Tag: KS Bhagavan

  • ಹಿಂದೂ ಅನ್ನೋದು ಅವಮಾನಕರ ಶಬ್ದ – ಚಿಂತಕ ಕೆ.ಎಸ್ ಭಗವಾನ್ ಮತ್ತೆ ವಿವಾದಾತ್ಮಕ ಹೇಳಿಕೆ

    ಹಿಂದೂ ಅನ್ನೋದು ಅವಮಾನಕರ ಶಬ್ದ – ಚಿಂತಕ ಕೆ.ಎಸ್ ಭಗವಾನ್ ಮತ್ತೆ ವಿವಾದಾತ್ಮಕ ಹೇಳಿಕೆ

    – ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿವೆ ಎಂದು ಆಕ್ರೋಶ

    ರಾಯಚೂರು: ಹಿಂದೂ (Hindu) ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಅಂತ ಚಿಂತಕ ಕೆ.ಎಸ್ ಭಗವಾನ್ (KS Bhagavan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಯಚೂರಿನ (Raichur) ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

    ಕೆ.ಎಸ್ ಭಗವಾನ್ ಹಿಂದೂ ಪದದ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಶಬ್ದ ಬಂದಿದ್ದು 1030ನೇ ಇಸವಿಯಲ್ಲಿ. ಪರ್ಷಿಯನ್ ಲೇಖಕ‌ ಆಲ್ಬರೋನಿ ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನ ಹಿಂದೂ ಅಂತ ಕರೆದರು. ಪರ್ಷಿಯನ್ ಭಾಷೆಯಲ್ಲಿ ‘ಸ’ ಕಾರ ಇಲ್ವಂತೆ, ‘ಸ’ ಕಾರ ‘ಹ’ ಕಾರ ಆಗುತ್ತಂತೆ. ಮುಂದೆ ಅಕ್ಬರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ ಎಂದು ಹೆಸರು ಬಂತು. ಹೀಗಾಗಿ ರಾಮಾಯಣ, ಮಹಾಭಾರತ, ಪುರಾಣ, ವೇದ ಗ್ರಂಥಗಳಲ್ಲಿ ಹಿಂದೂ ಅನ್ನೋ ಹೆಸರಿಲ್ಲ ಎಂದರು.

    ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಸಂವಿಧಾನ ತೆಗೆದು ಹಾಕಲು ‌ನಮ್ಮ ದೇಶದ ಜನ ಅವಕಾಶ ನೀಡಬಾರದು. ಮನುಸ್ಮೃತಿಯನ್ನ ವಾಪಸ್ ತರಬಾರದು. ಮನುಸ್ಮೃತಿಯನ್ನ ಬಾಬಾ ಸಾಹೇಬರು, ಪೆರಿಯಾರ್ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನುಸ್ಮೃತಿಯನ್ನ ತಿರಸ್ಕರಿಸಬೇಕು ಅಂತ ಭಗವಾನ್ ಹೇಳಿದ್ದಾರೆ.

    ಒಂದೊಂದು ಮಠ ಒಂದೊಂದು ಸಮುದಾಯಕ್ಕೆ ಸೀಮಿತವಾಗಿವೆ, ಇದರಿಂದ ಜನರ ಮನಸ್ಸು ಬಹಳ ಸಂಕುಚಿತವಾಗುತ್ತಿದೆ. ಎಲ್ಲರೂ ಸಮಾನರು ಅನ್ನೋ ಭಾವನೆಗೆ ಅಡ್ಡಿ ಬರುತ್ತಿದೆ. ಜನ ಇದನ್ನ ದಾಟಿ ಬರಬೇಕು. ದೇಶದಲ್ಲಿ ಬೌದ್ಧ ಧರ್ಮ 1,500 ವರ್ಷಕಾಲ ಹರಡಿತ್ತು. ಬುದ್ಧ ಈ ಮಣ್ಣಿನ ಮಗ ಒಬ್ಬ ರೈತನ ಮಗ, ಬೌದ್ಧ ಸ್ತೂಪಗಳು, ದೇವಾಲಯಗಳು ಎಲ್ಲವನ್ನೂ ಒಡೆದು ಹಾಕಿದ್ದಾರೆ. ಯಾರು ಮಾಡಿದ್ದು ಅದನ್ನ ಪತ್ತೆ ಹಚ್ಚಿ ಮೂಲ ವ್ಯಕ್ತಿಗಳಿಗೆ ವಾಪಸ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

  • ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

    ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

    ಮೈಸೂರು: ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ `ಮಹಿಷ ಮಂಡಲೋತ್ಸವ’ ಹೆಸರಿನಲ್ಲಿ ಮಹಿಷ ದಸರಾ (Mahisha Dasara) ಆಚರಣೆ ನಡೆದಿದೆ. ಮೈಸೂರಿನ ಟೌನ್‌ಹಾಲ್ (Mysuru TownHall) ಬಳಿ ಮಹಿಷ ಮಂಡಲೋತ್ಸವ ಹೆಸರಲ್ಲಿ ಕಾರ್ಯಕ್ರಮ ನಡೆಯಿತು. ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೇ ಅನುಮತಿ ನೀಡಿ ನಿಷೇಧಾಜ್ಞೆ ವಿಧಿಸಲಾಗಿತ್ತು.

    ಮಹಿಷಾ ದಸರಾ ಮಂಡಲೋತ್ಸವದ ವೇಳೆ ಗಲಾಟೆ-ಗದ್ದಲ ನಡೆಯಿತು. ಮಹಿಷ ಮೂರ್ತಿಗೆ ಮಾಲಾರ್ಪಣೆ ಮಾಡ್ಬೇಕು ಅಂತಾ ಸಮಿತಿಯವರು ಪಟ್ಟು ಹಿಡಿದಿದ್ರು. ಆದ್ರೆ, ಪ್ರತಿಭಟನಾಕಾರರನ್ನ ಮನವೊಲಿಸಿದ ಪೊಲೀಸರು (Mysuru Police) ಐವರಿಗೆ ಪುಪ್ಪಾರ್ಚನೆ ಮಾಡಲು ಅವಕಾಶ ನೀಡಿದ್ರು. ಇದೇ ವೇಳೆ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಹಿಂದೂಗಳ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ

    ಮಹಿಷಾ ಮಂಡಲೋತ್ಸವ ಹೆಸರಿನಲ್ಲಿ ಮೈಸೂರಿನ ಪುರಭವನ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸರು ಟೌನ್‌ಹಾಲ್ ಹೊರತುಪಡಿಸಿ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ರು. ಕೇವಲ ವೇದಿಕೆ ಕಾರ್ಯಕ್ರಮಕ್ಕಷ್ಟೆ ಅನುಮತಿ ನೀಡಲಾಗಿತ್ತು. ಮೆರವಣಿಗೆ, ಬೈಕ್ ರ‍್ಯಾಲಿಗೆ ಅವಕಾಶ ನೀಡಿರಲಿಲ್ಲ. ಇದನ್ನೂ ಓದಿ: Kolara | ತಾಂತ್ರಿಕ ದೋಷ – ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

    ಮಹಿಷಾ ದಸರಾ ಆಚರಣೆ ಸ್ಥಳದಲ್ಲಿ ಹೈಡ್ರಾಮವೇ ನಡೆದು ಹೋಯಿತು. ಪೊಲೀಸರು ಹಾಗೂ ಜಿಲ್ಲಾಡಳಿತ ಮಹಿಷ ಮೂರ್ತಿ ಮಾಲಾರ್ಪಣೆ ಮಾಡಲು ಅವಕಾಶ ನೀಡ್ಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಮಹಿಷಾ ದಸರಾ ಸಮಿತಿ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಬಳಿಕ ಎಚ್ಚೆತ್ತ ಪೊಲೀಸರು ಕೇವಲ ಐವರು ಮಾತ್ರ ಬೆಟ್ಟಕ್ಕೆ ತೆರಳಿ ಪುಪ್ಪಾರ್ಚನೆ ಮಾಡಲು ಅವಕಾಶ ಮಾಡಿಕೊಟ್ಟರು. ಪುಷ್ಪಾರ್ಚನೆ ಮಾಡಲು ಐವರನ್ನ ಪೊಲೀಸರು ತಮ್ಮ ಜೀಪ್‌ನಲ್ಲೇ ಕರೆದೊಯ್ದರು. ಈ ಮೂಲಕ ಪೊಲೀಸರೇ ನಿಷೇಧಾಜ್ಞೆಯನ್ನ ಉಲ್ಲಂಘನೆ ಮಾಡಿದ್ರು.

    ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಹಿಷ ದಸರಾ ಆಚರಣೆ ಸಮಿತಿ ನಡುವೆ ಮಾತಿನ ಜಟಾಪಟಿ ನಡೆಯಿತು. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌ 

  • ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

    ಬೆಂಗಳೂರು: ಮಹಿಷಾಸುರ ರಾಕ್ಷಸನಲ್ಲ, ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು ಎಂದು ಹೇಳಿ ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾವನ್ನು ಆಚರಣೆ ಮಾಡುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆಯನ್ನು ಕೇಳಿದ್ದಾರೆ. ಸಂಪೂರ್ಣ ನಂಬಲರ್ಹ ಐತಿಹಾಸಿಕ ದಾಖಲೆಗಳೊಂದಿಗೆ ಸರಿಯುತ್ತರ ಕೊಟ್ಟವರಿಗೆ ಮಾತ್ರ ಘೋಷಿತ 501 ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

    ಬಿಜೆಪಿಯ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ 10 ಪ್ರಶ್ನೆಗಳಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ, ಚಾಮುಂಡಿ ದಸರಾಗೆ ಸೆಡ್ಡು ಹೊಡೆದು ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾ ಉತ್ಸವ ಆಚರಿಸುವ ಪಾಮರರು ಕೇಳಿದ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.

    ಪ್ರಶ್ನೆ 1. ಮಹಿಷಾಸುರನು ಹುಟ್ಟಿದ ವರ್ಷ ಯಾವುದು?
    ಪ್ರಶ್ನೆ 2. ಮಹಿಷಾಸುರ ಪಟ್ಟಾಭಿಷೇಕ ಯಾವ ವರ್ಷದಲ್ಲಿ ನಡೆಯಿತು? ಅಂದು ಆ ಸಮಾರಂಭದಲ್ಲಿ ಯಾವ ಯಾವ ರಾಜ್ಯದ ದೊರೆಗಳು/ಪ್ರತಿನಿಧಿಗಳು ಪಾಲ್ಗೊಂಡಿದ್ದರು?
    ಪ್ರಶ್ನೆ 3. ಮಹಿಷಾಸುರನ ರಾಜ್ಯ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು?

    ಪ್ರಶ್ನೆ 4. ಮಹಿಷಾಸುರನ ಪತ್ನಿಯ ಹೆಸರೇನು? ಆಕೆ ಯಾರ/ಯಾವ ರಾಜನ ಮಗಳಾಗಿದ್ದಳು?
    ಪ್ರಶ್ನೆ 5. ಮಹಿಷಾಸುರನಿಗೆ ಎಷ್ಟು ಮಕ್ಕಳು? ಆ ಮಕ್ಕಳ ಹೆಸರೇನು?
    ಪ್ರಶ್ನೆ 6. ಮಹಿಷಾಸುರನ ಅರಮನೆ ಈಗಿನ ಯಾವ ಸ್ಥಳದಲ್ಲಿತ್ತು?

    ಪ್ರಶ್ನೆ 7. ಮಹಿಷಾಸುರನು ಯಾವ ಯಾವ ಯುದ್ಧಗಳನ್ನು ಗೆದ್ದಿದ್ದನು ಮತ್ತು ಯಾವ ಯಾವ ಯುದ್ಧಗಳಲ್ಲಿ ಸೋತಿದ್ದನು?
    ಪ್ರಶ್ನೆ 8. ಮಹಿಷಾಸುರನ ಮೃತನಾಗಿದ್ದು ಯಾವ ವರ್ಷದಲ್ಲಿ? ಅವನ ನಂತರ ಆತನ ಉತ್ತರಾಧಿಕಾರಿಯಾಗಿ ಯಾರು ರಾಜ್ಯಭಾರವನ್ನು ವಹಿಸಿಕೊಂಡರು?
    ಪ್ರಶ್ನೆ 9. ಬೌದ್ಧ ರಾಜ ಮಹಿಷಾಸುರನನ್ನು ತಮ್ಮ ಪೂರ್ವಜರೆಂದು ಹೇಳಿಕೊಳ್ಳುವ ಇಂದಿನ ಮೂಲ ನಿವಾಸಿಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಯಾವ ಸಂದರ್ಭದಲ್ಲಿ ಮತ್ತು ಏಕೆ?
    ಪ್ರಶ್ನೆ 10. ಕರ್ನಾಟಕದಲ್ಲಿ ಮಹಿಷಾಸುರನು ಆಳಿದ ಕುರುಹಾಗಿ ಇರುವ ಕನಿಷ್ಠ ಹತ್ತು ಐತಿಹಾಸಿಕ ಸ್ಥಳಗಳನ್ನು ಹೆಸರಿಸಿ.

    ಕೆಲ ದಿನಗಳ ಹಿಂದೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದ್ದರು.

    ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv