Tag: Krunal Pandya

  • ಲಕ್ನೋ ನಾಯಕ ಕೆಎಲ್ ರಾಹುಲ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಲಕ್ನೋ ನಾಯಕ ಕೆಎಲ್ ರಾಹುಲ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ (KL Rahul) ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಈ ಮೂಲಕ ಮುಂಬರುವ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಆಡುವ ನಿರೀಕ್ಷೆ ಇದೆ.

    ಈ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಬರೆದುಕೊಂಡಿರುವ ಅವರು, ನಾನು ಆರೋಗ್ಯವಾಗಿದ್ದೇನೆ. ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಆಟಕ್ಕೆ ಆರ್‌ಸಿಬಿ ಬರ್ನ್‌ – ಮುಂಬೈಗೆ 6 ವಿಕೆಟ್‌ಗಳ ಭರ್ಜರಿ ಜಯ

    ಕಳೆದ ತಿಂಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವೇಳೆ ಲಕ್ನೋ ಪರ ಫೀಲ್ಡಿಂಗ್ ವೇಳೆ ರಾಹುಲ್ ಕಾಲಿನ ಗಾಯಕ್ಕೊಳಗಾಗಿದ್ದರು. ಇದರಿಂದಾಗಿ ನಂತರದ ಐಪಿಎಲ್ ಪಂದ್ಯಗಳಿಂದ ಅವರು ಹೊರಗುಳಿಯ ಬೇಕಾಯಿತು. ಅಲ್ಲದೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಿಂದಲೂ ಅವರು ದೂರ ಉಳಿಯುವ ಸಾಧ್ಯತೆಗಳಿವೆ.

     

    ಅವರ ಅನುಪಸ್ಥಿತಿಯಲ್ಲಿ ಭಾನುವಾರದ ಐಪಿಎಲ್ ಪಂದ್ಯದಲ್ಲಿ ತಂಡವನ್ನು ಕೃನಾಲ್ ಪಾಂಡ್ಯ (Krunal Pandya) ಮುನ್ನಡೆಸಿದ್ದರು. ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಅವರ ಜಾಗವನ್ನು ಇಶಾನ್ ಕಿಶನ್ (Ishan Kishan) ತುಂಬಲಿದ್ದಾರೆ.

    ಎಲ್ಲಾ ಬಗೆಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಾವೀಣ್ಯತೆಯಿಂದ ಖ್ಯಾತಿ ಪಡೆದಿರುವ ಕೆಎಲ್ ರಾಹುಲ್ ಏಷ್ಯಾ ಕಪ್ (Asia Cup) ಹಾಗೂ ಏಕದಿನ ವಿಶ್ವಕಪ್ (ODI World Cup) ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ. ಇದನ್ನೂ ಓದಿ: ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

  • ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಐಪಿಎಲ್ ಅಖಾಡದಲ್ಲಿ ಪಾಂಡ್ಯ ಸಹೋದರರ ಸವಾಲ್ – ಯಾರಿಗೆ ಒಲಿಯಲಿದೆ ಜಯದ ಕಿರೀಟ?

    ಗಾಂಧಿನಗರ: ಇದೇ ಮೊದಲ ಬಾರಿಗೆ ಐಪಿಎಲ್ (IPL) ಇತಿಹಾಸದಲ್ಲಿ ಅಣ್ಣ ತಮ್ಮ ಇಬ್ಬರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. 16ನೇ ಐಪಿಎಲ್ ಆವೃತ್ತಿಯಲ್ಲಿ ಭಾನುವಾರ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಡುವಿನ ಪಂದ್ಯವೂ ಸಹೋದರರ ಸವಾಲ್‍ಗೆ ವೇದಿಕೆಯಾಗಿದೆ.

    ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಲಕ್ನೋ ತಂಡದ ನಾಯಕನಾಗಿ ಕೃನಾಲ್ ಪಾಂಡ್ಯ (Krunal Pandya) ಕಣಕ್ಕಿಳಿದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಗಳನ್ನು ಹೊಂದಿರುವ ಇತ್ತಂಡದ ನಾಯಕರು ಕಣದಲ್ಲಿ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: ಶೇಕ್‍ಹ್ಯಾಂಡ್ ವಿವಾದಕ್ಕೆ ತೆರೆ ಎಳೆದ ಕೊಹ್ಲಿ, ಗಂಗೂಲಿ

    ಐಪಿಎಲ್ ಫ್ರಾಂಚೈಸಿಯಲ್ಲಿ ಈ ಹಿಂದೆ ಅನೇಕ ಸಹೋದರರು ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ನಾಯಕರಾಗಿ ಅಣ್ಣ ತಮ್ಮ ಕಣದಲ್ಲಿ ಅಬ್ಬರಿಸುತ್ತಿರುವುದು ರೋಚಕವಾಗಿದೆ. ಕಳೆದ ವಾರ ಆರ್‌ಸಿಬಿ (RCB) ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೆ.ಎಲ್ ರಾಹುಲ್ (KL Rahul) ಗಾಯಕ್ಕೆ ತುತ್ತಾಗಿದ್ದರಿಂದ ಕೃನಾಲ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ.

    ಇನ್ನೂ 2022ರಲ್ಲಿ ಮೊದಲಬಾರಿಗೆ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವದಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವ ಮೂಲಕ ಪಾಂಡ್ಯ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇತ್ತಂಡಗಳಿಗೂ ಇದು ಸವಾಲಿನ ಪಂದ್ಯವಾಗಿದೆ.

    2023ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ತಂಡ 14 ಅಂಕಗಳೊಂದಿಗೆ ಟಾಪ್ 1 ಸ್ಥಾನದಲ್ಲಿದೆ. ಆದ್ರೆ 10 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿರುವ ಲಕ್ನೋ 11 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಲಕ್ನೋ ಗೆದ್ದರೆ ಟಾಪ್ 2ನೇ ಸ್ಥಾನಕ್ಕೆ ಬರಲಿದೆ.

    ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಕರಣ್ ಶರ್ಮಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಸ್ವಪ್ನಿಲ್ ಸಿಂಗ್, ಯಶ್ ಠಾಕೂರ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್ ಮತ್ತು ಅವೇಶ್ ಖಾನ್.

    ಇಂಪ್ಯಾಕ್ಟ್ ಪ್ಲೇಯರ್ಸ್: ಆಯುಷ್ ಬಡೋನಿ, ಅಮಿತ್ ಮಿಶ್ರಾ, ಡೇನಿಯಲ್ ಸಾಮ್ಸ್, ಯದ್ವೀರ್ ಸಿಂಗ್ ಮತ್ತು ಪ್ರೇರಕ್ ಮಂಕಡ್.

    ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್ ಮತ್ತು ಮೊಹಮ್ಮದ್ ಶಮಿ.

    ಇಂಪ್ಯಾಕ್ಟ್ ಪ್ಲೇಯರ್ಸ್: ಅಲ್ಜಾರಿ ಜೋಸೆಫ್, ದಸುನ್ ಶನಕ, ಕೆಎಸ್ ಭರತ್, ಶಿವಂ ಮಾವಿ ಮತ್ತು ಜಯಂತ್ ಯಾದವ್. ಇದನ್ನೂ ಓದಿ: RCBಯನ್ನು ಹುರಿದು ಮುಕ್ಕಿದ ಡೆಲ್ಲಿ – ಕ್ಯಾಪಿಟಲ್ಸ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ 

  • IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ: ಬಿಗಿ ಹಿಡಿತದ ಬೌಲಿಂಗ್‌ ಹಾಗೂ ಕೆ.ಎಲ್‌.ರಾಹುಲ್‌ (KL Rahul), ಕೃನಾಲ್‌ ಪಾಂಡ್ಯ (Krunal Pandya) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. 122 ರನ್‌ ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ (Lacknow Super Gaints) ತಂಡವು 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ:  ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ 13 ರನ್‌ ಗಳಿಸಿ ಔಟಾಗುತ್ತಿದ್ದಂತೆ ದೀಪಕ್‌ 7 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. 3ನೇ ವಿಕೆಟ್‌ಗೆ ಜೊತೆಯಾದ ಕೃನಾಲ್‌ ಪಾಂಡ್ಯ ಹಾಗೂ ಆರಂಭಿಕ ಕೆ.ಎಲ್‌. ರಾಹುಲ್‌ ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದರು. 38 ಎಸೆತಗಳಲ್ಲಿ ಈ ಜೋಡಿ 55 ರನ್‌ ಕಲೆಹಾಕಿತು. ಈ ವೇಳೆ ಕೃನಾಲ್‌ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್)‌ ಗಳಿಸಿದರು. ಇನ್ನೂ 36 ಎಸೆತಗಳಲ್ಲಿ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದಾಗಲೇ ರಾಹುಲ್‌ 35 ರನ್‌ (30 ಎಸೆತ, 4 ಬೌಂಡರಿ) ಗಳಿಸಿ ಹೊರನಡೆದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ 10 ರನ್‌, ನಿಕೊಲಸ್‌ ಪೂರನ್‌ ಅಜೇಯ 11 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹೈದರಾಬಾದ್‌ ತಂಡದ ಪರ ಆದಿಲ್‌ ರಶೀದ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಫಜಲ್ಹಕ್ ಫಾರೂಕಿ, ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಪರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಅನ್ಮೋಲ್‌ಪ್ರಿತ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 2.5 ಓವರ್‌ಗಳಲ್ಲಿ ತಂಡದ ಮೊತ್ತ 21 ರನ್‌ಗಳಾಗಿದ್ದಾಗಲೇ 8 ರನ್ ಗಳಿಸಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಸುಲಭ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ (Rahul Tripathi) ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 41 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 35 ರನ್ ಗಳಿಸಿದರು. ಈ ವೇಳೆ ಅನ್ಮೋಲ್‌ಪ್ರಿತ್ ಸಿಂಗ್ 26 ಎಸೆತಗಳಲ್ಲಿ 31 ರನ್ (3 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾದರು.

    4ನೇ ವಿಕೆಟ್‌ಗೆ ಕ್ರೀಸ್‌ಗಿಳಿದ ನಾಯಕ ಏಡೆನ್ ಮಾರ್ಕ್ರಮ್ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಪಿನ್‌ ದಾಳಿಗೆ ತುತ್ತಾದರು. ನಂತರ ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 16 ರನ್, ಅಬ್ದುಲ್ ಸಮದ್ 10 ಎಸೆತಗಳಲ್ಲಿ 21 ರನ್, ಆದಿಲ್ ರಶೀದ್ 4 ರನ್ ಗಳಿಸಿದರು.

    ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

  • ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್

    ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್

    ಮುಂಬೈ: ಟೀಂ ಇಂಡಿಯಾದ (Team India) ಟಿ20 (T20I) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ರಾಕಿಂಗ್ ಸ್ಟಾರ್ ಯಶ್ (Yash) ಜೊತೆ ಕಾಣಿಸಿಕೊಂಡಿದ್ದಾರೆ.

    ಕೆಜಿಎಫ್ (KGF) ಖ್ಯಾತಿಯ ಸ್ಯಾಂಡಲ್‍ವುಡ್ ಸ್ಟಾರ್ ಜೊತೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ (Krunal Pandya) ಇಬ್ಬರು ಫೋಟೋ ತೆಗೆಸಿಕೊಂಡಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 3 ಎಂದು ಬರೆದುಕೊಂಡು ಹಾರ್ದಿಕ್ ಪೋಸ್ಟ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪೋಸ್ಟ್ ಮಾಡುತ್ತಿದ್ದಂತೆ ಕೆಜಿಎಫ್ 3 ಟ್ರೆಂಡಿಂಗ್ ಆಗಿದೆ. ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    ಹಾರ್ದಿಕ್ ಪಾಂಡ್ಯ ಸದ್ಯ ಶ್ರೀಲಂಕಾ ವಿರುದ್ಧದ ಸರಣಿಯ ಸಿದ್ಧತೆಯಲ್ಲಿದ್ದು, ಟಿ20 ತಂಡದ ನಾಯಕನಾಗಿ ಆಯ್ಕೆಗೊಂಡಿದ್ದಾರೆ. ಏಕದಿನ ತಂಡದ ಉಪನಾಯಕನ ಸ್ಥಾನ ಕೂಡ ಸಿಕ್ಕಿದೆ. ತವರಿನಲ್ಲಿ ಭಾರತ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಇದನ್ನೂ ಓದಿ: ಏಕೆ ಬಾಸ್-ಬಾಸ್ ಅಂತಾ ಒದ್ದಾಡ್ತಿರಾ? – ಅಭಿಮಾನಿಗಳಿಗೆ ಬುದ್ಧಿ ಹೇಳಿದ ಶಿವಣ್ಣ

    Live Tv
    [brid partner=56869869 player=32851 video=960834 autoplay=true]

  • ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್

    ಗಂಡು ಮಗುವಿಗೆ ತಂದೆಯಾದ ಕ್ರಿಕೆಟಿಗ ಕೃನಾಲ್ ಪಾಂಡ್ಯ: ಮಗುವಿನ ಹೆಸರು ರಿವೀಲ್

    ಕ್ರಿಕೆಟ್ ಜಗತ್ತಿನಲ್ಲಿ ಸಾಧನೆ ಮಾಡಿರುವ ಕೃನಾಲ್ ಪಾಂಡ್ಯ ಈಗ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೃನಾಲ್ ಪಾಂಡ್ಯ ದಂಪತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೃನಾಲ್ ಪತ್ನಿ ಪಂಖೂರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಕ್ರಿಕೆಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕೃನಾಲ್ ಪಾಂಡ್ಯ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಡಿಸೆಂಬರ್ 2007ರಲ್ಲಿ ಪಂಖೂರಿ ಶರ್ಮಾ ಅವರ ಜತೆ ದಾಂಪತ್ಯ ಜೀವನಕ್ಕೆ ಕೃನಾಲ್ ಪಾಂಡ್ಯ ಕಾಲಿಟ್ಟಿದ್ದರು. ಕೃನಾಲ್ ಪತ್ನಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜತೆಗೆ ಮಗುವಿನ ಹೆಸರನ್ನ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ

    ಕೃನಾಲ್ ಪಾಂಡ್ಯ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಗಂಡು ಮಗುವಿನ ಆಗಮನದ ಖುಷಿಯಲ್ಲಿ, ಮಗನ ಹೆಸರನ್ನ ಕೂಡ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕವೀರ್ ಕೃನಾಲ್ ಪಾಂಡ್ಯ ಎಂದು ಹೆಸರಿಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಮುಂಬೈ: ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್ ಕೃನಾಲ್ ಪಾಂಡ್ಯ ಬೌಲಿಂಗ್‍ನಲ್ಲಿ ವಿಕೆಟ್ ಕಳೆದುಕೊಂಡ ಮುಂಬೈ ಬ್ಯಾಟ್ಸ್‌ಮ್ಯಾನ್‌ ಕೀರನ್ ಪೋಲಾರ್ಡ್ ಪೆವಿಲಿಯನ್‍ಗೆ ಹೆಜ್ಜೆಹಾಕುತ್ತಿದ್ದಂತೆ ಪಾಂಡ್ಯ ಮುತ್ತುಕೊಟ್ಟು ಸಂಭ್ರಮಿಸಿದ ಫೋಟೋ ವೈರಲ್ ಆಗುತ್ತಿದೆ.

    ಈ ಹಿಂದೆ ಕೃನಾಲ್ ಪಾಂಡ್ಯ ಮತ್ತು ಪೋಲಾರ್ಡ್ ಮುಂಬೈ ತಂಡದಲ್ಲಿ ಜೊತೆಯಾಗಿ ಆಡುತ್ತಿದ್ದರು. ಆದರೆ 15ನೇ ಅವೃತ್ತಿ ಐಪಿಎಲ್‍ನಲ್ಲಿ ಪೋಲಾರ್ಡ್ ಮುಂಬೈ ತಂಡದ ಪರ ಆಡುತ್ತಿದ್ದರೆ, ಪಾಂಡ್ಯ ಲಕ್ನೋ ಪರ ಆಡುತ್ತಿದ್ದಾರೆ. ಆದರೂ ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ರೋಚಕ ಹಣಾಹಣಿ ನಡೆದಿತ್ತು. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಕೃನಾಲ್ ಪಾಂಡ್ಯ ವಿಕೆಟ್‍ನ್ನು ಪೋಲಾರ್ಡ್ ಕಿತ್ತಿದ್ದರು. ಆ ಬಳಿಕ ಮುಂಬೈ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಪೋಲಾರ್ಡ್ 19 ರನ್ (20 ಎಸೆತ, 1 ಸಿಕ್ಸ್) ಸಿಡಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದಾಗ ದಾಳಿಗಿಳಿದ ಕೃನಾಲ್ ಪಾಂಡ್ಯ, ಪೋಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಕೆಟ್ ಪಡೆದ ಬಳಿಕ ಪೆವಿಲಿಯನ್‍ಗೆ ಹೊರಟ ಪೋಲಾರ್ಡ್ ಬಳಿ ತೆರಳಿದ ಪಾಂಡ್ಯ ಮುತ್ತು ಕೊಟ್ಟು ಸಂಭ್ರಮಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಪೋಲಾರ್ಡ್ ವಿಕೆಟ್ ಸಿಗದೇ ಇದ್ದಿದ್ದರೆ ನನಗೆ ಜೀವನಪೂರ್ತಿ ಕಾಡುತ್ತಿತ್ತು. ಇದೀಗ 1-1 ಸಮಬಲಗೊಂಡಿದೆ. ಪೋಲಾರ್ಡ್ ಮಾತನಾಡದಂತಾಗಿದೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

    ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕದಾಟ ಮತ್ತು ಲಕ್ನೋ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯ ಫಲವಾಗಿ 36 ರನ್‍ಗಳಿಂದ ಗೆದ್ದಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ 8ನೇ ಸೋಲು ಕಂಡು ಮತ್ತೆ ನಿರಾಸೆ ಅನುಭವಿಸಿತು.

  • ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು

    ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ – ಭಾರತ, ಶ್ರೀಲಂಕಾ ಟಿ20 ಪಂದ್ಯ ರದ್ದು

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶ್ರೀಲಂಕಾ ಜೊತೆಗಿನ ಟಿ20 ಪಂದ್ಯವನ್ನು ಸಹ ಆಡಿದ್ದಾರೆ. ಕೃನಾಲ್ ಸೋಂಕಿಗೆ ತುತ್ತಾಗಿರುವ ಹಿನ್ನೆಲೆ ಕೋಲಂಬೋದಲ್ಲಿ ನಡೆಯಬೇಕಿದ್ದ ಟಿ20 ಪಂದ್ಯವನ್ನು ಒಂದು ಮಟ್ಟಿಗೆ ಮುಂದೂಡಲಾಗಿದೆ.

    ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಬೇಕಿತ್ತು. ಕೃನಾಲ್ ಸೋಂಕಿತರಾಗಿರೋದು ಇನ್ನುಳಿದ ಆಟಗಾರರು ಐಸೋಲೇಟ್ ಆಗಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿದ್ದು, ಕೃನಾಲ್ ವರದಿ ಪಾಸಿಟಿವ್ ಬರುತ್ತಿದ್ದಂತೆ ತಂಡದ ಎಲ್ಲ ಆಟಗಾರರು ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದಾರೆ. ಇಂದು ಸಂಜೆ ಎಲ್ಲರ ಕೊರೊನಾ ವರದಿ ಬರಲಿದ್ದು, ನೆಗೆಟಿವ್ ರಿಪೋರ್ಟ್ ಬಂದ್ರೆ ಬುಧವಾರ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಮೂರು ಪಂದ್ಯಗಳಲ್ಲಿ 1-0ಯಲ್ಲಿ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 38 ರನ್ ಗಳ ಅಂತರದಲ್ಲಿ ಗೆದ್ದುಕೊಂಡು ಜಯದ ನಗೆ ಬೀರಿತ್ತು. ಈ ಪಂದ್ಯದಲ್ಲಿ ಕೃನಾಲ್ ಎರಡು ಓವರ್ ಬಾಲ್ ಮಾಡಿ 16 ರನ್ ನೀಡಿ ಒಂದು ವಿಕೆಟ್ ಪಡೆದುಕೊಂಡಿದ್ದರು. ಜೊತೆಗೆ ಬ್ಯಾಟ್ ಹಿಡಿದು 3 ರನ್ ಸಹ ಕಲೆ ಹಾಕಿದ್ದರು.

    ಇದಕ್ಕೂ ಮೊದಲು ಭಾರತ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತ್ತು.

  • ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

    ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

    ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರು ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಈ ಇಬ್ಬರು ಸಹೋದರು ಜಿಮ್‍ನಲ್ಲಿ ಜಿದ್ದಿಗೆ ಬಿದ್ದು ಯಾರು ಬೆಸ್ಟ್ ಎನ್ನುವುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.

    ಪಾಂಡ್ಯ ಸಹೋದರರು ಜಿಮ್‍ನಲ್ಲಿ ಮೂರು ಸವಾಲುಗಳನ್ನು ಪರಸ್ಪರ ಎದುರಾಳಿಗಳಾಗಿ ಎದುರಿಸಿದ್ದಾರೆ. ಈ ವೀಡಿಯೋವನ್ನು ಬಿಸಿಸಿಐ ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

    ಲಂಕಾ ನೆಲದಲ್ಲಿ ಬೀಡುಬಿಟ್ಟಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಲ್‍ರೌಂಡರ್ಸ್‍ಗಳಾಗಿ ಗುರುತಿಸಿಕೊಂಡಿರುವ ಪಾಂಡ್ಯ ಸಹೋದರು ಜಿಮ್‍ನಲ್ಲಿ ಕಾದಾಟ ನಡೆಸಿದ್ದಾರೆ. ಇಬ್ಬರೂ ಕೂಡ 3 ಚಾಲೆಂಜ್‍ಗಳನ್ನು ಸ್ವೀಕರಿಸಿದ್ದಾರೆ ಮೊದಲು ‘ವಾಲ್ ಸ್ಕ್ವಾಟ್ ಹೋಲ್ಡ್’ ಚಾಲೆಂಚ್ ಸ್ವೀಕರಿಸಿದ್ದಾರೆ ಈ ಸವಾಲಿನಲ್ಲಿ ಕೃನಾಲ್ ಪಾಂಡ್ಯ ಗೆದ್ದಿದ್ದಾರೆ. ಬಳಿಕ ಎರಡನೇ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ಬಳಿಕ ಅಂತಿಮ ಸುತ್ತಿನ ‘ಸ್ಪ್ಲಿಟ್ ಸ್ಕ್ವಾಟ್ ಹೋಲ್ಡ್’ ಸ್ಪರ್ಧೆಯಲ್ಲಿ ಇಬ್ಬರೂ ಕೂಡ ಸಮಾನವಾಗಿ ಸ್ಪರ್ಧಿಸುವ ಮೂಲಕ ಇಬ್ಬರೂ ಕೂಡ ಸ್ಟ್ರಾಂಗ್ ಎಂಬ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

    ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿಯಲ್ಲಿ ಈ ಇಬ್ಬರೂ ಕೂಡ ಪ್ರಮುಖ ಆಟಗಾರರಾಗಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಅನುಭವಿ ಅಲ್‍ರೌಂಡರ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ನಿಗದಿತ ಓವರ್‍ ಗಳ ಸರಣಿ ಜುಲೈ 18 ರಿಂದ ಆರಂಭವಾಗಲಿದೆ. ಭಾರತ ಹಾಗೂ ಶ್ರೀಲಂಕಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

  • 4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    4 ವಿಕೆಟ್‌ ಕಿತ್ತು ಕರ್ನಾಟಕದ ಪ್ರಸಿದ್ಧ್‌ ಕೃಷ್ಣ ದಾಖಲೆ – ಭಾರತಕ್ಕೆ 66 ರನ್‌ಗಳ ಭರ್ಜರಿ ಜಯ

    ಪುಣೆ: ಪ್ರಸಿದ್ದ್‌ ಕೃಷ್ಣ, ಶಾರ್ದೂಲ್‌ ಠಾಕೂರ್‌ ಅವರ ಮಾರಕ ಬೌಲಿಂಗ್‌ ದಾಳಿಯಿಂದ ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 66 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    318 ರನ್‌ಗಳ ಕಠಿಣ ಗುರಿಯನ್ನು ಪಡೆದ ಇಂಗ್ಲೆಂಡ್‌ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಪತನಗೊಂಡ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ 251 ರನ್‌ಗಳಿಗೆ ಆಲೌಟ್‌ ಆಯ್ತು.

    ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಮೊದಲ ವಿಕೆಟಿಗೆ 14.2 ಓವರ್‌ಗಳಲ್ಲಿ 135 ರನ್‌ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್‌ ಕೃಷ್ಣ ಅವರ ಮಾರಕ ಬೌಲಿಂಗ್‌ಗೆ ಇಂಗ್ಲೆಂಡಿನ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ ಕೃನಾಲ್‌ ಪಾಂಡ್ಯ

    ಪ್ರಸಿದ್ಧ್‌ ಕೃಷ್ಣ 8.1 ಓವರ್‌ ಎಸೆದು 1 ಮೇಡನ್‌ 54 ರನ್‌ ನೀಡಿ 4 ವಿಕೆಟ್‌ ಪಡೆದರೆ ಶಾರ್ದೂಲ್‌ ಠಾಕೂರ್‌ 6 ಓವರ್‌ ಎಸೆದು 37 ರನ್‌ ನೀಡಿ 3 ವಿಕೆಟ್‌ ಕಿತ್ತರು. ಭುವನೇಶ್ವರ್‌ ಕುಮಾರ್‌ 2 ವಿಕೆಟ್‌, ಕೃನಾಲ್‌ ಪಾಂಡ್ಯ 1 ವಿಕೆಟ್‌ ಪಡೆದರು.

    ಜೇಸನ್‌ ರಾಯ್‌ 46 ರನ್‌(35 ಎಸೆತ, 7 ಬೌಂಡರಿ, 1 ಸಿಕ್ಸರ್‌), ಜಾನಿ ಬೈರ್‌ಸ್ಟೋವ್‌ 94 ರನ್‌(66 ಎಸೆತ, 6 ಬೌಂಡರಿ, 7 ಸಿಕ್ಸರ್‌) ನಾಯಕ ಇಯಾನ್‌ ಮಾರ್ಗನ್‌ 22 ರನ್‌, ಮೋಯಿನ್‌ ಆಲಿ 30 ರನ್‌ ಗಳಿಸಿ ಔಟಾದರು. 98 ರನ್‌ (106 ಎಸೆತ, 11 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾಗಿದ್ದ ಶಿಖರ್‌ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪ್ರಸಿದ್ಧ್‌ ಕೃಷ್ಣ ದಾಖಲೆ: ಇಲ್ಲಿಯವರೆಗೆ ಭಾರತದ ತಂಡದಲ್ಲಿ ಪದಾರ್ಪಣೆಗೈದ ಪಂದ್ಯದಲ್ಲಿ ಯಾರೂ 4 ಮತ್ತು ಅದಕ್ಕಿಂತ ಹೆಚ್ಚಿನ ವಿಕೆಟ್‌ ಪಡೆದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 4 ವಿಕೆಟ್‌ ಕೀಳುವ ಮೂಲಕ ಪ್ರಸಿದ್ಧ್‌ ಕೃಷ್ಣ ಭಾರತದ ಪರ ದಾಖಲೆ ನಿರ್ಮಿಸಿದ್ದಾರೆ.