ್ಬೊಬ್ಬರು ಒಂದೊಂದು ನಿರ್ಧಾರ ಕೈಗೊಳ್ಳುತ್ತಿದ್ದು, ಯಾರನ್ನಾದರೂ ಸರಿಪಡಿಸಿ, ಒಟ್ಟಿನಲ್ಲಿ ಪಾರ್ಟಿ ಉಳಿಸಿ.ಸುಗಮ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ಹೈಕಮಾಂಡ್‍ಗೆ ಪತ್ರ ಬರೆದು ದೂರು ನೀಡಲು ಬಿಜೆಪಿ ನಿಷ್ಠರು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಎಸ್‍ವೈ ಆಪ್ತ ಶಾಸಕರ ಪಟ್ಟು

    ದೂರಿನಲ್ಲಿ ಏನಿದೆ?
    ಉಪ ಚುನಾವಣೆಯ ಸಂದರ್ಭದಲ್ಲಿ ಈ ಒಳಜಗಳ ಪಕ್ಷ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರ ತರುತ್ತಿದೆ. ಜನರ ದೃಷ್ಟಿಯಲ್ಲಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲದಾಂತಗುತ್ತದೆ. ಮೊದಲೇ ಯತ್ನಾಳ್‍ರ ಹೇಳಿಕೆಗಳು ಮುಜುಗರ ತರುತ್ತಿವೆ.

    ಹಿರಿಯರಾದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡುವ ಅಗತ್ಯ ಇರಲಿಲ್ಲ. ಇದರಿಂದ ಪಕ್ಷ, ಸರ್ಕಾರ ಗೌರವ, ಘನತೆಗೆ ಹಾನಿಯಾಗುತ್ತಿದೆ. ಪಕ್ಷದ ವೇದಿಕೆಯಲ್ಲೇ ಈಶ್ವರಪ್ಪ ಚರ್ಚೆ ನಡೆಸಬಹುದಿತ್ತು. ಉಪಚುನಾವಣೆ ನಡೆಯುವ ಸಂದರ್ಭದಲ್ಲಿ ಇದೆಲ್ಲ ಹಿನ್ನೆಡೆಯಾಗಬಹುದು. ಹೀಗಾಗಿ ಕೂಡಲೇ ಮಧ್ಯಪ್ರವೇಶಿಸಿ ಭಿನ್ನಾಭಿಪ್ರಾಯವನ್ನು ಇತ್ಯರ್ಥ ಮಾಡಬೇಕು ಎಂದು ಮನವಿ ಮಾಡಲು ಮುಂದಾಗಿದ್ದಾರೆ.