Tag: Krunal Pandya

  • ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪುಣೆ: ತಾನು ಆಡಿದ ಮೊದಲ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ವಿಶ್ವದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಈ ಸಾಧನೆ ನಿರ್ಮಿಸಿದ್ದಾರೆ.

    ಇಂದು ಕೃನಾಲ್‌ ಪಾಂಡ್ಯ 26 ಎಸೆತದಲ್ಲಿ 50 ರನ್‌ ಹೊಡೆದರು. ಟಾಮ್‌ ಕರ್ರನ್‌ ಎಸೆದ ಎಸೆತದಲ್ಲಿ ಒಂದು ಸಿಂಗಲ್‌ ರನ್‌ ಓಡಿ ವಿಶ್ವದಾಖಲೆ ನಿರ್ಮಿಸಿದರು.

    ಇದಕ್ಕೂ ಮೊದಲು ಈ ದಾಖಲೆ ನ್ಯೂಜಿಲೆಂಡ್‌ ಆಟಗಾರ ಜಾನ್‌ ಮೋರಿಸ್‌ ಹೆಸರಿನಲ್ಲಿತ್ತು. 1990ರಲ್ಲಿ ಮೋರಿಸ್‌ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 36 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು.

    ವೇಗದ ಅರ್ಧಶತಕವನ್ನು ಜನವರಿಯಲ್ಲಿ ಮೃತರಾದ ತಂದೆಗೆ ಅರ್ಪಿಸುವುದಾಗಿ ಕೃನಾಲ್‌ ಹೇಳಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ಭಾರತದ ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಮೊದಲ ಪಂದ್ಯದಲ್ಲೇ ಕೃನಾಲ್‌ ಸ್ಫೋಟಕ ಅರ್ಧಶತಕ – ಇಂಗ್ಲೆಂಡಿಗೆ 318 ರನ್‌ ಗುರಿ

    ಪುಣೆ: ಮೊದಲ ಏಕದಿನ ಪಂದ್ಯದಲ್ಲೇ ಕೃನಾಲ್‌ ಪಾಂಡ್ಯ ಅಬ್ಬರಿಸಿದ್ದಾರೆ. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಕೊನೆಯಲ್ಲಿ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ಇಂಗ್ಲೆಂಡಿಗೆ 318 ರನ್‌ಗಳ ಗುರಿಯನ್ನು ನೀಡಿದೆ.

    ಕೃನಾಲ್‌ ಪಾಂಡ್ಯ ಕ್ರೀಸಿಗೆ ಬಂದಾಗ ಭಾರತ 40.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ರಾಹುಲ್‌ಗೆ ಜೊತೆಯಾದ ಕೃನಾಲ್‌ ಆರಂಭದಲ್ಲಿ ನಿಧನವಾಗಿ ಆಡಿ ನಂತರ ಬೌಂಡರಿ ಸಿಕ್ಸರ್‌ಗಳನ್ನು ಚಚ್ಚಲು ಆರಂಭಿಸಿದರು.‌ ಇವರಿಬ್ಬರು ಮುರಿಯದ 6ನೇ ವಿಕೆಟಿಗೆ ಕೊನೆಯ 57 ಎಸೆತದಲ್ಲಿ 112 ರನ್‌ ಹೊಡೆಯುವ ಮೂಲಕ ತಂಡದ ಮೊತ್ತವನ್ನು 300 ರನ್‌ಗಳ ಗಡಿಯನ್ನು ದಾಟಿಸಿದರು.

     

    ಕೃನಾಲ್‌ ಪಾಂಡ್ಯ 58 ರನ್‌(31 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದರೆ ರಾಹುಲ್‌ 62 ರನ್‌(43 ಎಸೆತ, 4 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮಾರ್ಕ್‌ ವುಡ್‌ ಎಸೆದ 48ನೇ ಓವರಿನಲ್ಲಿ 28 ರನ್‌ ಬಂದರೆ ನಂತರದ ಎರಡು ಓವರಿನಲ್ಲಿ 12 ರನ್‌, 13 ರನ್‌ ಬಂದಿತ್ತು.

    ಭಾರತದ ಪರ ರೋಹಿತ್‌ ಶರ್ಮಾ 28 ರನ್‌, ಶಿಖರ್‌ ಧವನ್‌ 98 ರನ್(106‌ ಎಸೆತ, 11 ಬೌಂಡರಿ, 2 ಸಿಕ್ಸರ್‌) ನಾಯಕ ಕೊಹ್ಲಿ 56 ರನ್‌( 60 ಎಸೆತ, 6 ಬೌಂಡರಿ) ಹೊಡೆದು ಔಟಾದರು. ಮೊದಲ ವಿಕೆಟಿಗೆ ಧವನ್‌, ರೋಹಿತ್‌ 64 ರನ್‌, ಎರಡನೇ ವಿಕೆಟಿಗೆ ಶಿಖರ್‌ ಧವನ್‌, ಕೊಹ್ಲಿ 105 ರನ್‌ಗಳ ಜೊತೆಯಾಟವಾಡಿದರು.

    ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೃನಾಲ್‌ ಪಾಂಡ್ಯ ಮತ್ತು ಪ್ರಸಿದ್ಧ್‌ ಕೃಷ್ಣ ಪದಾರ್ಪಣೆ ಮಾಡಿದರು. ಪಂದ್ಯಕ್ಕೂ ಮೊದಲು ಸಹೋದರ ಹಾರ್ದಿಕ್‌ ಪಾಂಡ್ಯ ಅವರು ಕೃನಾಲ್‌ಗೆ ಟೀಂ ಇಂಡಿಯಾದ ಕ್ಯಾಪ್‌ ನೀಡಿದರು.

    ರನ್‌ ಏರಿದ್ದು ಹೇಗೆ?
    50 ರನ್‌ – 77 ಎಸೆತ
    100 ರನ್‌ – 139 ಎಸೆತ
    150 ರನ್‌ – 172 ಎಸೆತ
    200 ರನ್‌ – 238 ಎಸೆತ
    250 ರನ್‌ – 278 ಎಸೆತ
    300 ರನ್‌ – 294 ಎಸೆತ
    317 ರನ್‌ – 300 ಎಸೆತ

  • ದುಬೈನಿಂದ ದಾಖಲೆ ಇಲ್ಲದ ಚಿನ್ನ ತಂದ್ರಾ ಕೃನಾಲ್ ಪಾಂಡ್ಯ?

    ದುಬೈನಿಂದ ದಾಖಲೆ ಇಲ್ಲದ ಚಿನ್ನ ತಂದ್ರಾ ಕೃನಾಲ್ ಪಾಂಡ್ಯ?

    – ಮುಂಬೈ ವಿಮಾನ ನಿಲ್ದಾಣದಲ್ಲಿ ವಿಚಾರಣೆ

    ಮುಂಬೈ: ಯುಎಇಯಿಂದ ವಾಪಸ್ ಆಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.

    ಯುಎಇಯಿಂದ ವಾಪಸ್ ಬರುವಾಗ ಕ್ರುನಾಲ್ ಪಾಂಡ್ಯ ಅವರು ದಾಖಲೆ ಇಲ್ಲದ ಚಿನ್ನ ಮತ್ತು ಬೆಲೆಬಾಳು ವಸ್ತುಗಳನ್ನು ತಂದಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಅಧಿಕಾರಿಗಳು ತಡೆಹಿಡಿದ್ದಾರೆ. ಕ್ರುನಾಲ್ ಪಾಂಡೆ ತಂದಿರುವ ಚಿನ್ನಕ್ಕೆ ದಾಖಲೆ ಕೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರಕಿದೆ.

    ಡಿಡಿಆರ್ ಮೂಲಗಳ ಪ್ರಕಾರ ಕೃನಾಲ್ ತಮ್ಮ ಜೊತೆ ಅಘೋಷಿತ ಚಿನ್ನ ತಂದಿದ್ದು, ಇದರಲ್ಲಿ 2 ಬಳೆ, ಕೆಲವು ದುಬಾರಿ ಬೆಲೆಯ ಗಡಿಯಾರ ಮತ್ತು ಕೆಲ ಅಮೂಲ್ಯ ವಸ್ತುಗಳಿವೆ ಎನ್ನಲಾಗಿದೆ. ಈ ಸಾಮಾನುಗಳ ಬಗ್ಗೆ ಕೃನಾಲ್ ಡಿಕ್ಲೇರೇಷನ್ ಮಾಡದ ಹಿನ್ನೆಲೆ ವಿಚಾರಣೆಗೆ ಒಳಪಡಿಸಲಾಗಿದೆ. ವಿದೇಶದಿಂದ ಬರುವ ಪುರುಷ 50 ಸಾವಿರ ರೂ. ಬೆಲೆಯವರೆಗಿನ ಚಿನ್ನಕ್ಕೆ ಡ್ಯೂಟಿ ಫ್ರೀ ಸಿಗಲಿದೆ. ಮಹಿಳೆಯರಿಗೆ 1 ಲಕ್ಷದವರೆಗಿನ ಚಿನ್ನಾಭರಣಗಳಿಗೆ ಮಾತ್ರ ವಿನಾಯ್ತಿ ಇದೆ.

    ಕೃನಾಲ್ ಪಾಂಡ್ಯ ಅವರು 2016ರಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಅವರು ಪ್ರತಿನಿಧಿಸುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಐದು ಬಾರೀ ಚಾಂಪಿಯನ್ ಆಗಿ ದಾಖಲೆ ಬರೆದಿದೆ. ಮುಂಬೈ 2013, 2015, 2017 ಮತ್ತು 2019ರಲ್ಲಿ ಕಪ್ ಗೆದ್ದು ಅತೀ ಹೆಚ್ಚು ಬಾರೀ ಐಪಿಎಲ್ ಟ್ರೋಫಿ ಗೆದ್ದ ತಂಡವಾಗಿತ್ತು. ಈಗ ಈ ಬಾರಿಯು ಕಪ್ ಗೆದ್ದು, ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ತಂಡ ಎಂಬ ದಾಖಲೆ ಬರೆದಿದೆ.

  • ಬುಮ್ರಾ, ಪಾಂಡ್ಯ ಭರ್ಜರಿ ಬೌಲಿಂಗ್, ಧವನ್ ಫಿಫ್ಟಿ – ಮುಂಬೈಗೆ 163 ರನ್‍ಗಳ ಗುರಿ

    ಬುಮ್ರಾ, ಪಾಂಡ್ಯ ಭರ್ಜರಿ ಬೌಲಿಂಗ್, ಧವನ್ ಫಿಫ್ಟಿ – ಮುಂಬೈಗೆ 163 ರನ್‍ಗಳ ಗುರಿ

    ಅಬುಧಾಬಿ: ಇಂದು ವೀಕೆಂಡ್ ಧಮಾಕದ ಎರಡನೇ ಮ್ಯಾಚಿನಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 163 ರನ್‍ಗಳ ಟಾರ್ಗೆಟ್ ನೀಡಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ನಾಯಕ ಶ್ರೇಯಸ್ ಐಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು 52 ಬಾಲಿಗೆ ಒಂದು ಸಿಕ್ಸ್ ಮತ್ತು ಆರು ಬೌಂಡರಿಗಳ ನೆರವಿನಿಂದ ಧವನ್ ಅವರು ಸಿಡಿಸಿದ 69 ರನ್‍ಗಳಿಂದ 20 ಓವರಿನಲ್ಲಿ 162 ರನ್ ಕೆಲಹಾಕಿದೆ. ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನ್‍ಅಫ್ ಇರುವ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿದೆ.

    ಬುಮ್ರಾ ಬೌಲಿಂಗ್ ಜಾದು
    ಇಂದಿನ ಪಂದ್ಯದಲ್ಲಿ ಮುಂಬೈ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ಡೆಲ್ಲಿ ತಂಡದ ಇನ್ ಫಾರ್ಮ್ ಆಟಗಾರರನ್ನು ಕೇವಲ 162 ರನ್‍ಗಳಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್ಪ್ರೀತ್ ಬುಮ್ರಾ ಕೇವಲ 26 ರನ್ ಕೊಟ್ಟು ಉತ್ತಮವಾಗಿ ಬೌಲ್ ಮಾಡಿದರು. ಇವರಿಗೆ ಉತ್ತಮ ಸಾತ್ ಕೊಟ್ಟ ಕ್ರುನಾಲ್ ಪಾಂಡ್ಯ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಪಡೆದು ಕೇವಲ 26 ರನ್ ನೀಡಿದರು. ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದುಕೊಂಡರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಆರಂಭಿಕ ಆಘಾತ ನೀಡಿದರು. ಉತ್ತಮ ಲಯದಲ್ಲಿದ್ದ ಪೃಥ್ವಿ ಶಾ ಅವರನ್ನು ಮೊದಲ ಓವರಿನಲ್ಲೇ ಔಟ್ ಮಾಡಿದರು. ನಂತರ ಬಂದು ತಾಳ್ಮೆಯ ಆಟಕ್ಕೆ ಮುಂದಾದ ಅಜಿಂಕ್ಯ ರಹಾನೆ ಅವರು ಐಪಿಎಲ್-2020ಯ ತಮ್ಮ ಮೊದಲ ಮ್ಯಾಚಿನಲ್ಲಿ 15 ಬಾಲಿಗೆ 15 ರನ್ ಸಿಡಿಸಿ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿ ಔಟ್ ಆದರು. ಪವರ್ ಪ್ಲೇ ಮುಕ್ತಾಯಕ್ಕೆ ಡೆಲ್ಲಿ ಎರಡು ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು.

    ನಂತರ ಜೊತೆಯಾದ ಶಿಖರ್ ಧವನ್ ಮತ್ತು ನಾಯಕ ಶ್ರೇಯಸ್ ಐಯ್ಯರ್ ಉತ್ತಮ ಜೊತೆಯಾಟವಾಡಿದರು. ಜೊತೆಗೆ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿ ಮಿಂಚಿದರು. ನಂತರ ಧವನ್ ಮತ್ತು ಐಯ್ಯರ್ 13.1 ಓವರಿನಲ್ಲಿ ಪಂದ್ಯದ ಮೊತ್ತವನ್ನು 100ರ ಗಡಿ ದಾಟಿಸಿದರು. ನಂತರ 14ನೇ ಓವರಿನ 4ನೇ ಬಾಲಿನಲ್ಲಿ 33 ಬಾಲಿಗೆ 42 ರನ್ ಗಳಿಸಿ ಆಡುತ್ತಿದ್ದ ನಾಯ ಶ್ರೇಯಸ್ ಐಯ್ಯರ್ ಅವರನ್ನು ಕ್ರುನಾಲ್ ಪಾಂಡ್ಯ ಅವರು ಔಟ್ ಮಾಡಿ ಪೆವಿಲಿಯನ್‍ಗೆ ಅಟ್ಟಿದರು. ನಂತರ ಮಾರ್ಕಸ್ ಸ್ಟೊಯಿನಿಸ್ ಅವರು ಔಟ್ ಆಗಿ ಹೊರನಡೆದರು.

  • ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

    ಆಡಿದ್ದು 4 ಎಸೆತವಾದ್ರೂ, ಐಪಿಎಲ್‍ನಲ್ಲಿ ಕೃನಾಲ್ ಪಾಂಡ್ಯ ಆಲ್‍ಟೈಮ್ ರೆಕಾರ್ಡ್

    ಶಾರ್ಜಾ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಲ್‍ರೌಂಡರ್ ಕೃನಾಲ್ ಪಾಂಡ್ಯ ಅಪರೂಪದ ದಾಖಲೆ ಬರೆದಿದ್ದಾರೆ.

    ಮುಂಬೈ ಇನ್ನಿಂಗ್ಸ್ ನ ಅಂತ್ಯದಲ್ಲಿ ಕೇವಲ 4 ಎಸೆತಗಳನಷ್ಟೇ ಎದುರಿಸಿದ ಕೃನಾಲ್, 500ರ ಸ್ಟ್ರೈಕ್ ರೇಟ್‍ನೊಂದಿಗೆ 20 ರನ್ ಸಿಡಿಸಿದ್ದಾರೆ. ಐಪಿಎಲ್‍ನಲ್ಲಿ ಕನಿಷ್ಠ 10 ರನ್ ಗಳಿಸಿದ ಆಟಗಾರರಲ್ಲಿ 500 ಸ್ಟ್ರೈಕ್ ರೇಟ್‍ ಹೊಂದಿರುವ ಮೊದಲ ಆಟಗಾರ ಎಂಬ ಇತಿಹಾಸ ಬರೆದಿದ್ದಾರೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಅಂತಿಮ ಓವರಿನ 2ನೇ ಎಸೆತದಲ್ಲಿ ಔಟಾಗಿದ್ದರು. ಆ ಬಳಿಕ ಕ್ರಿಸ್‍ಗೆ ಬಂದ ಕೃನಾಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸಿದ್ಧಾರ್ಥ್ ಕೌಲ್ ಓವರಿನ ಮೂರನೇ ಎಸೆತವನ್ನು ಸಿಕ್ಸರ್ ಸಿಡಿಸಿದ ಕೃನಾಲ್, ಮುಂದಿನ 2 ಎಸೆತಗಳಲ್ಲಿ 2 ಬೌಂಡರಿ ಸಿಡಿದ್ದರು. ಅಂತಿಮ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ 4 ಎಸೆತಗಳಲ್ಲಿ 20 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಕೃನಾಲ್ ಸ್ಫೋಟಕ ಬ್ಯಾಟಿಂಗ್‍ನಿಂದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.

    ಮುಂಬೈ ಪರ ಮಾಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬೌಲರ್ ಗಳ ಬೆವರು ಹರಿಸಿದ ಪೋರ್ಲಾಡ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅಂತಿಮ 5 ಓವರ್ ಗಳಲ್ಲಿ 61 ರನ್ ಗಳಿಸಿದ್ದರು. ಆ ಬಳಿಕ ಭಾರೀ ರನ್ ಮೊತ್ತವನ್ನು ಬೆನ್ನಟ್ಟಿದ್ದ ಹೈದರಾಬಾದ್ ತಂಡ ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್ ಗಳಲ್ಲಿ 174 ರನ್ ಗಳಿಸಲಷ್ಟೇ ಶಕ್ತವಾಯಿತು. 34 ರನ್ ಗಳ ಗೆಲುವು ಪಡೆದ ಮುಂಬೈ ತಂಡ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.

  • ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಮುಂಬೈ: ಒಂದೇ ಕುಟುಂಬದಿಂದ ಇಬ್ಬರು ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ನಾವು ಹೆಚ್ಚಾಗಿ ನೋಡಿಲ್ಲ. ಇಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಭಾರೀ ಸ್ಪರ್ಧೆ ಇದೆ. ಆದರೆ ಪಾಂಡ್ಯ ಸಹೋದರರಾದ ಕೃನಾಲ್ ಮತ್ತು ಹಾರ್ದಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ರಾಷ್ಟ್ರೀಯ ತಂಡಕ್ಕೆ ಸ್ಥಿರವಾದ ಪ್ರದರ್ಶನ ನೀಡಿ, ಗುರುತಿಸಿಕೊಂಡಿದ್ದಾರೆ.

    ಪಾಂಡ್ಯ ಸಹೋದರರು ಆರಂಭಿಕ ದಿನಗಳಿಂದ ಇಲ್ಲಿಯವರೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಕೃನಾಲ್ ಮತ್ತು ಹಾರ್ದಿಕ್ ಅವರ ಬಾಲ್ಯ, ಬೆಳವಣಿಗೆ ಕುರಿತು ‘ರಾಗ್ಸ್ ಟು ರಿಚಸ್’ ಕಥೆ ತಿಳಿಸುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೃನಾಲ್ ಪಾಂಡ್ಯ, ಆರಂಭಿಕ ದಿನಗಳಲ್ಲಿ ಸೋಹದರರಿಬ್ಬರು ಒಂದೇ ಬ್ಯಾಟ್ ಬಳಸುತ್ತಿದ್ದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಇಂದು ನಾವು ಹೀಗೆ ಇರುವುದು ನಿಜವೇ? ನಮ್ಮ ಸದ್ಯದ ಸ್ಥಿತಿಯನ್ನುನಂಬಲು ನಾನು ಆಗಾಗ್ಗೆ ನನ್ನನ್ನು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಕೃನಾಲ್ ಹೇಳಿದ್ದಾರೆ.

    ”ಗುಜರಾತ್‍ನ ವಡೋದರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ನಮಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವುದು ಸುಲಭದ ವಿಚಾರವಲ್ಲ. ಆ ಸಮಯದಲ್ಲಿ ಉತ್ತಮ-ಗುಣಮಟ್ಟದ ಇಂಗ್ಲಿಷ್ ವಿಲೋ ಬ್ಯಾಟ್ ಐಎನ್‍ಆರ್ ಬೆಲೆ 7ರಿಂದ 8 ಸಾವಿರ ರೂ. ಆಗಿತ್ತು. ಆಗ ಅದು ದೊಡ್ಡ ಮೊತ್ತ. ನಾನು ಹಾಗೂ ಹಾರ್ದಿಕ್ ಕ್ರಿಕೆಟ್ ಆಡುತ್ತಿದ್ದರಿಂದ ಇಬ್ಬರಿಗೂ ದುಬಾರಿ ಮೌಲ್ಯದ ಬ್ಯಾಟ್, ಕಿಟ್ ಕೊಡಿಸಲು ಅಪ್ಪನಿಗೂ ಕಷ್ಟವಾಗುತ್ತಿತ್ತು. ತಂದೆಯ ಹೆಗಲ ಮೇಲೆ ನಮ್ಮಿಬ್ಬರ ಮೇಲೆ ಜವಾಬ್ದಾರಿ ಇತ್ತು” ಎಂದು ಕೃನಾಲ್ ಬಹಿರಂಗಪಡಿಸಿದ್ದಾರೆ.

    ”ರಣಜಿ ಟ್ರೋಫಿ ಆಡುವವರೆಗೂ ನಮ್ಮ ಬಳಿ ಬ್ಯಾಟ್ ಇರಲಿಲ್ಲ. ವಿಜಯ್ ಹಜಾರೆ ಟೂರ್ನಿಯಲ್ಲಿ ನಾವು ವಡೋದರಾ ಪರ ಆಡುತ್ತಿದ್ದಾಗ ಹಾರ್ದಿಕ್‍ಗೆ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರು ಉಡುಗೊರೆಯಾಗಿ ಬ್ಯಾಟ್ ನೀಡಿದ್ದರು. ಆದರೆ ನಾನು ಇನ್ನೊಂದು ಬ್ಯಾಟ್ ಹೊಂದಿದ್ದೆ. ನಿರ್ಣಾಯಕ ಆಟದ ವೇಳೆ ಹಾರ್ದಿಕ್‍ನ ಬ್ಯಾಟ್ ಮುರಿಯಿತು. ಆಗ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಹೀಗಾಗಿ ಹಾರ್ದಿಕ್ ನನ್ನ ಬ್ಯಾಟ್ ತೆಗೆದುಕೊಂಡು ಆಟ ಮುಂದುವರಿಸಿದ್ದ” ಎಂದು ಕೃನಾಲ್ ನೆನೆದಿದರು.

    ”ನಾನು ನಂತರ ಬ್ಯಾಟಿಂಗ್ ಮಾಡಲು ಹೊರಟಾಗ ಹಾರ್ದಿಕ್ ಇನ್ನೂ ಕ್ರೀಸ್‍ನಲ್ಲಿದ್ದ. ಆಗ ನನಗೆ ಬ್ಯಾಟ್ ಕೂಡ ಇರಲಿಲ್ಲ. ಹೀಗಾಗಿ ಸ್ಪೇರ್ ಬ್ಯಾಟ್ ನೀಡುವಂತೆ ತಂಡದ ಸಹ ಆಟಗಾರನಿಗೆ ವಿನಂತಿಸಿಕೊಂಡಿದ್ದೆ. ಈ ಸನ್ನಿವೇಶ ಬಹಳ ಮುಜುಗರ ತಂದಿತ್ತು. ಹೀಗೆ ಮತ್ತೊಬ್ಬರ ಬ್ಯಾಟ್ ಕೇಳುವುದು ರಣಜಿ ಟ್ರೋಫಿ ಮಟ್ಟದಲ್ಲಿಯೂ ಸರಿಯಾದ ಕ್ರಮವಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಅಂತ ತೀರ್ಮಾನಿಸಿದೆ ಎಂದು ಹೇಳಿದರು.

  • ಕೊಹ್ಲಿ-ಧೋನಿಗಿಂತ ದುಬಾರಿ ಕಾರಿನ ಒಡೆಯರಾದ ಪಾಂಡ್ಯ ಬ್ರದರ್ಸ್

    ಕೊಹ್ಲಿ-ಧೋನಿಗಿಂತ ದುಬಾರಿ ಕಾರಿನ ಒಡೆಯರಾದ ಪಾಂಡ್ಯ ಬ್ರದರ್ಸ್

    ಮುಂಬೈ: ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಸಹೋದರರು ಮತ್ತೊಂದು ದುಬಾರಿ ಕಾರು ಖರೀದಿಸಿ, ಸುದ್ದಿಯಾಗಿದ್ದಾರೆ.

    ಕೆಲವು ತಿಂಗಳುಗಳ ಹಿಂದೆಯಷ್ಟೇ 2.19 ಕೋಟಿ ರೂ. ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯನ್ನು ಹಾರ್ದಿಕ್ ಪಾಂಡ್ಯ ತಮ್ಮದಾಗಿಸಿಕೊಂಡಿದ್ದರು. ಸದ್ಯ ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಹಾರ್ದಿಕ್ ಪಾಂಡ್ಯ ಹಾಗೂ ವಿಂಡೀಸ್ ಪ್ರವಾಸದಿಂದ ವಾಪಸ್ ಆಗಿರುವ ಕೃನಾಲ್ ಪಾಂಡ್ಯ ಮುಂಬೈನಲ್ಲಿ ದುಬಾರಿ ಲ್ಯಾಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರನ್ನು ಖರೀದಿಸಿದ್ದಾರೆ.

    https://www.instagram.com/p/B1Oeo8PhO8_/?utm_source=ig_embed

    ಲಂಬೋರ್ಗಿನಿ ಹುರಾಕನ್ ಇವಿಒ ಸೂಪರ್ ಕಾರಿನ ಪ್ರಸ್ತುತ ಬೆಲೆಯು 3.73 ಕೋಟಿ ರೂ. (ಎಕ್ಸ್ ಶೋ ರೂಂ) ಆಗಿದೆ. ಪಾಂಡ್ಯ ಬ್ರದರ್ಸ್ ಸದ್ಯ ಇಂತಹದೊಂದು ದುಬಾರಿ ಮೌಲ್ಯದ ಕಾರಿನ ಒಡೆಯರಾಗಿದ್ದಾರೆ.

    ಕಾರು ಪ್ರಿಯರಾಗಿರುವ ಪಾಂಡ್ಯ ಬ್ರದರ್ಸ್ ಭಾರತ ತಂಡ ಪ್ರವೇಶಿಸುವ ಮುನ್ನ ಲೋನ್ ಮೂಲಕ ಕಾರು ಖರೀದಿಸಿದ್ದರು. ಆದರೆ ಐಪಿಎಲ್ ನಲ್ಲಿ ದುಬಾರಿ ಬೆಲೆ ಪಡೆದಿರುವ ಅವರಿಬ್ಬರು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಮಿಂಚುತ್ತಿದ್ದಾರೆ. ಇದೀಗ ಇವರ ಬಳಿ ದುಬಾರಿ ಕಾರುಗಳಾದ ಲ್ಯಾಂಡ್ ರೋವರ್, ರೇಂಜ್ ರೋವರ್, ಮರ್ಸಡೀಸ್ AMG g63, ಆಡಿ A6 ಕಾರುಗಳ ಜೊತೆಗೆ ಲ್ಯಾಂಬೋರ್ಗಿನಿ ಸೇರಿಕೊಂಡಿದೆ.

    https://www.instagram.com/p/B1OEwF4nMls/?utm_source=ig_embed

    ಕಾರಿನ ವಿಶೇಷತೆ ಏನು?:
    ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಲಂಬೋರ್ಗಿನಿ ಹುರಾಕನ್ ಇವಿಒ ಅನ್ನು ಬಿಡುಗಡೆ ಮಾಡಲಾಯಿತು. 0-100 ಕಿಮೀ ವೇಗ ಪಡೆಯಲು ಈ ಕಾರು ತೆಗೆದುಕೊಳ್ಳುವ ಸಮಯ ಕೇವಲ 2.9 ಸೆಕೆಂಡುಗಳು ಮಾತ್ರ.

    ಪಾಂಡ್ಯ ಬ್ರದರ್ಸ್ ಮಾತ್ರವಲ್ಲದೆ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ ಸೇರಿದಂತೆ ಹಲವು ಆಟಗಾರರು ದುಬಾರಿ ಕಾರುಗಳ ಕಲೆಕ್ಷನ್ ನಲ್ಲಿ ಮಂಚೂಣಿಯಲ್ಲಿದ್ದಾರೆ.

  • ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಮುಂಬೈ: ಐಪಿಎಲ್ 12ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಸೋಲಿನ ಅನುಭವ ಪಡೆದಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೃನಾಲ್ ಪಾಂಡ್ಯ ಧೋನಿ ಬ್ಯಾಟಿಂಗ್ ವೇಳೆ ಮಂಕಡ್ ಚಮಕ್ ಕೊಟ್ಟಿದ್ದಾರೆ.

    ಟೂರ್ನಿಯಲ್ಲಿ ಮೊದಲ ಬಾರಿಗೆ ಮಂಕಡ್ ರನೌಟ್ ಮಾಡಿ ಕಿಂಗ್ಸ್ ಇಲೆವೆನ್ ತಂಡದ ಆರ್ ಅಶ್ವಿನ್ ಭಾರೀ ಚರ್ಚೆಗೆ ಒಳಗಾಗಿದ್ದರು. ಆ ಬಳಿಕ ಇಂತಹದ್ದೇ ಪ್ರಯತ್ನವನ್ನು ಕೃನಾಲ್ ಮಾಡಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ 15 ವರ್ಷಗಳನ್ನು ಪೂರ್ಣಗೊಳಿಸಿರುವ ಧೋನಿ ಯಾವುದೇ ಸಂದರ್ಭದಲ್ಲಿ ಫೀಲ್ಡ್ ನಲ್ಲಿ ಮೈಮರೆಯುವುದಿಲ್ಲ ಎಂಬುವುದು ಇದೇ ಸಂದರ್ಭದಲ್ಲಿ ಸಾಬೀತಾಗಿದೆ. ಪಂದ್ಯದಲ್ಲಿ ಬೌಲ್ ಮಾಡಲು ಯತ್ನಿಸಿದ ಅವರು ಕೊನೆ ಕ್ಷಣದಲ್ಲಿ ಚೆಂಡು ಎಸೆಯದೆ ಪೂರ್ಣಗೊಳಿಸಿದ್ದರು. ಆದರೆ ಈ ಸಮಯದಲ್ಲಿ ಧೋನಿ ಕ್ರಿಸಿನಲ್ಲೇ ಇದ್ದರು.

    ಮಂಕಡ್ ರನೌಟ್ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆದಿದ್ದು, ಸದ್ಯ ಧೋನಿ ಅಭಿಮಾನಿಗಳು ಕೂಡ ಕೃನಾಲ್ ಪಾಂಡ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಧೋನಿ ಸ್ಮಾರ್ಟ್ ಆಟಗಾರರಾಗಿದ್ದಾರೆ ಎಂದು ತಿಳಿಸಿ ಟ್ರೋಲ್ ಮಾಡಿದ್ದಾರೆ.

    ಟೂರ್ನಿಯಲ್ಲಿ ಮೊದಲ ಸೋಲುಂಡ ಬಳಿಕ ಮಾತನಾಡಿದ ಧೋನಿ, ಪಂದ್ಯದ 10ರಿಂದ 12 ಓವರಿಗೆ ಎದುರಾಳಿ ತಂಡವನ್ನು ಸಮರ್ಥವಾಗಿ ಬೌಲಿಂಗ್ ಮಾಡಿ ನಿಯಂತ್ರಿಸಿದೆವು. ಆದರೆ ಅಂತಿಮ ಓವರ್ ಗಳಲ್ಲಿ ಹೆಚ್ಚು ರನ್ ನೀಡಲಾಯಿತು. ಕೆಲ ಕ್ಯಾಚ್‍ಗಳನ್ನು ಮಿಸ್ ಮಾಡಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು. ತಂಡದ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಬ್ರಾವೋ ಕೂಡ ಲಭ್ಯರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಸರಿಯಾದ ಕಂಬಿನೇಷನ್ ನೊಂದಿಗೆ ಕಣಕ್ಕೆ ಇಳಿಯುತ್ತೇವೆ ಎಂದು ತಿಳಿಸಿದ್ದಾರೆ.

  • ಆನ್‍ಫೀಲ್ಡ್ ನಲ್ಲೇ ಕೃಣಾಲ್ ಪಾಂಡ್ಯ ಗರಂ – ವಿಡಿಯೋ ನೋಡಿ

    ಆನ್‍ಫೀಲ್ಡ್ ನಲ್ಲೇ ಕೃಣಾಲ್ ಪಾಂಡ್ಯ ಗರಂ – ವಿಡಿಯೋ ನೋಡಿ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯ ಆನ್‍ಫೀಲ್ಡ್ ನಲ್ಲೇ ಗರಂ ಆಗಿದ್ದು, ಕ್ಯಾಚ್ ಪಡೆಯಲು ಅಡ್ಡ ಬಂದ ಬ್ಯಾಟ್ಸ್ ಮನ್ ವಿರುದ್ಧ ಅಂಪೈರ್ ಬಳಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮೊದಲ ಟಿ20 ಪಂದ್ಯದ 8 ಓವರ್ ವೇಳೆ ಘಟನೆ ನಡೆದಿದ್ದು, ಕೃಣಾಲ್ ಪಾಂಡ್ಯ ಬೌಲಿಂಗ್ ಎದುರಿಸಿದ್ದ ವಿಲಿಯಮ್ಸನ್ ತಮ್ಮ ಮೊದಲ ಎಸೆತದಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಈ ವೇಳೆ ಚೆಂಡು ಬ್ಯಾಟಿಗೆ ತಾಗಿ ನೇರ ಬೌಲರ್ ಬಲಗಡೆಗೆ ಚಿಮ್ಮಿತು. ಇತ್ತ ಕ್ಯಾಚ್ ಪಡೆಯಲು ಕೃಣಾಲ್ ಡೈವ್ ಮಾಡುವ ಪ್ರಯತ್ನ ಮಾಡಿದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಸಿಫರ್ಟ್ ಪಾಂಡ್ಯಗೆ ಆಡ್ಡ ಬಂದಿದ್ದರು. ಇದರಿಂದ ಕ್ಷಣ ಕಾಲ ಗರಂ ಆದ ಕೃಣಾಲ್ ಅಂಪೈರ್ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

    https://twitter.com/WastingBalls/status/1093060649297629184

    ಈ ವೇಳೆ ಕೃಣಾಲ್ ರನ್ನು ಸಮಾಧಾನ ಪಡಿಸಲು ಯತ್ನಿಸಿದ ಅಂಪೈರ್ ತಾಳ್ಮೆ ಕಳೆದುಕೊಳ್ಳದಂತೆ ಸಲಹೆ ನೀಡಿದರು. ಬ್ಯಾಟ್ಸ್ ಮನ್ ವಿರುದ್ಧ ಅಸಮಾಧಾನದಿಂದಲೇ ಆಟ ಮುಂದುವರಿಸಿದ ಕೃಣಾಲ್ ತಮ್ಮ ಸ್ಪೆಲ್ ಪೂರ್ಣಗೊಳಿಸಿದರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ ಕೂಡ ಅಂಪೈರ್ ಬಳಿ ಬಂದು ಮಾತುಕತೆ ನಡೆಸಿದರು. ಅಂತಿಮವಾಗಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವಿಲಿಯಮ್ಸನ್ 22 ಎಸೆತಗಳನ್ನು ಎದುರಿಸಿದ 3 ಸಿಕ್ಸರ್ ಗಳ ನೆರವಿನಿಂದ 34 ಗಳಿಸಿ ವಿಕೆಟ್ ಒಪ್ಪಿಸಿದರು. ಪಂದ್ಯದಲ್ಲಿ ನ್ಯೂಜಿಲೆಂಡ್ 80 ರನ್ ಅಂತರದ ಜಯ ಪಡೆಯಿತು. ಸ್ಫೋಟಕ ಪ್ರದರ್ಶನ ನೀಡಿದ ಸಿಫರ್ಟ್ ಪಂದ್ಯ ಶ್ರೇಷ್ಠ ಗೌರವ ಪಡೆದರು.

    ಉಳಿದಂತೆ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಸಹೋದರು ಆಡಿದ್ದರು. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಈ ಇಬ್ಬರು ಒಂದೇ ಪಂದ್ಯದಲ್ಲಿ ಆಡಿದ್ದರು ಕೂಡ, ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಆಡಿದ್ದು ಮೊದಲ ಬಾರಿ ಆಗಿದೆ. ಪಂದ್ಯದಲ್ಲಿ ಕೃಣಾಲ್ 37 ರನ್ ನೀಡಿ 1 ವಿಕೆಟ್ ಪಡೆದರೆ, ಹಾರ್ದಿಕ್ 51 ರನ್ ನೀಡಿ 2 ವಿಕೆಟ್ ಪಡೆದರು. ಅಂತರಾಷ್ಟ್ರಿಯ ಕ್ರಿಕೆಟ್ ಪಂದ್ಯದಲ್ಲಿ ಭಾರತ ಪರ ಒಟ್ಟಿಗೆ ಆಡುತ್ತಿರುವ 3ನೇ ಜೋಡಿ ಇದಾಗಿದ್ದು, ಈ ಹಿಂದೆ ಸುರೀಂದರ್, ಮೊಹಿಂದರ್ ಅಮರನಾಥ್ ಹಾಗು ಯೂಸುಫ್, ಇಫಾರ್ನ್ ಪಠಾಣ್ ಸಹೋದರು ಒಂದೇ ಪಂದ್ಯದಲ್ಲಿ ಆಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿರಿಯ ಆಟಗಾರನಿಗೆ ಖಾಲಿ ಚೆಕ್ ನೀಡಿ ಮಾನವೀಯತೆ ಮೆರೆದ ಕೃನಾಲ್ ಪಾಂಡ್ಯ

    ಹಿರಿಯ ಆಟಗಾರನಿಗೆ ಖಾಲಿ ಚೆಕ್ ನೀಡಿ ಮಾನವೀಯತೆ ಮೆರೆದ ಕೃನಾಲ್ ಪಾಂಡ್ಯ

    ವಡೋದರಾ: ವೆಂಟಿಲೇಟರ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಜೇಕಬ್ ಮಾರ್ಟಿನ್ ನೆರವಿಗೆ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಧಾವಿಸಿದ್ದಾರೆ.

    ಡಿಸೆಂಬರ್ 28 ರಂದು ನಡೆದ ರಸ್ತೆ ಅಪಘಾತದಿಂದಾಗಿ ಶ್ವಾಸಕೋಶ ಮತ್ತು ಲಿವರ್ ಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೇಕಬ್ ಮಾರ್ಟಿನ್ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ.

    ಈಗಾಗಲೇ ಬಿಸಿಸಿಐ 5 ಲಕ್ಷ ರೂ. ನೀಡಿದ್ದರೆ ಬರೋಡಾ ಕ್ರಿಕೆಟ್ ಸಂಸ್ಥೆ 3 ಲಕ್ಷ ರೂ. ನೀಡಿದೆ. ಸೌರವ್ ಗಂಗೂಲಿ ಸೇರಿದಂತೆ ಹಲವು ಕ್ರಿಕೆಟಿಗರು ಮಾರ್ಟಿನ್ ಅವರಿಗೆ ಸಹಾಯ ಮಾಡಿದ್ದಾರೆ. ಈಗ ಕೃನಾಲ್ ಪಾಂಡ್ಯ ಸಹ ಸಹಾಯ ಹಸ್ತ ಚಾಚಿದ್ದಾರೆ.

    ಈ ಸಂಬಂಧ ಖಾಲಿ ಚೆಕ್ ನೀಡಿದ ಕೃನಾಲ್, ಎಷ್ಟು ಹಣ ಬೇಕಾದರೂ ಬರೆದುಕೊಳ್ಳಿ, ಆದರೆ ಯಾವುದೇ ಕಾರಣಕ್ಕೂ 1 ಲಕ್ಷ ರೂ. ಗಿಂತ ಕಡಿಮೆ ಮೊತ್ತವನ್ನು ಈ ಚೆಕ್ ನಲ್ಲಿ ಬರೆಯಬೇಡಿ ಎಂದು ಹೇಳಿದ್ದಾರೆ.

    ಆರಂಭದಲ್ಲಿ ಮಾಜಿ ಆಟಗಾರ ಮತ್ತು ಹಾಲಿ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆಗಿರುವ ಸಂಜಯ್ ಪಟೇಲ್ ಸಹಾಯಹಸ್ತ ಚಾಚಿದ್ದು ಈಗ ಗಂಗೂಲಿ, ರವಿಶಾಸ್ತ್ರಿ ಸೇರಿದಂತೆ ಹಲವು ಮಂದಿ ಆರ್ಥಿಕ ಸಹಾಯ ಮಾಡಿದ್ದಾರೆ.

    ಮಾರ್ಟಿನ್ ಕುಟುಂಬ ಈಗ ಕಷ್ಟದಲ್ಲಿದ್ದು, ಎಷ್ಟು ಹಣ ಬೇಕೆಂದು ಕೇಳುವ ಪರಿಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ ಅವರ ಕಷ್ಟಕ್ಕೆ ಕ್ರಿಕೆಟ್ ಸದಸ್ಯರು ಸಹಾಯ ಮಾಡುತ್ತಿದ್ದಾರೆ ಎಂದು ಸಂಜಯ್ ಪಟೇಲ್ ತಿಳಿಸಿದರು.

    1972 ಮೇ 11 ರಂದು ಗುಜರಾತಿನ ಬರೋಡಾದಲ್ಲಿ ಜನಿಸಿದ ಬಲಗೈ ಬ್ಯಾಟ್ಸ್ ಮನ್ ಜೇಕಬ್ ಮಾರ್ಟಿನ್ 1999ರಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, 22.57 ಸರಾಸರಿಯಲ್ಲಿ ಒಟ್ಟು 158 ರನ್ ಗಳಿಸಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ 5 ಪಂದ್ಯ ಸಚಿನ್ ನಾಯಕತ್ವದಲ್ಲಿ ಮಾರ್ಟಿನ್ 5 ಪಂದ್ಯಗಳನ್ನು ಆಡಿದ್ದರು.

    2011ರಲ್ಲಿ ಮಾನವ ಕಳ್ಳ ಸಾಗಾಣೆ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಜೇಕಬ್ ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಬರೋಡದ ವಿವಿಧ ವಯೋಮಿತಿ ತಂಡಗಳಿಗೆ ತರಬೇತಿ ನೀಡುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv